Friday, March 13, 2020

ಕೊರೋನಾ ಕಾಟ: ‘ನಮಸ್ತೆ’ಗೆ ಟ್ರಂಪ್ ಶರಣು

ಕೊರೋನಾ ಕಾಟ: ‘ನಮಸ್ತೆ’ಗೆ ಟ್ರಂಪ್ ಶರಣು
ವಾಷಿಂಗ್ಟನ್: ಸಂಪರ್ಕವಿಲ್ಲದ ಕೈಜೋಡಿಸಿ ನಮಸ್ತೆ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುವ ಭಾರತವು ಕೊರೋನಾವೈರಸ್ ವಿರುದ್ಧದ ಸಮರದಲ್ಲಿ ಮುಂದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ಮಾರ್ಚ್ 12ರ ಗುರುವಾರ ಭೇಟಿ ನೀಡಿದ ಐರಿಶ್ ಪ್ರಧಾನಿ ಲಿಯೋ ವರಡ್ಕರ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.
ಪರಸ್ಪರ ಭೇಟಿಯಾದಾಗ ಉಭಯ ನಾಯಕರು ಕೈಕುಲುಕಲಿಲ್ಲ ಮತ್ತು ಅದರ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಟ್ರಂಪ್ ಮತ್ತು ವರದಕರ್ ಇಬ್ಬರೂ ಯಾವುದೇ ಪದವನ್ನೂ ಉಸುರದೇ ಕೈಜೋಡಿಸಿ ‘ನಮಸ್ತೆ’ ಮೂಲಕ ಶುಭಾಶಯ ಕೋರಿದುದಾಗಿ ಹೇಳಿದರು.
"ನಾನು ಭಾರತದಿಂದ ಹಿಂತಿರುಗಿದ್ದೇನೆ.  ನಾನು ಅಲ್ಲಿ ಯಾರ ಜೊತೆಗೂ ಕೈ ಕುಲುಕಲಿಲ್ಲ. ಅದು ತುಂಬಾ ಸುಲಭ ಕೂಡಾ.  ಏಕೆಂದರೆ ಅವರು ರೀತಿ ಮಾಡುತ್ತಾರೆ’  ಎಂದು ಟ್ರಂಪ್ ಕೈಜೋಡಿಸಿ ‘ನಮಸ್ತೆ’ ಮೂಲಕ ಶುಭಾಶಯ ವಿನಿಮಯ ಮಾಡುವುದನ್ನು ತೋರಿಸಿದರು.
ಜಪಾನಿನಲ್ಲಿ ಹೇಗೆ ಶುಭಾಶಯ ಕೋರುತ್ತಾರೆಂದು ತೋರಿಸಲು ಅವರು ಮುಂದಕ್ಕೆ ಬಾಗಿ ತೋರಿಸಿದರು.
‘ಅವರು ತಿರುವಿಗಿಂತ ಬಹಳ ಮುಂದಿದ್ದಾರೆ’ ಎಂದು ಟ್ರಂಪ್ ಉದ್ಗರಿಸಿದರು.

No comments:

Advertisement