My Blog List

Monday, January 6, 2020

೫೨ ಪ್ರಮುಖ ತಾಣ ಧ್ವಂಸ, ಹೊಚ್ಚ ಹೊಸ ಶಸ್ತ್ರ ಬಳಕೆ

 ೫೨ ಪ್ರಮುಖ ತಾಣ ಧ್ವಂಸ, ಹೊಚ್ಚ ಹೊಸ ಶಸ್ತ್ರ ಬಳಕೆ
ಇರಾನ್ ಪ್ರತೀಕಾರದ ಬೆದರಿಕೆಗೆ ಟ್ರಂಪ್ ಎದಿರೇಟು
ವಾಷಿಂಗ್ಟನ್: ಇರಾನಿನ ಉನ್ನತ ಕಮಾಂಡರ್ ಸೊಲೈಮಾನಿ ಹತ್ಯೆಗೆ ಅತ್ಯುಗ್ರ ಪ್ರತೀಕಾರ ಕೈಗೊಳ್ಳುವುದಾಗಿ ಇರಾನ್ ಹಾಕಿರುವ ಬೆದರಿಕೆಗೆ  2020 ಜನವರಿ 04ರ ಶನಿವಾರ ತಡರಾತ್ರಿಯಲಿ ಎದಿರೇಟು ನೀಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಸಿಬ್ಬಂದಿ, ಸೊತ್ತುಗಳ ಮೇಲೆ ದಾಳಿ ನಡೆದರೆ, ’ಸುಂದರವಾದ ಹೊಚ್ಚ ಹೊಸ ಸೇನಾ ಉಪಕರಣವನ್ನು ಯಾವ ಹಿಂಜರಿಕೆಯೂ ಇಲ್ಲದೆ ಇರಾನ್ ವಿರುದ್ಧ ಅಮೆರಿಕ ಬಳಸಲಿದೆಎಂದು ಎಚ್ಚರಿಕೆ ನೀಡಿದರು.

ಅಮೆರಿಕದ ಸಿಬ್ಬಂದಿ, ಸೊತ್ತಿನ ಮೇಲೆ ಇಸ್ಲಾಮಿಕ್ ರಿಪಬ್ಲಿಕ್ ದಾಳಿ ನಡೆಸಿದರೆ ಅಮೆರಿಕವು ಇರಾನಿನ ೫೨ ನಿವೇಶನಗಳ ಮೇಲೆ ಅತ್ಯಂತ ಕ್ಷಿಪ್ರವಾಗಿ ಅತಿ ಪ್ರಬಲ ದಾಳಿ ನಡೆಸುವುದು ಎಂಬುದಾಗಿ ಟ್ವೀಟ್ ಮಾಡಿದ ಸ್ವಲ್ಪ ಹೊತ್ತಿನ ಬಳಿಕ ಟ್ರಂಪ್ ಅವರು ಇನ್ನೊಂದು ಟ್ವೀಟಿನಲ್ಲಿ ಇರಾನ್ ವಿರುದ್ಧ ದಾಳಿಗೆ ಅಮೆರಿಕದಸುಂದರವಾದ ಹೊಚ್ಚ ಹೊಸ ಸೇನಾ ಉಪಕರಣವನ್ನು ಯಾವ ಹಿಂಜರಿಕೆಯೂ ಇಲ್ಲದೆ ಪ್ರಯೋಗಿಸಲಿದೆಎಂದು ತಿಳಿಸಿದರು.

ಇರಾಕಿನಲ್ಲಿ
ಡ್ರೋಣ್ ದಾಳಿ ನಡೆಸಿ ಇರಾನಿನ ಉನ್ನತ ಕಮಾಂಡರ್ ಸೊಲೈಮಾನಿ ಅವರನ್ನು ಕೊಂದ ತನ್ನ ಕ್ರಮವನ್ನು ಟ್ವೀಟ್ ಮೂಲಕ ಪ್ರಬಲವಾಗಿ ಸಮರ್ಥಿಸಿದ ಟ್ರಂಪ್, ೫೨ ಸಂಖ್ಯೆಯು ಟೆಹರಾನಿನ ಅಮೆರಿಕದ ರಾಜತಾಂತ್ರಿಕ ಕಚೇರಿಯಲ್ಲಿ ೧೯೭೯ರ ಕೊನೆಯಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದ್ದ ಅಮೆರಿನ್ನರ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.

