ಅಪರಾಧಿಯನ್ನು
ಬಿಡುವುದಿಲ್ಲ: ಅಮಿತ್ ಶಾ
ನವದೆಹಲಿ:
ದೆಹಲಿಯ
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರ ಮೇಲೆ ಅಪ್ರಾಪ್ತ ವಯಸ್ಕನೆಂದು ಹೇಳಲಾಗುತ್ತಿರುವ ಶಸ್ತ್ರಧಾರಿ ವ್ಯಕ್ತಿ ಗುಂಡು ಹಾರಿಸಿದ ಘಟನೆಯ ಬೆನ್ನಲ್ಲೆ 2020 ಜನವರಿ 30ರ ಗುರುವಾರ ದೆಹಲಿ ಪೊಲೀಸ್ ಕಮೀಷನರ್ ಜೊತೆಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ’ಅಪರಾಧಿಯನ್ನು ಬಿಡುವುದಿಲ್ಲ’ ಎಂದು
ಹೇಳಿದರು.
‘ನಾನು
ದೆಹಲಿ ಪೊಲೀಸ್ ಕಮೀಷನರ್ ಜೊತೆಗೆ ಶೂಟಿಂಗ್ ಘಟನೆಯ (ಜಾಮಿಯಾ ಪ್ರದೇಶದಲ್ಲಿ) ಬಗ್ಗೆ ಮಾತನಾಡಿದ್ದೇನೆ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಅವರಿಗೆ ಸೂಚಿಸಿದ್ದೇನೆ. ಇಂತಹ ಯಾವುದೇ ಘಟನೆಯನ್ನು ಕೇಂದ್ರ ಸರ್ಕಾರವು ಸಹಿಸುವುದಿಲ್ಲ, ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅಪರಾಧಿಯನ್ನು ಬಿಟ್ಟು ಬಿಡಲಾಗುವುದಿಲ್ಲ’ ಎಂದು
ಶಾ ಹಿಂದಿಯಲ್ಲಿ ಟ್ವೀಟ್ ಮಾಡಿದರು.
ಈ
ಮಧ್ಯೆ, ಘಟನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಕಾನೂನು ಮತ್ತು ಸುವ್ಯವಸ್ಥೆ ನಶಿಸುತ್ತಿರುವ ಬಗ್ಗೆ ಕಾಳಜಿ ವಹಿಸುವಂತೆ ಗೃಹ ಸಚಿವರನ್ನು ಒತ್ತಾಯಿಸಿದರು.
‘ದೆಹಲಿಯಲ್ಲಿ
ಏನಾಗುತ್ತಿದೆ? ಕಾನೂನು ಮತ್ತು ಸುವ್ಯವಸ್ಥೆ ನಶಿಸುತ್ತಿದೆ. ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ದಯವಿಟ್ಟು ಕಾಳಜಿ ವಹಿಸಿ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದರು.
ಗೃಹಖಾತೆ
ಸಹಾಯಕ ಸಚಿವ ಕಿರಣ್ ರಿಜಿಜು ಅವರು ’ಯಾರೂ ಕಾನೂನಿಗಿಂತ ಮೇಲಲ್ಲ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು
ಹೇಳಿದರು.
No comments:
Post a Comment