Wednesday, October 7, 2020

ಜಿನೋಮ್ ಎಡಿಟಿಂಗ್: ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ

 ಜಿನೋಮ್ ಎಡಿಟಿಂಗ್: ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ

ಸ್ಟಾಕ್ ಹೋಮ್: ಫ್ರಾನ್ಸಿನ ವಿಜ್ಞಾನಿ ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಅಮೆರಿಕದ ವಿಜ್ಞಾನಿ ಜೆನ್ನಿಫರ್ . ಡೌಡ್ನಾ ಅವರಿಗೆ ರಸಾಯನ ಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ೨೦೨೦ರ ಸಾಲಿನ ನೊಬೆಲ್ ಪ್ರಶಸ್ತಿಯನ್ನು 2020 ಅಕ್ಟೋಬರ್ 07 ಬುಧವಾರ ಘೋಷಿಸಲಾಯಿತು.

ಜೀನೋಮ್ ಸಂಪಾದನೆಗಾಗಿ ಸಿಆರ್ಐಎಸ್ಪಿಆರ್ ಎಂಬುದಾಗಿ ಪರಿಚಿತವಾಗಿರುವ ಎಡಿಟಿಂಗ್ ವಿಧಾನವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಫ್ರೆಂಚ್ ವಿಜ್ಞಾನಿ ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಅಮೇರಿಕದ ವಿಜ್ಞಾನಿ ಜೆನ್ನಿಫರ್ . ಡೌಡ್ನಾ ಅವರು ಜಂಟಿಯಾಗಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಗೆದ್ದರು.

ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಪ್ರಧಾನ ಕಾರ್ಯದರ್ಶಿ ಗೋರನ್ ಹ್ಯಾನ್ಸನ್ ಅವರು ರಸಾಯನ ಶಾಸ್ತ್ರದಲ್ಲಿ ಮಾಡಿದ ಸಾಧನೆಗಾಗಿ ಉಭಯ ವಿಜ್ಞಾನಿಗಳಿ ಬುಧವಾರ ಪ್ರಶಸ್ತಿಯನ್ನು ಘೋಷಿಸಿದರು.

ಎಮಾನ್ಯುಯೆಲ್ ಅವರು ಜರ್ಮನಿಯ ಬರ್ಲಿನ್ನಿನ ಮ್ಯಾಕ್ಸ್ ಬ್ಲ್ಯಾಂಕ್ ಯೂನಿಟ್ ಫಾರ್ ದಿ ಸೈನ್ಸ್ ಆಫ್ ಪ್ಯಾಥೊಜೆನ್ಸ್ ವಿಭಾಗದ ನಿರ್ದೇಶಕಿಯಾಗಿದ್ದಾರೆ. ಜೆನಿಫರ್ .ಡೌಡ್ನಾ ಅಮೆರಿಕದ ಬರ್ಕ್ಲಿಯ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಪ್ರೊಫೆಸರ್ ಆಗಿದ್ದಾರೆ.

ತಳಿಗುಣ (ಜೀನ್) ತಂತ್ರಜ್ಞಾನದಲ್ಲಿ ಅತ್ಯಂತ ತೀಕ್ಷ್ಣವಾದ ತಂತ್ರಗಳ (ಟೂಲ್ಸ್) ಅನ್ವೇಷಣೆಯನ್ನು  ಎಮಾನ್ಯುಯೆಲ್ ಮತ್ತು ಜೆನಿಫರ್ ಮಾಡಿದ್ದಾರೆ. ತಳಿಗುಣ ತಿದ್ದುಪಡಿಗೆ ಬಳಸಲಾಗುವ ಅತ್ಯಂತ ಸೂಕ್ಷ್ಮ ಕ್ರಿಸ್ಪರ್ ಕತ್ತರಿಗಳನ್ನು (ಜೆನೆಟಿಕ್ ಸಿಸರ್ಸ್) ಅವರು ಅಭಿವೃದ್ಧಿ ಪಡಿಸಿದ್ದಾರೆ.

