My Blog List

Wednesday, October 7, 2020

ರಿಯಾ ಚಕ್ರವರ್ತಿಗೆ ಜಾಮೀನು, ಬಿಡುಗಡೆ, ಬೆನ್ನತ್ತುವ ಪತ್ರಕರ್ತರಿಗೆ ಕುತ್ತು

 ರಿಯಾ ಚಕ್ರವರ್ತಿಗೆ ಜಾಮೀನು, ಬಿಡುಗಡೆ, ಬೆನ್ನತ್ತುವ ಪತ್ರಕರ್ತರಿಗೆ ಕುತ್ತು

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ನಟ ರಿಯಾ ಚಕ್ರವರ್ತಿ ಅವರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲ ಎಂದು ಹೇಳಿ ಬಾಂಬೆ ಹೈಕೋರ್ಟ್ 2020 ಅಕ್ಟೋಬರ್ 07 ಬುಧವಾರ ಜಾಮೀನು ಮಂಜೂರು ಮಾಡಿದ್ದು ಅವರು ಬಿಡುಗಡೆಯಾಗಿ ತಮ್ಮ ನಿವಾಸಕ್ಕೆ ವಾಪಸಾದರು.

ಇದರ ಬೆನ್ನಲ್ಲೇ ಯಾರೇ ಸೆಲೆಬ್ರಿಟಿ, ವಕೀಲ ಅಥವಾ ಸಂದರ್ಶನ ಮಾಡಬಯಸುವ ವ್ಯಕ್ತಿಯ ವಾಹನ ಬೆನ್ನತ್ತುವ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂಬೈ ಪೊಲೀಸರು ನಿರ್ಧರಿಸಿದರು.

ಯಾವುದೇ ಸೆಲೆಬ್ರಿಟಿ, ವಕೀಲ ಅಥವಾ ಸಂದರ್ಶನ ಮಾಡಲು ಬಯಸುವ ವ್ಯಕ್ತಿಯ ವಾಹನವನ್ನು ಬೆನ್ನಟ್ಟಿದರೆ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಕಾಲಿಕ ಸಾವಿನ ತನಿಖೆಗೆ ಸಂಬಂಧಿಸಿರುವ ಮಾದಕವಸ್ತು ಪ್ರಕರಣದಲ್ಲಿ ೨೧ ಗಂಟೆಗಳ ಕಾಲ ಮಾದಕ ದ್ರವ್ಯ ನಿಯಂತ್ರಣ ದಳ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ -ಎನ್ಸಿಬಿ) ಕಚೇರಿಯಲ್ಲಿ ಸತತ ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ನಂತರ ಸೆಪ್ಟೆಂಬರ್ ರಂದು ಬಂಧಿಸಲ್ಪಟ್ಟ ರಿಯಾ ಚಕ್ರವರ್ತಿ ಅವರನ್ನು ನ್ಯಾಯಾಲಯದ ಆದೇಶ ಪ್ರಕಾರ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಬೈಕುಲ್ಲಾದಿಂದ ಬಿಡುಗಡೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

ಮಧ್ಯೆ, ‘ಮಾಧ್ಯಮ ವ್ಯಕ್ತಿಗಳು ಯಾವುದೇ ಪ್ರಸಿದ್ಧ ವ್ಯಕ್ತಿ, ವಕೀಲ ಅಥವಾ ಅವರು ಸಂದರ್ಶನ ಮಾಡಲು ಬಯಸುವ ಯಾವುದೇ ವ್ಯಕ್ತಿಯ ವಾಹನವನ್ನು ಬೆನ್ನಟ್ಟಲು ಸಾಧ್ಯವಿಲ್ಲ. ನೀವು ವ್ಯಕ್ತಿಯ ಅಥವಾ ರಸ್ತೆಯಲ್ಲಿ ನಡೆಯುವ ಯಾವುದೇ ವ್ಯಕ್ತಿಯ ಅಥವಾ ಇನ್ನೊಂದು ವಾಹನದಲ್ಲಿ ಪ್ರಯಾಣಿಸುವ ವ್ಯಕ್ತಿಯ ಜೀವಕ್ಕೆ ಅಪಾಯ ಉಂಟುಮಾಡಲು ಸಾಧ್ಯವಿಲ್ಲ. ಬೆನ್ನಟ್ಟುವ ಸಮಯದಲ್ಲಿ ನಿಮ್ಮ ಜೀವಕ್ಕೆ ಅಪಾಯ ಮಾಡಿಕೊಳ್ಳಲೂ ಸಾಧ್ಯವಿಲ್ಲ; ಇದು ಅಪರಾz’ ಎಂದು ಪೊಲೀಸ್ ಉಪ ಆಯುಕ್ತ ಸಂಗ್ರಮಸಿಂಹ ನಿಶಂದರ್ (ವಲಯ ) ಹೇಳಿದರು.

