ಭಾರತದ ಮೊತ್ತ ಮೊದಲ ʼಭಾರತ ಮಾತಾʼ ನಾಣ್ಯ
ನವದೆಹಲಿ: ಭಾರತದ ಇತಿಹಾಸದಲ್ಲೇ
ಯಾರೇ ನಾಯಕರನ್ನು ಬಿಂಬಿಸದೆ, ಭಾರತ ಮಾತೆಯ ಚಿತ್ರವನ್ನು ಬಿಂಬಿಸಿದ ಮೊತ್ತ ಮೊದಲ ಭಾರತೀಯ ನಾಣ್ಯ
ಇದು. ಪ್ರಧಾನಿ ನರೇಂದ್ರ ಮೋದಿ ಅವರು 2025 ಅಕ್ಟೋಬರ್ 1ರ ಬುಧವಾರ ರಾಷ್ಟ್ರೀಯ
ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್) ಶತಮಾನೋತ್ಸವ ಸ್ಮರಣಾರ್ಥವಾಗಿ 100 ರೂಪಾಯಿ ಮೌಲ್ಯದ ಈ ನಾಣ್ಯವನ್ನು ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರಧಾನಿಯವರು
ಆರ್ ಎಸ್ ಎಸ್ ಶತಮಾನೋತ್ಸವ ನೆನಪಿಗಾಗಿ ವಿಶೇಷ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದರು.
ಪ್ರಧಾನಿಯವರು ಬಿಡುಗಡೆ ಮಾಡಿದ 100 ರೂಪಾಯಿ ಮುಖಬೆಲೆಯ ಈ ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನವಿದ್ದರೆ, ಇನ್ನೊಂದು
ಬದಿಯಲ್ಲಿ ವರದ ಮುದ್ರೆಯೊಂದಿಗೆ (ಹಸ್ತವನ್ನು ಹೊರಕ್ಕೆ ಚಾಚಿ ನೀಡುವ
ಭಂಗಿ) ಸಿಂಹದ ಜೊತೆಯಲ್ಲಿ ನಿಂತಿರುವ ಭಾರತ ಮಾತೆಯ ವೈಭವಯುತ ಚಿತ್ರವಿದೆ. ಈ ತಾಯಿಯ ಮುಂದೆ ಸ್ವಯಂಸೇವಕರು ಭಕ್ತಿ ಮತ್ತು ಸಮರ್ಪಣಾ ಭಾವದಿಂದ
ನಮಸ್ಕರಿಸುತ್ತಿರುವ ದೃಶ್ಯವನ್ನು ಚಿತ್ರಿಸಲಾಗಿದೆ.
ನಾಣ್ಯದಲ್ಲಿ ಆರ್
ಎಸ್ ಎಸ್ ನ (RSS) ಧ್ಯೇಯ ವಾಕ್ಯವಾದ "ರಾಷ್ಟ್ರೀಯ ಸ್ವಾಹಾ, ಇದಂ ರಾಷ್ಟ್ರಾಯ, ಇದಂ
ನ ಮಮ"
ಎಂಬ ವಾಕ್ಯವೂ ಇದೆ.
ಇದರ ಅರ್ಥ:
"ಎಲ್ಲವೂ ರಾಷ್ಟ್ರಕ್ಕೆ ಅರ್ಪಣೆ, ಎಲ್ಲವೂ ರಾಷ್ಟ್ರದ್ದು, ನನ್ನದೆಂಬುದು
ಏನೂ ಇಲ್ಲ."
ಭಾರತದ ಇತಿಹಾಸದಲ್ಲಿ
ಹೆಮ್ಮೆಯ ಕ್ಷಣ
ನಾಣ್ಯ ಮತ್ತು ಅಂಚೆಚೀಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರವು ಭಾರತೀಯ ಕರೆನ್ಸಿಯ ಮೇಲೆ ಕಾಣಿಸಿಕೊಂಡಿರುವುದು ಅತ್ಯಂತ ಹೆಮ್ಮೆಯ ಮತ್ತು ಐತಿಹಾಸಿಕ ಮಹತ್ವದ ಕ್ಷಣ" ಎಂದು ಬಣ್ಣಿಸಿದರು.
