My Blog List

Thursday, July 23, 2020

ಕೊರೋನಾ ಲಸಿಕೆ: ಜರ್ಮನ್ ಕಂಪೆನಿಗಳಿಗೆ ಹಣದ ಹೊಳೆ

ಕೊರೋನಾ ಲಸಿಕೆ: ಜರ್ಮನ್ ಕಂಪೆನಿಗಳಿಗೆ ಹಣದ ಹೊಳೆ

ಅಮೆರಿಕದಿಂದ ೧೯೫ ಕೋಟಿ ಡಾಲರ್ ವಹಿವಾಟು ಒಪ್ಪಂದ

ವಾಷಿಂಗ್ಟನ್: ಪಿಫ್ ಝರ್ ಮತ್ತು ಬಯೋ ಎನ್ ಟೆಕ್ ಸೆ ಹೆಸರಿನ ಜರ್ಮನಿಯ ಜೈವಿಕ ತಂತ್ರಜ್ಞಾನ ಸಂಸ್ಥೆಗಳಿಂದ ೧೯೫ ಕೋಟಿ ಡಾಲರ್ (.೯೫ ಬಿಲಿಯನ್ ಡಾಲರ್) ಮೊತ್ತಕ್ಕೆ ೧೦೦ ಮಿಲಿಯನ್ (೧೦೦೦ ಲಕ್ಷ) ಡೋಸ್‌ನಷ್ಟು ಕೋವಿಡ್ ೧೯ ಲಸಿಕೆಗಳನ್ನು ಪಡೆಯಲು ಅಮೆರಿಕ ಒಪ್ಪಂದ ಮಾಡಿಕೊಂಡಿರುವುದಾಗಿ ಉಭಯ ಕಂಪೆನಿಗಳು 2020 ಜುಲೈ 22ರ ಬುಧವಾರ ಪ್ರಕಟಿಸಿದವು.

ಒಪ್ಪಂದವು ಅಮೆರಿಕಕ್ಕೆ ಹೆಚ್ಚುವರಿಯಾಗಿ ೫೦೦ ಮಿಲಿಯನ್ (೫೦೦೦ ಲಕ್ಷ) ಡೋಸ್ ಲಸಿಕೆ ಪಡೆಯಲೂ ಅವಕಾಶ ನೀಡಿದೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಮತ್ತು ಆರೋಗ್ಯ ಮತ್ತು ಮಾನವ ಸೇವಾ ಇಲಾಖೆ ತಿಳಿಸಿವೆ.

ಡೊನಾಲ್ಡ್ ಟ್ರಂಪ್ ಆಡಳಿತವು ಕೋಟ್ಯಂತರ ಡಾಲರ್ ಹಣವನ್ನು ಸಮರ್ಥ ಲಸಿಕೆ ಅಭಿವೃದ್ಧಿ ಮತ್ತು ದಾಸ್ತಾನು ಸಲುವಾಗಿ ವೆಚ್ಚ ಮಾಡಲು ಒಪ್ಪಿದೆ. ಕೊರೋನಾವೈರಸ್ ಲಸಿಕೆ, ಚಿಕಿತ್ಸೆ ಮತ್ತು ರೋಗನಿದಾನ ಕ್ರಮಗಳ ಆವಿಷ್ಕಾರವನ್ನು ತ್ವರಿತಗೊಳಿಸಲು ಟ್ರಂಪ್ ಆಡಳಿತವುಆಪರೇಷನ್ ವಾರ್ಪ್ ಸ್ಪೀಡ್ ಹೆಸರಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

ವಿಶ್ವಾದ್ಯಂತ ವಿವಿಧ ತಂತ್ರಜ್ಞಾನಗಳನ್ನು ಬಳಸಿ ಸುಮಾರು ೧೫೦ಕ್ಕೂ ಹೆಚ್ಚು ಕೊರೋನಾವೈರಸ್ ಲಸಿಕೆ ತಯಾರಿಗಾಗಿ ಯತ್ನಗಳು ನಡೆಯುತ್ತಿವೆ. ಪೈಕಿ ಎರಡು ಡಜನ್ ಲಸಿಕೆಗಳು ಮಾನರ ಮೇಲಿನ ಪ್ರಯೋಗದ ಹಂತಕ್ಕೆ ಈಗಾಗಲೇ ಬಂದಿವೆ. ಸರ್ಕಾರಗಳು ಔಷಧ ತಯಾರಕರ ಜೊತೆಗೆ ವಿವಿಧ ಲಸಿಕೆಗಳ ಸರಬರಾಜು ಪಡೆಯುವ ಖಾತರಿಗಾಗಿ ವಹಿವಾಟು ಒಪ್ಪಂದಗಳಿಗೆ ಸಹಿ ಹಾಕಿವೆ.

