ಪ್ರಧಾನಿ, ಮುಖ್ಯಮಂತ್ರಿಗಳಿಗೆ ೨ ನೇ ಸುತ್ತಿನಲ್ಲಿ ಕೋವಿಡ್ ಲಸಿಕೆ ?
ನವದೆಹಲಿ: ಎರಡನೇ ಸುತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿಗಗಳಿಗೆ ಕೋವಿಡ್ -೧೯ ವಿರುದ್ಧ ಲಸಿಕೆ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
೫೦ ವರ್ಷಕ್ಕಿಂತ ಮೇಲ್ಪಟ್ಟ ಇತರ ರಾಜಕಾರಣಿಗಳ ಸರದಿ ಮುಂದಿನ ಹಂತದಲ್ಲಿ ಬರಲಿದೆ ಎಂದು ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಿ ಹೇಳಿದರು.
ಹೆಲ್ತ್ಕೇರ್ ಮತ್ತು ಮುಂಚೂಣಿ ಕಾರ್ಯಕರ್ತರಾದ ಪೋಲಿಸ್,
ಸಶಸ್ತ್ರ ಪಡೆ ಮತ್ತು ಪೌರ ಕಾರ್ಮಿಕ ನಂತರ,
ಲಸಿಕೆ ಹಾಕುವ ಮೂರನೇ ವರ್ಗವು ೫೦ ವರ್ಷಕ್ಕಿಂತ ಮೇಲ್ಪಟ್ಟವರಾಗಿರಬಹುದು,
ನಂತರ ಸಹ ಕಾಯಿಲೆಗಳಿಂದ ಬಳಲುತ್ತಿರುವ ೫೦
ಕ್ಕಿಂತ ಕಡಿಮೆ ವಯಸ್ಸಿನವರಿಗೆ ಚಚ್ಚುಮದ್ದು ನೀಡಲಾಗುವುದು.
ನವೆಂಬರ್
೨೪ ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯ ಮುಖ್ಯಮಂತ್ರಿಗಳ ನಡುವಣ ಸಭೆಯಲ್ಲಿ ಲಸಿಕೆ ಅಭಿಯಾನಕ್ಕೆ ತಾತ್ಕಾಲಿಕ
ಆದ್ಯತೆಯ ಬಗ್ಗೆ ಚರ್ಚಿಸಲಾಗಿತ್ತು ಮತ್ತು ರಾಜ್ಯ ಸರ್ಕಾರಗಳಿಗೆ ಆ ಬಗ್ಗೆ ತಿಳಿಸಲಾಗಿತ್ತು ಎಂದು ವರದಿಗಳು
ತಿಳಿಸಿವೆ.
೫೦
ವರ್ಷ ಮತ್ತು ಹೆಚ್ಚು ವಯಸ್ಸಿನ ಸಮೂಹಗಳಿಗೆ
ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಮೊದಲ ವರ್ಗವನ್ನು ವಿಸ್ತರಿಸಲಾಗಿದೆ. ಈವರೆಗೆ ಸರ್ಕಾರಿ
ಅಧಿಕಾರಿಗಳು ಇದ್ದ ಈ ವರ್ಗದಲ್ಲಿ ‘ಹಿರಿಯ ನಾಗರಿಕರು’
ಮತ್ತು ’ವೃದ್ಧರು’ ಸೇರಿದ್ದಾರೆಂದು ಹೇಳಲಾಗಿತ್ತು ಮತ್ತು ಈ ಗುಂಪು ೬೫
ವರ್ಷಕ್ಕಿಂತ ಮೇಲ್ಪಟ್ಟ ಜನರನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು.
No comments:
Post a Comment