My Blog List

Friday, January 31, 2020

ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನಕಾರರ ಮೇಲೆ ಶೂಟೌಟ್

ಸಿಎಎ, ಎನ್ಆರ್ಸಿ ವಿರೋಧಿ ಪ್ರತಿಭಟನಕಾರರ ಮೇಲೆ  ಶೂಟೌಟ್
ದೆಹಲಿ ಜಾಮಿಯಾ ಮಿಲಿಯಾ ಬಳಿ ಆಘಾತಕಾರಿ ಘಟನೆ
ನವದೆಹಲಿ: ದಕ್ಷಿಣ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಬಳಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರ ನೋಂದಣಿ ವಿರೋಧಿ ಪ್ರತಿಭಟನಾಕಾರರ ಮೇಲೆ ವ್ಯಕ್ತಿಯೊಬ್ಬ ಪಿಸ್ತೂಲು ಝಳಪಿಸುತ್ತಾ ಗುಂಡು ಹಾರಿಸಿದ ಘಟನೆ  2020 ಜನವರಿ 30ರ ಗುರುವಾರ ಘಟಿಸಿದ್ದು, ವಿದಾರ್ಥಿಯೊಬ್ಬ ಗುಂಡೇಟಿನಿಂದ ಗಾಯಗೊಂಡ. 

ಗುಂಡು ಹಾರಿಸಿದ ವ್ಯಕ್ತಿಯನ್ನು ಉತ್ತರ ಪ್ರದೇಶದ ಜೇವಾರ್ ಜಿಲ್ಲೆಯ ೩೧ರ ಹರೆಯದ ಗೋಪಾಲ್ ಎಂಬುದಾಗಿ ಗುರುತಿಸಲಾಯಿತು.  ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

"ಪಿಸ್ತೂಲು ಝಳಪಿಸುತ್ತ ಬಂದ ಯುವಕಯೇ ಲೋ ಆಜಾದಿ, ಆವೋ ಮೈ ಶೂಟ್ ಕರೂಂಗಾ (ಇದೋ ತೆಗೆದುಕೊಳ್ಳಿ ಸ್ವಾತಂತ್ರ್ಯ, ಬನ್ನಿ ನಾನು ನಿಮ್ಮ ಮೇಲೆ ಗುಂಡು ಹಾರಿಸುತ್ತೇನೆಎಂದು ಘೋಷಣೆ ಕೂಗುತ್ತಾ ಪ್ರತಿಭಟನಕಾರರತ್ತ ಗುಂಡು ಹಾರಿಸಿದ ಎಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದ್ದ ಪ್ರತ್ಯಕ್ಷದರ್ಶಿ ವಿದ್ಯಾರ್ಥಿಯೊಬ್ಬರು ತಿಳಿಸಿದರು.

ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಗುಂಡು ಹಾರಿಸಿದ ಘಟನೆಯ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಗುಂಡು ಹಾರಿಸಿದ ವ್ಯಕ್ತಿಜೈ ಶ್ರೀ ರಾಮ್ಘೋಷಣೆ ಕೂಗುತ್ತಿರುವುದು ಮತ್ತು ಪ್ರತಿಭಟನಾಕಾರರು ಭಾರತದಲ್ಲಿ ಉಳಿಯಲು ಬಯಸಿದರೆವಂದೇ ಮಾತರಂಜಪಿಸಬೇಕುಎಂದು ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದ್ದು ದಾಖಲಾಗಿದೆ.

