Friday, December 6, 2019

ಮತಗಟ್ಟೆ ಸಮೀಕ್ಷೆ: ಬಿಜೆಪಿಗೆ ಮುನ್ನಡೆ ೯-೧೨ ಸ್ಥಾನದ ಭವಿಷ್ಯ

ಮತಗಟ್ಟೆ ಸಮೀಕ್ಷೆ: ಬಿಜೆಪಿಗೆ ಮುನ್ನಡೆ ೯-೧೨ ಸ್ಥಾನದ ಭವಿಷ್ಯ
ಕಾಂಗ್ರೆಸ್ಸಿಗೆ -, ಜೆಡಿಎಸ್ಗೆ ಸ್ಥಾನ, ಶೇಕಡಾ ೬೬.೨೫ರಷ್ಟು ಮತದಾನ
ಬೆಂಗಳೂರು: ರಾಜ್ಯದ ೧೫ ವಿಧಾನಸಭಾ ಕ್ಷೇತ್ರಗಳಲ್ಲಿ 2019 ಡಿಸೆಂಬರ್ 05ರ ಗುರುವಾರ ನಡೆದ ಉಪಚುನಾವಣೆಯ ಮತದಾನ ಮುಕ್ತಾಯಗೊಂಡು ಅಭ್ಯರ್ಥಿಗಳಹಣೆಬರಹ  ಮತ ಯಂತ್ರಗಳಲ್ಲಿ ಭದ್ರವಾಗುತ್ತಿದ್ದಂತೆಯೇ ವಿವಿಧ ಮತದಾನೋತ್ತರ ಸಮೀಕ್ಷೆಯ (ಮತಗಟ್ಟೆ ಸಮೀಕ್ಷೆ) ಫಲಿತಾಂಶ ಹೊರಬಿದ್ದಿದ್ದು, ಭಾರತೀಯ ಜನತಾ ಪಕ್ಷವು (ಬಿಜೆಪಿ) ಭರ್ಜರಿ ಗೆಲುವು ಸಾಧಿಸುವ ಸುಳಿವು ನೀಡಿವೆ. ಉಪಚುನಾವಣೆಯಲ್ಲಿ ಶೇಕಡಾ ೬೬.೨೫ರಷ್ಟು ಮತ ಚಲಾವಣೆಯಾಯಿತು.

ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ ೯ರಿಂದ ೧೨ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದ್ದು, ಕಾಂಗ್ರೆಸ್ ಪಕ್ಷವು ೩ರಿಂದ ಸ್ಥಾನಗಳಲ್ಲಿ ಮತ್ತು ಜೆಡಿಎಸ್ ಸ್ಥಾನದಲ್ಲಿ ಗೆಲುವು ಪಡೆಯುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿದವು.
ಸಿ ವೋಟರ್ ಸಮೀಕ್ಷೆಯ ಪ್ರಕಾರ ಯಶವಂತಪುರದಲ್ಲಿ ಬಿಜೆಪಿಯ ಸೋಮಶೇಖರ್ ಗೆ ಮುನ್ನಡೆಯ ಸುಳಿವು ಲಭಿಸಿದ್ದು, ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ಅವರಿಗೆ ಮುಖಭಂಗವಾಗುವ ಸಂಭವ ಇದೆ ಎಂದು ವರದಿ ತಿಳಿಸಿತು.

ಮಹಾಲಕ್ಷ್ಮೀ ಲೇಔಟ್ನಲ್ಲಿ ಬಿಜೆಪಿಯ ಗೋಪಾಲಯ್ಯಗೆ ಮುನ್ನಡೆ, ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ಗೆ ಹಿನ್ನಡೆ. ಕೆಆರ್ ಪುರಂ ಕ್ಷೇತ್ರದಲ್ಲಿ ಬಿಜೆಪಿಯ ಬೈರತಿ ಬಸವರಾಜ್ ಮುನ್ನಡೆ, ಕಾಂಗ್ರೆಸ್ ನಾರಾಯಣಸ್ವಾಮಿಗೆ ಹಿನ್ನಡೆಯಾಗಲಿದೆ ಎಂದು ಸಿ ವೋಟರ್ ಸಮೀಕ್ಷೆ ಬಹಿರಂಗಪಡಿಸಿದೆ.

