Showing posts with label Rajyasabha. Show all posts
Showing posts with label Rajyasabha. Show all posts

Friday, March 13, 2020

ರಾಜ್ಯಸಭಾ ಚುನಾವಣೆ: ಜ್ಯೋತಿರಾದಿತ್ಯ ಸಿಂಧಿಯಾ ನಾಮಪತ್ರ ಸಲ್ಲಿಕೆ

ರಾಜ್ಯಸಭಾ ಚುನಾವಣೆ: ಜ್ಯೋತಿರಾದಿತ್ಯ ಸಿಂಧಿಯಾ ನಾಮಪತ್ರ ಸಲ್ಲಿಕೆ
ಭೋಪಾಲ್: ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಾರ್ಚ್ ೨೬ರ ರಾಜ್ಯಸಭಾ ಚುನಾವಣೆಗಳಿಗಾಗಿ 2020 ಮಾರ್ಚ್  13ರ ಶುಕ್ರವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಮಧ್ಯಪ್ರದೇಶ ಬಿಜೆಪಿ ಕಚೇರಿಯಿಂದ ಹೊರಟ ಸಿಂಧಿಯಾ ಅವರು ಮಧ್ಯಾಹ್ನ ೨ ಗಂಟೆ ಸುಮಾರಿಗೆ ರಾಜ್ಯ ವಿಧಾನಸಭಾ ಸಚಿವಾಲಯಕ್ಕೆ ಆಗಮಿಸಿ ಚುನಾವಣಾ ಅಧಿಕಾರಿಯಾದ ವಿಧಾನಸಭಾ ಮುಖ್ಯ ಕಾರ್‍ಯದರ್ಶಿ ಎಪಿ ಸಿಂಗ್ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯ ಬಿಜೆಪಿ ಅಧ್ಯಕ್ಷ ವಿಡಿ ಶರ್ಮ, ಹೊರಹೋಗುತ್ತಿರುವ ರಾಜ್ಯಸಭಾ ಸದಸ್ಯ ಪ್ರಭಾತ್ ಝಾ ಮತ್ತು ಬಿಜೆಪಿಯ ಇತರ ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಿಜೆಪಿ ಕಚೇರಿ ತಲುಪುವ ಮುನ್ನ ಸಿಂಧಿಯಾ ಅವರು ಮಾಜಿ ಸಚಿವ ನರೋತ್ತಮ ಮಿಶ್ರ ಅವರ ನಿವಾಸದಲ್ಲಿ ಪಕ್ಷದ ಇತರ ನಾಯಕರ ಜೊತೆಗೆ ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು.
ಗುನಾ ಕ್ಷೇತ್ರದ ಮಾಜಿ ಲೋಕಸಭಾ ಸದಸ್ಯರಾದ ಸಿಂಧಿಯಾ ಅವರು ತಮ್ಮ ಅತ್ತೆ  (ತಂದೆಯ ಸಹೋದರಿ) ಬಿಜೆಪಿ ಶಾಸಕಿ ಯಶೋಧರಾ ರಾಜೆ ಸಿಂಧಿಯಾ ಅವರನ್ನೂ ಬೆಳಗ್ಗೆ ಭೇಟಿ ಮಾಡಿದ್ದರು.
ಗುರುವಾರ ರಾತ್ರಿ ಸಿಂಧಿಯಾ ಅವರು ಚೌಹಾಣ್ ಅವರು ಏರ್ಪಡಿಸಿದ್ದ ಭೋಜನಕೋಟದಲ್ಲಿ ಭಾಗವಹಿಸಿದ್ದರು.
ಬುಧವಾರ ಸಿಂಧಿಯಾ ಅವರು ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ ಅವರನ್ನು ಮಧ್ಯಪ್ರದೇಶದಿಂದ ತನ್ನ ರಾಜ್ಯಸಭಾ ಅಭ್ಯರ್ಥಿಯಾಗಿ ಹೆಸರಿಸಿತ್ತು.
ಮಂಗಳವಾರ ಬೆಳಗ್ಗೆ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಸಿಂಧಿಯಾ ಬುದವಾರ ದೆಹಲಿಯಲ್ಲಿ ಪಕ್ಷಾಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಮಧ್ಯಪ್ರದೇಶದ ಮೂರು ರಾಜ್ಯಸಭಾ ಸ್ಥಾನಗಳನ್ನು ಪ್ರಸ್ತುತ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ್ತು ಬಿಜೆಪಿಯ ಪ್ರಭಾತ್ ಝಾ ಹಾಗೂ ಸತ್ಯನಾರಾಯಣ ಜತಿಯಾ ಹೊಂದಿದ್ದಾರೆ. ಈ ಮೂವರ ಅವಧಿ ಮುಂದಿನ ತಿಂಗಳು ಮುಗಿಯಲಿದ್ದು, ಈ ಸ್ಥಾನಗಳು ಖಾಲಿಯಾಗಲಿವೆ. ಕಾಂಗ್ರೆಸ್ ಪಕ್ಷವು ದಿಗ್ವಿಜಯ್ ಸಿಂಗ್ ಅವರನ್ನೇ ರಾಜ್ಯಸಭಾ ಅಭ್ಯರ್ಥಿಯಾಗಿ ಮರುನಾಮಕರಣ ಮಾಡಿದೆ.

