Thursday, August 4, 2022

ಇಂದಿನ ಇತಿಹಾಸ History Today ಆಗಸ್ಟ್‌ 04

 ಇಂದಿನ ಇತಿಹಾಸ History Today ಆಗಸ್ಟ್‌ 04

2022: ಪಿಂಗ್‌ಟ್ಯಾನ್‌, ಚೀನಾ: ಅಮೆರಿಕದ ಸಂಸತ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ತೈವಾನಿಗೆ ನೀಡಿದ ಭೇಟಿಯಿಂದ ವ್ಯಗ್ರಗೊಂಡು ಪ್ರತೀಕಾರಕ್ಕಿಳಿದಿರುವ ಚೀನಾ 2022 ಆಗಸ್ಟ್‌ 04ರ ಗುರುವಾರ ತೈವಾನ್‌ ದ್ವೀಪವನ್ನು ಗುರಿಯಾಗಿಸಿ ಸರಣಿ ಕ್ಷಿಪಣಿಗಳನ್ನು ಉಡಾಯಿಸಿತು. ಪ್ರಚೋದನೆ ನೀಡುವ ಅಮೆರಿಕ ತಕ್ಕಬೆಲೆ ತೆರಲಿದೆ’ ಎಂದು ಎಚ್ಚರಿಸಿದ್ದ ಚೀನಾ, ಆಗಸ್ಟ್‌ ೦೪ರಿಂದ ತೈವಾನ್‌ ಸುತ್ತಲೂ ಸೇನಾ ತಾಲೀಮು ಮತ್ತು ಕ್ಷಿಪಣಿ ಪ್ರಯೋಗ ನಡೆಸುವುದಾಗಿ ಘೋಷಿಸಿತ್ತು. ತೈವಾನ್‌ ಮತ್ತು ಅದರ ನೆರವಿಗೆ ಬರುವ ಮಿತ್ರ ದೇಶವನ್ನು ನೇರ ಗುರಿಯಾಗಿಸಿ ಡಾಂಗ್‌ ಫೆಂಗ್‌ ದರ್ಜೆಯ 11 ಖಂಡಾಂತರ ಕ್ಷಿಪಣಿಗಳನ್ನು ಸ್ಥಳೀಯ ಕಾಲಮಾನ ಮಧ್ಯಾಹ್ನ 1.56ರಿಂದ ಸಂಜೆ 4ರ ನಡುವೆ ಪ್ರಯೋಗಿಸಿತು. ತೈವಾನ್‌ ಭೂ ಪ್ರದೇಶಕ್ಕೆ ಅತೀ ಸನಿಹದಲ್ಲಿ ಜಪಾನ್‌ ಸಮುದ್ರದ ವಿಶೇಷ ಆರ್ಥಿಕ ವಲಯದ ಮೇಲೆ ಈ ಕ್ಷಿಪಣಿಗಳು ಬಿದ್ದವು. ನೀರಿನೊಳಗಿನಿಂದಲೂ 500 ಕಿ.ಮೀ ದೂರದ ಗುರಿ ಭೇದಿಸುವ ಈ ಕ್ಷಿಪಣಿಗಳು ತೈವಾನಿನ ಈಶಾನ್ಯ ಮತ್ತು ನೈಋತ್ಯ ದಿಕ್ಕನ್ನೂ ತಲುಪಿವೆ ಎಂದು ಚೀನಾ ಸೇನೆ ಹೇಳಿತು. ಕ್ಷಿಪಣಿಗಳ ನಿಖರತೆ ಮತ್ತು ಸಾಮರ್ಥ್ಯ ಪರೀಕ್ಷಿಸುವುದು ಮತ್ತು ಶತ್ರು ಪ್ರವೇಶ ತಡೆಯುವುದು ಅಥವಾ ಆ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುವ ಗುರಿ ಈ ಪ್ರಯೋಗದ ಉದ್ದೇಶವಾಗಿತ್ತು. ನಿರೀಕ್ಷಿತ ಫಲಿತಾಂಶ ಸಿಕ್ಕಿದೆ’ ಎಂದು ಚೀನಾ ಹೇಳಿತು. ಯುದ್ಧ ವಿಮಾನಗಳು, ಸಮರ ನೌಕೆಗಳನ್ನು ನಿಯೋಜಿಸುವ ಮೂಲಕ ತೈವಾನ್‌ ಸುತ್ತಲೂ ದಿಗ್ಬಂಧನ ವಿಧಿಸುವಂತೆ ಅತಿ ದೊಡ್ಡ ಸೇನಾ ತಾಲೀಮನ್ನೂ ಚೀನಾ ನಡೆಸಿತು. “ಚೀನಾ ಒಂದರ ಹಿಂದೆ ಒಂದರಂತೆ 11 ಕ್ಷಿಪಣಿಗಳನ್ನು ಉಡಾಯಿಸಿದೆ. ಇದು ಪ್ರಾದೇಶಿಕ ಶಾಂತಿ– ಸ್ಥಿರತೆಗೆ ಧಕ್ಕೆ ತರಲಿದೆ. ಇದು ಖಂಡನೀಯ’ ಎಂದು ತೈವಾನ್‌ ಪ್ರತಿಕ್ರಿಯಿಸಿತು. ಚೀನಾ ಯುದ್ಧ ವಿಮಾನಗಳು ಹಾರಾಟ ಆರಂಭಿಸುವುದಕ್ಕೂ ಮುನ್ನ ಗುರುವಾರ ನಸುಕಿನಲ್ಲಿ ತೈವಾನಿನ ವಾಯುಪಡೆ ಮಿರಾಜ್ 2000 ಮತ್ತು ಎಫ್ -5 ಫೈಟರ್ ಜೆಟ್‌ಗಳ ಹಾರಾಟ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದವು ಎಂದು ತೈವಾನ್ ಮಾಧ್ಯಮಗಳು ವರದಿ ಮಾಡಿದವು.

