Saturday, May 31, 2025

ಭಾರತದ ‘ಹುಲಿ ಸಂರಕ್ಷಕ’ ವಾಲ್ಮೀಕ್ ಥಾಪರ್ ಇನ್ನಿಲ್ಲ

 ಭಾರತದ ‘ಹುಲಿ ಸಂರಕ್ಷಕ’ ವಾಲ್ಮೀಕ್ ಥಾಪರ್ ಇನ್ನಿಲ್ಲ

ವದೆಹಲಿ: ಭಾರತದ ಖ್ಯಾತ ʼಹುಲಿ ಸಂರಕ್ಷಕʼ ಮತ್ತು ಲೇಖಕ ವಾಲ್ಮೀಕ್ ಥಾಪರ್ ಅವರು 2025 ಮೇ 31ರ ಶನಿವಾರ ಬೆಳಗ್ಗೆ ದೆಹಲಿಯಲ್ಲಿ ನಿಧನರಾದರು. 1970 ರ ದಶಕದ ಮಧ್ಯಭಾಗದಿಂದ ಭಾರತದಲ್ಲಿ ಹುಲಿ ಸಂರಕ್ಷಣೆಯಲ್ಲಿ ಅವರು ಮುಂಚೂಣಿಯಲ್ಲಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 150 ಕ್ಕೂ ಹೆಚ್ಚು ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು.
ಆಫ್ರಿಕಾದ ಕುರಿತು ನಾಲ್ಕು ಪುಸ್ತಕಗಳನ್ನು ಒಳಗೊಂಡಂತೆ 32 ಪುಸ್ತಕಗಳನ್ನು ಥಾಪರ್ ಬರೆದಿದ್ದಾರೆ. 'ಲಿವಿಂಗ್ ವಿತ್ ಟೈಗರ್ಸ್', 'ದಿ ಸೀಕ್ರೆಟ್ ಲೈಫ್ ಆಫ್ ಟೈಗರ್ಸ್' ಅವುಗಳಲ್ಲಿ ಸೇರಿವೆ.
ಅವರ ಪ್ರಭಾವ ವ್ಯಾಪಕವಾಗಿತ್ತು, ಅವರು ರಾಜಸ್ಥಾನದಲ್ಲಿ ರಾಜ್ಯ ಸರ್ಕಾರದೊಂದಿಗೆ ಬಹುತೇಕ ಪ್ರತ್ಯೇಕವಾಗಿ ಕೆಲಸ ಮಾಡಿದರೂ, ಮಹಾರಾಷ್ಟ್ರದ ಪ್ರೀತಿಯ ತಡೋಬಾ-ಅಂಧಾರಿ ಟೈಗರ್ ರಿಸರ್ವ್‌ನಂತಹ ಇತರ ಉದ್ಯಾನವನಗಳ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು” ಎಂದು ಸ್ಯಾಂಕ್ಚುರಿ ನೇಚರ್ ಫೌಂಡೇಶನ್ ತಿಳಿಸಿದೆ.
"ಎಲ್ಲಾ ಪ್ರವಾಸೋದ್ಯಮವೂ ಕೆಟ್ಟ ಪ್ರವಾಸೋದ್ಯಮ ಎಂಬ ಮೂಢನಂಬಿಕೆಯ ದೃಷ್ಟಿಕೋನವನ್ನು ಥಾಪರ್ ತ್ಯಜಿಸಿದ್ದರು ಮತ್ತು ಉದ್ಯಾನವನಗಳು ಮತ್ತು ಜನರಿಗೆ ಪ್ರಯೋಜನವನ್ನು ನೀಡುವ ನವೀನ ಪ್ರವಾಸೋದ್ಯಮದ ಪ್ರಮುಖ ಪ್ರತಿಪಾದಕರಾಗಿದ್ದರು. ವಿಜ್ಞಾನಿಗಳು, ಕಾರ್ಯಕರ್ತರು, ಗ್ರಾಮ ಮುಖಂಡರು, ಅರಣ್ಯ ಅಧಿಕಾರಿಗಳು, ಅಧಿಕಾರಿಗಳು, ರಾಜಕಾರಣಿಗಳು ಮತ್ತು ಮುಕ್ತ ಪತ್ರಿಕಾ ಸೇರಿದಂತೆ ಸಮಾನ ಮನಸ್ಸಿನ ಜನರ ವಿವಿಧ ವಲಯಗಳ ಗುಂಪನ್ನು ಒಟ್ಟುಗೂಡಿಸುವ ಮೂಲಕ ಮಾತ್ರ ಇದೆಲ್ಲವೂ ಸಾಧ್ಯ ಎಂದು ಅವರು ದೃಢವಾಗಿ ನಂಬಿದ್ದರು" ಎಂದು ಫೌಂಡೇಶನ್ ಹೇಳಿದೆ.
