Showing posts with label Flash news News. Show all posts
Showing posts with label Flash news News. Show all posts

Saturday, March 25, 2023

ಕಾವೇರಿಗಾಗಿ ಭಗೀರಥ ಹೋರಾಟ…!

 ಕಾವೇರಿಗಾಗಿ ಭಗೀರಥ ಹೋರಾಟ…!


ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಕಾವೇರಿ ನೀರು ಕೆಲ ಸಮಯದಿಂದ ಜೋರಾಗಿ ಸದ್ದು ಮಾಡುತ್ತಿದೆ. ಬ್ಯಾಟರಾಯನಪುರ ಶಾಸಕ ಶ್ರೀ ಕೃಷ್ಣ ಭೈರೇಗೌಡ ಅವರು ಇಲ್ಲಿ ಬೆಂಗಳೂರಿನಲ್ಲಿಯೇ ಅತಿ ದೊಡ್ಡದಾದ ಬೃಹತ್‌ ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.

ನಾಗವಾರದ ಬಳಿಕ ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದವರೆಗಿನ ಈ ಪ್ರದೇಶದಲ್ಲಿ ಅಂದರೆ ಥಣಿಸಂದ್ರ, ರಾಮಕೃಷ್ಣ ಹೆಗಡೆ ನಗರ, ಶಬರಿ ಬಡಾವಣೆ, ರಾಮಕೃಷ್ಣ ಹೆಗಡೆ ನಗರ, ಎಂಸಿಎಸಿಎಚ್‌, ಶಿವರಾಮ ಕಾರಂತ ನಗರ, ಸೆಂಟ್ರಲ್‌ ಎಕ್ಸೈಸ್‌ ಬಡಾವಣೆ, ಸಂಪಿಗೆ ಹಳ್ಳಿ, ಜಕ್ಕೂರು, ಭಾರತೀಯ ಸಿಟಿ, ಚೊಕ್ಕನಹಳ್ಳಿ, ವಿನಾಯಕ ನಗರ, ಕೋಗಿಲು, ಬಾಗಲೂರು ಸೇರಿದಂತೆ ಈ ಪ್ರದೇಶದಲ್ಲಿ ಅಭಿವೃದ್ಧಿ ಜೋರಾಗಿದೆ. ಮೂಲಭೂತ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲೂ ಸಾಕಷ್ಟು ಕ್ರಮಗಳಾಗುತ್ತಿವೆ.

ಇಲ್ಲಿ ನೀರಿನ ಸಮಸ್ಯೆ ಮಾತ್ರ ಬಹಳ ವರ್ಷಗಳಿಂದ ಕಾಡುತ್ತಿದ್ದು ಬಹುತೇಕ ಜನರಿಗೆ ಕೊಳವೆ ಬಾವಿ ನೀರೇ ಜೀವನಕ್ಕೆ ಆಧಾರವಾಗಿದೆ. ಈ ಹಿನ್ನೆಲೆಯಲ್ಲೇ ಈ ಪ್ರದೇಶ ಅಂದರೆ ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾದ ಶ್ರೀ ಕೃಷ್ಣ ಭೈರೇಗೌಡ ಅವರು ಇಲ್ಲಿಗೆ ಕಾವೇರಿ ನೀರನ್ನು ತರುವ ಮೂಲಕ ಶಾಶ್ವತ ಪರಿಹಾರ ತರಬೇಕು ಎಂಬ ಪ್ರಯತ್ನಕ್ಕೆ ಕೈ ಹಾಕಿದರು.

ನಾಲ್ಕೈದು ವರ್ಷಗಳ ಹಿಂದೆ ಅಂದರೆ ೨೦೧೮-೧೯ರ ಸುಮಾರಿಗೆ ಜಿಕೆವಿಕೆಯಿಂದ ಈ ಪ್ರದೇಶಕ್ಕೆ ಕಾವೇರಿ ನೀರು ಒದಗಿಸಲು ನೀರಿನ ಪೈಪ್‌ ಲೈನ್‌ ಹಾಕಿಸಿದರು. ಹಾಗೆಯೇ ಇಲೊಂದು ಬೃಹತ್‌ ನೀರಿನ ಟ್ಯಾಂಕ್‌ ನಿರ್ಮಿಸಿ ಅದರ ಮೂಲಕ ಕಾವೇರಿ ನೀರನ್ನು ಈ ಪ್ರದೇಶಕ್ಕೆ ಹರಿಸಬೇಕು ಎಂಬ ಯೋಜನೆ ಹಾಕಿಕೊಂಡು ಕಾರ್ಯ ಪ್ರವೃತ್ತರಾದರು. ಜಾಗವನ್ನೂ ಚೊಕ್ಕನಹಳ್ಳಿ ಪ್ರದೇಶದಲ್ಲಿ ಗುರುತಿಸಿ, ಜಲಮಂಡಳಿಗೆ ಜಾಗವನ್ನೂ ಮಂಜೂರು ಮಾಡಿಸಿಕೊಂಡರು.

ಈ ಬೃಹತ್‌ ನೀರಿನ ಟ್ಯಾಂಕಿಗೆ ಕಾವೇರಿ ನದಿಯಿಂದ ನೀರು ತರಲು, ಇಲ್ಲಿಂದ ಬಡಾವಣೆಗಳಿಗೆ ಅಪಾರ್ಟ್‌ಮೆಂಟುಗಳಿಗೆ ನೀರು ಹರಿಸಲು ಕೊಳವೆಗಳ ಜಾಲವನ್ನೂ ನಿರ್ಮಿಸಿದರು. ಆದರೆ ಈ ಪ್ರದೇಶದ ಜನರ ದುರಾದೃಷ್ಟ. ಜಿಕೆವಿಕೆಯಿಂದ ಹಾಕಿದ ಕೊಳವೆಯ ಮೂಲಕ ಬಾಲಾಜಿ ಕೃಪಾ ಬಡಾವಣೆಯವರೆಗೆ ನೀರು ಸರಾಗವಾಗಿ ಬರಲಿಲ್ಲ.