2020: ಮುಂಬೈ: ಮುಂಬೈಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದುಸಾಂತಾಕ್ರೂಜ್ ಪೂರ್ವ ಭಾಗದಲ್ಲಿ ಭಾರೀ ಮಳೆಗೆ ಮನೆಯೊಂದು 2020 ಆಗಸ್ಟ್ 04ರ ಮಂಗಳವಾರ ತೆರೆದ ಚರಂಡಿಗೆ ಕುಸಿದು ಅದರಲ್ಲಿದ್ದ ಒಬ್ಬ ಮಹಿಳೆ ಮತ್ತು ಇಬ್ಬರು ಬಾಲಕಿಯರು ಚರಂಡಿ ನೀರಿನಲ್ಲಿ ಕಣ್ಮರೆಯಾದರು. ಗುಂಪು ಮನೆಗಳ (ಚಾಲ್ಒಂದು ಭಾಗ ಕುಸಿದಾಗ ಒಟ್ಟು ನಾಲ್ವರು ಚರಂಡಿಗೆ ಬಿದ್ದರುಅವರ ಪೈಕಿ ಒಬ್ಬ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದುಆಕೆಯನ್ನು ವಿಎನ್ ದೇಸಾಯಿ ಆಸ್ಪತ್ರೆಗೆ ಸೇರಿಸಲಾಗಿದೆಆದರೆ ಒಬ್ಬ ಮಹಿಳೆ ಮತ್ತು ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದರುಬೆಳಗ್ಗೆ ೧೧.೩೩  ಸುಮಾರಿಗೆ ಮನೆಗಳು ಕುಸಿದಿದ್ದುಸಾಂತಕ್ರೂಜ್ ಪೂರ್ವದ ವಕೋಲಾ ನಾಲೆಯಲ್ಲಿ ಮಹಿಳೆ ಮತ್ತು ಇಬ್ಬರು ಬಾಲಕಿಯರಿಗಾಗಿ ಶೋಧ ಕಾರ್ಯಗಳು ಮುಂದುವರೆದವು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಚರಂಡಿಗೆ ಹೊಂದಿಕೊಂಡ ಎರಡು ಮನೆಗಳು ಕುಸಿದ ನಂತರ ಮಹಿಳೆ ಮತ್ತು ಮೂವರು ಬಾಲಕಿಯರು ಚರಂಡಿಗೆ ಬಿದ್ದರು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಅಯೋಧ್ಯೆಯಲ್ಲಿನ ಸರಯೂ ನದಿ ತೀರದಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ 2020 ಆಗಸ್ಟ್ ೫ರ ಬುಧವಾರ ಭೂಮಿ ಪೂಜೆ ನಡೆಯಲಿದ್ದು ಇಡೀ ದೇಗುಲ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆಇದೇ ವೇಳೆಯಲ್ಲಿ ರೂಪುಗೊಳ್ಳಲಿರುವ ಯೋಜಿತ ದೇವಾಲಯದ ಹೊರ ರಚನೆಯ ನೀಲನಕ್ಷೆಯನ್ನು ಸರ್ಕಾರ  2020 ಆಗಸ್ಟ್ 04ರ ಮಂಗಳವಾರ ಬಿಡುಗಡೆ ಮಾಡಿತು. ಗೋಪುರಗಳುಕಂಬಗಳು ಮತ್ತು ಗುಮ್ಮಟಗಳನ್ನು ಒಳಗೊಂಡ ಮೂರು ಅಂತಸ್ತಿನ ಭವ್ಯವಾದ ರಚನೆಯನ್ನು ಚಿತ್ರದಲ್ಲಿ ತೋರಿಸಲಾಗಿದೆಸದ್ಯದ ಯೋಜನೆಯ ಪ್ರಕಾರ ದೇಗುಲವು  ಮೊದಲು ರೂಪಿಸಿದ್ದಕ್ಕಿಂತಲೂ ಎರಡು ಪಟ್ಟು ದೊಡ್ಡದಾಗುವ ಸಾಧ್ಯತೆ ಇದೆಭೂ ವ್ಯಾಜ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ದೇಗುಲದ ಮೂಲ ಯೋಜನೆಯನ್ನು ಬದಲಿಸಿ ಹೊಸ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆದೇವಾಲಯವನ್ನು ನಾಗರ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗುತ್ತಿದೆಹೆಚ್ಚಿನ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ಎರಡು ಗುಮ್ಮಟಗಳ ಬದಲಿಗೆ ಈಗ ಐದು ಗುಮ್ಮಟಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.ಕಳೆದ ವರ್ಷ ಸುಪ್ರೀಂ ಕೋರ್ಟ್ ಅಯೋಧ್ಯೆಯ ಸ್ಥಳದಲ್ಲಿ ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ ನಂತರ ವಿನ್ಯಾಸವನ್ನು ಪುನರುಜ್ಜೀವನಗೊಳಿಸಲಾಯಿತುಅಯೋಧ್ಯೆಯಲ್ಲಿ ಹೊಸ ಮಸೀದಿ ನಿರ್ಮಿಸಲು ಐದು ಎಕರೆ ಜಾಗವನ್ನು ಮಂಜೂರು ಮಾಡುವಂತೆ ನ್ಯಾಯಾಲಯ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು(ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಅಯೋಧ್ಯೆ: ಅಯೋಧ್ಯೆಯು 2020 ಆಗಸ್ಟ್ ೫ರ ಬುಧವಾರ ರಾಮಮಂದಿರ ಶಿಲಾನ್ಯಾಸಕ್ಕಾಗಿ ಸಜ್ಜಾಗಿದ್ದು ಕಾರ್ಯಕ್ರಮಕ್ಕಾಗಿ ವ್ಯಾಪಕ ಸಿದ್ಧತೆಗಳನ್ನು ಮಾಡಲಾಗಿದೆಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆಯ ನಂತರ ಬೆಳ್ಳಿಯ ಇಟ್ಟಿಗೆಗಳನ್ನು ಸಾಂಕೇತಿಕವಾಗಿ ಇಡುವ ಮೂಲಕ ಭವ್ಯ ಮಂದಿರಕ್ಕೆ ಅಡಿಪಾಯ ಹಾಕಲಿದ್ದಾರೆದೇವಾಲಯಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ ನೃತ್ಯ ಗೋಪಾಲ ದಾಸ್ ಅವರು ೪೦ ಕೆಜಿ ಬೆಳ್ಳಿ ಇಟ್ಟಿಗೆಯನ್ನು ದಾನ ಮಾಡಿದ್ದಾರೆಪ್ರಧಾನಿಯವರು ಇದೇ ಇಟ್ಟಿಗೆಯನ್ನು ಬಳಸಲಿದ್ದಾರೆಏನಿದ್ದರೂಭೂಮಿ ಪೂಜೆಯ ನಂತರ ಇಟ್ಟಿಗೆಯನ್ನು ತೆಗೆಯಲಾಗುತ್ತದೆತಮಿಳುನಾಡಿನ ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿಗೆ ’ಶ್ರೀರಾಮನ ಲಕ್ಷ್ಮಣಸೀತೆಹನುಮಂತರ ಚಿತ್ರಗಳನ್ನು