Monday, August 17, 2020

ನೀಟ್, ಜೆಇಇ ಸೆಪ್ಟೆಂಬರ್ ಪರೀಕ್ಷೆ ಮುಂದೂಡಿಕೆಗೆ ಸುಪ್ರೀಂ ನಕಾರ

 ನೀಟ್ಜೆಇಇ ಸೆಪ್ಟೆಂಬರ್ ಪರೀಕ್ಷೆ ಮುಂದೂಡಿಕೆಗೆ ಸುಪ್ರೀಂ ನಕಾರ

ನವದೆಹಲಿಎಲ್ಲ ಮುನ್ನೆಚ್ಚರಿಕೆಗಳೊಂದಿಗೆ ಜೀವನ ಸಾಗಬೇಕಾಗಿದೆ ಎಂದು ಹೇಳಿದ ಸುಪ್ರೀಂ ಕೋರ್ಟ್ಸೆಪ್ಟೆಂಬರ್ ತಿಂಗಳಿಗೆ ನಿಗದಿಯಾಗಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್ಹಾಗೂ ಜಂಟಿ ಪ್ರವೇಶ ಪರೀಕ್ಷೆ (ಜೆಇಇಮುಂದೂಡಲು 2020 ಆಗಸ್ಟ್ 17ರ ಸೋಮವಾರ ನಿರಾಕರಿಸಿತು.

ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ನ್ಯಾಯಾಲಯವು ಕೋವಿಡ್-೧೯ ಸಾಂಕ್ರಾಮಿಕ ರೋಗದ ಬಗ್ಗೆ ಗಮನಹರಿಸಿದೆ ಆದರೆ ವಿದ್ಯಾರ್ಥಿಗಳ ಇಡೀ ವರ್ಷ ವ್ಯರ್ಥವಾಗಲು ಸಾಧ್ಯವಿಲ್ಲಪರೀಕ್ಷೆ ಮುಂದೂಡಿಕೆಯಿಂದ ಅವರ ವೃತ್ತಿಜೀವನದ ಭವಿಷ್ಯಕ್ಕೆ ಅಪಾಯವಿದೆ ಎಂದು ಹೇಳಿತು.

ಜೀವನವನ್ನು ನಿಲ್ಲಿಸಲು ಸಾಧ್ಯವಿಲ್ಲನಾವು ಎಲ್ಲಾ ಸುರಕ್ಷತೆಗಳೊಂದಿಗೆ ಮುಂದುವರೆಯಬೇಕಾಗಿದೆ ಮತ್ತು ಎಲ್ಲ ವಿದ್ಯಾರ್ಥಿಗಳ ವೃತ್ತಿಜೀವನವನ್ನು ಅನಿರ್ದಿಷ್ಟವಾಗಿ ಅಪಾಯಕ್ಕೆ ಸಿಲುಕಿಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಪೀಠ ಹೇಳಿದ್ದುಕೊರೋನವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳನ್ನು ಮುಂದೂಡಬೇಕೆಂದು ಬಯಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್ಪುರಸ್ಕರಿಸಲು ನಿರಾಕರಿಸಿತು.

ಕೋವಿಡ್ -೧೯ ಬಹುಶಃ ಇನ್ನೊಂದು ವರ್ಷ ಇಲ್ಲಿ ಉಳಿಯಲಿದೆ ಎಂದು ನ್ಯಾಯಪೀಠ ಹೇಳಿತು.

ಆದರೆ ವಿದ್ಯಾರ್ಥಿಗಳ ವೃತ್ತಿಜೀವನವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗುವುದಿಲ್ಲಕೋವಿಡ್‌ನಲ್ಲಿ ಈಗಾಗಲೇ ಆರು ತಿಂಗಳುಗಳು ಕಳೆದಿವೆ ಎಂದು ನ್ಯಾಯಾಲಯ ಹೇಳಿತುರಾಷ್ಟ್ರೀಯ ಕಾನೂನು ಪ್ರವೇಶ ಪರೀಕ್ಷೆಗಳಾದ ಕ್ಲಾಟ್ ಈಗ ಇತರ ಹಲವು ಪರೀಕ್ಷೆಗಳಂತೆ ಸೆಪ್ಟೆಂಬರ್ ತಿಂಗಳಿಗೆ ನಿಗದಿಯಾಗಿದೆ.

ವಿಶ್ವದಾದ್ಯಂತ ಶಿಕ್ಷಣ ಸಂಸ್ಥೆಗಳು ಈಗ ತೆರೆದುಕೊಳ್ಳುತ್ತಿವೆ ಎಂದು ಹೇಳಿದ ಪೀಠ, ’ನ್ಯಾಯಾಲಯದ ಭೌತಿಕ ವಿಚಾರಣೆಗಳನ್ನು ಪುನಾರಂಬಿಸುವ ಬಗ್ಗೆ ಕೂಡಾ ಸುಪ್ರೀಂ ಕೋರ್ಟ್ ಚಿಂತನೆ ನಡೆಸುತ್ತಿದೆ ಎಂಬುದರತ್ತ ಬೊಟ್ಟು ಮಾಡಿದರು.

ಕೇಂದ್ರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) - ಪರೀಕ್ಷೆಗಳನ್ನು ನಡೆಸುವ ಸಂಸ್ಥೆಗಳನ್ನು ಪ್ರತಿನಿಧಿಸಿದ ಪೀಠವುಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರಿಂದಲೂ ಅಹವಾಲು ಆಲಿಸಿತುಸೆಪ್ಟೆಂಬರಿನಲ್ಲಿ ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಕೇಂದ್ರ ಮತ್ತು ಎನ್‌ಟಿಎ ನಿಲುವನ್ನು ತುಷಾರ ಮೆಹ್ತ ದೃಢ ಪಡಿಸಿದರು.

ಪರೀಕ್ಷೆಗಳನ್ನು ನಡೆಸುವಲ್ಲಿ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮೆಹ್ತ ನ್ಯಾಯಪೀಠಕ್ಕೆ ಭರವಸೆ ನೀಡಿದರು.

ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳನ್ನು ನಡೆಸಲು ಮನವಿ ಮಾಡಿ ವಕೀಲರಾದ ಮಿತುಲ್ ಶೆಲಾತ್ ಮತ್ತು ಜೈಕೃತಿ ಎಸ್ ಜಡೇಜಾ ಅವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಯನ್ನು ನ್ಯಾಯಪೀಠ ಅಂಗೀಕರಿಸಿತುನ್ಯಾಯಾಲಯವು ಗಮನಿಸಬೇಕಾದ ಯಾವುದೇ ಕುಂದುಕೊರತೆ ಉಳಿದಿಲ್ಲ ಎಂದು ಹೇಳಿ  ಅರ್ಜಿಯನ್ನು ಪೀಠ ವಿಲೇವಾರಿ ಮಾಡಿತು.

No comments:

Advertisement