ಜಲಮಂಡಳಿ ಅಧಿಕಾರಿಗಳಿಗೆ ಜನ ಮಾಡಿದ ಮನವಿಗಳೆಲ್ಲ ನೀರ ಮೇಲಣ ಹೋಮವಾದವು. ಒಂದಿಲ್ಲ ಒಂದು ಕಾರಣದಿಂದ ಅಧಿಕಾರಿಗಳು ಕೊಟ್ಟ ಭರವಸೆ ಈಡೇರಲಿಲ್ಲ. ಜನ ಸಹಜವಾಗಿ ಸಿಟ್ಟಿಗೆದ್ದರು. ಚುನಾವಣೆ ಬಹಿಷ್ಕಾರದ ಬಗ್ಗೆ ಮಾತನಾಡತೊಡಗಿದರು. ಈ ವಿಚಾರ ಸಹಜವಾಗಿಯೇ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲೂ ಪ್ರತಿಫಲಿಸಿದವು.

ಆದರೆ ಈ ಪ್ರದೇಶಕ್ಕೆ ಕಾವೇರಿ ಹರಿಸುವ ಭಗೀರಥ ಪ್ರಯತ್ನ ನಡೆಸಿದ್ದ ಶಾಸಕ ಶ್ರೀ ಕೃಷ್ಣ ಭೈರೇಗೌಡರು ಹೇಳುವ ಪ್ರಕಾರ ಸಮಸ್ಯೆಯ ಮೂಲ ಕಾರಣ ಬೇರೆಯೇ ಆಗಿತ್ತು. ಈ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ನೀರಿನ ಟ್ಯಾಂಕಿಗಾಗಿ ಗುರುತಿಸಲಾಗಿದ್ದ ಸರ್ಕಾರಿ ಜಾಗ ಭೂ ವಿವಾದಕ್ಕೆ ಸಿಕ್ಕಿಹಾಕಿಕೊಂಡಿತ್ತು. ಈ ಸರ್ಕಾರಿ ಜಾಗವನ್ನು ಕಬಳಿಸಲು ಇಲ್ಲಿ ನಿರಂತರ ಯತ್ನ ನಡೆದಿತ್ತು. ಈ ವಿವಾದ ಕೋರ್ಟ್‌ ಮೆಟ್ಟಿಲನ್ನು ಕೂಡಾ ಏರಿತ್ತು. ಈ ಸಿಕ್ಕುಗಳು ಕಾಮಗಾರಿಯನ್ನು ವಿಳಂಬಗೊಳಿಸಿದವು.

ಕಟ್ಟ ಕಡೆಗೂ ೨೦೨೩ ಮಾರ್ಚ್‌ ೨೪ರ ಶುಕ್ರವಾರ ಈ ನೀರಿನ ಟ್ಯಾಂಕಿಗಾಗಿ ಭೂಮಿ ಪೂಜೆ ನಡೆಸುವ ಅವಕಾಶ ಒದಗಿ ಬಂತು. ಜಾಗ ಕಬಳಿಸುವ ಸಲುವಾಗಿ ಸೃಷ್ಟಿಸಲಾಗಿದ್ದ ದಾಖಲೆಗಳೆಲ್ಲವೂ ನಕಲಿ ಎಂಬುದಾಗಿ ಫೋರೆನ್ಸಿಕ್‌ ಲ್ಯಾಬ್‌ ವರದಿಗಳಿಂದ ಖಚಿತವಾಗಿ ಆ ವರದಿಗಳನ್ನು ಆಧರಿಸಿ ನ್ಯಾಯಾಲಯ ಜಲಮಂಡಳಿ ಪರವಾಗಿ ನ್ಯಾಯಾಲಯ ತೀರ್ಪು  ಕೊಟ್ಟಿದೆ.

ಇದನ್ನು ಆಧರಿಸಿಯೇ ಭೂಮಿ ಪೂಜೆ ನೆರವೇರಿಸಿದ ಈ ಸಂದರ್ಭದಲ್ಲಿ ಕೃಷ್ಣ ಭೈರೇಗೌಡ ಅವರು ʼಕಾವೇರಿ ನೀರು ತರಲು ನಡೆಸಿದ ಈ ʼಭಗೀರಥʼ ಹೋರಾಟದ ಕಥೆಯನ್ನು ಸವಿಸ್ತಾರವಾಗಿಯೇ ಬಿಚ್ಚಿಟ್ಟರು. ಸಂಭ್ರಮದ ವಾತಾವರಣದಲ್ಲಿ ಭೂಮಿ ಪೂಜೆ ನೆರವೇರಿಸಿದರು. ಈ ಟ್ಯಾಂಕ್‌ ಸಾಮರ್ಥ್ಯ ೬೫ ಎಂಎಲ್‌ ಡಿ ಆಗಿದ್ದು (ದಿನಕ್ಕೆ ೬೫೦ ಲಕ್ಷ ಲೀಟರ್), ಇದನ್ನು  ೧೫ ಎಂಎಲ್‌ ಡಿಯಷ್ಟು ಹೆಚ್ಚಿಸುವ ಅವಕಾಶಗಳಿವೆ. ಇದು ಆಸು ಪಾಸಿನ ಸುಮಾರು ಒಂದು ಲಕ್ಷ ಜನರ ನೀರಿನ ಸಮಸ್ಯೆ ನಿವಾರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ಓದಿರಿ: 

ಬಾಲಾಜಿ ಕೃಪಾ ಬಡಾವಣೆಗೆ ‘ಕಾವೇರಿ’ ಆಗಮನ

Sunday, February 6, 2022

ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್

 ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್

ಮುಂಬೈ: ‘ಭಾರತದ ಗಾನ ಕೋಗಿಲೆ’ ಎಂಬುದಾಗಿಯೇ  ಖ್ಯಾತರಾಗಿದ್ದ ಗಾಯಕಿ ಲತಾ ಮಂಗೇಶ್ಕರ್ (೯೨) ಅವರು 2022 ಫೆಬ್ರುವರಿ 6ರ ಭಾನುವಾರ ನಿಧನರಾದರು.

ಕೋವಿಡ್-೧೯ ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರನ್ನು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಜನವರಿ ೮ರಂದು ದಾಖಲಿಸಲಾಗಿತ್ತು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿತ್ತಾದರೂ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಅವರು ಅಗಲಿದರು.

