My Blog List

Thursday, December 24, 2020

ತಮಿಳುನಾಡು ರಾಜಕೀಯ ಸಸ್ಪೆನ್ಸ್ : ಅಳಗಿರಿ ಸೇರ್ಪಡೆ

 ತಮಿಳುನಾಡು ರಾಜಕೀಯ ಸಸ್ಪೆನ್ಸ್ :  ಅಳಗಿರಿ ಸೇರ್ಪಡೆ

ಚೆನ್ನೈ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ತಮಿಳುನಾಡಿನ ರಾಜಕೀಯದಲ್ಲಿಸಂಶಯಾತ್ಮಕ ನಡೆಅನುಸರಿಸುತ್ತಿರುವ ಚಿತ್ರನಟ ರಜನಿಕಾಂತ್ ಅವರ ಜೊತೆಗೆ ಡಿಎಂಕೆ ಮಾಜಿ ಮುಖಂಡ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ. ಅಳಗಿರಿ ಕೂಡಾಸಸ್ಪನ್ಸ್ ಬ್ಯಾಂಡ್ ವ್ಯಾಗನ್ಸೇರಿಕೊಂಡಿದ್ದಾರೆ.

ಬೆಂಬಲಿಗರು ಬಯಸಿದರೆ ಪಕ್ಷವನ್ನು ಪ್ರಾರಂಭಿಸುತ್ತೇವೆಎಂದು ಅಳಗಿರಿ ಗುರುವಾರ ಪ್ರಕಟಿಸಿದ್ದು, ಹಲವಾರು ವರ್ಷಗಳ ಬಳಿಕ ಅಳಗಿರಿ ರಾಜಕೀಯಕ್ಕೆ ಮರಳುವ ಬಗ್ಗೆ ಸ್ವತಃ ಅವರ ಬೆಂಬಲಿಗರೂ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ರಜನೀಕಾಂತ್ ಅವರು ತಮ್ಮ ರಾಜಕೀಯ ಯೋಜನೆಗಳು ಹಾಗೂ ಮುಂದಿನ ನಡೆಯ ಬಗ್ಗೆ ತಮಿಳುನಾಡಿನ ಜನರನ್ನು ಊಹಾಪೋಹದಲ್ಲಿ ಇರಿಸಿದ್ದಾರೆ.

ಎರಡನೇ ಅವಧಿಯ ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಅಳಗಿರಿ 2020 ಡಿಸೆಂಬರ್ 24ರ ಗುರುವಾರ ಗೋಪಾಲಪುರಂನ ಕುಟುಂಬ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ದಯಾಳ ಅಮ್ಮಲ್ ಅವರನ್ನು ಭೇಟಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಳಗಿರಿ, ಜನವರಿ ರಂದು ತಮ್ಮ ಬೆಂಬಲಿಗರನ್ನು ಸಂಪರ್ಕಿಸಿ ಹೊಸ ಪಕ್ಷವನ್ನು ಪ್ರಾರಂಭಿಸುವ ಬಗ್ಗೆ ನಿರ್ಧರಿಸುತ್ತೇನೆ ಎಂದು ಹೇಳಿದರು.

"ನನ್ನ ಬೆಂಬಲಿಗರು ನಾನು ಹೊಸ ಪಕ್ಷವನ್ನು ಪ್ರಾರಂಭಿಸಲು ಬಯಸಿದರೆ, ನಾನು ಅದನ್ನು ಮಾಡುತ್ತೇನೆ ಆದರೆ ಡಿಎಂಕೆಯನ್ನು ಬೆಂಬಲಿಸುವುದಿಲ್ಲ. ಪಕ್ಷಕ್ಕೆ ಮತ್ತೆ ಸೇರಲು ನನ್ನನ್ನು ಡಿಎಂಕೆ ಆಹ್ವಾನಿಸಿಲ್ಲಎಂದು ಅವರು ನುಡಿದರು.

ನಟ ರಜನಿಕಾಂತ್ ಅವರನ್ನು ಭೇಟಿ ಮಾಡುವ ಬಗ್ಗೆ ಕೇಳಿದಾಗ,  ರಜನೀಕಾಂತ್ ಅವರುಅನ್ನತಿಚಿತ್ರದ ಚಿತ್ರೀಕರಣದಿಂದ ಹಿಂದಿರುಗುತ್ತಿದ್ದಾರೆ ಎಂದು ಮಾಧ್ಯಮಗಳಿಂದ ತಿಳಿದುಬಂದಿದೆಎಂದು ಅಳಗಿರಿ ಹೇಳಿದರು. "ಅವರು ಹೈದರಾಬಾದಿನಿಂದ ಹಿಂದಿರುಗಿದ ನಂತರ, ನಾನು ಅವರನ್ನು ಭೇಟಿ ಮಾಡುತ್ತೇನೆಎಂದು ಅಳಗಿರಿ ನುಡಿದರು.

ಹಿಂದೆ, ಕಿರಿಯ ಸಹೋದರ ಎಂ.ಕೆ. ಸ್ಟಾಲಿನ್ ಜೊತೆಗಿನ ಮುಖಾಮುಖಿಯ ಪರಿಣಾಮವಾಗಿ, ಅವರ ತಂದೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅವರನ್ನು ಮುನ್ನಡೆಸಿದ ಪಕ್ಷದಿಂದ ಅಳಗಿರಿ ಹೊರಹಾಕಲು ಕಾರಣವಾಗಿತ್ತು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ತಳವೂರಲು ಯತ್ನಿಸುತ್ತಿರುವ ಭಾರತೀಯ ಜನತಾ ಪಕ್ಷವು ಅಳಗಿರಿ ಅವರನ್ನು ತನ್ನತ್ತ ಸೆಳೆದುಕೊಳ್ಳಲು ತೀವ್ರ ಯತ್ನ ನಡೆಸುತ್ತಿದೆ.

ಅಲಗಿರಿ ಅವರು ಡಿಎಂಕೆಯಿಂದ ಉಚ್ಚಾಟಿಸಲ್ಪಡುವವರೆಗೆ, ಪಕ್ಷದ ದಕ್ಷಿಣದ ಪ್ರಬಲ ನಾಯಕರಾಗಿದ್ದರು. ಉತ್ತುಂಗದ ಕಾಲದಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಯೋಜನೆ, ಚುನಾವಣಾ ಹೊಂದಾಣಿಕೆಗಳು ಸೇರಿದಂತೆ ಪಕ್ಷದ ಪ್ರಮುಖ ನಿರ್ಧಾರಗಳ ಮೇಲೆ ಅಳಗಿರಿ ಅವರ ಪ್ರಭಾವ ಇರುತ್ತಿತ್ತು.

ಪಕ್ಷದೊಳಗಿನ ಹಲವಾರು ಮೂಲಗಳ ಪ್ರಕಾರ, ತಂದೆ, ಡಿಎಂಕೆಯ ಮಾಜಿ ಅಧ್ಯಕ್ಷ ಎಂ. ಕರುಣಾನಿಧಿ ಅವರ ಜೊತೆಗೆ ಹೆಚ್ಚಿದ ಕಿರಿಯ ಸಹೋದರನ ಆಪ್ತತೆ ಮತ್ತು ಪಕ್ಷದಲ್ಲಿ ಕ್ರಮೇಣ ಹೆಚ್ಚತೊಡಗಿದ ಅವರ ಪ್ರಭಾವ ಅಳಗಿರಿ ಅವರ ಭ್ರಮನಿರಸನಕ್ಕೆ ಕಾರಣವಾಯಿತು.

ಕರುಣಾನಿಧಿ ಅವರು ಡಿಎಂಕೆಯಲ್ಲಿ ಎಲ್ಲ ಅಧಿಕಾರವನ್ನು ಹೊಂದಿದ್ದಾಗಲೂ ಅಳಗಿರಿ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು. ೨೦೧೪ರ ಮಾರ್ಚ್ ತಿಂಗಳಲ್ಲಿ, ಆಗ ಪಕ್ಷದ ದಕ್ಷಿಣ ಸಾಂಸ್ಥಿಕ ಕಾರ್ಯದರ್ಶಿಯಾಗಿದ್ದ ಅಳಗಿರಿ ಅವರನ್ನು ವಜಾ ಮಾಡಲಾಗಿತ್ತು.

ಪಕ್ಷದ ಹೈಕಮಾಂಡ್ ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂದು ಅಳಗಿರಿ ಆರೋಪಿಸಿದ್ದರು. ಅಳಗಿರಿ ಅವರ ನಿವಾಸದಲ್ಲಿ ಮುಖಾಮುಖಿಯಾದ ನಂತರ ಕರುಣಾನಿಧಿಯವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ’ಅಲಗಿರಿ ಅವರಿಗೆ ಪಕ್ಷದಲ್ಲಿ ಸ್ಥಾನವಿಲ್ಲಎಂದು ಸ್ಪಷ್ಟವಾಗಿ ಹೇಳಿದ್ದರು.

ಕರುಣಾನಿಧಿಯವರ ಮರಣದ ನಂತರ ಅಳಗಿರಿ ಅವರು ಡಿಎಂಕೆ ಒಳಗೆ ಪ್ರಕ್ಷುಬ್ಧತೆ ಉಂಟುಮಾಡಲು ಪ್ರಯತ್ನಿಸಿದ್ದರು ಆದರೆ ಪಕ್ಷವು ಎಂ.ಕೆ. ಸ್ಟಾಲಿನ್ ಅವರ ಪರವಾಗಿ ನಿಂತಿತ್ತು.

No comments:

Advertisement