My Blog List

Sunday, February 23, 2020

ಮೆಲನಿಯಾ ಟ್ರಂಪ್ ಶಾಲಾ ಭೇಟಿ: ಕೇಜ್ರಿವಾಲ್, ಸಿಸೋಡಿಯಾ ಔಟ್

ಮೆಲನಿಯಾ ಟ್ರಂಪ್ ಶಾಲಾ ಭೇಟಿ: ಕೇಜ್ರಿವಾಲ್, ಸಿಸೋಡಿಯಾ ಔಟ್
ನವದೆಹಲಿ: ಅಮೆರಿಕದ ಮೊದಲ ಮಹಿಳೆ ಮೆಲನಿಯಾ ಟ್ರಂಪ್ ಅವರು ಮಂಗಳವಾರ ದೆಹಲಿಯ ಸರ್ಕಾರಿ ಶಾಲೆಗೆ ನೀಡಲಿರುವ ಭೇಟಿಯ ವೇಳೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಹಾಜರಿರುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ (ಆಪ್) ಹಿರಿಯ ಕಾರ್ಯಕರ್ತರೊಬ್ಬರು 2020 ಫೆಬ್ರುವರಿ 22ರ ಶನಿವಾರ  ಇಲ್ಲಿ ತಿಳಿಸಿದರು.

ಅಮೆರಿಕದ ಮೊದಲ ಮಹಿಳೆ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2020 ಫೆಬ್ರುವರಿ ೨೪ರ ಸೋಮವಾರದಿಂದ ಎರಡು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.

ಮಂಗಳವಾರ ಬೆಳಗ್ಗೆ ಅಮೆರಿಕದ ಮೊದಲ ಮಹಿಳೆ ಮೆಲನಿಯಾ ಟ್ರಂಪ್ ಅವರು ದೆಹಲಿಯ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡುವ ಕಾರ್ಯಕ್ರಮಬಿ ಬೆಸ್ಟ್ಉಪಕ್ರಮ ನಿಗದಿಯಾಗಿದೆ.

ಅವರ
ಶಾಲಾ ಭೇಟಿಯ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಶಿಕ್ಷಣ ಸಚಿವ ಮನಿಶ್ ಸಿಸೋಡಿಯಾ ಅವರು ಶಾಲೆಯಲ್ಲಿ ಮೆಲನಿಯಾ ಟ್ರಂಪ್ ಅವರನ್ನು ಸ್ವಾಗತಿಸಿ ವಿದ್ಯಾರ್ಥಿಗಳು ಪಡೆಯುತ್ತಿರುವಸಂತಸ ಪಠ್ಯಸೂಚಿ (ಹ್ಯಾಪಿನೆಸ್ ಕರಿಕುಲಂ) ಶಿಕ್ಷಣದ ಬಗ್ಗೆ ವಿವರಿಸಬೇಕಾಗಿತ್ತು.

ಏನಿದ್ದರೂ, ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರ ಹೆಸರುಗಳನ್ನು ಶಾಲಾ ಸಮಾರಂಭದಲ್ಲಿ ಹಾಜರಿರುವ ವ್ಯಕ್ತಿಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದಾಗಿ ಮುಖ್ಯಮಂತ್ರಿಯವರ ಕಚೇರಿಗೆ ಶನಿವಾರ ಬೆಳಗ್ಗೆ ತಿಳಿಸಲಾಗಿದೆ ಎಂದು ದೆಹಲಿ ಸರ್ಕಾರದ ಅಧಿಕಾರಿಗಳು ಹೇಳಿದರು.

೨೦೧೮ರಲ್ಲಿ ದೆಹಲಿ ಸರ್ಕಾರವೇಸಂತಸ ಪಠ್ಯಸೂಚಿ (ಹ್ಯಾಪಿ ಕರಿಕುಲಂ) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ್ದು ಸಂತಸ ಪಠ್ಯಸೂಚಿ ಮೇಲೆಯೇ ಶಾಲಾ ಕಾರ್ಯಕ್ರಮ ಬೆಳಕು ಚೆಲ್ಲಲಿದೆ. ಆದರೆ ಅದನ್ನು ಅನುಷ್ಠಾನಗೊಳಿಸಿದ ನಗರ ಸರ್ಕಾರದ ಶಿಕ್ಷಣ ಸಚಿವರು ಕೂಡಾ ಅತಿಥಿ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವುದು ವಿಲಕ್ಷಣಎಂದು ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದರು.