ಗಾನ ಕೋಗಿಲೆ

ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಸುಮಾರು ಏಳು ದಶಕಗಳ ಕಾಲ ಹಿನ್ನೆಲೆ ಗಾಯಕಿಯಾಗಿ ಮನರಂಜಿಸಿದ್ದಾರೆ. ೧೯೪೨ರಿಂದ ಆರಂಭವಾದ ಅವರ ಗಾಯನ ಯಾನದಲ್ಲಿ ೩೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.  ಏ ಮೇರೆ ವತನ್ ಕೆ ಲೋಗೊ, ಲಗ್ ಜಾ ಗಲೇ, ಏಹ್ ಕಹಾ ಆಗಯೇ ಹಮ್ ಹಾಗೂ ಪ್ಯಾರ್ ಕಿಯಾ ತೊ ಡರ್ನಾ ಕ್ಯಾ,...ಸೇರಿದಂತೆ ಅವರ ನೂರಾರು ಹಾಡುಗಳು ಇವತ್ತಿಗೂ ಅಪಾರ ಜನಪ್ರಿಯತೆ ಪಡೆದಿವೆ.

ಭಾರತರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ಲತಾ ಮಂಗೇಶ್ಕರ್ ಅವರು ಭಾರತೀಯ ಚಿತ್ರರಂಗದ ಐಕಾನ್ ಆಗಿದ್ದು, ದೊಡ್ಡ ಸಂಖ್ಯೆಯ ಹಿಂದಿ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ. ಮರಾಠಿ ಮತ್ತು ಬಂಗಾಳಿ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲೂ ಅವರು ಹಲವಾರು ಹಾಡುಗಳನ್ನು ಹಾಡಿದ್ದಾರೆ.

ಪ್ರತಿಷ್ಠಿತ ಗಾಯಕ ಮನೆತನಕ್ಕೆ ಸೇರಿದ ಲತಾ ಮಂಗೇಶ್ಕರ್ ಅವರು ಸಂಗೀತ ರಚನೆ ಹಾಗೂ ಕೆಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ.

೧೯೨೯ರಲ್ಲಿ ಜನಿಸಿದ್ದ ಲತಾ ಅವರು ಐವರು ಮಕ್ಕಳ ಪೈಕಿ ಹಿರಿಯವರು. ಶಾಸ್ತೀಯ ಸಂಗೀತಗಾರರಾಗಿದ್ದ ತಂದೆ ಪಂಡಿತ ದೀನಾನಾಥ್ ಮಂಗೇಶ್ಕರ್ ಅವರು ಕಿರಿಯ ಲತಾ ಮಂಗೇಶ್ಕರ್ ಅವರಿಗೆ ಸಂಗೀತದ ಮೊದಲ ಪಾಠ ಮಾಡಿದ್ದರು. ೧೯೪೨ರಲ್ಲಿ ತಂದೆ ಮೃತರಾದ ಬಳಿಕ, ೧೩ರ ಹರೆಯದ ಲತಾ ಮಂಗೇಶ್ಕರ್ ಅವರು ಮರಾಠಿ ಸಿನಿಮಾಗಳಿಗೆ ಹಾಡುವ ಮೂಲಕ ಗಾಯನ ವೃತ್ತಿಯನ್ನು ಆರಂಭಿಸಿದರು.

೧೯೪೫ರಲ್ಲಿ ಲತಾ ಅವರು ಮಧುಬಾಲಾ ನಟನೆಯ ಮಹಲ್ ಚಲಚಿತ್ರದ ’ಆಯೇಗಾ ಆನೇವಾಲ’ ಚಿತ್ರದ ಮೂಲಕ ಮೊತ್ತ ಮೊದಲಿಗೆ ಪ್ರಸಿದ್ಧಿಗೆ ಬಂದರು. ಆ ಬಳಿಕ ಲತಾ ಮಂಗೇಶ್ಕರ್ ಅವರ ಧ್ವನಿ ಮತ್ತು ಗಾಯನ ವೃತ್ತಿ ಹೊಸ ಉತ್ತುಂಗಕ್ಕೆ ಏರಿತು..

ಬೈಜು ಬಾವ್ರಾ, ಮದರ್ ಇಂಡಿಯಾ ಮತ್ತು ಮುಘಲ್-ಇ-ಆಜಂ ದಂತಹ ಚಿತ್ರಗಳಲ್ಲಿ ನೌಶದ್ ರಚನೆಯ ರಾಗ ಆಧಾರಿತ ಹಾಡುಗಳನ್ನು ಅವರು ಹಾಡಿದರು. ಶಂಕರ್ ಜೈಕಿಷನ್ ಅವರ ಹಿಟ್ ಸಿನಿಮಾಗಳಾದ ಬರ್ಸಾತ್, ಶ್ರೀ ೪೨೦, ಸಲೀಲ್ ಚೌಧರಿ ಮಧುಮತಿ ಚಿತ್ರದ ಹಾಡುಗಳು ಲತಾ ಮಂಗೇಶ್ಕರ್ ಅವರಿಗೆ ಅತ್ಯುತ್ತಮ ಹಿನ್ನೆಲೆಗಾಯಕಿ  ಫಿಲಂಫೇರ್ ಪ್ರಶಸ್ತಿಯನ್ನು ತಂದು ಕೊಟ್ಟವು. ಬಳಿಕ ಬೀಸ್ ಸಾಲ್ ಬಾದ್, ಖಾನ್ದಾನ್ ಮತ್ತು ಜೀನೆ ಕಿ ರಾಹ್ ಚಿತ್ರಗಳ ಹಾಡುಗಳಿಗೂ ಅವರಿಗೆ ಇನ್ನೂ ಮೂರು ಫಿಲಂಫೇರ್ ಪ್ರಶಸ್ತಿಗಳು ಬಂದವು. ಪರಿಚಯ್, ಕೋರಾ ಕಾಗಜ್ ಮತ್ತು ಲೇಕಿನ್ ಚಿತ್ರಗಳಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಅವರಿಗೆ  ಮೂರು ರಾಷ್ಟ್ರೀಯ ಪ್ರಶಸ್ತಿಗಳು ಬಂದವು.

