Tuesday, October 13, 2026

ಶರನ್ನವರಾತ್ರಿ: ವಿಭೂತಿಯಲ್ಲಿ ಮಿಂದೆದ್ದ ಹನುಮ

 ಶರನ್ನವರಾತ್ರಿ: ವಿಭೂತಿಯಲ್ಲಿ ಮಿಂದೆದ್ದ ಹನುಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ  ಮೂರನೇ ದಿನವಾದ ಮಂಗಳವಾರ (೧೩ ಅಕ್ಟೋಬರ್‌ ೨೦೨೬) ಅಭಯ ಆಂಜನೇಯಸ್ವಾಮಿಗೆ ವಿಭೂತಿ ಅಲಂಕಾರ ಮಾಡಲಾಯಿತು.

ಶ್ರೀ ಮಧು ನಾಯರ್ ಮತ್ತು ಕುಟುಂಬದವರು ಅಲಂಕಾರ ಸೇವೆಯನ್ನು ಹಾಗೂ ಶಾರದಾ ಮತ್ತು ಕುಟುಂಬದವರು ಪ್ರಸಾದ ಸೇವೆಯಲ್ಲಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಲಕ್ಷ್ಮಿ ದೇವಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.

ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.



ಇವುಗಳನ್ನೂ ಓದಿರಿ:

ಶರನ್ನವರಾತ್ರಿ: ಮಹಾಗಣಪತಿಗೆ ಕುಂಕುಮ ಅಲಂಕಾರ

No comments:

Advertisement