Thursday, March 12, 2020

ಎನ್‌ಪಿಆರ್‌ಗೆ ಯಾವ ದಾಖಲೆಯೂ ಬೇಕಿಲ್ಲ: ರಾಜ್ಯಸಭೆಯಲ್ಲಿ ಶಾ ಸ್ಪಷ್ಟನೆ

ಎನ್‌ಪಿಆರ್‌ಗೆ ಯಾವ ದಾಖಲೆಯೂ
ಬೇಕಿಲ್ಲ: ರಾಜ್ಯಸಭೆಯಲ್ಲಿ ಶಾ ಸ್ಪಷ್ಟನೆ
ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್‌ಪಿಆರ್) ಪರಿಷ್ಕರಣೆಯ ಸಂದರ್ಭದಲ್ಲಿ ’ಯಾರನ್ನೂ ’ಡಿ ಅಥವಾ ಡೌಟ್ ಫುಲ್ (ಸಂಶಯಾಸ್ಪದ) ಎಂಬುದಾಗಿ ಗುರುತಿಸಲಾಗುವುದಿಲ್ಲ ಮತ್ತು ಯಾರು ಕೂಡಾ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿಶ್ ಶಾ 2020 ಮಾರ್ಚ್ 13ರ ಗುರುವಾರ  ರಾಜ್ಯಸಭೆಯಲ್ಲಿ ಸ್ಪಷ್ಟ ಪಡಿಸಿದರು.

ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯ ವೇಳೆ ವಿರೋಧಿ ನಾಯಕರು ಮಾಡಿದ ಆಪಾದನೆಗಳಿಗೆ ಉತ್ತರ ನೀಡಿದ ಶಾ, ’ಎನ್‌ಪಿಆರ್ ಪರಿಷ್ಕರಣೆ ಪ್ರಕ್ರಿಯೆಯ ವೇಳೆಯಲ್ಲಿ ತಾವು ಬಯಸಿದ ಮಾಹಿತಿಯನ್ನು ಮಾತ್ರ ಎಣಿಕೆದಾರರ ಬಳಿ ಘೋಷಿಸುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇದೆ ಎಂದು ನುಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗೆಗಿನ ಎಲ್ಲ ಸಂಶಯಗಳನ್ನು ಕೂಡಾ ಸ್ಪಷ್ಟ ಪಡಿಸುವ ಕಾಲ ಬಂದಿದೆ ಮತ್ತು ಎಲ್ಲ ಪಕ್ಷಗಳೂ ಈಗ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಕೋರಿದರು. ೫೨ ಮಂದಿಯನ್ನು ಬಲಿತೆಗೆದುಕೊಂಡ ದೆಹಲಿ ಗಲಭೆಗಳಲ್ಲಿ ಶಾಮೀಲಾದ ೧೯೨೨ ಜನರನ್ನು ಗುರುತಿಸಲಾಗಿದೆ ಎಂದೂ ಅವರು ತಿಳಿಸಿದರು.

Thursday, December 12, 2019

ಚಾರಿತ್ರಿಕ ಪೌರತ್ವ (ತಿದ್ದುಪಡಿ) ಮಸೂದೆಗೆ ಸಂಸತ್ ಮುದ್ರೆ

ಚಾರಿತ್ರಿಕ ಪೌರತ್ವ (ತಿದ್ದುಪಡಿ) ಮಸೂದೆಗೆ ಸಂಸತ್ ಮುದ್ರೆ
ರಾಜ್ಯಸಭೆಯಲ್ಲಿ 125 ಪರ, 105 ವಿರೋಧ ಮತಗಳೊಂದಿಗೆ ಒಪ್ಪಿಗೆ

ನವದೆಹಲಿ: ವಿರೋಧ ಪಕ್ಷಗಳ ಭಾರೀ ಪ್ರತಿಭಟನೆ, ಶಿವಸೇನೆಯ ಸಭಾತ್ಯಾಗದ ಬಳಿಕ ರಾಜ್ಯಸಭೆಯು 2019 ಡಿಸೆಂಬರ್ 11ರ ಬುಧವಾರ ಬೆಳಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ ಐತಿಹಾಸಿಕ ಪೌರತ್ವ (ತಿದ್ದುಪಡಿ) ಮಸೂದೆಗೆ ರಾತ್ರಿ ತನ್ನ ಅಂಗೀಕಾರವನ್ನು ನೀಡಿತು. ಸದನದಲ್ಲಿ 125 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 105 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು. ಶಿವಸೇನೆಯ ಮೂವರು ಸದಸ್ಯರು ಸಭಾತ್ಯಾಗ ಮಾಡಿದರು.