ಪಾಕೀಜಾ, ಅಭಿಮಾನ್, ಅಮರ್ ಪ್ರೇಮ್, ಆನಂದಿ, ಸಿಲ್ ಸಿಲಾ, ಚಾಂದನಿ, ಸಾಗರ್, ರುಡಾಲಿ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ ಇತ್ಯಾದಿ ಚಿತ್ರಗಳು ಅವರ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ಪ್ರಸಿದ್ಧವಾಗಿವೆ.

ಲತಾ ಮಂಗೇಶ್ಕರ್ ಅವರ ದೇಶಭಕ್ತಿ ಗೀತೆಗಳಲ್ಲಿ ೧೯೬೨ರಲ್ಲಿ ಚೀನಾ ಜೊತೆಗಿನ ಸಮರದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣೆಗಾಗಿ ಹಾಡಿದ ’ಆಯೇ ಮೇರೆ ವತನ್ ಕೆ ಲೋಗೋ’ ಅತ್ಯಂತ ಖ್ಯಾತಿ ಪಡೆದ ಹಾಡಾಗಿದ್ದು ಇದನ್ನು ೧೯೬೩ರ ಗಣರಾಜ್ಯೋತ್ಸವ ದಿನ ನವದೆಹಲಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಹಾಡಲಾಗಿತ್ತು. ಲತಾ ಮಂಗೇಶ್ಕರ್ ಅವರು ಈ ಹಾಡನ್ನು ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಮತ್ತು ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಹಾಡಿದ್ದರು.

ಲತಾ ಮಂಗೇಶ್ಕರ್ ಅವರು ಹಿಡಿಯಷ್ಟು ಮರಾಠಿ ಚಿತ್ರಗಳಿಗೆ ಸಂಗೀತ ರಚನೆಯನ್ನೂ ಮಾಡಿದ್ದಾರೆ. ಇವುಗಳಲ್ಲಿ ಸಧಿ ಮನಸೆ ಚಿತ್ರವು  ಅವರಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರದ ಅತ್ಯುತ್ತಮ ಸಂಗೀತ ನಿರ್ದೇಶಕಿ ಪ್ರಶಸ್ತಿಯನ್ನು ೧೯೬೫ರಲ್ಲಿ ತಂದುಕೊಟ್ಟಿತ್ತು. ಅವರು ನಿರ್ಮಿಸಿದ ಕೆಲವೇ ಕೆಲವು ಚಿತ್ರಗಳ ಪೈಕಿ ೧೯೯೦ರಲ್ಲಿ ನಿರ್ಮಿಸಿದ ಲೇಖಿನ್ ಚಿತ್ರವೂ ಒಂದಾಗಿದ್ದು ಅದರಲ್ಲಿ ಸ್ವತಃ ಲತಾ ಅವರೇ ಹಾಡಿದ್ದರು.

ಲತಾ ಮಂಗೇಶ್ಕರ್ ಅವರ ಮೈ ನವಿರೇಳಿಸುವ ಒಂದು ಹಾಡಿನ ಪರಿ ಇಲ್ಲಿದೆ ನೋಡಿ.

ಲತಾ ಹಾಡಿನ ಮೋಡಿ



Friday, May 22, 2020

ಪಶ್ಚಿಮ ಬಂಗಾಳಕ್ಕೆ 1000 ಕೋಟಿ ಮುಂಗಡ ಪರಿಹಾರ: ಪ್ರಧಾನಿ ಮೋದಿ ಘೋಷಣೆ

ಪಶ್ಚಿಮ ಬಂಗಾಳಕ್ಕೆ 1000 ಕೋಟಿ ಮುಂಗಡ ಪರಿಹಾರ:  ಪ್ರಧಾನಿ ಮೋದಿ ಘೋಷಣೆ
ನವದೆಹಲಿ/ ಕೋಲ್ಕತ: ಸಂಕಟ ಸಮಯದಲ್ಲಿ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಜೊತೆ ನಿಲ್ಲುತ್ತದೆ ಮತ್ತು ೧೦೦೦ ಕೋಟಿ ರೂಪಾಯಿಗಳ ತತ್ಕ್ಷಣದ ಮುಂಗಡ ಪರಿಹಾರದ ಭರವಸೆ ನೀಡುತ್ತದೆ ಎಂದು ಪ್ರದಾನಿ ನರೇಂದ್ರ ಮೋದಿ ಅವರು 2020 ಮೇ 22ರ ಶುಕ್ರವಾರ ಘೋಷಿಸಿದರು.

ಅಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಪ್ರಧಾನಿ ಘೋಷಣೆ ಮಾಡಿದರು.ಸುಮಾರು ಮೂರು ತಿಂಗಳುಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊರ ರಾಜ್ಯಕ್ಕೆ ನೀಡಿದ ಮೊದಲ ಭೇಟಿ ಇದು.

ಪ್ರಧಾನಿ ಮೋದಿಯವರನ್ನು ರಾಜ್ಯಪಾಲ ಜಗದೀಪ್ ಧನ್ಕರ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಮಾನನಿಲ್ದಾಣದಲ್ಲಿ ಬರಮಾಡಿಕೊಂಡರು. ರಾಜ್ಯದಲ್ಲಿ ಚಂಡಮಾರುತದಿಂದ ಬಹುತೇಕ ಹಾನಿಯಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿಯವರಿಗೆ ಮಮತಾ ಬ್ಯಾನರ್ಜಿ ಸಹಯೋಗ ನೀಡಿದರು. ಸಮೀಕ್ಷೆ ಬಳಿಕ ಕೋಲ್ಕತಾ ವಿಮಾನ ನಿಲ್ದಾಣದಿಂದ ೫೦ ಕಿಮೀ ದೂರದ ಬಶೀರತ್ನಲ್ಲಿ ಶಾಲೆಯೊಂದರ ಸಮೀಪದಲ್ಲಿ ಪ್ರಧಾನಿ ಬಂದಿಳಿದರು.

