My Blog List

Saturday, May 9, 2020

ವಲಸೆ ಕಾರ್ಮಿಕರ ವಾಪಸಾತಿ; ಮತ್ತೆ ಕೇಂದ್ರ - ಮಮತಾ ಯುದ್ಧ

ವಲಸೆ ಕಾರ್ಮಿಕರ ವಾಪಸಾತಿ; ಮತ್ತೆ ಕೇಂದ್ರ- ಮಮತಾ ಯುದ್ಧ
ನವದೆಹಲಿ: ರಾಷ್ಟ್ರವ್ಯಾಪಿ ಕೊರೋನಾ ದಿಗ್ಬಂಧನ (ಲಾಕ್ ಡೌನ್) ಪರಿಣಾಮವಾಗಿ ವಿವಿಧೆಡೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರ ಹುಟ್ಟೂರುಗಳಿಗೆ ತೆರಳಲು ಅವಕಾಶ ಮಾಡಿಕೊಡುವ ವಿಚಾರ ಇದೀಗ ಪಶ್ಚಿಮ ಬಂಗಾಳ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಇನ್ನೊಂದು ಸುತ್ತಿನ ಸಮರವನ್ನು ಹುಟ್ಟು ಹಾಕಿದೆ.

ಸಿಕ್ಕಿಬಿದ್ದ ವಲಸಿಗರನ್ನು ಪಶ್ಚಿಮ ಬಂಗಾಳಕ್ಕೆ ಸಾಗಿಸುವ ಬಗ್ಗೆ ನಡೆದ ವಾದವಿವಾದಗಳ ಮಧ್ಯೆಯಾವುದೇ ಶ್ರಮಿಕ್ ಸ್ಪೆಷಲ್ ರೈಲುಗಳನ್ನು ರಾಜ್ಯಕ್ಕೆ ಓಡಿಸುವ ಯಾವುದೇ ಹೊಸ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂದು ರೈಲ್ವೆ ಅಧಿಕಾರಿಗಳು 2020 ಮೇ 09ರ ಶನಿವಾರ ಹೇಳಿದರು.

ಕರ್ನಾಟಕ, ತಮಿಳುನಾಡು, ಪಂಜಾಬ್ ಮತ್ತು ತೆಲಂಗಾಣದಿಂದ ವಲಸಿಗರನ್ನು ಕರೆತರಲು ಎಂಟು ರೈಲುಗಳನ್ನು ಓಡಿಸಲು ಈಗಾಗಲೇ ಯೋಜಿಸಿದ್ದೇವೆ ಎಂದು ಟಿಎಂಸಿ ಹೇಳಿದ ಕೆಲವೇ ನಿಮಿಷಗಳಲ್ಲಿ ಭಾರತೀಯ ರೈಲ್ವೆ  ಪ್ರತಿಕ್ರಿಯೆ ನೀಡಿತು.

ಇನ್ನಷ್ಟು ರೈಲುಗನ್ನು ಓಡಿಸುವ ಬಗ್ಗೆ ನಮ್ಮ ಮುಂದೆ ಯಾವುದೇ ಪ್ರಸ್ತಾಪವಿಲ್ಲ ಎಂದು ರೈಲ್ವೆ ತಿಳಿಸಿತು.

ಹೈದರಾಬಾದ್ನಿಂದ ಮಾಲ್ಡಾಕ್ಕೆ ಶನಿವಾರ ಮಧ್ಯಾಹ್ನ ಗಂಟೆಗೆ ವಿಶೇಷ ರೈಲು ಪಯಣಿಸಲಿದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿಕೆ ನೀಡಿತ್ತು.

ಕೊರೋನಾವೈರಸ್ ಹಿನ್ನೆಲೆಯಲ್ಲಿ ಇತರ ರಾಜ್ಯಗಳಿಂದ ರಾಜ್ಯದ ಕಾರ್ಮಿಕರಿಗೆ ಬರಲು ರಾಜ್ಯ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂಬ ವ್ಯಾಪಕ ಟೀಕೆಗಳು ಬಂದಿದ್ದವು.

ಇದೇ ವೇಳೆಯಲ್ಲಿಪಶ್ಚಿಮ ಬಂಗಾಳಕ್ಕೆ ರೈಲುಗಳನ್ನು ಓಡಿಸಲು ಅವಕಾಶ ನೀಡದೇ ಇರುವುದು ರಾಜ್ಯದ ಕಾರ್ಮಿಕರಿಗೆ ಎಸಗಲಾಗಿರುವ ಅನ್ಯಾಯ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದರು. ಪತ್ರದ ಬಳಿಕ ಮಮತಾ ಬ್ಯಾನರ್ಜಿ ಸರ್ಕಾರವು ರಾಜ್ಯಕ್ಕೆ  ವಿಶೇಷ ರೈಲುಗಳ ಪಯಣಕ್ಕೆ ಅನುಮತಿ ನೀಡಿತ್ತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದು, ವಲಸೆ ಕಾರ್ಮಿಕರಿಗೆ ಅವರವರ ಮನೆಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ "ನಿರೀಕ್ಷಿತ ಬೆಂಬಲ" ಲಭಿಸುತ್ತಿಲ್ಲ ಎಂದು  ತಿಳಿಸಿದ್ದರು.