ಅವರು ದೂರದರ್ಶನಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನಿರ್ಮಿಸಿದ್ದರು. ಭಾರತದ ಅತ್ಯಂತ ಗೌರವಾನ್ವಿತ ವನ್ಯಜೀವಿ ತಜ್ಞರು ಮತ್ತು ಸಂರಕ್ಷಣಾವಾದಿಗಳಲ್ಲಿ ಥಾಪರ್‌ ಒಬ್ಬರಾಗಿದ್ದರು. ಅವರು  ಬಿಬಿಸಿ, ಅನಿಮಲ್ ಪ್ಲಾನೆಟ್, ಡಿಸ್ಕವರಿ ಮತ್ತು ನ್ಯಾಷನಲ್ ಜಿಯಾಗ್ರಫಿಕ್‌ನಂತಹ ಮಾಧ್ಯಮಗಳಿಗೆ ಭಾರತದ ನೈಸರ್ಗಿಕ ಆವಾಸಸ್ಥಾನದ ಕುರಿತು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ನಿರೂಪಣೆ ಮಾಡಿದ್ದಾರೆ.
ವಾಲ್ಮೀಕ್ ಥಾಪರ್ ಬಾಂಬೆಯಲ್ಲಿ (ಈಗಿನ ಮುಂಬೈ) 1959 ರಲ್ಲಿ ʼಸೆಮಿನಾರ್ʼ ರಾಜಕೀಯ ಜರ್ನಲ್ ಸ್ಥಾಪಿಸಿದ್ದ ರೊಮೇಶ್ ಥಾಪರ್- ರಾಜ್ ದಂಪತಿಗೆ 1952ರಲ್ಲಿ ಜನಿಸಿದರು. ಪ್ರಸಿದ್ಧ ಭಾರತೀಯ ಇತಿಹಾಸಕಾರರಾದ ರೋಮಿಲಾ ಥಾಪರ್ ಅವರ ಚಿಕ್ಕಮ್ಮ.
ಅವರು ರಂಗಭೂಮಿ ಹಾಗೂ ಚಿತ್ರ ನಟಿ ಸಂಜನಾ ಕಪೂರ್ ಅವರನ್ನು ವಿವಾಹವಾದರು. ದಂಪತಿಗೆ ಹಮೀರ್ ಎಂಬ ಮಗನಿದ್ದಾನೆ. ಅವರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.
ಫತೇಹ್ ಸಿಂಗ್ ರಾಥೋಡ್ ಅವರಿಂದ ವಾಲ್ಮೀಕ್ ಥಾಪರ್ ಪ್ರಭಾವಿತರಾಗಿದ್ದರು.
ರಣಥಂಬೋರ್ ಪ್ರತಿಷ್ಠಾನದ ಅವರ ಉಸ್ತುವಾರಿಯನ್ನು ಗುರುತಿಸಿ, 2005ಲ್ಲಿ ಟೈಗರ್ ಟಾಸ್ಕ್ ಫೋರ್ಸ್‌ನ ಸದಸ್ಯರನ್ನಾಗಿ ಭಾರತ ಸರ್ಕಾರ ನೇಮಿಸಿತು. ಟಾಸ್ಕ್‌ ಫೋರ್ಸ್‌ ನೀಡಿದ ಬಹುಮತದ ತೀರ್ಪಿಗೆ ವಿರುದ್ಧವಾಗಿ ಅವರು ತಮ್ಮ ಭಿನ್ನಮತದ ಟಿಪ್ಪಣಿಯನ್ನು ಬರೆದಿದ್ದರು. ಬಳಿಕ 1973ರಲ್ಲಿ ಭಾರತ ಸರ್ಕಾರ ರಚಿಸಿದ್ದ ಪ್ರಾಜೆಕ್ಟ್‌ ಟೈಗರ್‌ ವಿಫಲಗೊಂಡದ್ದೇಕೆ ಎಂದು ವಿಶ್ಲೇಷಿಸುವ ಮೂಲಕ ಅವರು ಗಮನ ಸೆಳೆದಿದ್ದರು.
'ಮ್ಯಾಚ್ಲಿ' ಎಂಬ ಹೆಣ್ಣು ಹುಲಿಯೊಂದಿಗಿನ ಅವರ ಪ್ರಸಿದ್ಧ ಒಡನಾಟವು ಹಲವಡೆ ದಾಖಲಾಗಿದೆ. ಥಾಪರ್ ಅವರ ಅತ್ಯಂತ ಪ್ರೀತಿಯ ಹುಲಿಗಳನ್ನು ಬಿಬಿಸಿ ಸಾಕ್ಷ್ಯಚಿತ್ರ ʼಮೈ ಟೈಗರ್ ಫ್ಯಾಮಿಲಿʼ 👇ಎತ್ತಿ ತೋರಿಸಿತ್ತು.


ಕೆಳಗಿನದನ್ನೂ ಕ್ಲಿಕ್‌ ಮಾಡಿ ನೋಡಿರಿ

No comments:

Advertisement