ಬಶೀರತ್ ಶಾಲೆಯಲ್ಲಿ ಪರಿಶೀಲನಾ ಸಭೆಯನ್ನು ನಡೆಸಿದ ಪ್ರಧಾನಿಯವರಿಗೆ ಜನರು ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಸಾಧ್ಯವಾಗುವಂತೆ ಜನತೆಗೆ ಕೇಂದ್ರದಿಂದ ಹೆಚ್ಚಿನ ನೆರವು ಬೇಕು ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದರು. ಚಂಡಮಾರುತಕ್ಕೆ ಕನಿಷ್ಠ ೮೦ ಮಂದಿ ಬಲಿಯಾಗಿದ್ದಾರೆ, ಪೈಕಿ ಬಹುತೇಕ ಮಂದಿ ವಿದುತ್ ತಗುಲಿ ಸಾವನ್ನಪ್ಪಿದ್ದಾರೆ ಎಂದು ಮಮತಾ ವಿವರಿಸಿದರು.

ಸಭೆಯ ಬಳಿಕ ಮಾಧ್ಯಮಗಳಿಗೆ ಸಂಕ್ಷಿಪ್ತ ಹೇಳಿಕೆ ನೀಡಿದ ಪ್ರಧಾನಿ ಮೋದಿ ಜನರಿಗೆ ಸಾಧ್ಯವಿರುವ ಎಲ್ಲ ನೆರವು ಒದಗಿಸಲು ಕೇಂದ್ರ ಮತ್ತು ರಾಜ್ಯ ಜೊತೆಯಾಗಿ ಕೆಲಸ ಮಾಡಲಿವೆ ಎಂದು ಹೇಳಿದರು.

ಮರುವಸತಿ, ಪುನರ್  ನಿರ್ಮಾಣ ಸೇರಿದಂತೆ ಎಲ್ಲ ಅಂಶಗಳ ಬಗೆಗೂ ಗಮನ ಹರಿಸಲಾಗುವುದು. ನಾವೆಲ್ಲರೂ ಪಶ್ಚಿಮ ಬಂಗಾಳ ಮುಂದುವರೆಯಬೇಕು ಎಂದು ಬಯಸುತ್ತೇವೆ. ಇಂತಹ ಪರೀಕ್ಷಾ ಸಮಯಗಲ್ಲಿ ಕೇಂದ್ರವು ಯಾವಾಗಲೂ ಪಶ್ಚಿಮ ಬಂಗಾಳದ ಜೊತೆಗೆ ನಿಲ್ಲುವುದು ಎಂದು ಪ್ರಧಾನಿ ಹೇಳಿದರು.

ಚಂಡಮಾರುತ ಸ್ಥಿತಿಯನ್ನು ನಿಭಾಯಿಸಿದ ಪರಿಗಾಗಿ ಪ್ರಧಾನಿಯವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಶ್ಲಾಘಿಸಿದರು.

ರಾಜ್ಯದಲ್ಲಿ ಹಾಹಾಕಾರ ಸೃಷ್ಟಿಸಿರುವ ಚಂಡಮಾರುತವನ್ನು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಡಿದ ಬೇಡಿಕೆ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡಲಿಲ್ಲ.

ವಾಸ್ತವಾಗಿ ಸರ್ಕಾರಿ ನಿಯಮಗಳಲ್ಲಿ ಇಂತಹ ಅಧಿಸೂಚನೆ ಹೊರಡಿಸಲು ಯಾವುದೇ ಅವಕಾಶಗಳು ಇಲ್ಲ. ಆದರೆ ಇಂತಹ ದುರಂತಗಳನ್ನು ಎದುರಿಸಿದ ರಾಜ್ಯಗಳಲ್ಲಿನ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದಿಂದ ವಿಪತ್ತು ನಿರ್ವಹಣಾ ನಿಯಮಗಳ ಅಡಿಯಲ್ಲಿ ಹೆಚ್ಚಿನ ನೆರವು ಪಡೆಯುವ ಸಲುವಾಗಿ ಇಂತಹ ಬೇಡಿಕೆಗಳನ್ನು ಮುಂದಿಡುತ್ತವೆ.

ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ ಸಾಕಷ್ಟು ನೆರವನ್ನು ಒದಗಿಸುತ್ತಿಲ್ಲ ಎಂದು ಮಮತಾ ಬ್ಯಾನರ್ಜಿ ಅವರು ಕೆಲವು ದಿನಗಳ ಹಿಂದೆ ದೂರಿದ್ದರು. ಕೋವಿಡ್ ೧೯ -ಸಾಂಕ್ರಾಮಿಕ ವಿರೋಧೀ ಹೋರಾಟಕ್ಕಾಗಿ ನಮಗೆ ಕೇಂದ್ರದಿಂದ ಒಂದಿಷ್ಟೂ ಹಣದ ನೆರವು ಬಂದಿಲ್ಲ ಎಂದು ವರದಿಗಾರರ ಜೊತೆ ಹೇಳಿದ್ದ ಮಮತಾ ಈಗ ಅಂಫಾನ್ ಚಂಡಮಾರುತವು ಅಪಾರ ಹಾನಿಯನ್ನು ಮಾಡಿದೆ ಎಂದು ಹೇಳಿದ್ದರು.

ನೆರವು ತ್ವರಿತವಾಗಿ ಬರಬೇಕು, ೫೦೦ ದಿನಗಳ ಬಳಿಕ ಅಲ್ಲ ಎಂದು ಮಮತಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಸಂದರ್ಭದಲ್ಲೇ ಅವರು ಚಂಡಮಾರುತದ ಹಾನಿಯನ್ನು ಕಣ್ಣಾರೆ ನೋಡುವ ಸಲುವಾಗಿ ರಾಜ್ಯಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಕೋರಿದ್ದರು.

ಮಮತಾ ಬ್ಯಾನರ್ಜಿ ಅವರ ದೂರಿಗೆ ಸ್ಪಂದನೆಯಾಗಿ ಪ್ರಧಾನಿಯವರು ,೦೦೦ ಕೋಟಿ ರೂಪಾಯಿಗಳ ತತ್ ಕ್ಷಣದ ಮುಂಗಡ ನೆರವಿನ ಭರವಸೆ ನೀಡಿದ್ದಾರೆ.

