My Blog List

Sunday, January 19, 2020

ಆಕೆಗೆಷ್ಟು ಧೈರ್ಯ?: ಇಂದಿರಾ ಜೈಸಿಂಗ್‌ಗೆ ನಿರ್ಭಯಾ ತಾಯಿ ಆಶಾದೇವಿ ತರಾಟೆ

ಆಕೆಗೆಷ್ಟು ಧೈರ್ಯ?: ಇಂದಿರಾ ಜೈಸಿಂಗ್ಗೆ ನಿರ್ಭಯಾ ತಾಯಿ ಆಶಾದೇವಿ ತರಾಟೆ
ನವದೆಹಲಿ: ’ನಿರ್ಭಯಾ ಪ್ರಕರಣಎಂದೇ ಪರಿಚಿತವಾಗಿರುವ ದೆಹಲಿಯ ೨೩ರ ಹರೆಯದ ಫಿಸಿಯೋಥೆರಪಿ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಅಪರಾಧಿ ಅತ್ಯಾಚಾರಿಗಳನ್ನು ಕ್ಷಮಿಸುವಂತೆ  ಸಲಹೆ ಮಾಡಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರನ್ನು ಮೃತ ಯುವತಿಯ ತಾಯಿ ಆಶಾದೇವಿ ಅವರು  2020 ಜನವರಿ 18ರ ಶನಿವಾರ ಕಟುವಾಗಿ ತರಾಟೆಗೆ ತೆಗೆದುಕೊಂಡರು.
ನನಗೆ ಇಂತಹ ಸಲಹೆ ನೀಡಲು ಇಂದಿರಾ ಜೈಸಿಂಗ್ ಯಾರು? ಅಪರಾಧಿಗಳನ್ನು ಗಲ್ಲಿಗೆ ಏರಿಸಬೇಕು ಎಂದು ಇಡೀ ದೇಶವೇ ಬಯಸುತ್ತಿದೆ.  ಇಂತಹ ಸಲಹೆ ನೀಡಲು ಇಂದಿರಾ ಜೈಸಿಂಗ್ ಅವರಿಗೆ ಇಷ್ಟು ಧೈರ್ಯ ಹೇಗೆ ಬಂತು ಎಂಬ ನನಗೆ  ಅರ್ಥವಾಗುತ್ತಿಲ್ಲ. ಇದನ್ನು ನಂಬಲೂ ಆಗುತ್ತಿಲ್ಲ. ಸುಪ್ರೀಂಕೋರ್ಟಿನಲ್ಲಿ ಕಳೆದ ಹಲವಾರು ವರ್ಷಗಳಲ್ಲಿ ಬಹಳಷ್ಟು ಸಲ ನಾನು ಅವರನ್ನು ಭೇಟಿ ಮಾಡಿದ್ದೇನೆ.  ಒಂದು ಬಾರಿ ಕೂಡಾ ಆಕೆ ನನ್ನ ಯೋಗಕ್ಷೇಮ ವಿಚಾರಿಸಿಲ್ಲ. ಇಂದು ಈಕೆ ಅಪರಾಧಿಗಳ ಪರವಾಗಿ ಮಾತನಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳು ಅತ್ಯಾಚಾರಿಗಳನ್ನು ಬೆಂಬಲಿಸುವ ಮೂಲಕ ಜೀವನೋಪಾಯ ಕಂಡುಕೊಂಡಿದ್ದಾರೆ.  ಹೀಗಾಗಿಯೇ ಅತ್ಯಾಚಾರ ಘಟನೆಗಳು ನಿಲ್ಲುತ್ತಿಲ್ಲಎಂದು ಆಶಾದೇವಿ ಹೇಳಿದರು.

ಟ್ವಿಟ್ಟರ್ ಮೂಲಕ ಆಶಾದೇವಿ ಅವರಿಗೆ ಅತ್ಯಾಚಾರಿ ಹಂತಕರನ್ನು ಕ್ಷಮಿಸುವಂತೆ ಮನವಿ ಮಾಡಿದ್ದ ಜೈಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಉದಾಹರಣೆಯನ್ನು ಉಲ್ಲೇಖಿಸಿದ್ದರು.

ತಮ್ಮ
ಪತಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕಿ ನಳಿನಿಯನ್ನು ಗಲ್ಲಿಗೆ ಏರಿಸಬೇಕೆಂದು ತಾವು ಬಯಸುವುದಿಲ್ಲ ಎಂದು ಸೋನಿಯಾಗಾಂಧಿ ಹೇಳಿದ್ದರು.

ಆಶಾದೇವಿ ಅವರ ನೋವನ್ನು ನಾನು ಸಂಪೂರ್ಣವಾಗಿ ಗುರುತಿಸುತ್ತೇನೆ. ಆದರೆ ನಳಿನಿಯನ್ನು ಕ್ಷಮಿಸಿ ಆಕೆಯನ್ನು ಗಲ್ಲಿಗೇರಿಸಲು ತಾನು ಬಯಸುವುದಿಲ್ಲ ಎಂಬುದಾಗಿ ಹೇಳಿದ ಸೋನಿಯಾ ಗಾಂಧಿಯವರ ಮಾದರಿಯನ್ನು ಆಶಾದೇವಿ ಅವರು ಅನುಸರಿಸಬೇಕು ಎಂದು ನಾನು ಆಗ್ರಹಿಸುತ್ತೇನೆಎಂದು ಇಂದಿರಾ ಜೈಸಿಂಗ್ ಟ್ವೀಟ್ ಮಾಡಿದ್ದರು.

