Showing posts with label ಕ್ರಿಕೆಟ್. Show all posts
Showing posts with label ಕ್ರಿಕೆಟ್. Show all posts

Wednesday, June 4, 2025

ಆರ್‌ಸಿಬಿ ವಿಜಯೋತ್ಸವ, ಮಹಾದುರಂತ: ೧೧ ಜನರ ಸಾವು

 ಆರ್‌ಸಿಬಿ ವಿಜಯೋತ್ಸವ, ಮಹಾದುರಂತ: ೧೧ ಜನರ ಸಾವು

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ೨೦೨೫ ಜೂನ್‌ ೪ರ ಬುಧವಾರ ಐಪಿಎಲ್ ವಿಜಯೋತ್ಸವ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ದುರಂತ ಸಂಭವಿಸಿದೆ. ಇಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 11ಜನರು ಮೃತರಾಗಿ, 47 ಮಂದಿ ಗಾಯಗೊಂಡಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ ಸಿಬಿ) ತಂಡವು ಜೂನ್‌ ೩ರಂದು ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟ್ವೆಂಟಿ-೨೦ ಪಂದ್ಯದಲ್ಲಿ ೧೭ ವರ್ಷಗಳ ಬಳಿಕ ಗೆದ್ದ ಹಿನ್ನೆಲೆಯಲ್ಲಿ ಕ್ರಿಕೆಟ್‌ ಅಸೋಸಿಯೇಷನ್‌ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡದ್ದ ವಿಜಯೋತ್ಸವ ಸಂದರ್ಭದಲ್ಲಿ ಈ ಕಾಲ್ತುಳಿತದ ದುರಂತ ಘಟಿಸಿದೆ.

ʼನಿರೀಕ್ಷೆ ಮೀರಿದ ಜನಸಂದಣಿಯ ಕಾರಣದಿಂದ ಈ ದುರಂತ ಸಂಭವಿಸಿದೆʼ ಎಂದು ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ʼಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದೇನೆ, ತಮ್ಮವರನ್ನು ಕಳೆದುಕೊಂಡವರನ್ನು ಸಂತೈಸಿದ್ದೇನೆ. ಸಂಭ್ರಮಾಚರಣೆ ಮಾಡುವಾಗ ಇಂತಹ ದುರಂತ ನಡೆಯಬಾರದಾಗಿತ್ತು. ಈ ಘಟನೆಯ ಬಗ್ಗೆ ನಮಗೆ ಮರುಕವಿದೆ.ʼ ಎಂದು ಅವರು ಹೇಳಿದ್ದಾರೆ.

ಸಾವಿಗೀಡಾದವರಲ್ಲಿ ಹೆಚ್ಚಿನವರು ಯುವ ವಯಸ್ಸಿನವರು. ನಾವು ಮೃತಪಟ್ಟವರ ಕುಟುಂಬದವರಿಗೆ ರೂ.10 ಲಕ್ಷ ಪರಿಹಾರ ನೀಡಲಿದ್ದೇವೆ. ಗಾಯಗೊಂಡವರ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ. ಗಾಯಗೊಂಡವರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ದುರಂತದ ಬಗ್ಗೆ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದ್ದೇನೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. 15ದಿನಗಳ ಒಳಗಾಗಿ ತನಿಖೆಯ ವರದಿಯನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮಂಗಳವಾರ ತಡರಾತ್ರಿವರೆಗೂ ಐಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಕ್ರಿಕೆಟ್ ಅಸೋಸಿಯೇಶನ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸರ್ಕಾರದ ವತಿಯಿಂದ ವಿಧಾನಸೌಧದ ಬಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಮ್ಮ ನಿರೀಕ್ಷೆಗೂ ಮೀರಿ ಜನ, ಅಭಿಮಾನಿಗಳು ಸೇರಿದ್ದರು. ವಿಧಾನಸೌಧ ಎದುರು ಸುಮಾರು 1ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಆದರೂ ಸರ್ಕಾರ ಆಯೋಜಿಸಿದ್ದ ಸಮಾರಂಭದಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು, ದುರಂತ ನಡೆದಿಲ್ಲ.

ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದುರಂತ ಸಂಭವಿಸಿದೆ. ಯಾರೂ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕ್ರಿಕೆಟ್ ಅಸೋಸಿಯೇಶನ್ ಅಥವಾ ನಾವು ನಿರೀಕ್ಷಿಸಿರಲಿಲ್ಲ. ಕ್ರಿಕೆಟ್ ಸ್ಟೇಡಿಯಂನಲ್ಲಿ 35 ಸಾವಿರ ಜನರು ಕುಳಿತುಕೊಳ್ಳುವ ಆಸನ ವ್ಯವಸ್ಥೆಯಿದೆ. ಆದರೆ 2-3 ಲಕ್ಷ ಜನರು ಆಗಮಿಸಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಬರುವ ನಿರೀಕ್ಷೆ ಮಾಡಿರಲಿಲ್ಲ. ಸ್ಟೇಡಿಯಂ ಸಾಮರ್ಥ್ಯದಷ್ಟು ಜನರ ನಿರೀಕ್ಷೆಯಿತ್ತು. ಕ್ರಿಕೆಟ್ ಅಸೋಸಿಯೇಷನ್ ನಡೆಸುವ ಕಾರ್ಯಕ್ರಮಗಳಿಗೆ ಭದ್ರತೆ ಒದಗಿಸುವ ಕೆಲಸ ಸರ್ಕಾರ ಮಾಡುತ್ತದೆಯಷ್ಟೇ ಎಂದು ಸಿದ್ಧರಾಮಯ್ಯ ನುಡಿದರು.

Sunday, January 5, 2020

ಕ್ರಿಕೆಟ್ಟಿಗೆ ಇರ್ಫಾನ್ ಪಠಾಣ್ ವಿದಾಯ

ಕ್ರಿಕೆಟ್ಟಿಗೆ ಇರ್ಫಾನ್ ಪಠಾಣ್ ವಿದಾಯ
ಮುಂಬೈ:  ಹದಿನಾರು ವರ್ಷಗಳ ಹಿಂದೆ ಕಪಿಲ್  ದೇವ್  ಅವರ ಉತ್ತರಾಧಿಕಾರಿ ಎಂಬ ಹೆಗ್ಗಳಿಕೆಯೊಂದಿಗೆ ಭಾರತ ತಂಡವನ್ನು ಪ್ರವೇಶಿಸಿದ್ದ ಆಲ್ ರೌಡರ್ ಇರ್ಫಾನ್   ಪಠಾಣ್  2020 ಜನವರಿ 04ರ  ಶನಿವಾರ  ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದರು.

ಎಡಗೈ
ಸೀಮ್ ಬೌಲಿಂಗ್ ಆಲ್ ರೌಂಡ್ ಸಾಧನೆಯ ಮೂಲಕ ಮಿಂಚತೊಡಗಿದರೂ ಪದೇಪದೇ ಕಾಡುತ್ತಿದ್ದ ಗಾಯದ ಸಮಸ್ಯೆ  ಇರ್ಫಾನ್ ಕ್ರಿಕೆಟ್ ಬದುಕಿಗೆ ಕಂಟಕವಾಗಿ ಕಾಡಿತ್ತು. ಹೀಗಾಗಿ ಕಪಿಲ್ ದೇವ್  ಸ್ಥಾನವನ್ನು ತುಂಬಲು ಅವರಿಂದ ಸಾಧ್ಯವಾಗಲೇ ಇಲ್ಲ.

ಸ್ವಿಂಗ್ ಸ್ಪೆಷಲಿಸ್ಟ್: ಬಲಗೈ ಬ್ಯಾಟ್ ಮನ್ ಗಳಿಗೆ  ಎಡಗೈ ಸ್ವಿಂಗ್ ಎಸೆತಗಳ ಮೂಲಕ ಅಪಾಯಕಾರಿಯಾಗಿ ಗೋಚರಿಸುತ್ತಿದ್ದ ಇರ್ಫಾನ್ ಪಠಾಣ್ ೨೦೦೩ರ ಆಸ್ಟ್ರೇಲಿಯ ಪ್ರವಾಸದ ವೇಳೆ ಅಡಿಲೇಡಿನಲ್ಲಿ  ಟೆಸ್ಟ್ ಪದಾರ್ಪಣೆ ಮಾಡಿದ್ದರು. ೨೦೦೮ರ ಬಳಿಕ ಯಾವುದೇ ಟೆಸ್ಟಿನಲ್ಲಿ  ಕಾಣಿಸಿಕೊಳ್ಳಲಿಲ್ಲ. ೨೦೦೪-೨೦೧೨ರ ಅವಧಿಯಲ್ಲಿ ಏಕದಿನ ತಂಡದ ಸದಸ್ಯರಾಗಿದ್ದರು.

