Showing posts with label ಇಂದಿನ ಇತಿಹಾಸ History Today (September 11-20).. Show all posts
Showing posts with label ಇಂದಿನ ಇತಿಹಾಸ History Today (September 11-20).. Show all posts

Friday, September 25, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 25

ಇಂದಿನ ಇತಿಹಾಸ

ಸೆಪ್ಟೆಂಬರ್ 25
ಕರ್ನಾಟಕ ಕಾಂಗ್ರೆಸ್ಸಿನೊಳಗಿನ `ಮೂಲನಿವಾಸಿಗಳು' ಮತ್ತು `ವಲಸೆಕೋರರ' ನಡುವಿನ ಶೀತಲ ಸಮರದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಬಿದ್ದರು. ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಆರ್.ವಿ. ದೇಶಪಾಂಡೆ ಅವರನ್ನು ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ನೇಮಿಸಿದರು.


2008: ಕರ್ನಾಟಕ ಕಾಂಗ್ರೆಸ್ಸಿನೊಳಗಿನ `ಮೂಲನಿವಾಸಿಗಳು' ಮತ್ತು `ವಲಸೆಕೋರರ' ನಡುವಿನ ಶೀತಲ ಸಮರದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ಬಿದ್ದರು. ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಆರ್.ವಿ. ದೇಶಪಾಂಡೆ ಅವರನ್ನು ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ನೇಮಿಸಿದರು. ಹೊಸದಾಗಿ ಸೃಷ್ಟಿಸಲಾದ ಕಾಯರ್ಾಧ್ಯಕ್ಷ ಸ್ಥಾನ ಡಿ.ಕೆ.ಶಿವಕುಮಾರ್ ಅವರಿಗೆ ಒಲಿಯಿತು.. ಇದರೊಂದಿಗೆ ಮೂರು ತಿಂಗಳ ಕಾಲ ನಡೆದ ಕೆಪಿಸಿಸಿ ಅಧ್ಯಕ್ಷರ ನೇಮಕದ ಕಸರತ್ತು ಕೊನೆಗೂ ಅಂತ್ಯ ಕಂಡಿತು.. ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಹೊಸದಾಗಿ ಹುಟ್ಟಿಕೊಂಡ ಮೂಲನಿವಾಸಿಗಳು ಮತ್ತು ವಲಸೆಕೋರರ ನಡುವಿನ ಸಂಘರ್ಷದಿಂದಾಗಿ ಯಾವ ಹೆಸರನ್ನೂ ಅಂತಿಮಗೊಳಿಸಲು ಪಕ್ಷದ ಹೈಕಮಾಂಡಿಗೆ ಸಾಧ್ಯವಾಗಿರಲಿಲ್ಲ.

2008: ಗೋಧ್ರಾದಲ್ಲಿ 2002ರ ಫೆಬ್ರುವರಿ 27ರಂದು ಸಾಬರಮತಿ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ಪ್ರಸಂಗ ಪೂರ್ವಯೋಜಿತ ಕೃತ್ಯವೇ ಹೊರತು ಅದು ಆಕಸ್ಮಿಕ ದುರಂತ ಅಲ್ಲ ಎಂದು ನಾನಾವತಿ ಆಯೋಗ ಹೇಳಿತು. ಗುಜರಾತ್ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಆಯೋಗದ ಪ್ರಥಮ ವರದಿಯಲ್ಲಿ ಈ ವಿಷಯ ತಿಳಿಸಲಾಯಿತು. ಈ ಮೂಲಕ ನರೇಂದ್ರ ಮೋದಿ ಸರ್ಕಾರ ಆಯೋಗದಿಂದ ಕಳಂಕ ರಹಿತ ಪ್ರಮಾಣ  ಪತ್ರ  ಪಡೆದಂತಾಯಿತು. ಆದರೆ, ರೈಲ್ವೆ ಸಚಿವ ಲಾಲು ಪ್ರಸಾದ್ ನಾಲ್ಕು ವರ್ಷಗಳ ಹಿಂದೆ ರಚಿಸಿದ್ದ ನ್ಯಾಯಮೂರ್ತಿ ಯು. ಸಿ. ಬ್ಯಾನರ್ಜಿ ಸಮಿತಿ ನೀಡಿದ ವರದಿಗೆ ಈ ವರದಿ ತೀರಾ ತದ್ವಿರುದ್ಧ ಆಗಿರುವುದು ಅಚ್ಚರಿ ಮೂಡಿಸಿತು. ಗೋಧ್ರಾ ಘಟನೆ ಆಕಸ್ಮಿಕ ಮತ್ತು ಇದೊಂದು ಯೋಜಿತ ಕೃತ್ಯ ಎಂಬುದನ್ನು ಸಾಬೀತುಪಡಿಸುವುದಕ್ಕೆ ಯಾವುದೇ ಪುರಾವೆಯೂ ಇಲ್ಲ ಎಂದು ಬ್ಯಾನರ್ಜಿ ವರದಿ ತಿಳಿಸಿತ್ತು. ರೈಲಿನ ಬೋಗಿ  ಸುಡುವ ಪಿತೂರಿಯ ಸಲುವಾಗಿಯೇ 140 ಲೀಟರ್ ಪೆಟ್ರೋಲ್ ಖರೀದಿಸಲಾಗಿತ್ತು. ಗೋಧ್ರಾದ ಅಮಾನ್ ಅತಿಥಿಗೃಹದಲ್ಲಿ ಪಿತೂರಿ  ರೂಪಿಸಲಾಯಿತು.  ಈ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಿಸುವುದೇ ಮುಖ್ಯ ಉದ್ದೇಶವಾಗಿತ್ತು ಎಂದು ನಾನಾವತಿ ವರದಿ ಹೇಳಿದೆ. ಮೋದಿ ಸರ್ಕಾರ ನ್ಯಾಯಮೂರ್ತಿ (ನಿವೃತ್ತ) ಜಿ. ಟಿ. ನಾನಾವತಿ ನೇತೃತ್ವದ ಸಮಿತಿಯನ್ನು 2002ರ ಮಾರ್ಚ್ ತಿಂಗಳಲ್ಲಿ ರಚಿಸಿತ್ತು.

2007: ಜನತಾದಳ ಕಾರ್ಯಕರ್ತರು ತನ್ನ ಮೇಲೆ ಗುಂಡು ಹಾರಿಸಿ ಸಾಯಿಸಲು ಯತ್ನಿಸಿದ್ದಾರೆ, ಪೊಲೀಸರೂ ಅವರೊಂದಿಗೆ ಕೈ ಜೋಡಿಸಿದ್ದಾರೆ, ಇದರಲ್ಲಿ ಮುಖ್ಯಮಂತ್ರಿಯವರ ಕೈವಾಡವಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಶ್ರೀರಾಮುಲು ಆರೋಪಿಸಿದರು.  ಬಳ್ಳಾರಿಯ ವಿದ್ಯಾನಗರದಲ್ಲಿ ಮಧ್ಯರಾತ್ರಿ ಶಾಸಕ ಜನಾರ್ದನ ರೆಡ್ಡಿಯವರ ಸಂಬಂಧಿಕರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶ್ರೀರಾಮುಲು ಪೊಲೀಸರ ಮೇಲೆ ಕಿಡಿ ಕಾರಿ, `ನನ್ನ ಸಾವಿಗೆ ಜೆಡಿಎಸ್ ಸಂಚು ರೂಪಿಸಿದೆ' ಎಂದು ಹೇಳಿದರು.

2007: ದೇವೇಗೌಡ ಮತ್ತು ಅವರ ಕುಟುಂಬದವರು 10 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಮಾಡಿಕೊಂಡಿದ್ದಾರೆ ಎಂದು ಮೈಸೂರಿನಲ್ಲಿ ತೀವ್ರ ಆರೋಪ ಮಾಡಿದ ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ, ಇದಕ್ಕೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಪ್ರದರ್ಶಿಸಿದರು. ಇದರಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಆಸ್ತಿಯ ದಾಖಲೆ ಇದೆ ಎಂದು ಅವರು ಹೇಳಿದರು.  ಸತ್ಯಶೋಧ ಮಾಡಲು ವಿಧಾನಸೌಧದ ಮುಂದೆ ಮುಖಾಮುಖಿ ಚರ್ಚೆಗೆ ಬನ್ನಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬ ವರ್ಗದವರಿಗೆ ಖೇಣಿ ಬಹಿರಂಗ ಸವಲು ಹಾಕಿದರು.

2007:  ಒರಿಸ್ಸಾ ರಾಜ್ಯ ಮಟ್ಟದ ಸಣ್ಣ ವ್ಯಾಪಾರಸ್ಥರ ಒಕ್ಕೂಟದ ಸದಸ್ಯರು ಭುವನೇಶ್ವರದ ಲೆವಿಸ್ ರಸ್ತೆ ಮತ್ತು ಗೊಪಬಂಧು ವೃತ್ತದಲ್ಲಿನ ಎರಡು `ರಿಲಯನ್ಸ್ ಫ್ರೆಶ್' ಹಣ್ಣು, ತರಕಾರಿ ಚಿಲ್ಲರೆ ಮಾರಾಟ ಮಳಿಗೆಗೆ ದಾಳಿ ಮಾಡಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಅಂಗಡಿಗಳನ್ನು ತೆರೆಯದಂತೆ ರಿಲಯನ್ಸ್ ಕಂಪೆನಿಗೆ ಆದೇಶ ನೀಡಲಾಯಿತು. ಈ ನಗರದಲ್ಲಿ ಸುಮಾರು 11 ರಿಲಯನ್ಸ್ ಫ್ರೆಶ್ ಮಳಿಗೆಗಳು ಆರಂಭವಾಗಿವೆ. ಇಡೀ ರಾಜ್ಯದಲ್ಲಿ 235 ಮಳಿಗೆಗಳನ್ನು ತೆರೆಯಲು ರಿಲಯನ್ಸ್ ತಯಾರಿ ನಡೆಸಿತ್ತು. ಸಣ್ಣ ವ್ಯಾಪಾರಿ ಒಕ್ಕೂಟದವರ ವಿರೋಧವಿದ್ದದ್ದರಿಂದ ಅದು ಸಾಧ್ಯವಾಗಲಿಲ್ಲ. ಅಂದಾಜು 7 ಲಕ್ಷ ಸಣ್ಣ ವ್ಯಾಪಾರಸ್ಥರ ಜೀವನಕ್ಕೆ ಅಡ್ಡವಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ರಿಲಯನ್ಸ್ ಫ್ರೆಶ್ ಮಳಿಗೆಗಳನ್ನು ಮುಚ್ಚಿಸಲು `ನಿಖಿಲ್ ಒರಿಸ್ಸಾ ಉಥಾ ದೊಕನಿ ಮತ್ತು ಖ್ಯುದ್ರಾ ವೈವಶ್ಯಿ ಮಹಾಸಂಘ'ಗಳು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಕೈಹಾಕಿದವು.

 2007: ರಿಲಯನ್ಸ್ ಸಮೂಹದ ಅಧ್ಯಕ್ಷ ಮುಖೇಶ್ ಅಂಬಾನಿ ಅವರು 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತು ಹೊಂದಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಷೇರುಪೇಟೆ  ಸೂಚ್ಯಂಕ ಏರಿದ ಪರಿಣಾಮ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಸಮೂಹದ ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿ 2,04,945 ಕೋಟಿ ರೂಪಾಯಿಗೆ ತಲುಪಿತು. ಮುಖೇಶ್ ಅಂಬಾನಿ ತಮ್ಮ ಅನಿಲ್ ಅಂಬಾನಿ ಎರಡನೇ ಸ್ಥಾನಕ್ಕೆ (1,77,710 ಕೋಟಿ ರೂ), ಡಿಎಲ್ ಎಫ್ ರಿಯಲ್ ಎಸ್ಟೇಟ್ ಸಮೂಹದ ಮಾಲೀಕ ಕೆ.ಪಿ. ಸಿಂಗ್ ಮೂರನೇ ಸ್ಥಾನಕ್ಕೆ (1,15,225 ಕೋಟಿ ರೂ) ಬಂದರು. ಒಂದು ಕಾಲದಲ್ಲಿ ಅತಿ ಶ್ರೀಮಂತ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಂಜಿ ಅವರ ಆಸ್ತಿ ಮೌಲ್ಯ 50,600 ಕೋಟಿಗೆ (5ನೇ ಸ್ಥಾನ)ಇಳಿಯಿತು, ಏರ್ ಟೆಲ್ ನ ಭಾರತಿ ಮಿತ್ತಲ್ 91,500 ಕೋಟಿ ರೂಗೆ (4ನೇ ಸ್ಥಾನ) ಏರಿತು.

2007: ಬಿಜೆಪಿಯ ಮಾಜಿ ಅಧ್ಯಕ್ಷ ಮತ್ತು ಕೇಂದ್ರದ ಮಾಜಿ ಕಾನೂನು ಸಚಿವ ಜನಾ ಕೃಷ್ಣಮೂರ್ತಿ (79) ಅವರು ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 1928ರಲ್ಲಿ ಮದುರೈಯಲ್ಲಿ ಜನಿಸಿದ ಕೃಷ್ಣಮೂರ್ತಿ 2001-2002 ರ ಅವಧಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. 2003ರಲ್ಲಿ ಕೇಂದ್ರದ ಎನ್ ಡಿಎ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದರು. ಆರೆಸ್ಸೆಸ್ ಪ್ರಚಾರಕ, ಜನಸಂಘ ಕಾರ್ಯದರ್ಶಿಯಾಗಿದ್ದ ಅವರು ತಮಿಳುನಾಡಿನಿಂದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷತೆಗೆ ಏರಿದ ಮೊಟ್ಟ ಮೊದಲ ಮುಖಂಡ. ಪ್ರಸ್ತುತ ರಾಜ್ಯಸಭೆಯಲ್ಲಿ ಗುಜರಾತ್ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು.

2007:  ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಅವರ ಸಚಿವ ಸಂಪುಟ ರಾಜೀನಾಮೆ ಸಲ್ಲಿಸಿದ್ದು ಈ ಮೂಲಕ ಅವರ ಉತ್ತರಾಧಿಕಾರಿಯಾಗಿ ಸಂಸತ್ ಹೆಸರಿಸಿರುವ ಆಡಳಿತ ಪಕ್ಷದ ಹೊಸ ನಾಯಕ ಯಸುವೋ ಫಕುಡ ಅವರು ಅಧಿಕಾರ ವಹಿಸಿಕೊಳ್ಳಲು ಮಾರ್ಗ ಸುಗಮಗೊಂಡಿತು. 53 ವರ್ಷದ ಅಬೆ ಅವರು ಸೆ. 12ರಂದು ದಿಢೀರ್ ಅಧಿಕಾರ ತ್ಯಜಿಸುವ ನಿರ್ಧಾರ ಪ್ರಕಟಿಸಿ, ಇಡೀ ದೇಶವನ್ನು ನಿಬ್ಬೆರಗಾಗಿಸಿದ್ದರು.

2007: ರಿಪ್ಪನ್ಪೇಟೆ ಸಮೀಪದ ಹರತಾಳು ಶ್ರೀ ರಾಮಾಶ್ರಮದ ಸಂಸ್ಥಾಪಕರು ಹಾಗೂ ಶ್ರೀ ಗುರು ರಾಘವೇಂದ್ರರ ಆರಾಧಕರಾಗಿದ್ದ ವಿದ್ಯಾಮಿತ್ರ ತೀರ್ಥ ಸ್ವಾಮೀಜಿ (80) ಈದಿನ ಬೆಳಗ್ಗೆ ನಿಧನರಾದರು. ಶ್ರೀಶನದಾಸ ಎಂಬುದು ಅವರ ಪೂರ್ವಾಶ್ರಮದ ಹೆಸರು.

2007: ಸ್ವಸಹಾಯ ಗುಂಪುಗಳಿಗೆ (ಎಸ್ ಎಚ್ ಜಿ) 2006-07ನೇ ಸಾಲಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಾಲ ಸಹಾಯ ನೀಡಿದ ಹಣಕಾಸು ಸಂಸ್ಥೆಗಳಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಮೊದಲ ಸ್ಥಾನ ಗಳಿಸಿತು. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸ್ಥಾಪಿಸಿರುವ ಈ ವಾರ್ಷಿಕ ಪ್ರಶಸ್ತಿಯನ್ನು ಈದಿನ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು. ವಾಣಿಜ್ಯ ಬ್ಯಾಂಕ್ಗಳ ಪೈಕಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಮತ್ತು ಸಿಂಡಿಕೇಟ್ ಬ್ಯಾಂಕ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದವು.

2006: ಬಿಹಾರಿನ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಪಶು ಸಂಗೋಪನಾ ಇಲಾಖೆಯ ಮಾಜಿ ಅಧಿಕಾರಿ ಹೇಮೇಂದ್ರ ನಾಥ ವರ್ಮ ಸೇರಿದಂತೆ ಎಂಟು ಮಂದಿ ಆಪಾದಿರತನ್ನು ವಿಶೇಷ ಸಿಬಿಐ ನ್ಯಾಯಾಲಯವು ಶಿಕ್ಷೆಗೆ ಗುರಿಪಡಿಸಿದ್ದು, ವಿನೋದ ಕುಮಾರ್ ಝಾ ಅವರನ್ನು ಖುಲಾಸೆ ಮಾಡಿತು. ಅವಿಭಜಿತ ಬಿಹಾರಿನ ದುಮ್ಕಾ ಬೊಕ್ಕಸದಿಂದ 49 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಸರ್ಕಾರಿ ಹಣವನ್ನು ಅಕ್ರಮವಾಗಿ ಹಿಂತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶ ಸಂಜಯ ಪ್ರಸಾದ್ ಅವರು ಈ ತೀರ್ಪು ನೀಡಿದರು. ಸೆಪ್ಟೆಂಬರ್ 23ರಂದು ನ್ಯಾಯಾಲಯವು ಪಶು ಸಂಗೋಪನಾ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಸೇರಿದಂತೆ 28 ಮಂದಿ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಿತ್ತು. ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಬಿಹಾರಿನ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರ ಅವರೂ ಹಗರಣದಲ್ಲಿ ಆರೋಪಿಗಳು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ತಲೆ ತಪ್ಪಿಸಿಕೊಂಡಿರುವ ಟೈಗರ್ ಮೆಮನ್ ನ ಸಹಚರರಾದ ಮೊಹಮ್ಮದ್ ಇಕ್ಬಾಲ್ ಮೊಹಮ್ಮದ್ ಯೂಸುಫ್ ಖಾನ್ ಮತ್ತು ನಸೀಂ ಬರ್ಮರೆ ತಪ್ಪಿತಸ್ಥರು ಎಂದು ಟಾಡಾ ನ್ಯಾಯಾಲಯ ತೀರ್ಪು ನೀಡಿತು. ಭಯೋತ್ಪಾದಕ ಕೃತ್ಯ ಎಸಗಿದ ಮತ್ತು ಸಂಚಿನಲ್ಲಿ ಭಾಗಿಯಾದ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ.

