ಗ್ರಾಹಕರ ಸುಖ-ದುಃಖ

My Blog List

Sunday, March 15, 2020

ಬಾಲಾಜಿ ಕೃಪಾ ಬಡಾವಣೆಗೆ ‘ಕಾವೇರಿ’ ಆಗಮನ

ಬಾಲಾಜಿ ಕೃಪಾ ಬಡಾವಣೆಗೆ ‘ಕಾವೇರಿ’ ಆಗಮನ
ಬೆಂಗಳೂರು: ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಗೆ 2020 ಮಾರ್ಚ್ 15ರ ಭಾನುವಾರ ‘ಕಾವೇರಿ’ ಪದಾರ್ಪಣೆ ಗೈದಳು.

ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ  ಕೃಷ್ಣ ಭೈರೇಗೌಡ  ಬಡಾವಣೆಯಲ್ಲಿ ಪೂಜೆಯ ಬಳಿಕ ನಲ್ಲಿ ತಿರುಗಿಸುವ ಮೂಲಕ ಕಾವೇರಿ ನೀರು ಸರಬರಾಜನ್ನು ಉದ್ಘಾಟನೆ ಮಾಡಿದರು.

ಇದರೊಂದಿಗೆ ಬಡಾವಣೆ ನಿವಾಸಿಗಳ ಹಲವಾರು ವರ್ಷಗಳ ಕಾಯಂ ನೀರಿನ ವ್ಯವಸ್ಥೆಯ  ಬೇಡಿಕೆ ಈಡೇರಿತು. ಬಡಾವಣೆಯ ಹಿರಿಯ ನಾಗರಿಕ ನಾರಾಯಣಸ್ವಾಮಿ ಅವರು ಕಾವೇರಿ ಪೂಜೆ ನೆರವೇರಿಸಿದರು.

ಬಳಿಕ ನಡೆದ ಸಂಕ್ಷಿಪ್ತ ಸಮಾರಂಭದಲ್ಲಿ ಭೈರೇಗೌಡ  ಅವರು ಕಾವೇರಿ ನೀರನ್ನು ಬಡಾವಣೆಗೆ ತರಲು ಪಟ್ಟ ಶ್ರಮದ ವಿವರಣೆಯನ್ನು ನೀಡಿ ಈ ಕೆಲಸದಲ್ಲಿ ಸಹಕರಿಸಿದ  ಬೆಂಗಳೂರು ಜಲಮಂಡಳಿಯ ಅಧಿಕಾರಿಗಳೂ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಬೆಂಗಳೂರು ಜಲಮಂಡಳಿಯ ಅಧಿಕಾರಿಗಳಾದ ದಲಾಯತ್,  ನಾರಾಯಣಸ್ವಾಮಿ,  ಬಡಾವಣೆಗೆ ನೀರು ತರುವ ನಿಟ್ಟಿನಲ್ಲಿ ಶ್ರಮಿಸಿದ ಹಿರಿಯರಾದ ಉದಯಶಂಕರ್, ಚೌಡರೆಡ್ಡಿ, ಸೇತೂರಾಂ, ಕಾಂಗ್ರೆಸ್ ನಾಯಕ ಶಿವಕುಮಾರ್ ಮತ್ತಿತತರು ಹಾಜರಿದ್ದರು.


ಸಮಾರಂಭದ ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ:1 comment:

Unknown said...

Finally cauvery entered to layout

Advertisement