My Blog List

Monday, August 17, 2020

ಪ್ರಧಾನಿ ಮೋದಿ ಮಾತಿಗೆ ಸ್ಪಂದಿಸಿದ ಚೀನಾ

 ಪ್ರಧಾನಿ ಮೋದಿ ಮಾತಿಗೆ ಸ್ಪಂದಿಸಿದ ಚೀನಾ

ಬೀಜಿಂಗ್: ಪರಸ್ಪರ ನಂಬಿಕೆಯನ್ನು ಹೆಚ್ಚಿಸಲು ಮತ್ತು ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ  ಭಾರತದೊಂದಿಗೆ ಕೆಲಸ ಮಾಡಲು ಚೀನಾ ಸಿದ್ಧವಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ 2020 ಆಗಸ್ಟ್ 17ರ ಸೋಮವಾರ ಪ್ರತಿಕ್ರಿಯಿಸಿತು. ಪರಸ್ಪರ ಗೌರವಿಸುವುದು ಉಭಯ ದೇಶಗಳ ಮುಂದಿರುವಸರಿಯಾದ ಮಾರ್ಗ ಎಂದೂ ಚೀನಾ ಹೇಳಿತು.

ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣಕ್ಕೆ ವಿದೇಶಾಂಗ ಸಚಿವಾಲಯ ಸೋಮವಾರ ಪ್ರತಿಕ್ರಿಯಿಸಿತ್ತು. ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ಬಲಪಡಿಸುವ ಬಗ್ಗೆ ಮಾತನಾಡಿದ್ದಲ್ಲದೆ, ದೇಶದ ಪ್ರಾದೇಶಿಕ ಸಮಗ್ರತೆಯು ಸರ್ವೋಚ್ಚವಾಗಿದೆ ಎಂದು ಹೇಳಿದ್ದರು.

"ಎಲ್‌ಒಸಿಯಿಂದ (ಲೈನ್ ಆಫ್ ಕಂಟ್ರೋಲ್) ಹಿಡಿದು ಎಲ್‌ಎಸಿವರೆಗೆ (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್), ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟವರಿಗೆ ಸ್ವತಃ ಅರ್ಥವಾಗುವಂತಹ ಭಾಷೆಯಲ್ಲಿ ಭಾರತದ ಸಶಸ್ತ್ರ ಪಡೆಗಳು ಪ್ರತಿಕ್ರಿಯಿಸಿವೆ ಎಂದು ಪ್ರಧಾನಿ ಮೋದಿ ಅವರು ದೆಹಲಿಯ ಕೆಂಪುಕೋಟೆಯಿಂದ ಮಾಡಿದ ತಮ್ಮ ಭಾಷಣದಲ್ಲಿ ಹೇಳಿದ್ದರು.

ಚೀನಾವನ್ನು ಹೆಸರಿಸದೆಯೇ ಪೂರ್ವ ಲಡಾಕ್‌ನಲ್ಲಿ ನಡೆದ ಗಡಿ ಸಂಘರ್ಷವನ್ನೂ ಮೋದಿ ಉಲ್ಲೇಖಿಸಿದ್ದರು.

ಭಾರತದ ಸಮಗ್ರತೆಯು ನಮಗೆ ಸರ್ವೋಚ್ಚವಾಗಿದೆ. ನಾವು ಏನು ಮಾಡಬಹುದು, ನಮ್ಮ ಸೈನಿಕರು ಏನು ಮಾಡಬಹುದು ಎಂಬುದನ್ನು ಎಲ್ಲರೂ ಲಡಾಖ್‌ನಲ್ಲಿ ನೋಡಿದ್ದಾರೆ ಎಂದು ಗಲ್ವಾನ್ ಕಣಿವೆಯಲ್ಲಿ ಜೂನ್ ೧೫ ರಂದು ಸಂಭವಿಸಿದ ಗಡಿ ಘರ್ಷಣೆಯನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದ್ದರು.

ಘರ್ಷಣೆಯಲ್ಲಿ ಕನಿಷ್ಠ ೨೦ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು ಮತ್ತು ಚೀನಾ ಸಹ ಸಾವುನೋವುಗಳನ್ನು ಅನುಭವಿಸಿರುವುದಾಗಿ ಒಪ್ಪಿಕೊಂಡಿದೆ. ಆದರೆ ನಿಖರವಾದ ಸಾವು ನೋವಿನ ಸಂಖ್ಯೆಯನ್ನು ಚೀನಾ ಬಹಿರಂಗ ಪಡಿಸಿಲ್ಲ.

ಮೋದಿಯವರ ಭಾಷಣದ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಅವರುನಾವು ಪ್ರಧಾನಿ ಮೋದಿಯವರ ಭಾಷಣವನ್ನು ಗಮನಿಸಿದ್ದೇವೆ. ನಾವು ನಿಕಟ ನೆರೆಹೊರೆಯವರು, ನಾವೆಲ್ಲರೂ ಒಂದು ಶತಕೋಟಿ ಜನರಿರುವ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಂದು ಹೇಳಿದರು.