ಒಳಗೊಂಡ ಬೆಳ್ಳಿ ನಾಣ್ಯಗಳನ್ನು ಕಳುಹಿಸಿದ್ದಾರೆವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿದಿವಂಗತ ಅಧ್ಯಕ್ಷ ಅಶೋಕ ಸಿಂಘಾಲ್ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಅಶೋಕ ಸಿಂಘಾಲ್ ಪ್ರತಿಷ್ಠಾನದ ಪರವಾಗಿ ಜಯೇಂದ್ರ ಸರಸ್ವತಿ ಅವರು  ನಾಣ್ಯಗಳನ್ನು ಕಳುಹಿಸಿದ್ದಾರೆ ನಾಣ್ಯಗಳನ್ನು ಭೂಮಿ ಪೂಜೆಗೆ ಹಾಜರಾಗುವ ಸಂತರಿಗೆ ಬುಧವಾರ ವಿತರಿಸಲಾಗುವುದು(ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕವು ವಿನಾಶಕಾರಿ ವೇಗದಲ್ಲಿ ಸಾಗುತ್ತಿದ್ದುಲಸಿಕೆ ಪ್ರಯೋಗ ಇನ್ನೂ ತಡವಾಗುವ ಸಂಭವ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ 2020 ಆಗಸ್ಟ್  04ರ ಮಂಗಳವಾರ ತಿಳಿಸಿತು.  ಈವರೆಗೂ ವೈರಸ್ಸಿಗೆ ಯಾವುದೇ ನಿರ್ದಿಷ್ಟ ಔಷಧ ಅಥವಾ ಲಸಿಕೆ ಲಭ್ಯವಿಲ್ಲ’ ಎಂದು ಆರೋಗ್ಯ ಸಚಿವಾಲಯದ ರಾಜೇಶ ಭೂಷಣ್ ಹೇಳಿದರುಲಸಿಕೆಯ ಅಗತ್ಯವು ಅತ್ಯಂತ ತುರ್ತಿನದಾಗಿದೆಏಕೆಂದರೆ ಸಾಂಕ್ರಾಮಿಕವು ವಿನಾಶಕಾರಿ ವೇಗದಲ್ಲಿ ಸಾಗುತ್ತಿದೆಆದರೆ ಲಸಿಕೆ ತಯಾರಿಯು ಸಮಯ ತೆಗೆದುಕೊಳ್ಳುತ್ತದೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾ ನಿರ್ದೇಶಕ ಡಾಬಲರಾಮ ಭಾರ್ಗವ ಹೇಳಿದರುವಿಶ್ವದ ೧೪೧ ಸಂಸ್ಥೆಗಳು ೨೬ ಹಂತದ ಪ್ರಯೋಗಗಳಲ್ಲಿ ನಿರತವಾಗಿವೆಭಾರತದ ಮೂರು ಸಂಸ್ಥೆಗಳು ವಿವಿಧ ಹಂತಗಳ ಪ್ರಯೋಗ ನಡೆಸುತ್ತಿವೆ ಎಂದು ಅವರು ನುಡಿದರುವಿವಿಧ ಹಂತಗಳ ಪ್ರಯೋಗಕ್ಕೆ ಇತ್ತೀಚೆಗೆ ಆಕ್ಸ್‌ಫರ್ಡ್ ಲಸಿಕೆ ಸೇರ್ಪಡೆಯಾಗಿದೆಇದನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆಇದು ಹಂತ  ಮತ್ತು  ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದನೆ ಪಡೆದಿದದು೧೭ ತಾಣಗಳಲ್ಲಿ ಒಂದು ವಾರದೊಳಗೆ ಪ್ರಯೋಗಗಳು ಪ್ರಾರಂಭವಾಗಲಿವೆ ಎಂದು ಡಾ.