My Blog List

Monday, October 19, 2020

ದುರ್ಗಾ ಪೂಜಾ ಪಂಡಾಲ್‌ಗಳಿಗೆ ವೀಕ್ಷಕರಿಗೆ ಪ್ರವೇಶವಿಲ್ಲ: ಕಲ್ಕತ್ತ ಹೈ ಆದೇಶ

 ದುರ್ಗಾ ಪೂಜಾ ಪಂಡಾಲ್ಗಳಿಗೆ ವೀಕ್ಷಕರಿಗೆ ಪ್ರವೇಶವಿಲ್ಲ: ಕಲ್ಕತ್ತ ಹೈ ಆದೇಶ

ಕೋಲ್ಕತ: ಕೋವಿಡ್ -೧೯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಎಲ್ಲಾ ದುರ್ಗಾ ಪೂಜಾ ಪಂಡಾಲ್ಗಳನ್ನು ವಾಸ್ತವಿಕವಾಗಿ ಪ್ರವೇಶವಿಲ್ಲದ ವಲಯ ಎಂದು ಕಲ್ಕತ್ತ ಹೈಕೋರ್ಟ್ 2020 ಅಕ್ಟೋಬರ್ 19ರ ಸೋಮವಾರ ಘೋಷಿಸಿತು.

ಕೊರೋನಾವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಪಂಡಾಲ್ಗಳಿಗೆ ವೀಕ್ಷಕರ ಪ್ರವೇಶವನ್ನು ಹೈಕೋರ್ಟ್ ನಿಷೇಧಿಸಿತು. ಸಂಘಟಕರು ಮಾತ್ರ ಪಂಡಾಲ್ಗಳನ್ನು ಪ್ರವೇಶಿಸಬಹುದು. ಪ್ರವೇಶಾನುಮತಿ ಇರುವ ವ್ಯಕ್ತಿಗಳ ಹೆಸರನ್ನು ಪಂಡಾಲ್ ಹೊರಭಾಗದಲ್ಲಿ ಪ್ರದರ್ಶಿಸಬೇಕು ಎಂದೂ ಹೈಕೋರ್ಟ್ ಆಜ್ಞಾಪಿಸಿತು.

ಮಂಗಳವಾರದಿಂದ ಪ್ರಾರಂಭವಾಗುವ ಐದು ದಿನಗಳ ಸುದೀರ್ಘ ದುರ್ಗಾ ಪೂಜಾ ಹಬ್ಬ ಆಚರಣೆಯ ಉತ್ಸಾಹದಲ್ಲಿ ಜನರು ಇದ್ದ ವೇಳೆಯಲ್ಲೇ ಹೈಕೋರ್ಟಿನಿಂದ ಆದೇಶ ಬಂದಿತು.

,೯೮೩ ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ದಾಖ .೨೧ ಲಕ್ಷಕ್ಕೆ ತಲುಪಿದೆ. ಹೊಸದಾಗಿ ೬೪ ಮಂದಿ ಸಾವನ್ನಪ್ಪುವುದರೊಂದಿಗೆ ರಾಜ್ಯದಲ್ಲಿ ಕೊರೋನಾವೈರಸ್ಸಿಗೆ ಸಾವನ್ನಪ್ಪಿದವರ ಸಂಖ್ಯೆ ,೦೦೦ ಗಡಿ ದಾಟಿದೆ.

ಪಶ್ಚಿಮ ಬಂಗಾಳದಲ್ಲಿ, ದುರ್ಗಾ ಪೂಜೆಯನ್ನು ರಾಜ್ಯ ಸರ್ಕಾರದ ಹೆಚ್ಚಿನ ಭಾಗವಹಿಸುವಿಕೆಯೊಂದಿಗೆ ಭವ್ಯವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಸುಮಾರು ೩೭,೦೦೦ ಪಂಡಾಲ್ಗಳನ್ನು ಸ್ಥಾಪಿಸಲಾಗುತ್ತದೆ. ದುರ್ಗಾ ಪೂಜೆಯು ರಾಜ್ಯದಲ್ಲಿ ಆರ್ಥಿಕ ಉತ್ಕರ್ಷವನ್ನೂ ತರುತ್ತದೆ.

ರಾಜ್ಯದ ಎಲ್ಲ ದುರ್ಗಾ ಪೂಜಾ ಪಂಡಾಲ್ಗಳನ್ನೂ ಪ್ರವೇಶ ರಹಿತ ವಲಯಗಳು ಎಂಬುದಾಗಿ ಘೋಷಿಸುವಂತೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ಪಶ್ಚಿಮ ಬಂಗಾಳ ಆಡಳಿತಕ್ಕೆ ನಿರ್ದೇಶನ ನೀಡಿತು.

ಪಂಡಾಲ್ಗಳ ಒಳಗೆ ೨೫ ಕ್ಕೂ ಹೆಚ್ಚು ಪೂಜಾ ಸಂಘಟಕರಿಗೆ ಅನುಮತಿ ನೀಡಲಾಗುವುದಿಲ್ಲ ಮತ್ತು ಹೆಸರುಗಳನ್ನು ಪಂಡಾಲ್ಗಳ ಹೊರಗೆ ಫಲಕದಲ್ಲಿ ಪ್ರದರ್ಶಿಸಬೇಕು ಎಂದು ಹೈಕೋರ್ಟ್ ಹೇಳಿದೆ.

