My Blog List

Monday, January 6, 2020

ಪಾಕಿಸ್ತಾನದ ಮೊತ್ತ ಮೊದಲ ಸಿಖ್ ಸುದ್ಯಿ ಆಂಕರ್ ಸಹೋದರನ ಹತ್ಯೆ

 ಪಾಕಿಸ್ತಾನದ ಮೊತ್ತ ಮೊದಲ ಸಿಖ್ ಸುದ್ಯಿ ಆಂಕರ್ ಸಹೋದರನ ಹತ್ಯೆ
ನಂಕಾನಾ ಸಾಹಿಬ್ ದಾಳಿ ಬೆನ್ನಲ್ಲೇ ಇನ್ನೊಂದು ಕೃತ್ಯ, ಭಾರತದ ಪ್ರಬಲ ಖಂಡನೆ
ನವದೆಹಲಿ: ಪಾಕಿಸ್ತಾನದಲ್ಲಿನ ಗುರುದ್ವಾರ ನಂಕಾನ ಸಾಹಿಬ್ನಲ್ಲಿ ನಡೆದ ವಿಧ್ವಂಸಕ ಕೃತ್ಯಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ಒಂದು ದಿನದ ಬಳಿಕ  2020 ಜನವರಿ 05ರ ಭಾನುವಾರ ಪಾಕಿಸ್ತಾನದ ಪೇಶಾವರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ೨೫ರ ಹರೆಯದ ಅಲ್ಪಸಂಖ್ಯಾತ ಸಿಖ್ ಸಮುದಾಯದ  ವ್ಯಕ್ತಿಯನ್ನು ಹತ್ಯೆಗೈದ ಘಟನೆ ಘಟಿಸಿದೆ. ಹತ್ಯೆ ಘಟನೆಯನ್ನು ಭಾರತ ಪ್ರಬಲವಾಗಿ ಖಂಡಿಸಿತು.

ಹತನಾಗಿರುವ
ವ್ಯಕ್ತಿಯನ್ನು ಪಾಕಿಸ್ತಾನದ ಮೊತ್ತ ಮೊದಲ ಸಿಖ್ ಸುದ್ದಿ ಆಂಕರ್ ಹರ್ಮೀತ್ ಸಿಂಗ್ ಅವರ ಸಹೋದರ ರವೀಂದರ್ ಸಿಂಗ್ ಎಂಬುದಾಗಿ ಗುರುತಿಸಲಾಯಿತು.

ರವೀಂದರ್ ಸಿಂಗ್ ಅವರನ್ನು ಅಪರಿಚಿತ ವ್ಯಕ್ತಿಗಳು ಪೇಶಾವರದಲ್ಲಿ ಕೊಲೆ ಮಾಡಿದ್ದಾರೆ. ಹತ ವ್ಯಕ್ತಿಯ ಶವ ಭಾನುವಾರ ಚಮಕಾನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಪೇಶಾವರದ ಎಸ್ ಎಸ್ ಪಿ (ಕಾರ್ಯಾಚರಣೆ) ತಿಳಿಸಿದರು.

''ಗುರಿ ಇಟ್ಟುಕೊಂಡುನಡೆಸಲಾಗಿರುವ ರವೀಂದರ್ ಸಿಂಗ್ ಹತ್ಯೆಯನ್ನು ಭಾರತ ಪ್ರಬಲವಾಗಿ ಖಂಡಿಸಿತು.
 ಪಾಕಿಸ್ತಾನವು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಮತ್ತು ಅಪರಾಧಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ತತ್ ಕ್ಷಣ ಕ್ರಮ ಕೈಗೊಳ್ಳಬೇಕುಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಗ್ರಹಿಸಿತು.