"ಆದ್ದರಿಂದ ದ್ವಿಪಕ್ಷೀಯ ಸಂಬಂಧಗಳ ಉತ್ತಮ ಅಭಿವೃದ್ಧಿಯು ಉಭಯ ದೇಶಗಳ ಜನರ ಹಿತಾಸಕ್ತಿಗೆ ಮಾತ್ರವಲ್ಲದೆ  ಇಡೀ ಪ್ರಪಂಚಕ್ಕೆ ಸ್ಥಿರತೆ, ಶಾಂತಿ, ಸಮೃದ್ಧಿಯನ್ನು ತಂದು ಕೊಡುತ್ತದೆ. ಇದು ನಮ್ಮ ದೀರ್ಘಕಾಲೀನ ಹಿತಾಸಕ್ತಿಗಳಿಗೆ ನೆರವಾಗುವುದರಿಂದ ಪರಸ್ಪರ ಗೌರವಿಸುವುದು ಮತ್ತು ಬೆಂಬಲಿಸುವುದು ಎರಡೂ ಕಡೆಯವರಿಗೆ ಸರಿಯಾದ ಮಾರ್ಗವಾಗಿದೆ ಎಂದು ಲಿಜಿಯಾನ್ ಸಚಿವಾಲಯದ ಸೋಮವಾರದ ಪತ್ರಿಕಾಗೋಷ್ಠಿಯಲ್ಲಿ ನುಡಿದರು.

ನಮ್ಮ ಪರಸ್ಪರ ರಾಜಕೀಯ ನಂಬಿಕೆಯನ್ನು ಹೆಚ್ಚಿಸಲು, ನಮ್ಮ ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸಲು, ಹಂತ ಹಂತದ ಪ್ರಾಯೋಗಿಕ ಸಹಕಾರವನ್ನು ಮತ್ತು ದ್ವಿಪಕ್ಷೀಯ ಸಂಬಂಧಗಳ ದೀರ್ಘಕಾಲೀನ ಬೆಳವಣಿಗೆಯನ್ನು ಕಾಪಾಡಲು ಚೀನಾ ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿಯವರ ಭಾಷಣವನ್ನು ವಿಶ್ಲೇಷಿಸಿದ ಚೀನಾದ ಸರ್ಕಾರಿ ಮಾಧ್ಯಮವುಅವರ ಮುಂದಿನ ನಡೆಯೇನು ಎಂಬುದನ್ನು ಗಮನಿಸುವುದು ಮುಖ್ಯ ಎಂದು ಹೇಳಿದೆ.

ಆಗಸ್ಟ್ ರಂದು ಬೀಜಿಂಗ್ ಮತ್ತು ನವದೆಹಲಿ ನಡುವೆ ಇತ್ತೀಚಿನ ಸುತ್ತಿನ ಹಿರಿಯ ಮಟ್ಟದ ಮಾತುಕತೆಯ ನಂತರ, ಭಾರತ ತನ್ನ ನಿಲುವನ್ನು ಬದಲಾಯಿಸುವ ಯಾವುದೇ ಲಕ್ಷಣವನ್ನು ತೋರಿಸಿಲ್ಲ. ಅದೇ ಸಮಯದಲ್ಲಿ, ಚೀನಾ ಕೂಡ ತನ್ನ ಪಟ್ಟನ್ನು ಬಿಟ್ಟಿಲ್ಲ. ಪ್ರಮುಖ ವಿಷಯಗಳ ಬಗ್ಗೆ ಉಭಯ ದೇಶಗಳ ನಡುವಣ ಬಿಕ್ಕಟ್ಟು ಇನ್ನೂ ನೆನೆಗುದಿಯಲ್ಲಿ ಇರುವುದರಿಂದ, ಮೋದಿಯವರ ನಿಜವಾದ ಉದ್ದೇಶಗಳು ಅವರ ಮುಂದಿನ ನಡೆಗಳಲ್ಲಿ ಸ್ಪಷ್ಟವಾಗಲಿದೆ ಎಂದು ಶಾಂಘೈ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ಸಂಶೋಧನಾ ಸಹವರ್ತಿ ಝಾವೋ ಗ್ಯಾಂಚೆಂಗ್ಗ್ಲೋಬಲ್ ಟೈಮ್ಸ್ ಟ್ಯಾಬ್ಲಾಯ್ಡ್ಗೆ ತಿಳಿಸಿದರು.

ಮೋದಿಯವರ ಭಾಷಣವನ್ನು ಉಲ್ಲೇಖಿಸಿ ಝಾವೋಇದನ್ನು ಎರಡು ದೃಷ್ಟಿಕೋನಗಳಿಂದ ವಿವರಿಸಬಹುದು ಎಂದು ಹೇಳಿದರು.

"ಒಂದು, ಮೋದಿಯವರು ಕಠಿಣವಾಗಿದ್ದಾರೆ ಮತ್ತು ಯುದ್ಧದ ನೋಟವನ್ನು ಹೊಂದಿದ್ದಾರೆ. ಇನ್ನೊಂದು ವಿವರಣೆಯೆಂದರೆ, ಚೀನಾ ಬಗೆಗಿನ ತನ್ನ ಮನೋಭಾವವನ್ನು ಪ್ರದರ್ಶಿಸುವ ಮೂಲಕ ತಾನು ಸಾಕಷ್ಟು ಕೆಲಸ ಮಾಡಿರುವುದಾಗಿ ಭಾರತ ಸರ್ಕಾರ ಭಾವಿಸಿದೆ. ಆದ್ದರಿಂದ, ಮೋದಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಹೇಳಿದ್ದು ಬಹಳ ಮುಖ್ಯವಲ್ಲ, ಆದರೆ ಮುಂದೆ ಅವರು ಏನು ಮಾಡುತ್ತಾರೆ ಎಂಬುದು ಮುಖ್ಯ ಎಂದು ಝಾವೋ ಹೇಳಿದರು.

No comments:

Advertisement