Sunday, February 23, 2020

ಪ್ರಧಾನಿ ಮೋದಿ ಬಹುಮುಖ ಪ್ರತಿಭಾವಂತ: ನ್ಯಾಯಮೂರ್ತಿ ಅರುಣ್ ಮಿಶ್ರ

ಪ್ರಧಾನಿ ಮೋದಿ ಬಹುಮುಖ ಪ್ರತಿಭಾವಂತ
ನ್ಯಾಯಮೂರ್ತಿ ಅರುಣ್ ಮಿಶ್ರ ಶಾಘನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿರುವ ದೂರದೃಷ್ಟಿಯನ್ನು ಹೊಂದಿದ ವ್ಯಕ್ತಿ ಮತ್ತು ಜಾಗತಿಕವಾಗಿ ಚಿಂತಿಸಿ ಸ್ಥಳೀಯವಾಗಿ ಅನುಷ್ಠಾನಗೊಳಿಸುವ ಬಹುಮುಖ ಪ್ರತಿಭಾವಂತ ಎಂಬುದಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರ ಅವರು  2020 ಫೆಬ್ರುವರಿ 22ರ ಶನಿವಾರ ಇಲ್ಲಿ ಶ್ಲಾಘಿಸಿದರು.

೨೦೨೦ರ ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಧನ್ಯವಾದ ಸಮರ್ಪಣೆ ಮಾಡುತ್ತಿದ್ದ ನ್ಯಾಯಮೂರ್ತಿ ಮಿಶ್ರ ಅವರು ಇದೇ ವೇಳೆಗೆ, ಸುಮಾರು ೧೫೦೦ಕ್ಕೂ ಹೆಚ್ಚಿನ ಹಳೆಯ ಕಾನೂನುಗಳನ್ನು ನಿವಾರಿಸಿದ್ದಕ್ಕಾಗಿ ಕೇಂದ್ರದ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರನ್ನೂ ಹೊಗಳಿದರು.

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಜವಾಬ್ದಾರಿಯುತ ಮತ್ತು ಅತ್ಯಂತ ಸ್ನೇಹಶೀಲ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ನ್ಯಾಯಮೂರ್ತಿ ಮಿಶ್ರ ನುಡಿದರು.

ಸುಪ್ರೀಂಕೋರ್ಟಿನಲ್ಲಿನ್ಯಾಯಾಂಗ ಮತ್ತು ಬದಲಾಗುತ್ತಿರುವ ವಿಶ್ವವಿಷಯಕ್ಕೆ ಸಂಬಂಧಿಸಿದಂತೆ ೨೦೨೦ರ ಅಂತಾರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನವನ್ನು ಸಂಘಟಿಸಲಾಗಿತ್ತು.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನ್ಯಾಯಾಂಗ ಎದುರಿಸಿದ ಸವಾಲುಗಳು ಒಂದೇ ರೀತಿಯವುಗಳಾಗಿದ್ದು ಸದಾ ಬದಲಾಗುತ್ತಿರುವ ಜಗತ್ತಿನಲ್ಲಿ ನ್ಯಾಯಾಂಗವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ನ್ಯಾಯಮೂರ್ತಿ ಹೇಳಿದರು.

ಗೌರವಯುತವಾದ ಮಾನವ ಅಸ್ತಿತ್ವ ನಮ್ಮ ಮೂಲ ಕಾಳಜಿಯಾಗಿದೆ. ಜಾಗತಿಕವಾಗಿ ಯೋಚಿಸಿ ಸ್ಥಳೀಯವಾಗಿ ಅದನ್ನು ಅನುಷ್ಠಾನಗೊಳಿಸುವ ಬಹುಮುಖೀ ಪ್ರತಿಭಾವಂತ ಶ್ರೀ ನರೇಂದ್ರ ಮೋದಿ ಅವರಿಗೆ ಅವರ ಸ್ಫೂರ್ತಿಯುತ ಭಾಷಣಕ್ಕಾಗಿ ನಾವು ಧನ್ಯವಾದ ಸಮರ್ಪಿಸುತ್ತೇವೆ. ಅವರ ಭಾಷಣವು ಆರಂಭದಲ್ಲಿಯೇ ಸಮ್ಮೇಳನದ ಕಲಾಪಗಳಿಗೆ ವೇಗವರ್ಧಕವಾಗಿ ಕೆಲಸ ಮಾಡಲಿದ್ದು ಕಾರ್ಯಸೂಚಿಯನ್ನು ನಿಗದಿಪಡಿಸಿದೆಎಂದು ನ್ಯಾಯಮೂರ್ತಿ ಮಿಶ್ರ ಹೇಳಿದರು.

ಸುಪ್ರೀಂಕೋರ್ಟಿನಲ್ಲಿ ಹಿರಿತನದಲ್ಲಿ ಮೂರನೇಯವರಾಗಿರುವ ನ್ಯಾಯಮೂರ್ತಿ ಅರುಣ್ ಮಿಶ್ರ ಅವರು ಅವರು ಸಮ್ಮೇಳನವನ್ನು ಉದ್ಘಾಟಿಸಿದ್ದಕ್ಕಾಗಿ ಪ್ರಧಾನಿಯವರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತ ಪಡಿಸಿದರು.

No comments:

Advertisement