Friday, July 17, 2020

ದೇಶೀ ವಿಮಾನಗಳ ಹಾರಾಟ ದೀಪಾವಳಿ ಹೊತ್ತಿಗೆ ಶೇಕಡಾ ೬೦

ದೇಶೀ ವಿಮಾನಗಳ ಹಾರಾಟ ದೀಪಾವಳಿ ಹೊತ್ತಿಗೆ ಶೇಕಡಾ ೬೦

ನವದೆಹಲಿ: ಪ್ರಸ್ತುತ ವರ್ಷದ ದೀಪಾವಳಿಯ ವೇಳೆಗೆ ಭಾರತದ ದೇಶೀ ವಿಮಾನಗಳ ಹಾರಾಟ ಕೊರೋನಾ ಪೂರ್ವ ಹಾರಾಟದ ಶೇಕಡಾ ೫೫-೬೦ರಷ್ಟಕ್ಕೆ ತಲುಪಲಿದೆ ಎಂದು ಕೇಂದ್ರ ವಾಯುಯಾನ ಸಚಿವ ಹರ್‌ದೀಪ್ ಪುರಿ 2020 ಜುಲೈ 16ರ ಗುರುವಾರ ಇಲ್ಲಿ ಹೇಳಿದರು.

ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾಲ ವಾಯುಯಾನವನ್ನು ಸ್ಥಗಿತಗೊಳಿಸಿದ್ದರಿಂದ ದೇಶೀಯ ವಾಯುಯಾನ ಉದ್ಯಮವು ಆರ್ಥಿಕ ನಷ್ಟವನ್ನು ಎದುರಿಸುತ್ತಿದೆ.

" ವರ್ಷ ದೀಪಾವಳಿಯ ವೇಳೆಗೆ, ಭಾರತದಲ್ಲಿ ಕೊರೋನಾಪೂರ್ವ ಹಾರಾಟದ ಶೇಕಡಾ ೫೫-೬೦ರಷ್ಟು  ದೇಶೀಯ ವಿಮಾನಗಳು ಕಾರ್ಯನಿರ್ವಹಿಸುತ್ತವೆ ಎಂದು ನಾವು ಊಹಿಸುತ್ತಿದ್ದೇವೆ" ಎಂದು ಪುರಿ ನುಡಿದರು.

ವರ್ಷದ ಆರಂಭದಲ್ಲಿ ವಾಯುಯಾನ ಸಲಹಾ ಸಂಸ್ಥೆ ಕಾಪಾ ಇಂಡಿಯಾ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕೋವಿಡ್ ಸಂಬಂಧಿತ ಅಡತಡೆಗಳ ಪರಿಣಾಮವಾಗಿ ೨೦೨೦ ಮೊದಲ ತ್ರೈಮಾಸಿಕದಲ್ಲಿ ಸಂಭವಿಸಿದ ಉದ್ಯಮದ ನಷ್ಟವು  ೩ರಿಂದ . ಶತಕೋಟಿ (ಬಿಲಿಯನ್) ಡಾಲರುಗಳಷ್ಟು ಆಗಬಹುದು ಎಂದು ಹೇಳಲಾಗಿದೆ.

ಜೂನ್‌ನಿಂದ ಸೆಪ್ಟೆಂಬರವರೆಗೆ ನಾಲ್ಕು ತಿಂಗಳುಗಳು ಉದ್ಯಮಕ್ಕೆ ನಿರ್ಣಾಯಕ ಹಂತವಾಗಲಿದೆ ಎಂದು ಅದು ಹೇಳಿತ್ತು. ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಸಂಭವನೀಯ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆಯ ಅಗತ್ಯತೆ ಹಿನ್ನೆಲೆಯಲ್ಲಿ ವಿಧಿಸಲಾದನಿರ್ಬಂಧಗಳು ಕಾರಣದಿಂದಾಗಿ ಕೆಲವು ವಿಮಾನಯಾನ ಸಂಸ್ಥೆಗಳು ೨೦೨೧ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಅಂತ್ಯದವರೆಗೆ ತಮ್ಮ ವೆಚ್ಚವನ್ನು ಸರಿದೂಗಿಸಲು ಹೆಣಗಾಡಬೇಕಾಗಬಹುದು ಎಂದು ಅದು ಹೇಳಿತ್ತು.

ಜುಲೈ ೧೫ ವೇಳೆಗೆ ಒಟ್ಟು ,೬೩೩ ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು ,೪೦,೦೦೦ ಪ್ರಯಾಣಿಕರನ್ನು ಹೊತ್ತೊಯ್ಯಲಾಗಿದೆ. ಆರಂಭದಲ್ಲಿ, ವಿಮಾನಗಳು ಪುನಾರಂಭಗೊಂಡ ನಂತರ, ಕೋವಿಡ್ ಪೂರ್ವ ಮಾರುಕಟ್ಟೆಯಲ್ಲಿ ತಾವು ಹೊಂದಿದ್ದ ಮಾರುಕಟ್ಟೆ ಪಾಲು ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವಿಮಾನಯಾನ ಸಂಸ್ಥೆಗಳು ತಮ್ಮ ಸಂಪೂರ್ಣ ಸಾಮರ್ಥ್ಯದ ಗರಿಷ್ಠ ಶೇಕಡಾ ೩೩ ರಷ್ಟು ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿತ್ತು. ಏಳು ದೇಶೀಯ ವಲಯಗಳಿಗೆ ಸರ್ಕಾರವು ದರವನ್ನು ನಿಗದಿಪಡಿಸಿತ್ತು.

ಸಚಿವರು ಒತ್ತಿಹೇಳಿದಂತೆ ಅಂತಾರಾಷ್ಟ್ರೀಯ ಪ್ರಯಾಣವು ಅದರ ಹಿಂದಿನ ಹಂತಗಳಿಗೆ ಮರಳುವ ಸನ್ನಿವೇಶವೂ ಅನಿಶ್ಚಿತವಾಗಿದೆ. ಬಿಕ್ಕಟ್ಟು ಮುಗಿಯುವವರೆಗೂ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡುವ ದೇಶಗಳ ನಡುವಿನ ದ್ವಿಪಕ್ಷೀಯ ವ್ಯವಸ್ಥೆಗಳು ಉತ್ತಮ ಭರವಸೆಯಾಗಿ ಉಳಿದಿವೆ ಎಂದು ಅವರು ಹೇಳಿದರು.

ಜುಲೈ ೧೩ ಹೊತ್ತಿಗೆ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ,೧೦೩ ವಿಮಾನಗಳನ್ನು ನಿರ್ವಹಿಸಿದ್ದು, ವಂದೇ ಭಾರತ್ ಮಿಷನ್ ಅಡಿಯಲ್ಲಿ ,೦೮,೦೦೦ ಭಾರತೀಯರನ್ನು ಮರಳಿ ಕರೆತಂದಿವೆ ಎಂದು ಏರ್ ಇಂಡಿಯಾ ಸಿಎಂಡಿ ರಾಜೀವ್ ಬನ್ಸಾಲ್ ನುಡಿದರು.

No comments:

Advertisement