My Blog List

Tuesday, November 5, 2019

ದೇವೇಂದ್ರ ಫಡ್ನವಿಸ್ ’ಹೊರಹೋಗುತ್ತಿರುವ ಮುಖ್ಯಮಂತ್ರಿ

ದೇವೇಂದ್ರ ಫಡ್ನವಿಸ್ 'ಹೊರಹೋಗುತ್ತಿರುವ'  ಮುಖ್ಯಮಂತ್ರಿ
ಬಿಜೆಪಿಯತ್ತ ಇನ್ನೊಂದು ಬಾಣ ಎಸೆದ ಶಿವಸೇನೆ
ಮುಂಬೈ: ಬಿಜೆಪಿಯ ಜೊತೆ ಅಧಿಕಾರದ ಸಮಾನ ಹಂಚಿಕೆಗಾಗಿ ಹೋರಾಟಕ್ಕೆ ಇಳಿದಿರುವ ಮಿತ್ರ ಪಕ್ಷ ಶಿವಸೇನೆ 2019 ನವೆಂಬರ್ 05ರ ಮಂಗಳವಾರ ಮುಖ್ಯಮಂತ್ರಿ ದೇವೇಂದ್ರ  ಫಡ್ನವಿಸ್ ಅವರನ್ನುಹೊರ ಹೋಗುತ್ತಿರುವ ಮುಖ್ಯಮಂತ್ರಿಎಂಬುದಾಗಿ ಕರೆಯುವ ಮೂಲಕ ಬಿಜೆಪಿಯತ್ತ ಇನ್ನೊಂದು ಬಾಣ ಬಿಟ್ಟಿತು.

ಶಿವಸೇನೆಯ ಮುಖವಾಣಿಸಾಮ್ನಾ2019 ನವೆಂಬರ್ 04ರ ಸೋಮವಾರ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ಫಡ್ನವಿಸ್ ಅವರು  ಮಾತು ಕಳೆದುಕೊಂಡಂತೆ’  ಕಾಣುತ್ತಿದೆ ಎಂದು ಹೇಳಿತು.
ಸೇನಾ ಮತ್ತು ಬಿಜೆಪಿ ಕಳೆದ ೩೦ ವರ್ಷಗಳಿಂದ ಮಿತ್ರ ಪಕ್ಷಗಳಾಗಿದ್ದು ರಾಜ್ಯದಲ್ಲಿ ಮೈತ್ರಿಕೂಟ ರಚಿಸಿಕೊಂಡು ಸೆಣಸಿವೆ. ಮಿತ್ರಪಕ್ಷಗಳು ಅಕ್ಟೋಬರ್ ೨೪ರಂದು ಮಹಾರಾಷ್ಟ್ರ ವಿಧಾನಸಭೆಯ ಚುನಾವಣಾ ಫಲಿತಾಂಶ ಪ್ರಕಟವಾದಂದಿನಿಂದ ನಿರಂತರ ಜಗಳಾಡುತ್ತಿವೆ.

ಅಧಿಕಾರವನ್ನು ೫೦:೫೦ ಸೂತ್ರದ ಪ್ರಕಾರ ಹಂಚಿಕೊಳ್ಳಬೇಕು ಮತ್ತು ಉಭಯ ಪಕ್ಷಗಳು ತಲಾ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಸ್ಥಾನವನ್ನು ಹೊಂದಿರಬೇಕು ಎಂದು ಸೇನೆ ಪಟ್ಟು ಹಿಡಿದಿದೆ. ಸೇನೆಯ ಜೊತೆಗೆ ಅಂತಹ ಯಾವುದೇ ಒಪ್ಪಂದವೂ ಆಗಿಲ್ಲ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದರು.

2019 ನವೆಂಬರ್ 4ರ ಸೋಮವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿರುವ ಫಡ್ನವಿಸ್ ಅವರ ಮೇಲೆ ಈಗ ಮುಂದಿನ ಹೆಜ್ಜೆ ಇರಿಸಬೇಕಾದ ಹೊಣೆ ಇದೆ ಎಂದು ಸೇನಾ ಮುಖವಾಣಿ ಈದಿನ  ಹೇಳಿತು.

