Monday, October 12, 2020

ಅಮೆರಿಕದ ಪಾಲ್, ರಾಬರ್ಟ್‌ಗೆ ಅರ್ಥಶಾಸ್ತ್ರ ನೊಬೆಲ್

 ಅಮೆರಿಕದ ಪಾಲ್, ರಾಬರ್ಟ್‌ಗೆ ಅರ್ಥಶಾಸ್ತ್ರ ನೊಬೆಲ್

ಸ್ಟಾಕ್ ಹೋಮ್: ಹರಾಜು ಸಿದ್ಧಾಂತದ ಸುಧಾರಣೆ ಮತ್ತು ಹೊಸ ಹರಾಜು ಸ್ವರೂಪಗಳ ಆವಿಷ್ಕಾರಗಳಿಗಾಗಿ ೨೦೨೦ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಅರ್ಥಶಾಸ್ತ್ರಜ್ಞರಾದ ಪಾಲ್ ಆರ್.ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ.ವಿಲ್ಸನ್ ಅವರು ಭಾಜನರಾಗಿದ್ದಾರೆ.

೨೦೨೦ ಅಕ್ಟೋಬರ್ ೧೨ ರ ಸೋಮವಾರ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್ ಗೋರನ್ ಕೆ. ಹ್ಯಾನ್ಸನ್ ಅವರು ಅರ್ಥಶಾಸ್ತ್ರ ಪ್ರಶಸ್ತಿಯನ್ನು ಘೋಷಿಸಿದ್ದು, ಅದನ್ನು ಟ್ವಿಟ್ಟರಿನಲ್ಲಿ ಪ್ರಕಟಿಸಲಾಯಿತು.

ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತರನ್ನು ಟ್ವಿಟ್ಟರಿನಲ್ಲಿ ಘೋಷಿಸಿರುವ ನೊಬೆಲ್ ಪ್ರಶಸ್ತಿ ಸಮಿತಿಯು, ಆಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ಥ ನೀಡಲಾಗುವ ೨೦೨೦ನೇ ಅರ್ಥಶಾಸ್ತ್ರದ ಸ್ವೆರಿಜಸ್ ರಿಕ್ಸ್ ಬ್ಯಾಂಕ್ ಪ್ರಶಸ್ತಿಗೆ ಪಾಲ್ ಆರ್. ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ.ವಿಲ್ಸನ್ ಅವರು ಪಾತ್ರರಾಗಿದ್ದಾರೆ ಎಂದು ಹೇಳಿತು.

ನಮ್ಮ ಅನುದಿನದ ಜೀವನದಲ್ಲಿ ಹರಾಜು ಒಂದು ಭಾಗವಾಗಿದೆ. ಹರಾಜು ಸಿದ್ಧಾಂತವನ್ನು ಸುಧಾರಿಸಿರುವ ಮತ್ತು ಹೊಸ ಹರಾಜು ಮಾದರಿಗಳನ್ನು ಅನ್ವೇಷಿಸಿರುವ ಅರ್ಥಶಾಸ್ತ್ರಜ್ಞರಾದ ಪಾಲ್ ಮಿಲ್ಗ್ರೋಮ್ ಮತ್ತು ರಾಬರ್ಟ್ ವಿಲ್ಸನ್ ಅವರು ಸಾಧನೆಗಾಗಿ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ನೊಬೆಲ್ ಸಮಿತಿ ಹೇಳಿತು.

ಇಬ್ಬರು ಅರ್ಥಶಾಸ್ತ್ರಜ್ಞರು ಅನ್ವೇಷಿಸಿರು ಹೊಸ ಹರಾಜು ಮಾದರಿUಳು ವಿಶ್ವಾದ್ಯಂತ ಮಾರಾಟಗಾರರು, ಕೊಳ್ಳುವವರು ಮತ್ತು ತೆರಿಗೆ ಪಾವತಿದಾರರಿಗೆ ಅನುಕೂಲ ಮಾಡಿಕೊಟ್ಟಿವೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ.

೧೯೬೯ರಿಂದ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇದುವರೆಗೂ ೫೧ ಬಾರಿ ಪ್ರಶಸ್ತಿಯನ್ನು ಅರ್ಥಶಾಸ್ತ್ರ ವಿಭಾಗದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗಿದೆ.