ಅಮೆರಿಕವು ದಾಳಿಗೆ ಗುರುತಿಸಿರುವ ೫೨ ತಾಣಗಳ ಪೈಕಿ ಕೆಲವು ತಾಣಗಳು ಇರಾನಿಗೆ ಮತ್ತು ಅದರ ಸಂಸ್ಕೃತಿಗೆ ಅತ್ಯಂತ ಮಹತ್ವದ ಉನ್ನತ ಮಟ್ಟದ ತಾಣಗಳಾಗಿವೆ. ಮತ್ತು ತಾಣಗಳ ಮೇಲೆ ಅತ್ಯಂತ ಕ್ಷಿಪ್ರಗತಿಯಲ್ಲಿ ಅತಿ ಕಠಿಣವಾಗಿ ದಾಳಿಗಳು ನಡೆಯಲಿವೆ. ಏಕೆಂದರೆ ಅಮೆರಿಕ ಇನ್ನಷ್ಟು ಬೆದರಿಕೆಗಳನ್ನು ಬಯಸುವುದಿಲ್ಲಎಂದು ಟ್ರಂಪ್ ನುಡಿದರು.

ಇರಾನಿನ ಎರಡನೇ ಪ್ರಬಲ ವ್ಯಕ್ತಿ ಎಂಬುದಾಗಿ ಬಣ್ಣಿಸಲಾದ ಸೊಲೈಮಾನಿ ಹತ್ಯೆಯ ಬಳಿಕ, ಇರಾಕಿ ಗಡಿಯುದ್ದಕ್ಕೂ  ಕ್ಪಿಪಣಿಗಳನ್ನು ತಂದು ನಿಲ್ಲಿಸುವುದರ ಜೊತೆಗೆ ಇರಾಕಿ ಪಡೆಗಳಿಗೆ ಬೆದರಿಕೆ ಒಡ್ಡುವ ಮೂಲಕ ಅಮೆರಿಕದ ನೆಲೆಗಳ ಮೇಲೆ  ಇರಾನ್ ಪರ ಬಣಗಳು ಒತ್ತಡ ಹೆಚ್ಚಿಸಿದ ಬಳಿಕ ಟ್ರಂಪ್ ಅವರು ಟ್ವೀಟ್ಟರ್ ಮೂಲಕ ಇರಾನಿಗೆ ತಮ್ಮ ಎಚ್ಚರಿಕೆಯನ್ನು ನೀಡಿದರು.

ಇರಾನಿನ ಎರಡನೇ ಬಲಾಢ್ಯ ವ್ಯಕ್ತಿ ಮೇಲೆ ನಡೆದ ದಾಳಿಯ ಬಳಿಕ ಉಭಯ ದೇಶಗಳ ನಡುವಣ ಪ್ರಕ್ಷುಬ್ಧತೆ ಹೆಚ್ಚಿದ್ದು ಮಧ್ಯ ಪ್ರಾಚ್ಯದಲ್ಲಿ ಸಮರದ ಕಾರ್ಮೋಡಗಳು ದಟ್ಟೈಸತೊಡಗಿವೆ.

ಪ್ರತೀಕಾರದ
ಮೊದಲ ಸೂಚನೆಯಾಗಿ ಶನಿವಾರ ಬಾಗ್ದಾದಿನ ಅಮೆರಿಕ ರಾಜತಾಂತ್ರಿಕ ಕಚೇರಿ ಸಮೀಪದ ಪ್ರದೇಶದಲ್ಲಿ ಎರಡ ಸುತ್ತಿನ ಫಿರಂಗಿ ದಾಳಿ ನಡೆಸಲಾಗಿದೆ ಎಂದು ಭದ್ರತಾ ಮೂಲಗಳು ಹೇಳಿವೆ. ಹೆಚ್ಚು ಕಡಿಮೆ ಇದೇ ವೇಳೆಗೆ ಎರಡು ರಾಕೆಟ್ಗಳು ಅಮೆರಿಕದ ಪಡೆಗಳು ನಿಯೋಜನೆಗೊಂಡಿರುವ ಅಲ್ ಬಲಾದ್ ವಾಯುನೆಲೆಗೆ ಅಪ್ಪಳಿಸಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಬಾಗ್ದಾದ್
ಮತ್ತು ಅಲ್-ಬಲಾದ್ ಮೇಲೆ ಕ್ಷಿಪಣಿ ದಾಳಿ ನಡೆದದ್ದನ್ನು ಇರಾಕಿ ಸೇನೆ ದೃಢಪಡಿಸಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಇರಾಕಿ ಸೇನೆ ಹೇಳಿದೆ. ಮಿತ್ರ ಪಡೆಗಳಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಮೆರಿಕದ  ಸೇನೆ ಕೂಡಾ ತಿಳಿಸಿದೆ.

ಸೊಲೈಮಾನಿ
ಹತ್ಯೆಗಾಗಿ ಸೇಡು ತೀರಿಸಲು ಇರಾನ್ ಎಲ್ಲಿ ಹೇಗೆ ಪ್ರತೀಕಾರದ ದಾಳಿ ನಡೆಸೀತು ಎಂಬುದಾಗಿ ಅಮೆರಿಕನ್ನರು ಭೀತಿಪೂರ್ವಕ ಅಚ್ಚರಿಯನ್ನು ಹೊಂದಿದ್ದು, ’ ಹೊತ್ತಿನಲ್ಲಿ ತಾಯ್ನಾಡಿನ ವಿರುದ್ಧ ಯಾವುದೇ ನಿರ್ದಿಷ್ಟ, ವಿಶ್ವಾಸಾರ್ಹ ಬೆದರಿಕೆ ಇಲ್ಲಎಂದು ಅಮೆರಿಕದ ಹೋಮ್ ಲ್ಯಾಂಡ್ ಭದ್ರತಾ ವಿಭಾಗವು ಬುಲೆಟಿನ್ನಲ್ಲಿ ತಿಳಿಸಿದೆ.

