ಗ್ರಾಹಕರ ಸುಖ-ದುಃಖ

My Blog List

Tuesday, March 3, 2020

ಕೊರೋನಾವೈರಸ್: ನೋಯ್ಡಾ ಶಾಲೆಯ ೪೦ ವಿದ್ಯಾರ್ಥಿಗಳು ಏಕಾಂಗಿ ವಾಸಕ್ಕೆ

ವಿದ್ಯಾರ್ಥಿಯೊಬ್ಬನ ತಂದೆಗೆ ಕೊರೋನಾವೈರಸ್: 
ನೋಯ್ಡಾ ಶಾಲೆಯ ೪೦ ವಿದ್ಯಾರ್ಥಿಗಳು ಏಕಾಂಗಿ ವಾಸಕ್ಕೆ
ನೋಯ್ಡಾ: ವಿದ್ಯಾರ್ಥಿಯೊಬ್ಬನ ಹೆತ್ತವರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನೋಯ್ಡಾದ ೧೩೫ನೇ ಸೆಕ್ಟರ್ನಲ್ಲಿ ಇರುವ ಶ್ರೀರಾಮ ಮಿಲೆನಿಯಂ ಶಾಲೆಯ ಆವರಣವನ್ನು ಎರಡು ದಿನಗಳ ಅವಧಿಗೆ ಮುಚ್ಚಲು ಮತ್ತು ವಾರ್ಷಿಕ ಪರೀಕ್ಷೆಗಳನ್ನು ಮುಂದೂಡಲು 2020 ಮಾರ್ಚ್ 03ರ ಮಂಗಳವಾರ ನಿರ್ಧರಿಸಲಾಯಿತು.

ಶಾಲೆಯ ಒಟ್ಟು ೪೦ ಮಂದಿ ವಿದ್ಯಾರ್ಥಿಗಳನ್ನು ವೈರಸ್ ಸಲುವಾಗಿ ಪರೀಕ್ಷಿಸಲಾಗಿದ್ದು, ಅವೆರಲ್ಲರನ್ನು ೨೮ ದಿನಗಳ ಅವಧಿಗೆ ಏಕಾಂಗಿವಾಸಕ್ಕೆ ಕಳುಹಿಸಲಾಗಿದೆ ಎಂದು ಗೌತಮ ಬುದ್ಧ ನಗರದ ಮುಖ್ಯ ವೈದ್ಯಾಧಿಕಾರಿ ಹೇಳಿದರು.

ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯ ಶಾಲಾ ಅಧಿಕಾರಿಯೊಬ್ಬರು ಕೂಡಾ ಮಾಧ್ಯಮ ಒಂದಕ್ಕೆ ಬೆಳವಣಿಗೆಗಳನ್ನು ಖಚಿತ ಪಡಿಸಿದರು. ಹೌದು, ಕೋವಿಡ್-೧೯ರ ಸದರಿ ರೋಗಿಯು ನಮ್ಮ ವಿದ್ಯಾರ್ಥಿಯೊಬ್ಬನ ಪಾಲಕರಾಗಿದ್ದಾರೆ. ನಾವು ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದು, ಪರಿಸ್ಥಿತಿ ಮೇಲೆ ನಿಗಾ ಇಡುವ ಸಲುವಾಗಿ ಆರೋಗ್ಯ ಸಚಿವಾಲಯದ ಜೊತೆಗೆ ಸತತ ಸಂಪರ್ಕ ಹೊಂದಿದ್ದೇವೆ ಎಂದು ಹಿರಿಯ ಶಾಲಾ ಅಧಿಕಾರಿ ನುಡಿದರು.