2006: ಅಂತಾರಾಜ್ಯ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸೂಕ್ರ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಬೆಳಗಾವಿಯಲ್ಲಿ ನಡೆದ ರಾಜ್ಯ ವಿಧಾನ ಮಂಡಲದ ಐತಿಹಾಸಿಕ ವಿಶೇಷ ಅಧಿವೇಶನದ ಮೊದಲ ದಿನವೇ ಉಭಯ ಸದನಗಳೂ ಅಂಗೀಕರಿಸಿದವು. ರಾಜದಾನಿ ಬೆಂಗಳೂರಿನಿಂದ ಹೊರಗೆ ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುವುದರೊಂದಿಗೆ ರಾಜ್ಯದಲ್ಲಿ ಹೊಸ ಇತಿಹಾಸ ನಿರ್ಮಾಣಗೊಂಡಿತು. ಕೆಎಲ್ ಇ ಶಿಕ್ಷಣ ಸಂಸ್ಥೆಯಲ್ಲಿ ಮೈದಳೆದ ಪ್ರತಿರೂಪಿ ವಿಧಾನ ಮಂಡಲದಲ್ಲಿ ಈ  ಅಧಿವೇಶನ ಸಮಾವೇಶಗೊಳ್ಳುವುದರೊಂದಿಗೆ ಹೊಸ ಮನ್ವಂತರಕ್ಕೆ ಬೆಳಗಾವಿ ಸಾಕ್ಷಿಯಾಯಿತು. ಬೆಳಗಾವಿ ಮತ್ತು ಕಾಸರಗೋಡು ಎರಡೂ ಕರ್ನಾಟಕದ್ದೇ ಎಂಬ ಸ್ಪಷ್ಟ ಸಂದೇಶವನ್ನು ಚಾರಿತ್ರಿಕ ನಿರ್ಣಯ ಅಂಗೀಕಾರದ ಮೂಲಕ ವಿಧಾನ ಮಂಡಲ ಇತರ ರಾಜ್ಯಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ರವಾನಿಸಿತು.

2001: ಮೊಣಕಾಲಿನ ಕೆಳಗಿನ ಭಾಗಗಳಿಲ್ಲದ ಅಂಗವಿಕಲ ಕೋಲ್ಕತ್ತಾದ ಮಸುದುರ್ ರಹಮಾನ್ ಬೈದ್ಯ ಅವರು ಜಿಬ್ರಾಲ್ಟರ್ ಕಾಲುವೆಯ 22 ಕಿ.ಮೀ. ದೂರವನ್ನು 4 ಗಂಟೆ 20 ನಿಮಿಷಗಳಲ್ಲಿ ಈಜುವ ಮೂಲಕ ಈ ಸಾಹಸ ಗೈದ ಮೊದಲ ಅಂಗವಿಕಲ ಎಂಬ ಕೀರ್ತಿಗೆ ಪಾತ್ರರಾದರು.

1997: ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಇಂಗಳಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯ (ಇ.ಎಸ್. ವೆಂಕಟರಾಮಯ್ಯ)(18-12-1924ರಿಂದ 25-9-1997) ಈದಿನ ಬೆಂಗಳೂರಿನಲ್ಲಿ ನಿಧನರಾದರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಇಂಗಳಗುಪ್ಪೆಯಲ್ಲಿ 1924ರ ಡಿಸೆಂಬರ್ 18ರಂದು ಜನಿಸಿದ್ದ ವೆಂಕಟರಾಮಯ್ಯ ಹೈಕೋರ್ಟ್ ವಕೀಲ, ಸರ್ಕಾರಿ ಅಡ್ವೋಕೇಟ್ ಜನರಲ್, ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

1969: ದಕ್ಷಿಣ ಆಫ್ರಿಕದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಹ್ಯಾನ್ಸೀ ಕ್ರೋನಿಯೆ (1969-2002) ಜನ್ಮದಿನ. ಮ್ಯಾಚ್ ಫಿಕ್ಸಿಂಗ್ ಹಗರಣ ಮೂಲಕ ಕ್ರಿಕೆಟ್ ಕ್ರೀಡೆಗೆ ಮಸಿ ಬಳಿದ ಅಪಖ್ಯಾತಿಗೆ ಈಡಾದ ಇವರು ಇವರು ದಕ್ಷಿಣ ಆಫ್ರಿಕದಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ಅಸು ನೀಗಿದರು.

1969: ಬ್ರಿಟಿಷ್ ಚಿತ್ರನಟಿ ಕ್ಯಾಥರೀನ್ ಝೇಟಾ-ಜೋನ್ಸ್ ಜನ್ಮದಿನ. ವಿಶೇಷವೆಂದರೆ ಈಕೆಯ ಪತಿ ಅಮೆರಿಕನ್ ನಟ, ನಿರ್ದೇಶಕ ಮೈಕೆಲ್ ಡಗ್ಲಾಸ್ ಅವರ ಜನ್ಮದಿನವೂ ಇದೇ ದಿನ. ಡಗ್ಲಾಸ್ ಅವರು ಜನಿಸಿದ್ದು 1944ರ ಸೆಪ್ಟೆಂಬರ್ 25ರಂದು.

1948: ಸಾಹಿತಿ ಅರ್ಜುನಪುರಿ ಅಪ್ಪಾಜಿಗೌಡ ಜನನ.

1946: ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಗೂ ಸ್ಪಿನ್ ಬೌಲರ್ ಬಿಷನ್ ಸಿಂಗ್ ಬೇಡಿ ಜನ್ಮದಿನ.

1940: ಅಧ್ಯಾಪಕ, ಸಾಹಿತಿ, ನ್ಯಾಯಾಧೀಶ ಶಂಕರ ಖಂಡೇರಿ ಅವರು ಸುಬ್ಬಪ್ಪ- ಗಂಗಮ್ಮ ದಂಪತಿಯ ಮಗನಾಗಿ ಕಾಸರಗೋಡು ತಾಲ್ಲೂಕು ಕಾಟುಕುಕ್ಕೆ ಗ್ರಾಮದ ಖಂಡೇರಿಯಲ್ಲಿ ಜನಿಸಿದರು.

1930: ಸಾಹಿತಿ ಎಚ್. ವಿ. ನಾರಾಯಣ್ ಜನನ.

1921: ನೂಜಿಲೆಂಡಿನ ಮಾಜಿ ಪ್ರಧಾನಿ ರಾಬರ್ಟ್ ಡೇವಿಡ್ ಮುಲ್ಡೂನ್ (1921) ಜನ್ಮದಿನ.

1916: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ, ಭಾರತೀಯ ಜನಸಂಘದ ಮಾಜಿ ಅಧ್ಯಕ್ಷ ದೀನದಯಾಳ್ ಉಪಾಧ್ಯಾಯ  (1916-1968) ಜನ್ಮದಿನ.

1914: ಭಾರತದ ರಾಜಕಾರಣಿ ಹಾಗೂ ಉಪ ಪ್ರಧಾನಿಯಾಗಿದ್ದ ದೇವಿಲಾಲ್ (1914-2001) ಜನ್ಮದಿನ.

1829: ಅಸ್ಸಾಮಿ ಆಧುನಿಕ ಕಾವ್ಯದ ಜನಕ ಆನಂದರಾಮ್ ಧೇಕಿಯಲ್ ಫೂಕಾನ್ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, September 22, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 20

ಇಂದಿನ ಇತಿಹಾಸ 

ಸೆಪ್ಟೆಂಬರ್ 20
 ನೆವಾಡಾ ರಾಜ್ಯದ ರಿನೊ ಚರ್ಚಿನ ಆರ್ಚ್ ಬಿಷಪ್ ಡಗ್ಲಾಸ್ ಇಗೋ ನೆ ಸೊವೈ  ಅಂತ್ಯ ಸಂಸ್ಕಾರದ ವೇಳೆ ಋಗ್ವೇದ, ಉಪನಿಷತ್ ಹಾಗೂ ಕುರಾನಿನಲ್ಲಿನ ಕೆಲವು ಸಾಲುಗಳನ್ನು ಪಠಿಸಿ ಧಾರ್ಮಿಕ ಸೌಹಾರ್ದ ಮೆರೆದ ಘಟನೆ ಅಮೆರಿಕದಲ್ಲಿ ನಡೆಯಿತು.. ಅವರ ಅಂತ್ಯಕ್ರಿಯೆ ವೇಳೆ ರಾಜನ್ ಜೇಡ್ ಅವರು ಗಾಯಿತ್ರಿ ಮಂತ್ರ, ಋಗ್ವೇದ, ಉಪನಿಷತ್ ಪಠಿಸಿದರು

2014: ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನ್ ನಗರದಲ್ಲಿ ಆರಂಭವಾದ 17ನೇ ಆವೃತ್ತಿಯ ಏಷಿಯನ್ ಗೇಮ್್ಸ ನಲ್ಲಿ ಜಿತು ರೈ ಅವರು ಭಾರತಕ್ಕೆ ಮೊತ್ತ ಮೊದಲ ಸ್ವರ್ಣ ಪದಕವನ್ನು ತಂದು ಕೊಟ್ಟರು. ಪುರುಷರ 50 ಮೀ. ಪಿಸ್ತೂಲ್ ಶೂಟ್ ಸ್ಪರ್ಧೆಯಲ್ಲಿ ಜಿತು ರೈ ಅವರು ಸ್ವರ್ಣ ಪದಕ ಗೆದ್ದರು. ಮಹಿಳೆಯರ ವಿಭಾಗದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಶ್ವೇತಾ ಚೌಧುರಿ ಅವರು ಕಂಚಿನ ಪದಕ ಗೆದ್ದು ಮೊದಲ ಕಂಚಿನ ಪದಕವನ್ನು ತಂದುಕೊಟ್ಟರು.

2014: ಕೋಲ್ಕತ: ಆಹಾರ ವ್ಯರ್ಥವಾಗುವುದನ್ನು ತಪ್ಪಿಸುವ ಸಲುವಾಗಿ ಭಾರತೀಯ ವಿಜ್ಞಾನಿಗಳ ತಂಡವೊಂದು ಸೌರಶಕ್ತಿ ಚಾಲಿತ ಸಂಚಾರಿ ಕಿರು ಶೈತ್ಯಾಗಾರ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಪಡಿಸಿದೆ. ರೈತರಿಗೆ ವರದಾನವಾಗಬಲ್ಲ ಈ 'ಕಿರು ಶೈತ್ಯಾಗಾರ' ಸಣ್ಣ ರೈತರಿಗೆ ಕಡಿಮೆ ವಿದ್ಯುತ್ ಇರುವ ಅಥವಾ ವಿದ್ಯುತ್ತೇ ಇಲ್ಲದ ಪ್ರದೇಶಗಳಲಿ ತಮ್ಮ ಕೃಷಿ ಉತ್ಪನ್ನಗಳನ್ನು ತಂಪಾಗಿ ಶೇಖರಿಸಿ ಇಡಲು ಅನುವು ಮಾಡಿಕೊಡಲಿದೆ. ಖರಗಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯು (ಐಐಟಿ) ತನ್ನ ತಂತ್ರಜ್ಞಾನ ಉದ್ಯಮಶೀಕತಾ ಪಾರ್ಕ್​ನಲ್ಲಿ (ಎಸ್​ಟಿಇಪಿ- ಸ್ಟೆಪ್) ಪ್ರದರ್ಶಿಸಿರುವ ಈ ಇಂಧನ ದಕ್ಷ ಶೈತ್ಯಾಗಾರ ಘಟಕಗಳು 2.5 ಕಿ.ವಾ ದಿಂದ 3.5 ಕಿ.ವಾ. ಸಾಮರ್ಥ್ಯ ಸೌರ ಫಲಕ ಮೂಲಕ ಪಡೆಯುವ ಸೌರ ವಿದ್ಯುತ್​ನಿಂದ ಕಾರ್ಯ ನಿರ್ವಹಿಸುತ್ತವೆ. ಇವುಗಳನ್ನು ಬೆಳೆಗಳಿಗೆ ತಕ್ಕಂತೆ ವಿನ್ಯಾಸ ಮಾಡಲೂಬಹುದು. 'ಉಷ್ಣವಿದ್ಯುತ್ ಆಧಾರಿತ ಶೈತ್ಯಾಗಾರಗಳು ಜಾಲ ವಿದ್ಯುತ್ತನ್ನು (ಗ್ರಿಡ್ ಎಲೆಕ್ಟ್ರಿಸಿಟಿ) ಆಧರಿಸಿರುವುದಿಲ್ಲ. ಅಲ್ಲದೆ ಎರಡು ವರ್ಷಗಳ ಬಳಿಕವೂ ಶೇಕಡಾ 40ರಷ್ಟು ವಿದ್ಯುತ್ ಉತ್ಪಾದನೆ ಮಾಡಬಲ್ಲವು. ಸಾಮಾನ್ಯವಾಗಿ ಶೈತ್ಯಾಗಾರಗಳು ವಿದ್ಯುತ್ತನ್ನು ಆಧರಿಸಿಯೇ ಕೆಲಸ ಮಾಡುತ್ತವೆ. ಅವುಗಳಿಗೆ ಬ್ಯಾಟರಿ ಬ್ಯಾಕ್​ಅಪ್ ಕೂಡಾ ಬೇಕು. ಆದರೆ ನಾವು ಸಂಶೋಧಿಸಿರುವ ಸೌರ ಶಕ್ತಿ ಆಧಾರಿತ ಶೈತ್ಯಾಗಾರಗಳಿಗೆ ವಿದ್ಯುತ್ ಬ್ಯಾಕ್ ಅಪ್ ಬೇಕಾಗಿಲ್ಲ. ಹೀಗಾಗಿ ನಿರ್ವಹಣಾ ವೆಚ್ಚ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ' ಎಂದು ಐಐಟಿ ಖರಗಪುರದ ಎಂಜಿನಿಯರ್ ಗಳಲ್ಲಿ ಒಬ್ಬರಾದ ವಿವೇಕ ಪಾಂಡೆ ಹೇಳಿದರು. ವ್ಯರ್ಥವಾಗುವ ಶೇಕಡಾ 30ರಷ್ಟು ಆಹಾರ ವಸ್ತುಗಳನ್ನು ಕೆಡದಂತೆ ರಕ್ಷಿಸಿ ಇಡಲು ಭಾರತವೊಂದರಲ್ಲೇ ಒಂದು ಕೋಟಿ ಟನ್ ಸಾಮರ್ಥ್ಯ ಶೈತ್ಯಾಗಾರಗಳು ಬೇಕು. ಭಾರತದ ಆಹಾರ ವಸ್ತು ಸರಬರಾಜು ವ್ಯವಸ್ಥೆಯಲ್ಲಿ ಶೇಕಡಾ 60ರಷ್ಟು ಶೈತ್ಯಾಗಾರ ಕೊರತೆ ಇದೆ ಎಂದು ಅವರು ವಿವರಿಸಿದರು. ನಮ್ಮ ತಂತ್ರಜ್ಞಾನದ ಬಳಕೆ ಮೂಲಕ ಭಾರತೀಯ ರೈತರು ತಮ್ಮ ಉತ್ಪನ್ನಗಳನ್ನು ಶೈತ್ಯಾಗಾರದಲ್ಲಿ ಕೆಡದಂತೆ ರಕ್ಷಿಸಿ ಇಟ್ಟುಕೊಂಡು ಬೆಲೆ ಏರಿದಾಗ ಮಾರಾಟ ಮಾಡಬಹುದು ಎಂದು ಪಾಂಡೆ ನುಡಿದರು. ಇದರಿಂದ ರೈತರ ಉತ್ಪನ್ನ ನಷ್ಟವಾಗುವುದು ಗಮನಾರ್ಹವಾಗಿ ತಗ್ಗುತ್ತದೆ. ತನ್ಮೂಲಕ ರೈತರ ಲಾಭವನ್ನು ಹೆಚ್ಚಿಸುತ್ತದೆ. ಸರಬರಾಜು ವ್ಯವಸ್ಥೆಯನ್ನು ಸ್ಥಿರಗೊಳಿಸುತ್ತದೆ. ನಾವು ವಿನ್ಯಾಸಗೊಳಿಸಿದ ಸೌರಶಕ್ತಿ ಚಾಲಿತ ಶೈತ್ಯಾಗಾರಗಳು ಸಾಮಾನ್ಯ ಘಟಕದ ವೆಚ್ಚವನ್ನು ನಾಲ್ಕು ಪಟ್ಟಿನಷ್ಟು ತಗ್ಗಿಸುತ್ತವೆ. ನಾವು ತಂತ್ರಜ್ಞಾನಕ್ಕಾಗಿ ನಾಲ್ಕು ವಿವಿಧ ಪೇಟೆಂಟ್ ಅರ್ಜಿ ಸಲ್ಲಿಸಿದ್ದೇವೆ' ಎಂದೂ ಅವರು ನುಡಿದರು.

2014: ರಾಯಪುರ: ಛತ್ತೀಸ್​ಗಢದ ಬಸ್ತಾರದ ಅಂತಾಗಢ (ಪರಿಶಿಷ್ಟ) ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ಸಿನ ಯಾವ ವಿರೋಧವೂ ಇಲ್ಲದೆಯೇ ಜಯಗಳಿಸಿತು. 'ಮೇಲಿನ ಯಾರಿಗೂ ಮತ ಇಲ್ಲ' (ನೋಟಾ) ಅವಕಾಶವನ್ನು ಇಲ್ಲಿನ ಮತದಾರರು ಬಹುದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡಿದ್ದು ಕಣದಲ್ಲಿದ್ದ ಏಕೈಕ ಪ್ರತಿಸ್ಪರ್ಧಿಗಿಂತಲೂ ಹೆಚ್ಚು ಮತಗಳು ನೋಟಾಕ್ಕೆ ಬಿದ್ದವು. ಕಣದಲ್ಲಿದ್ದ ಏಕೈಕ ಪ್ರತಿಸ್ಪರ್ಧಿ ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾದ (ಎಪಿಐ) ರೂಪಧರ್ ಪಾಂಡೊ ಅವರಿಗೆ ಕೇವಲ 12,285 ಮತಗಳು ಬಂದರೆ, 13556 ಮಂದಿ ನೋಟಾಕ್ಕೆ ತಮ್ಮ ಮುದ್ರೆ ಒತ್ತಿದರು. ಬಿಜೆಪಿಯ ಭೋಜರಾಜ್ ನಾಗ್ ಅವರು ಉಪಚುನಾವಣೆಯಲ್ಲಿ 53,275 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿ ಅಧಿಕಾರ ಉಳಿಸಿಕೊಂಡಿದ್ದ ಬಿಜೆಪಿಗೆ ರಾಜ್ಯದಲ್ಲಿ ನಡೆದ ಮೊದಲ ಉಪಚುನಾವಣೆಯ ವಿಜಯ ದಕ್ಕಿತು. ಕಾಂಗ್ರೆಸ್ಸಿನ ಅಧಿಕೃತ ಅಭ್ಯರ್ಥಿ ಮಂಥುರಾಮ್​ಪವಾರ್ ಅವರು ಕೊನೆಗಳಿಗೆಯಲ್ಲಿ ತಮ್ಮ ನಾಮಪತ್ರ ಹಿಂತೆಗೆದುಕೊಂಡದ್ದರಿಂದ ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸಲೂ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿತ್ತು. ತಮ್ಮ ಅಚ್ಚರಿಯ ಕ್ರಮದ ಮೂಲಕ ಬಿಜೆಪಿಗೆ ನೇರ ಅನುಕೂಲ ಮಾಡಿಕೊಟ್ಟ ಪವಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿತ್ತು.