ಬಳ್ಳಾರಿಯ ವಿಜಯನಗರದಲ್ಲಿ ಬಿಜೆಪಿಯ ಆನಂದ್ ಸಿಂಗ್ ಮುನ್ನಡೆ ಸಾಧಿಸಲಿದ್ದು, ಕಾಂಗ್ರೆಸ್ ವೆಂಕಟರಾವ್ ಘೋರ್ಪಡೆ ಹಿನ್ನಡೆ ಅನುಭವಿಸಲಿದ್ದಾರೆ. ಹೊಸಕೋಟೆಯಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ಗೆ ಭಾರೀ ಮುನ್ನಡೆ, ಕಾಂಗ್ರೆಸ್ ಪದ್ಮಾವತಿ ಸುರೇಶ್ಗೆ ಹಿನ್ನಡೆಯಾಗಲಿದೆ ಎಂದು ಸಿ ವೋಟರ್ ಮತಗಟ್ಟೆ ಸಮೀಕ್ಷೆ ಹೇಳಿದೆ.

ಕೆಆರ್ ಪೇಟೆಯಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ನಡುವೆ ಸಮಬಲದ ಸ್ಪರ್ಧೆ ಇದ್ದು ಫಲಿತಾಂಶ ಕುತೂಹಲ ಕೆರಳಿಸಿದೆ. ಬಿಜೆಪಿಯ ನಾರಾಯಣಗೌಡ ಹಾಗೂ ಜೆಡಿಎಸ್ ಬಿಎಲ್ ದೇವರಾಜ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಇದೆ ಎಂದು ಸಿ ಸಮೀಕ್ಷೆ ತಿಳಿಸಿದೆ.

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಹಣಾಹಣಿ ಹೋರಾಟವಿದ್ದು, ಬಿಜೆಪಿಯ ಡಾ.ಕೆ.ಸುಧಾಕರ್ ಹಾಗೂ ಕಾಂಗ್ರೆಸ್ ಆಂಜಿನಪ್ಪ ನಡುವೆ ಸಮಬಲದ ಹೋರಾಟದ ಸುಳಿವನ್ನು ಸಮೀಕ್ಷೆ ನೀಡಿದೆ.

ಶಿವಾಜಿನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಸ್ಪರ್ಧೆ ನಡೆಯಲಿದ್ದು, ಗೆಲುವು ಯಾರಿಗೆ ಎಂಬ ಕುತೂಹಲ ಕೆರಳಿಸಿದೆ. ಬಿಜೆಪಿಯ ಸರವಣ ಹಾಗೂ ಕಾಂಗ್ರೆಸ್ ರಿಜ್ವಾನ್ ನಡುವೆ ತೀವ್ರ ಹಣಾಹಣಿ ನಡೆಯಲಿದೆ ಎಂದು ಮತಗಟ್ಟೆ ಸಮೀಕ್ಷೆ ತಿಳಿಸಿದೆ.

ರಾಣೆಬೆನ್ನೂರಿನಲ್ಲಿ ಕೋಳಿವಾಡ ಮತ್ತು ಅರುಣ್ ಕುಮಾರ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ. ಕಾಂಗ್ರೆಸ್ ಕೆಬಿ ಕೋಳಿವಾಡ ಮತ್ತು ಬಿಜೆಪಿಯ ಅರುಣ್ ಕುಮಾರ್ ಸಮಬಲದ ಸ್ಪರ್ಧೆಯ ಮೂಲಕ ಫಲಿತಾಂಶ ಕುತೂಹಲಕರವಾಗಲಿದೆ.

ಎಲ್ಲೆಲ್ಲಿ ಕಾಂಗ್ರೆಸ್ ಮುನ್ನಡೆ:
ಕಾಗವಾಡದಲ್ಲಿ ಕಾಂಗ್ರೆಸ್ ಪಕ್ಷದ ರಾಜು ಕಾಗೆಗೆ ಮುನ್ನಡೆ, ಬಿಜೆಪಿಯ ಶ್ರೀಮಂತ್ ಪಾಟೀಲ್ ಗೆ ಹಿನ್ನಡೆ. ಹುಣಸೂರಿನಲ್ಲಿ ಬಿಜೆಪಿಯ ಹಳ್ಳಿಹಕ್ಕಿ ವಿಶ್ವನಾಥ್ ಅವರಿಗೆ ಹಿನ್ನಡೆ, ಕಾಂಗ್ರೆಸ್ಸಿನ ಎಚ್ಪಿ ಮಂಜುನಾಥ್ ಮುನ್ನಡೆ ಸಾಧಿಸುವ ಸಾಧ್ಯತೆಯತ್ತ ಮತಗಟ್ಟೆ ಸಮೀಕ್ಷೆ ಬೊಟ್ಟು ಮಾಡಿದೆ.

No comments:

Advertisement