ಶಾಲೆಯನ್ನು ಪ್ರಸ್ತುತ ಎರಡು ದಿನಗಳ ಅವಧಿಗೆ ಮುಚ್ಚಲಾಗುವುದು. ಅವಧಿಯಲ್ಲಿ ಶಾಲಾ ಆವರಣವನ್ನು ಶುಚಿಗೊಳಿಸಲಾಗುವುದು. ಶಾಲೆಯ ಶುಚೀಕರಣದ ಪ್ರಕ್ರಿಯೆಯು ಎರಡು ದಿನಗಳನ್ನು ತೆಗೆದುಕೊಳ್ಳುತ್ತದೆ. ಒಂದು ಕೊಠಡಿಯನ್ನು ಶುಚೀಕರಿಸಲು ಒಂದು ಗಂಟೆಗಿಂತಲೂ ಹೆಚ್ಚು ಹೊತ್ತು ಬೇಕಾಗುತ್ತದೆ. ನಮ್ಮ ವೈದ್ಯಕೀಯ ತಂಡವು ಚಿಕಿತ್ಸೆಯ ಬಗ್ಗೆ ಶಾಲೆಗೆ ತಿಳಿಸಿದೆ ಎಂದು ಗೌತಮ್ ಬುದ್ದ ನಗರದ ಮುಖ್ಯ ವೈದ್ಯಾಧಿಕಾರಿ ಅನುರಾಗ್ ಭಾರ್ಗವ್ ಹೇಳಿದರು.

ನೋಯ್ಡಾದಲ್ಲಿ ಒಟ್ಟು ೪೦ ಮಂದಿಯನ್ನು ಪರೀಕ್ಷಿಸಲಾಗಿದೆ. ವರದಿಗಳಿಗೆ ಕೆಲವು ಗಂಟೆಗಳ ಕಾಲ ಕಾಯಬೇಕು ಎಂದು ಅವರು ನುಡಿದರು.

ವದಂತಿಗಳನ್ನು ನಿರ್ಲಕ್ಷಿಸಿ. ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮ ಬಳಿ ಎಲ್ಲ ಸವಲತ್ತುಗಳೂ ಇವೆ. ನಾವು ಏಕಾಂಗಿ ವಾರ್ಡ್ನ್ನು ರೂಪಿಸಿದ್ದೇವೆ ಎಂದು ಭಾರ್ಗವ ಹೇಳಿದರು.

ಹೆಸರು ಹೇಳಲು ಇಚ್ಛಿಸದ, ಶ್ರೀರಾಮ ಮಿಲೆನಿಯಂ ಶಾಲೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಯೊಬ್ಬನ ಪಾಲಕರು, ಬೆಳಗ್ಗೆ ವಾಟ್ಸಪ್ ಗ್ರೂಪ್ ಮೂಲಕ ಬಗ್ಗೆ ಪಾಲಕರಿಗೆ ಗೊತ್ತಾಯಿತು. ಗುಂಪಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಪರೀಕ್ಷೆ ರದ್ದಾಗಿದ್ದು, ಶಾಲೆಯನ್ನು ಈಗ ಶುಚಿಗೊಳಿಸುವ ಸಲುವಾಗಿ ಮುಚ್ಚಲಾಗಿದೆ. ವೈರಸ್ ಸೋಂಕು ಪೀಡಿತ ವ್ಯಕ್ತಿ ಹಾಜರಿದ್ದ ಹುಟ್ಟು ಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗಾಗಿ ನಾವೀಗ ಪ್ರಾರ್ಥಿಸುತ್ತಿದ್ದೇವೆ ಎಂದು ಹೇಳಿದರು.

ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡುತ್ತಿದ್ದಂತೆಯೇ ಶಾಲಾ ಆಡಳಿತವು ಕ್ರಮ ಕೈಗೊಂಡಿತು. ಪ್ರಿಯ ಪಾಲಕರೇ, ಅನಿವಾರ್ಯ ಕಾರಣಗಳಿಂದ ಈದಿನಕ್ಕೆ ನಿಗದಿಯಾಗಿದ್ದ ಪರೀಕ್ಷೆಗಳನ್ನು ನಾವು ಮುಂದೂಡುತ್ತಿದ್ದೇವೆ. ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂಬ ಸಂದೇಶವನ್ನು ಶಾಲಾ ಆಡಳಿತ ಮಂಗಳವಾರ ನೀಡಿತು.