ಇದಕ್ಕೂ ಮುನ್ನ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವವನ್ನು ಸದನವು ತಿರಸ್ಕರಿಸಿತು. ಮಸೂದೆಯನ್ನು 2019 ಡಿಸೆಂಬರ್ 09ರ ಸೋಮವಾರ ಲೋಕಸಭೆಯು ಕೋಲಾಹಲಕಾರಿ ಪ್ರತಿಭಟನೆಯ ಬಳಿಕ ಪ್ರಚಂಡ ಬಹುಮತದೊಂದಿಗೆ ಅಂಗೀಕರಿಸಿತ್ತು.

ಉಭಯ ಸದನಗಳ ಅನುಮೋದನೆಯೊಂದಿಗೆ ಪೌರತ್ವ ತಿದ್ದುಪಡಿಯು ಈಗ  ರಾಷ್ಟ್ರಪತಿಯವರ ಒಪ್ಪಿಗೆ ಬಳಿಕ ಶಾಸನರೂಪ ಪಡೆಯಲಿದ್ದು, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ಈ ಮೂರು ರಾಷ್ಟ್ರಗಳ ಸುಮಾರು ೧.೫ ಕೋಟಿಗೂ ಹೆಚ್ಚು ಮಂದಿ ವಲಸಿಗರಿಗೆ ಭಾರತದ ಪೌರತ್ವವವನ್ನು ಒದಗಿಸಲಿದೆ. ಇವರ ಪೈಕಿ ಶೇಕಡಾ ೫೦ರಷ್ಟು ಮಂದಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಸೇರಿದವರು ಎಂದು ಹೇಳಲಾಯಿತು.

ಸುಮಾರು ೬ ಗಂಟೆಗಳಿಗೂ ಹೆಚ್ಚಿನ ಕೋಲಾಹಲಕಾರೀ ಚರ್ಚೆಗೆ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು ಪ್ರಬಲವಾಗಿ ಸಮರ್ಥಿಸಿದ ಬಳಿಕ ಸದನವು ಅಂಗೀಕರಿಸಿದ ಈ ಮಸೂದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ಈ ಮೂರು ದೇಶಗಳಿಂದ ಕಿರುಕುಳದ ಹಿನ್ನೆಲೆಯಲ್ಲಿ ಭಾರತಕ್ಕೆ ವಲಸೆ ಬಂದಿರುವ ಹಿಂದುಗಳು, ಸಿಕ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಭಾರತೀಯ ಪೌರರಾಗುವ ಅವಕಾಶವನ್ನು ಒದಗಿಸಿದ್ದು, ಇದಕ್ಕಾಗಿ ಅವರ ೧೧ ವರ್ಷಗಳ ಕಾಯುವಿಕೆಯನ್ನು ಸಮಾಪ್ತಿಗೊಳಿಸಿತು.

ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ, ಚರ್ಚೆಗೆ ಉತ್ತರ ನೀಡಿದ ಅಮಿತ್ ಶಾ ಅವರು ’ಭಾರತವು ಎಂದಿಗೂ ಮುಸ್ಲಿಮ್ ಮುಕ್ತ ರಾಷ್ಟ್ರವಾಗದು, ಅವರು ಹಿಂದೆ, ಇಂದು ಮತ್ತು ಮುಂದೆ ಕೂಡಾ ಭಾರತೀಯರಾಗಿಯೇ ಇರುತ್ತಾರೆ ಎಂದು ರಾಜ್ಯಸಭೆಯಲ್ಲಿ ಘೋಷಿಸಿ,  ’ಪೌರತ್ವ (ತಿದ್ದುಪಡಿ) ಮಸೂದೆಯು ’ ಚಾರಿತ್ರಿಕ ತಪ್ಪನ್ನು ಸರಿಪಡಿಸುತ್ತಿದೆ ಎಂದು ಪ್ರತಿಪಾದಿಸಿದರು.

