Tuesday, April 21, 2020

ಕೇಂದ್ರೀಯ ಕೋವಿಡ್-೧೯ ತಂಡಗಳ ಜೊತೆ ಸಹಕಾರ: ಮಮತಾಗೆ ಕೇಂದ್ರ ತಾಕೀತು

ಕೇಂದ್ರೀಯ ಕೋವಿಡ್-೧೯ ತಂಡಗಳ ಜೊತೆ ಸಹಕಾರ:  ಮಮತಾಗೆ ಕೇಂದ್ರ ತಾಕೀತು
ನವದೆಹಲಿ: ದಿಗ್ಬಂಧನ (ಲಾಕ್ಡೌನ್) ಕ್ರಮಗಳ ಜಾರಿಯ ಪರಿಶೀಲನೆಗಾಗಿ ಳುಹಿಸಲಾಗಿರುವ ಎರಡು ಅಂತರಸಚಿವಾಲಯ ಕೇಂದ್ರೀಯ ತಂಡಗಳಿಗೆ ಆಯ್ದ ಜಿಲ್ಲೆಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು ಅವಕಾಶ ನೀಡುವಂತೆ ನಿರ್ದೇಶಿಸಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಯವು ಬಂಗಾಳ ಸರ್ಕಾರಕ್ಕೆ  2020 ಏಪ್ರಿಲ್ 21ರ ಮಂಗಳವಾರ ಎರಡನೇ ಪತ್ರ  ಬರೆಯಿತು.
ಕೇಂದ್ರಿಯ ತಂಡಗಳಲ್ಲಿ ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಇದ್ದು, ರಾಜ್ಯದಲ್ಲಿ ಕೋವಿಡ್-೧೯ ಸಾಂಕ್ರಾಮಿಕವನ್ನು ಹತೋಟಿಗೆ ತರಲು ತಂಡಗಳ ಜ್ಞಾನವನ್ನು ಬಳಸಿಕೊಳ್ಳಬಹುದು ಎಂದು ಪತ್ರವು ತಿಳಿಸಿತು.
ಕೋಲ್ಕತ ಮತ್ತು ಜಲಪಾಯಿಗುರಿಯಲ್ಲಿ ತಂಡಗಳಿಗೆ ಅಗತ್ಯ ಸಹಕಾರವನ್ನು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ನೀಡಿಲ್ಲ. ಯಾವುದೇ ಸ್ಥಳಗಳಿಗೆ ಭೇಟಿ ನೀಡದಂತೆ, ವೃತ್ತಿ ನಿರತರೊಂದಿಗೆ ಸಂವಹನ ನಡೆಸದಂತೆ ಮತ್ತು ರಾಜ್ಯದಲ್ಲಿನ ತಳಮಟ್ಟದ ಪರಿಸ್ಥಿತಿ ಅಂದಾಜು ಮಾಡದಂತೆ ಅವರನ್ನು ನಿರ್ಬಂಧಿಸಲಾಯಿತು ಎಂದು ಪತ್ರವು ಆಪಾದಿಸಿತು.

ಇಂತಹ ಅಸಹಕಾರವು ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಮತ್ತು ಸುಪ್ರೀಂಕೋರ್ಟ್ ನಿರ್ದೇಶನಗಳ ಮೇರೆಗೆ ಕೇಂದ್ರ ಸರ್ಕಾರವು ಹೊರಡಿಸಿದ ಆದೇಶಗಳ ಜಾರಿಗೆ ಅಡ್ಡಿ ಪಡಿಸಿದ್ದಕ್ಕೆ ಸಮವಾಗುತ್ತದೆ ಎಂದು ಪತ್ರ ಎಚ್ಚರಿಸಿತು.
ಕೇಂದ್ರೀಯ ತಂಡಗಳಿಗೆ ಮುಕ್ತವಾಗಿ ಕಾರ್ ನಿರ್ವಹಿಸಲು ಅವಕಾಶ ನೀಡುವಂತೆ ಪತ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿತು.
ಆದ್ದರಿಂದ, ಆದೇಶವನ್ನು ಪಾಲಿಸುವಂತೆ ಮತ್ತು ತಂಡಗಳಿಗೆ ವಹಿಸಲಾದ ಜವಾಬ್ದಾರಿಗಳನ್ನು ನಿರ್ವಹಿಸಲು ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡುವಂತೆ ಮೂಲಕ ನಿಮಗೆ ನಿರ್ದೇಶಿಸಲಾಗಿದೆ ಎಂದು ಪತ್ರ ಹೇಳಿತು.

ಇದಕ್ಕೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್, ಭಾರತದಲ್ಲಿನ ರಾಜ್ಯಗಳು ಕೊರೋನಾವೈರಸ್ ವಿರುದ್ಧ ಸಮರನಿರತವಾಗಿರುವಾಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವೈರಸ್ಸಿನ ವಿರುದ್ಧ ಹೋರಾಡುವ ಬದಲು ಕೆಲವು ರಾಜ್ಯಗಳ ಜೊತೆ ಹೋರಾಡುತ್ತಿದೆ ಎಂದು ಟೀಕಿಸಿತು.

ಕೇಂದ್ರೀಯ ತಂqಗಳು ಭೇಟಿಗಾಗಿ ಆಯ್ಕೆ ಮಾಡಿರುವ ಶೇಕಡಾ ೭೦-೮೦ರಷ್ಟು ಜಿಲ್ಲೆಗಳು ವಿರೋಧ ಪಕ್ಷಗಳ ಆಳ್ವಿಕೆಗೆ ಒಳಪಟ್ಟಿವೆ. ಉತ್ತರ ಪ್ರದೇಶ ಮತ್ತು ಗುಜರಾತಿನ ಯಾವುದೇ ಜಿಲ್ಲೆಯನ್ನು ಪಟ್ಟಿಯಲ್ಲಿ ಏಕೆ ಸೇರಿಸಲಾಗಿಲ್ಲ?’ ಎಂದು ಟಿಎಂಸಿಯ ರಾಜ್ಯಸಭಾ ಸದಸ್ಯ ಬ್ರಿಯನ್ ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಎರಡು ತಂಡಗಳು ಏಳು ಜಿಲ್ಲೆಗಳಿಗೆ ಭೇಟಿ ನೀಡಿ, ಲಾಕ್ ಡೌನ್ ಜಾರಿ ಮತ್ತು ಆರೋಗ್ಯ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಸೋಮವಾರ ಕೋಲ್ಕತಕ್ಕೆ ಆಗಮಿಸಿವೆ.

ಕೇಂದ್ರೀಯ ತಂಡದ ಭೇಟಿಯನ್ನು ಆಕ್ಷೇಪಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಏಕಪಕ್ಷೀಯ ಮತ್ತು ಅನಪೇಕ್ಷಿತವಾದದ್ದು ಎಂದು ಬಣ್ಣಿಸಿದ್ದಾರೆ.

No comments:

Advertisement