ಚಂಡಮಾರುತದಲ್ಲಿ ಸಾವನ್ನಪ್ಪಿದವರ ಉತ್ತರಾಧಿಕಾರಿಗೆ ತಲಾ ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ ೫೦,೦೦೦ ರೂಪಾಯಿ ನೀಡಲಾಗುವುದು ಎಂದು ಪ್ರಧಾನಿ ಹೇಳಿದರು.

Saturday, February 1, 2020

ಬ್ರೆಕ್ಸಿಟ್ ಅಧಿಕೃತ: ೪೭ ವರ್ಷಗಳ ಬಳಿಕ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಔಟ್

ಬ್ರೆಕ್ಸಿಟ್ ಅಧಿಕೃತ:  ೪೭ ವರ್ಷಗಳ ಬಳಿಕ
ಐರೋಪ್ಯ ಒಕ್ಕೂಟದಿಂದ  ಬ್ರಿಟನ್  ಔಟ್
ಲಂಡನ್: ಐರೋಪ್ಯ ಒಕ್ಕೂಟದಿಂದ (ಯುರೋಪಿಯನ್ ಯೂನಿಯನ್)  ಬ್ರಿಟನ್ ದೇಶ 2020 ಫೆಬ್ರುವರಿ 01ರ ಶನಿವಾರ ಅಧಿಕೃತವಾಗಿ ಹೊರಬಂದಿತು. ಇದರೊಂದಿಗೆ ೩-೪ ವರ್ಷಗಳಿಂದ ಹೊಯ್ದಾಡುತ್ತಿದ್ದ ಬ್ರೆಕ್ಸಿಟ್(ಬ್ರಿಟನ್ ಎಕ್ಸಿಟ್) ಕೊನೆಗೂ ನೆರವೇರಿತು.

ಈ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇದನ್ನು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು. “ನಮ್ಮ ಶ್ರೇಷ್ಠ ರಾಷ್ಟ್ರೀಯ ನಾಟಕದ ಹೊಸ ಆಟಕ್ಕೆ ಪರದೆ ಎಳೆಯಲಾಗಿದೆ” ಎಂದು ಜಾನ್ಸನ್ ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸಿದರು. ೪೭ ವರ್ಷಗಳಿಂದ ಅಸ್ತಿತ್ವದಲ್ಲಿರುವ ಯೂರೋಪಿಯನ್ ಯೂನಿಯನ್ನಿನ ಸದಸ್ಯತ್ವದಿಂದ ಹೊರ ಬಂದ ಮೊದಲ ರಾಷ್ಟ್ರ ಬ್ರಿಟನ್ ಆಗಿದ್ದು, ಈಗ  ಬ್ರಿಟನ್ ದೇಶ ಮತ್ತೆ ಸಾರ್ವಭೌಮತ್ವ ಹೊಂದಿತು.

೨೦೧೬ರಲ್ಲೇ ಬ್ರಿಟನ್ನಿನಲ್ಲಿ  ಬ್ರೆಕ್ಸಿಟ್ ವಿಚಾರವಿಟ್ಟುಕೊಂಡು ಜನಮತಗಣನೆ  ನಡೆದಿತ್ತು. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ದೇಶ ಹೊರಬರಬೇಕೆಂಬುದು ಕನ್ಸರ್ವೇಟಿವ್ ಪಕ್ಷದ ನಿಲುವಾಗಿತ್ತು. ಆ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಬ್ರಿಟನ್ ಪ್ರಜೆಗಳು ಬಹುಮತ ಕೊಟ್ಟಿದ್ದರು.

ಆದರೆ, ಬ್ರೆಕ್ಸಿಟ್ ಒಪ್ಪಂದದ ಕೆಲ ಅಂಶಗಳ ಕಾರಣದಿಂದ ಅದರ ಜಾರಿ  ಸಾಧ್ಯವಾಗಿರಲಿಲ್ಲ. ಅಧಿಕೃತವಾಗಿ ಬ್ರೆಕ್ಸಿಟ್ ಪೂರ್ಣಗೊಳಿಸಲು ೪ ವರ್ಷ ಬೇಕಾಯಿತು. ಆದರೆ, ಒಕ್ಕೂಟದಿಂದ ಬ್ರಿಟನ್ ಈಗಿಂದೀಗಲೇ ಸಂಪೂರ್ಣವಾಗಿ ಬೇರ್ಪಡುವುದಿಲ್ಲ. ಬ್ರೆಕ್ಸಿಟ್ ಒಪ್ಪಂದದ ಪ್ರಕಾರ ಡಿಸೆಂಬರಿನವರೆಗೂ  ಬದಲಾವಣೆಯ(ಟ್ರಾನ್ಸಿಷನ್)  ಅವಧಿಯನ್ನು ನಿಗದಿ ಪಡಿಸಲಾಗಿದೆ.

ಬದಲಾವಣೆಯ  ಅವಧಿಯವರೆಗೆ ಬ್ರಿಟನ್ ದೇಶದ ನೀತಿಗಳಲ್ಲಿ ಒಂದೊಂದೇ  ಬದಲಾವಣೆ ತರಲಾಗುತ್ತದೆ. ಡಿಸೆಂಬರಿನ ವೇಳೆಗೆ ಐರೋಪ್ಯ ಒಕ್ಕೂಟದಿಂದ ಯೂರೋಪ್ ಸಂಪೂರ್ಣವಾಗಿ ಸ್ವತಂತ್ರಗೊಳ್ಳಲಿದೆ.