‘ಧಾರ್ಮಿಕ ನೆಲೆಯಲ್ಲಿ ಭಾರತವನ್ನು ವಿಭಜಿಸಲಾಗಿದೆ ಎಂದು ನಾನು ಸದನದಲ್ಲಿ ಬುಧವಾರ ಮಸೂದೆ ಮಂಡನೆ ಮಾಡುತ್ತಾ ಹೇಳಿದ್ದೇನೆ. ವಿಪಕ್ಷಗಳು ನನ್ನ ಈ ಹೇಳಿಕೆಯನ್ನು ಟೀಕಿಸಿವೆ. ಆದ್ದರಿಂದ ನಾನು ೧೯೫೦ರ ಏಪ್ರಿಲ್ ೮ರ ನೆಹರೂ-ಲಿಯಾಖತ್ ಒಪ್ಪಂದದ (ದೆಹಲಿ ಘೋಷಣೆ) ಸಾಲನ್ನು ಉಲ್ಲೇಖಿಸಬಯಸುವೆ ಎಂದು ಅಮಿತ್ ಶಾ ಹೇಳಿದರು.

‘ಧಾರ್ಮಿಕ ಅಲ್ಪಸಂಖ್ಯಾತರಿಗೆ ಉಭಯ ದೇಶಗಳಲ್ಲೂ (ಭಾರತ ಮತ್ತು ಪಾಕಿಸ್ತಾನ) ಸರ್ಕಾರ ಮತ್ತು ತಮ್ಮ ಸ್ವಂತ ಧರ್ಮ ಆಚರಣೆಯಲ್ಲಿ ಸಮಾನ ಹಕ್ಕುಗಳನ್ನು ನೀಡಲಾಗುವುದು ಎಂದು ಸದರಿ ಒಪ್ಪಂದ ಹೇಳಿದೆ. ಉಭಯ ದೇಶಗಳ ಪ್ರಧಾನಿಗಳು ತಮ್ಮ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಮಾಡಿದ ಪ್ರತಿಪಾದನೆಗಳು ಇವು ಎಂದು ಶಾ ನುಡಿದರು.

’ಆದ್ದರಿಂದ ದೇಶವಿಭಜನೆಯನ್ನು ಧಾರ್ಮಿಕ ನೆಲೆಯಲ್ಲಿಯೇ ಮಾಡಲಾಗಿದೆ. ಇದೊಂದು ದೊಡ್ಡ ತಪ್ಪಾಗಿದ್ದು, ಈ ಕಾರಣದಿಂದಲೇ ನಾವು ಈ ಮಸೂದೆಯನ್ನು ರಚಿಸಬೇಕಾಯಿತು ಎಂದು ಶಾ ಹೇಳಿದರು.

‘ನನಗೆ ಪಾಕಿಸ್ತಾನದ ಕಾನೂನು ಗೊತ್ತಿದೆ, ಅಲ್ಲಿ ಹಲವಾರು ನಿರ್ಬಂಧಗಳಿವೆ. ಭಾರತವು ತನ್ನ ತತ್ವಗಳನ್ನು ಅನುಸರಿಸಿದೆ- ನಾವು ಅಲ್ಪಸಂಖ್ಯಾತ ಸಮುದಾಯದ ಜನರು ಭಾರತದ ಮುಖ್ಯ ನ್ಯಾಯಮೂರ್ತಿ, ಮುಖ್ಯ ಚುನಾವಣಾ ಆಯುಕ್ತ ಇತ್ಯಾದಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದನ್ನು ನೋಡಿದ್ದೇವೆ. ಆದರೆ ಇದು ನೆರೆಯ ರಾಷ್ಟ್ರಗಳಲ್ಲಿ ಸಂಭವಿಸಿದೆಯೇ? ಈ ಅಲ್ಪಸಂಖ್ಯಾತರು ತಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ನಮ್ಮ ದೇಶಕ್ಕೆ ಬಂದಿದ್ದಾರೆ. ನಾವು ಅವರಿಗೆ ಪೌರತ್ವ ಕೊಡಬಾರದೇ?’ ಎಂದು ಪ್ರಶ್ನಿಸಿದ ಗೃಹ ಸಚಿವರು ’ಹೀಗಾಗಿಯೇ ಈ ಕಾನೂನು ಅಗತ್ಯವಾಗಿದೆ ಎಂದು ನುಡಿದರು.

ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಿಂದ ಕಿರುಕುಳಕ್ಕೆ ಗುರಿಯಾಗಿ ಭಾರತಕ್ಕೆ ಬಂದಿರುವ ವಲಸೆಗಾರರಿಗೆ ತ್ವರಿತಗತಿಯಲ್ಲಿ ಪೌರತ್ವವನ್ನು ನೀಡಲು ಮಸೂದೆ ಕೋರಿದೆ. ಈ ಅಲ್ಪಸಂಖ್ಯಾತರು ಗೌರವಾನ್ವಿತ ಬದುಕು ನೀಡುವುದು ಭಾರತದ ಕರ್ತವ್ಯ ಎಂದು ವಾದಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಈ ಮಸೂದೆಯನ್ನು ರೂಪಿಸಿತ್ತು.

ಸರ್ಕಾರವನ್ನು ಜಗ್ಗಾಡಿದ ಪ್ರತಿಪಕ್ಷಗಳು: ಕೋಲಾಹಲಕಾರೀ ಚರ್ಚೆಯ ವೇಳೆಯಲ್ಲಿ ವಿರೋಧ ಪಕ್ಷಗಳು ಸಂವಿಧಾನದ ಅಡಿಪಾಯದ ಮೇಲೆಯೇ ದಾಳಿ ನಡೆಸುತ್ತಿರುದಕ್ಕಾಗಿ ಸರ್ಕಾರವನ್ನು ಜಗ್ಗಾಡಿದವು. ಆದರೆ ಕೇಂದ್ರವು ಎಲ್ಲ ಆರೋಪಗಳನ್ನೂ ತಳ್ಳಿ ಹಾಕಿತು.

ಸಚಿವ ಅಮಿತ್ ಶಾ ಅವರು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವುದರೊಂದಿಗೆ ದಿನದ ಕಲಾಪ ಆರಂಭಗೊಂಡಿತ್ತು. ’ಈ ಮಸೂದೆಯು ಮೂರು ನೆರೆ ರಾಷ್ಟ್ರಗಳಲ್ಲಿ ಕಿರುಕುಳಕ್ಕೆ ಒಳಗಾದ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಲಿದೆ ಶಾ ಹೇಳಿದರು.

‘ದೇಶ ವಿಭಜನೆಯಾದಾಗ, ಅಲ್ಪಸಂಖ್ಯಾತರಿಗೆನಾಗರಿಕ ಹಕ್ಕುಗಳನ್ನು ನೀಡಲಾಗುತ್ತದೆ ಮತ್ತು ಅವರು ಸಹಜ ಜೀವನ ನಡೆಸುವರು ಎಂದು ಭಾವಿಸಲಾಗಿತ್ತು. ಅವರಿಗೆ ತಮ್ಮ ಸ್ವಂತ ಧರ್ಮ ಅನುಸರಣೆಗೆ ಮತ್ತು ತಮ್ಮ ಮಹಿಳೆಯರ ರಕ್ಷಣೆಗೆ ಸಮರ್ಥರಾಗುವರು ಎಂದು ಯೋಚಿಸಲಾಗಿತ್ತು. ಆದರೆ ಹಿಂದಕ್ಕೆ ತಿರುಗಿ ನೋಡಿದಾಗ, ನಿಜವಾದ ಸತ್ಯ ಏನು ಎಂಬುದು ನಮಗೆ ಅರಿವಾಗುತ್ತದೆ. ಈ ಜನರಿಗೆ ತಮ್ಮ ಹಕ್ಕುಗಳು ಲಭಿಸಲಿಲ್ಲ. ಅವರನ್ನು ಕೊಲ್ಲಲಾಯಿತು, ಮತಾಂತರ ಮಾಡಲಾಯಿತು ಇಲ್ಲವೇ ಅವರು ಭಾರತಕ್ಕೆ ಬಂದರು ಎಂದು ಶಾ ವಿವರಿಸಿದರು.

ಮಸೂದೆಯು ಭಾರತದಲ್ಲಿನ ಮುಸ್ಲಿಮರ ವಿರುದ್ಧ ಎಂಬುದನ್ನು ಖಂಡತುಂಡವಾಗಿ ನಿರಾಕರಿಸಿದ ಗೃಹಸಚಿವರು, ’ಭಾರತದಲ್ಲಿನ ಮುಸ್ಲಿಮರು ನಮ್ಮ ಪ್ರಜೆಗಳು, ಅವರನ್ನು ಚಿತ್ರಹಿಂಸೆಗೆ ಪಡಿಸಲಾಗುವುದಿಲ್ಲ. ನೀವು ಏನು ಬಯಸುತ್ತಿದ್ದೀರಿ -ವಿಶ್ವಾದ್ಯಂತದಿಂದ ಬರುವ ಮುಸ್ಲಿಮರಿಗೆ ಭಾರತೀಯ ಪೌರತ್ವ ನೀಡಬೇಕೆ? ಇದು ಸಾಧ್ಯವಿಲ್ಲ. ಈ ಮೂರು ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೆ ಒಳಗಾಗಿದ್ದಾರೆ,ಆದ್ದರಿಂದ ನಾವು ಈ ಮೂರು ರಾಷ್ಟ್ರಗಳನ್ನು ಮಾತ್ರ ಸೇರಿಸಿದ್ದೇವೆ ಎಂದು ಶಾ ಹೇಳಿದರು.