ಮಾಲಿನ್ಯಭರಿತ ದೆಹಲಿಯಿಂದ ಮಹಾರಾಷ್ಟ್ರಕ್ಕೆ ವಾಪಸಾಗಿರುವಹೊರಹೋಗುತ್ತಿರುವ ಮುಖ್ಯಮಂತ್ರಿಈಗ ಮುಂದಿನ ಹೆಜ್ಜೆ ಇರಿಸಬೇಕಾಗಿದೆ. ಅವರ ಮುಂದಿನ ಹೆಜ್ಜೆಯು ಬಳಿಕದ ಕ್ರಮವನ್ನು ನಿರ್ಧರಿಸುತ್ತದೆಎಂದುಸಾಮ್ನಾತನ್ನ ಸಂಪಾದಕೀಯದಲ್ಲಿ ಹೇಳಿತು.

ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ, ಫಡ್ನವಿಸ್ ಅವರು ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಹೊಸ ಸರ್ಕಾರ ರಚನೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ನಾನು ಅಥವಾ ಬಿಜೆಪಿಯಿಂದ ಬೇರೆ ಯಾರು ಕೂಡಾ ಹಾಲಿ ಊಹಾಪೋಹಗಳು ಅಥವಾ ಟೀಕೆಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ನಮಗೆ ಸಂಪೂರ್ಣ ಭರವಸೆ ನೀಡಲಾಗಿದೆ ಮತ್ತು ರಾಜ್ಯದಲ್ಲಿ ಶೀಘ್ರದಲ್ಲೇ ನೂತನ ಸರ್ಕಾರದ ರಚನೆಯಾಗಲಿದೆಎಂದು ಫಡ್ನವಿಸ್ ಹೇಳಿದ್ದಾರೆ.

ಬಿಜೆಪಿಯು ಕಳೆದ ತಿಂಗಳು ಪ್ರಕಟಗೊಂಡ ೨೮೮ ಸದಸ್ಯಬಲದ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ೧೦೫ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಆಯ್ಕೆಯಾಗಿದೆ. ಅದರ ಮಿತ್ರ ಪಕ್ಷ ಶಿವಸೇನೆ ೫೬ ಸ್ಥಾನಗಳನ್ನು ಗೆದ್ದಿದ್ದರೆ, ವಿರೋಧಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್ಸಿಪಿ) ೫೪ ಮತ್ತು ಕಾಂಗ್ರೆಸ್ ೪೪ ಸ್ಥಾನಗಳನ್ನು ಗೆದ್ದಿವೆ. ಅಧಿಕಾರಕ್ಕೆ ಏರಲು ಬೇಕಾದ ಬಹುಮತದ ಮ್ಯಾಜಿಕ್ ಸಂಖ್ಯೆ ೧೪೫.

ಮಿತ್ರ ಪಕ್ಷಗಳ ಮಧ್ಯೆ ಅಧಿಕಾರದ ಸಮಾನ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಒಪ್ಪಂದವೂ ಆಗಿಲ್ಲ ಎಂಬುದಾಗಿ ಫಡ್ನವಿಸ್ ಹೇಳಿದ ಬಳಿಕ ಶಿವಸೇನೆಯು ಬಿಜೆಪಿ ಬಗೆಗಿನ ತನ್ನ ನಿಲುವನ್ನು ಇನ್ನಷ್ಟು ಕಠಿಣಗೊಳಿಸಿತ್ತು. ಇದರ ಜೊತೆಗೇ ಸೇನೆಯು ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್ಸಿಪಿ ಬಳಿಗೂ ಸಂಧಾನಕಾರರನ್ನು ಕಳುಹಿಸಿತ್ತು. ಆದರೆ ವಿರೋಧ ಪಕ್ಷಗಳು ಈವರೆಗೂ ಅಧಿಕೃತವಾಗಿ ಸ್ಪಂದನೆ ವ್ಯಕ್ತ ಪಡಿಸಿಲ್ಲ.

ಶರದ್ ಪವಾರ್ ಅವರು ಹಿಂದಿನ ದಿನ  ಸಂಜೆ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಹಾರಾಷ್ಟ್ರದ ಪರಿಸ್ಥಿತಿಯನ್ನು ವಿವರಿಸಿದರು. ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರೂ ಸಭೆಯಲ್ಲಿ ಹಾಜರಿದ್ದರು.

ಮಹಾರಾಷ್ಟ್ರದ ಹಾಲಿ ವಿಧಾನಸಭೆಯ ಅವಧಿ ನವೆಂಬರ್ ೯ಕ್ಕೆ ಮುಕ್ತಾಯಗೊಳ್ಳಲಿದೆ. ಗಡುವಿನ ಒಳಗಾಗಿ ಯಾವುದೇ ಸರ್ಕಾರದ ರಚನೆ ಆಗದೇ ಇದ್ದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬಹುದು.

No comments:

Advertisement