೨೫
ಟೆಸ್ಟ್ ಗಳಿಂದ  ,೧೦೫ ರನ್, ೧೦೦ ವಿಕೆಟ್; ೧೨೦ ಏಕದಿನ ಪಂದ್ಯಗಳಿಂದ ,೫೪೪ ರನ್ ಹಾಗೂ ೧೭೩ ವಿಕೆಟ್; ೨೪ ಟಿ೨೦ ಪಂದ್ಯಗಳಿಂದ ೧೭೨ ರನ್ ಹಾಗೂ ೨೮ ವಿಕೆಟ್ ಉರುಳಿಸಿದ್ದು ಇರ್ಫಾನ್ ಅವರ ಸಾಧನೆಯಾಗಿತ್ತು.

 ಟಿ೨೦ ವಿಶ್ವಕಪ್ ಹೀರೋ:  ೨೦೦೭ರ ಚೊಚ್ಚಲ ಟಿ೨೦ ವಿಶ್ವಕಪ್ ಪಂದ್ಯಾವಳಿಯ ವೇಳೆ ಭಾರತ ತಂಡದ ಸ್ಟಾರ್ ಆಟಗಾರನಾಗಿದ್ದ ಪಠಾಣ್, ಪಾಕಿಸ್ಥಾನ ವಿರುದ್ಧದ ಫೈನಲ್ ಮುಖಾಮುಖಿಯಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ೨೦೦೬ರ ಪಾಕಿಸ್ಥಾನ ಪ್ರವಾಸದ ವೇಳೆ ಕರಾಚಿ ಟೆಸ್ಟ್ ಪಂದ್ಯದ ಪ್ರಥಮ ಓವರಿನಲ್ಲೇ ಹ್ಯಾಟ್ರಿಕ್ ಸಾಧಿಸಿದ್ದು ಪಠಾಣ್ ಪರಾಕ್ರಮಕ್ಕೆ ಸಾಕ್ಷಿ. ಕೊನೆಯ ಎಸೆತಗಳಲ್ಲಿ ಅವರು ಸಲ್ಮಾನ್ ಬಟ್, ಯೂನಿಸ್ ಖಾನ್ ಮತ್ತು ಮೊಹಮ್ಮದ್ ಯೂಸುಫ್ ವಿಕೆಟ್ ಉರುಳಿಸಿದ್ದರು.

ಆಸ್ಟ್ರೇಲಿಯ ವಿರುದ್ಧದ ೨೦೦೮ರ ಪರ್ತ್ ಟೆಸ್ಟ್ ಪಂದ್ಯದಲ್ಲಿ ಭಾರತದ ೭೨ ರನ್ ಜಯದಲ್ಲೂ ಇರ್ಫಾನ್ ಕೊಡುಗೆ ಮಹತ್ವದ್ದಾಗಿತ್ತು. ಆದರೆ ಸತತವಾಗಿ ಕಾಡುತ್ತಿದ್ದ ಗಾಯದ ಸಮಸ್ಯೆ ಇರ್ಫಾನ್ ಅವರ ಕ್ರಿಕೆಟ್ ಬದುಕಿನ ಹಾದಿಯನ್ನೇ ತಪ್ಪಿಸಿತು.

ಜಮ್ಮು ಕಾಶ್ಮೀರ ಪರ ಆಟ: ಮೂಲತಃ ಬರೋಡದ ಕ್ರಿಕೆಟಿಗನಾಗಿರುವ ಇರ್ಫಾನ್ ಪಠಾಣ್, ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರವನ್ನು ಪ್ರತಿನಿಧಿಸಿದ್ದರು. ಫೆಬ್ರವರಿಯಲ್ಲಿ ತಂಡದ ಪರವಾಗಿಯೇ ಕೊನೆಯ ಸಲ ಸ್ಪರ್ಧಾತ್ಮಕ  ಕ್ರಿಕೆಟಿನಲ್ಲಿ ಕಾಣಿಸಿಕೊಂಡಿದ್ದರು.

Advertisement