ಜಗತ್ತಿನಾದ್ಯಂತ ಸೋಂಕಿನಿಂದ ನರಳುತ್ತಿರುವ ಕೋಟ್ಯಂತರ ಮಂದಿಯನ್ನು ರಕ್ಷಿಸಿ ಸಾಂಕ್ರಾಮಿಕಕ್ಕೆ ಇತಿಶ್ರೀ ಹಾಡುವ ಉದ್ದೇಶದೊಂದಿಗೆ ಲಸಿಕೆ ತಯಾರಿಗೆ ತೀವ್ರ ಗಮನ ಹರಿಸಲಾಗಿದೆ.

ಪಿಫ್ ಝರ್ ಮತ್ತು ಬಯೋ ಎನ್ ಟೆಕ್ ಸಂಸ್ಥೆಗಳ ಲಸಿಕೆಗಳು ವ್ಯಾಪಕ ಪ್ರಮಾಣದಲ್ಲಿ ಪರೀಕ್ಷೆಗೆ ಒಳಪಟ್ಟಿವೆ. ಮನುಷ್ಯರ ಮೇಲಿನ ಸಣ್ಣ ಪ್ರಮಾಣದ ಅಧ್ಯಯನದಲ್ಲಿ ಆರಂಭದಲ್ಲೇ ಲಸಿಕೆಗಳು ಭರವಸೆ ಹುಟ್ಟಿಸಿದ್ದವು.

ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಯ ಬಳಿಕ ಸುರಕ್ಷತೆ ಮತ್ತು ದಕ್ಷತೆಯನ್ನು ಖಾತ್ರಿಗೊಳಿಸಿಕೊಂಡ ಬಳಿಕ ಅಮೆರಿಕದ ಆಹಾರ ಮತ್ತು ಔಷಧ ಆಡಳಿತದಿಂದ ತುರ್ತು ಬಳಕೆಗೆ ಅನುಮತಿ ಲಭಿಸಿದರೆ ಪಿಫ್ ಝರ್ ಔಷಧದ ಡೋಸ್‌ಗಳನ್ನು ಸರಬರಾಜು ಮಾಡಲಿದೆ.

ಹಾಲಿ ಪರೀಕ್ಷೆಗಳು ಯಶಸ್ವಿಯಾದಲ್ಲಿ ಅಕ್ಟೋಬರ್ ವೇಳೆಗೆ ಅಗತ್ಯ ಮಂಜೂರಾತಿ ಕೋರಲು ತಾವು ಸಿದ್ಧವಿರುವುದಾಗಿ ಕಂಪೆನಿಗಳು ಹೇಳಿವೆ.

ಉಭಯ ಕಂಪೆನಿಗಳೂ ೨೦೨೦ರ ಅಂತ್ಯದ ವೇಳೆಗೆ ೧೦೦ ಮಿಲಿಯನ್ (೧೦೦೦ ಲಕ್ಷ) ಡೋಸ್ ಪ್ರಮಾಣದಷ್ಟು ಔಷಧ ತಯಾರಿಸುವ ನಿರೀಕ್ಷೆಯಲ್ಲಿದ್ದು, ೨೦೨೧ರ ಅಂತ್ಯದ ವೇಳೆಗೆ . ಬಿಲಿಯನ್ (೧೩ ಕೋಟಿ) ಡೋಸ್‌ನಷ್ಟು ಔಷಧ ತಯಾರಿಸುವ ಸಾಧ್ಯತೆ ಇದೆ. ಏನಿದ್ದರೂ ಇದು ಕ್ಲಿನಿಕಲ್ ಟ್ರಯಲ್ ನಲ್ಲಿ ಅಂತಿಮ ಆಯ್ಕೆಯನ್ನು ಅವಲಂಬಿಸಿದೆ.

No comments:

Advertisement