2014: ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಖ್ಯಾತ ವಕೀಲ ಪ್ರಶಾಂತ ಭೂಷಣ್ ಮತ್ತು ಇತರ ಇಬ್ಬರ ವಿರುದ್ಧ ಇಲ್ಲಿನ ವಿಚಾರಣಾ ನ್ಯಾಯಾಲಯವೊಂದು ಮಾನನಷ್ಟ ಖಟ್ಲೆಯೊಂದರಲ್ಲಿ ವಿಚಾರಣೆಗೆ ಗುರಿ ಪಡಿಸಿತು. ಮಾಜಿ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರ ಪುತ್ರ ಅಮಿತ್ ಸಿಬಲ್ ಅವರು ಆಮ್​ಆದ್ಮಿ ಪಕ್ಷದ ಧುರೀಣರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸುನಿಲ್ ಕುಮಾರ್ ಅವರು ಕೇಜ್ರಿವಾಲ್, ಭೂಷಣ್, ಮನಿಷ್ ಸಿಸೋಡಿಯಾ ಮತ್ತು ಶಾಝಿಯಾ ಇಲ್ಮಿ ವಿರುದ್ಧ ಭಾರತೀಯ ದಂಡ ಸಂಹಿತೆಯ 500 ನೇ ವಿಧಿ (ಮಾನನಷ್ಟ) ಅಡಿಯಲ್ಲಿ ದೋಷಾರೋಪ ಹೊರಿಸಿದರು. ಇವರ ಪೈಕಿ ಇಲ್ಮಿ ಇತ್ತೀಚೆಗೆ ಪಕ್ಷ ತ್ಯಜಿಸಿದ್ದರು. ನಾಲ್ಕೂ ಮಂದಿ ಆರೋಪಿಗಳು ತಪ್ಪು ಒಪ್ಪಿಕೊಳ್ಳದೆ ವಿಚಾರಣೆ ಎದುರಿಸುವುದಾಗಿ ಹೇಳಿದ್ದನ್ನು ಅನುಸರಿಸಿ ನ್ಯಾಯಾಲಯವು ಅವರನ್ನು ವಿಚಾರಣೆಗೆ ಗುರಿ ಪಡಿಸಿತು. ಸಾಕ್ಷ್ಯಾಧಾರ ದಾಖಲಿಸಿಕೊಳ್ಳುವ ಸಲುವಾಗಿ ನ್ಯಾಯಾಲಯವು 2015ರ ಜನವರಿ 17ನೇ ದಿನಾಂಕವನ್ನು ನಿಗದಿ ಪಡಿಸಿತು. ಅಮಿತ್ ಸಿಬಲ್ ಅವರು ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಕಳೆದ ಜುಲೈ 24ರಂದು ಕೇಜ್ರಿವಾಲ್, ಸಿಸೋಡಿಯಾ, ಭೂಷಣ್ ಮತ್ತು ಇಲ್ಮಿ ಅವರಿಗೆ ಸಮನ್ಸ್ ಕಳುಹಿಸಿತ್ತು. ಟೆಲಿಕಾಂ ಕಂಪೆನಿ ಪ್ರಕರಣಗಳಲ್ಲಿ ಪ್ರತಿನಿಧಿಸಲು ತಾನು ತಂದೆಯ ಹುದ್ದೆಯ ಲಾಭ ಪಡೆದಿರುವುದಾಗಿ ಎಎಪಿ ನಾಯಕರು ಹೇಳಿದ್ದಾರೆ ಎಂದು ಹಿರಿಯ ವಕೀಲರೂ ಆಗಿರುವ ಅಮಿತ್ ಆಪಾದಿಸಿದ್ದರು.

2008: ಇಸ್ಲಾಮಾಬಾದ್ ನಗರದ ಹೃದಯ ಭಾಗದಲ್ಲಿನ ಮರಿಯಟ್ ಪಂಚತಾರಾ ಹೊಟೇಲ್ ಮೇಲೆ ಆತ್ಮಹತ್ಯಾ ಬಾಂಬರುಗಳು ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 62 ಮಂದಿ ಸತ್ತು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2008: ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಒರಿಸ್ಸಾ ಸಹಿತ ದೇಶದ ವಿವಿಧ ಭಾಗಗಳಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹ, ಕಟ್ಟಡ ಕುಸಿತದಂತಹ ಹಲವು ದುರಂತಗಳಲ್ಲಿ 100ಕ್ಕೂ ಅಧಿಕ ಮಂದಿ ಮೃತರಾದರು.

2007: ಹನಿ ನೀರಾವರಿ ಮತ್ತು ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಮಂಡ್ಯದ ಚೈತ್ರ ಇರಿಗೇಷನ್ ಸಿಸ್ಟಮಿನ ವ್ಯವಸ್ಥಾಪಕ ನಿರ್ದೇಶಕ ಟಿ.ಎನ್. ಪರಮೇಶ್ ಅವರಿಗೆ ರಾಷ್ಟ್ರೀಯ ಶ್ರೇಷ್ಠ ಸಣ್ಣ ಕೈಗಾರಿಕೋದ್ಯಮಿ ಪ್ರಶಸ್ತಿ ಲಭಿಸಿತು. ನೀರಾವರಿ ಕ್ಷೇತ್ರದಲ್ಲಿ ಈ ಪುರಸ್ಕಾರ ಪಡೆದ ಕರ್ನಾಟಕದ ಮೊದಲ ಉದ್ಯಮಿ ಎಂಬ ಹೆಗ್ಗಳಿಕೆ ಅವರದಾಯಿತು. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ಪ್ರಶಸ್ತಿ ನೀಡಿದರು.
ಚೈತ್ರ ಇರಿಗೇಷನ್ ಸಿಸ್ಟಂ ಕಂಪೆನಿ ಅಭಿವೃದ್ಧಿಪಡಿಸಿದ ಉತ್ತಮ ದರ್ಜೆಯ ತುಂತುರು ನೀರಾವರಿ, ಹನಿ ನೀರಾವರಿ ಪೈಪ್, ವಾಲ್ವ್ ಮತ್ತಿತರ ಸಲಕರಣೆಗಳು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಪ್ರಶಂಸೆಗೆ ಪಾತ್ರವಾದವು.

2007: ರಾಮ ಸೇತು ನಾಶಪಡಿಸಬೇಕೆಂಬುದು ತಮ್ಮ ಅಭಿಪ್ರಾಯವಲ್ಲ. ಸೇತು ಸಮುದ್ರಂ ಕಡಲ್ಗಾಲುವೆ ಯೋಜನೆ ಅನುಷ್ಠಾನವಾಗಬೇಕೆಂಬುದಷ್ಟೇ ನಮಗೆ ಮುಖ್ಯ. ರಾಮ ಸೇತು ನಾಶಪಡಿಸಿಯಾದರೂ ಸರಿ ಅಥವಾ ನಾಶಪಡಿಸದೆ ಇದ್ದರೂ ಸರಿ ಯೋಜನೆ ಅನುಷ್ಠಾನಗೊಳ್ಳಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಸ್ಪಷ್ಟನೆ ನೀಡಿದರು. ರಾಮ ಸೇತು ನಾಶಪಡಿಸದೇ ಸೇತು ಸಮುದ್ರಂ ಕಡಲ್ಗಾಲುವೆ ಯೋಜನೆ ಜಾರಿಗೊಳಿಸುವುದಾದರೆ ತಮಗೆ ಅಭ್ಯಂತರವಿಲ್ಲ. ತಮಿಳರ ನೂರು ವರ್ಷಗಳಷ್ಟು ಹಳೆಯ ಕನಸಾದ ಸೇತು ಸಮುದ್ರಂ ಯೋಜನೆ ಅನುಷ್ಠಾನಗೊಳ್ಳುವುದು ತಮಗೆ ಮುಖ್ಯ ಎಂದು ಅವರು ಹೇಳಿದರು. ವೈಯಕ್ತಿಕ ಆಚರಣೆ ಹಾಗೂ ನಂಬಿಕೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಕುರಿತು ಅನಗತ್ಯ ಹೇಳಿಕೆ ನೀಡದಂತೆ ಕಾಂಗ್ರೆಸ್ ತನ್ನ ಸದಸ್ಯರಿಗೆ ಹಾಗೂ ಸಚಿವರಿಗೆ ನಿರ್ದೇಶನ ನೀಡಿತು. ರಾಮನ ಅಸ್ತಿತ್ವವನ್ನು ಪ್ರಶ್ನಿಸುವ ಮೂಲಕ ಡಿಎಂಕೆ ನಾಯಕ ಕರುಣಾನಿಧಿ ತಮ್ಮ ಧಾರ್ಮಿಕ ನಂಬಿಕೆಗೆ `ಧಕ್ಕೆ' ಉಂಟು ಮಾಡಿದ್ದಾರೆ ಎಂದು ಆಪಾದಿಸಿ ಚೆನ್ನೈಯ ಮದ್ರಾಸ್ ಹೈಕೋರ್ಟ್ ವಕೀಲ ಆರ್.ಕೆ. ವೆಂಕಟೇಶ್ ಚೆನ್ನೈ ನಗರ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದರು.

2007: ಹದಿನೆಂಟು ವರ್ಷಗಳ ಹಿಂದೆ ಗುಲ್ಬರ್ಗ ನ್ಯಾಯಾಲಯದ ಆವರಣದಲ್ಲಿ ನಡೆದ ಕೊಲೆಯ ಪ್ರಮುಖ ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ `ಸಂಬಂಧಿಗಳೆಂಬ ಕಾರಣಕ್ಕೆ ಸಾಕ್ಷಿಗಳನ್ನು ತಿರಸ್ಕರಿಸಲಾಗದು' ಎಂದು ಹೇಳಿತು. `ಸಾಕ್ಷಿಗಳು ವಿಶ್ವಾಸಾರ್ಹರಾಗಿದ್ದು ಆರೋಪಿಗಳನ್ನು ಗುರುತು ಹಚ್ಚಲು ನೆರವಾಗುವುದಿದ್ದರೆ, ಸಂಬಂಧಿಗಳು, ಪ್ರಕರಣದಲ್ಲಿ ಆಸಕ್ತರು. ಅವರಿಗೆ ಗಾಯಗಳಾಗಿಲ್ಲ ಇತ್ಯಾದಿ ಕಾರಣಗಳನ್ನು ಮುಂದೊಡ್ಡಿ ಸಾಕ್ಷ್ಯ ವಿಶ್ವಾಸಾರ್ಹ ಅಲ್ಲ ಎಂದು ತಿರಸ್ಕರಿಸಲಾಗದು' ಎಂದು ನ್ಯಾಯಮೂರ್ತಿಗಳಾದ ಬಿ.ಎನ್.ಅಗರ್ ವಾಲ್ ಮತ್ತು ಪಿ.ಪಿ.ನಾವ್ಲೇಕರ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು. ಕೊಲೆಯ ಪ್ರಮುಖ ಆರೋಪಿಗಳಾದ ಮಲ್ಲಣ್ಣ, ಲಲಸೆ ಮತ್ತು ಭೀಮನಗೌಡರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಸಮರ್ಥಿಸಿದ ಸುಪ್ರೀಂಕೋರ್ಟ್, ಉಳಿದ ಆರೋಪಿಗಳಾದ ಮೆಹಬಾಬ್ ಸಾಬ್, ಬುದ್ದೇಸಾಬ್,ಖಾಸಿಮಸಾ, ಅಪ್ಪಾಸಾಹೇಬ್, ಶರಣಪ್ಪ, ಬಾಪುಗೌಡ, ಚಂದಪ್ಪ ಮತ್ತು ರಾಜಶೇಖರ್ ಅವರನ್ನು ಖುಲಾಸೆ ಮಾಡಿತು. 1989ರ ಏಪ್ರಿಲ್ 22ರ ಬೆಳಿಗ್ಗೆ ಗುಲ್ಬರ್ಗ ನ್ಯಾಯಾಲಯದ ಮುಂದಿನ ಕಟ್ಟೆ ಬಳಿ ಸ್ನೆಹಿತರ ಜೊತೆ ಮಾತನಾಡುತ್ತಾ ನಿಂತಿದ್ದ ಭೀಮನಗೌಡ ದೇಸಾಯಿ ಅವರ ಮೇಲೆ ಆಯುಧಧಾರಿ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿ ಹತ್ಯೆಗೈದಿತ್ತು. ತೀವ್ರವಾಗಿ ಗಾಯಗೊಂಡ ದೇಸಾಯಿ ಆಸ್ಪತ್ರೆಯಲ್ಲಿ ಮೃತರಾಗಿದ್ದರು.

2007: ಗಣೇಶ ಪ್ರತಿಮೆಯನ್ನು ಪೂಜಿಸಿದ `ತಪ್ಪಿಗಾಗಿ' ನಟ ಸಲ್ಮಾನ್ ಖಾನ್ ಮತ್ತು ಕುಟುಂಬದ ಸದಸ್ಯರ ಮೇಲೆ ಬರೇಲಿಯ ಇಸ್ಲಾಂ ಧಾರ್ಮಿಕ ಮುಖಂಡರೊಬ್ಬರು `ಫತ್ವಾ' ಹೊರಡಿಸಿದರು. ಇದರೊಂದಿಗೆ ಸಲ್ಮಾನ್  ಖಾನ್ ಮತ್ತೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡರು. `ವಿಗ್ರಹ ಪೂಜೆಗೆ ಇಸ್ಲಾಂ ಧರ್ಮದಲ್ಲಿ ಅವಕಾಶ ಇಲ್ಲ. ಈ ಫತ್ವಾ ಕೇವಲ ಸಲ್ಮಾನ್ ಖಾನ್ ವಿರುದ್ಧ ಮಾತ್ರ ಅಲ್ಲ,  ವಿಗ್ರಹ ಪೂಜೆ ಸಲ್ಲಿಸಿದವರು ಯಾರೇ ಆಗಲಿ `ಕಲ್ಮಾ' ಪಠಿಸಿ ಇಸ್ಲಾಂಗೆ ಮರುಪ್ರವೇಶ ಪಡೆಯಬೇಕು' ಎಂದು ಬರೇಲಿಯ ಇಫ್ತಾ ಮಂಜರ್ ಇ ಇಸ್ಲಾಮ್ ಪರವಾಗಿ ಮುಫ್ತಿ ಫಕೀರ್ ಖಾದ್ರಿ ಹೇಳಿದರು. ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದ ಸದಸ್ಯರು ಗಣೇಶ ಪ್ರತಿಮೆಗೆ ನಮಿಸಿದ್ದಲ್ಲದೇ ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ನರ್ತಿಸಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು.

2007: ಬಾಹ್ಯಾಕಾಶದಲ್ಲಿ 195 ದಿನಗಳಷ್ಟು ಸುದೀರ್ಘ ಅವಧಿವರೆಗೆ ಇದ್ದ ವಿಶ್ವದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಒಂದು ವಾರದ ಭಾರತ ಭೇಟಿ ಸಲುವಾಗಿ ಅಹಮದಾಬಾದಿಗೆ ಬಂದಿಳಿದರು.  `ಇಲ್ಲಿಗೆ ಬಂದಿಳಿಯಲು ನನಗೆ ಅತೀವ ಸಂತೋಷವೆನಿಸಿದೆ. ಭಾರತದ ಭೇಟಿ ಬಹಳ ಕಾಲದವರೆಗೂ ನನಗೆ ನೆನಪಿನಲ್ಲಿ ಉಳಿಯಲಿದೆ' ಎಂದು `ಸುನೀತಾ ವಿಲಿಯಮ್ಸ್ ಅಹಮದಾಬಾದ್ ನೆಲ ಸ್ಪರ್ಶಿಸುತ್ತಿದ್ದಂತೆಯೇ ಆನಂದ ತುಂದಿಲರಾಗಿ ಉದ್ಘರಿಸಿದರು. ಕಪ್ಪು ವರ್ಣದ ಟಿ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದ ಸುನೀತಾ ಬೆಳಿಗ್ಗೆ 10.55ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಸ್ಥಳೀಯ ಸರ್ದಾರ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಮುಖ್ಯಮಂತ್ರಿ ನರೇಂದ್ರ ಮೋದಿ ಪರವಾಗಿ ರಾಜ್ಯ ಸರ್ಕಾರದ ಶಿಷ್ಟಾಚಾರ ಅಧಿಕಾರಿ ಪುಷ್ಪಗುಚ್ಛ ನೀಡುವ ಮೂಲಕ ಸ್ವಾಗತಿಸಿದರು.

2007: ಎಲ್ಲೇ ಇದ್ದರೂ ಮಾಹಿತಿಗಳನ್ನು ತತ್ ಕ್ಷಣ ರವಾನೆ ಮಾಡುವ ತಂತ್ರಜ್ಞಾನವೊಂದನ್ನು ಅಭಿವೃದ್ಧಿ ಪಡಿಸಿರುವುದಾಗಿ ಇಂಟೆಲ್ ಕಾರ್ಪೊರೇಷನ್ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಪ್ರಕಟಿಸಿತು. ಮುಂದಿನ ವರ್ಷ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಕಂಪೆನಿ ಹೇಳಿತು. ವೈಫೈ ಮತ್ತು ವೈಮ್ಯಾಕ್ಸ್ ತಂತ್ರಜ್ಞಾನ ಎರಡನ್ನೂ ಬಳಸಿಕೊಂಡು ಸಂಯುಕ್ತ ಮಾಡ್ಯೂಲ್ ಒಂದನ್ನು ಕಂಪೆನಿ ಸಿದ್ಧಪಡಿಸಿದೆ. ಲ್ಯಾಪ್ ಟಾಪ್ ಮತ್ತು ಅಲ್ಟ್ರಾಮೊಬೈಲುಗಳಿಗೆ ಇದನ್ನು ಅಳವಡಿಸಬಹುದು ಎಂದು ಕಂಪೆನಿಯ ಅಧ್ಯಕ್ಷ ಪಾಲ್ ಒಟೆಲಿನಿ ತಿಳಿಸಿದರು.

2007: ಕ್ರೈಸ್ತ ಧರ್ಮದ ಬಿಷಪ್ ಅಂತ್ಯಸಂಸ್ಕಾರದ ವೇಳೆ ಋಗ್ವೇದ, ಉಪನಿಷತ್ ಹಾಗೂ ಕುರಾನಿನಲ್ಲಿನ ಕೆಲವು ಸಾಲುಗಳನ್ನು ಪಠಿಸಿ ಧಾರ್ಮಿಕ ಸೌಹಾರ್ದ ಮೆರೆದ ಘಟನೆ ಅಮೆರಿಕದಲ್ಲಿ ನಡೆಯಿತು. ನೆವಾಡಾ ರಾಜ್ಯದ ರಿನೊ ಚರ್ಚಿನ ಆರ್ಚ್ ಬಿಷಪ್ ಡಗ್ಲಾಸ್ ಇಗೋ ನೆ ಸೊವೈ ಅವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ವೇಳೆ ರಾಜನ್ ಜೇಡ್ ಅವರು ಗಾಯಿತ್ರಿ ಮಂತ್ರ, ಋಗ್ವೇದ, ಉಪನಿಷತ್ ಪಠಿಸಿದರು. ಸಿಯೆರಾ ಪ್ರತಿಷ್ಠಾನದ ತುನೆ ದರ್ಮಾಜ್ ಕುರಾನಿನ ಕೆಲವು ಸಾಲುಗಳನ್ನು ಹೇಳಿದರು. ನಂತರ ಬೌದ್ಧ ಧರ್ಮದ ವಿಲಿಯಂ ಬಾರ್ಲೆಟ್ಟೆ ಸಹ ಮಂತ್ರ ಓದಿದರು.

2007: ಬೆಂಗಳೂರಿನ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿರುವ (ನಂ.67) 218.76 ಚದರ ಮೀಟರ್ ಜಮೀನನ್ನು ಮೆಟ್ರೋ ರೈಲು ಯೋಜನೆಗೆ ಸ್ವಾಧೀನ ಪಡಿಸಿಕೊಂಡು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹೊರಡಿಸಿರುವ ಅಧಿಸೂಚನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತು.

2007: ರಾಷ್ಟ್ರೀಕೃತ ಕೆನರಾ ಬ್ಯಾಂಕ್ ದೇಶದಲ್ಲಿಯೇ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದ ಅನಕ್ಷರಸ್ಥರಿಗಾಗಿ ಬಹು ಉದ್ದೇಶದ ಜೈವಿಕ ತಂತ್ರಜ್ಞಾನದ `ಕೆನರಾ ವಿಕಾಸ ಸ್ಮಾರ್ಟ್ ಕಾರ್ಡ್' ಬಳಕೆಗೆ  ಬೆಂಗಳೂರಿನ ದೇವನಹಳ್ಳಿಯಲ್ಲಿ ಚಾಲನೆ ನೀಡಿತು. ಅನಕ್ಷರಸ್ಥರ ಹೆಬ್ಬೆಟ್ಟಿನ ಗುರುತೇ ಎಟಿಎಂ ಕಾರ್ಡ್,  ಕೆನರಾ ವಿಕಾಸ ಸ್ಮಾರ್ಟ್ ಕಾರ್ಡುಗಳ ಬಳಕೆಯ ದೃಢೀಕರಣಕ್ಕೆ ನೆರವಾಗುವ ತಂತ್ರಜ್ಞಾನ ಬಳಸಿರುವುದು ದೇಶದಲ್ಲೇ ಪ್ರಥಮ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ. ಬಿ. ಎನ್. ರಾವ್ ನುಡಿದರು.