ಕೇಂದ್ರವು ೨೦೦,೦೦೦ ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಮನೆಗೆ ತಲುಪಲು ಅನುಕೂಲ ಮಾಡಿಕೊಟ್ಟಿದೆ ಮತ್ತು ಪಶ್ಚಿಮ ಬಂಗಾಳದ ಕಾರ್ಮಿಕರು ಸಹ ಹಿಂತಿರುಗಲು ಉತ್ಸುಕರಾಗಿದ್ದಾರೆ ಎಂದು ಅಮಿತ್ ಶಾ ಪತ್ರದಲ್ಲಿ ಗಮನ ಸೆಳೆದಿದ್ದರು.

"ಪಶ್ಚಿಮ ಬಂಗಾಳ ಸರ್ಕಾರವು ವಲಸಿUರನ್ನು ಹೊತ್ತಿರುವ ರೈಲುಗಳಿಗೆ ರಾಜ್ಯವನ್ನು ತಲುಪಲು ಅವಕಾಶ ನೀಡುತ್ತಿಲ್ಲ. ಇದರಿಂದ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರಿಗೆ ಅನ್ಯಾಯವಾಗಿದೆ. ಇದು ಅವರಿಗೆ ಮತ್ತಷ್ಟು ಕಷ್ಟಗಳನ್ನು ಸೃಷ್ಟಿಸುತ್ತದೆ ಎಂದು ಅಮಿತ್ ಶಾ ಮಮತಾ ಬ್ಯಾನರ್ಜಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಕೊರೋನವೈರಸ್ ರೋಗವನ್ನು (ಕೋವಿಡ್-೧೯) ನಿಯಂತ್ರಿಸುವ ಸತತ ಪ್ರಯತ್ನಗ ಸತತ ಮಧ್ಯೆ, ವಲಸೆ ಕಾರ್ಮಿಕರ ವಿಷಯವು ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಇತ್ತೀಚಿನ ಸಮರ ಬಿಂದುವಾಗಿ ಮಾರ್ಪಟ್ಟಿದೆ.

ಸೋಂಕಿನಿಂದ ಸಂಭವಿಸುವ ಸಾವುಗಳನ್ನು ವರದಿ ಮಾಡುವ ಮಾನದಂಡಗಳ ಬಗ್ಗೆ ಕೇಂದ್ರ ಮತ್ತು ರಾಜ್ಯವು ಆರೋಪಗಳನ್ನು ವಿನಿಮಯ ಮಾಡಿಕೊಂಡಿವೆ.

ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ರಾಜಕೀಯಗೊಳಿಸಲು ಕೇಂದ್ರವು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಹೇಳಿದರೆ, ಕೊರೋನಾವೈರಸ್ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ನೀಡಲಾದ ಪುನರಪಿ ಎಚ್ಚರಿಕೆಗಳನ್ನು ರಾಜ್ಯ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪಶ್ಚಿಮ ಬಂಗಾಳವು ವೈರಸ್ ಪತ್ತೆ, ಹಾಟ್ ಸ್ಪಾಟ್ ಗುರುತಿಸುವುದು ಇತ್ಯಾದಿಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಅಧಿಕಾರಿಗಳು ಹೇಳಿದ್ದಾರೆ.

ಮಧ್ಯೆ ಅಮಿತ್ ಶಾ ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ನಾಯಕ, ಅಭಿಷೇಕ್ ಬ್ಯಾನರ್ಜಿ ಅವರು ಕೇಂದ್ರ ಸಚಿವ ಅಮಿತ್ ಶಾ ಅವರು ಹಲವಾರು ವಾರಗಳ ಮೌನದ ಬಳಿಕ ತಮ್ಮ ಸುಳ್ಳುಗಳ ಮೂಲಕ ಕೇವಲ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಮಾತ್ರ ಮಾತನಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಜೊತೆ ಮಾತನಾಡುತ್ತಾ ಹೇಳಿದರು.

ಕೇಂದ್ರವು ಸುಳ್ಳು ಹೇಳುತ್ತಿದೆ. ಪಶ್ಚಿಮ ಬಂಗಾಳವು ವಲಸೆ ಕಾರ್ಮಿಕರಿಗಾಗಿ ರಾಜ್ಯದಲ್ಲಿ ೭೧೧ ಶಿಬಿರಗಳನ್ನು ನಡೆಸುತ್ತಿದೆ. ನಾವು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿಯೂ ಆಗಿರುವ ಅಭಿಷೇಕ್ ನುಡಿದರು.

No comments:

Advertisement