Tuesday, August 18, 2020

ಕೊರೋನಾ ಬಂದರೆ ಹಣ ವಾಪಸ್: ಜಾಹೀರಾತಿನಿಂದ ಕಂಟಕ

 ಕೊರೋನಾ ಬಂದರೆ ಹಣ ವಾಪಸ್: ಜಾಹೀರಾತಿನಿಂದ ಕಂಟಕ!

ತಿರುವನಂತಪುರಂ: ’ಖರೀದಿಸಿ ಮತ್ತು ಕೊರೋನಾ ಬಂದರೆ ೫೦ ಕೆ ಕ್ಯಾಶ್ಬ್ಯಾಕ್ ಪಡೆಯಿರಿ ಎಂಬುದಾಗಿ ವಿಲಕ್ಷಣ ಜಾಹೀರಾತು ನೀಡಿದ ಕೇರಳದ ಅಂಗಡಿಯೊಂದು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿರುವ ವರದಿ 2020 ಆಗಸ್ಟ್ 18ರ ಮಂಗಳವಾರ ಬಂದಿತು.

ಕೇರಳದ ಎಲೆಕ್ಟ್ರಾನಿಕ್ಸ್ ಸರಕುಗಳ ಅಂಗಡಿಯು ಕೊರೋನಾವೈರಸ್ನ್ನು ಬಳಸಿಕೊಂಡು ಜಾಹೀರಾತು ನೀಡಿ ತೊಂದರೆಯ ಸುಳಿಯಲ್ಲಿ ಸಿಲುಕಿದೆ. ಶಾಪಿಂಗ್ ಮಾಡಿದ ೨೪ ಗಂಟೆಗಳ ಒಳಗೆ ಗ್ರಾಹPರಿಗೆ ಕೊರೊನಾವೈರಸ್ ಸೋಂಕು ತಗುಲಿದರೆ, ಜಿಎಸ್ಟಿ ರಹಿತವಾಗಿ ೫೦,೦೦೦ ರೂಪಾಯಿ ನಗದು ವಾಪಸ್ ಎಂಬುದಾಗಿ ಎಲೆಕ್ಟ್ರಾನಿಕ್ಸ್ ಅಂಗಡಿ ಜಾಹೀರಾತು ನೀಡಿತ್ತು.

ಜಾಹೀರಾತಿನ ವಿಚಾರ ಪ್ರಸಾರವಾಗುತ್ತಿದ್ದಂತೆಯೇ ಅಂಗಡಿಗೆ ಗ್ರಾಹಕರು ದಾಂಗುಡಿ ಇಡಲು ಆರಂಭಿಸಿದರು. ಅಂಗಡಿಯಲ್ಲಿ ಜನದಟ್ಟಣೆ ಕಂಡು ಬರುತ್ತಿದ್ದಂತೆಯೇ ಆಡಳಿತವು ಚುರುಕಾಗುವಂತಾಯಿತು.

ಆಗಸ್ಟ್ ೧೫ ಮತ್ತು ೩೦ ನಡುವಣ ಅವಧಿಗೆ ಮಾನ್ಯವಾಗಿದ್ದ ಪ್ರಸ್ತಾಪವನ್ನು ಅಂಗಡಿಯವರು ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದ್ದರು.

ವಿವಾದಾತ್ಮಕ ಜಾಹೀರಾತಿನಿಂದ ಗಾಬರಿಗೊಂಡ ಕೊಟ್ಟಾಯಂನ ಪಾಲಾ ಪುರಸಭೆಯ ಸದಸ್ಯ ಹಾಗೂ ವಕೀಲ ಬಿನು ಪುಲಿಕಕ್ಕಂಡಂ ಅವರು ಪ್ರಚಾರ ಪ್ರಸ್ತಾಪವನ್ನು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಾಲ್ಕು ಅಂಶಗಳ ಅರ್ಜಿಯಲ್ಲಿ, ಪ್ರಸ್ತಾಪವು ಕೋವಿಡ್ -೧೯ ಸಕಾರಾತ್ಮಕ ವ್ಯಕ್ತಿಗೆ ತನ್ನ ಆರೋಗ್ಯ ಸ್ಥಿತಿಯನ್ನು ಮರೆಮಾಚುವ ಮೂಲಕ ಖರೀದಿಸಿ ನಂತರ ಕ್ಯಾಶ್ಬ್ಯಾಕ್ ಪಡೆಯಲು ಪ್ರೇರೇಪಣೆ ನೀಡಬಹುದು ಎಂದು ಅವರು ಆಕ್ಷೇಪಿಸಿದ್ದರು.

