My Blog List

Saturday, February 15, 2020

ಫೆ.೧೬ರಂದು ಕೇಜ್ರಿವಾಲ್ ಪ್ರಮಾಣವಚನ: ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ

ಫೆ.೧೬ರಂದು ಕೇಜ್ರಿವಾಲ್ ಪ್ರಮಾಣವಚನ: ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ
ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಫೆಬ್ರುವರಿ ೧೬ರ ಭಾನುವಾರ ನಡೆಯಲಿರುವ ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅರವಿಂದ ಕೇಜ್ರಿವಾಲ್ ಆಹ್ವಾನಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿಯ ಎಲ್ಲ ದೆಹಲಿ ಶಾಸಕರು, ಸಂಸತ್ ಸದಸ್ಯರಿಗೂ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ . ಆದರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ನಾಯಕರಿಗೆ ಆಹ್ವಾನ ನೀಡಲಾಗಿಲ್ಲ, ಏಕೆಂದರೆ ಇದು ದೆಹಲಿ ನಗರಕ್ಕೆ ಸಂಬಂಧಿಸಿದ ಕಾರ್ಯಕ್ರಮ ಎಂದು  ವರದಿ ತಿಳಿಸಿದೆ.

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರಚಂಡ ಜಯಭಾರಿ ಬಾರಿಸಿದ್ದು, ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದೆ. ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಫೆಬ್ರುವರಿ ೧೬ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಹಿಂದೆ ಸಚಿವರಾಗಿದ್ದವರು ಅದೇ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದು, ಅಂದು ಕೇಜ್ರಿವಾಲ್ ಜತೆಗೆ ಎಲ್ಲಾ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

೭೦ ಸದಸ್ಯಬಲದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ೬೨ ಸ್ಥಾನ ಪಡೆದಿದ್ದು, ಒಟ್ಟು ೫೩.೫೭ರಷ್ಟು ಮತಪ್ರಮಾಣ ಹಂಚಿಕೊಂಡಿದೆ. ಬಿಜೆಪಿ ೮ಸ್ಥಾನಗಳಲ್ಲಿ ಗೆಲುವು ಸಾಧಿಸಿ ಶೇ.೩೮.೫೧ರಷ್ಟು ಮತಗಳಿಸಿದ್ದರೆ, ಕಾಂಗ್ರೆಸ್ ಪಕ್ಷ ಒಂದೂ ಸ್ಥಾನ ಪಡೆಯದೇ ಶೇ..೨೬ರಷ್ಟು ಮತಗಳಿಸಿದೆ ಎಂದು ವರದಿ ವಿವರಿಸಿದೆ.

No comments:

Advertisement