ಬ್ರಹ್ಮೋಸ್ ದಾಳಿ: ಕಡೆಗೂ ಒಪ್ಪಿಕೊಂಡ ಪಾಕ್ ಪ್ರಧಾನಿ
ನವದೆಹಲಿ: ಭಾರತವು ಪಾಕಿಸ್ತಾನದ ಮೇಲೆ ಬ್ರಹೋಸ್ ಕ್ಷಿಪಣಿ
ದಾಳಿ ನಡೆಸಿದ್ದು ನಿಜ ಎಂಬುದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕಡೆಗೂ ಒಪ್ಪಿಕೊಂಡಿದ್ದಾರೆ.
ಅಜೆರ್ಬೈಜಾನ್‌ನಲ್ಲಿ 2025 ಮೇ 26ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷರೀಫ್, ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿಯನ್ನು ಒಪ್ಪಿಕೊಂಡರು.
ʼಪಾಕಿಸ್ತಾನದ ಸಶಸ್ತ್ರ ಪಡೆಗಳು
ಬೆಳಗಿನ ಪ್ರಾರ್ಥನೆಗೆ ಮುನ್ನ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿದ್ದವು, ಆದರೆ
ಅದು ಸಾಧ್ಯವಾಗುವ ಮೊದಲೇ ಪಾಕಿಸ್ತಾನದ ಹಲವಾರು ಪ್ರಾಂತ್ಯಗಳ ಮೇಲೆ ಬ್ರಹ್ಮೋಸ್ ಕ್ಷಿಪಣಿಗಳ ದಾಳಿ
ನಡೆದವುʼ ಎಂದು ಶೆಹಬಾಜ್ ಹೇಳಿದರು.
"ಮೇ 9-10ರ ರಾತ್ರಿ,
ನಾವು ಭಾರತದ ಆಕ್ರಮಣಕ್ಕೆ ವ್ಯವಸ್ಥಿತವಾಗಿ ಪ್ರತಿಕ್ರಿಯಿಸಲು ನಿರ್ಧರಿಸಿದ್ದೆವು. ಫಜ್ರ್ ಪ್ರಾರ್ಥನೆಯ
ನಂತರ ಬೆಳಿಗ್ಗೆ 4.30ಕ್ಕೆ ನಮ್ಮ ಸಶಸ್ತ್ರ ಪಡೆಗಳು ಪಾಠ ಕಲಿಸಲು ಸಿದ್ಧವಾಗಿದ್ದವು. ಆದರೆ ಆ ಗಂಟೆ ಬರುವ ಮೊದಲೇ, ಭಾರತ
ಮತ್ತೊಮ್ಮೆ ಬ್ರಹ್ಮೋಸ್ ಬಳಸಿ ಕ್ಷಿಪಣಿ ದಾಳಿ ನಡೆಸಿ, ರಾವಲ್ಪಿಂಡಿಯ ವಿಮಾನ ನಿಲ್ದಾಣ
ಸೇರಿದಂತೆ ಪಾಕಿಸ್ತಾನದ ವಿವಿಧ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡಿತು" ಎಂದು ಷರೀಫ್
ತಮ್ಮ ಭಾಷಣದಲ್ಲಿ ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಮೇ 7 ರಂದು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಪ್ರಾರಂಭಿಸಿತು, ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಒಂಬತ್ತು ಸ್ಥಳಗಳಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಯಮಲೋಕಕ್ಕೆ ಅಟ್ಟಿತ್ತು.
ಇದು ನಾಲ್ಕು ದಿನಗಳ ಘರ್ಷಣೆಗೆ ಕಾರಣವಾಯಿತು, ಉಭಯ ಕಡೆಗಳೂ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಬಳಸಿದವು. ಇದರಿಂದ ಸಂಪೂರ್ಣ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು.
ಮೇ 10 ರಂದು, ಭಾರತದ ಸೇನೆಯು ಅದೇ ದಿನದ ನಸುಕಿನಲ್ಲಿ ಹಲವಾರು ಮಿಲಿಟರಿ ಸೌಲಭ್ಯಗಳ ಮೇಲೆ ಪಾಕಿಸ್ತಾನ ನಡೆಸಿದ ವಿಫಲ ದಾಳಿಗೆ ಪ್ರತೀಕಾರವಾಗಿ ಮುರಿಯದ್ ಮತ್ತು ನೂರ್ ಖಾನ್ ವಾಯುನೆಲೆಗಳು ಸೇರಿದಂತೆ ಎಂಟು ಪಾಕಿಸ್ತಾನಿ ವಾಯುನೆಲೆಗಳ ಮೇಲೆ ದಾಳಿ ನಡೆಸಿತು.
ಭಾರತೀಯ ವಾಯುಪಡೆಯ ದಾಳಿಯ ಗುರಿಗಳಲ್ಲಿ ರನ್‌ವೇಗಳು, ಹ್ಯಾಂಗರ್‌ಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, ರಾಡಾರ್ ನೆಲೆಗಳು, ಕ್ಷಿಪಣಿ ತಾಣಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ಪ್ರದೇಶಗಳು ಸೇರಿದ್ದವು. ಆ ದಿನದ ನಂತರ ಪಾಕಿಸ್ತಾನದ ಮೊರೆಯನ್ನು ಅನುಸರಿಸಿ, ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದವು.
ಇವುಗಳನ್ನೂ
ಓದಿರಿ:
ಆಪರೇಷನ್ ಸಿಂಧೂರ- ಸೇನೆಯಿಂದ ಇನ್ನೊಂದು ವಿಡಿಯೋ ಬಿಡುಗಡೆ
ಆಪರೇಷನ್ ಸಿಂಧೂರ IN ತುಳು…
ಯೋಜನೆ, ತರಬೇತಿ, ಅನುಷ್ಠಾನ: ಸಂದಿತು ನ್ಯಾಯ
ನೂರ್ ಖಾನ್ ವಾಯುನೆಲೆ ಮೇಲೆ ದಾಳಿ: ಕಡೆಗೂ ಒಪ್ಪಿದ
ಶೆಹಬಾಜ್
ಪೆಹಲ್ಗಾಮ್ ನರಹಂತಕರು ಖತಮ್?
ಕೈ ಮುಗಿವೆ, ಯುದ್ದ ಬೇಡ ಎಂದದ್ದು ಏಕೆ ಗೊತ್ತಾ?
ಆಪರೇಷನ್ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ
ಸೀಮಿತ
"ಷರತ್ತುಬದ್ಧ" ಕದನ ವಿರಾಮ, ಸಿಂಧೂ ನೀರು ಹರಿಯುವುದಿಲ್ಲ
ಆಪರೇಷನ್ ಸಿಂಧೂರ್: ೩ನೇ ದಿನ ಏನೇನಾಯಿತು?
No comments:
Post a Comment