ಆದರೆ ಗೃಹಸಚಿವರು ತಮ್ಮ ಪ್ರಸ್ತಾವನಾ ಭಾಷಣ ಮುಗಿಸುತ್ತಿದ್ದಂತೆಯೇ, ವಿರೋಧ ಪಕ್ಷಗಳು ಮೊಹಮ್ಮದ್ ಅಲಿ ಜಿನ್ನಾ ಮತ್ತು ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಹೆಸರುಗಳನ್ನು ಉಲ್ಲೇಖಿಸುತ್ತಿರುವುದಕ್ಕಾಗಿ ಸರ್ಕಾರದ ವಿರುದ್ಧ ಟೀಕೆಯ ಮಳೆಗರೆದವು.

‘ಇದು ಭಾರತದ ಆತ್ಮಕ್ಕೆ ಘಾಸಿ ಮಾಡಿದೆ. ಇದು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧ. ಇದು ನೈತಿಕತೆಯ ಪರೀಕ್ಷೆಯಲ್ಲಿ ವಿಫಲವಾಗುತ್ತದೆ. ಇದು ಸಂವಿಧಾನಾತ್ಮಕ ಪರೀಕ್ಷೆಯಲ್ಲಿ ವಿಫಲವಾಗುತ್ತದೆ.  ಇದು ವಿಭಜನಕಾರಿಮತ್ತು ತಾರತಮ್ಯದ್ದು ಎಂದು ಕಾಂಗ್ರೆಸ್ ಪಕ್ಷದ ಆನಂದ ಶರ್ಮ ಹೇಳಿದರು.

ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳೂ ಚರ್ಚೆಯಲ್ಲಿ ಸರ್ಕಾರದ ವಿರುದ್ಧದ ಟೀಕಾಪ್ರಹಾರಕ್ಕೆ ಇಳಿದವು. ’ಪ್ರಧಾನಿಯವರು ಇದನ್ನು ಸ್ವರ್ಣಾಕ್ಷರಗಳಲ್ಲಿ ಬರೆಯಲಾಗುತ್ತದೆ ಎಂಬುದಾಗಿ ಹೇಳಿದ್ದನ್ನು ನಾನು ಓದಿದ್ದೇನೆ. ಇದನ್ನು ಎಲ್ಲಿ ಬರೆದಿಡಲಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ.: ಇದನ್ನು ರಾಷ್ಟ್ರ ಪಿತನ ಸಮಾಧಿಯ ಮೇಲೆ ಬರೆಯಲಾಗುತ್ತದೆ, ಆದರೆ ಯಾವ ದೇಶದ ರಾಷ್ಟ್ರಪಿತ? ಕರಾಚಿಯಲ್ಲಿ, ಜಿನ್ನಾ ಸಮಾಧಿಯಲ್ಲಿ ಎಂದು ತೃಣಮೂಲ ಕಾಂಗ್ರೆಸ್ಸಿನ ಡೆರೆಕ್ ಒಬ್ರಿಯನ್ ನುಡಿದರು.

ಸಮಾಜವಾದಿ ಪಕ್ಷದ ಜಾವೇದ್ ಅಲಿಖಾನ್  ಅವರು ’ನಮ್ಮ ಸಕಾರವು ಈ ಪೌರತ್ವ (ತಿದ್ದುಪಡಿ) ಮಸೂದೆ ಮತ್ತು ಎನ್‌ಆರ್ ಸಿ ಮೂಲಕ ಜಿನ್ನಾ ಅವರ ಕನಸನ್ನು ನನಸಾಗಿಸಲು ಯತ್ನಿಸುತ್ತಿದೆ. ನೆನಪಿಡಿ, ೧೯೪೯ರಲ್ಲಿ ’ನಾವು ಭಾರತದಲ್ಲಿ ನೈಜ ಜಾತ್ಯತೀತ ಪ್ರಜಾಪ್ರಭುತ್ವದ ಅಡಿಗಲ್ಲು ಹಾಕುತ್ತಿದ್ದೇವೆ ಎಂದು ಸರ್ದಾರ್ ಪಟೇಲ್ ಹೇಳಿದ್ದರು.’ ದೇಶವನ್ನು ಧರ್ಮದ ನೆಲೆಯಲ್ಲಿ ವಿಭಜಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿರುಮಾತುಗಳ ವಿನಿಮಯದ ಮೂಲಕ ವಿವಿಧ ಪಕ್ಷಗಳ ನಾಯಕರು ಮಸೂದೆಯ ಪರ ಅಥವಾ ವಿರುದ್ಧವಾದ ತಮ್ಮ ನಿಲುವುಗಳನ್ನು  ಪ್ರಕಟಿಸಿದರು.