ಗುಂಡೇಟಿನಿಂದ ಗಾಯಗೊಂಡ ವಿದ್ಯಾರ್ಥಿಯನ್ನು ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಶಾದಾಬ್ ಫರೂಕ್ ಎಂಬುದಾಗಿ ಗುರುತಿಸಲಾಗಿದ್ದು ಅವರ ಕೈಗೆ ಗುಂಡು ತಗುಲಿದೆ. ಘಟನೆಯ ಬೆನ್ನಲ್ಲೆ ಗಾಯಾಳುವನ್ನು ಜಾಮಿಯಾ ನಗರದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸೇರಿಸಿ ಬಳಿಕ ಏಮ್ಸ್ಗೆ ಸ್ಥಳಾಂತರಿಸಲಾಯಿತು. ಗಾಯಾಳುವಿನ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿದವು.
ವಿಶ್ವವಿದ್ಯಾಲಯದ ಆವರಣದಿಂದ ಮಧ್ಯ ದೆಹಲಿಯ ಜಂತರ್ ಮಂತರ್ಗೆ ಪ್ರತಿಭಟನಾ ಮೆರವಣಿಗೆ ಹೋಗುತ್ತಿದ್ದಾಗ ಘಟನೆ ಘಟಿಸಿತು.

ಘಟನೆ ನಡೆದಾಗ ಅಲ್ಲಿದ್ದ ಪೊಲೀಸರು ಘಟನೆಯನ್ನು ನೋಡುತ್ತಾ ಮೂಕ ಪ್ರೇಕ್ಷಕರಾಗಿ ನಿಂತಿದ್ದರು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಪಾದಿಸಿದರು.

ಗುಂಡು ಹಾರಾಟದ ಘಟನೆಯ ಬಳಿಕ, ಹೆಚ್ಚಿನ ಪ್ರತಿಭಟನೆಗಳಾಗಬಹುದು ಎಂಬ ಹಿನ್ನೆಲೆಯಲ್ಲಿ ದೆಹಲಿಯ ಮೂರು ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಾದ ಜಾಮಾ ಮಸೀದಿ, ಐಟಿಒ ಮತ್ತು ದೆಹಲಿ ಗೇಟ್ ದ್ವಾರಗಳನ್ನು ಅಧಿಕಾರಿಗಳು ಮುಚ್ಚಿದರು.

ಪೊಲೀಸ್ ಮೂಲಗಳು ಹಂಚಿಕೊಂಡಿರುವ ಗುಂಡು ಹಾರಿಸಿದ ವ್ಯಕ್ತಿಯ ಫೇಸ್ಬುಕ್ ಪ್ರೊಫೈಲ್ನಲ್ಲಿ ಘಟನೆಗೆ ಮುನ್ನ ಆತ ಎಷ್ಟರ ಮಟ್ಟಿಗೆ ತೀವ್ರಗಾಮಿಯಾಗಿದ್ದ ಮತ್ತು ಸಿದ್ಧತೆ ನಡೆಸಿಕೊಂಡಿದ್ದ ಎಂಬ ವಿವರಗಳಿವೆ ಎನ್ನಲಾಗಿದೆ. ಆದರೆ ಅದು ಸ್ವತಃ ಆತನದ್ದೇ ಖಾತೆಯೇ ಎಂಬ ಬಗ್ಗೆ ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

೨೦೧೮ ರಲ್ಲಿ ಉತ್ತರ ಪ್ರದೇಶದ ಕಾಸ್ಗಂಜ್ನಲ್ಲಿ ನಡೆದ ಗಣರಾಜ್ಯೋತ್ಸವ ಸಂದರ್ಭದ ಘರ್ಷಣೆಯಲ್ಲಿ ಅಭಿಷೇಕ್ ಗುಪ್ತಾ ಅವರನ್ನು ಹತ್ಯೆಗೈದಿದ್ದನ್ನು ಉಲ್ಲೇಖಿಸಿ ತನ್ನ ಕ್ರಮಗಳು ಚಂದನ್ಗೆ ಪ್ರತೀಕಾರ ಎಂದು ಗುಂಡು ಹಾರಿಸಿದ ವ್ಯಕ್ತಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಗುಂಡುಹಾರಾಟದ ಘಟನೆಗೆ ಕೆಲವೇ ಗಂಟೆಗಳ ಮೊದಲು ಪ್ರಕಟಿಸಿದ್ದ ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮ ಖಾತೆಯಲ್ಲಿನ ಇತರ ಪೋಸ್ಟ್ಗಳಲ್ಲಿ  ಗೋಪಾಲ್  ತನ್ನ ಹೆಸರಿನ ಮುಂದೆ  ’ರಾಮಭಕ್ತಪದವನ್ನು ಸೇರಿಸಿಕೊಂಡಿದ್ದಾನೆ. ’ಆಟ ಮುಗಿಯಿತು, ಶಾಹೀನ್ ಬಾಗ್. ಅಂತಿಮಯಾತ್ರೆಯಲ್ಲಿ ನನ್ನ ದೇಹಕ್ಕೆ ಕೇಸರಿ ಬಟ್ಟೆಯನ್ನು ಹೊದಿಸಿಎಂದು ಬರೆದುಕೊಂಡಿದ್ದ.

ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಹಲವಾರು ಬಿಜೆಪಿ ಮುಖಂಡರು ಕೋಮುವಾದ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಭಾಷಣಗಳನ್ನು ಮಾಡಿದ ಬೆನ್ನಲ್ಲೇ ಗುಂಡು ಹಾರಾಟದ ಘಟನೆ ಘಟಿಸಿದೆ.

ಕೇಂದ್ರದ ಹಣಕಾಸು ಸಹಾಯಕ ಸಚಿವ ಅನುರಾಗ್ ಠಾಕೂರ್ ಅವರು ಸೋಮವಾರ ಉತ್ತರ ದೆಹಲಿಯ ರಿಥಾಲಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿದೇಶದ್ರೋಹಿಗಳಿಗೆ ..’ ಎಂಬುದಾಗಿ ತಾವು ಕೂಗಿಗುಂಡು ಹಾರಿಸಿಎಂಬುದಾಗಿ ಜನಸಮುದಾಯ ಪ್ರತಿಘೋಷಣೆ ಕೂಗುವಂತೆ ಪ್ರಚೋದಿಸಿದ್ದರು.  (ಸಚಿವರು "ದೇಶ್ ಕೆ ಗದ್ದಾರೋಂ ಕೊ ಎಂಬುದಾಗಿ ಪ್ರಚೋದಿಸಿದ್ದರು. ಅದಕ್ಕೆ ಜನಸಮೂಹ "... ಗೋಲಿ ಮಾರೊ ಸಾ *** ಎನ್ ಕೊ" ಎಂದು ಪ್ರತಿಕ್ರಿಯಿಸಿತ್ತು).

ಠಾಕೂರ್ ಅವರ ದ್ವೇಷ ಭಾಷಣದ ನಂತರ, ಸಿಎಎ ಮತ್ತು ಎನ್ಆರ್ಸಿ ವಿರುದ್ಧ ನಿರಂತರ ಪ್ರತಿಭಟನೆ ನಡೆಯುತ್ತಿರುವ  ದೆಹಲಿಯ ಶಾಹೀನ್ ಬಾಗ್ನಲ್ಲಿ ಬಂದೂಕುಧಾರಿ ವ್ಯಕ್ತಿಯೊಬ್ಬನನ್ನು ಹಿಡಿಯಲಾಗಿತ್ತು. ವ್ಯಕ್ತಿ ಪ್ರತಿಭಟನಾ ಮೈದಾನಕ್ಕೆ ನುಗ್ಗಿದ್ದ ಮತ್ತು ಸುತ್ತಮುತ್ತಲಿನ ಪ್ರತಿಭಟನಾಕಾರರು ಆತನನ್ನು ಹಿಡಿಯುವವರೆಗೂ ತನ್ನ ಬಳಿ ಆಯುಧವನ್ನು ಇಟ್ಟುಕೊಂಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು.

ದಾಳಿಕೋರನ ಲೈವ್ ಫೇಸ್ ಬುಕ್ ಪೋಸ್ಟ್
ಗುಂಡು ಹಾರಾಟದ ಘಟನೆಗೆ ಕೆಲವೇ ಕ್ಷಣಗಳ ಮುನ್ನ ಶಸ್ತ್ರಧಾರಿ ವ್ಯಕ್ತಿ ಪ್ರತಿಭಟನಕಾರರ ಮಧ್ಯೆಯೇ ಸೇರಿಕೊಂಡು ತನ್ನ ಫೇಸ್ ಬುಕ್ ಖಾತೆಯಲ್ಲಿ ತನ್ನ ಚಟುವಟಿಕೆಗಳನ್ನು ನೇರವಾಗಿ (ಲೈವ್) ಪೋಸ್ಟ್ ಮಾಡಿದ್ದ.

