My Blog List

Tuesday, April 14, 2020

ಆನೆಯ ಮಮತೆ..!

ಆನೆಯ ಮಮತೆ..!
(ಇದು ಸುವರ್ಣ ನೋಟ)
ಆನೆಗಳು ಸಂಘಜೀವಿಗಳು.  ಕುಟುಂಬದ/ ಗುಂಪಿನ ಯಾವುದೇ  ಒಂದು ಆನೆಗೆ ಆಪತ್ತು ಎದುರಾದರೂ ಉಳಿದ  ಆನೆಗಳು ಆಪತ್ತಿಗೆ ಒಳಗಾದ ಗುಂಪಿನ ಸದಸ್ಯನ ನೆರವಿಗೆ ಧಾವಿಸುತ್ತವೆ. ಆಂಕೋಲದಲ್ಲಿ ಒಮ್ಮೆ ಹೆದ್ದಾರಿಯಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದು ಒಂದು ಆನೆ ಮರಿ ಸತ್ತು ಹೋಗಿತ್ತು. ಆನೆಗಳ ಗುಂಪು ಸತ್ತ ಆನೆಮರಿಯ ಉಭಯ ಕಡೆಗಳಲ್ಲೂ ನಿಂತುಕೊಂಡು ಯಾವುದೇ ವಾಹನ ರಸ್ತೆಯಲ್ಲಿ ಸಂಚರಿಸದಂತೆ ಹಲವು ತಾಸುಗಳ ಕಾಲ ‘ರಸ್ತೆ ತಡೆ’ ನಡೆಸಿದ್ದವು.

ನಾಗರಹೊಳೆ ಅರಣ್ಯದ   ಕಾಕನಕೋಟೆಯಲ್ಲಿ ತಂದೆ-ತಾಯಿಯೊಂದಿಗೆ ಚಿನ್ನಾಟವಾಡುತ್ತಿದ್ದ ಪುಟ್ಟ ಆನೆ ಮರಿಹಾಲು ಕುಡಿಯುವ ಯತ್ನದಲ್ಲಿದ್ದಾಗ ಕೆಳಕ್ಕೆ ಬಿದ್ದು ಬಿಟ್ಟಿತ್ತು.


ತತ್ ಕ್ಷಣವೇ ತಾಯಿ ಆನೆ ಮರಿಯನ್ನು ಸೊಂಡಿಲು, ಕಾಲಿನಿಂದ ತಳ್ಳಿ ಎದ್ದು ನಿಲ್ಲುವಂತೆ ಮಾಡಲು ಹರಸಾಹಸ ಪಟ್ಟಿತು. ಬಳಿಕ ಎರಡೂ ಆನೆಗಳು  ಮರಿಯಾನೆಯನ್ನು  ಕಾಲುಗಳ ಮಧ್ಯೆ ಇರಿಸಿಕೊಂಡು ಪಯಣ ಮುಂದುವರೆಸಿದ್ದವು.

ಹುಬ್ಬಳ್ಳಿಯಲ್ಲಿದ್ದಾಗ ಮೊದಲು ಹೇಳಿದ ದೃಶ್ಯದ ಛಾಯಾಗ್ರಹಣಕ್ಕಾಗಿ ಧಾವಿಸಿದರೂ, ದೃಶ್ಯ ಸಿಕ್ಕಿರಲಿಲ್ಲ. ಕೆಲ ಸಮಯದ ಹಿಂದೆ ನಾಗರಹೊಳೆ ಪ್ರದೇಶಕ್ಕೆ ಹೋಗಿದ್ದಾಗ ಕಾಕನಕೋಟೆಯಲ್ಲಿ  ಎರಡನೇ ಘಟನೆಯ  ಅಪರೂಪದ ದೃಶ್ಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಬಂಧಿಯಾಯಿತು.

ಸಮೀಪ ನೋಟಕ್ಕಾಗಿ ಚಿತ್ರಗಳನ್ನು ಕ್ಲಿಕ್ಕಿಸಿ.


No comments:

Advertisement