ಪೇಶಾವರದ ಅಲ್ಪಸಂಖ್ಯಾತ ಸಿಖ್ ಸಮುದಾಯದ ಸದಸ್ಯನನ್ನು ಗುರಿ ಇಟ್ಟುಕೊಂಡು ನಡೆಸಲಾಗಿರುವ ಹತ್ಯೆಯನ್ನು ಭಾರತ ಪ್ರಬಲವಾಗಿ ಖಂಡಿಸುತ್ತದೆ. ನಂಕಾನಾ ಸಾಹಿಬ್ ಪವಿತ್ರ ಗುರುದ್ವಾರ ಶ್ರೀ ಜನಮ್ ಆಸ್ಥಾನದಲ್ಲಿ ಇತ್ತೀಚೆಗೆ ನಡೆದ ವಿಧ್ವಂಸಕ ಕೃತ್ಯಗಳು ಮತ್ತು ಸಿಖ್ ಬಾಲಕಿ ಜಗಜಿತ್ ಕೌರ್ ಅವರನ್ನು ಅಪಹರಿಸಿ ಬಲವಂತವಾಗಿ ಮದುವೆಯಾಗಿರುವ ಇನ್ನೂ ಇತ್ಯರ್ಥಗೊಳ್ಳದ ಪ್ರಕರಣದ ಬಳಿಕ ಹತ್ಯೆ ನಡೆದಿದೆಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಪಾಕಿಸ್ತಾನವು
ಇತರ ರಾಷ್ಟ್ರಗಳಿಗೆ ಬೋಧನೆ ಮಾಡುವುದನ್ನು ಬಿಟ್ಟು ತನ್ನದೇ ರಾಷ್ಟ್ರದ ಅಲ್ಪಸಂಖ್ಯಾತರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಭಾರತ ಹೇಳಿದೆ.

ಇದಕ್ಕೆ ಒಂದು ದಿನ ಮೊದಲು ಭಾರತದ ಹಲವಾರು ನಾಯಕರು ಲಾಹೋರಿನ ಚಾರಿತ್ರಿಕ ಗುರುದ್ವಾರ ನಂಕಾನದ ಮೇಲೆ ನಡೆದ ಗುಂಪು ದಾಳಿಯನ್ನು  ಖಂಡಿಸಿ, ’ಇದೊಂದು ಹೇಡಿ ಹಾಗೂ ನಾಚಿಕೆಗೇಡಿನ ಕೃತ್ಯಎಂದು ಖಂಡಿಸಿದ್ದರು. ದೆಹಲಿಯ ಪಾಕಿಸ್ತಾನಿ ಹೈಕಮೀಷನ್ ಮುಂದೆ ಜಮಾಯಿಸಿದ ಸಹಸ್ರಾರು ಪ್ರತಿಭಟನಕಾರರು  ಸಿಖ್ ಮಂದಿರಗಳು ಮತ್ತು ಅಲ್ಲಿನ ಸಮುದಾಯದ ಮಂದಿಗೆ ರಕ್ಷಣೆ ಒದಗಿಸುವಂತೆ ಪಾಕ್ ಸರ್ಕಾರವನ್ನು ಆಗ್ರಹಿಸಿದ್ದರು.

ರಾಷ್ಟ್ರದ
ರಾಜಧಾನಿಯಲ್ಲಿ ಬಿಜೆಪಿ, ಕಾಂಗ್ರೆಸ್, ಶಿರೋಮಣಿ ಅಕಾಲಿದಳ, ದೆಹಲಿ ಸಿಖ್ ಗುರುದ್ವಾರ ಆಡಳಿತ ಸಮಿತಿ ಮತ್ತು ಇತರ  ಸಂಘಟನೆಗಳಿಗೆ ಸೇರಿದ ಪ್ರತಿಭಟನಕಾರರನ್ನು ಪಾಕಿಸ್ತಾನಿ ಹೈಕಮೀಷನ್ ಬಳಿಗೆ ಸಾಗದಂತೆ  ಪೊಲೀಸರು ರಸ್ತೆಗಳಲ್ಲಿ ಅಡ್ಡಗಟ್ಟೆಗಳನ್ನು ಇರಿಸಿ ತಡೆದಿದ್ದರು.