2006: ರಕ್ತರಹಿತ ಕ್ಷಿಪ್ರಕ್ರಾಂತಿ ಮೂಲಕ ಥಾಯ್ಲೆಂಡ್ ಸರ್ಕಾರವನ್ನು ಉರುಳಿಸಿದ ಸೇನಾ ಮುಖ್ಯಸ್ಥ ಜನರಲ್ ಸೋಂಥಿ ಬೂನ್ಯಾ ರತ್ಕಾಲಿ ಅವರನ್ನು ಥಾಯ್ಲೆಂಡ್ ದೊರೆ ಭೂಮಿಬೊಲ್ ಅದುಲ್ಯತೇಜ್ ಅವರು ಥಾಯ್ಲೆಂಡಿನ ಹಂಗಾಮಿ ಪ್ರಧಾನಿಯಾಗಿ ನೇಮಕ ಮಾಡಿದರು.

2006: ಹದಿನೆಂಟು ಲಕ್ಷ ಡಾಲರ್ ಬೆಲೆಯ ವಜ್ರಗಳನ್ನು ಒಳಗೊಂಡ ದುಬಾರಿ ಚಿನ್ನದ ಕಂಚುಕವನ್ನು ದಕ್ಷಿಣ ಕೊರಿಯಾದ ರೂಪದರ್ಶಿಯೊಬ್ಬಳು ಸೋಲ್ ನಲ್ಲಿ ಪ್ರದರ್ಶಿಸಿದಳು. ಗೋಲ್ಡನ್ ಝೋನ ಸಂಸ್ಥೆಯ ಹೊಸ ಉತ್ಪನ್ನ ಬಿಡುಗಡೆ ಸಮಾರಂಭದಲ್ಲಿ ಈ ದುಬಾರಿ ಬ್ರಾ ಪ್ರದರ್ಶಿಸಲಾಯಿತು.

2006: `ಕ್ರೊಕೊಡೈಲ್ ಹಂಟರ್' ಎಂದೇ ಖ್ಯಾತರಾದ ಸ್ಟೀವ್ ಇರ್ವಿನ್ ಗೆ ಜಗತ್ತು ಭಾವಪೂರ್ಣ ವಿದಾಯ ಹೇಳಿತು. ಸುಮಾರು ಹದಿನೈದು ದಿನಗಳ ಹಿಂದೆ ಸಮುದ್ರದ ಒಳಗೆ ಛಾಯಾಗ್ರಹಣ ಕಾಲದಲ್ಲೇ ವಿಷದ ಮೀನಿನ ಮುಳ್ಳಿನ ದಾಳಿಗೆ ತುತ್ತಾಗಿ ಅವರು ಅಸು ನೀಗಿದ್ದರು. 5000 ಮಂದಿ ನೇರವಾಗಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಜಗತ್ತಿನಾದ್ಯಂತ 300 ದಶಲಕ್ಷ ಮಂದಿ ಸ್ಟೀವ್ ಅವರ ಅಂತ್ಯಕ್ರಿಯೆ ವೀಕ್ಷಿಸಿ ಭಾಷ್ಪಾಂಜಲಿ ಸಲ್ಲಿಸಿದರು.

2006: ಶನಿಗ್ರಹದ ಸುತ್ತ ಈಗಾಗಲೇ ಇರುವ ದಟ್ಟ ಬಳೆಗಳ ನಡುವೆ ಕಣಗಳಿಂದ ಕೂಡಿದ ಕಂದಿದ ಬಳೆಯೊಂದು ಇರುವುದನ್ನು  ಪತ್ತೆ ಹಚ್ಚಲಾಯಿತು. ಶನಿಗ್ರಹದ ಕುರಿತು ಮಾಹಿತಿ ಸಂಗ್ರಹಿಸಲು ಕಳುಹಿಸಲಾದ `ಕ್ಯಾಸಿನಿ' ಅಂತರಿಕ್ಷ ನೌಕೆಯು ಈ ಬಳೆಯ ಚಿತ್ರವನ್ನು ಸೆರೆ ಹಿಡಿದು ಭೂಮಿಗೆ ರವಾನಿಸಿತು. ಶನಿಯ ಸುತ್ತ 7 ಸ್ಪಷ್ಟ ಬಳೆಗಳಿದ್ದು, 47 ಉಪಗ್ರಹಗಳು ಸುತ್ತುತ್ತಿವೆ. `ಕ್ಯಾಸಿನಿ' ನೌಕೆಯು ಶನಿಯಿಂದ 150 ಕೋಟಿ ಮೈಲಿ ದೂರದಲ್ಲಿರುವ ಭೂಮಿಯ ವರ್ಣಮಯ ಚಿತ್ರವನ್ನೂ ಸೆರೆ ಹಿಡಿದಿದೆ. (ಈ ಚಿತ್ರಗಳನ್ನು ಇಂಟರ್ನೆಟ್ಟಿನಲ್ಲಿ(ಣಣಠಿ://ತಿತಿತಿ.ಟಿಚಿಚಿ.ರಠತ/ಛಿಚಿಟಿ) ನೋಡಬಹುದು)
1999: ಮಿಖಾಯಿಲ್ ಗೊರ್ಬಚೆವ್ ಅವರ ಪತ್ನಿ ರಯೀಸಾ ಗೊರ್ಬಚೆವ್ ಅವರು ಜರ್ಮನಿಯಲ್ಲಿ ತಮ್ಮ 67ನೇ ವಯಸಿನಲ್ಲಿ ಮೃತರಾದರು.

1982: ಪಾಕಿಸ್ತಾನದ ಹೈದರಾಬಾದಿನಲ್ಲಿ ನಡೆದ ಮೂರು ಆಟಗಳ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯದ ರಾಡ್ ಮಾರ್ಶ್, ಬ್ರೂಸ್ ಯಾರ್ಡ್ಲಿ ಮತ್ತು ಜಿಯೊ ಲಾಸನ್ ಅವರನ್ನು ಒಂದರ ಹಿಂದೊಂದರಂತೆ ಬಾಲ್ ಬಾರಿಸಿ ಔಟ್ ಮಾಡುವ ಮೂಲಕ ಪಾಕಿಸ್ತಾನಿ ಬೌಲರ್ ಜಲಾಲುದ್ದೀನ್ ಅವರು ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಹ್ಯಾಟ್ರಿಕ್ ಸಾಧಿಸಿದರು.

1973: ಟೆಕ್ಸಾಸಿನ ಆಸ್ಟ್ರೋಡೋಮಿನಲ್ಲಿ ನಡೆದ ಟೆನಿಸ್ ನೇರ ಸ್ಪರ್ಧೆಯಲ್ಲಿ ಬಿಲಿ ಜೀನ್ ಕಿಂಗ್ ಅವರು 6-4, 6-3, 6-4 ಅಂತರದಲ್ಲಿ ಬಾಬಿ ಜೀನ್ಸ್ ಅವರನ್ನು ಪರಾಭವಗೊಳಿಸಿದರು. ಒಂದು ಲಕ್ಷ ಡಾಲರ್ ಮೊತ್ತದ ಬಹುಮಾನವಿದ್ದ ಈ ಪಂದ್ಯ `ಬ್ಯಾಟ್ಲ್ ಆಫ್ ಸೆಕ್ಸಸ್' ಎಂದೇ ಖ್ಯಾತವಾಗಿದೆ.

1933: ಸಮಾಜ ಸುಧಾರಕಿ ಹಾಗೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಧುರೀಣರಲ್ಲಿಒಬ್ಬರಾಗಿದ್ದ ಅನಿಬೆಸೆಂಟ್ ಅವರು ಮದ್ರಾಸಿನಲ್ಲಿ (ಈಗಿನ ಚೆನ್ನೈ) ತಮ್ಮ 85ನೇ ವಯಸ್ಸಿನಲ್ಲಿ ಮೃತರಾದರು.

1881: ಚೆಸ್ಟರ್ ಎ. ಆರ್ಥರ್ ಅವರು ಅಮೆರಿಕದ 21ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಮೆರಿಕದ 20ನೇ ಅಧ್ಯಕ್ಷ ಜೇಮ್ಸ್ ಎ. ಗ್ಯಾರಿಫೀಲ್ಡ್ ಅವರನ್ನು ಕೊಲೆಗೈದ ಹಿನ್ನೆಲೆಯಲ್ಲಿ ಆರ್ಥರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಲಾಯಿತು.

1878: `ದಿ ಹಿಂದು' ವೃತ್ತಪತ್ರಿಕೆಯು ವಾರಪತ್ರಿಕೆಯ ರೂಪದಲ್ಲಿ ಮದ್ರಾಸಿನಲ್ಲಿ ಆರಂಭವಾಯಿತು. 1889ರ ಏಪ್ರಿಲ್ 1ರಿಂದ ಅದು ದಿನಪತ್ರಿಕೆಯಾಯಿತು.

1857: ಮೊದಲ ಸ್ವಾತಂತ್ರ್ಯ ಸಂಗ್ರಾಮದ (ಸಿಪಾಯಿ ದಂಗೆ) ವೈಫಲ್ಯದ ಬಳಿಕ ಬ್ರಿಟಿಷರು ದೆಹಲಿಯನ್ನು ಮರುವಶ ಮಾಡಿಕೊಂಡರು. ದೊರೆ ಎಂಬುದಾಗಿ ಘೋಷಿಸಿಕೊಂಡಿದ್ದ ಕೊನೆಯ ಮೊಘಲ್ ದೊರೆ ಎರಡನೇ ಬಹಾದುರ್ ಶಹಾನನ್ನು  ಹುಮಾಯೂನ್ ಸಮಾಧಿ ಬಳಿ ಬಂಧಿಸಿ, ಬರ್ಮಾಕ್ಕೆ (ಈಗಿನ ಮ್ಯಾನ್ಮಾರ್) ಗಡೀಪಾರು ಮಾಡಲಾಯಿತು. ಅಲ್ಲೇ ಆತ ಮೃತನಾದ.

1856: ಭಾರತೀಯ ಸಮಾಜ ಸುಧಾರಕ ನಾರಾಯಣ ಗುರು ಜನ್ಮದಿನ.

1955: ಸಾಹಿತಿ ವಸಂತ ಬನ್ನಾಡಿ ಜನನ.

1933: ಯಕ್ಷಗಾನ ಕಲೆಗೆ ದೇಶೀ ನೆಲೆಯಲ್ಲಿ ಒಂದು ಸಮರ್ಥ ವೇದಿಕೆ ನಿರ್ಮಿಸಿ ಹೆಸರು ತಂದುಕೊಟ್ಟ ಎಚ್.ಬಿ.ಎಲ್. ರಾವ್ ಅವರು ಎಚ್.ಪಿ. ರಾವ್- ಸೀತಾ ರತ್ನ ದಂಪತಿಯ ಮಗನಾಗಿ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಈದಿನ ಜನಿಸಿದರು. ಯಕ್ಷಗಾನ ಕಲೆಗೆ ಆಧುನಿಕ ಸ್ಪರ್ಶ ನೀಡಿ, ದೇಶ ವಿದೇಶಗಳಿಗೆ ಅದನ್ನು ಒಯ್ದ ಕೀರ್ತಿ ಶಿವರಾಮ ಕಾರಂತರಿಗೆ ಸಲ್ಲುತ್ತದೆ.

1933: ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ವಿದೇಶೀ ಮೂಲದ ಅನಿಬೆಸೆಂಟ್ (86) ಅವರು ಈದಿನ ಭಾರತದಲ್ಲಿ ನಿಧನರಾದರು. ಅವರು ಹುಟ್ಟಿದ್ದು  1847ರಲ್ಲಿ ಇಂಗ್ಲೆಂಡಿನಲ್ಲಿ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಸೆಪ್ಟೆಂಬರ್ 19

ಇಂದಿನ ಇತಿಹಾಸ

ಸೆಪ್ಟೆಂಬರ್ 19

1993ರಲ್ಲಿ ಮುಂಬೈಯ ವರ್ಲಿ ಸೆಂಚುರಿ ಬಜಾರಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಆರೋಪಿ `ಅಬ್ದುಲ್ ಗನಿ ಟರ್ಕ್ ತಪ್ಪಿತಸ್ಥ' ಎಂದು ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ  ತೀರ್ಪು ನೀಡಿದರು. 47 ವರ್ಷದ ಟರ್ಕ್ ನನ್ನು ಸ್ಫೋಟ ಸಂಭವಿಸಿದ ಕೆಲವೇ ಸಮಯದಲ್ಲಿ ಬಂಧಿಸಲಾಗಿತ್ತು.

2008: ಒರಿಸ್ಸಾದಲ್ಲಿ ಭಾರಿ ಮಳೆಯಿಂದಾಗಿ ಮಹಾನದಿಯಲ್ಲಿ ಉಕ್ಕೇರಿದ ಪ್ರವಾಹದಲ್ಲಿ 19ಮಂದಿ ಕೊಚ್ಚಿ ಹೋದರು.

2008: ಮಲೇಷ್ಯಾದ ಸರವಾಕ್ ಮತ್ತು ಪೆರಾಕ್ ಪ್ರಾಂತ್ಯದಲ್ಲಿ ಪ್ರಾಚ್ಯವಸ್ತು ಸಂಶೋಧಕರು ನವ ಶಿಲಾಯುಗದ ಕಾಲದಲ್ಲಿ ಬದುಕಿದ್ದ ಮನುಷ್ಯರ ಅಸ್ಥಿ ಪಂಜರಗಳನ್ನು ಪತ್ತೆಹಚ್ಚಿದರು.

2007: ಶ್ರೀರಾಮ ಐತಿಹಾಸಿಕ ವ್ಯಕ್ತಿಯೇ ಅಲ್ಲ ಎಂಬ ತಮ್ಮ ಮುಂಚಿನ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ, ತಮ್ಮ ವಾದ ವಿರೋಧಿಸುವವರು ಸೂಕ್ತ ದಾಖಲೆಗಳನ್ನು ತೋರಿಸಲಿ ಎಂದು ಸವಾಲು ಹಾಕಿದರು. ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಿದ ಅವರು, ರಾಮ ಬದುಕಿದ್ದ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ, ಅದೇ ರೀತಿ ಸಮುದ್ರಕ್ಕೆ ಸೇತುವೆ ಕಟ್ಟಬಲ್ಲ ಎಂಜಿನಿಯರಿಂಗ್ ಪರಿಣಿತಿಯನ್ನು ಹೊಂದಿರುವ ಕುರಿತೂ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದರು.

2007: ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಕಡಿಮೆ ಮಾಡಿದ್ದರಿಂದ ಉತ್ತೇಜನಗೊಂಡ ಷೇರುಪೇಟೆ ಸೂಚ್ಯಂಕವು 653 ಅಂಶಗಳಷ್ಟು ಏರಿಕೆಯೊಂದಿಗೆ ಇನ್ನೊಂದು ಸಾರ್ವಕಾಲಿಕ ದಾಖಲೆ ಬರೆಯಿತು. ಮುಂಬೈ ಷೇರುಪೇಟೆ ವಹಿವಾಟಿನ ಅಳತೆ ಗೋಲಾಗಿರುವ ಸಂವೇದಿ ಸೂಚ್ಯಂಕವು ಮಾಂತ್ರಿಕ ಸಂಖ್ಯೆ 16 ಸಾವಿರ ಅಂಶಗಳನ್ನು ದಾಟಿ ಹೊಸ ಮೈಲಿಗಲ್ಲು ಸ್ಥಾಪಿಸಿತು. ಷೇರುಪೇಟೆಯಲ್ಲಿ ಹಣ ಹೂಡಿದವರು ಕಳೆದ ಎರಡು ತಿಂಗಳಲ್ಲಿ ರೂ 5 ಲಕ್ಷ ಕೋಟಿಗಳಷ್ಟು ಶ್ರೀಮಂತರಾದರು. ಸೂಚ್ಯಂಕವು 15 ಸಾವಿರ ಅಂಶಗಳಿಂದ 16 ಸಾವಿರ ಅಂಶಗಳವರೆಗೆ ಸಾಗಿ ಬಂದ ಹಿನ್ನೆಲೆಯಲ್ಲಿ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆಯಾದ ಹಣದ ಒಟ್ಟು ಮೊತ್ತ ರೂ 49,17,402 ಕೋಟಿಗಳಷ್ಟಾಯಿತು.

 2007: ವಿಫಾ ಹೆಸರಿನ ಚಂಡಮಾರುತ ಚೀನದ ಝೆಜಿಯಾಂಗ್ ಪ್ರಾಂತವನ್ನು ಅಪ್ಪಳಿಸಿದ ಪರಿಣಾಮವಾಗಿ 50 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾದರು. ಕಳೆದ ವರ್ಷ ಇದೇ ಭಾಗಕ್ಕೆ ಅಪ್ಪಳಿಸಿದ್ದ ಸೊಮಾಯ್ ಚಂಡಮಾರುತ ನೂರಾರು ಜನರನ್ನು ಬಲಿತೆಗೆದುಕೊಂಡಿತ್ತು.

2007: ಷೇರುಪೇಟೆ ವಹಿವಾಟನ್ನು ಮನೆ ಅಥವಾ ಕಚೇರಿಯಲ್ಲಿ ಕುಳಿತೇ ಇಂಟರ್ನೆಟ್ ನೆರವಿನಿಂದ ನಿರ್ವಹಿಸಬಹುದಾದ ಇ-ಟ್ರೇಡಿಂಗ್ ಸೇವೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಬೆಂಗಳೂರಿನಲ್ಲಿ ಆರಂಭಿಸಿತು.

2007: ಎಸ್ಬಿಎಂ ಜೈನ್ ಕಾಲೇಜಿನ ಜೈಪ್ರಕಾಶ್ ಶೆಟ್ಟಿ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜ್ 43ನೇ ವಾರ್ಷಿಕ ಅಂತರ ಕಾಲೇಜ್ ಅಥ್ಲೆಟಿಕ್ ಕೂಟದ ಪುರುಷರ 400 ಮೀ. ಓಟದ ಸ್ಪರ್ಧೆಯಲ್ಲಿ ಕೂಟದ ನೂತನ ದಾಖಲೆ ಸ್ಥಾಪಿಸಿದ ಕೀರ್ತಿಗೆ ಪಾತ್ರರಾದರು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮೂರು ದಿನಗಳ ಅಥ್ಲೆಟಿಕ್ ಕೂಟದ ಎರಡನೇ ದಿನ, ಜೈಪ್ರಕಾಶ್ ಶೆಟ್ಟಿ 400 ಮೀ ಓಟದ ಸ್ಪರ್ಧೆಯನ್ನು 48.2 ಸೆಕೆಂಡುಗಳಲ್ಲಿ ಕ್ರಮಿಸಿ 2005ರಲ್ಲಿ ಅಲ್ ಅಮೀನ್ ಕಾಲೇಜಿನ ಅಯ್ಯಪ್ಪ ಹೆಸರಿನಲ್ಲಿದ್ದ 48.8 ಸೆಕೆಂಡು ಹಳೆ ದಾಖಲೆಯನ್ನು ಅಳಿಸಿ ಹಾಕಿದರು.

2006: `ಜೋಗಿ' ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ನಟ ಶಿವರಾಜ್ ಕುಮಾರ್, `ನಾಯಿ ನೆರಳು' ಚಿತ್ರದ ಅದ್ಭುತ ನಟನೆಗಾಗಿ ಪವಿತ್ರಾ ಲೋಕೇಶ್ ಅವರು 2005-06 ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು. ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾಯಿ ನೆರಳು' ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆಯಿತು. `ಕೇರಾಫ್ ಫುಟ್ ಪಾತ್' ನ ಮಾಸ್ಟರ್ ಕಿಶನ್ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಪಡೆದುಕೊಂಡರು.

 2006: 1993ರಲ್ಲಿ ಮುಂಬೈಯ ವರ್ಲಿ ಸೆಂಚುರಿ ಬಜಾರಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಆರೋಪಿ `ಅಬ್ದುಲ್ ಗನಿ ಟರ್ಕ್ ತಪ್ಪಿತಸ್ಥ' ಎಂದು ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ  ತೀರ್ಪು ನೀಡಿದರು. 47 ವರ್ಷದ ಟರ್ಕ್ ನನ್ನು ಸ್ಫೋಟ ಸಂಭವಿಸಿದ ಕೆಲವೇ ಸಮಯದಲ್ಲಿ ಬಂಧಿಸಲಾಗಿತ್ತು. ಈತನು ಪ್ರಮುಖ ಆರೋಪಿ ಟೈಗರ್ ಮೆಮನ್ ನ ವಾಹನ ಚಾಲಕನಾಗಿದ್ದ. 1993ರ ಮಾರ್ಚರ್್ 12ರಂದು ಈತ ಸೆಂಚುರಿ ಬಜಾರಿನಲ್ಲಿ ಆರ್ಡಿಎಕ್ಸ್ ತುಂಬಿದ್ದ ಜೀಪ್ ನಿಲ್ಲಿಸಿ ಭಾರಿ ಸ್ಫೋಟಕ್ಕೆ ಕಾರಣನಾಗಿದ್ದ.

2006: ಬ್ರಿಟನ್ನಿನ ವರ್ತಮಾನ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಶತಮಾನದ ಸ್ಥಳೀಯ ಹಗರಣಗಳು, ಅಂತಾರಾಷ್ಟ್ರೀಯ ಪ್ರಮುಖ ಘಟನಾವಳಿಗಳು, ಜಾಗತಿಕ ಮಟ್ಟದ ದುರಂತಗಳ ಸಂಗ್ರಹವನ್ನು ಒಳಗೊಂಡ `ಸುದ್ದಿಮನೆ'ಸುದ್ದಿಮನೆ' ಲಂಡನ್ನಿನಲ್ಲಿ ಅನಾವರಣಗೊಂಡಿತು. ಖಾಸಗಿಯವರಿಂದ ಸಂಗ್ರಹಿಸಲಾದ ಒಂದು ಲಕ್ಷ ಪತ್ರಿಕೆಗಳ ಮುಖಪುಟಗಳು ಇಲ್ಲಿ ಪ್ರದರ್ಶಿತವಾಗಿವೆ. 1909ರಲ್ಲಿ ನಡೆದ ಪ್ರಪ್ರಥಮ ವಿಮಾನ ಹಾರಾಟ, 1953ರಲ್ಲಿ ಪ್ರಥಮ ಬಾರಿಗೆ ಮೌಂಟ್ ಎವರೆಸ್ಟ್ ಏರಿದ ಘಟನೆಯಿಂದ ಹಿಡಿದು, ಲಂಡನ್ನಿನಲ್ಲಿ ಇತ್ತೀಚೆಗೆ ಸಂಭವಿಸಿದ ಮಾನವ ಬಾಂಬ್ ಸ್ಫೋಟದವರೆಗಿನ ಸುದ್ದಿಗಳನ್ನು ಒಳಗೊಂಡ ಪತ್ರಿಕೆಗಳ ಮುಖಪುಟಗಳು ಇಲ್ಲಿವೆ. 1969ರ ಜುಲೈ 21ರಂದು ಮಾನವ ಚಂದ್ರನ ಮೇಲೆ ಕಾಲಿಟ್ಟ ಸುದ್ದಿಯನ್ನು ಮೊದಲಿಗೆ ಪ್ರಕಟಿಸಿದ `ಈವ್ನಿಂಗ್ ಸ್ಟ್ಯಾಂಡರ್ಡ್' ಮುಖಪುಟ, 1963ರ ನವೆಂಬರ್ 25ರಂದು ಪ್ರಥಮ ಬಾರಿಗೆ ವಿಧಿಸಲಾದ ಮರಣದಂಡನೆ (ಓಸ್ವಾಲ್ಡ್ ಹಾರ್ವೆ ಹತ್ಯೆಯ ಆರೋಪಿ ಜಾಕ್ ರೂಬಿ) ಪ್ರಕರಣದ ವರದಿ ಕೂಡಾ ಈ ಪ್ರದರ್ಶನದಲ್ಲಿದೆ.

 2006: ಪ್ರಧಾನಿ ತಕ್ ಸಿನ್ ಶಿನವಾತ್ರ ಅವರು ನ್ಯೂಯಾರ್ಕಿನಲ್ಲಿ ವಿಶ್ವಸಂಸ್ಥೆ ಶೃಂಗಸಬಯಲ್ಲಿ ಪಾಲ್ಗೊಂಡಿದ್ದಾಗ ಅವರ ಅನುಪಸ್ಥಿತಿಯಲ್ಲಿ ಥಾಯ್ಲೆಂಡ್ ಸೇನೆ ಕ್ಷಿಪ್ರ ಕ್ರಾಂತಿಗೆ ಯತ್ನಿಸಿದ ಹಿನ್ನೆಲೆಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಶಿನವಾತ್ರ ಅವರು ಸೇನಾ ಮುಖ್ಯಸ್ಥರನ್ನು ವಜಾ ಮಾಡಿ ತುರ್ತು ಪರಿಸ್ಥಿತಿ ಘೋಷಿಸಿದರು.

2001: ಪಂಜಾಬಿನ ಗುರುಪ್ರೀತ್ ಸಿಂಗ್ ಅವರು ಲಖ್ನೋದಲ್ಲಿ ನಡೆದ 41ನೇ  ಅಂತರ್ ರಾಜ್ಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 110 ಮೀಟರ್ ಹರ್ಡಲ್ಸನ್ನು 14.07 ಸೆಕೆಂಡುಗಳಲ್ಲಿ ಓಡುವ ಮೂಲಕ ಭಾರತೀಯ ಓಟಗಾರರ ಹಳೆಯ ದಾಖಲೆಯನ್ನು ಅಳಿಸಿ ಹಾಕಿದರು. 1964ರ ಟೋಕಿಯೊ ಒಲಿಪಿಂಕ್ಸಿನಲ್ಲಿ ಜಿ.ಎಸ್. ರಾಂಧವಾ ಅವರು ಮಾಡಿದ್ದ ದಾಖಲೆಯನ್ನು ಅವರು ಮುರಿದರು. ಈ ದಾಖಲೆ ಮುರಿಯುವ ಯತ್ನವನ್ನು ಜಿ.ಎಸ್. ರಾಂಧವಾ ಅವರೂ ವೀಕ್ಷಿಸಿದರು.

2000: ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರ ಎತ್ತುವ ಸ್ಪರ್ಧೆಯ  (ವೆಯ್ಟ್ ಲಿಫ್ಟಿಂಗ್) 69 ಕಿ.ಗ್ರಾಂ. ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕರ್ಣಂ ಮಲ್ಲೇಶ್ವರಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1965: ಭಾರತೀಯ ಸ್ವಾತಂತ್ರ್ಯ ಯೋಧ, ಗುಜರಾತಿನ ಮುಖ್ಯಮಂತ್ರಿ ಬಲವಂತರಾಯ್ ಮೆಹ್ತಾ ಅವರು ಭಾರತ - ಪಾಕ್ ಘéರ್ಷಣೆಯ ಸಂದರ್ಭದಲ್ಲಿ ಕಛ್ ಗಡಿಯಲ್ಲಿ ಅವರ ವಿಮಾನಕ್ಕೆ ಪಾಕ್ ವಿಮಾನವು ಗುಂಡು ಹೊಡೆದು ಉರುಳಿಸಿದ ಪರಿಣಾಮವಾಗಿ ಮೃತರಾದರು. ಅವರ ಬದುಕಿನಲ್ಲಿನಂಬರ್ 19 ಮಹತ್ವ ಪಡೆದಿದೆ. ಅವರು ಹುಟ್ಟಿದ್ದು 1899ರ ಫೆಬ್ರುವರಿ 19ರಂದು. ಮದುವೆಯಾದದ್ದು 1936ರ ಏಪ್ರಿಲ್ 19ರಂದು. ಮೃತರಾದದ್ದು 1965ರ ಸೆಪ್ಟೆಂಬರ್ 19ರಂದು.

1961: ಸಾಹಿತಿ ಅನುರಾಧ ಕೆ.ವಿ. ಜನ್ಮದಿನ.

1958: ಅಮೆರಿಕದ ಮಿಲಿಟರಿಯೇತರ ಬಾಹ್ಯಾಕಾಶ ಯಾನಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುವ ವಿಚಾರದಲ್ಲಿ ಸಮನ್ವಯ ಸಾಧಿಸುವ ಸಲುವಾಗಿ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಎಂಬ ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಲಾಯಿತು.

1929: ಖ್ಯಾತ ನಾಟಕಕಾರ ಬಿ.ವಿ. ಕಾರಂತ (19-9-1929ರಿಂದ 1-9-2002) ಅವರು ಬಾಬುಕೋಡಿ ನಾರಣಪ್ಪಯ್ಯ- ಲಕ್ಷ್ಮಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಚಿ ಗ್ರಾಮದ ಬಾಬುಕೋಡಿಯಲ್ಲಿ ಜನಿಸಿದರು. ಒಟ್ಟು 52 ನಾಟಕಗಳನ್ನು ನಿರ್ದೇಶಿದ ಅವರು 15 ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದರು. ಏವಂ ಇಂದ್ರಜಿತ, ಹಯವದನ, ಸಂಕ್ರಾಂತಿ, ಈಡಿಪಸ್, ಜೋಕುಮಾರಸ್ವಾಮಿ ಅವರ ನಿರ್ದೇಶಿಸಿದ ನಾಟಕಗಳಲ್ಲಿ ಹೆಸರುವಾಸಿಯಾದವು. ಮಕ್ಕಳಿಗಾಗಿಯೂ ಹಲವಾರು ನಾಟಕಗಳನ್ನು ರಚಿಸಿದ ಕಾರಂತ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

1704: ಗುರುಗೋವಿಂದ ಸಿಂಗ್ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Sunday, September 20, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 18

ಇಂದಿನ ಇತಿಹಾಸ

ಸೆಪ್ಟೆಂಬರ್ 18
 ರಷ್ಯದಲ್ಲೇ ಅತಿ ಎತ್ತರ ಎನ್ನಬಹುದಾದ ಗಗನ ಚುಂಬಿ ಕಟ್ಟಡಕ್ಕೆ ಮಾಸ್ಕೊದ (ಇತಾರ್ ತಾಸ್) ಮೇಯರ್ ಯುರಿ ಲುಝಕೊವ್ ಶಿಲಾನ್ಯಾಸ ನೆರವೇರಿಸಿದರು


2014: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ನಡುವಣ ಮಾತುಕತೆಗಳ ಫಲಶ್ರುತಿಯಾಗಿ ಭಾರತ ಮತ್ತು ಚೀನಾ 12 ಒಪ್ಪಂದಗಳಿಗೆ ಸಹಿ ಹಾಕಿದವು. ರೈಲ್ವೇ, ಬಾಹ್ಯಾಕಾಶ ಮತ್ತು ಕಸ್ಟಮ್ಸ್ ಕ್ಷೇತ್ರಗಳಲ್ಲಿ ಸಹಕಾರ ಈ ಒಪ್ಪಂದಗಳಲ್ಲಿ ಸೇರಿವೆ. ಭಾರತ ಮತ್ತು ಚೀನಾ ನಡುವಣ ಬಾಂಧವ್ಯ ವೃದ್ಧಿಯ ಸಂಪೂರ್ಣ ಸಾಮರ್ಥ್ಯ ಅರಿವಿಗೆ ಪರಸ್ಪರ ನಂಬಿಕೆ ಮತ್ತು ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳುವುದು ಅತ್ಯಂತ ಮಹತ್ವದ ವಿಚಾರ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಎರಡು ದಿನಗಳ ಮಾತುಕತೆಯಲ್ಲಿ ನಾವು ಆರ್ಥಿಕ, ರಾಜಕೀಯ, ಭದ್ರತೆ ಸೇರಿದಂತೆ ಎಲ್ಲಾ ವಿಷಯಗಳ ಬಗೆಗೂ ರ್ಚಚಿಸಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು ಎಂದು ನಾವು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ನುಡಿದರು. ವ್ಯಾಪಾರ ಅಸಮತೋಲನ ಬಗ್ಗೆ ನಾವು ಕಳವಳ ವ್ಯಕ್ತ ಪಡಿಸಿದ್ದೇವೆ ಮತ್ತು ಚೀನಾದಲ್ಲಿ ಭಾರತೀಯ ಕಂಪೆನಿಗಳಿಗೆ ಹೂಡಿಕೆ ಮೇಲಿನ ನಿಯಂತ್ರಣಗಳನ್ನು ನಿವಾರಿಸುವಂತೆ ಚೀನೀ ನಾಯಕ ಕ್ಷಿ ಜಿನ್​ಪಿಂಗ್ ಅವರಿಗೆ ಮನವಿ ಮಾಡಿದ್ದೇವೆ ಎಂದು ಮೋದಿ ಹೇಳಿದರು. ಭಾರತ ಮತ್ತು ಚೀನಾ ನಾಗರಿಕ ಪರಮಾಣು ಸಹಕಾರ ನಿಟ್ಟಿನಲ್ಲೂ ಮಾತುಕತೆ ಆರಂಭಿಸಲು ನಿರ್ಧರಿಸಿವೆ ಎಂದು ಪ್ರಧಾನಿ ವಿವರಿಸಿದರು.

2014: ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ 2000 ಕೋಟಿ ಅಮೆರಿಕನ್ ಡಾಲರ್ (1,21,830 ಕೋಟಿ ರೂಪಾಯಿ) ಮೌಲ್ಯದಷ್ಟು ಹೂಡಿಕೆಯನ್ನು ಭಾರತದಲ್ಲಿ ಮಾಡಲು ಚೀನಾ ಒಪ್ಪಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಮಾತುಕತೆ ಸಂದರ್ಭದಲ್ಲಿ ಈ ವಿಚಾರದಲ್ಲಿ ಚೀನಾ ತನ್ನ ಬದ್ಧತೆಯನ್ನು ಸ್ಪಷ್ಟ ಪಡಿಸಿದೆ ಎಂದು ಪ್ರಧಾನಿ ನಂತರ ತಿಳಿಸಿದರು. ಗಡಿಯುದ್ಧಕ್ಕೂ ಸಂಭವಿಸುತ್ತಿರುವ ಘಟನೆಗಳ ಬಗ್ಗೆ ನಾನು ಕಳವಳ ವ್ಯಕ್ತ ಪಡಿಸಿದೆ. ಗಡಿ ಪ್ರಶ್ನೆಯನ್ನು ಬಗೆಹರಿಸಬೇಕು. ನೈಜ ನಿಯಂತ್ರಣ ರೇಖೆ ಬಗ್ಗೆ ಸ್ಪಷ್ಟತೆಯ ಅಗತ್ಯ ಇದೆ ಎಂದು ನಾವು ಅಭಿಪ್ರಾಯಪಟ್ಟೆವು ಎಂದು ಮೋದಿ ಹೇಳಿದರು. ಚೀನಾದ ವೀಸಾನೀತಿ ಹಾಗೂ ನೀರಿನ ವಿಷಯ ಬಗೆಗೂ ನಾನು ಕಳವಳ ವ್ಯಕ್ತಪಡಿಸಿದೆ. ಈ ಕುರಿತ ವಿವಾದ ಇತ್ಯರ್ಥದಿಂದ ಬಾಂಧವ್ಯ ಇನ್ನಷ್ಟು ಬಲಗೊಳ್ಳುವುದು ಎಂದು ನಾನು ಹೇಳಿದೆ ಎಂದು ಪ್ರಧಾನಿ ವಿವರಿಸಿದರು. ನಾವು ಪರಸ್ಪರ ಕಾಳಜಿಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳಲ್ಲೂ ಫಲಪ್ರದ ಮಾತುಕತೆ ನಡೆಸಿದ್ದೇವೆ ಎಂದು ಚೀನೀ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ನುಡಿದರು. ಮುಂದಿನ ವರ್ಷ ಆದಿಯಲ್ಲಿ ಚೀನಾಕ್ಕೆ ಭೇಟಿ ನೀಡುವಂತೆಯೂ ಕ್ಷಿ ಅವರು ಈ ಸಂದರ್ಭದಲ್ಲಿ ಮೋದಿ ಅವರಿಗೆ ಆಮಂತ್ರಣ ನೀಡಿದರು. 2015ನೇ ವರ್ಷವನು ಚೀನಾದಲ್ಲಿ 'ಭಾರತಕ್ಕೆ ಭೇಟಿ ನೀಡಿ' (ವಿಸಿಟ್ ಇಂಡಿಯಾ) ವರ್ಷವಾಗಿ ಆಚರಿಸಲಾಗುವುದು ಎಂದೂ ಅವರು ನುಡಿದರು. ಪ್ರದೇಶದಲ್ಲಿ ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಅವಳಿ ಎಂಜಿನ್​ಗಳಂತೆ ಚೀನಾ ಮತ್ತು ಭಾರತ ಕಾರ್ಯ ನಿರ್ವಹಿಸಲಿವೆ ಎಂದು ಚೀನಾ ಅಧ್ಯಕ್ಷರು ಹೇಳಿದರು. ಪರಸ್ಪರರ ಕಾಳಜಿಗಳನ್ನು ಗೌರವಿಸಲು ನಾವು ನಿರ್ಧರಿಸಿದೆವು. ಚೀನಾವು ಗಡಿ ವಿವಾದ ಇತ್ಯರ್ಥಕ್ಕೆ ದೃಢ ನಿಲುವು ಹೊಂದಿದೆ ಎಂದು ಅವರು ನುಡಿದರು. ಗಡಿಯನ್ನು ಗುರುತಿಸಿಲ್ಲವಾದ್ದರಿಂದ ಕೆಲವು ಘಟನೆಗಳು ಸಂಭವಿಸುತ್ತಿವೆ. ಆದರೆ ಇಂತಹ ಘಟನೆಗಳನ್ನು ನಿರ್ವಹಿಸಲು ಉಭಯ ರಾಷ್ಟ್ರಗಳು ವ್ಯವಸ್ಥೆ ರೂಪಿಸುವುವು ಎಂದು ಅವರು ಹೇಳಿದರು.

2014: ನವದೆಹಲಿ: ಲಡಾಖ್​ನ ಚುಮುರ್ ವಿಭಾಗದಲ್ಲಿ ಸುಮಾರು 1000 ಮಂದಿ ಚೀನೀ ಸೈನಿಕರು ಚೀನಾದ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ಅವರು ಭಾರತಕ್ಕೆ ಭೇಟಿ ನೀಡಿರುವ ವೇಳೆಯಲ್ಲೇ ಈದಿನ ಭಾರತದೊಳಕ್ಕೆ ನುಸುಳಿ ಬಂದರು. ಸೇನಾ ಮೂಲಗಳ ಪ್ರಕಾರ 1000 ಮಂದಿ ಚೀನೀ ಸೈನಿಕರು ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದಲ್ಲಿ ನೈಜ ನಿಯಂತ್ರಣ ರೇಖೆಯನ್ನು ದಾಟಿ ದೇಶದೊಳಕ್ಕೆ ನುಸುಳಿ ಬಂದಿದ್ದು ಹಿಂದಕ್ಕೆ ಹೋಗಲೂ ನಿರಾಕರಿಸಿದರು. ಭಾರತೀಯ ಸೇನೆ ಮೂರು ಬೆಟಾಲಿಯನ್​ಗಳನ್ನು ತತ್ ಕ್ಷಣವೇ ಚುಮುರ್ ವಿಭಾಗದ ನೈಜ ನಿಯಂತ್ರಣ ರೇಖೆಯ ಕಡೆಗೆ ಕಳುಹಿಸಿತು. ಉಭಯ ರಾಷ್ಟ್ರಗಳ ಮಧ್ಯೆ ಧ್ವಜಸಭೆ ನಡೆದ ಮರುದಿನವೇ ಈ ಘಟನೆ ಘಟಿಸಿತು. ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ಹಿಂದಿನ ದಿನವಷ್ಟೇ ಅಹಮದಾಬಾದಿನಿಂದ ಮೂರು ದಿನಗಳ ಭಾರತ ಪ್ರವಾಸ ಆರಂಭಿಸಿದ್ದರು.