ಮಂಡಳಿ ಪರೀಕ್ಷೆಗಳು ಮಾಮೂಲಿಯಾಗಿಯೇ ಮುಂದುವರೆಯುವುವು. -೧೧ನೇ ತರಗತಿಯ ಮಕ್ಕಳು ಇಚ್ಛಿಸಿದರೆ ಹೆಚ್ಚುವರಿ ತರಗತಿಗಳಿಗೆ ಬರಬಹುದು. ೬ನೇ ತರಗತಿ ಮತ್ತು ಐಜಿಸಿಎಸ್ ತರಗತಿಗಳು ಅಧ್ಯಯನ ರಜೆಯ ಜೊತೆಗೆ ಮುಂದುವರಿಯಲಿವೆ ಎಂದೂ ಆಡಳಿತ ಸಂದೇಶದಲ್ಲಿ ತಿಳಿಸಿತು.

ವಿಷಯಕ್ಕೆ ಸಂಬಂಧಿಸಿದಂತೆ ತುರ್ತು ಸಭೆ ಕರೆಯುವಂತೆ ಶಾಲಾ ಸರಪಣಿಯ ನಿದೇರ್ಶಕರು ಸೂಚಿಸಿದ್ದಾರೆ ಎಂದು ಶಾಲಾ ಆಡಳಿತದ ಮೂಲಗಳು ಹೇಳಿವೆ. ಶಾಲಾ ಸಮೂಹದ ಒಂದು ಶಾಲೆ ಗುರುಗ್ರಾಮದಲ್ಲಿದೆ.

ವಿದ್ಯಾರ್ಥಿಯೊಬ್ಬರ ಪಾಲಕರು ಫೆಬ್ರುವರಿ ೨೮ರಂದು ಹುಟ್ಟು ಹಬ್ಬದ ಕೂಟ ಏರ್ಪಡಿಸಿದ್ದರು. ಶಾಲೆಯ ಹಲವಾರು ಮಕ್ಕಳು ಸಂತೋಷಕೂಟದಲ್ಲಿ ಪಾಲ್ಗೊಂಡಿದ್ದರು ಎಂದು ಅಂತರ್ಜಾಲದಲ್ಲಿ ಪ್ರಕಟವಾಗಿರವ ವಾಟ್ಸಪ್ ಸಂದೇಶದ ಸಂದೇಶದ ಸ್ಕ್ರೀನ್ಶಾಟ್ ಗಳು ಹೇಳಿವೆ.

ಸೋಮವಾರ ಕೋವಿಡ್-೧೮ ಖಚಿತ ಪಟ್ಟ ಎರಡು ಪ್ರಕರಣಗಳು ವರದಿಯಾಗಿದ್ದು, ಅವುಗಳ ಪೈಕಿ ಒಂದು ಪ್ರಕರಣದಲ್ಲಿ ವೈರಸ್ ತಗುಲಿದ ಒಬ್ಬ ವ್ಯಕ್ತಿ ದೆಹಲಿಯವರಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತಿದ್ದು, ಅವರ ಮೇಲೆ ಪೂರ್ಣ ನಿಗಾ ಇರಿಸಲಾಗಿದೆ.

ಆರೋಗ್ಯ ಸಚಿವಾಲಯದ ಪ್ರಕಾರ, ಸದರಿ ವ್ಯಕ್ತಿ ಇಟಲಿಯಲ್ಲಿ ಪ್ರವಾಸ ಮಾಡಿದ್ದುದು ಬೆಳಕಿಗೆ ಬಂದಿದೆ. ವ್ಯಕ್ತಿಯ ಇತರ ಪ್ರವಾಸದ ವಿವರಗಳನ್ನು ಕೂಡಾ ಸಂಗ್ರಹಿಸಲಾಗುತ್ತಿದೆ. ರೋಗಿಯ ದೇಹಸ್ಥಿತಿ ಸ್ಥಿರವಾಗಿದೆ ಎಂದೂ ಆರೋಗ್ಯ ಸಚಿವಾಲಯ ಹೇಳಿದೆ.


No comments:

Advertisement