My Blog List

Saturday, July 9, 2022

ಇಂದಿನ ಇತಿಹಾಸ History Today ಜುಲೈ 09

 ಇಂದಿನ ಇತಿಹಾಸ  History Today ಜುಲೈ 09  

2022: ಕೊಲಂಬೊ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಜನರ ಆಕ್ರೋಶದ ಕಟ್ಟೆ ಒಡೆದಿದ್ದು, ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು 2022 ಜುಲೈ o9ರ ಶನಿವಾರ  ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇಉದ್ರಿಕ್ತರ ಗುಂಪು ಅವರ ನಿವಾಸದ ಮೇಲೆ ದಾಳಿ ನಡೆಸಿಬೆಂಕಿ ಹಚ್ಚಿತು. ಇದಕ್ಕೆ ಉದ್ರಿಕ್ತ ಪ್ರತಿಭಟನಕಾರರು ಭಾರೀ ಸಂಖ್ಯೆಯಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಷೆ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡಿದ್ದು, ಈ ಘಟನೆಗೂ ಮುಂಚಿತವಾಗಿಯೇ ಗೊಟಬಯ ಅವರು ರಹಸ್ಯವಾಗಿ ಮನೆ ಬಿಟ್ಟು ತೆರಳಿದ್ದರು ಎಂದು ವರದಿಗಳು ಹೇಳಿವೆ. ಅಧ್ಯಕ್ಷರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆದೊಯ್ಯಲಾಗಿದೆ ಎಂದು ವರದಿಗಳು ಹೇಳಿದವು. ಈ ಘಟನೆಯ ಬಳಿಕ ನಾಗರಿಕರ ಸುರಕ್ಷತೆ ಮತ್ತು ಸರ್ವ ಪಕ್ಷಗಳ ಸರ್ಕಾರಕ್ಕೆ ದಾರಿ ಮಾಡಿಕೊಡುವ ಉದ್ದೇಶದಿಂದ ಪಕ್ಷದ ನಾಯಕರ ಅತ್ಯುತ್ತಮ ಶಿಫಾರಸನ್ನು ಅಂಗೀಕರಿಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ರಾನಿಲ್ ವಿಕ್ರಮಸಿಂಘೆ ಹೇಳಿದ್ದರು.

2020: ನವದೆಹಲಿಭಾರತದ ಆರ್ಥಿಕತೆಯು ಚೇತರಿಕೆಯ "ಹಸಿರು ಚಿಗುರುಗಳನ್ನುನೋಡಲಾರಂಭಿಸಿದೆ ಮತ್ತು ದೇಶವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಜುಲೈ 09ರ ಗುರುವಾರ ಹೇಳಿದರು.೨೦೨೦ರ ಇಂಡಿಯಾ ಗ್ಲೋಬಲ್ ವೀಕ್ ಸಮಾವೇಶದ ಉದ್ಘಾಟನಾ ಸಮಾರಂವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ’ವಿಶ್ವವು ಕೋವಿಡ್-೧೯ ಸಾಂಕ್ರಾಮಿಕ ರೋಗದ ಜೊತೆಗೆ ಹೋರಾಡುತ್ತಿರುವ  ಹೊತ್ತಿನಲ್ಲಿ ಪುನರುಜ್ಜೀವನದ ಬಗ್ಗೆ ಮಾತನಾಡುವುದು ಅತ್ಯಂತ ಪ್ರಸ್ತುತವಾಗುತ್ತದೆಸಹಜ ಮತ್ತು ಜಾಗತಿಕ ಪುನರುಜ್ಜೀವನದ ಕಥೆಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು. "ಅಸಾಧ್ಯವೆಂದು ನಂಬಿದ್ದನ್ನು ಸಾಧಿಸುವ ಮನೋಭಾವ ಭಾರತೀಯರಿಗೆ ಇದೆಆರ್ಥಿಕ ಚೇತರಿಕೆಯ ವಿಚಾರಕ್ಕೆ  ಬಂದಾಗ ಭಾರತದಲ್ಲಿ ನಾವು ಈಗಾಗಲೇ ಹಸಿರು ಚಿಗುರುಗಳನ್ನು ನೋಡುತ್ತಿದ್ದೇವೆ ಎಂಬುದರಲ್ಲಿ ಆಶ್ಚರ್ಯವಿಲ್ಲ’ ಎಂದು ಮೋದಿ ನುಡಿದರು.ಭಾರತವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಹೇಳಿದರು."ಎಲ್ಲ್ಲ ಜಾಗತಿಕ ಕಂಪೆನಿಗಳು ಭಾರತದಲ್ಲಿ ಬಂದು ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ನಾವು ಕೆಂಪುಹಾಸನ್ನು ಹೊದಿಸುತ್ತಿದ್ದೇವೆಭಾರತವು ಇಂದು ನೀಡುತ್ತಿರುವಂತಹ ಅವಕಾಶಗಳನ್ನು ಕೆಲವೇ ಕೆಲವು ದೇಶಗಳು ನೀಡುತ್ತವೆಎಂದು ಅವರು ಹೇಳಿದರುಭಾರತದ ವಿವಿಧ ಸೂರ್ಯೋದಯ ಕ್ಷೇತ್ರಗಳಲ್ಲಿ ಹಲವು ಸಾಧ್ಯತೆಗಳು ಮತ್ತು ಅವಕಾಶಗಳಿವೆ ಎಂದು ಮೋದಿ ಹೇಳಿದರು. "ಕೃಷಿಯಲ್ಲಿನ ನಮ್ಮ ಸುಧಾರಣೆಗಳು ಶೇಖರಣಾ ಮತ್ತು ಸಾಗಣೆಯಲ್ಲಿ ಹೂಡಿಕೆ ಮಾಡಲು ಬಹಳ ಆಕರ್ಷಕ  ಅವಕಾಶವನ್ನು ಒದಗಿಸುತ್ತದೆಎಂದು ಮೋದಿ ನುಡಿದರುಕೊರೊನಾವೈರಸ್ ಉಲ್ಬಣದ ಮಧ್ಯೆ ಜನರ ಆರೋಗ್ಯವನ್ನು ಸುಧಾರಿಸುವತ್ತ ಮಾತ್ರವೇ ಅಲ್ಲಆರ್ಥಿಕತೆಯ ಆರೋಗ್ಯದ ಬಗ್ಗೆಯೂ ತಮ್ಮ ಸರ್ಕಾರ ಗಮನ ಹರಿಸುತ್ತಿದೆ’ ಎಂದು ಪ್ರಧಾನಿ ಒತ್ತಿ ಹೇಳಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ಬೀಜಿಂಗ್ನೈಜ ನಿಯಂತ್ರಣ ರೇಖೆಯಿಂದ (ಎಲ್ಎಸಿಹಿಂದೆ ಸರಿಯುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾದ ಭದ್ರತಾಪಡೆಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದ್ದುಪರಿಸ್ಥಿತಿ ಸುಧಾರಿಸುತ್ತಿದೆ ಹಿನ್ನೆಲೆಯಲ್ಲಿ ಮುಂದಿನ ಸುತ್ತಿನ ಸಭೆ ಶೀಘ್ರವೇ ನಡೆಯಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ 2020 ಜುಲೈ 09ರ ಗುರುವಾರ ಹೇಳಿದರು. ಎಲ್ಎಸಿಯಿಂದ ತ್ವರಿತವಾಗಿ ಹಿಂದೆ ಸರಿಯಲು ಎರಡೂ ದೇಶಗಳ ಭದ್ರತಾಪಡೆಗಳು ಸಮ್ಮತಿಸಿದ ನಂತರ ಪೂರ್ವ ಲಡಾಖ್ ಗಡಿಯಲ್ಲಿನ ಉದ್ಭವಿಸಿದ್ದ ಪ್ರಕ್ಷುಬ್ಧ ಸ್ಥಿತಿ ತಿಳಿಯಾಗುತ್ತಿದೆ’ ಎಂದು ಅವರು ಹೇಳಿದರು. ಉಭಯ ದೇಶಗಳ ನಡುವೆ ಮಾತುಕತೆ ಮುಂದುವರಿಯುವುದುಮಿಲಿಟರಿ ಅಧಿಕಾರಿಗಳ ಮಟ್ಟದಲ್ಲಿರಾಜತಾಂತ್ರಿಕ ಮಾರ್ಗಗಳ ಮೂಲಕ  ಮಾತುಕತೆ ನಡೆಯಲಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. "ಕಮಾಂಡರ್ ಮಟ್ಟದ ಮಾತುಕತೆಯುಚೀನಾಭಾರತದ ಗಡಿ ಪಡೆಗಳು ಗಲ್ವಾನ್ ಕಣಿವೆ ಮತ್ತು ಇತರ ಪ್ರದೇಶಗಳಲ್ಲಿ ವಾಪಸಾಗಲು ಸಹಾಯಕವಾಗುವ ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಂಡಿವೆ’ ಎಂದು ಲಿಜಿಯಾನ್ ಹೇಳಿದರು.