2014: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ರಾತ್ರಿ ಚೀನೀ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ಅವರ ಜೊತೆಗಿನ ಮಾತುಕತೆ ಕಾಲದಲ್ಲಿ ಚೀನೀ ಅತಿಕ್ರಮಣದ ವಿಷಯವನ್ನು ಪ್ರಸ್ತಾಪಿಸಿದರು. ಉಭಯ ನಾಯಕರು ಈದಿನ ಶೃಂಗಸಭೆ ನಡೆಸುವ ವೇಳೆಯಲ್ಲಿ ಭಾರತದ ಕಡೆಯಿಂದ ಈ ವಿಚಾರವನ್ನು ಇನ್ನಷ್ಟು ವಿವರವಾಗಿ ಪ್ರಸ್ತಾಪಿಸಲಿದ್ದಾರೆ ಎಂದು ಎಂಇಎ ವಕ್ತಾರರು ತಿಳಿಸಿದರು. ಶೃಂಗಸಭೆಗಳು ನಾಯಕರಿಗೆ ದ್ವಿಪಕ್ಷೀಯ ಬಾಂಧವ್ಯಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ವಿಚಾರಗಳನ್ನೂ ಪ್ರಸ್ತಾಪಿಸಲು ಉತ್ತಮ ಸಂದರ್ಭಗಳು. ಪ್ರಧಾನಿಯವರು ಹಿಂದಿನ ರಾತ್ರಿಯ ಮಾತುಕತೆ ಸಂದರ್ಭವನ್ನು ಭಾರತ ಭೇಟಿಯಲ್ಲಿ ಇರುವ ಚೀನೀ ಅಧ್ಯಕ್ಷರ ಜೊತೆಗೆ ಪ್ರಸ್ತಾಪಿಸಲು ಬಳಸಿಕೊಂಡರು ಎಂದು ಎಂಇಎ ವಕ್ತಾರ ಸೈಯದ್ ಅಕ್ಬರುದ್ದೀನ್ ನುಡಿದರು. ನಿಯೋಗ ಮಟ್ಟದಲ್ಲಿ ನಡೆಯುವ ಮಾತುಕತೆಗಳಲ್ಲಿ ಈ ವಿಷಯವನ್ನು ಮತ್ತಷ್ಟು ವಿಷದವಾಗಿ ಚರ್ಚಿಸಲಾಗುವುದು. ಚೀನೀ ಅಧ್ಯಕ್ಷರು ಅಹಮದಾಬಾದಿಗೆ ಬಂದ ಬಳಿಕ ಅವರಿಗೆ ಖಾಸಗಿ ಭೋಜನಕೂಟ ಏರ್ಪಡಿಸಿದ್ದ ಪ್ರಧಾನಿ, ಈ ಸಂದರ್ಭವನ್ನು ಬಳಸಿಕೊಂಡು ಚೀನೀ ಅತಿಕ್ರಮಣಗಳ ಬಗೆಗಿನ ಭಾರತದ ಕಳವಳವನ್ನು ವ್ಯಕ್ತ ಪಡಿಸಿದರು. ಚೀನೀ ಪಡೆಗಳು ಚುಮರ್ ವಿಭಾಗದಲ್ಲಿ ಮತ್ತಷ್ಟು ಅತಿಕ್ರಮಣ ನಡೆಸಿರುವುದಾಗಿ ವರದಿಗಳು ತಿಳಿಸಿದವು.

2014: ನವದೆಹಲಿ: ಭಾರತದೊಂದಿಗೆ ಶಾಂತಿ ಮತ್ತು ಸಮೃದ್ಧಿಯನ್ನು ಇನ್ನೂ ಎತ್ತರಕ್ಕೆ ಒಯ್ಯುವ ಸಲುವಾಗಿ ಆಯಕಟ್ಟಿನ ಮತ್ತು ಸಹಕಾರಾತ್ಮಕ ಸಹಭಾಗಿತ್ವವನ್ನು ಮುಂದಕ್ಕೆ ಒಯ್ಯುವ ಆಶಯವನ್ನು ಚೀನೀ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ವ್ಯಕ್ತ ಪಡಿಸಿದರು. ಇದೇ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಡಾಖ್ ಪ್ರದೇಶದಲ್ಲಿ ನಡೆಯುತ್ತಿರುವ ಚೀನೀ ಅತಿಕ್ರಮಣದ ವಿಚಾರವನ್ನು ಪ್ರಸ್ತಾಪಿಸಿದರು. ಮೂರು ದಿನಗಳ ಭಾರತ ಭೇಟಿಗಾಗಿ ಆಗಮಿಸಿದ ಕ್ಷಿ ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಈದಿನ ಮುಂಜಾನೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಸಂಪ್ರದಾಯ ಮುರಿದು ಕ್ಷಿ ಅವರಿಗೆ ಹಿಂದಿನ ದಿನವೇ ತಮ್ಮ ತಾಯ್ನಾಡು ಗುಜರಾತಿನಲ್ಲಿ ಅದ್ಧೂರಿಯ ಸ್ವಾಗತ ನೀಡಿ, ಶೃಂಗಸಭೆ ಮಾತುಕತೆಗಳಿಗೆ ವೇದಿಕೆ ಸಜ್ಜುಗೊಳಿಸಿದ್ದರು. ಮೋದಿ ಮತ್ತು ಕ್ಷಿ ಅವರ ಎರಡನೇ ದಿನದ ಶೃಂಗಸಭೆ ಮಾತುಕತೆ ಹೈದರಾಬಾದ್ ಭವನದಲ್ಲಿ ಆರಂಭವಾಯಿತು. ಇದೇ ವೇಳೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದ ಗಡಿಯಲ್ಲಿ ಭಾರತ ಮತ್ತು ಚೀನೀ ಸೇನೆ ಪರಸ್ಪರ ಮುಖಾಮುಖಿಯಾಗಿ ನಿಂತಿದ್ದವು.

2014: ಶ್ರೀನಗರ: ಶತಮಾನದ ಭೀಕರ ಪ್ರವಾಹದ ಪರಿಣಾಮವಾಗಿ 11 ದಿನಗಳಿಂದ ಮುಚ್ಚಿದ್ದ ಜಮ್ಮು ಮತ್ತು ಕಾಶ್ಮೀರದ ನಾಗರಿಕ ಸಚಿವಾಲಯ ಈದಿನ ಮತ್ತೆ ತೆರೆಯಿತು. ಆದರೆ ನಿಗದಿತ ಕಚೇರಿ ವೇಳೆಯಾದ 9.30 ಗಂಟೆಗೆ ಶೇಕಡಾ 10ರಷ್ಟು ನೌಕರರು ಮಾತ್ರ ಕೆಲಸಕ್ಕೆ ಹಾಜರಾದರು ಎಂದು ಸಚಿವಾಲಯದ ಭದ್ರತಾ ಉಸ್ತುವಾರಿ ಅಧಿಕಾರಿ ತಿಳಿಸಿದರು. ಸಚಿವಾಲಯದ ಮುಖ್ಯದ್ವಾರವೂ ಸೇರಿದಂತೆ ಸುತ್ತುಮುತ್ತಣ ಪ್ರದೇಶ ಇನ್ನೂ ಸುಮಾರು ಒಂದು ಅಡಿಯಷ್ಟು ನೀರಿನಲ್ಲಿ ಮುಳುಗಿದೆ. ಜಲಾವೃತಗೊಂಡಿರುವ ಕಾರಣ ಸಚಿವಾಲಯದ ನೆಲಮಹಡಿಯಲ್ಲಿ ಕಾರ್ಯ ನಿರ್ವಹಣೆ ಇನ್ನೂ ದುಸ್ತರವಾಗಿಯೇ ಇದೆ. 7 ಮಹಡಿಗಳ ಕಟ್ಟಡದಲ್ಲಿ ಮೇಲಿನ ಮಹಡಿಗಳಲ್ಲಿನ ಉಳಿದ ಕಚೇರಿಗಳು ಈದಿನ ತೆರೆದಿವೆ ಎಂದು ಅಧಿಕಾರಿ ಹೇಳಿದರು. ಸೆಪ್ಟೆಂಬರ್ 18ರಂದು ಶ್ರೀನಗರದ ನಾಗರಿಕ ಸಚಿವಾಲಯದ ಕಾರ್ಯನಿರ್ವಹಣೆಯೊಂದಿಗೆ ಸರ್ಕಾರ ಕಾರ್ಯಾರಂಭಿಸಬೇಕು ಎಂದು ಕಳೆದ ವಾರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ರಾಜ್ಯ ಸಚಿವ ಸಂಪುಟವು ನಿರ್ಧರಿಸಿತ್ತು. ಭೀಕರ ಪ್ರವಾಹಕ್ಕೆ 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

2014: ನವದೆಹಲಿ: ಮುಖ್ಯ ಜಾಗೃತಾ ಆಯುಕ್ತ (ಚೀಫ್ ವಿಜಿಲೆನ್ಸ್ ಕಮೀಷನರ್ - ಸಿವಿಸಿ) ನೇಮಕಾತಿಗೆ ಪರಿಗಣನಾ ವಲಯವನ್ನು ವಿಸ್ತರಿಸಬೇಕು ಮತ್ತು ಇಡೀ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಬೇಕು ಎಂಬುದಾಗಿ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಅಕ್ಟೋಬರ್ 9ರ ಒಳಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿತು. ನ್ಯಾಯಾಲಯವು ಪ್ರಕರಣವನ್ನು ಆಲಿಸುವವರೆಗೆ ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸುವುದಿಲ್ಲ ಎಂಬುದಾಗಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ನ್ಯಾಯಾಲಯಕ್ಕೆ ಭರವಸೆ ನೀಡಿದ ಬಳಿಕ ಪೀಠವು ಈ ನಿರ್ದೇಶನ ನೀಡಿತು. ಪ್ರಕರಣದ ಅಂತಿಮ ವಿಚಾರಣೆಗೆ ಅಕ್ಟೋಬರ್ 14ರ ದಿನವನ್ನು ಪೀಠವು ನಿಗದಿ ಪಡಿಸಿತು.
2014: ಘಾಜಿಯಾಬಾದ್: ಮಾಜಿ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರ ಬಂಗ್ಲೆಯ ನೀರು ಮತ್ತು ವಿದ್ಯುತ್ ಪೂರೈಕೆ ಕಡಿತಗೊಳಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಲೋಕ ದಳ (ಆರ್​ಎಲ್​ಡಿ) ಮತ್ತು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)ನ 200ಕ್ಕೂ ಹೆಚ್ಚು ರೈತರು ಮತ್ತು ಪೋಲಿಸರು ತೀವ್ರ ಗಾಯಗೊಂಡ ಘಟನೆ ಇಲ್ಲಿನ ಮುರಾದ್ ನಗರದಲ್ಲಿ ಘಟಿಸಿತು. ಇತ್ತೀಚೆಗಷ್ಟೆ ತುಘಲಕ್ ಮಾರ್ಗದಲ್ಲಿರುವ ಅಜಿತ್ ಸಿಂಗ್ ಬಂಗ್ಲೆಯನ್ನು ತೆರವುಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರವೇ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿತ್ತು. ಇದನ್ನು ವಿರೋಧಿಸಿ ಈ ಎರಡೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 58ರಲ್ಲಿ ವಾಹನ ಸಾಗಟಕ್ಕೆ ಅಡ್ಡಿ ಪಡಿಸಿದರು. ಅಷ್ಟೇ ಅಲ್ಲ ಸೋನಿಯಾ ವಿಹಾರ ನೀರು ಸಂಸ್ಕರಣಾ ಘಟಕಕ್ಕೂ ದಾಳಿ ನಡೆಸಿದರು. ಈ ವೇಳೆ ಪೋಲಿಸರು ಮತ್ತು ಪ್ರತಿಭಟನಾಕಾರರ ನಡುವೆ ಚಕಮಕಿ ನಡೆದು ಬಳಿಕ ಹಿಂಸಾ ಸ್ವರೂಪ ಪಡೆದುಕೊಂಡಿತು. ಘಟನೆಯಲ್ಲಿ ವಿಜಯ ನಗರ ಪೋಲಿಸ್ ಠಾಣೆಯ ಅಧಿಕಾರಿ ಅರುಣ್ ಕುಮಾರ್ ಸಿಂಗ್ ಗಂಭಿರವಾಗಿ ಗಾಯಗೊಂಡರು. ಪ್ರತಿಭಟನಾಕಾರರನು ಚದುರಿಸಲು ನಡೆಸಿದ ಪೋಲಿಸರ ರಬ್ಬರ್ ಗುಂಡಿನ ದಾಳಿಯಲ್ಲಿ ಆರ್​ರಲ್​ಡಿ ಮುಖಂಡ ವೀರ್ ಪಾಲ್ ಸಿಂಗ್ ಕೂಡ ತೀವ್ರ ಗಾಯಗೊಂಡರು.

2008: ಹದಿನೆಂಟು ಭಾರತೀಯರು ಸೇರಿ ಒಟ್ಟು 22 ಸಿಬ್ಬಂದಿ ಇದ್ದ ಹಾಂಕಾಂಗ್ ನೋಂದಣಿಯ ಹಡಗಿನ ಅಪಹರಣದ ಬೆನ್ನ ಹಿಂದೆಯೇ,  25 ಸಿಬ್ಬಂದಿ ಇದ್ದ ಗ್ರೀಕಿನ ಸರಕು ಸಾಗಣೆ ನೌಕೆಯೊಂದನ್ನು ಸೋಮಾಲಿಯಾ ಕರಾವಳಿಯಲ್ಲಿ ಅಪಹರಿಸಲಾಯಿತು.. ಸೋಮಾಲಿಯಾ ರಾಜಧಾನಿ ಮೊಗದಿಶುವಿನಿಂದ 200 ನಾಟಿಕಲ್ ಮೈಲ್ ದೂರದಲ್ಲಿಶಸ್ತ್ರಸಜ್ಜಿತ ಸಮುದ್ರಗಳ್ಳರು ಕೀನ್ಯಾಗೆ ತೆರಳುತ್ತಿದ್ದ ಈ ಹಡಗನ್ನು ವಶಪಡಿಸಿಕೊಂಡರು.

2007: ರೈತರಿಗೆ ಈಗ ನೀಡಲಾಗುತ್ತಿರುವ ವಿದ್ಯುತ್ ಸಹಾಯಧನದ ಬದಲಾಗಿ, ನಗದು ಪರಿಹಾರ ನೀಡುವ ಮೂಲಕ ಅಂತರ್ಜಲ ಮಟ್ಟ ಕುಸಿತ ನಿಯಂತ್ರಿಸಲು ಯೋಜನಾ ಆಯೋಗ ಸಲಹೆ ಮಾಡಿತು. `ಅಂತರ್ಜಲ ನಿರ್ವಹಣೆ ಮತ್ತು ಮಾಲೀಕತ್ವ' ಕುರಿತು ತಜ್ಞರ ತಂಡ ತಯಾರಿಸಿದ ವರದಿಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದ ಆಯೋಗದ ಸದಸ್ಯ ಕಿರೀಟ್ ಪಾರಿಖ್, 2001-02ರಲ್ಲಿ ಸುಮಾರು ರೂ.30,000 ಕೋಟಿಯಷ್ಟಿದ್ದ ವಿದ್ಯುತ್ ಸಹಾಯಧನ ಪ್ರಮಾಣವನ್ನು ಹೆಚ್ಚಿಸದೇ ಇದನ್ನು ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು. ರೈತರಿಗೆ ವಿದ್ಯುತ್ ಸಹಾಯಧನ ನೀಡುವುದಕ್ಕಿಂತ ಯುನಿಟ್ಟಿಗೆ ಇಷ್ಟು ಎಂದು ನಿಶ್ಚಿತ ಮೊತ್ತವನ್ನು ಹಾಗೂ ಒಟ್ಟು ವಾರ್ಷಿಕ ಬಳಕೆ ಪ್ರಮಾಣವನ್ನು ನಿಗದಿಪಡಿಸಬೇಕು. ವರ್ಷಾಂತ್ಯದಲ್ಲಿ ಬಳಸಲಾದ ವಿದ್ಯುತ್ ಪ್ರಮಾಣವನ್ನು ಇದರಲ್ಲಿ ಕಡಿತಗೊಳಿಸಿ, ಬಾಕಿ ಹಣವನ್ನು ರೈತರಿಗೆ ನಗದಾಗಿ ನೀಡಬೇಕು. ಆಗ ಹೆಚ್ಚು ನಗದು ಪರಿಹಾರ ಪಡೆಯುವ ಉದ್ದೇಶದಿಂದ ರೈತರು ವಿದ್ಯುತ್ ಬಳಕೆ ಕಡಿಮೆ ಮಾಡುತ್ತಾರೆ ಎಂದು ಪಾರೀಖ್ ಹೇಳಿದರು. ಇದರಿಂದ ವಿದ್ಯುತ್ ಸಬ್ಸಿಡಿ ಮೇಲಿನ ಒತ್ತಡ ತಗ್ಗಿ ಅವು ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಇನ್ನೊಂದೆಡೆ ರೈತರಲ್ಲಿ ಜಲಪ್ರಜ್ಞೆ ಬೆಳೆದು ನೀರಿನ ಸದುಪಯೋಗವಾಗುತ್ತದೆ ಎಂದು ಅವರು ವಿವರಿಸಿದರು. ರಾಜ್ಯ ಹಾಗೂ ಕೇಂದ್ರ ವಿದ್ಯುತ್ ಮಂಡಳಿಗಳು ವಿದ್ಯುತ್ ಬಳಕೆ ನಿಯಂತ್ರಿಸುವುದಕ್ಕೆ ಒತ್ತು ನೀಡುವುದಕ್ಕಿಂತ ಅಂತರ್ಜಲ ನಿರ್ವಹಣೆ, ಮಳಕೊಯ್ಲು ವಿಷಯಗಳಿಗೆ ಆದ್ಯತೆ ನೀಡಬೇಕು ಎಂದು ಪಾರಿಖ್ ಸಲಹೆ ಮಾಡಿದರು.

2007: ಸರ್ಕಾರಿ ಬಂಗಲೆ, ಕಟ್ಟಡಗಳಲ್ಲಿ ಅನಧಿಕೃತವಾಗಿ ವಾಸಿಸುವ ರಾಜಕಾರಣಿಗಳು, ಅಧಿಕಾರಿಗಳ ಬೆನ್ನು ಹತ್ತುವ ಧೈರ್ಯ ಸರ್ಕಾರಕ್ಕೆ ಇಲ್ಲ ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿತು. ಅಧಿಕಾರ ಮುಗಿದ ಮೇಲೂ ಸರ್ಕಾರಿ ಬಂಗ್ಲೆಗಳಲ್ಲಿ ಗೂಟ ಹೊಡೆದುಕೊಂಡು ಇರುವ ರಾಜಕಾರಣಿಗಳು, ಹಿರಿಯ ಅಧಿಕಾರಿಗಳನ್ನು ಒಕ್ಕಲೆಬ್ಬಿಸಲು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅಥವಾ ಅವರಿಂದ ಭಾರಿ ಮೊತ್ತದ ಬಾಕಿ ಹಣ ವಸೂಲು ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲ ಎಂದು ನ್ಯಾಯಮೂರ್ತಿ ಬಿ. ಎನ್. ಅಗರವಾಲ್ ಹಾಗೂ ಬಿ.ಕೆ. ಜೈನ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.

