My Blog List

Saturday, December 26, 2020

ಕೃಷಿ ಕಾಯಿದೆ ವಿವಾದ: ಎನ್‌ಡಿಎ ತೊರೆದ ಆರ್‌ಎಲ್‌ಪಿ

 ಕೃಷಿ ಕಾಯಿದೆ ವಿವಾದ: ಎನ್‌ಡಿಎ ತೊರೆದ ಆರ್‌ಎಲ್‌ಪಿ

ಜೈಪುರ: ನೂತನ ಕೃಷಿ-ಮಾರುಕಟ್ಟೆ ಕಾನೂನುಗಳ ಬಗ್ಗೆ ನಡೆಯುತ್ತಿರುವ ಬೃಹತ್ ರೈತ ಆಂದೋಲನದ ಮಧ್ಯೆ ರಾಜಸ್ಥಾನದಲ್ಲಿ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್‌ಡಿಎ) ಅಂಗ ಪಕ್ಷವಾಗಿ ಬಿಜೆಪಿಯ ಏಕೈಕ ಮಿತ್ರ ಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್‌ಎಲ್‌ಪಿ) 2020 ಡಿಸೆಂಬರ್ 26ರ ಶನಿವಾರ ಮೈತ್ರಿಕೂಟದಿಂದ ಹೊರನಡೆಯಿತು.

ಕೃಷಿ ಸುಧಾರಣಾ ಕಾಯ್ದೆಗಳ ಹಿನ್ನೆಲೆಯಲ್ಲಿ ಶಿರೋಮಣಿ ಅಕಾಲಿದಳ ಹೊರಗೆ ಬಂದ ಬಳಿಕ ಅದನ್ನು ಅನುಸರಿಸಿದ ಎನ್‌ಡಿಎಯ ಎರಡನೇ ಮಿತ್ರ ಪಕ್ಷ ಇದಾಗಿದೆ.

ಎನ್‌ಡಿಎ ತ್ಯಜಿಸುವ ನಿರ್ಧಾರವನ್ನು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಆರ್‌ಎಲ್‌ಪಿ ನಾಯಕ, ನಾಗೌರ್ ಸಂಸತ್ ಸದಸ್ಯ ಹನುಮಾನ್ ಬೆನಿವಾಲ್ ಅವರು ತಮ್ಮ ಪಕ್ಷವು "ಫೆವಿಕೋಲ್ ಹಚ್ಚಿಕೊಂಡು ಮೈತ್ರಿಗೆ ಅಂಟಿಕೊಂಡಿಲ್ಲ" ಎಂದು ಹೇಳಿದರು.

ವಿವಾದಾತ್ಮಕ ಕಾನೂನುಗಳನ್ನು ಕೇಂದ್ರವು ಹಿಂತೆಗೆದುಕೊಳ್ಳದಿದ್ದರೆ ಲೋಕಸಭೆಗೆ ರಾಜೀನಾಮೆ ನೀಡುತ್ತೇನೆ ಎಂದೂ ಬೆನಿವಾಲ್ ಹೇಳಿದರು.

"ನಾನು ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಎನ್‌ಡಿಎಎಯನ್ನು ತೊರೆದಿದ್ದೇನೆ. ಕಾನೂನುಗಳು ರೈತ ವಿರೋದಿಯಾಗಿವೆ. ನಾನು ಎನ್‌ಡಿಎಯನ್ನು ತೊರೆದಿದ್ದೇನೆ, ಆದರೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬೆನಿವಾಲ್ ಅವರನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಇದಕ್ಕೂ ಮುನ್ನ ಶನಿವಾರ ಬೆನಿವಾಲ್ ಅವರು ಜೈಪುರ ಬಳಿ ತಮ್ಮದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಿದ ಸಾವಿರಾರು ರೈತರೊಂದಿಗೆ ಸೇರಿಕೊಂಡರು.

ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮರುಪರಿಶೀಲಿಸುವುದಾಗಿ ಬೆದರಿಕೆ ಹಾಕಿದ್ದ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹಿಂದೆ ಬಗ್ಗೆ ಪತ್ರ ಬರೆದಿದ್ದರು.

ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಅವರು ವಾರ ಮೂರು ಸಂಸದೀಯ ಸಮಿತಿಗಳಿಂದಲೂ ಹೊರಬಂದಿದ್ದರು.

ಬೆನಿವಾಲ್ ಅವರು ಕೈಗಾರಿಕೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಗಳ ಸಂಸದೀಯ ಸಮಿತಿಗಳ ಸದಸ್ಯರಾಗಿದ್ದರು; ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ; ಮತ್ತು ಅರ್ಜಿಗಳ ಸಂಸದೀಯ ಸಮಿತಿಗಳ ಸದಸ್ಯರಾಗಿದ್ದರು.

No comments:

Advertisement