ಆಫ್ಘಾನಿಸ್ಥಾನದಲ್ಲಿ
ವಿಮಾನಪತನ
ಕಾಬೂಲ್: ೮೩
ಮಂದಿ ಪ್ರಯಾಣಿಕರನ್ನು ಒಯ್ಯುತ್ತಿದ್ದ ಆಫ್ಘಾನಿಸ್ಥಾನದ ಏರಿಯಾನಾ ಏರ್ ಲೈನ್ಸ್‌ಗೆ ಸೇರಿದ ಪ್ರಯಾಣಿಕ
ವಿಮಾನವೊಂದು 2020 ಜನವರಿ 27ರ ಸೋಮವಾರ ಘಜನಿ ಪ್ರಾಂತದಲ್ಲಿ
ನೆಲಕ್ಕಪ್ಪಳಿಸಿದೆ ಎಂದು ವರದಿಗಳು ತಿಳಿಸಿವೆ.
ವಿಮಾನವು ಮಧ್ಯಾಹ್ನ
೧.೧೦ರ ವೇಳೆಗೆ ಘಜನಿ ಪ್ರಾಂತದ ದೆಹ್ ಯಾಕ್ ಜಿಲ್ಲೆಯ ಸಡೋ ಖೇಲ್ ಪ್ರದೇಶದಲ್ಲಿ ಪತನಗೊಂಡಿದೆ. ಹೆಚ್ಚಿನ
ವಿವರಗಳು ಲಭ್ಯವಾಗಿಲ್ಲ ಎಂದು ವರದಿಗಳು ಹೇಳಿವೆ.
No comments:
Post a Comment