ದಾಳಿಕೋರ ಫೇಸ್ ಬುಕ್ ಖಾತೆಯಲ್ಲಿ ತನ್ನನ್ನುರಾಮಭಕ್ತ ಗೋಪಾಲ್ಎಂಬುದಾಗಿ ಗುರುತಿಸಿಕೊಂಡಿದ್ದ. ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ಕೆಲವೇ ಕ್ಷಣಗಳ ಮುನ್ನ ಪ್ರಕಟವಾದ ಆತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.

ಫೇಸ್ ಬುಕ್ ಖಾತೆಯಲ್ಲಿ ಗೋಪಾಲ್ ವ್ಯಕ್ತಿ ಚಿತ್ರಚಿತ್ರದಲ್ಲಿಸಮಯ ಬಂದಾಗ ರಾಮಭಕ್ತ ಸಾಕುಎಂದು ಬರೆಯಲಾಗಿತ್ತು. ಅಂತಿಮವಾಗಿ ಜಾಮಿಯಾ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವುದಕ್ಕೆ ಕೆಲವೇ ಕ್ಷಣಗಳ ಮುನ್ನ ಫೇಸ್ ಬುಕ್ ವೆಬ್ ಸೈಟ್ನಲ್ಲಿ ಹಲವು ಬಾರಿ ನೇರ ಪ್ರಸಾರ ಮಾಡಿದ್ದ. ಆತನ ಕೆಲವು ವಿಡಿಯೋಗಳು ಪ್ರತಿಭಟನೆಯ ತುಣುಕುಗಳನ್ನು ಪ್ರಸಾರ ತೋರಿಸಿದರೆ, ಕೆಲವು ಆತ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದ ಆತನಸೆಲ್ಫಿಚಿತ್ರಗಳನ್ನು ತೋರಿಸಿದ್ದವು.

ದೆಹಲಿಯ ಶಾಹೀನ್ಬಾಗ್ನಲ್ಲಿ ನಡೆಯತ್ತಿರುವ ಪ್ರತಿಭಟನೆಗಳನ್ನು ಸರಣಿ ಫೇಸ್ ಬುಕ್ ಪೋಸ್ಟ್ಗಳಲ್ಲಿ ಉಲ್ಲೇಖಿಸಲಾಗಿದ್ದು, ತಾನು ಯೋಜಿಸುತ್ತಿರುವ ಪ್ರತೀಕಾರದ ಯೋಜನೆಯ ಪ್ರಸ್ತಾಪವನ್ನೂ ದಾಳಿಕೋರ ಮಾಡಿದ್ದ.

ಶಾಹೀನ್ ಬಾಗ್ .. ಗೇಮ್ ಓವರ್ಎಂದು ಒಂದು ಪೋಸ್ಟ್ನಲ್ಲಿ ಬರೆಯಲಾಗಿತ್ತು.
ಒಂದು ಪೋಸ್ಟ್ನಲ್ಲಿ ತನ್ನ ಫೇಸ್ ಬುಕ್ ಗೆಳೆಯರಿಗೆ ತನಗೆ ಕರೆ ಮಾಡಬೇಡಿ ಎಂದು ಆತ ಒತ್ತಾಯಿಸಿದ್ದ. ಆತನ ಎಲ್ಲ ಪೋಸ್ಟ್ ಗಳೂ ಹಿಂದಿಯಲ್ಲಿ ಇದ್ದವು.

ಕೈಯಲ್ಲಿ ಪಿಸ್ತೂಲ್ ಹಿಡಿದಿದ್ದ ಗೋಪಾಲ್, ಪ್ರತಿಭಟನಕಾರರತ್ತ ಗುಂಡು ಹಾರಿಸಿದಾಗ ಗುಂಪು ಆತನನ್ನು ನಿರಾಯುಧನನ್ನಾಗಿಸಿತು. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದರು.