"ಅಂತಹ ವಿಷಯಗಳು ಸಂಭವಿಸಿದಲ್ಲಿ, ನಾವು ಚಾಲಕನ ವಿರುದ್ಧ ಮಾತ್ರವಲ್ಲದೆ ಅವರನ್ನು ಪ್ರಚೋದಿಸುವ ವ್ಯಕ್ತಿಯ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನಿಶಂದರ್ ಹೇಳಿದರು.

"ರಿಯಾ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಎನ್ಸಿಬಿ ವಿಚಾರಣೆಗೆ ಕರೆಸಿದ ಕೆಲವು ವ್ಯಕ್ತಿಗಳನ್ನು ಮಾಧ್ಯಮ ವ್ಯಕ್ತಿಗಳು ಒಟ್ಟುಸೇರಿಸಿದರು ಅವರ ವಾಹನಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಪ್ರತಿನಿಧಿಗಳು ಅವರ ನಿವಾಸದಿಂದ ಎನ್ಸಿಬಿವರೆಗೆ ಬೆನ್ನಟ್ಟಿದರು. ಘಟನೆಯ ಬಳಿಕ ನಾವು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಐಪಿಎಸ್ ಅಧಿಕಾರಿ ಹೇಳಿದರು.

ರಿಯಾ ಚಕ್ರವರ್ತಿಗೆ ಜಾಮೀನು

ನಟಿ ರಿಯಾ ಚಕ್ರವರ್ತಿ ಅವರಿಗೆ, ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮಾದಕದ್ರವ್ಯ ಸೇವನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಒಂದು ತಿಂಗಳ ಬಳಿಕ ಬಾಂಬೆ ಹೈಕೋರ್ಟ್ ಬುಧವಾರ ಷರತ್ತಿನ ಜಾಮೀನು ನೀಡಿತು. ತನ್ನ ಗೆಳೆಯನಾದ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಗಾಂಜಾ ಸಂಗ್ರಹಿಸಿ ಕೊಡುವ ಕೃತ್ಯದಲ್ಲಿ  ಭಾಗಿಯಾಗಿದ್ದಕ್ಕಾಗಿ ರಿಯಾ ಚಕ್ರವರ್ತಿಯವರನ್ನು ಸೆಪ್ಟೆಂಬರ್ ರಂದು ಮಾದಕ ದ್ರವ್ಯ ನಿಯಂತ್ರಣ ದಳ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ -ಎನ್ಸಿಬಿ) ಬಂಧಿಸಿತ್ತು.

ರಿಯಾ ಚಕ್ರವರ್ತಿ ಅವರಿಗೆ ಕ್ರಿಮಿನಲ್ ಹಿನ್ನೆಲೆಗಳಿಲ್ಲ ಎಂಬ ನೆಲೆಯಲ್ಲಿ ಜಾಮೀನು ನೀಡಿದ ಬಾಂಬೆ ಹೈಕೋರ್ಟ್, ರಿಯಾ ಅವರ ಸಹೋದರ ಶೋಯಿಕ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಹೀಗಾಗಿ ರಿಯಾ ಸಹೋದರನ ಸೆರೆವಾಸ ಮುಂದುವರೆಯಲಿದೆ.

ಶೋಯಿಕ್ ಮೂಲಕ ಸುಶಾಂತ್ ಸಿಂಗ್ ರಜಪೂತ್ಗೆ ಮಾದಕವಸ್ತುಗಳನ್ನು ಪೂರೈಸಿದ ಆರೋಪ ಹೊತ್ತಿರುವ ವಾಸ್ತುಶಿಲ್ಪದ ಅಂತಿಮ ವರ್ಷದ ವಿದ್ಯಾರ್ಥಿ ಅಬ್ದೆಲ್ ಬಸಿತ್ ಪರಿಹಾರ್ಗೂ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.

ನ್ಯಾಯಮೂರ್ತಿ ಕೊತ್ವಾಲ್ ಅವರು ರಿಯಾ ಚಕ್ರವರ್ತಿ ಅವರಿಗೆ ಒಂದು ಅಥವಾ ಎರಡು ಕಂತಿನಲ್ಲಿ ಲಕ್ಷ ರೂ.ಗಳ ಬಾಂಡ್ ಮತ್ತು ಎರಡು ಜಾಮೀನು ನೀಡಿ ಬಿಡುಗಡೆ ಹೊಂದಲು ಅವಕಾಶ ನೀಡಿದರು. ಆದಾಗ್ಯೂ ಜಾಮೀನು ನೀಡಲು ಕಾಲಾವಕಾಶ ಒದಗಿಸುವ ಮೂಲಕ ೨೮ರ ಹರೆಯದ ನಟಿಯನ್ನು ತತ್ ಕ್ಷಣ ಬಿಡುಗಡೆ ಮಾಡಲು ನ್ಯಾಯಮೂರ್ತಿ ಅವಕಾಶ ಮಾಡಿಕೊಟ್ಟರು.

