My Blog List

Sunday, February 23, 2020

ನಿರ್ಭಯಾ ಪ್ರಕರಣ: ವಿನಯ್ ಶರ್ಮ ಅರ್ಜಿ ವಜಾ

ನಿರ್ಭಯಾ ಪ್ರಕರಣ: ವಿನಯ್ ಶರ್ಮ ಅರ್ಜಿ ವಜಾ
ಉನ್ನತ ಚಿಕಿತ್ಸೆ ಕೋರಿಕೆಗೆ ಕೋರ್ಟ್ ನಕಾರ
ನವದೆಹಲಿ: ತಾನು ಮಾನಸಿಕ ಅಸ್ವಸ್ಥತೆ ಮತ್ತು ಖಿನ್ನತೆಯಿಂದ ನರಳುತ್ತಿರುವುದಾಗಿಯೂ ಅದಕ್ಕೆ ಚಿಕಿತ್ಸೆಯ ಅಗತ್ಯವಿದೆ ಎಂಬುದಾಗಿಯೂ ಪ್ರತಿಪಾದಿಸಿ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯವು 2020 ಫೆಬ್ರುವರಿ 22ರ ಶನಿವಾರ ವಜಾಗೊಳಿಸಿತು.

ಅಡಿಷನಲ್ ಸೆಷನ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ವಿನಯ್ ಕುಮಾರ್ ಶರ್ಮ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದರು. ಶರ್ಮನಿಗೆ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಬಲತೋಳಿನಲ್ಲಿ ಮೂಳೆ ಮುರಿತ ಸಂಭವಿಸಿದೆ ಮತ್ತು ಆತ ಮಾನಸಿಕ ಅಸ್ವಸ್ಥತೆ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂದು ಅರ್ಜಿಯು ಪ್ರತಿಪಾದಿಸಿತ್ತು.

ತಿಹಾರ್ ಸೆರೆಮನೆ ಅಧಿಕಾರಿಗಳು ವಿನಯ್ ಕುಮಾರ್ ಶರ್ಮನ ಪ್ರತಿಪಾದನೆಗಳನ್ನುತಿರುಚಿದ ವಾಸ್ತವಾಂಶಗಳ ಮೂಟೆಎಂದು ಬಣ್ಣಿಸಿದ್ದರು ಮತ್ತು ಶಿಕ್ಷಿತ ಅಪರಾಧಿಯು ತನಗೆ ತಾನೇ ಮೇಲ್ನೋಟಕ್ಕೆ ಕಾಣುವಂತಹ ಗಾಯಗಳನ್ನು ಮಾಡಿಕೊಂಡಿದ್ದಾನೆ ಮತ್ತು ಆತ ಯಾವುದೇ ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿಲ್ಲ ಎಂಬುದು ಸಿಸಿಟಿವಿ ದೃಶ್ಯಾವಳಿಗಳಿಂದ ಸಾಬೀತಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.

ಸೆರೆಮನೆಯ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಮಾನಸಿಕ ತಜ್ಞರು ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳನ್ನು ಪ್ರತಿದಿನವೂ ವೈದ್ಯಕೀಯ ತಪಾಸಣೆಗಳಿಗೆ ಗುರಿಪಡಿಸಲಾಗುತ್ತಿದ್ದು, ಅವರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದರು.

ತನಗೆ ಮಾನಸಿಕ ಅಸ್ವಸ್ಥತೆಗಾಗಿ ಮಾನವೀಯ ವರ್ತನೆ ಮತ್ತು ಸಂಬಂಧಿತ ವಿಜ್ಞಾನಗಳ ಸಂಸ್ಥೆಯಲ್ಲಿ (ಐಎಚ್ಬಿಎಎಸ್) ಚಿಕಿತ್ಸೆ ಒದಗಿಸಬೇಕು ಎಂದು ವಿನಯ್ ಶರ್ಮ ತನ್ನ ಅರ್ಜಿಯಲ್ಲಿ ಕೋರಿದ್ದ.

ವಿನಯ್ ಶರ್ಮ ಪರ ವಕೀಲ ಎಪಿ ಸಿಂಗ್ ಅವರು ವಾರಾರಂಭದಲ್ಲಿ ನ್ಯಾಯಾಲಯಕ್ಕೆ ತಮ್ಮ ಕಕ್ಷಿದಾರ ಮಾನಸಿಕ ಅಸ್ವಸ್ಥತೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದು ತನ್ನ ವಕೀಲ ಮತ್ತು ಕುಟುಂಬ ಸದಸ್ಯರನ್ನು ಗುರುತಿಸಲು ವಿಫಲನಾಗಿದ್ದಾನೆ. ಆದ್ದರಿಂದ ಶರ್ಮನಿಗೆ ಮಾನಸಿಕ ಅಸ್ವಸ್ಥತೆ ಮತ್ತು ದೈಹಿಕ ಗಾಯಗಳಿಗೆ ಉನ್ನತ ಚಿಕಿತ್ಸೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದರು. ಶರ್ಮನಿಗೆ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಬಲತೋಳಿನಲ್ಲಿ ಮೂಳೆ ಮುರಿತ ಸಂಭವಿಸಿದ್ದಲ್ಲದೆ, ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ವಕೀಲರು ತಿಳಿಸಿದ್ದರು.