ಪ್ರತಿಭಟನಕಾರರು
ಶೇಮ್ ಆನ್ ಪಾಕಿಸ್ತಾನ್ಮತ್ತು ಇಮ್ರಾನ್ ಖಾನ್ ಅವರ ದ್ವಂದ್ವ ನೀತಿ ಮತ್ತು ಪಾಕಿಸ್ತಾನದಲ್ಲಿನ ಸಿಕ್ಖರಿಗೆ ನೀಡಲಾಗುತ್ತಿರುವ ಚಿತ್ರಹಿಂಸೆಗೆ ಧಿಕ್ಕಾರಘೋಷಣೆಗಳಿದ್ದ ಭಿತ್ತಿ ಚಿತ್ರಗಳನ್ನು ಹಿಡಿದಿದ್ದರು. ಕೆಲವರು ಗುರುದ್ವಾರಗಳನ್ನು ರಕ್ಷಿಸುವಂತೆ ಪಾಕಿಸ್ತಾನಿ ಪ್ರಧಾನಿಯನ್ನು ಆಗ್ರಹಿಸಿದರು.

ಇದಕ್ಕೆ
ಮುನ್ನ ಭಾನುವಾರ, ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರು ಗುರುದ್ವಾರದಲ್ಲಿ ನಡೆದ ಪುಂಡಾಟಿಕೆಯನ್ನು ಖಂಡಿಸಿ, ’ಇದು ಸರ್ಕಾರದ ದೃಷ್ಟಿಕೋನಕ್ಕೆ ವಿರುದ್ಧ. ಇಂತಹ ಕೃತ್ಯದಲ್ಲಿ ಶಾಮೀಲಾದವರ ವಿರುದ್ಧ ಸರ್ಕಾರ ಶೂನ್ಯ ಸಹನೆಯನ್ನು ತೋರುತ್ತದೆಎಂದು ಎಚ್ಚರಿಸಿದ್ದರು.
ಘಟನೆ ಕುರಿತ ತಮ್ಮ ಮೌನವನ್ನು ಮುರಿದ ಖಾನ್ಖಂಡನಾರ್ಹವಾದ ನಂಕಾನ ಘಟನೆ ಮತ್ತು ಭಾರತಾದ್ಯಂತ ನಡೆಯುತ್ತಿರುವ ಮುಸ್ಲಿಮ್ ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದಾಳಿಗಳಿಗೆ ವ್ಯತ್ಯಾಸವಿದೆ ಎಂದು ಹೇಳಿದ್ದರು.

ಲಾಹೋರಿಗೆ ಸಮೀಪದಲ್ಲಿರುವ ಗುರುದ್ವಾರ ನಂಖಾನ ಸಾಹಿಬ್ ಸಿಖ್ ಸಮುದಾಯದ ಮೊದಲ ಗುರು ಗುರು ನಾನಕ್ ಅವರು ಜನಿಸಿದ ಸ್ಥಳದ ಸಮೀಪಕ್ಕೆ ಹತ್ತಿರದಲ್ಲಿ ಇರುವ  ಗುರುದ್ವಾರವಾಗಿದ್ದು ಗುರುದ್ವಾರ ಜನ್ಮ ಆಸ್ಥಾನ್ ಎಂದೇ ಖ್ಯಾತವಾಗಿದೆ.

ಮಾಧ್ಯಮ
ವರದಿಗಳ ಪ್ರಕಾರ, ಹಿಂಸಾಚಾರ ನಿರತ ಗುಂಪೊಂದು ಶುಕ್ರವಾರ ಗುರುದ್ವಾರದ ಮೇಲೆ ಕಲ್ಲೆಸೆದು ದಾಳಿ ನಡೆಸಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶ ಮಾಡಬೇಕಾಗಿ ಬಂದಿತ್ತು.

No comments:

Advertisement