2007: ರಾಮನ ಅಸ್ತಿತ್ವ ಹಾಗೂ ರಾಮಾಯಣದ ಕುರಿತು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ ವಿವಾದಾತ್ಮಕ ಪ್ರಮಾಣ ಪತ್ರವನ್ನು ಹಿಂದಕ್ಕೆ ಪಡೆದ ಬೆನ್ನಲ್ಲೇ ಕೇಂದ್ರ ಸರ್ಕಾರವು ಪುರಾತತ್ವ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿತು. ಈ ವಿವಾದದ ಹೊಣೆ ಹೊತ್ತು ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ರಾಜೀನಾಮೆ ನೀಡಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದ ವಾಣಿಜ್ಯ ಖಾತೆ ರಾಜ್ಯ ಸಚಿವ ಜೈರಾಮ್ ರಮೇಶ್ ತಮ್ಮ ಹೇಳಿಕೆಗಾಗಿ ಅಂಬಿಕಾ ಅವರ ಕ್ಷಮೆ ಯಾಚಿಸಿದರು. ಸೇತುಸಮುದ್ರಂ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಯೋಜನಾ ಪ್ರದೇಶದಲ್ಲಿ ಹೂಳೆತ್ತಲು ಹಾಗೂ ಕಾರ್ಮಿಕರನ್ನು ಸಾಗಿಸಲು ನಿಯೋಜಿಸಲಾಗಿದ್ದ ಮೂರು ಹಡಗುಗಳನ್ನು ನಾಗಪಟ್ಟಣಂಗೆ ಕಳುಹಿಸಲಾಯಿತು.

 2007: ಇನ್ನು ಮುಂದೆ ಕಡಿಮೆ ನೀರು ಬಳಸಿ ಭತ್ತ ಬೆಳೆಯುವುದು ಸಾಧ್ಯವಾಗಲಿದೆ. ಬೆಂಗಳೂರಿನ ವಿಜ್ಞಾನಿಯೂ ಸೇರಿದಂತೆ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ವಂಶವಾಹಿ ತಂತ್ರಜ್ಞಾನ ಬಳಸಿ ಭತ್ತದ ಹೊಸ ತಳಿ ಕಂಡು ಹಿಡಿದಿರುವುದನ್ನು ನವದೆಹಲಿಯಲ್ಲಿ ಬಹಿರಂಗ ಪಡಿಸಿತು. ಎಚ್. ಆರ್. ಡಿ.ವೈ. (ಹಾರ್ಡಿ) ಹೆಸರಿನ ವಂಶವಾಹಿಯನ್ನು `ಅರಬಿಡೋಪ್ಸಿಸ್' ಎಂಬ ಹೆಸರಿನ ಮಾದರಿ ತಳಿಯಿಂದ ಹೊರತೆಗೆಯಲಾಗಿದ್ದು, ಇದನ್ನು ಬಳಸಿ ರೂಪಿಸಲಾಗಿರುವ ಅಂತರ್ ವಂಶವಾಹಿ ಭತ್ತ ಕಡಿಮೆ ನೀರಿನಲ್ಲಿಯೂ ಚೆನ್ನಾಗಿ ಬೆಳೆಯುವುದು ಸಾಬೀತಾಗಿದೆ ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಆರತಿ ಕರಬ ತಿಳಿಸಿದರು. `ಭತ್ತದ ಇತರ ಪಾರಂಪರಿಕ ತಳಿಗಳಿಗೆ ಹೋಲಿಸಿದರೆ, ಈ ಹೊಸ ತಳಿ ಕಡಿಮೆ ನೀರಿನಲ್ಲಿಯೂ ಅತಿ ಹೆಚ್ಚು ಪ್ರಮಾಣ ಹಾಗೂ ತೂಕದ ಬೇರು ಹಾಗೂ ಕಾಂಡವನ್ನು ಹೊಂದಬಲ್ಲುದು. ಅಲ್ಲದೆ ಅದರ ದ್ಯುತಿಸಂಶ್ಲೇಷಣೆ ಸಾಮರ್ಥ್ಯವೂ ಹೆಚ್ಚು' ಎಂದು ಅವರು ಹೇಳಿದರು. `ಈಗ ಚಾಲ್ತಿಯಲ್ಲಿರುವ ಭತ್ತದ ಇತರ ತಳಿಗಳಿಂತ ಹಾರ್ಡಿ ಭತ್ತದ ತಳಿ ನೀರಿನ ಕೊರತೆ ಇರುವ ಪ್ರದೇಶದಲ್ಲಿಯೂ ಚೆನ್ನಾಗಿ ಬೆಳವಣಿಗೆ ಹೊಂದಬಲ್ಲುದು. ಇಂತಹ ಪ್ರದೇಶಗಳಲ್ಲಿ ಬೆಳೆಯಲಾದ ಭತ್ತದ ಇತರ ತಳಿಗಳಿಗಿಂತ ಹಾರ್ಡಿ ತಳಿ ಶೇ.50ರಷ್ಟು ಹೆಚ್ಚು ಜೈವಿಕ ತೂಕ ಹೊಂದಿತ್ತು. ಬರಪೀಡಿತ ಪ್ರದೇಶದ ರೈತರಿಗೆ ಈ ತಳಿ ಉಪಯುಕ್ತವಾಗಿದ್ದು, ನೀರಾವರಿ ಪ್ರದೇಶಕ್ಕೂ ಸೂಕ್ತವಾಗಿದೆ' ಎಂಬುದು ಸಂಶೋಧನಾ ತಂಡದ ಸದಸ್ಯರಲ್ಲಿ ಒಬ್ಬರಾದ ಶೀತಲ ದೀಕ್ಷಿತ ಅಭಿಪ್ರಾಯ. ಡಚ್ ಕೃಷಿ ಸಚಿವಾಲಯದ ಧನ ಸಹಾಯ ಪಡೆದಿರುವ ಸಂಶೋಧನಾ ತಂಡದಲ್ಲಿ ಭಾರತವಲ್ಲದೇ ಹಾಲೆಂಡ್, ಅಮೆರಿಕ, ಇಟಲಿ, ಇಂಡೋನೇಷ್ಯ, ಮೆಕ್ಸಿಕೋ ದೇಶದ ಪ್ರತಿನಿಧಿಗಳೂ ಇದ್ದರು. ಹೊಸ ತಳಿಯ ಇಳುವರಿ ಪ್ರಮಾಣದ ಅಧ್ಯಯನ ನಡೆದಿದ್ದು, ಅಲ್ಲಿ ಕೂಡ ಉತ್ತಮ ಇಳುವರಿ ಬಂದರೆ, ತಳಿಯನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲಾಗುವುದು. ಗೋಧಿ ಅಥವಾ ಮೆಕ್ಕೆಜೋಳಕ್ಕೆ ಹೋಲಿಸಿದರೆ ಭತ್ತ ಅತಿ ಹೆಚ್ಚು ನೀರು ಬೇಡುವ ಸಸ್ಯ. ಇತರ ಪಾರಂಪರಿಕ ಬೆಳೆಗಳಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ಇದು ಬಳಸುತ್ತದೆ. ಜಗತ್ತಿನೆಲ್ಲೆಡೆ ಕೃಷಿಯಲ್ಲಿ ಬಳಸಲಾಗುವ ಶೇ.30ರಷ್ಟು ನೀರನ್ನು ಭತ್ತದ ಬೆಳೆಯೊಂದೇ ಬಳಸುತ್ತಿರುವುದರಿಂದ  ಈ ಹೊಸ ತಳಿ ಭರವಸೆ ಮೂಡಿಸಿದೆ.

2007: ಕೆನಡಾದಲ್ಲಿ ಪತ್ತೆ ಮಾಡಲಾಗಿದ್ದ 5650 ಲಕ್ಷ ವರ್ಷ ಹಳೆಯ ಪಳೆಯುಳಿಕೆಗೆ ಭಾರತದ ನಿವೃತ್ತ ಭೂಗರ್ಭ ಶಾಸ್ತ್ರಜ್ಞರೊಬ್ಬರ ಹೆಸರು ಇಡಲಾಗಿದ್ದು, ಇದು ಭಾರತೀಯನೊಬ್ಬನಿಗೆ ದೊರೆತ ಅಪರೂಪದ ಗೌರವ. 60ರ ದಶಕದ ಕೊನೆಯಲ್ಲಿ ಭೂಗರ್ಭ ಶಾಸ್ತ್ರಜ್ಞ ಡಾ. ಎಸ್.ಬಿ.ಮಿಶ್ರ ಅವರು ಅನೇಕ ಪುರಾತನ ಪಳೆಯುಳಿಕೆಗಳನ್ನು ಶೋಧಿಸಿದ್ದರು. ಈ ಪೈಕಿ ಒಂದು ಪಳೆಯುಳಿಕೆಗೆ ಮಿಶ್ರ ಅವರ ಹೆಸರನ್ನು ಇಡಲು ಕೆನಡಾದ ಪೋರ್ಚುಗಲ್ ಕೊವ್ ಸೌತ್ ಸಿಟಿಯಲ್ಲಿ ನಡೆದ  ಸಭೆ ತೀರ್ಮಾನಿಸಿತು. ಇನ್ನುಮುಂದೆ  ಈ ಪಳೆಯುಳಿಕೆಯನ್ನು ` ಫ್ರಾಕ್ಟೊಫ್ಯುಸಸ್ ಮಿಸ್ರೈ' ಎಂದು ಕರೆಯಲಾಗುತ್ತದೆ. ಮಿಶ್ರ ಅವರು `ಮಿಸ್ಟೇಕನ್ ಪಾಯಿಂಟ್' ನಲ್ಲಿ ಈ ಪಳೆಯುಳಿಕೆಯನ್ನು ಪತ್ತೆ ಹಚ್ಚಿ ಅದರ ಕಾಲವನ್ನು ಅಂದಾಜು ಮಾಡಿದ್ದರು. ಹೀಗಾಗಿ ಈ ಸ್ಥಳವನ್ನು ಕೆನಡಾ ಸರ್ಕಾರ ಸಂರಕ್ಷಿತ ತಾಣವೆಂದು ಘೋಷಿಸಿದೆ.

2007: ರಷ್ಯದಲ್ಲೇ ಅತಿ ಎತ್ತರ ಎನ್ನಬಹುದಾದ ಗಗನ ಚುಂಬಿ ಕಟ್ಟಡಕ್ಕೆ ಮಾಸ್ಕೊದ (ಇತಾರ್ ತಾಸ್) ಮೇಯರ್ ಯುರಿ ಲುಝಕೊವ್ ಶಿಲಾನ್ಯಾಸ ನೆರವೇರಿಸಿದರು. `ರಷ್ಯಾದ ಗಗನಚುಂಬಿ ಕಟ್ಟಡ ಅಥವಾ `ದಿ ರಷ್ಯಾ ಟವರ್' ಎಂದು  ಕರೆಯಲ್ಪಡುವ ಈ ಕಟ್ಟಡದ ವಿನ್ಯಾಸಕಾರ ಬ್ರಿಟಿಷ್ ವಾಸ್ತುಶಿಲ್ಪಿಕಾರ ನಾರ್ಮನ್ ಫಾಸ್ಟೆರ್. ಪಿರಮಿಡ್ ಶೈಲಿಯಲ್ಲಿ ನಿರ್ಮಿಸಲಾಗುವ ಈ ಕಟ್ಟಡದ ಎತ್ತರ 612 ಮೀಟರುಗಳು.

2007: ವಿಶ್ವದ ಹಿರಿಯಜ್ಜ ಜಪಾನಿನ ಟೋಕಿಯೋದ ಟೊಮೊಜಿ ತನಾಬೆ ಅವರಿಗೆ ಈದಿನ 112 ನೇ ಜನ್ಮದಿನದ ಸಂಭ್ರಮ. ಜಪಾನಿನ ಸಾಂಪ್ರದಾಯಿಕ ಉಪಾಹಾರ ಸೇವನೆ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಕೊಂಡ ಅವರು, 'ನಾನು ಅಜರಾಮರನಾಗಲು ಬಯಸುವೆ' ಎಂದು ಹೇಳಿದರು. ಜಪಾನಿನ ಮಿಯಾಝಕಿಯಲ್ಲಿರುವ ತಮ್ಮ ಮಗನ ಜತೆ ವಾಸವಾಗಿರುವ ಈ  ಹಿರಿಯಜ್ಜ, ದಿನಚರಿ ಬರೆಯುತ್ತಾರೆ. ದಿನಪತ್ರಿಕೆ ಓದುವ ಹವ್ಯಾಸವಿದೆ. `ನನಗೆ ಸಾಯಲು ಇಷ್ಟವಿಲ್ಲ. ದೀರ್ಘಾಯುಷಿಯಾಗಲು ಬಯಸುತ್ತೇನೆ. ಮದ್ಯ ಸೇವನೆಯಿಂದ ದೂರ ಇರುವುದೇ ನನ್ನ ಸುದೀರ್ಘ ಬದುಕಿನ ಗುಟ್ಟು' ಎಂದು ತನಾಬೆ ನೀಡಿದ ಹೇಳಿಕೆಯನ್ನು ಕ್ಯುಡೋ ಸುದ್ದಿ ಸಂಸ್ಥೆ ವರದಿ ಮಾಡಿತು.

2007: 1994ಕ್ಕಿಂತ ಮೊದಲು ವಿವಾಹವಾದ ಮಹಿಳೆ ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಪುರುಷನಷ್ಟೇ ಸಮಪಾಲುದಾರಳು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಈ ಅವಧಿ ನಂತರ ವಿವಾಹವಾದ ಮಹಿಳೆ ಮಾತ್ರ ಪಿತ್ರಾರ್ಜಿತ ಆಸ್ತಿಯಲ್ಲಿ (ತಂದೆ ಅಥವಾ ತಾಯಿಗೆ ಅವರ ಪೂರ್ವೀಕರಿಂದ ಬಂದ ಪಾಲು) ಸಮಪಾಲು ಕೇಳಲು ಅರ್ಹ ಎಂಬ `ಹಿಂದು ಉತ್ತರಾಧಿಕಾರಿ ಕಾಯ್ದೆ-1956'ಕ್ಕೆ ರಾಜ್ಯ ಸರ್ಕಾರ ಮಾಡಿರುವ ತಿದ್ದುಪಡಿಯನ್ನು ಕೋರ್ಟ್ ಅನೂರ್ಜಿತಗೊಳಿಸಿತು. ಅಂತೆಯೇ, ಇಬ್ಬರೂ ಸಮಾನ ಹಕ್ಕುದಾರರು ಎಂದು ಕೇಂದ್ರ ಸರ್ಕಾರವು 2005 ರಲ್ಲಿ ಮಾಡಿದ ತಿದ್ದುಪಡಿಯನ್ನು ನ್ಯಾಯಮೂರ್ತಿ ವಿ.ಜಗನ್ನಾಥನ್ ಎತ್ತಿ ಹಿಡಿದರು. ಕಾಯ್ದೆಯ 6(ಎ)(ಬಿ) ಪ್ರಕಾರ ವಿವಾಹಿತ ಮಹಿಳೆ ಹಾಗೂ ಪುರುಷರು ಸಮಾನರು ಎಂದು ತಿಳಿಸಲಾಗಿದ್ದರೂ, 1990 ರಲ್ಲಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿತು. 1994ರ ಜುಲೈ 30ಕ್ಕೆ ಅನ್ವಯ ಆಗುವಂತೆ ಮಾಡಲಾದ ಈ ತಿದ್ದುಪಡಿಯಲ್ಲಿ 6(ಎ)(ಸಿ) ಕಲಮು ಸೇರ್ಪಡೆಯಾಯಿತು. ಈ ಕಲಮಿನ ಪ್ರಕಾರ ಮಹಿಳೆಯ ಆಸ್ತಿ ಹಕ್ಕಿಗೆ 1994ರ ಜುಲೈ 30ರ ದಿನಾಂಕವನ್ನು `ಕಟ್ ಆಫ್' ದಿನಾಂಕವನ್ನಾಗಿ ನಿಗದಿ ಮಾಡಲಾಯಿತು. ಈ ಅವಧಿಯ ನಂತರದಲ್ಲಿ ವಿವಾಹವಾದ ಮಹಿಳೆ ಮಾತ್ರ ಪಿತ್ರಾರ್ಜಿತ ಆಸ್ತಿಯಲ್ಲಿ ಭಾಗಿದಾರಳೇ ವಿನಾ, ಮೊದಲು ವಿವಾಹವಾದ ಮಹಿಳೆಗೆ ಅನರ್ಹಳು ಎಂದು ತಿಳಿಸಲಾಯಿತು. ಆದರೆ ಕೇಂದ್ರ ಸರ್ಕಾರ 2005 ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಿ, ಆಸ್ತಿಯಲ್ಲಿ ಇಬ್ಬರೂ ಸಮಾನರು ಎಂದು ಘೋಷಿಸಿತು. ಕೇಂದ್ರ ಸರ್ಕಾರದ ತಿದ್ದುಪಡಿ ರಾಜ್ಯ ಸರ್ಕಾರದ ತಿದ್ದುಪಡಿಗಿಂತ ನಂತರದ ಅವಧಿಯಲ್ಲಿ ಆಗಿರುವ ಕಾರಣ, ಅದೇ ಊರ್ಜಿತಗೊಳ್ಳುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು. ತಿದ್ದುಪಡಿಯನ್ನು ಪ್ರಶ್ನಿಸಿ ವಿಜಾಪುರ ಜಿಲ್ಲೆ ಸಿಂಧಗಿಯ ಸುಗಲಾಬಾಯಿ ಮಾಲಗಾರ ಹಾಗೂ ಕೋಲಾರ ಜಿಲ್ಲೆಯ ಶಿಡ್ಲಘಟ್ಟದ ವೆಂಕಟರಾಯಪ್ಪ ಅವರು ಸಲ್ಲಿಸಿದ ಅರ್ಜಿಯನ್ನು ಇತ್ಯರ್ಥ ಮಾಡಿದ ಕೋರ್ಟ್, ಕೇಂದ್ರ ಸರ್ಕಾರದ ತಿದ್ದುಪಡಿ ಪ್ರಕಾರ, ಇಬ್ಬರಿಗೂ ಸಮಾನ ಅವಕಾಶ ಇದೆ ಎಂದು  ಅವರು  ಆದೇಶಿಸಿದರು.

2007: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2007ರ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸರೂ, ಕನ್ನಡ ನಿಘಂಟು ತಜ್ಞರೂ ಆದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ವಹಿಸುವರು ಎಂದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಪ್ರಕಟಿಸಿದರು. ಸಮೇಳನವನ್ನು ಹಿರಿಯ ಸಾಹಿತಿ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ ಉದ್ಘಾಟಿಸುವರು.

2007: ಸಂವೇದಿ ಸೂಚ್ಯಂಕವು ಇದೇ ಮೊದಲ ಬಾರಿಗೆ 16 ಸಾವಿರ ಅಂಶ ದಾಟುವ ಮೂಲಕ ಮುಂಬೈ ಷೇರುಪೇಟೆಯಲ್ಲಿ ಹೊಸ ಮೈಲಿಗಲ್ಲೊಂದು ಸ್ಥಾಪನೆಗೊಂಡಿತು.

2007: ಯುವ ಹಾಗೂ ಬಿರುಸಿನ ಹೊಡೆತಗಳ ಆಟಗಾರ ಮಹೇಂದ್ರ ಸಿಂಗ್ ದೋನಿ ಅವರನ್ನು ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿ ಸಭೆಯು ಸ್ವದೇಶದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಪಾಕಿಸ್ಥಾನ ವಿರುದ್ಧದ ಏಕದಿನ ಸರಣಿಗೆ ಈ ಆಯ್ಕೆ ಮಾಡಿತು. ರಾಹುಲ್ ದ್ರಾವಿಡ್ ಅವರು ನಾಯಕತ್ವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದರಿಂದ ಈ ಹುದ್ದೆ ತೆರವಾಗಿತ್ತು.