ಜನತಾದಳ (ಸಂಯುಕ್ತ) ಲೋಕಸಭೆಯಂತೆಯೇ ರಾಜ್ಯಸಭೆಯಲ್ಲೂ ತನ್ನ ಬೆಂಬಲ ಮುಂದುವರೆಸಿದರೆ, ಸರ್ಕಾರದ ಶಾಸನಕ್ಕೆ  ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ), ವೈಎಸ್ ಆರ್ ಕಾಂಗ್ರೆಸ್ ಮತ್ತು ಬಿಜು ಜನತಾದಳ (ಬಿಜೆಡಿ)ಯ ಗಮನಾರ್ಹ ಬೆಂಬಲ ಲಭಿಸಿತು.

ಲೋಕಸಭೆಯಲ್ಲೂ ಮಸೂದೆ ಮಂಡನೆಯಾದಾಗ ವಿರೋಧ ಪಕ್ಷಗಳಿಂದ ಇದೇ ಮಾದರಿಯ ವಿರೋಧ ವ್ಯಕ್ತವಾಗಿತ್ತು. ಎಐಎಂಐಎಂನ ಅಸಾದುದ್ದೀನ್ ಓವೈಸಿ ಅವರು ಮಸೂದೆಯ ಪ್ರತಿಯನ್ನು ಸದನದಲ್ಲಿ ಹರಿದು ಹಾಕಿದ್ದರು. ಆದರೆ, ಮಸೂದೆಯನ್ನು ಮತಕ್ಕೆ ಹಾಕಿದಾಗ ಸರ್ಕಾರಕ್ಕೆ ಕೆಳಮನೆಯಲ್ಲಿ ಪ್ರಚಂಡ ಬಹುಮತ ಲಭಿಸಿತ್ತು.

Friday, December 6, 2019

ಕೆ.ಸಿ.ರಾಮಮೂರ್ತಿ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆ

ಕೆ.ಸಿ.ರಾಮಮೂರ್ತಿ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆ
ಬೆಂಗಳೂರು: ಕಾಂಗ್ರೆಸ್ ಹಾಗೂ ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಇತ್ತೀಚೆಗೆ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದ ಕೆ.ಸಿ.ರಾಮಮೂರ್ತಿ ಅವರು 2019 ಡಿಸೆಂಬರ್ 05ರ ಗುರುವಾರ ಅವಿರೋಧವಾಗಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು.

ಡಿಸೆಂಬರ್ ೧೨ರಂದು ರಾಜ್ಯಸಭೆಗೆ ಚುನಾವಣೆ ನಡೆಯಬೇಕಾಗಿತ್ತು. ಆದರೆ, ಚುನಾವಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಸಿ.ರಾಮಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವಿಧಾನಸಭಾ ಕಾರ್ಯದರ್ಶಿ ಎಂಕೆ ವಿಶಾಲಾಕ್ಷಿ ಘೋಷಿಸಿದರು.


ಕೆ.ಸಿ. ರಾಮಮೂರ್ತಿ ಹೊರತುಪಡಿಸಿ ಬೇರೆ ಯಾರೂ ಕೂಡ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಪ್ರತಿಸ್ಪರ್ಧಿಯಾಗಿ ಯಾವ ಅಭ್ಯರ್ಥಿಗಳು ಇಲ್ಲದ ಕಾರಣ ಅಂತಿಮವಾಗಿ ಕೆ ಸಿ ರಾಮಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾದರು.