‘ಗಡಿಯುದ್ದಕ್ಕೂ ಪರಿಸ್ಥಿತಿ ಸ್ಥಿರವಾಗಿದೆ ಮತ್ತು ಸುಧಾರಿಸುತ್ತಿದೆಗಡಿ ವ್ಯವಹಾರಗಳ ಕುರಿತು ಡಬ್ಲ್ಯುಎಂಎಂಸಿಯ (ಸಭೆ ನಡೆಸುವುದು ಸೇರಿದಂತೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಉಭಯ ಪಕ್ಷಗಳು ಸಂವಾದ ಮತ್ತು ಸಂವಹನವನ್ನು ಮುಂದುವರೆಸಲಿವೆ’ ಎಂದು ಅವರು ಹೇಳಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿಮಹಾರಾಷ್ಟ್ರತಮಿಳುನಾಡುದೆಹಲಿಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ ಎಂಟು ರಾಜ್ಯಗಳು ದೇಶದಲ್ಲಿನ ಸಕ್ರಿಯ ಕೋವಿಡ್-೧೯ ಪ್ರಕರಣಗಳ ಶೇಕಡಾ ೯೦ನ್ನು ಹೊಂದಿವೆ ಮತ್ತು ಸಕ್ರಿಯ ಜಿಲ್ಲೆಗಳಲ್ಲಿ ಶೇಕಡಾ ೮೦ರಷ್ಟು ಪ್ರಕರಣಗಳು ೪೯ ಜಿಲ್ಲೆಗಳಿಂದ ವರದಿಯಾಗಿದೆ ಎಂದು ಕೋವಿಡ್ -೧೯ಕ್ಕೆ ಸಂಬಂಧಿಸಿದ ಸಚಿವರ ಗುಂಪು (ಗೋಮ್2020 ಜುಲೈ 09ರ ಗುರುವಾರ ಮಾಹಿತಿ ನೀಡಿದೆಇದಲ್ಲದೆಮಹಾರಾಷ್ಟ್ರದೆಹಲಿಗುಜರಾತ್ತಮಿಳುನಾಡುಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ -   ಆರು ರಾಜ್ಯಗಳಲ್ಲಿ ಶೇಕಡಾ ೮೬ರಷ್ಟು ಕೋವಿಡ್-೧೯ ಸಾವುಗಳು ಸಂಭವಿಸಿವೆ ಮತ್ತು ೩೨ ಜಿಲ್ಲೆಗಳಲ್ಲಿ ಶೇಕಡಾ ೮೦ರಷ್ಟು ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯವು ಸರ್ಕಾರಕ್ಕೆ ತಿಳಿಸಿದೆಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ೧೮ ನೇ ಸಭೆ ನಡೆಸಿದ ಗೋಮ್ಹೆಚ್ಚಿನ ಕೋವಿಡ್ -೧೯ ಸಾವಿನ ಪ್ರಮಾಣವನ್ನು ತೋರಿಸುವ ಪ್ರದೇಶಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ ಎಂದು ತಿಳಿಸಿತುಭಾರತದಲ್ಲಿ ಪ್ರಸ್ತುತ ಕೋವಿಡ್ -೧೯ ಸ್ಥಾನಮಾನದ ಬಗ್ಗೆ ಗೋಮ್ ಸರ್ಕಾರಕ್ಕೆ ವಿವರಣೆ ನೀಡಿತು."