ನಾವು ನಿಮ್ಮ ಜೊತೆಗೆ ಇದ್ದೇವೆ. ಆದರೆ ಮರಣದಂಡನೆಗೆ ವಿರುದ್ಧವಾಗಿದ್ದೇವೆಎಂದು ಜೈಸಿಂಗ್ ಟ್ವೀಟ್ನಲ್ಲಿ ತಿಳಿಸಿದ್ದರು.

ಆಶಾದೇವಿಯ ಪುತ್ರಿಯನ್ನು ಮಾಧ್ಯಮಗಳು  ನಿರ್ಭಯಾಎಂಬುದಾಗಿ ಹೆಸರಿಸಿದ್ದವು. ಆಕೆಯ ಮೇಲೆ ೨೦೧೨ರ ಡಿಸೆಂಬರ್ ೧೬ರ ರಾತ್ರಿ ದೆಹಲಿಯ ಚಲಿಸುವ ಬಸ್ಸಿನಲ್ಲಿ ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ, ಕ್ರೂರ ಚಿತ್ರಹಿಂಸೆ ನೀಡಿ ಬಳಿಕ ಆಕೆಯನ್ನು ರಸ್ತೆಗೆ ಎಸೆದಿದ್ದರು. ಕೆಲದಿನಗಳ ಜೀವನ್ಮರಣ ಹೋರಾಟದ ಬಳಿಕ ಆಕೆ ಸಿಂಗಾಪುರದ ಆಸ್ಪತ್ರೆಯಲ್ಲಿ ಅಸು ನೀಗಿದ್ದರು. ಅಪರಾಧದ ಕ್ರೌರ್ಯವು ಇಡೀ ದೇಶಕ್ಕೆ ಆಘಾತ ಉಂಟು ಮಾಡಿತ್ತು. ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದು ಅತ್ಯಾಚಾರ ಸಂಬಂಧಿತ ಕಾನೂನುಗಳನ್ನು ಬದಲಾಯಿಸಬೇಕು ಎಂಬ ಕೂಗು ಎದ್ದಿತ್ತು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾದ ಎಲ್ಲ ಆರೂ ಮಂದಿ ಆರೋಪಿಗಳ ವಿರುದ್ಧ ಲೈಂಗಿಕ ಹಲ್ಲೆ ಮತ್ತು ಕೊಲೆ ಆರೋಪವನ್ನು ಹೊರಿಸಲಾಗಿತ್ತು. ಅವರ ಪೈಕಿ ಅಪ್ರಾಪ್ತ ವಯಸ್ಕನಾಗಿದ್ದ ಒಬ್ಬ ಆರೋಪಿಯನ್ನು ಬಾಲಾಪರಾಧಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು. ಆತನನ್ನು ಸುಧಾರಣಾ ಬಂಧನಕ್ಕೆ ಒಳಪಡಿಸಿ ಮೂರು ವರ್ಷಗಳ ಬಳಿಕ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು ಮತ್ತು ಕಾನೂನಿಗೆ ಅನುಗುಣವಾಗಿ ಆತನ ಗುರುತು ಪರಿಚಯವನ್ನು ಸಂಪೂರ್ಣವಾಗಿ ರಹಸ್ಯವಾಗಿ ಇರಿಸಲಾಗಿತ್ತು. ಇನ್ನೊಬ್ಬ ಆರೋಪಿ ರಾಮ್ ಸಿಂಗ್ ವಿಚಾರಣಾ ಕಾಲದಲ್ಲಿಯೇ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಇತರ ನಾಲ್ವರು ಆರೋಪಿಗಳಾದ ಅಕ್ಷಯ್ ಸಿಂಗ್, ಪವನ್ ಗುಪ್ತ, ಮುಖೇಶ್ ಮತ್ತು ವಿನಯ್ ಶರ್ಮ ಅವರನ್ನು ತಪ್ಪಿತಸ್ಥರು ಎಂಬುದಾಗಿ ಘೋಷಿಸಿದ ವಿಚಾರಣಾ ನ್ಯಾಯಾಲಯ ೨೦೧೩ರಲ್ಲಿ ಅವರಿಗೆ ಮರಣದಂಡನೆ ವಿಧಿಸಿತು. ೨೦೧೪ರಲ್ಲಿ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು.

೨೦೧೭ರಲ್ಲಿ
ಅಪರಾಧಿಗಳ ಪುನರ್ ಪರಿಶೀಲನಾ ಅರ್ಜಿಗಳನ್ನು ತಿರಸ್ಕರಿಸುವ ಮೂಲಕ ಸುಪ್ರೀಂಕೋರ್ಟ್ ಕೂಡಾ ಮರಣದಂಡನೆಯನ್ನು ಎತ್ತಿ ಹಿಡಿದಿತ್ತು.

ಕಟ್ಟಕಡೆಯ ಕಾನೂನು ಬದ್ಧ ಪರಿಹಾರ ರೂಪದಲ್ಲಿ ಮುಖೇಶ್ ಮತ್ತು ವಿನಯ್ ಶರ್ಮ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಗಳನ್ನು ಕೂಡಾ ಸುಪ್ರೀಂಕೋರ್ಟ್ ಈಗಾಗಲೇ ವಜಾಗೊಳಿಸಿದೆ. ಅಕ್ಷಯ್ ಮತ್ತು ಪವನ್ ಗುಪ್ತ ಇನ್ನೂ ಯಾವುದೇ ಕುರೇಟಿವ್ ಅರ್ಜಿಗಳನ್ನು ಈವರೆಗೂ ಸಲ್ಲಿಸಿಲ್ಲ.

ಮುಖೇಶ್ ಸಲ್ಲಿಸಿದ್ದ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರಸ್ಕರಿಸಿದ್ದು, ಉಳಿದ ಮೂವರು ಅಪರಾಧಿಗಳು ಈವರೆಗೂ ಪರಿಹಾರ ಬಳಕೆಯ ಆಯ್ಕೆ ಮಾಡಿಲ್ಲ. ಅಪರಾಧ ನಡೆದ ಸಂದರ್ಭದಲ್ಲಿ ನಾನು ಅಪ್ರಾಪ್ತ ವಯಸ್ಕನಾಗಿದ್ದೆ, ಆದ್ದರಿಂದ ಅಪ್ರಾಪ್ತ ವಯಸ್ಕರ ಕಾನೂನಿನ ಅಡಿಯಲ್ಲಿ ತನ್ನ ವಿಚಾರಣೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಪವನ್ ಗುಪ್ತ ವಿಶೇಷ ಅರ್ಜಿ ಸಲ್ಲಿಕೆಯ ಮೂಲಕ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾನೆ.

ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದ ದಿನದಿಂದ ಗಲ್ಲಿಗೇರಿಸಲು ೧೪ ದಿನಗಳ ಅಂತರ ಇರಬೇಕು ಎಂಬ ಸೆರೆಮನೆ ನಿಯಮಾವಳಿಗಳಿಗೆ ಅನುಗುಣವಾಗಿ ತಾನು ಹಿಂದೆ ಹೊರಡಿಸಿದ್ದಡೆತ್ ವಾರಂಟ್ನ್ನು ತಡೆ ಹಿಡಿದ ದೆಹಲಿಯ ವಿಚಾರಣಾ ನ್ಯಾಯಾಲಯವು ಫೆಬ್ರುವರಿ ೧ಕ್ಕೆ ಅಪರಾಧಿಗಳನ್ನು ಗಲ್ಲಿಗೇರಿಸಿಲು ದಿನ ನಿಗದಿ ಪಡಿಸಿ ಹೊಸದಾಗಿಡೆತ್ ವಾರಂಟ್ಜಾರಿಗೊಳಿಸಿದೆ.

ಸೆರೆಮನೆಯ ನಿಯಮಾವಳಿಗೆ ಅನುಗುಣವಾಗಿ ಗಲ್ಲು ಶಿಕ್ಷೆ ವಿಧಿಸಲು ಕ್ಷಮಾದಾನ ಕೋರಿಕೆ ಅರ್ಜಿಯ ಬಳಿಕ ೧೪ ದಿನಗಳ ಅಂತರ ಇರಬೇಕು ಎಂದು ಹೇಳಿ ಮೊದಲು ನಿಗದಿ ಪಡಿಸಿದ್ದ ಜನವರಿ ೨೨ರ ಗಲ್ಲು ದಿನಾಂಕವನ್ನು ನ್ಯಾಯಾಲಯ ರದ್ದು ಪಡಿಸಿ ಹೊಸ ದಿನಾಂಕ ನಿಗದಿ ಪಡಿಸಿದಾಗ ಭ್ರಮನಿರಸನಗೊಂಡನಿರ್ಭಯಾತಾಯಿ ಆಶಾದೇವಿನಮಗೆ ಬರೀ ದಿನಾಂಕಗಳು ಸಿಗುತ್ತಿವೆ. ಏನು ಹೇಳಬೇಕೆಂದೂ ಅರ್ಥವಾಗುತ್ತಿಲ್ಲ. ಕೇವಲ ದಿನಾಂಕಗಳನ್ನು ನೀಡಿ ನಮ್ಮನ್ನು ನ್ಯಾಯಾಲಯದ ಕೊಠಡಿಯಿಂದ ಹೊರಕ್ಕೆ ಕಳುಹಿಸಲಾಗುತ್ತಿದೆಎಂದು ಆಶಾದೇವಿ ಶುಕ್ರವಾರ ಕಂಬನಿದುಂಬಿ ಹೇಳಿದ್ದರು.

No comments:

Advertisement