ಅವಿರೋಧವಾಗಿ ಆಯ್ಕೆ ಆಗುತ್ತಿದ್ದಂತೆಯೇ  ಕೆ.ಸಿ. ರಾಮಮೂರ್ತಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಕೆ.ಸಿ. ರಾಮಮೂರ್ತಿ ಅವರು, ಅವಿರೋಧ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ’ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮೋದಿ ಅವರ ಅಭಿವೃದ್ಧಿ ಕಾರ್ಯಕ್ರಮಗಳಿಂದ ಆಕರ್ಷಿತನಾಗಿ ನಾನು ಬಿಜೆಪಿಗೆ ಬಂದೆ. ದೇಶಕ್ಕಾಗಿ ಇನ್ನಷ್ಟು ಉತ್ತಮ ಕೆಲಸ ಮಾಡುತ್ತೇವೆ. ನನಗೆ ಯಾವುದೇ ಬೇಸರ ಇಲ್ಲ. ಮೊದಲು ನಾನು ಬಿಜೆಪಿ ಸ್ನೇಹಿತರ ಜೊತೆ ಚೆನ್ನಾಗಿದ್ದೆ. ಈಗ ಅವರ ಜೊತೆಯಲ್ಲಿ ಕೆಲಸ ಮಾಡುತ್ತೇನೆ. ಪಕ್ಷ ಬಿಡುವಾಗ ಡಿ ಕೆ ಶಿವಕುಮಾರ್ ಅವರಿಗೆ ಹೇಳಬೇಕು ಅಂತೇನಿಲ್ಲ. ಅವರಿಗೆ ಗೊತ್ತಾಗಿರುತ್ತದೆ ಎಂದು ಹೇಳಿದರು.

ಬೆಂಗಳೂರು ನಿವಾಸಿಯಾಗಿರುವ ಕೆ.ಸಿ.ರಾಮಮೂರ್ತಿ  ಅವರು ಮಾಜಿ ಐಪಿಎಸ್ ಅಧಿಕಾರಿ, ಸಿಎಆರ್- ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ಯುವಜನ ಸೇವೆ, ಸಂಚಾರ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು, ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಕಾಂಗ್ರೆಸ್ ಪಕ್ಷವು ೨೦೧೬ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆ ಮಾಡಿತ್ತು. ಇದೀಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ಎರಡನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾದರು.

Thursday, August 9, 2018

Harivansh Narayan elected Rajya Sabha deputy chairman


Harivansh Narayan elected Rajya Sabha deputy chairman

New Delhi: The National Democratic Alliance’s candidate Harivansh Narayan Singh of the Janata Dal(United) was on Thursday, 9th August 2018 elected as the deputy chairman of the Rajya Sabha as he defeated opposition’s BK Hariprasad by 20 votes.


Harivansh, a first-timer in the Upper House and a former editor of Hindi daily Prabhat Khabar, got the support of 125 members in the Upper House, which has an effective strength of 244 MPs, and United Progressive Alliance’s Hariprasad got 105 votes, news agency ANI reported.


The proceeding to elect a new deputy chairperson of Rajya Sabha began with the NDA moving four motions for its candidate and the opposition moving five for Hariprasad.
The position fell vacant after PJ Kurien retired in July.


Prime Minister Narendra Modi congratulated Harivansh after he was elected as the Rajya Sabha deputy chairman.


The NDA was confident of winning the post despite not having the numbers in the Upper House amid widening fractures in the opposition camp.


Naveen Patnaik’s Biju Janata Dal (BJD) had promised to support Singh in the election after Prime Minister Narendra Modi spoke to the Odisha chief minister on the phone in the third sign in recent weeks of a new warmth in the otherwise frosty, even hostile, relationship with the BJP.


“Biju Janata Dal is supporting the JD(U) since JD(U) and BJD have similar ideological origins emerging from the Jay Prakash Narayan movement. The Congress candidate was AICC in-charge of Odisha till recently and was vitriolic in his statements against the BJD and the state,” a BJD statement said on Thursday.


Patnaik on Tuesday turned down Nationalist Congress Party chief Sharad Pawar’s request for support to the opposition’s candidate in the election for the Rajya Sabha deputy chairman, telling him that he had already told Bihar chief minister Nitish Kumar that he would support Harivansh.


Harivansh also has the support of the Telangana Rashtra Samithi (TRS), after JD(U) leader and Bihar chief minister Nitish Kumar called up TRS leader and Telangana CM K Chandrashekar Rao on Tuesday.


The Congress had a tough time getting other opposition parties to rally behind its candidate and was involved in hectic last-minute parleys with regional parties in securing an ‘anti-BJP front’ inside the House.


Several parties said before the election started that they will abstain and boycott the Rajya Sabha deputy chairman election.


“We have decided to abstain from the voting for the Rajya Sabha deputy chairman’s election. Both the Congress and BJP have not fulfilled the promises made to Andhra Pradesh,” YSR Congress MP V Vijayasai Reddy was quoted as saying by news agency ANI.


The Arvind Kejriwal-led Aam Aadmi Party has said it will “boycott” the election as Congress president Rahul Gandhi did not “seek” its support for the Opposition’s candidate.


Kejriwal had rejected his Bihar counterpart and JD(U) president Kumar’s request to support the NDA nominee in the election as he has the backing of the BJP.

Advertisement