ಭಾರ್ಗವ ಹೇಳಿದರು. "ಪ್ರಸ್ತುತ ಕ್ಷಣದಲ್ಲಿನಾವು ಮೂರು ಸಂಭಾವ್ಯ ಭಾರತೀಯ ಲಸಿಕೆಗಳನ್ನು ಹೊಂದಿದ್ದೇವೆಅವು ಕ್ಲಿನಿಕಲ್ ಪರೀಕ್ಷೆಯ ವಿವಿಧ ಹಂತಗಳಲ್ಲಿವೆ ಲಸಿಕೆಗಳುಭಾರತ್ ಬಯೋಟೆಕ್ ಲಸಿಕೆ ಮತ್ತು ಝೈಡಸ್ ಕ್ಯಾಡಿಲಾದ ಡಿಎನ್‌ಎ ಲಸಿಕೆ ಹಂತ  ಅನ್ನು ಪೂರ್ಣಗೊಳಿಸಿ,   ನೇ ಹಂತಕ್ಕೆ ಕಾಲಿಡುತ್ತಿವೆಮೂರನೆಯದು ಆಕ್ಸ್‌ಫರ್ಡ್ ಲಸಿಕೆ’ ಎಂದು ಅವರು ನುಡಿದರು(ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಲಕ್ನೋ: ಅಯೋಧ್ಯೆಯಲ್ಲಿ ಬುಧವಾರಕ್ಕೆ ನಿಗದಿಯಾಗಿರುವ ರಾಮ ಮಂದಿರ ಭೂಮಿ ಪೂಜೆ ಬಗ್ಗೆ ಬಿಜೆಪಿ ಸಹಿತವಾಗಿ ಹಲಡೆಗಳಿಂದ ಬಂದಿರುವ ಸಾಕಷ್ಟು ಟೀಕೆಗಳ ಬಳಿಕ 2020  ಆಗಸ್ಟ್  04ರ ಮಂಗಳವಾರ ಮೌನ ಮುರಿದಿರುವ ಕಾಂಗ್ರೆಸ್ಸಮಾರಂಭಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟ ಪಡಿಸಿತುಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ದೇವಾಲಯಕ್ಕಾಗಿ ಶಿಲಾನ್ಯಾಸ ಸಮಾರಂಭದ ಒಂದು ದಿ ಮುಂಚಿತವಾಗಿ ಟ್ವಿಟ್ಟರಿನಲ್ಲಿ ನೀಡಿದ ಹೇಳಿಕೆಯಲ್ಲಿಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಮ ಮಂದಿರದ ಭೂಮಿ ಪೂಜೆಯನ್ನು ‘ರಾಷ್ಟ್ರೀಯ ಏಕತೆಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಮ್ಮಿಳನದ ಸಂದರ್ಭ’ ಎಂಬುದಾಗಿ ಬಣ್ಣಿಸಿದರುಸರಳತೆಧೈರ್ಯಸಂಯಮತ್ಯಾಗಬದ್ಧತೆಗಳು ದೀನಬಂಧು ಭಗವಾನ್ ರಾಮ ಎಂಬ ಹೆಸರಿನ ಮೂಲತತ್ವರಾಮ ಎಲ್ಲರಲ್ಲೂ ಇದ್ದಾನೆರಾಮ ಎಲ್ಲರೊಂದಿಗೂ ಇದ್ದಾನೆರಾಮ ಮತ್ತು ಮಾತೆ ಸೀತಾ ಅವರ ಸಂದೇಶ ಮತ್ತು ಆಶೀರ್ವಾದದೊಂದಿಗೆರಾಮಲಾಲ ದೇವಾಲಯದ ಭೂಮಿಪೂಜೆಯು ರಾಷ್ಟ್ರೀಯ ಏಕತೆಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಮ್ಮಿಳನದ ಸಂದರ್ಭವಾಗಿದೆ’ ಎಂದು ಪ್ರಿಯಾಂಕಾ ಮಂಗಳವಾರ ಟ್ವೀಟಿನಲ್ಲಿ  ತಿಳಿಸಿದರುರಾಮಾಯಣವು ವಿಶ್ವದ ಸಂಸ್ಕೃತಿ ಮತ್ತು ಭಾರತೀಯ ಉಪಖಂಡದಲ್ಲಿ ಆಳವಾದ ಮತ್ತು ಅಳಿಸಲಾಗದ ಗುರುತು ಹೊಂದಿದೆಭಗವಾನ್ ರಾಮತಾಯಿ ಸೀತಾ ಮತ್ತು ರಾಮಾಯಣದ ಕಥೆ ಪ್ರಕಾಶ ಪುಂಜವಾಗಿ ಸಾವಿರಾರು ವರ್ಷಗಳಿಂದ ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ನೆನಪುಗಳಲ್ಲಿ ಬೆಳಗಿದೆಭಾರತೀಯ ಜನತೆ ರಾಮಾಯಣಧರ್ಮನೀತಿಕರ್ತವ್ಯತ್ಯಾಗಭವ್ಯಪ್ರೀತಿಶೌರ್ಯ ಮತ್ತು ಸೇವೆಯ ವಿಷಯಗಳಿಂದ ಪ್ರೇರಿತರಾಗಿದ್ದಾರೆಉತ್ತರದಿಂದ ದಕ್ಷಿಣಕ್ಕೆಪೂರ್ವದಿಂದ ಪಶ್ಚಿಮಕ್ಕೆರಾಮಕಥೆಯು ಅನೇಕ ರೂಪಗಳಲ್ಲಿ ಸ್ವಯಂ ವ್ಯಕ್ತವಾಗಿದೆಶ್ರೀಹರಿಯ ಅಸಂಖ್ಯಾತ ರೂಪಗಳಂತೆರಾಮಕಥಾ ಹರಿಕಥೆಯೂ ಅನಂತ’ ಎಂದು ಕಾಂಗ್ರೆಸ್ ನಾಯಕಿ ಬರೆದರು(ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಗುಜರಾತಿನ ಜುನಾಗಢ ಹಾಗೂ ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ ಪ್ರಾಂತ್ಯಗಳು ಎಂಬುದಾಗಿ ಬಿಂಬಿಸುವ ಪಾಕಿಸ್ತಾನದ ಹೊಸ ರಾಜಕೀಯ ನಕ್ಷೆಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ 2020 ಆಗಸ್ಟ್  04ರ ಮಂಗಳವಾರ ಅನಾವರಣಗೊಳಿಸಿದರು. "ಇದು ಪಾಕಿಸ್ತಾನದ ಇತಿಹಾಸದಲ್ಲಿ ಅತ್ಯಂತ ಚಾರಿತ್ರಿಕ ದಿನಎಂದು ಖಾನ್ ನಕ್ಷೆಗೆ ಸಚಿವ ಸಂಪುಟದ ಅನುಮೋದನೆ  ಪಡೆದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರುಭಾರತದ ವಿದೇಶಾಂಗ ಸಚಿವಾಲಯವು ಹೊಸ ನಕ್ಷೆಗೆ ಪ್ರತಿಕ್ರಿಯಿಸಿಲ್ಲಆದರೆ ಭಾರತೀಯ ಅಧಿಕಾರಿಯೊಬ್ಬರು ದಾಖಲೆ ಪ್ರಕಟಿಸಲು ಇಸ್ಲಾಮಾಬಾದ್ ಮಾಡಿದ ಪ್ರಯತ್ನವನ್ನು ’ಭೂಪಟ ಭ್ರಮೆ (ಕಾರ್ಟೊಗ್ರಾಫಿಕ್ ಹಾಲ್ಯುಸಿನೇಷನ್ಎಂದು ಬಣ್ಣಿಸಿದ್ದಾರೆಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತು ಹಾಕಿಹಿಂದಿನ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳೀತ ಪ್ರದೇಶಗಳಾಗಿ ವಿಭಜಿಸುವ ಶಾಸನವನ್ನು ಸಂಸತ್ತಿನಲ್ಲಿ ಭಾರತ ಸರ್ಕಾರ ಮಂಡಿಸಿದ ಮೊದಲ ವಾರ್ಷಿಕೋತ್ಸವದ ಒಂದು ದಿನ ಮುಂಚಿತವಾಗಿಭಾರತವನ್ನು ಚುಚ್ಚಲು ಇಮ್ರಾನ್ ಖಾನ್  ಕ್ರಮ ಕೈಗೊಂಡಿದ್ದಾರೆಮೊದಲ ವಾರ್ಷಿಕೋತ್ಸವದ ನೆನಪಿಗಾಗಿ ಇಮ್ರಾನ್ ಖಾನ್ ಅವರ ಸರ್ಕಾರವು ಈಗಾಗಲೇ ಕಾರ್ಯಕ್ರಮಗಳ ಸುದೀರ್ಘ ಪಟ್ಟಿಯನ್ನು ರೂಪಿಸಿದೆಅದರ ಪಾಲುದಾರರಾದ ಚೀನಾ ಮತ್ತು ಟರ್ಕಿಯಂತಹ ದೇಶಗಳಿಗೆ ಹೇಳಿಕೆಗಳನ್ನು ನೀಡುವಂತೆ ಅಥವಾ ಭಾರತವನ್ನು ಟೀಕಿಸುವ ಟ್ವೀಟ್ ಮಾಡುವಂತೆ ಪಾಕಿಸ್ತಾನ ಕೋರಿದೆ(ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಆಗಸ್ಟ್ 04 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Advertisement