ಪಿಎಂಎವೈ ಯೋಜನೆಯಡಿ ೧.೬೮ ಲಕ್ಷ ಮನೆ
ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (ಪಿಎಂಎವೈ) ನಗರ ಪ್ರದೇಶಗಳಲ್ಲಿ ೧.೬೮ ಲಕ್ಷಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 2021 ಜನವರಿ 21ರ ಗುರುವಾರ ಅನುಮೋದನೆ ನೀಡಿತು.
ಕೇಂದ್ರ ಅನುಮೋದನೆ ಮತ್ತು ನಿರ್ವಹಣಾ ಸಮಿತಿ (ಸಿಎಸ್ಎಂಸಿ)
ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರದ ವಸತಿ ಮತ್ತು ನಗರ
ವ್ಯವಹಾರಗಳ ಸಚಿವಾಲಯ ತಿಳಿಸಿತು.
ಸಭೆಯಲ್ಲಿ ೧೪ ರಾಜ್ಯಗಳ ಮತ್ತು
ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪಿಎಂಎವೈ-ಯು ಅಡಿಯಲ್ಲಿ ಇದುವರೆಗೆ ೪೧ ಲಕ್ಷ ಮನೆಗಳು ಪೂರ್ಣಗೊಂಡಿದ್ದು, ೭೦ ಲಕ್ಷಕ್ಕೂ ಹೆಚ್ಚು ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದು ಸಚಿವಾಲಯ ತಿಳಿಸಿತು.
ಪಿಎಂಎವೈ (ನಗರ) ಅಡಿಯಲ್ಲಿ ಕೇಂದ್ರ ಮಂಜೂರು ಮತ್ತು ನಿರ್ವಹಣಾ ಸಮಿತಿ (ಸಿಎಸ್ಎಂಸಿ)
ಸಭೆಯಲ್ಲಿ ೧,೬೮,೬೦೬ ಹೊಸ
ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು
ಜೂನ್ ೨೦೧೫ರಲ್ಲಿ ಪ್ರಾರಂಭಿಸಿದ ಪಿಎಂಎವೈ (ಯು) ಯೋಜನೆ
೨೦೨೨ರ ವೇಳೆಗೆ ಎಲ್ಲರಿಗೂ ವಸತಿ ಕಲ್ಪಿಸುವ ಗುರಿಯನ್ನು ಹೊಂದಿದೆ. ೨೦೧೫ರಿಂದ ೨೦೨೨ರವರೆಗೆ ಏಳು ವರ್ಷಗಳ ಅವಧಿಯಲ್ಲಿ ದೇಶದ ನಗರ ಪ್ರದೇಶಗಳಲ್ಲಿ ೧.೧೨ ಕೋಟಿ
ಮನೆಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು
ಸಚಿವಾಲಯ ತಿಳಿಸಿತು.
No comments:
Post a Comment