Friday, October 17, 2008

ಕುಲಾಂತರಿ ಅವಾಂತರ: ಘೋಷಿಸಿ ' ಐ ಆಮ್ ನೋ ಲ್ಯಾಬ್ ರಾಟ್'...!

ಕುಲಾಂತರಿ ಅವಾಂತರ: ಘೋಷಿಸಿ

 ' ಐ ಆಮ್ ನೋ ಲ್ಯಾಬ್ ರಾಟ್'...!



ಬಹುರಾಷ್ಟ್ರೀಯ ಕಂಪೆನಿಗಳು ಭಾರತದಲ್ಲೂ ವಾಣಿಜ್ಯ ಮಟ್ಟದಲ್ಲಿ ಉತ್ಪಾದಿಸಲು ಉಪಕ್ರಮಿಸಿರುವ ಕುಲಾಂತರಿ ಬದನೆ ಮತ್ತು ಇತರ ವಂಶವಾಹಿ ಪರಿವರ್ತಿತ ಆಹಾರ (ಜೆನೆಟಿಕಲಿ ಮಾಡಿಫೈಡ್ ಫುಡ್) ವಿರುದ್ಧ ರಾಷ್ಟ್ರಾದ್ಯಂತ ಚಳವಳಿ ತೀವ್ರಗೊಳ್ಳುತ್ತಿದೆ. 'ಐ ಆಮ್ ನೊ ಲ್ಯಾಬ್ ರಾಟ್' (ನಾನು ಪ್ರಯೋಗ ಪಶುವಲ್ಲ) ಪತ್ರ ಆಂದೋಲನದಲ್ಲಿ ಈಗಾಗಲೇ 25,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ. ಕೇಂದ್ರ ಆರೋಗ್ಯ ಸಚಿವರಿಗೆ ತಮ್ಮ ಪತ್ರಗಳನ್ನು ಕಳುಹಿಸಿದ್ದಾರೆ. 'ಪರ್ಯಾಯ' ಈಗಾಗಲೇ ಈ ಚಳವಳಿ ಬಗ್ಗೆ ಲೇಖನ ಪ್ರಕಟಿಸಿದೆ.

ಪತ್ರಕರ್ತ ಆನಂದ ತೀರ್ಥ ಪ್ಯಾಟಿ ಅವರು ಈ ವಂಶವಾಹಿ ಪರಿವರ್ತಿತ ಆಹಾರ, ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ 'ಪ್ರಜಾವಾಣಿ'ಯಲ್ಲಿ ಬರೆದಿದ್ದಾರೆ. ಆನಂದ ತೀರ್ಥ ಪ್ಯಾಟಿ ಅವರ ಹೆಸರಿನ ಮೇಲೆ ಕ್ಲಿಕ್ ಮಾಡಿ ಈ ಲೇಖನ ಓದಿಕೊಳ್ಳಿ.

ಶುದ್ಧ ಸಸ್ಯಾಹಾರ ಬೇಕು ಎಂದಿದ್ದರೆ, ನಿಮ್ಮ ಆರೋಗ್ಯ ಹದಗೆಡಬಾರದು ಎಂದಿದ್ದರೆ, ಬೆಳವಣಿಗೆಯಲ್ಲಿ ಕುಂಠಿತ, ರೋಗ ನಿರೋಧಕ ಶಕ್ತಿ ಕುಸಿತ, ಕರುಳಿನಲ್ಲಿ ಕ್ಯಾನ್ಸರ್, ಶ್ವಾಸಕೋಶ- ಮೂತ್ರಪಿಂಡದ ಕೋಶಗಳಲ್ಲಿ ಊತ, ಮಿದುಳಿನ ಕಾರ್ಯಕ್ಷಮತೆಗೆ ಹಾನಿ, ಯಕೃತ್ತಿನ ತೊಂದರೆಯಂತಹ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗುವುದು ಬೇಡ ಎಂದಿದ್ದರೆ 'ಐ ಆಮ್ ನೊ ಲ್ಯಾಬ್ ರಾಟ್' ಚಳವಳಿಯಲ್ಲಿ ಪಾಲ್ಗೊಳ್ಳಿ. ನಿಮ್ಮ ಮಿತ್ರರು, ಬಂಧುಗಳಿಗೆ ಈ ಬಗ್ಗೆ ಪತ್ರ ಕಳುಹಿಸಿ, ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಕಾರ್ಯದಲ್ಲಿ ಅಳಿಲ ಸೇವೆ ಸಲ್ಲಿಸಿ.
and send email to Union Health Minister immediately.

1 comment:

Anonymous said...

ಕುಲಾಂತರಿ ಅವಾಂತರ: ಘೋಷಿಸಿ

' ಐ ಆಮ್ ನೋ ಲ್ಯಾಬ್ ರಾಟ್'...!

ಲೇಖನ ಓದಿದೆ. ಇಂತಹ ಒಂದು ಸಮಕಾಲೀನ ಜಗತ್ತಿನ ಪ್ರಜ್ಞಾವಂತ ಚಳವಳಿಯ ಬಗೆಗೆ ಮಾಹಿತಿ ನೀಡುವಲ್ಲಿ ನಮ್ಮ ಮಾಧ್ಯಮಗಳು ಸೋತಿರುವ ಇಂತಹ ಹೊತ್ತಿನಲ್ಲಿ ತಾವು ಒಂದು ಮಾಧ್ಯಮ ಮಾಡಬೇಕಾದ ಜವಾಬ್ದಾರಿಯನ್ನು ಹೊತ್ತು ಜನರಿಗೆ ಮಾಹಿತಿ ನೀಡುತ್ತಿರುವುದು ಹಾಗೂ ಎಚ್ಚರಿಸುತ್ತಿರುವುದು ನಿಜಕ್ಕೂ ಸ್ವಾಗತಾಹ೵ ಕೆಲಸ.
ಈಗಾಗಲೇ ದಿಕ್ಕು ತಪ್ಪಿರುವ ನಮ್ಮ ಕೃಷಿ ವ್ಯವಸ್ಥೆಯನ್ನು ಇನ್ನಷ್ಟು ದಿಕ್ಕು ತಪ್ಪಿಸಲು ಹವಣಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ವಿರುದ್ದ ತಾವು ಇನ್ನಷ್ಟು ಮಾಹಿತಿಯನ್ನು ಕೊಡಬೇಕಾಗಿ ವಿನಂತಿ

ಗಿರೀಶ ಕೆ.ಎಸ್
girikavya@gmail.com

Advertisement