ರಾಬರ್ಟ್ ವಿಲ್ಸನ್, ತರ್ಕಬದ್ಧ ಬಿಡ್ದಾರರು ಸಾಮಾನ್ಯ ಮೌಲ್ಯದ ತಮ್ಮದೇ ಆದ ಅತ್ಯುತ್ತಮ ಅಂದಾಜಿಗಿಂತ ಕಡಿಮೆ ಏಕೆ ಬಿಡ್ ಮಾಡುತ್ತಾರೆ ಎಂಬುದನ್ನು ತೋರಿಸಿದ್ದಾರೆ. ಇನ್ನು, ಪಾಲ್ ಮಿಲ್ಗ್ರೋಮ್ ಹರಾಜಿಗೆ ಸಂಬಂಧಪಟ್ಟಂತೆ ಸಾಮಾನ್ಯ ಸಿದ್ಧಾಂತ ರೂಪಿಸಿದ್ದಾರೆ ಎಂದು ಪ್ರಶಸ್ತಿ ಸಮಿತಿ ಹೇಳಿದೆ.

ಜಾಗತಿಕ ಮಟ್ಟದಲ್ಲಿ ಬಡತನ ಹೋಗಲಾಡಿಸಲು ನಡೆಸಿದ ಸಂಶೋಧನೆಗಾಗಿ ಕಳೆದ ವರ್ಷವೂ ಮೂವರು ಅಮೆರಿಕದ ಅರ್ಥಶಾಸಜ್ಞರಿಗೆ ಅರ್ಥಶಾಸದ ನೊಬೆಲ್ ಪ್ರಶಸ್ತಿ ದೊರಕಿತ್ತು.

೧೯೪೮ರಲ್ಲಿ ಅಮೆರಿಕದ ಡೆಟ್ರಾಯಿಟ್‌ನಲ್ಲಿ ಜನಿಸಿದ ಪಾಲ್ ಆರ್. ಮಿಲ್ಗ್ರೋಮ್, ೧೯೭೯ರಲ್ಲಿ ಅಮೇರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು. ಅವರು ಅಮೇರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯzಲ್ಲಿ ಮಾನವಿಕ ಮತ್ತು ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ.

ಅಮೆರಿಕದ ಜಿನೀವಾದಲ್ಲಿ ೧೯೩೭ರಲ್ಲಿ ಜನಿಸಿದ ರಾಬರ್ಟ್ ಬಿ. ವಿಲ್ಸನ್ ೧೯೬೩ರಲ್ಲಿ ಅಮೇರಿಕದ ಕೇಂಬಿಜ್‌ನ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಡಿ.ಬಿ.. ಪಡೆದರು. ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವ ವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಪ್ರಾಧ್ಯಾಪಕರಾಗಿದ್ದಾರೆ.

ಪ್ರಶಸ್ತಿ ಮೊತ್ತ ೧೦ ಮಿಲಿಯನ್ ಸ್ವೀಡಿಷ್ ಕ್ರೋನರ್‌ನ್ನು ಪ್ರಶಸ್ತಿ ವಿಜೇತರು ಹಂಚಿಕೊಳ್ಳಲಿದ್ದು, ಪ್ರಶಸ್ತಿಯು ನಗದು ಹಾಗೂ ಚಿನ್ನದ ಫಲಕವನ್ನು ಒಳಗೊಂಡಿದೆ. ಅರ್ಥಶಾಸ್ತ್ರದ ನೊಬೆಲ್ ಘೋಷಣೆಯೊಂದಿಗೆ ಸಾಲಿನ ನೊಬೆಲ್ ಪುರಸ್ಕಾರಗಳ ಸರಣಿ ಅಂತ್ಯಗೊಂಡಿದೆ.ಜಿನೋಮ್ ಎಡಿಟಿಂಗ್: ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ

ಕಪ್ಪು ಕುಳಿಗಳ ಬಗ್ಗೆ ಅರಿವು: 3 ವಿಜ್ಞಾನಿಗಳಿಗೆ
ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ


ವೈದ್ಯಕೀಯ ನೊಬೆಲ್ ಪ್ರಶಸ್ತಿ ಅಮೆರಿಕ, ಬ್ರಿಟನ್ ವಿಜ್ಞಾನಿಗಳಿಗೆ

No comments:

Advertisement