ಸುಶಾಂತ್ ಸಿಂಗ್ ರಜಪೂತ್ ಅವರು ಮುಂಬೈ ನಿವಾಸದಲ್ಲಿ ಜೂನ್ ೧೪ ರಂದು ಶವವಾಗಿ ಪತ್ತೆಯಾಗಿದ್ದರು.

ಎನ್ಡಿಪಿಎಸ್ ನ್ಯಾಯಾಲಯವು ತನ್ನ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ ೨೦ ರವರೆಗೆ ವಿಸ್ತರಿಸಿದ ಒಂದು ದಿನದ ನಂತರ ರಿಯಾಗೆ ಜಾಮೀನು ನೀಡಿ ಬಾಂಬೈ ಹೈಕೋರ್ಟ್ ತೀರ್ಪು ನೀಡಿದೆ.

ಯುವ ಜನಾಂಗಕ್ಕೆ ಮಾದರಿಯಾಗಬೇಕು ಎಂಬ ಕಾರಣಕ್ಕಾಗಿ ಸೆಲೆಬ್ರಿಟಿಗಳು ಮತ್ತು ರೋಲ್ ಮಾಡೆಲ್ಗಳನ್ನು ಕಠಿಣವಾಗಿ ಪರಿಗಣಿಸಬೇಕು ಎಂದು ತಾನು ಭಾವಿಸುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ನಾವು ಒಪ್ಪುವುದಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾವುದೇ ಪ್ರಸಿದ್ಧ ವ್ಯಕ್ತಿ ಅಥವಾ ರೋಲ್ ಮಾಡೆಲ್ ನ್ಯಾಯಾಲಯದ ಮುಂದೆ ಯಾವುದೇ ವಿಶೇಷ ಸವಲತ್ತು ಪಡೆಯುವುದಿಲ್ಲ. ಅಂತೆಯೇ, ಅಂತಹ ವ್ಯಕ್ತಿಯು ನ್ಯಾಯಾಲಯಗಳಲ್ಲಿ ಕಾನೂನನ್ನು ಎದುರಿಸುವಾಗ ಯಾವುದೇ ವಿಶೇಷ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ. ಪ್ರತಿ ಪ್ರಕರಣವನ್ನು ಆರೋಪಿಗಳ ಸ್ಥಾನಮಾನವನ್ನು ಲೆಕ್ಕಿಸದೆ ತನ್ನದೇ ಆದ ಅರ್ಹತೆಯ ಮೇಲೆ ನಿರ್ಧರಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿತು.

ಅರು (ರಿಯಾ ಚಕ್ರವರ್ತಿ) ಔಷಧ ವ್ಯಾಪಾರಿಗಳ ಭಾಗವಲ್ಲ. ವಿತ್ತೀಯ ಅಥವಾ ಇತರ ಸವಲತ್ತುಗಳನ್ನು ಗಳಿಸಲು ಅವರು ಖರೀದಿಸಿದ ಔಷಧಗಳನ್ನು ಬೇರೊಬ್ಬರಿಗೆ ರವಾನಿಸಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.

"ಅವರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಗಳು ಇಲ್ಲದ ಕಾರಣ, ಜಾಮೀನಿನಲ್ಲಿದ್ದಾಗ ಅವರು ಯಾವುದೇ ಅಪರಾಧ ಮಾಡುವ ಸಾಧ್ಯತೆಯಿಲ್ಲ ಎಂದು ನಂಬಲು ಸಮಂಜಸವಾದ ಆಧಾರಗಳಿವೆ ಎಂದು ಹೈಕೋರ್ಟ್ ಹೇಳಿತು.

ಸೆಕ್ಷನ್ ೧೯, ೨೪ ಅಥವಾ ೨೭ (ಎನ್ಡಿಪಿಎಸ್ ಕಾಯ್ದೆಯ) ಅಥವಾ ವಾಣಿಜ್ಯ ಪ್ರಮಾಣವನ್ನು ಒಳಗೊಂಡ ಯಾವುದೇ ಅಪರಾಧದ ಅಡಿಯಲ್ಲಿ ಶಿಕ್ಷಾರ್ಹ ಯಾವುದೇ ಅಪರಾzದಲ್ಲಿ ಅವರು ತಪ್ಪಿತಸ್ಥರಲ್ಲ ಎಂದು ನಂಬಲು ಸಮಂಜಸವಾದ ಆಧಾರಗಳಿವೆ ಎಂದೂ ಹೈಕೋರ್ಟ್ ಬೊಟ್ಟು ಮಾಡಿತು.

No comments:

Advertisement