ಇರಾನ್ ಪರ ಬಣಗಳು ಇರಾಕಿನಾದ್ಯಂತ ಅಮೆರಿಕ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಇರಾಕಿ ಪಡೆಗಳಿಗೆ ಬೆದರಿಕೆ ಮೂಲಕ ಒತ್ತಡ ತರಲು ಯತ್ನಿಸಿರುವುದು ಖಾಸಿಂ ಸೊಲೈಮಾನಿ ಹತ್ಯೆಯ ಹಿನ್ನೆಲೆಯ ಆಕ್ರೋಶದ ಸ್ಫೋಟವಷ್ಟೆಎಂದು ಟ್ರಂಪ್ ಹೇಳಿದ್ದಾರೆ.

ಆದಾಗ್ಯೂ
, ಶನಿವಾರ ಫಡೆರಲ್ ಡೆಪಾಸಿಟರಿ ಲೈಬ್ರರಿ ಪ್ರೋಗ್ರಾಮ್ ವೆಬ್ ಸೈಟನ್ನು (ಅಮೆರಿಕದ ಅತ್ಯಂತ ಕಡಿಮೆ ಪರಿಚಿತವಾದ ಸರ್ಕಾರಿ ಸಂಸ್ಥೆ) ಹ್ಯಾಕ್ ಮಾಡಿರುವ ಇರಾನ್ ಜೊತೆಗೆ ಸಂಪರ್ಕ ಇದೆ ಎಂಬುದಾಗಿ ಹೇಳಿಕೊಂಡಿರುವ ಗುಂಪೊಂದು ಇರಾನಿನ ಧ್ವಜವನ್ನು ಅದರಲ್ಲಿ ಪ್ರದರ್ಶಿಸಿ, ಸೊಲೈಮಾನಿ ಸಾವಿಗಾಗಿ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂಬ ಪ್ರತಿಜ್ಞೆಯನ್ನು ಪ್ರಕಟಿಸಿತ್ತು.
  ಮಧ್ಯೆ, ಅಮೆರಿಕ ಸಂಸತ್ತಿನ ಸ್ಪೀಕರ್ ನಾನ್ಸಿ ಪೆಲೋಸಿ ಅವರು ಹೇಳಿಕೆಯೊಂದರಲ್ಲಿ ಕಾಂಗ್ರೆಸ್ಸಿಗೆ ಟ್ರಂಪ್ ಅವರು ನೀಡಿರುವ ಮಾಹಿತಿಯುದಾಳಿಯ ಸಮರ್ಥನೆಯ ರೀತಿ ಮತ್ತು ಸಮಯವು ತುರ್ತು ಪ್ರಶ್ನೆಗಳನ್ನು ಹುಟ್ಟು ಹಾಕಿದೆಎಂದು ಹೇಳಿದ್ದಾರೆ.

ಟ್ರಂಪ್ ಆಡಳಿತವು ಪ್ರಚೋದನಕಾರಿ, ಪ್ರಕ್ಷುಬ್ಧಕಾರಿ ಸೇನಾ ಚಟುವಟಿಕೆಯಲ್ಲಿ ತೊಡಗಿದೆ ಮತ್ತು ಪರಿಣಾಮವಾಗಿ ಅಮೆರಿಕದ ನಾಗರಿಕರು ಮತ್ತು ನಮ್ಮ ಮಿತ್ರರು ಅಪಾಯದಲ್ಲಿ ಸಿಲುಕಿದ್ದಾರೆಎಂದು ಡೆಮಾಕ್ರಾಟ್  ಸದಸ್ಯೆ ಪೆಲೋಸಿ ಹೇಳಿದ್ದಾರೆ.

ಇನ್ನೊಬ್ಬ
ಪ್ರಮುಖ ಡೆಮಾಕ್ರಾಟ್ ಸದಸ್ಯೆ ಅಲೆಗ್ಸಾಂಡ್ರಿಯಾ ಒಕಾಸಿಯೋ-ಕೋರ್ಟೆಜ್ ಅವರುಅಧ್ಯಕ್ಷ ಒಬ್ಬ ರಕ್ಕಸ . ಮುಗ್ಧ ಕುಟುಂಬಗಳು, ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲಲು ಗುರಿ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಯುದ್ಧಾಪರಾಧಎಂದು ಟ್ವೀಟ್ ಮಾಡಿದರು.

No comments:

Advertisement