Monday, June 10, 2024

ಮೂರನೇ ಅವಧಿ: ಪ್ರಧಾನಿ ಮೋದಿ ಮೊದಲ ಕೆಲಸ ಯಾವುದು?

 ಮೂರನೇ ಅವಧಿ: ಪ್ರಧಾನಿ ಮೋದಿ ಮೊದಲ ಕೆಲಸ ಯಾವುದು?

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2024 ಜೂನ್‌ 10ರ ಸೋಮವಾರ ತಮ್ಮ ಮೂರನೇ ಅಧಿಕಾರಾವಧಿಯ ಆಡಳಿತದ ಕಾರ್ಯಾರಂಭ ಮಾಡಿದರು. ಮೂರನೇ ಅವಧಿಯ ಪ್ರಧಾನಿಯಾಗಿ ಅವರು ಮೊತ್ತ ಮೊದಲಿಗೆ ಮಾಡಿದ ಕೆಲಸ ರೈತರಿಗೆ ನೀಡಲಾಗುತ್ತಿರುವ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ಬಿಡುಗಡೆಗೆ ಸಹಿ.

3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ನಿಧಿಯ 17ನೇ ಕಂತು ಬಿಡುಗಡೆಗೆ ಅಧಿಕಾರ ನೀಡುವ ಮೊದಲ ಕಡತಕ್ಕೆ ಸಹಿ ಹಾಕಿದರು. ಇದರಿಂದ 9.3 ಕೋಟಿ ರೈತರಿಗೆ ಅನುಕೂಲವಾಗಲಿದೆ ಮತ್ತು ಸುಮಾರು 20,000 ಕೋಟಿ ರೂ. ವಿತರಣೆಯಾಗಲಿದೆ.

ಪ್ರಧಾನಿಯವರು ಮಾಡಿದ ಮೊದಲ ಕೆಲಸದ ವಿಡಿಯೋ ಇಲ್ಲಿದೆ:

ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ತಮ್ಮ ನೂತನ ಸಚಿವ ಸಂಪುಟ ಸದಸ್ಯರೊಂದಿಗೆ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದ ಆವರಣದಲ್ಲಿ ಸಂಜೆ 7.15ಕ್ಕೆ ಆರಂಭವಾದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು. ಮೋದಿ ಅವರು ವೃಶ್ಚಿಕ ರಾಶಿಯಲ್ಲಿ 7.24 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದರು.

ಮೋದಿ ಪ್ರಮಾಣ ವಚನ ಸ್ವೀಕಾರ ತಕ್ಷಣವೇ ಬಿಜೆಪಿಯ ಉನ್ನತ ಸಹಾಯಕರಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಹಿಂದಿನ ಸರ್ಕಾರದಲ್ಲಿ  ಕ್ರಮವಾಗಿ ಅವರ ಕೊನೆಯ ಸರ್ಕಾರದಲ್ಲಿ ರಕ್ಷಣೆ, ಗೃಹ ಮತ್ತು ಸಾರಿಗೆ ಸಚಿವರಾಗಿದ್ದರು.

ಸರ್ಕಾರದ ಹೊಸ ತಂಡದಲ್ಲಿ 30 ಸಂಪುಟದರ್ಜೆ ಸಚಿವರು, 5 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 36 ರಾಜ್ಯ ಸಚಿವರು ಇದ್ದಾರೆ.

ಇವುಗಳನ್ನೂ ಓದಿ:
ನರೇಂದ್ರ ದಾಮೋದರದಾಸ್‌ ಮೋದಿ 3.0 ಯುಗಾರಂಭ
ಮೋದಿ 3.0 ಯುಗ: 5 ವರ್ಷಗಳ ಕಾರ್ಯಸೂಚಿ ಸಿದ್ಧ
ಮೋದಿ 3.0 ಆಡಳಿತ ಆರಂಭ: ನೆರೆ ರಾಷ್ಟ್ರಗಳಿಂದ ಯಾರು ಬರ್ತಿದ್ದಾರೆ?
ದೆಹಲಿ ಹಾರಾಟ ನಿಷೇಧ ವಲಯ, ಜೂನ್‌ 9ಕ್ಕೆ ಮೋದಿ ಪ್ರಮಾಣ
ಮೋದಿಗೆ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಲಿಖಿತ ಬೆಂಬಲ
ಪ್ರಧಾನಿ ಮೋದಿ ರಾಜೀನಾಮೆ, ಶನಿವಾರ ಪ್ರಮಾಣ ವಚನ?
ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?
ಕನ್ಯಾಕುಮಾರಿಯ ಧ್ಯಾನ: ಪ್ರಧಾನಿ ಮೋದಿ ಹೊಸ ಸಂಕಲ್ಪಗಳು
ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ ಎಸ್‌ಕೆಎಂ ಜಯಭೇರಿ

No comments:

Advertisement