ಸಾಂಕ್ರಾಮಿಕದ ಅತಿ ಬಾಧಿತ ಐದು ದೇಶಗಳ ನಡುವಿನ ಜಾಗತಿಕ ಹೋಲಿಕೆಯನ್ನು ವಿವರಿಸಿದ ಸಚಿವರ ಗುಂಪುಭಾರತವು ಪ್ರತಿ ೧೦ ಲಕ್ಷ (ಮಿಲಿಯನ್ಜನಸಂಖ್ಯೆಗೆ ಕೇವಲ ೫೩೮ ಪ್ರಕರಣಗಳು ಮತ್ತು ಹತ್ತು ಲಕ್ಷಕ್ಕೆ  (ಮಿಲಿಯನ್)ಗೆ ಕೇವಲ ೧೫ ಸಾವುಗಳನ್ನು ದಾಖಲಿಸಿದೆಇದು ಜಾಗತಿಕ ಸರಾಸರಿ ,೪೫೩ ಮತ್ತು ೬೮. ಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿತು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿನೈಜ ನಿಯಂತ್ರಣ ರೇಖೆಯಲ್ಲಿನ ಸೇನಾ ಪಡೆಗಳ ವಾಪಸಾತಿ ಪ್ರಕ್ರಿಯೆಯನ್ನು ಇನ್ನಷ್ಟು ಮುಂದಕ್ಕೆ ಒಯ್ಯುವ ಸಲುವಾಗಿ ಭಾರತ ಮತ್ತು ಚೀನಾ ಮುಂದಿನ ವಾರ ಹೊಸ ಸುತ್ತಿನ ಮಾತುಕತೆ ನಡೆಸಲಿದೆ ಎಂದು ಸರ್ಕಾರೀ ಮೂಲಗಳು 2020 ಜುಲೈ 09ರ ಗುರುವಾರ ತಿಳಿಸಿವೆಲೆಹ್ ನೆಲೆಯ ೧೪ ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಮತ್ತು ಚೀನಾದ ತತ್ಸಮಾನ ಅಧಿಕಾರಿ ಪಶ್ಚಿಮ ಥಿಯೇಟರ್ ಕಮಾಂಡ್ ಚೀಫ್ ಲೆಫ್ಟಿನೆಂಟ್ ಜನರಲ್ ಕ್ಷು ಕ್ವಿಲಿಂಗ್ ಅವರು ಮುಂದಿನ ವಾರದ ಆದಿಯಲ್ಲಿ  ಹೊಸ ಸುತ್ತಿನ ಮಾತುಕತೆಗಳನ್ನು ನಡೆಸಲು ಸಭೆ ಸೇರಲಿದ್ದಾರೆ ಎಂದು ಮೂಲಗಳು ಹೇಳಿದವುಜೂನ್ ೩೦ರ ಒಪ್ಪಂದದಲ್ಲಿ ಗಲ್ವಾನ್ ಕಣಿವೆಯಲ್ಲಿನ ನೈಜ ನಿಯಂತ್ರಣ ರೇಖೆಯ ಪ್ರದೇಶದ ಮೇಲಿನ ಚೀನೀ ಹಕ್ಕನ್ನು ಒಪ್ಪಿಕೊಳ್ಳಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ರಾಜಕೀಯ ವಾಕ್ಸಮರದ ಮಧ್ಯೆ ಹೊಸ ಮಾತುಕತೆಗೆ ಸಿದ್ಧತೆ ಆರಂಭವಾಗಿದೆಗಲ್ವಾನ್ ಕಣಿವೆಯ ಸದರಿ ಸ್ಥಳದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ ಜೊತೆಗೆ ಸಂಭವಿಸಿದ ಘರ್ಷಣೆಯಲ್ಲಿ ಭಾರತದ ೨೦ ಮಂದಿ ಯೋಧರು ಹುತಾತ್ಮರಾಗಿದ್ದರು೧೯೬೭ರ ಬಳಿಕ ಉಭಯ ರಾಷ್ಟ್ರಗಳ ಮಧ್ಯೆ ನಡೆದ ಅತ್ಯಂತ ಭೀಕರ ಘರ್ಷಣೆ ಇದಾಗಿತ್ತು.ಒಪ್ಪಂದವು ಉಭಯ ಸೇನೆಗಳನ್ನು ಭೌತಿಕವಾಗಿ ಆಕ್ರಮಿಸಿಕೊಳ್ಳಲಾಗಿದ್ದ ಸ್ಥಳಗಳಿಂದ ಒಂದು ಕಿಲೊ ಮೀಟರಿನಷ್ಟು ಹಿಂದಕ್ಕೆ ಸಾಗುವುದಕ್ಕೆ ಮಾತ್ರವೇ ಸಂಬಂಧಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆಘರ್ಷಣೆಯ ಸ್ಥಳಗಳಿಂದ ಪಡೆಗಳ ವಾಪಸಾತಿ ಕ್ರಮವು ಉಭಯ ಸೇನೆಗಳ ನಡುವಣ ಹಿಂಸಾಚಾರದ ಅಪಾಯವನ್ನು ತಗ್ಗಿಸುವ ಉದ್ದೇಶದ್ದಾಗಿದೆ ಮತ್ತು ಎಲ್ ಎಸಿ ಬಗ್ಗೆ ಉಭಯ ರಾಷ್ಟ್ರಗಳು ಮಾಡುತ್ತಿರುವ ಹಕ್ಕು ಪ್ರತಿಪಾದನೆಗಳನ್ನು ಪೂರ್ವಾಗ್ರಹದಿಂದ ಹೊರತಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆಗಲ್ವಾನ್ ನಲ್ಲಿ ಸಂಭವಿಸಿದ ಘಟನೆಯ ಸರಿ ಮತ್ತು ತಪ್ಪುಗಳ ವಿಚಾರವು  ಮಾತುಕತೆಗಳ ವಿಷಯವಾಗಿರಲಿಲ್ಲಯಾವುದೇ ಹೊಸ ಘರ್ಷಣೆ ಅಥವಾ ಹಿಂಸಾಚಾರ ಸಂಭವಿಸಿದಂತೆ ತಡೆಯುವ ಸೀಮಿತ ಉದ್ದೇಶ ಮಾತ್ರ  ಮಾತುಕತೆಯ ಹಿಂದಿತ್ತು ಎಂದು ಅವರು ನುಡಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿಭಾರತದ ಕೋವಿಡ್-೧೯ ಚೇತರಿಕೆ ಪ್ರಮಾಣವು ಭರವಸೆದಾಯಕ ಶೇಕಡಾ ೬೨.೦೯ಕ್ಕೆ ಜಿಗಿದಿದೆವೈರಲ್ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳ ಸಂಖ್ಯೆ ದೇಶದ ಕೊರೋನವೈರಸ್ ರೋಗಿಗಳ ಸಂಖ್ಯೆಯನ್ನು ಮೀರಿಸಿದೆ ಎಂದು ಕೇಂದ್ರ ಸರ್ಕಾರವು 2020 ಜುಲೈ 09ರ ಗುರುವಾರ ತಿಳಿಸಿತು.  ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆಯು ಕೋವಿಡ್-೧೯ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ,೦೬,೫೮೮ರಷ್ಟು ಸಂಖ್ಯೆಯಿಂದ ಹಿಂದಕ್ಕೆ ತಳ್ಳಿದೆಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ ಪ್ರಸ್ತುತ ಸಕ್ರಿಯ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯಿಂದ .೭೫ ಪಟ್ಟು (ಸುಮಾರು ಎರಡು ಪಟ್ಟುಹೆಚ್ಚು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿದವು. ದೇಶದ ಕೋವಿಡ್-೧೯ ಪ್ರಕರಣಗಳು ಮತ್ತು ಸಾವುಗಳು ಪ್ರತಿ ದಶಲಕ್ಷ (ಮಿಲಿಯನ್ಜನಸಂಖ್ಯೆಗೆ ಹೋಲಿಸಿದರೆ ಭಾರತದಲ್ಲಿ ಅತ್ಯಂತ ಕಡಿಮೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗುರುವಾರ ತಿಳಿಸಿತು. ಸುಧಾರಿತ ಚೇತರಿಕೆ ಪ್ರಮಾಣವು ಕೋವಿಡ್-೧೯ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ರಾಷ್ಟ್ರಕ್ಕೆ ಒಳ್ಳೆಯ ಸುದ್ದಿಯಾಗಿದ್ದರೂವೈರಲ್ ಕಾಯಿಲೆಯ ದೈನಂದಿನ ಪ್ರಕರಣಗಳ ಸಂಖ್ಯೆಯು ಪ್ರತಿದಿನ ೨೪,೦೦೦ ಹೊಸ ಕೋವಿಡ್ -೧೯ ಪ್ರಕರಣಗಳೊಂದಿಗೆ ಅಪಾಯಕಾರಿ ಪ್ರವೃತ್ತಿಯನ್ನು ದಾಖಲಿಸಿದೆಕಳೆದ ಕೆಲವು ವಾರಗಳಲ್ಲಿ ಹಲವಾರು ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗಲು ದೇಶಾದ್ಯಂತ ಪರೀಕ್ಷೆಯನ್ನು ಹೆಚ್ಚಿಸಿದ್ದು ಕಾರಣವಾಗಿದೆ. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಜುಲೈ 09  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Advertisement