ನೂರ್ ಖಾನ್ ವಾಯುನೆಲೆ ಮೇಲೆ ದಾಳಿ: ಕಡೆಗೂ ಒಪ್ಪಿದ ಶೆಹಬಾಜ್
ಚೆನಾಬ್ ನದಿ ನೀರು
ಹರಿವು ಬಂದ್
ನವದೆಹಲಿ:
2025ರ ಮೇ 10 ರಂದು ಭಾರತದ ಸಿಡಿತಲೆ (ಬ್ಯಾಲಿಸ್ಟಿಕ್) ಕ್ಷಿಪಣಿಗಳು ನೂರ್
ಖಾನ್ ವಾಯುನೆಲೆ ಮತ್ತು ಇತರ ತಾಣಗಳ ಮೇಲೆ ಅಪ್ಪಳಿಸಿವೆ ಎಂದು
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕಡೆಗೂ
ಒಪ್ಪಿಕೊಂಡಿದ್ದಾರೆ ಎಂದು ಜಿಯೋ ನ್ಯೂಸ್ ಮತ್ತು ಎಎನ್ ಐ ವರದಿ ಮಾಡಿವೆ.
ಪಾಕ್ ಪ್ರಧಾನಿಯ ಈ ಹೇಳಿಕೆಯು ಭಾರತದ ಸೇನಾ ಕಾರ್ಯಾಚರಣೆಯ
ವಿಷಯದಲ್ಲಿ ಪಾಕಿಸ್ತಾನದ ಸಾಮಾನ್ಯ ನಿರಾಕರಣೆಯ ನಿಲುವಿಗೆ ವಿರುದ್ಧವಾದ ಅಪರೂಪದ ಒಪ್ಪಿಗೆಯಾಗಿದೆ.
ದಾಳಿಗಳ ಬಗ್ಗೆ ವರದಿ ಮಾಡಲು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಬೆಳಗಿನ ಜಾವ 2:30 ರ ಸುಮಾರಿಗೆ ತನಗೆ ಕರೆ ಮಾಡಿದ್ದರು ಎಂದು ಹೇಳಿದ ಷರೀಪ್, ಪಾಕಿಸ್ತಾನದ ವಾಯುಪಡೆಯು ಸ್ಥಳೀಯ ತಂತ್ರಜ್ಞಾನ ಮತ್ತು ಚೀನೀ ಜೆಟ್‌ಗಳನ್ನು ಬಳಸಿರುವುದನ್ನು ಉಲ್ಲೇಖಿಸಿದರು. ಆದರೆ ಭಾರತದ ಕ್ಷಿಪಣಿಗಳು ತಮ್ಮ ಗುರಿಗಳಿಗೆ ಅಪ್ಪಳಿಸಿದವು ಎಂದು ದೃಢಪಡಿಸಿದರು. ೨೦೨೫ ಮೇ ೧೬ರ ಶುಕ್ರವಾರ ಪಾಕಿಸ್ತಾನ ಸ್ಮಾರಕದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಷರೀಫ್, "ಮೇ 10 ರಂದು ಬೆಳಗಿನ ಜಾವ 2:30 ರ ಸುಮಾರಿಗೆ ಜನರಲ್ ಸೈಯದ್ ಅಸಿಮ್ ಮುನೀರ್ ನನಗೆ ಸುರಕ್ಷಿತ ಮಾರ್ಗದಲ್ಲಿ ಕರೆ ಮಾಡಿ ಭಾರತದ ಸಿಡಿತಲೆ (ಬ್ಯಾಲಿಸ್ಟಿಕ್) ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರದೇಶಗಳನ್ನು ಹೊಡೆದಿವೆ ಎಂದು ತಿಳಿಸಿದರು. ನಮ್ಮ ವಾಯುಪಡೆಯು ನಮ್ಮ ದೇಶವನ್ನು ಉಳಿಸಲು ಸ್ವದೇಶಿ ತಂತ್ರಜ್ಞಾನವನ್ನು ಬಳಸಿತು ಮತ್ತು ಚೀನಾದ ಜೆಟ್‌ಗಳಲ್ಲಿ ಆಧುನಿಕ ಗ್ಯಾಜೆಟ್‌ಗಳು ಮತ್ತು ತಂತ್ರಜ್ಞಾನವನ್ನು ಸಹ ಬಳಸಿದರು" ಎಂದು ಶೆಹಬಾಜ್ ಅವರನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ.