ಪಠ್ಯಸೂಚಿಯ ಬಗ್ಗೆ ಅಮೆರಿಕದ ಮೊದಲ ಮಹಿಳೆಗೆ ಯಾರು ವಿವರಣೆ ನೀಡಲಿದ್ದಾರೆ ಎಂಬ ಬಗ್ಗೆ ನಮಗೆ ಇನ್ನೂ ತಿಳಿಸಲಾಗಿಲ್ಲ. ಮುಖ್ಯಮಂತ್ರಿ  ಮತ್ತು ಉಪ ಮುಖ್ಯಮಂತ್ರಿಯವರ ಹೆಸರುಗಳನ್ನು ಕೇಂದ್ರ ಸರ್ಕಾರದ ಒತ್ತಡವನ್ನು ಅನುಸರಿಸಿ ಕೈಬಿಡಲಾಗಿದೆ ಎಂಬುದು ನಮಗೆ ತಿಳಿದುಬಂದಿದೆಎಂದು ಅವರು ನುಡಿದರು.

ಇದಕ್ಕೆ ಮುನ್ನ, ಸಿಸೋಡಿಯಾ ಅವರು ಮಾಧ್ಯಮಗಳಿಗೆ ರಾಷ್ಟ್ರೀಯ ರಾಜಧಾನಿಯ ಕೆಲವು ಶಾಲೆಗಳಲ್ಲಿ ಮೆಲನಿಯಾ ಟ್ರಂಪ್ ಅವರುಸಂತಸ ತರಗತಿಗೆ ಹಾಜರಾಗಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರ ಸರ್ಕಾರದ ಪ್ರಕಾರ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಹೌದು, ಕೆಲವು ಶಾಲೆಗಳಲ್ಲಿ, ಮೆಲನಿಯಾ ಟ್ರಂಪ್ ಅವರ ಭೇಟಿಗೆ ಸಂಬಂಧಿಸಿದಂತೆ ಕೆಲವು ಸಿದ್ಧತೆಗಳು ನಡೆಯುತ್ತಿವೆ. ಆದರೆ ಭದ್ರತಾ ಕಾರಣಗಳಿಗಾಗಿ ನಾನು ನಿಮಗೆ ಹೆಚ್ಚಿನ ವಿಷಯ ಹೇಳಲಾಗದುಎಂದು ಸಿಸೋಡಿಯಾ ಅವರು ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದರು.

ಸಂತಸ ತರಗತಿಗಳನ್ನು ಆಮ್ ಆದ್ಮಿ ಪಕ್ಷವು ೨೦೧೮ರಲ್ಲಿ ರಾಜಧಾನಿಯಲ್ಲಿ ಆರಂಭಿಸಿತ್ತು. ಪಠ್ಯಸೂಚಿಯ ಭಾಗವಾಗಿ ವಿದ್ಯಾರ್ಥಿಗಳಿಗೆ ಧ್ಯಾನ, ಬೀದಿನಾಟಕ, ಮೂಲಭೂತ ವಿಧೇಯತೆ ಮತ್ತು ಮಕ್ಕಳಲ್ಲಿ ಒತ್ತಡ ಹಾಗೂ ಉದ್ವೇಗ ಕಡಿಮೆಗೊಳಿಸುವ ವಿಧಾನಗಳನ್ನು ಕಲಿಸಲಾಗುತ್ತದೆ.

ಕ್ಷುಲ್ಲಕ ರಾಜಕಾರಣ ಸಲ್ಲದು: ಆದಾಗ್ಯೂ, ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರನ್ನು ಮೆಲನಿಯಾ ಟ್ರಂಪ್ ಅವರ ಶಾಲಾ ಭೇಟಿ ಕಾರ್ಯಕ್ರಮದಿಂದ ಕೈಬಿಡಲಾದ ವರದಿಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಬಿಜೆಪಿ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಸಲ್ಲದುಎಂದು ಹೇಳಿದೆ.

ಮಹತ್ವದ ಸಂದರ್ಭಗಳಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದು. ಭಾರತ ಸರ್ಕಾರವು ಎಲ್ಲ ಭಾರತೀಯರನ್ನೂ ಪ್ರತಿನಿಧಿಸುತ್ತದೆ. ರಾಜಕೀಯ ಅಂಗಸಂಸ್ಥೆಗಳನ್ನು ಇಂತಹ ಸಂದರ್ಭಗಳಲ್ಲಿ ಲೆಕ್ಕಹಾಕಬಾರದು.  ಇದರ ಬಗ್ಗೆ ಕ್ಷುಲ್ಲಕ ರಾಜಕಾರಣ ಮಾಡಬಾರದುಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ  ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

No comments:

Advertisement