ತಂತ್ರಜ್ಞಾನವನ್ನು ಬಳಸಿ ಸಂಶೋಧಕರು ಪ್ರಾಣಿಗಳ, ಸಸ್ಯಗಳ ಹಾಗೂ ಸೂಕ್ಷ್ಮಜೀವಿಗಳ ಡಿಎನ್ಎಯನ್ನು ಅತ್ಯಂತ ನಿಖರವಾಗಿ ಬದಲಿಸಿಬಿಡಬಹುದಾಗಿದೆ. ಸಸ್ಯ ತಳಿಗಳ ಅಭಿವೃದ್ಧಿ, ಅತ್ಯಾಧುನಿಕ ರೀತಿಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಹಾಗೂ ಅನುವಂಶಿಕ ಕಾಯಿಲೆಗಳನ್ನು ಗುಣ ಪಡಿಸಲು ಇದರಿಂದ ಸಾಧ್ಯವಾಗುತ್ತಿದೆ.

ಪ್ರತಿಷ್ಠಿತ ಪ್ರಶಸ್ತಿಯು ಚಿನ್ನದ ಪದಕ ಮತ್ತು ೧೦ ಮಿಲಿಯನ್ ಕ್ರೋನಾದ ( . ಮಿಲಿಯನ್- .೧೧ ಕೋಟಿ ಡಾಲರ್ಗಿಂತಲೂ ಹೆಚ್ಚು) ಗೌರವ ಧನವನ್ನು ಹೊಂದಿದೆ. ಪ್ರಶಸ್ತಿಯ ಸೃಷ್ಟಿಕರ್ತ, ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು ಒಂದು ಶತಮಾನಕ್ಕಿಂತಲೂ ಹಿಂದೆ ಬರೆಟ್ಟಿರುವ ಉಯಿಲಿನ ಸೌಜನ್ಯದಿಂದ ನೀಡಲಾಗುವ ಪ್ರಶಸ್ತಿ ಮೊತ್ತವನ್ನು  ಹಣದುಬ್ಬರದ ಹಿನ್ನೆಲೆಯಲ್ಲಿ ಹೆಚ್ಚಿಸಲಾಗಿದೆ.

ಪಿತ್ತಜನಕಾಂಗವನ್ನು ಹಾಳುಮಾಡುವ ಹೆಪಟೈಟಿಸ್ ಸಿ ವೈರಸ್ ಅನ್ನು ಕಂಡುಹಿಡಿದಿದ್ದಕ್ಕಾಗಿ ಅಮೆರಿಕದ ಹಾರ್ವೆ ಜೆ. ಆಲ್ಟರ್ ಮತ್ತು ಚಾರ್ಲ್ಸ್ ಎಂ. ರೈಸ್ ಮತ್ತು ಬ್ರಿಟಿಷ್ ಮೂಲದ ವಿಜ್ಞಾನಿ ಮೈಕೆಲ್ ಹೌಟನ್ ಅವರಿಗೆ ಸೋಮವಾರ ನೊಬೆಲ್ ಸಮಿತಿಯು ಶರೀರಶಾಸ್ತ್ರ ಮತ್ತು ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಿತ್ತು.

ಭೌತಶಾಸ್ತ್ರಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಮಂಗಳವಾರ ಕಾಸ್ಮಿಕ್ ಕಪ್ಪು ಕುಳಿಗಳ ರಹಸ್ಯಗಳನ್ನು ಅರ್ಥಮಾಡಿಕೊಳ್ಳುವಲ್ಲಿನ ಅರಿವಿನ ಪ್ರಗತಿಗಾಗಿ ಬ್ರಿಟನ್ ರೋಜರ್ ಪೆನ್ರೋಸ್, ಜರ್ಮನಿಯ ರೀನ್ಹಾರ್ಡ್ ಜೆನ್ಜೆಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಂಡ್ರಿಯಾ ಘೆಜ್ ಅವರಿಗೆ ಘೋಷಿಸಲಾಗಿತ್ತು.

No comments:

Advertisement