Tuesday, May 13, 2025

ಪೆಹಲ್ಗಾಮ್‌ ನರಹಂತಕರು ಖತಮ್?‌

 ಪೆಹಲ್ಗಾಮ್‌ ನರಹಂತಕರು ಖತಮ್?‌

ಭಾರತೀಯ ಸೇನೆ ಕಾರ್ಯಾಚರಣೆ: ೩ ಉಗ್ರರು ಹತ

ವದೆಹಲಿ: ಜಮ್ಮು -ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಶೂಕುಲ್‌ ಕೆಲ್ಲರ್‌ ಪ್ರದೇಶದ ದಟ್ಟ ಕಾಡಿನ ಒಳಗೆ ಅವಿತು ಕುಳಿತಿದ್ದ ನಾಲ್ವರು ಉಗ್ರಗಾಮಿಗಳ ಪೈಕಿ ಮೂವರನ್ನು ಭಾರತೀಯ ಸೇನಾ ಪಡೆ ಇಂದು (೨೦೨೦೫ ಮೇ ೧೩) ತರಿದು ಹಾಕಿದೆ.

ಈ ಉಗ್ರಗಾಮಿಗಳು ಪೆಹಲ್ಗಾಮ್‌ನಲ್ಲಿ ಏಪ್ರಿಲ್‌ ೨೨ರಂದು ನರಮೇಧ ನಡೆಸಿದ ರಕ್ಕಸರು ಎಂದು ಅನುಮಾನಿಸಲಾಗಿದೆ. ಹತ ಉಗ್ರಗಾಮಿಗಳ ಶವಗಳು ಸೈನಿಕರ ವಶದಲ್ಲಿದೆ ಎಂದು ವರದಿಗಳು ಹೇಳಿವೆ.

ಹತರಾಗಿರುವ ಮೂವರು ಉಗ್ರಗಾಮಿಗಳ ಪೈಕಿ ಒಬ್ಬಾತ ಪೆಹಲ್ಗಾಮ್‌ ಹತ್ಯಾಕಾಂಡದ ಹೊಣೆ ಹೊತ್ತುಕೊಂಡಿದ್ದ ದಿ ರೆಸಿಸ್ಟೆನ್ಸ್‌ ಫ್ರಂಟ್‌ (ಟಿಆರ್ ಎಫ್)‌ ಸಂಘಟನೆಯ ಮುಖ್ಯಸ್ಥ ಹಾಗೂ ಹತ್ಯಾಕಾಂಡದ ಸೂತ್ರಧಾರಿ ಶಾಹಿದ್‌ ಕುಟ್ಟೆ ಎಂಬುದಾಗಿ ಗುರುತಿಸಲಾಗಿದೆ. ಇನ್ನಿಬ್ಬರು ಆತನ ಸಹಚರರು ಎಂದು ಇಕನಾಮಿಕ್ಸ್‌ ಟೈಮ್‌ ವರದಿ ಮಾಡಿದೆ. 

ನಾಲ್ಕನೇ ಉಗ್ರನಿಗಾಗಿ ಯೋಧರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಶೋಪಿಯಾನಿನ ಶೋಕುಲ್‌ ಕೆಲ್ಲರ್‌ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ರಾಷ್ಟ್ರೀಯ ರೈಫಲ್‌ ಘಟಕದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಭಾರತೀಯ ಸೇನೆ ಈ ಶೋಧ ಮತ್ತು ನಾಶ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕರು ಭಾರೀ ಪ್ರಮಾಣದಲ್ಲಿ ಗುಂಡು ಹಾರಿಸಿದರು. ಪರಿಣಾಮವಾಗಿ ಭೀಕರ ಗುಂಡಿನ ಕಾಳಗ ನಡೆಯಿತು. ಗುಂಡಿನ ಘರ್ಷಣೆಯಲ್ಲಿ ಮೂವರು ಕಟ್ಟಾ ಭಯೋತ್ಪಾದಕರು ಹತರಾದರು ಎಂದು ಭಾರತೀಯ ಸೇನೆ ಟ್ವೀಟ್‌ ಸಂದೇಶದಲ್ಲಿ ತಿಳಿಸಿದೆ.

ಇವುಗಳನ್ನೂ ಓದಿರಿ: 

ಕೈ ಮುಗಿವೆ, ಯುದ್ದ ಬೇಡ ಎಂದದ್ದು ಏಕೆ ಗೊತ್ತಾ?
ಆಪರೇಷನ್‌ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ ಸೀಮಿತ
"ಷರತ್ತುಬದ್ಧ" ಕದನ ವಿರಾಮ, ಸಿಂಧೂ ನೀರು ಹರಿಯುವುದಿಲ್ಲ
ಆಪರೇಷನ್‌ ಸಿಂಧೂರ್:‌ ೩ನೇ ದಿನ ಏನೇನಾಯಿತು?

No comments:

Advertisement