ಯೂರೋಪ್ ಒಕ್ಕೂಟ ಪ್ರಾರಂಭಗೊಂಡಿದ್ದು ೧೯೫೮ರಲ್ಲಿ.  ಇಡೀ ಯೂರೋಪ್ ಖಂಡಕ್ಕೆ ಒಂದು ನೀತಿ ನಿಯಮಾವಳಿಗಳನ್ನು ರೂಪಿಸುವುದು ಹಾಗೂ ಒಗ್ಗಟ್ಟು ಸಾಧಿಸುವುದು ಈ ಒಕ್ಕೂಟದ ಉದ್ದೇಶವಾಗಿತ್ತು. ಆಗ ರಾಜಕೀಯ ಮತ್ತು ಆರ್ಥಿಕವಾಗಿ ಸಾಮಾನ್ಯ ನಿಯಮಗಳನ್ನು ರೂಪಿಸಲಾಗಿತ್ತು. ಬ್ರಿಟನ್ ಸೇರಿ ಯೂರೋಪಿನ  ೨೮ ರಾಷ್ಟ್ರಗಳು  ಒಕ್ಕೂಟದ ಸದಸ್ಯತ್ವ ಹೊಂದಿದ್ದವು. ಈಗ ಬ್ರಿಟನ್ ಹೊರಬಂದಿರುವುದಿಂದ ಒಕ್ಕೂಟದಲ್ಲಿ ೨೭ ದೇಶಗಳು ಉಳಿದಂತಾಗಿದೆ.

ಒಕ್ಕೂಟದಲ್ಲಿ ಕೃಷಿ, ವಲಸೆ, ವ್ಯಾಪಾರ ಇತ್ಯಾದಿ ಅನೇಕ ವಿಚಾರಗಳಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಅನ್ವಯಿಸುವಂತೆ ಸಾಮಾನ್ಯ ನಿಯಮಾವಳಿಯನ್ನು ರೂಪಿಸಲಾಗಿತ್ತು.

ಆದರೆ, ಈ ಸಾಮಾನ್ಯ ನಿಯಮಾವಳಿಗಳ ಬಗ್ಗೆ ಬ್ರಿಟನ್ ದೇಶ ಕೆಲ ವರ್ಷಗಳ ಹಿಂದೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಪ್ರಾರಂಭಿಸಿತು. ವಲಸಿಗರು ಸಮಸ್ಯೆ, ವ್ಯಾಪಾರ ಇತ್ಯಾದಿ ವಿಚಾರಗಳಲ್ಲಿ ಬ್ರಿಟನ್ ಪ್ರತ್ಯೇಕ ನಿಲುವು ಹೊಂದಿತು.  ಅದರಿಂದಾಗಿಯೇ ಬ್ರಿಟನ್ ದೇಶ ಯೂರೋಪ್ ಒಕ್ಕೂಟದಿಂದ ಹೊರಬಿದ್ದಿತು.

Saturday, November 9, 2019

ಕರ್ತಾರಪುರ: ಭಿಂದ್ರನ್‌ವಾಲೆ ಪೋಸ್ಟರ್ ಆಯಿತು, ಈಗ ’ಭಾರತದ ಬಾಂಬ್’ ಪ್ರದರ್ಶನ

ಕರ್ತಾರಪುರ: ಭಿಂದ್ರನ್ವಾಲೆ ಪೋಸ್ಟರ್ ಆಯಿತು,
ಈಗ 'ಭಾರತದ ಬಾಂಬ್ಪ್ರದರ್ಶನ
ನವದೆಹಲಿ: ಸಿಖ್ ಪಂಥದ ಸ್ಥಾಪಕ ಗುರು ನಾನಕ್ ಅವರು ತಮ್ಮ ಜೀವನದ ಅಂತಿಮ ವರ್ಷಗಳನ್ನು ಕಳೆದಿದ್ದ, ಪ್ರಸ್ತುತ ಪಾಕಿಸ್ತಾನದಲ್ಲಿ ಇರುವ ಕರ್ತಾರಪುರದ ಗುರುದ್ವಾರಕ್ಕೆ ಭಾರತೀಯ ಯಾತ್ರಿಕರಿಗೆ ವೀಸಾಮುಕ್ತ ಪಯಣಕ್ಕೆ ಅವಕಾಶ ಕಲ್ಪಿಸಿರುವ ಕರ್ತಾರಪುರ ಕಾರಿಡಾರಿನ ಉದ್ಘಾಟನೆಗೆ ಒಂದು ದಿನ ಮುಂಚಿತವಾಗಿ 2019 ನವೆಂಬರ್ 08ರ ಶುಕ್ರವಾರ ಪಾಕಿಸ್ತಾನಿ ಅಧಿಕಾರಿಗಳು ಇನ್ನೊಂದು ವಿವಾದವನ್ನು ಹುಟ್ಟು ಹಾಕಿದರು.
ಕರ್ತಾರಪುರದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ಖಾಸಗಿ ಗುಂಪೊಂದರಲ್ಲಿ ಇದ್ದ ಕೆಲವು ಭಾರತೀಯರ ಪ್ರಕಾರ, ಪಾಕಿಸ್ತಾನಿ ಅಧಿಕಾರಿಗಳು ಗುರುದ್ವಾರದಲ್ಲಿ ಸಣ್ಣ ಸ್ಥಂಭವೊಂದರ ಮೇಲೆ ಪುಟ್ಟ ಬಾಂಬ್ ಒಂದನ್ನು ಪ್ರದರ್ಶನಕ್ಕೆ ಇರಿಸಿ ಅದರ ಬಳಿ ಇದು ಗುರುದ್ವಾರದ ಮೇಲೆ ಭಾರತೀಯ ವಾಯುಪಡೆ ೧೯೭೧ರ ಸಮರಕಾಲದಲ್ಲಿ ಎಸೆದ ಬಾಂಬ್ ಎಂಬ ಅಡಿಟಪ್ಪಣಿಯನ್ನು ಬರೆದಿಟ್ಟಿದ್ದಾರೆ.

ಸಣ್ಣ ಸ್ಥಂಭವೊಂದರ ತುದಿಯಲ್ಲಿ ಗಾಜಿನ ಪೆಟ್ಟಿಗೆಯೊಳಗೆ ಬಾಂಬನ್ನು ಇರಿಸಲಾಗಿದ್ದು ಸ್ಥಂಭವನ್ನು ಸಿಖ್ ಪಂಥವನ್ನು ಪ್ರತಿನಿಧಿಸುವಖಂಡಲಾಂಛನದಿಂದ ಅಲಂಕರಿಸಲಾಗಿದೆ.
ಸ್ಥಂಭದ ಬಳಿ ಇರಿಸಲಾಗಿರುವ ಟಿಪ್ಪಣಿಯಲ್ಲಿಮಿರಾಕಲ್ ಆಫ್ ವಹೆಗುರುಜಿಎಂಬ ವಾಕ್ಯವನ್ನು ಬರೆಯಲಾಗಿದೆ.

