Thursday, December 26, 2019

ಆತ್ಮಾವಲೋಕನ ಮಾಡಿಕೊಳ್ಳಿ: ದೊಂಬಿ ನಿರತರಿಗೆ ಪ್ರಧಾನಿ ಮೋದಿ ಮನವಿ

ಆತ್ಮಾವಲೋಕನ ಮಾಡಿಕೊಳ್ಳಿ: ದೊಂಬಿ ನಿರತರಿಗೆ
ಪ್ರಧಾನಿ ಮೋದಿ ಮನವಿ
ಹಿಂಸಾಚಾರ: .ಪ್ರ. ಸರ್ಕಾರದಿಂದ ೨೮ ಮಂದಿಗೆ ೧೪ ಲಕ್ಷ ರೂ ದಂಡ, ೫೧೭ ಮಂದಿಗೆ ನೋಟಿಸ್
ಲಕ್ನೋ: ವ್ಯಾಪಕ ಪ್ರಮಾಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳನ್ನು ಕಂಡ ಉತ್ತರ ಪ್ರದೇಶದ ನಾಗರಿಕರಿಗೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವುದಕ್ಕೆ ಬದಲಾಗಿ ಅವುಗಳನ್ನು ರಕ್ಷಿಸಿ, ನಿರ್ವಹಿಸಲು ನೆರವಾಗುವಂತೆ 2019 ಡಿಸೆಂಬರ್ 26ರ ಬುಧವಾರ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರಿ ಆಸ್ತಿಗೆ ಹಾನಿ ಮಾಡಿದ್ದು ಸರಿಯೇ ಎಂಬುದಾಗಿ ಆತ್ಮಾವಲೋಕನ ಮಾಡಿಕೊಳ್ಳುವಂತೆ ಹಿಂಸಾಚಾರ ಎಸಗಿದವರನ್ನು ಕೋರಿದರು.

ಇದೇ
ವೇಳೆಗೆ ಉತ್ತರ ಪ್ರದೇಶ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದಕ್ಕಾಗಿ ೨೮ ಮಂದಿಗೆ ೧೪ ಲಕ್ಷ ರೂಪಾಯಿ ದಂಡ ವಿಧಿಸಿತು ಮತ್ತು ಶಸ್ತ್ರಾಸ್ತ ಪರವಾನಗಿ ಹೊಂದಿದ್ದ ೫೧೭ ಮಂದಿಗೆ ನೋಟಿಸ್ ಜಾರಿ ಮಾಡಿತು.

ಲಕ್ನೋದ ಲೋಕಭವನದಲ್ಲಿ ನಡೆದ ಸಮಾರಂಭ ಒಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜನರಿಗೆ ಸೂಚಿಸಿದರು.

ಉತ್ತಮ ರಸ್ತೆಗಳು, ಸವಲತ್ತುಗಳು ಮತ್ತು ಸ್ವಚ್ಛವಾದ ಒಳಚರಂಡಿ ವ್ಯವಸ್ಥೆಯು ನಾಗರಿಕರ ಹಕ್ಕು ಆಗಿದ್ದರೆ, ಅವುಗಳ ಸಮರ್ಪಕ ನಿರ್ವಹಣೆ ಅವರದ್ದೇ ಜವಾಬ್ದಾರಿ ಕೂಡಾ ಎಂಬುದಾಗಿ ಪ್ರತಿಭಟನಾ ನಿರತರಿಗೆ ಹೇಳಲು ನಾನು ಬಯಸುತ್ತೇನೆಎಂದು ಮೋದಿ ನುಡಿದರು.

ಉತ್ತರಪ್ರದೇಶದಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರಗಳಲ್ಲಿ ಶಾಮೀಲಾಗಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಜನರು ತಾವು ಮಾಡಿದ್ದು ಸರಿಯೇ ಎಂಬುದಾಗಿ ಆತ್ಮವಲೋಕನ ಮಾಡಿಕೊಳ್ಳಬೇಕುಎಂದು ಪ್ರಧಾನಿ ಹೇಳಿದರು.