ಸೆರೆಮನೆ ಅಧಿಕಾರಿಗಳನ್ನು ಪ್ರತಿನಿಧಿಸುತ್ತಾ ಶರ್ಮ ಪ್ರತಿಪಾದನೆಗಳನ್ನು ವಿರೋಧಿಸಿದ ಪಬ್ಲಿಕ್ ಪ್ರಾಸೆಕ್ಯೂಟರ್ ಇರ್ಫಾನ್ ಅಹ್ಮದ್ ಅವರುಇಡೀ ಅರ್ಜಿಯು ತಿರುಚಿದ ವಾಸ್ತವಾಂಶಗಳ ಮೂಟೆಯಾಗಿದೆ. ಶಿಕ್ಷಿತ ಅಪರಾಧಿಯು ಸ್ವತಃ ತನ್ನ ತಲೆಯನ್ನು ಗೋಡೆಗೆ ಜಜ್ಜಿಕೊಂಡಿದ್ದು, ಅದು ಸ್ವತಃ ಮಾಡಿಕೊಂಡಿರುವ ಗಾಯವಾಗಿದೆ. ಇದು ಸೆರೆಮನೆ ಅಧಿಕಾರಿಗಳು ಸಲ್ಲಿಸಿರುವ ಸಿಸಿಟಿವಿ ದೃಶ್ಯಾವಳಿಯಿಂದ ಖಚಿತವಾಗಿದೆಎಂದು ಹೇಳಿದರು.

ಮಾನವ ವರ್ತನೆ ಮತ್ತು ಸಂಬಂಧಿಸಿದ ವಿಜ್ಞಾನ ಸಂಸ್ಥೆಯಲ್ಲಿ (ಐಎಚ್ಬಿಎಎಸ್) ಚಿಕಿತ್ಸೆ ಒದಗಿಸುವುವಂತೆ ಶರ್ಮ ಮಾಡಿದ ಮನವಿಯನ್ನು ಉಲ್ಲೇಖಿಸಿದ ಅಹ್ಮದ್ ಅವರುಸೆರೆಮನೆಯ ವೈದ್ಯರು ನಿಯಮಿತವಾಗಿ ಶಿಕ್ಷಿತನ ವೈದ್ಯಕೀಯ ತಪಾಸಣೆ ನಡೆಸಿದ್ದು, ದಾಖಲೆಗಳು ಆತ ವಕೀಲ ಎಪಿ ಸಿಂಗ್ ಅವರು ಪ್ರತಿಪಾದಿಸಿದ ಯಾವುದೇ ಕಾಯಿಲೆಯಿಂದ ನರಳುತ್ತಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿವೆ. ಆದ್ದರಿಂದ ಯಾವುದೇ ಆಸ್ಪತ್ರೆಯಲ್ಲಿ ಆತನ ಪರೀಕ್ಸೆ ನಡೆಸುವ ಅಗತ್ಯವಿಲ್ಲಎಂದು ನುಡಿದರು.

ನ್ಯಾಯಾಲಯವು ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ (೨೬) ಮತ್ತು ಅಕ್ಷಯ್ ಕುಮಾರ್ (೩೧) ಅವರನ್ನು ಮಾರ್ಚ್ ೩ರಂದು ಬೆಳಗ್ಗೆ ಗಂಟೆಗೆ ಗಲ್ಲಿಗೇ ಏರಿಸಲು ದಿನ ನಿಗದಿಪಡಿಸಿ ಫೆಬ್ರುವರಿ ೧೭ರಂದು ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸಿತ್ತು.

ಶರ್ಮನ ಮನವಿಗೆ ಪ್ರತಿಕ್ರಿಯಿಸಿದ ಸಂತ್ರಸ್ತ ಯುವತಿಯ ತಾಯ ಆಶಾದೇವಿ ಅವರುಇದು ಗಲ್ಲು ಶಿಕ್ಷೆ ಜಾರಿಯನ್ನು ವಿಳಂಬಗೊಳಿಸುವ ತಂತ್ರದ ಹೊರತು ಬೇರೇನೂ ಅಲ್ಲ. ಶಿಕ್ಷಿತ ಅಪರಾಧಿಗಳು ನ್ಯಾಯಾಲಯಗಳನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.  ಅವರು ಕಾನೂನುಬದ್ಧ ಪರಿಹಾರದ ಎಲ್ಲ ಅವಕಾಶಗಳನ್ನೂ ಬಳಸಿಕೊಂಡಿದ್ದಾರೆ. ಅವರನ್ನು ಮಾರ್ಚ್ ೩ರಂದು ಗಲ್ಲಿಗೆ ಏರಿಸಲಾಗುವುದು ಎಂದು ನಾನು ನಂಬಿದ್ದೇನೆಎಂದು ನುಡಿದರು.

No comments:

Advertisement