ಭಾರತೀಯ ವಾಯುಪಡೆಯು ಬಾಂಬನ್ನು ೧೯೭೧ರಲ್ಲಿ ಶ್ರೀ ಕರ್ತಾರಪುರ ಸಾಹಿಬ್ ಗುರುದ್ವಾರ ದರ್ಬಾರ್ ಸಾಹಿಬ್ ಮೇಲೆ ಅದನ್ನು ನಾಶ ಪಡಿಸುವ ಉದ್ದೇಶದೊಂದಿಗೆ ಉದುರಿಸಿತ್ತು. ಆದಾಗ್ಯೂ ಕೆಟ್ಟ ಕಾರ್ಯವು ವಹೆಗುರುಜಿ (ಸರ್ವಶಕ್ತ ಅಲ್ಲಾಹ್) ಆಶೀರ್ವಾದದಿಂದ ಫಲಿಸಲಿಲ್ಲ ಮತ್ತು ಸದರಿ ಬಾಂಬ್ ಖೂ ಸಾಹಿಬ್ (ಪವಿತ್ರ ಬಾವಿ) ಒಳಕ್ಕೆ ಬಿತ್ತು ಮತ್ತು ದರ್ಬಾರ್ ಸಾಹಿಬ್ ಹಾನಿರಹಿತವಾಗಿ ಉಳಿಯಿತು. ಬಾಂಬ್ ಬಿದ್ದ ಇದೇ ಪವಿತ್ರ ಬಾವಿಯಿಂದ ಶ್ರೀ ಗುರುನಾನಕ್ ದೇವ್ ಜಿ ಅವರು ತಮ್ಮ ಹೊಲಗಳಿಗೆ ನೀರಾವರಿಗಾಗಿ ನೀರು ತರುತ್ತಿದ್ದರು ಹೇಳುವುದು ಇಲ್ಲಿ ಯಥೋಚಿತವಾಗುತ್ತದೆಎಂದೂ ಟಿಪ್ಪಣಿಯಲ್ಲಿ ಬರೆಯಲಾಗಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಗಳಿಂದ ಈವರೆಗೆ ಯಾವುದೆ ಪ್ರತಿಕ್ರಿಯೆ ಬಂದಿಲ್ಲ.
ಕಾರಿಡಾರ್ ಉದ್ಘಾಟನೆಗೆ ಸಂಬಂಧಿಸಿದ ವ್ಯಕ್ತಿಗಳ ಪ್ರಕಾರ, ಭಾರತದ ಪಂಜಾಬ್ ರಾಜ್ಯದಲ್ಲಿ ಪ್ರತ್ಯೇಕತಾವಾದಿ ಭಾವನೆಗಳನ್ನು ಪ್ರಚೋದಿಸುವ ಸಲುವಾಗಿ ಮತ್ತು ಸಿಕ್ಖರು ಮತ್ತು ಇತರ ಸಮುದಾಯಗಳ ಜೊತೆಗೆ ದೇಶದಲ್ಲಿ (ಪಾಕಿಸ್ತಾನ) ಬಾಂಧವ್ಯ ವೃದ್ಧಿಯ ಸಲುವಾಗಿ ಪ್ರಯತ್ನವನ್ನು ಪಾಕಿಸ್ತಾನಿ ಅಧಿಕಾರಿಗಳು ನಡೆಸಿದ್ದಾರೆ ಎಂದು ಹೇಳಲಾಗಿದೆ.

ವಾರಾರಂಭದಲ್ಲಿ ಪಾಕಿಸ್ತಾನವು ಕಾರಿಡಾರ್ ಉದ್ಘಾಟನೆ ಸಲುವಾಗಿ ಬಿಡುಗಡೆ ಮಾಡಿದ ಹಾಡಿನ ವಿಡಿಯೋದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರ ಭಿತ್ತಿ ಚಿತ್ರಗಳನ್ನು (ಪೋಸ್ಟರ್) ಪ್ರದರ್ಶಿಸುವ ಮೂಲಕ ವಿವಾದ ಹುಟ್ಟು ಹಾಕಿತ್ತು. ಭಾರತವು ಇದಕ್ಕೆ ಪ್ರಬಲ ಪ್ರತಿಭಟನೆಯನ್ನು ವ್ಯಕ್ತ ಪಡಿಸಿತ್ತು.

ಸಿಖ್ ಪಂಥದ ಸ್ಥಾಪಕ ಗುರುನಾನಕ್ ಅವರ ೫೫೦ನೇ ಜನ್ಮದಿನದ ಅಂಗವಾಗಿ ಕರ್ತಾರಪುರ ಕಾರಿಡಾರ್ ತೆರೆಯುವ ಸಂದರ್ಭವನ್ನು ಪಾಕಿಸ್ತಾನದಲ್ಲಿನ ಖಲಿಸ್ತಾನಪರ ಶಕ್ತಿಗಳನ್ನು ಪ್ರಚೋದಿಸುವ ಸಲುವಾಗಿ ಬಳಸಿಕೊಳ್ಳಲು ಪಾಕಿಸ್ತಾನ ಯತ್ನಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ಹಿಂದೆ ಹೇಳಿದ್ದರು.

ದರ್ಬಾರ್ ಸಾಹಿಬ್ ಜೀರ್ಣೋದ್ಧಾರ ಮತ್ತು ವಿಸ್ತರಣಾ ಕಾರ್ಯವನ್ನು ಪಾಕಿಸ್ತಾನಿ ಸೇನೆಯ ಎಂಜಿನಿಯರಿಂಗ್ ಘಟಕವಾದ ಫ್ರಾಂಟಿಯರ್ ವರ್ಕ್ಸ್ ಆರ್ಗನೈಸೇಷನ್ ನಡೆಸಿದೆ. ಮೇಲೆ ತಿಳಿಸಿದ ಪ್ರದರ್ಶನವು ಮಿಲಿಟರಿಯ ಕೃತ್ಯವಾಗಿರಬಹುದು ಎಂದು ವರದಿ ಹೇಳಿದೆ.

Advertisement