ಟೆಲಿವಿಷನ್ ಕ್ಯಾಮರಾಗಳು ದಾಳಿಕೋರ ಬಣ್ಣದ ಪ್ಯಾಂಟ್ ಮತ್ತು ಕರಿಯ ಜಾಕೆಟ್ ಧರಿಸಿದ್ದುದನ್ನು ತೋರಿಸಿದವು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಬಳಿಯಿಂದಲೇ ಖಾಲಿ ರಸ್ತೆಯಲ್ಲಿ ನಡೆಯುತ್ತಿದ್ದ ಆತ ಪ್ರತಿಭಟನಕಾರರತ್ತ ತಿರುಗಿ, ಹಿಂದಿಯಲ್ಲಿiಹ್ ಲೋ ಆಜಾದಿ (ಇಲ್ಲಿದೆ ಸ್ವಾತಂತ್ರ್ಯ) ಎಂದು ಕೂಗಿದ್ದ. ಆತನ ತನ್ನ ತಲೆಯ ಮೇಲೆ ಪಿಸ್ತೂಲ್ ಹಿಡಿದು ಝಳಪಿಸಿತ್ತಿದ್ದುದನ್ನು ವಿಡಿಯೋ ಕ್ಯಾಮರಾಗಳು ದಾಖಲಿಸಿದ್ದವು.

ಪೊಲೀಸರು ಬ್ಯಾರಿಕೇಡ್ ಹಾಕಿದ್ದ ಹೋಲಿ ಫ್ಯಾಮಿಲಿ ಆಸ್ಪತ್ರೆಯ ಕಡೆಗೆ ನಾವು ಹೊರಟಿದ್ದೆವು. ದಿಢೀರನೆ ಗನ್ ಝಳಪಿಸುತ್ತಿದ್ದ ವ್ಯಕ್ತಿ ಬಂದು ಗುಂಡು ಹಾರಿಸಿದ. ಒಂದು ಗುಂಡು ತನ್ನ ಗೆಳೆಯನ ಕೈಗೆ ತಾಗಿತು ಎಂದು ಜಾಮಿಯಾ ವಿಶ್ವವಿದ್ಯಾಲಯದ ಅರ್ಥಶಾಸ್ತ ವಿದ್ಯಾರ್ಥಿ ಅಮ್ನಾ ಅಸಿಫ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ವಿದ್ಯಾರ್ಥಿಗಳು ಜಾಮಿಯಾದಿಂದ ರಾಜಘಾಟ್ ಮಹಾತ್ಮಾ ಗಾಂಧಿ ಸ್ಮಾರಕದತ್ತ ಹೊರಟಿದ್ದರು. ಆದರೆ ಮೆರವಣಿಗೆಯನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಯ ಸಮೀಪ ತಡೆಯಲಾಯಿತು.

ವಿದ್ಯಾರ್ಥಿಗಳು
ಪ್ರದೇಶದಲ್ಲೇ ಧರಣಿ ಕುಳಿತು ಪೊಲೀಸರನ್ನು ಹಿಂದಕ್ಕೆ ಹೋಗುವಂತೆ ಘೋಷಣೆ ಕೂಗಿದರು.

ಹಿಂದಕ್ಕೆ ಹೋಗಿ, ಹಿಂದಕ್ಕೆ ಹೋಗಿಎಂಬುದಾಗಿ ಅವರು ಘೋಷಣೆಗಳನ್ನು ಕೂಗುತ್ತಿದ್ದಂತೆಯೇ, ಪೊಲೀಸ್ ಅಧಿಕಾರಿಗಳು ಶಾಂತಿ ಕಾಪಾಡುವಂತೆ ಮತ್ತು ಶಾಂತಿಯುತವಾಗಿ ಪ್ರತಿಭಟನೆ ನಡೆಸಯವಂತೆ ಅವರಿಗೆ ಸೂಚಿಸಿದ್ದರು.

No comments:

Advertisement