ಪ್ರಧಾನಿ ಮೋದಿಯವರು ಇದಕ್ಕೆ ಮುನ್ನ ಲೋಕಭವನದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು ಮತ್ತು ಉತ್ತರ ಪ್ರದೇಶದ ರಾಜಧಾನಿಯಲ್ಲಿ ವೈದ್ಯಕೀಯ ವಿಶ್ವವಿದ್ಯಾಲಯಕ್ಕಾಗಿ ಶಿಲಾನ್ಯಾಸವನ್ನೂ ನೆರವೇರಿಸಿದರು. ವಿಶ್ವ ವಿದ್ಯಾಲಯಕ್ಕಾಗಿ ರಾಜ್ಯ ಸರ್ಕಾರವು ೫೦ ಎಕರೆ ಭೂಮಿಯನ್ನು ಮಂಜೂರು ಮಾಡಿದೆ.

ಹಿಂಸಾಚಾರ ನಿರತರಿಗೆ ನೋಟಿಸ್: ನೂತನ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳ ವೇಳೆಯಲ್ಲಿ ಹಿಂಸಾಚಾರದಲ್ಲಿ ನಿರತರಾದವರಿಂದ ನಷ್ಟ ವಸೂಲು ಮಾಡುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭರವಸೆ ನೀಡಿದ ಕೆಲವು ದಿನಗಳ ಬಳಿಕ ಉತ್ತರ ಪ್ರದೇಶ ಸರ್ಕಾರವು ಹಿಂಸಾತ್ಮಕ ಪ್ರತಿಭಟನೆಗಳಿಗೆ ಹೊಣೆಗಾರರನ್ನಾಗಿ ಮಾಡಿ ೨೮ ಮಂದಿಗೆ ನೋಟಿಸ್ಗಳನ್ನು ಕಳುಹಿಸಿತು..

ಕಸೂತಿ
ಕೆಲಸಗಾರ ಮತ್ತು ಸಾಂಬಾರ ಮಾರಾಟಗಾರ ಸೇರಿದಂತೆ ೨೮ ಮಂದಿಗೆ ಹಿಂಸಾತ್ಮಕ ಘಟನೆಗಳಿಗೆ ಹೊಣೆಗಾರರನ್ನಾಗಿ ಮಾಡಿ ೧೪ ಲಕ್ಷ ರೂಪಾಯಿ ದಂಡ ವಿಧಿಸಬಾರದೇಕೆ ಎಂದು ಸರ್ಕಾರ ನೋಟಿಸ್ ರವಾನಿಸಿತು.

ರಾಮಪುರ ಜಿಲ್ಲಾ ಆಡಳಿತವು ಮೋಟಾರು ಸೈಕಲ್ ಮತ್ತು ರಸ್ತೆ ಅಡ್ಡಗಟ್ಟೆಗಳಂತಹ ಸರ್ಕಾರಿ ಆಸ್ತಿಯನ್ನು ಹಾನಿಪಡಿಸಿದ್ದಕ್ಕಾಗಿ ನಷ್ಟ ವಸೂಲಿ ಪ್ರಕ್ರಿಯೆಗೆ ಚಾಲನೆ ನೀಡಿತು.

ಸರ್ಕಾರಿ ಆಸ್ತಿ ಹಾನಿಪಡಿಸಿದ್ದಕ್ಕಾಗಿ ೧೪.೮೬ ಲಕ್ಷ ರೂಪಾಯಿಗಳನ್ನು ನಿಮ್ಮಿಂದ ಏಕೆ ವಸೂಲಿ ಮಾಡಬಾರದು ಎಂಬುದಕ್ಕೆ ವಿವರಣೆ ಕೊಡಿ ಎಂದು ಆಡಳಿತವು ೨೮ ಮಂದಿಗೆ ನೋಟಿಸ್ ಗಳನ್ನು ಕಳುಹಿಸಿತು. ಅಲಹಾಬಾದ್ ಹೈಕೋರ್ಟಿನ ಆದೇಶವನ್ನು ಆಧರಿಸಿ ನೋಟಿಸ್ಗಳನ್ನು ಕಳುಹಿಸಲಾಯಿತು.