ಏತನ್ಮಧ್ಯೆ,
ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ಸೇನಾ ಮುಖ್ಯಸ್ಥ ಜನರಲ್ ಅಸಿಮ್
ಮುನೀರ್ ಅವರು ಶೆಹಬಾಜ್ ಅವರನ್ನು ನಿದ್ದೆಯಿಂದ ಎಬ್ಬಿಸಿ ನೂರ್
ಖಾನ್ ವಾಯುನೆಲೆ ಮತ್ತು ಇತರ ಪ್ರಮುಖ ಸ್ಥಳಗಳನ್ನು ಹಿಂದೂಸ್ಥಾನ ಹೊಡೆದುಹಾಕಿದೆ ಎಂಬ ಸುದ್ದಿ
ನೀಡಿದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರಮುಖ ಸ್ಥಳಗಳ ಮೇಲೆ ಹಿಂದೂಸ್ಥಾನ ಕ್ಷಿಪಣಿ
ದಾಳಿ ನಡೆಸಿದೆ ಎಂಬ ಸುದ್ದಿಯೊಂದಿಗೆ ಅಸೀಮ್ ಮುನೀರ್ ಅವರು ತಮ್ಮನ್ನು ನಸುಕಿನ 2:30 ಕ್ಕೆ ಎಚ್ಚರಗೊಳಿಸಿದರು ಎಂದು ಶೆಹಬಾಜ್ ಒಪ್ಪಿಕೊಂಡಿದ್ದಾರೆ. ಅಂತಹ ಕರೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಿಖರತೆ ಮತ್ತು ಧೈರ್ಯವನ್ನು ಬಹಿರಂಗಪಡಿಸಿದೆ ಎಂದು ಮಾಳವಿಯಾ
ಅವರು ಟ್ವಿಟ್ಟರ್ ಸಂದೇಶದಲ್ಲಿ ಬರೆದಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಕ್ಕೆ ಪ್ರತಿಯಾಗಿ ನಿರ್ಣಾಯಕ ಕಾರ್ಯಾಚರಣೆ ನಡೆಸಿದ ಭಾರತ ಮೇ 7 ರಂದು ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿ ನಿಖರ ದಾಳಿ ನಡೆಸಿದವು. ಇದರಿಂದಾಗಿ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು
ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು.
ದಾಳಿಯ ನಂತರ,
ಪಾಕಿಸ್ತಾನವು ನಿಯಂತ್ರಣ ರೇಖೆ ಮತ್ತು ಜಮ್ಮು ಮತ್ತು
ಕಾಶ್ಮೀರದಾದ್ಯಂತ ಗಡಿಯಾಚೆಗಿನ ಶೆಲ್ ದಾಳಿಯೊಂದಿಗೆ ಪ್ರತೀಕಾರ ತೀರಿಸಿಕೊಂಡಿತು ಮತ್ತು ಗಡಿ
ಪ್ರದೇಶಗಳಲ್ಲಿ ಡ್ರೋನ್ ದಾಳಿಗೆ ಪ್ರಯತ್ನಿಸಿತು. ಇದಕ್ಕೆ ಉತ್ತರವಾಗಿ ಭಾರತವು ಸಂಘಟಿತ ನಿಖರ ದಾಳಿಯನ್ನು ಪ್ರಾರಂಭಿಸಿತು ಮತ್ತು
ಪಾಕಿಸ್ತಾನದ 11 ವಾಯುನೆಲೆಗಳಲ್ಲಿ ರಾಡಾರ್
ಮೂಲಸೌಕರ್ಯ,
ಸಂವಹನ ಕೇಂದ್ರಗಳು ಮತ್ತು ವಾಯುನೆಲೆಗಳನ್ನು ಹಾನಿಗೊಳಿಸಿತು. ಬಳಿಕ,
ಮೇ 10 ರಂದು, ಭಾರತ ಮತ್ತು ಪಾಕಿಸ್ತಾನದ ಮೊರೆಯ ಮೇರೆಗೆ ಕದನ ವಿರಾಮದ
ಘೋಷಣೆ ಮಾಡಲಾಗಿತ್ತು.
ಚೆನಾಬ್ ನದಿ ನೀರು ಬಂದ್
ಈ ಮಧ್ಯೆ, ಭಾರತವು ಚೆನಾಬ್ ನದಿಯ ಮೇಲಿನ ರಂಬನ್‌ನ ಬಾಗ್ಲಿಹಾರ್
ಜಲವಿದ್ಯುತ್ ಯೋಜನೆ ಅಣೆಕಟ್ಟಿನಿಂದ ಪಾಕಿಸ್ತಾನಕ್ಕೆ ಹರಿಯುವ ನೀರನ್ನು
ಸ್ಥಗಿತಗೊಳಿಸಿದೆ.
ಎಎನ್ ಐ ಹಂಚಿಕೊಂಡಿರುವ ವಿಡಿಯೋದಲ್ಲಿ ಅಣೆಕಟ್ಟಿನ ಒಂದು ದ್ವಾರವನ್ನು ಹೊರತು ಪಡಿಸಿ ಉಳಿದೆಲ್ಲ
ದ್ವಾರಗಳು ಬಂದ್ ಆಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.
ತಾಂತ್ರಿಕ ಕಾರಣದಿಂದ ಈ ಒಂದು ದ್ವಾರವನ್ನು ಇನ್ನೂ ತೆರೆದಿಡಲಾಗಿದೆ. ತಾಂತ್ರಿಕ ಸಮಸ್ಯೆ ಬಗೆ
ಹರಿದೊಡನೆ ಅದನ್ನೂ ಬಂದ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಇವುಗಳನ್ನೂ ಓದಿರಿ:
No comments:
Post a Comment