Thursday, March 19, 2020

ಕೋವಿಡ್‌ಗೆ ಇರಾನಿನಲ್ಲಿ ಒಬ್ಬ ಭಾರತೀಯ ಬಲಿ

ಕೋವಿಡ್ಗೆ ಇರಾನಿನಲ್ಲಿ ಒಬ್ಬ ಭಾರತೀಯ ಬಲಿ
ನವದೆಹಲಿ: ಕೊರೋನಾವೈರಸ್ ಸೋಂಕು ತಗುಲಿದ್ದ ಒಬ್ಬ ಭಾರತೀಯ ಇರಾನಿನಲ್ಲಿ ಸಾವನ್ನಪ್ಪಿರುವುದಾಗಿ ಭಾರತ ಸರ್ಕಾರ  2020 ಮಾರ್ಚ್  19ರ ಗುರುವಾರ ತಿಳಿಸಿತು. ಸೋಂಕು ತಗುಲಿದ ಭಾರತದ ಇತರ ನಾಗರಿಕರಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುವುದು ಮತ್ತು ಇರಾನ್ ಸರ್ಕಾರವು ಅವರ ಬಗ್ಗೆ ಕಾಳಜಿ ವಹಿಸಿದೆ ಎಂದೂ ಸರ್ಕಾರ ಪ್ರಕಟಿಸಿತು.

ನಾವು ೫೯೦ ಜನರನ್ನು ಅತ್ಯಂತ ಗಂಭೀರ ಸ್ಥಿತಿ ಇರುವ ಇರಾನಿನಿಂದ ತೆರವುಗೊಳಿಸಿದ್ದೇವೆ. ಇರಾನಿನಲ್ಲಿ ಕೊರೋನಾವೈರಸ್ ಸೋಂಕು ತಗುಲಿದ ಭಾರತೀಯನ್ನು ಪ್ರತ್ಯೇಕಿಸಿ ಇಡಲಾಗಿದ್ದು ಅಲ್ಲಿನ ಸರ್ಕಾರ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ. ಅವರು ಶೀಘ್ರದಲ್ಲೇ ಚೇತರಿಸುವರು ಮತ್ತು ಅವರನ್ನು ಭಾರತಕ್ಕೆ ಮರಳಿ ಕರೆತರಲಾಗುವುದು ಎಂಬುದು ನಮ್ಮ ವಿಶ್ವಾಸ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಇಲ್ಲಿ ತಿಳಿಸಿದರು.

ಇರಾನಿನಿಂದ ೨೦೧ ಭಾರತೀಯರನ್ನು ಬುಧವಾರ ತೆರವುಗೊಳಿಸಲಾಗಿದೆ ಎಂದೂ ಅವರು ನುಡಿದರು.

No comments:

Advertisement