ನಾಣ್ಯದ ಜೊತೆ ಬಿಡುಗಡೆ
ಮಾಡಿದ ಅಂಚೆ ಚೀಟಿಯು
1963ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆರ್ ಎಸ್ ಎಸ್ (RSS) ಕಾರ್ಯಕರ್ತರ
ಪಾಲ್ಗೊಳ್ಳುವಿಕೆಯನ್ನು ಎತ್ತಿ ತೋರಿಸುತ್ತದೆ. ಇದು ಸಂಘಟನೆಯ ಐತಿಹಾಸಿಕ ಕೊಡುಗೆಗಳಿಗೆ
ಸಾಕ್ಷಿಯಾಗಿದೆ. ಈ ಕ್ಷಣವನ್ನು ಪ್ರಧಾನಿ ಮೋದಿ ಅವರು ಭಾರತ ಮಾತೆ ಮತ್ತು ಆರ್ ಎಸ್ ಎಸ್ ನ (RSS) ಶತಮಾನಗಳ ಸೇವೆ,
ಸಮರ್ಪಣೆಗೆ ಸಲ್ಲಿಸಿದ ಗೌರವ ನಮನ ಎಂದು
ವಿವರಿಸಿದರು.
ಆರ್ ಎಸ್ ಎಸ್ (RSS): ಸೇವೆ
ಮತ್ತು ರಾಷ್ಟ್ರ ನಿರ್ಮಾಣ
ಮಹಾರಾಷ್ಟ್ರದ ನಾಗಪುರದಲ್ಲಿ ಡಾ. ಕೇಶವ ಬಲಿರಾಮ ಹೆಡ್ಗೇವಾರ್ ಅವರು 1925 ರಲ್ಲಿ ಸ್ಥಾಪಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS), ನಾಗರಿಕರಲ್ಲಿ ಸಾಂಸ್ಕೃತಿಕ ಅರಿವು, ಶಿಸ್ತು, ಸೇವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಸಂಘದ 'ಪ್ರಚಾರಕ್' ಆಗಿ ಸೇವೆ ಸಲ್ಲಿಸಿ, ನಂತರ ಬಿಜೆಪಿಗೆ ವರ್ಗಾವಣೆಗೊಂಡವರು.
ಸಂಸ್ಕೃತಿ ಸಚಿವಾಲಯವು
ಆಯೋಜಿಸಿದ್ದ ಈ ಶತಮಾನೋತ್ಸವ ಸಮಾರಂಭದಲ್ಲಿ ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ಕರ್ನಾಟಕದವರಾದ ದತ್ತಾತ್ರೇಯ
ಹೊಸಬಾಳೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು
ಸಂಸ್ಕೃತಿ ಸಚಿವ
ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ
ಹಲವಾರು ಗಣ್ಯರು ಭಾಗವಹಿಸಿದ್ದರು.
ಈ ಬಿಡುಗಡೆಗಳು ಮತ್ತು
ಆಚರಣೆಗಳು
ರಕ್ತದಾನ ಶಿಬಿರಗಳು, ಆಹಾರ ವಿತರಣೆ, ಕೇದಾರನಾಥ, ಬಿಹಾರ
ಪ್ರವಾಹ ಮತ್ತು ಕೋವಿಡ್-19
ಸಾಂಕ್ರಾಮಿಕದಂತಹ ವಿಪತ್ತುಗಳ ಪರಿಹಾರ ಕಾರ್ಯಗಳ
ಮೂಲಕ ಆರ್ ಎಸ್ ಎಸ್ (RSS) ರಾಷ್ಟ್ರ ನಿರ್ಮಾಣ
ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವುದನ್ನು ಎತ್ತಿ ಹಿಡಿಯುವ ಗುರಿ ಹೊಂದಿವೆ.
ಅಕ್ಟೋಬರ್ 2ರ ವಿಜಯದಶಮಿಯಂದು ದೇಶಾದ್ಯಂತ
ಶತಮಾನೋತ್ಸವ ಕಾರ್ಯಕ್ರಮ ಆಚರಣೆಯನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಮ್ಮಿಕೊಂಡಿದೆ.


No comments:
Post a Comment