ಇದೇ ವೇಳೆಗೆ ೫೧೭ ಮಂದಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವವರಿಗೆ ನೋಟಿಸ್ ನೀಡಲಾಗಿದ್ದು, ೧೪೮ ಮಂದಿಯ ಹೆಸರುಗಳನ್ನು ಪ್ರತಿಭಟನೆ ಕಾಲದಲ್ಲಿ ಉಂಟುಮಾಡಿದ ಹಾನಿಗಾಗಿ ನಷ್ಟ ಭರ್ತಿ ಮಾಡಬೇಕಾದವರ ಪಟ್ಟಿಗೆ ಸೇರಿಸಲಾಗಿದೆ ಎಂದು ಮೀರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನಿಲ್ ಧಿಂಗ್ರ ಹೇಳಿದರು.

೫೧೭
ಮಂದಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರ ಪೈಕಿ ೪೦೦ ಮಂದಿಯ ಶಸ್ತ್ರಾಸ್ತ್ರ ಪರವಾನಗಿ ನವೀಕರಿಸಬೇಕಾಗಿದ್ದು, ಅವುಗಳನ್ನು ಬಾಕಿ ಇಡಲಾಗಿದೆ ಎಂದೂ ಅವರು ತಿಳಿಸಿದರು.

ಮಧ್ಯೆ, ರಾಷ್ಟ್ರವ್ಯಾಪಿ ಪೌರ ನೋಂದಣಿ ಬಗ್ಗೆ ಸಂಸತ್ತಿನಲ್ಲಾಗಲೀ, ಸಚಿವ ಸಂಪುಟದಲ್ಲಾಗಲೀ ಚರ್ಚೆ ನಡೆದಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಗೃಹಸಚಿವ ಅಮಿತ್ ಶಾ ಅವರು ಒಪ್ಪಿದ ಒಂದು ದಿನದ ಬಳಿಕ ರಾಷ್ಟ್ರೀಯ ಪೌರ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೊಂದಣಿಗೆ ಸಂಬಂಧ ಇದೆ ಎಂದು ಆಪಾದಿಸಿ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು.

ಮಂಗಳವಾರ
ಕೇಂದ್ರ ಸರ್ಕಾರವು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ನವೀಕರಣ ಪ್ರಕ್ರಿಯೆಗೆ ಅನುಮೋದನೆ ನೀಡಿತ್ತು. ರಾಷ್ಟ್ರದ ಪ್ರತಿಯೊಬ್ಬ ಸಾಮಾನ್ಯ ನಿವಾಸಿಯ ಸಮಗ್ರ ಗುರುತು ಮಾಹಿತಿನೆಲೆ ಸೃಷ್ಟಿಸುವ ಸಲುವಾಗಿ ಕೈಗೊಳ್ಳಲಾಗುವ ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟವು ಮಂಗಳವಾರ ೪೦೦೦ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿತ್ತು.

ಬೆನ್ನಲ್ಲೇ
ರಾಷ್ಟ್ರೀಯ ಪೌರ ನೋಂದಣಿ ನಿಟ್ಟಿನಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯು ಮೊದಲ ಹೆಜ್ಜೆ ಎಂಬುದಾಗಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು.

ವಡಗಂ ಶಾಸಕ ಜಿಗ್ಣೇಶ್ ಮೇವಾನಿಎನ್ಪಿಆರ್ ಮತ್ತು ಎನ್ಆರ್ಸಿ ಒಂದೇ ಹಕ್ಕಿಯ ಎರಡು ಹೆಸರುಗಳುಎಂದು ಟೀಕಿಸಿದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರುಇದು ಜನರನ್ನು ಗೊಂದಲಕ್ಕೆ ಕೆಡಹುವ ಯತ್ನಎಂದು ಬಣ್ಣಿಸಿದರು.

No comments:

Advertisement