"ಉತ್ತಮ ಆರ್ಥಿಕ ಹಿನ್ನೆಲೆ ಇಲ್ಲದವರು ಇಷ್ಟು ಹಣವನ್ನು ಸಂಪಾದಿಸುವ ಸಲುವಾಗಿ ಕೋವಿಡ್ -೧೯ ಸೋಂಕನ್ನು ಅಂಟಿಸಿಕೊಳ್ಳಲು ಮುಂದಾಗಬಹುದು. ಸಾಂಕ್ರಾಮಿಕ ರೋಗವನ್ನು ಉದ್ದೇಶಪೂರ್ವಕವಾಗಿ ಹರಡುವ ದೊಡ್ಡ ಮಟ್ಟದ ಮನವಿ ಇದಾಗಿದೆ. ವ್ಯಾಪಾರ ಮಾಲೀಕರು ತಮ್ಮ ವ್ಯವಹಾರವನ್ನು ಅಭಿವೃದ್ಧಿಪಡಿಸುವ ಭರದಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಮರೆತಿದ್ದಾರೆ. ಐಪಿಸಿ ಸೆಕ್ಷನ್ ೨೬೯, ೨೦೨೦ ಮಾಹಿತಿ ತಂತ್ರಜ್ಞಾನ ಕಾಯ್ದೆ, ೨೦೧೯   ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ ೮೯ ಮತ್ತು ಕೇರಳ ಪುರಸಭೆ ಕಾಯ್ದೆಯ ಆರೋಗ್ಯ ಮಾನದಂಡಗಳ ಪ್ರಕಾರ ಅವರು ಗಂಭೀರ ಅಪರಾಧ ಎಸಗಿದ್ದಾರೆ ಎಂದು ಪುಲಿಕಕ್ಕಂಡಂ ದೂರಿನಲ್ಲಿ ಬರೆದಿದ್ದರು.

ಕಟ್ಟುನಿಟ್ಟಾದ ನಿರ್ಬಂಧಗಳನ್ನು ಹೊಂದಿರುವ, ಕೇರಳದ ಯಾವುದೇ ಅಂಗಡಿಯೊಳಗೆ ೨೦ಕ್ಕೂ ಹೆಚ್ಚು ಜನರ ಪ್ರವೇಶಕ್ಕೆ ಅನುಮತಿ ನೀಡಲಾಗುವುದಿಲ್ಲ. ವಿಷಯವನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದ ಕೂಡಲೇ ಪೊಲೀಸರು ಚಿಲ್ಲರೆ ಮಾರಾಟ ಮಳಿಗೆ ಮುಚ್ಚಲು ಸ್ಥಳಕ್ಕೆ ಧಾವಿಸಿದರು. ಪ್ರಕರಣ ದಾಖಲಾಗಿದ್ದು, ವಿವರವಾದ ತನಿಖೆಯನ್ನೂ ಪ್ರಾರಂಭಿಸಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಆಗಸ್ಟ್ ೧೭ ರಂದು ಕೇರಳದಲ್ಲಿ ,೭೨೫ ಹೊಸ ಪ್ರಕರಣಗಳು ದಾಖಲಾಗಿದ್ದು, ಇದುವರೆಗಿನ ಅತಿದೊಡ್ಡ ಏಕದಿನದ ದಾಖಲೆ ಇದಾಗಿದೆ. ರಾಜ್ಯವು ಈವರೆಗೆ ೧೬೯ ಕೊವಿಡ್ ಸಾವುಗಳನ್ನು ದಾಖಲಿಸಿದೆ.

No comments:

Advertisement