ದೊಡ್ಡ ಪೂಜೆಗಳಿಗೆ ಪಂಡಾಲ್ಗಳಿಗಿಂತ ೧೦ ಮೀಟರ್ ದೂರದಿಂದಲೇ ಪ್ರವೇಶ ನಿರ್ಬಂಧಿಸಲಾಗಿದ್ದರೆ, ಸಣ್ಣ ಪೂಜೆಗಳಿಗೆ ಮೀಟರ್ ದೂರದಿಂದಲೇ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಎಲ್ಲ ಪೂಜಾ ಸಮಿತಿಗಳೂ ಗುರುತಿಸಲಾದ ಸ್ಥಳಗಳಲ್ಲಿ ನೋ ಎಂಟ್ರಿ ಫಲಕಗಳನ್ನು ಪ್ರದರ್ಶಿಸಬೇಕು. ಲಕ್ಷ್ಮಿ ಪೂಜೆಯ ನಾಲ್ಕೂ ದಿನಗಳಲ್ಲಿ ರಾಜ್ಯ ಸರ್ಕಾರವು ಆದೇಶದ ಅನುಸರಣೆ ಬಗ್ಗೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಆಜ್ಞಾಪಿಸಿದೆ.

ವಾರದಿಂದ ಪ್ರಾರಂಭವಾಗುವ ಐದು ದಿನಗಳ ಉತ್ಸವಗಳಲ್ಲಿ ರಾಜ್ಯದ ಕೋವಿಡ್ -೧೯ ಪರಿಸ್ಥಿತಿ ಮತ್ತು ಲಕ್ಷಾಂತರ ಪಂಡಾಲ್-ಹಾಪ್ಪರ್ಗಳ ಮೂಲಕ ಸೋಂಕು ಹರಡುವ ಸಾಧ್ಯತೆಯ ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿದ ಹೈಕೋರ್ಟ್ ವಿಭಾಗೀಯ ಪೀಠವು ಆದೇಶವನ್ನು ನೀಡಿತು.

ಕೋಲ್ಕತದಲ್ಲಿ ಜನಸಮೂಹವು ಸಾಮಾಜಿಕ ಅಂತರ ಪಾಲನೆಯನ್ನು ನಿರ್ಲಕ್ಷಿಸಿ ದೊಡ್ಡ ಪ್ರಮಾಣದಲ್ಲಿ ಪಂಡಾಲ್ಗಳಿಗೆ ಭೇಟಿ ನೀಡಲು ಟಿಕೆಟ್ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಮೊದಲ ದಿನವೇ ನ್ಯಾಯಾಲಯ ನಿರ್ದೇಶನ ನೀಡಿತು.

ಉತ್ಸವದ ಕೊನೆಯ ನಾಲ್ಕು ದಿನಗಳಲ್ಲಿ ಜನಸಂದಣಿ ತಡೆಗಟ್ಟುವ ಸಲುವಾಗಿ ತೃತೀಯಾದಿಂದ ಪಂಡಾಲ್ಗಳಿಗೆ ಭೇಟಿ ನೀಡಬಹುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳೆದ ವಾರ ಹೇಳಿದ್ದರು.

ಪೊಲೀಸ್ ಮತ್ತು ಸಾರ್ವಜನಿಕ ಹಿತಾಕ್ತಿ ಸುಧಾರಣಾ ಕೆಲಸಗಳಿಗೆ ಮತ್ತು ಸಮುದಾಯ ಪೋಲಿಸಿಂಗ್ನಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು ದುರ್ಗಾ ಪೂಜಾ ಕ್ಲಬ್ಗಳಿಗೆ ನೀಡಿದ ಹಣಕಾಸಿನ ನೆರವನ್ನು ಬಳಸುವಂತೆ ನ್ಯಾಯಾಲಯ ಕಳೆದ ವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಹಣವನ್ನು ಮುಖಗವಸು, ಸ್ಯಾನಿಟೈಜರ್ ಇತ್ಯಾದಿಗಳ ಸಂಗ್ರಹಕ್ಕಾಗಿ ಬಳಸಬೇಕು, ಹೊರತು ಪೂಜಾ ಚಟುವಟಿಕೆಗಳಿಗಾಗಿ ಅಥವಾ ಸಂಘಟಕರಿಗೆ ಮನರಂಜನೆಗಾಗಿ ಅಲ್ಲ ಎಂದೂ ನ್ಯಾಯಾಲಯ ಸೂಚಿಸಿತ್ತು.

ದುರ್ಗಾ ಪೂಜಾ ಸಮಿತಿಗಳಿಗೆ ೫೦,೦೦೦ ರೂ. ದೇಣಿಗೆ ನೀಡಿದ್ದಕ್ಕೆ ಸಮರ್ಥನೆ ನೀಡುವಂತೆ ಮತ್ತು ಈದ್ನಂತಹ ಇತರ ಸಂದರ್ಭಗಳಲ್ಲಿ ರಾಜ್ಯ ಸರ್ಕಾರವು ಇದೇ ರೀತಿಯ ನೆರವು ನೀಡಿದೆಯೇ ಎಂಬುದಾಗಿ ವಿವರಣೆ ನೀಡುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಹೇಳಿತ್ತು.

No comments:

Advertisement