2007: ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಣೆಯಿಂದ ತನಿಖೆ ಆರಂಭಿಸುವ ಅಧಿಕಾರವನ್ನು ಸುಗ್ರೀವಾಜ್ಞೆ ಮೂಲಕ ಲೋಕಾಯುಕ್ತರಿಗೆ ನೀಡಲು ಕರ್ನಾಟಕ ರಾಜ್ಯ ಸಚಿವ ಸಂಪುಟ ನಿರ್ಧರಿಸಿತು. ಆದರೆ ಸ್ವಯಂಪ್ರೇರಣೆಯಿಂದ ವಿಚಾರಣೆ ನಡೆಸುವ ಅಧಿಕಾರದಿಂದ ಶಾಸಕರು, ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಹೊರಗಿರಿಸಲಾಯಿತು. ಈ ವರ್ಗವನ್ನು ಸಹ ಸ್ವಯಂಪ್ರೇರಣೆಯಿಂದ ತನಿಖೆ ನಡೆಸುವ ವ್ಯಾಪ್ತಿಗೆ ತರಬೇಕು ಎನ್ನುವ ಆಗ್ರಹವನ್ನು ಲೋಕಾಯುಕ್ತರು ಮಾಡಿದ್ದರು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿಂತೆ ತಲೆ ತಪ್ಪಿಸಿಕೊಂಡಿರುವ ಮುಖ್ಯ ಆರೋಪಿ ಟೈಗರ್ ಮೆಮನ್ ನ ಮಾಜಿ ಅಕೌಂಟೆಂಟ್ ಅಸ್ಘರ್ ಯೂಸುಫ್ ಮುಕದಮ್ ಮತ್ತು ಆತನ ಸಹಚರ ಶಾನವಾಜ್ ಅಬ್ದುಲ್ ಖಾದರ್ ಖುರೇಷಿ ಅವರನ್ನು 1993ರಲ್ಲಿ ಪ್ಲಾಜಾ ಥಿಯೇಟರಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತಪ್ಪಿತಸ್ಥರು ಎಂದು ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ ಅವರು ತೀರ್ಪು ನೀಡಿದರು. ಮುಕದಮ್ ಸಹಚರ ಖುರೇಷಿ ಶಸ್ತ್ರಾಸ್ತ್ರ ತರಬೇತಿ ಪಡೆಯಲು ಪಾಕಿಸ್ತಾನಕ್ಕೆ ತೆರಳುವ ಅಪರಾಧವನ್ನೂ ಎಸಗಿದ್ದಾನೆ ಎಂದು ನ್ಯಾಯಾಲಯ ಹೇಳಿತು. ನ್ಯಾಯಾಂಗ ತೀರ್ಪಿನಲ್ಲಿ ನೆರೆ ರಾಷ್ಟ್ರವೊಂದರರಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದ ವಿಚಾರ ಪ್ರಸ್ತಾಪಗೊಂಡದ್ದೂ ಇದೇ ಮೊತ್ತ ಮೊದಲನೆಯ ಸಲ.

2006: ವಿಶ್ವದ ಮೊದಲ ಮಹಿಳಾ ಪ್ರವಾಸಿ ಹಾಗೂ ಪ್ರಥಮ ಇರಾನ್ ಸಂಜಾತೆ ಅಮೆರಿಕದ ಅನೌಷೇಹ ಅನ್ಸಾರಿ ಅವರನ್ನು ಹೊತ್ತ ರಷ್ಯದ ಸೋಯುಜ್ ಅಂತರಿಕ್ಷ ನೌಕೆಯು ಕಜಕಸ್ಥಾನದ ಬೈಕನೂರ್ ಉಡಾವಣಾ ಕೇಂದ್ರದಿಂದ ಬೆಳಕ್ಕೆ 9.39ಕ್ಕೆ ಬಾಹ್ಯಾಕಾಶದಲ್ಲಿನ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಡಾವಣೆಗೊಂಡಿತು. ರಷ್ಯದ ಮಿಖಾಯಿಲ್ ಟ್ಯುರಿನ್ ಮತ್ತು ಅಮೆರಿಕದ ಮೈಕೆಲ್ ಲೋಪೆಜ್ ಅವರು ಗಗನ ನೌಕೆಯೊಳಗಿರುವ ಇತರ ಇಬ್ಬರು ಗಗನಯಾತ್ರಿಗಳು. 10 ದಿನಗಳ ಬಳಿಕ ಅನ್ಸಾರಿ ಭೂಮಿಗೆ ವಾಪಸಾಗುವರು.

2006: ಜಾರ್ಖಂಡ್ ರಾಜ್ಯದ ನಾಲ್ಕನೇ ಮುಖ್ಯಮಂತ್ರಿಯಾಗಿ ಪಕ್ಷೇತರ ಶಾಸಕ ಮಧು ಕೋಡಾ ರಾಂಚಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

2001: ದಕ್ಷಿಣ ಆಫ್ರಿಕದ ಕ್ರಿಕೆಟಿಗ ಜಾಕಿಸ್ ಕಾಲ್ಲೀಸ್ ಅವರು ಬುಲಾವೆಯೋದ ಕ್ರಿಕೆಟ್ ಟೆಸ್ಟಿನಲ್ಲಿ ಔಟಾಗದೇ ದೀರ್ಘಕಾಲ ಬ್ಯಾಟಿಂಗ್ ಮಾಡುವ ಮೂಲಕ ಜಾಗತಿಕ ದಾಖಲೆ ನಿರ್ಮಿಸಿದರು. ಎರಡು ಟೆಸ್ಟ್ ಪಂದ್ಯ ಸರಣಿಯಲ್ಲಿ ಅವರು 388 ರನ್ನುಗಳನ್ನು ಗಳಿಸಿದರು. ಔಟಾಗದೇ 1028 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಅವರು ಇಂಗ್ಲೆಂಡಿನ ನಾಸ್ಸೇರ್ ಹುಸೇನ್ ಅವರು
1999-2000ದಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಮಾಡಿದ ದಾಖಲೆಯನ್ನು (1021 ನಿಮಿಷ) ಮುರಿದರು.

1990: ಭಾರತದ ಮಾಜಿ ಉಪ ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿ ಎಂ. ಹಿದಾಯತುಲ್ಲಾ (89) ನಿಧನರಾದರು.

1980: ಕ್ಯೂಬಾದ ಗಗನಯಾನಿ ಅರ್ನಾಲ್ಡ್ ಟಮಾಯೋ-ಮೆಂಡೆಝ್ ಅವರು ಬಾಹ್ಯಾಕಾಶಕ್ಕೆ ಹಾರಿದ ಪ್ರಥಮ ಲ್ಯಾಟಿನ್ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂಟರ್ ಕಾಸ್ಮೋಸ್ ಕಾರ್ಯಕ್ರಮದ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಹಾರಿಸಲಾದ `ಸೋಯುಜ್-38ರಲ್ಲಿ ಇದ್ದ ಇಬ್ಬರು ಗಗನ ಯಾನಿಗಳ ಪೈಕಿ ಅರ್ನಾಲ್ಡ್ ಒಬ್ಬರಾಗಿದ್ದರು.

1970: ರಾಕ್ ಸಂಗೀತಗಾರ ಜಿಮಿ ಹೆಂಡ್ರಿಕ್ಸ್ ಲಂಡನ್ನಿನಲ್ಲಿ ತಮ್ಮ 27ನೇ ವಯಸ್ಸಿನಲ್ಲಿಮೃತರಾದರು. ಮನಸ್ಸನ್ನು ಶಾಂತಗೊಳಿಸಿ ನಿದ್ದೆ ಬರುವಂತೆ ಮಾಡುವ ಮಾದಕ ದ್ರವ್ಯದ (ಬಾರ್ಬಿಟ್ಯುರೇಟ್ಸ್) ಅತಿ ಸೇವನೆ ಪರಿಣಾಮವಾಗಿ ಅವರು ಅಸುನೀಗಿದರು.

1961: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾಗ್ ಹ್ಯಾಮರ್ ಶೀಲ್ಡ್ ಅವರು ಲಿಯೋಪೋಲ್ಡ್ ವಿಲ್ಲೆಗೆ ಪ್ರಯಾಣ ಮಾಡುತ್ತಿದ್ದಾಗ ಉತ್ತರ ರೊಡೇಸಿಯಾದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿಮೃತರಾದರು. 1961ರಲ್ಲಿ ಅವರಿಗೆ ಮರಣೋತ್ತರ ನೊಬೆಲ್ ಶಾಂತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

1958: ಭಾರತೀಯ ತತ್ವಶಾಸ್ತ್ರಜ್ಞ ಹಾಗೂ ವಿದ್ವಾಂಸ ಡಾ. ಭಗವಾನ್ ದಾಸ್ ಅವರು ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು.

1958: ಸಾಹಿತಿ ಗಿರಿಜಾ ಶಾಸ್ತ್ರಿ ಜನನ.

1951: ಖ್ಯಾತ ಚಿತ್ರನಟಿ ಶಬಾನಾ ಆಜ್ಮಿ ಜನನ. ಖ್ಯಾತ ಸಾಹಿತಿ ಕೈಫಿ ಆಜ್ಮಿ- ರಂಗನಟಿ ಶೌಕತ್ ದಂಪತಿಯ ಪುತ್ರಿ ಶಬಾನಾ ಆಜ್ಮಿ ಅವರ ಪತಿ ಚಿತ್ರ ಸಾಹಿತಿ ಜಾವಿದ್ ಅಖ್ತರ್. ಮನೋವಿಜ್ಞಾನದಲ್ಲಿ ಪದವಿ, ಪುಣೆ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ಸಂಸ್ಥೆಯಲ್ಲಿ ಕಲಾ ತರಬೇತಿ ಪಡೆದ ಶಬಾನಾ ಅವರ ಮೊದಲ ಚಿತ್ರ- ಶ್ಯಾಮ್ ಬೆನಗಲ್ ನಿರ್ದೇಶನದ `ಅಂಕುರ್'. 1983, 1984, 1985ರಲ್ಲಿ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿದ ಶಬಾನಾಗೆ 1988ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತು.
1950: ಸಾಹಿತಿ ಭಾಗ್ಯಲಕ್ಷ್ಮಿ ಎನ್.ವಿ. ಜನನ.

1948: ಈದಿನ ಸಂಜೆ 4.30ರ ವೇಳೆಗೆ ಹೈದರಾಬಾದ್ ರಾಜ್ಯದ ಪಡೆಗಳ ಕಮಾಂಡರ್ ಮೇಜರ್ ಜನರಲ್ ಎಲ್ ಎಡ್ರೋಸ್ ಅವರು ಹೈದರಾಬಾದ್ ನಿಜಾಮನ ಪರವಾಗಿ ಭಾರತೀಯ ಸೇನೆಯ ಮೊದಲ ಸಶಸ್ತ್ರ ವಿಭಾಗದ ಕಮಾಂಡರ್ ಮೇಜರ್ ಜನರಲ್ ಜೆ.ಎನ್. ಚೌಧರಿ ಅವರಿಗೆ ಶರಣಾಗತರಾದರು. ರಜಕಾರರ ನಾಯಕ ಕಾಸಿಂ ರಿಜ್ವಿಯನ್ನು ಬಂಧಿಸಿ, ರಜಕಾರರ ಸಂಘಟನೆಯನ್ನು ನಿಷೇಧಿಸಲಾಯಿತು. ಮೇಜರ್ ಜನರಲ್ ಜೆ.ಎನ್. ಚೌಧರಿ ಅವರನ್ನು ಮಿಲಿಟರಿ ಗವರ್ನರ್ ಆಗಿ ನೇಮಿಸಲಾಯಿತು. 1950ರ ಜನವರಿ 26ರಂದು ಹೈದರಾಬಾದನ್ನು ಭಾರತಕ್ಕೆ ಸೇರ್ಪಡೆ ಮಾಡಲಾಯಿತು.

1938: ಸಾಹಿತಿ ಶಾರದಾ ತಿರುಮಲೈ ಜನನ.

1935: ಸಾಹಿತ್ಯ, ಸಂಗೀತ, ಕ್ರೀಡಾಪ್ರೇಮಿ ಸದಾನಂದ ಕನವಳ್ಳಿ ಅವರು ವೀರಪ್ಪ- ವೀರಮ್ಮ ದಂಪತಿಯ ಮಗನಾಗಿ ಸವಣೂರು ತಾಲ್ಲೂಕಿನ ಹಿರೇಮುಗದೂರ ಗ್ರಾಮದಲ್ಲಿ ಜನಿಸಿದರು.

1935: ಸಾಹಿತಿ ಜಿ.ಎಚ್. ನಾಯಕ ಜನನ.

1917: ಸಾಹಿತಿ ವಸಂತಾದೇವಿ ಅನಕೃ ಜನನ.

1851: ಹೆನ್ರಿ ಜಾರ್ವಿಸ್ ರೇಮಂಡ್ ಅವರಿಂದ ಸ್ಥಾಪನೆಯಾದ `ದಿ ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಯ ಮೊದಲ ಸಂಚಿಕೆ ಪ್ರಕಟವಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಸೆಪ್ಟೆಂಬರ್ 17

ಇಂದಿನ ಇತಿಹಾಸ

ಸೆಪ್ಟೆಂಬರ್ 17

 ಸಿ.ಎನ್. ಅಣ್ಣಾದುರೈ ಅವರು `ಪೆರಿಯಾರ್' ಸಂಬಂಧ ಕಡಿದುಕೊಂಡು `ದ್ರಾವಿಡ ಮುನ್ನೇತ್ರ ಕಳಗಂ' (ಡಿಎಂಕೆ) ಪಕ್ಷವನ್ನು ಸ್ಥಾಪಿಸಿದರು.

2014: ಢಾಕಾ: ಜಮಾತ್-ಇ-ಇಸ್ಲಾಮಿ ನಾಯಕ ಹಾಗೂ 1971ರ ಯುದ್ಧಾಪರಾಧಿ ದೆಲ್ವಾರ್ ಹೊಸೈನ್ ಸಯೀದೀಗೆ ಬಾಂಗ್ಲಾದೇಶ ಸುಪ್ರಿಂಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ಸಯೀದೀ ಸಾಯುವವರೆಗೂ ಸೆರೆಮನೆವಾಸ ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿತು. 'ತನ್ನ ಜೀವನದ ಉಳಿದ ಆಯುಸ್ಸನ್ನು ಆತ ಸೆರೆಮನೆಯಲ್ಲೇ ಕಳೆಯಬೇಕು' ಎಂದು ಮುಖ್ಯ ನ್ಯಾಯಮೂರ್ತಿ ಎಂ. ಮುಝಾಮ್ಮೆಲ್ ಹೊಸೈನ್ ಅವರು ನ್ಯಾಯಾಲಯದ ಕಿಕ್ಕಿರಿದ ಕೊಠಡಿಯಲ್ಲಿ ಅಚ್ಚರಿದಾಯಕ ತೀರ್ಪು ಪ್ರಕಟಿಸುತ್ತಾ ಹೇಳಿದರು. ಹೊಸೈನ್ ನೇತೃತ್ವದ ಪಂಚ ಸದಸ್ಯ ಪೀಠವು ಬಹುಮತದ ಅಭಿಪ್ರಾಯವನ್ನು ಆಧರಿಸಿ ಈ ತೀರ್ಪು ನೀಡಿತು. ಆದರೆ ಸಯೀದೀಗೆ ಕೊಡುವ ಶಿಕ್ಷೆ ಬಗ್ಗೆ ಎಷ್ಟು ನ್ಯಾಯಮೂರ್ತಿಗಳು ಭಿನ್ನ ಅಭಿಪ್ರಾಯ ಹೊಂದಿದ್ದರು ಎಂದು ಎಂದು ಸ್ಪಷ್ಟ ಪಡಿಸಲಿಲ್ಲ. ಕಳೆದ ಫೆಬ್ರುವರಿ ತಿಂಗಳಲ್ಲಿ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಸಯೀದೀಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ರಾಷ್ಟ್ರದ ಇತಿಹಾಸದಲ್ಲೇ ಭೀಕರ ರಾಜಕೀಯ ಹಿಂಸಾಚಾರ ಭುಗಿಲೆದ್ದಿತ್ತು. ಸಯೀದೀ ಜಮಾತ್​ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದು 1971ರ ಸಮರ ಕಾಲದಲ್ಲಿ ಪಾಕ್ ಕಡೆಗೆ ವಾಲಿ, ಬಾಂಗ್ಲಾ ಸಮರವನ್ನು ವಿರೋಧಿಸಿದ್ದರು. ಅಷ್ಟೇ ಅಲ್ಲದೆ ಆಗಿನ ಪಾಕಿಸ್ತಾನಿ ಆಡಳಿತದ ಜೊತೆ ಕೈಮಿಲಾಯಿಸಿ ಆಲ್ ಬದರ್, ಅಲ್ ಶಾಮ್ಂತಹ ಕುಖ್ಯಾತ ಗುಂಪುಗಳನ್ನು ಪಾಕ್ ಸೇನೆಗೆ ನೆರವಾಗುವ ಸಲುವಾಗಿ ಸ್ಥಾಪಿಸಿದ್ದರು. ಸಯೀದೀ ಕಾರ್ಯಾಚರಣೆಗಳಿಂದಾಗಿ 100 ಹೆಚ್ಚು ಮಂದಿ ಹತರಾಗಿದ್ದರು.
2014: ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯೆ ಲಲಿತಾ ಕುಮಾರಮಂಗಲಂ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ನೂನತ ಅಧ್ಯಕ್ಷೆಯಾಗಿ ನೇಮಕ ಮಾಡಲಾಯಿತು. ಕೇಂದ್ರ ಸರ್ಕಾರ ಈದಿನ ಲಲಿತಾ ಅವರ ನೇಮಕಾತಿಯನ್ನು ಅಧಿಕೃತಗೊಳಿಸಿತು. ಈ ಕುರಿತು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಮಾಹಿತಿ ನೀಡಿದರು. ಲಲಿತಾ ತಮಿಳುನಾಡಿನಲ್ಲಿ ಪ್ರಕೃತಿ ಎನ್ನುವ ಖಾಸಗಿ ಸಂಸ್ಥೆಯೊಂದನ್ನು(ಎನ್​ಜಿಒ) ನಡೆಸಿದ ಅನುಭವ ಹೊಂದಿದ್ದು, ಖುದ್ದು ಪ್ರಧಾನಿಯೇ ಇವರ ನೇಮಕಾತಿ ಮಾಡಿದ್ದಾರೆ. ಆಕೆ ಸಾಮರ್ಥ್ಯವಂತೆಯಾಗಿದ್ದು ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲರು ಎಂದು ಮೇನಕಾ ಹೇಳಿದರು.

2014: ನವದೆಹಲಿ: ಅರ್ಜುನ ಪ್ರಶಸ್ತಿಗಾಗಿ ಕ್ರೀಡಾ ಸಚಿವಾಲಯದ ಜತೆ ಹೋರಾಡುತ್ತಿದ್ದ ಬಾಕ್ಸರ್ ಮನೋಜ್ ಕುಮಾರ್ ಕೊನೆಗೂ ಗೆಲುವು ಸಾಧಿಸಿದರು. ನ್ಯಾಯಾಲಯದ ಮೆಟ್ಟಿಲೇರಿದ್ದ ಮನೋಜ್​ಗೆ ತಲೆಬಾಗಿದ ಕ್ರೀಡಾ ಸಚಿವಾಲಯ, ಅವರಿಗೆ ಅರ್ಜುನ ಪ್ರಶಸ್ತಿ ನೀಡಲು ಒಪ್ಪಿಕೊಂಡಿತು. 2010ರ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ಸಾಧಕ ಮನೋಜ್​ಗೆ ಈದಿನ ಬೆಳಗ್ಗೆ ಕ್ರೀಡಾ ಸಚಿವಾಲಯ, ಅರ್ಜುನ ಪ್ರಶಸ್ತಿ ನೀಡುವ ಬಗ್ಗೆ ಪತ್ರದ ಮೂಲಕ ಮಾಹಿತಿ ನೀಡಿತು.

2014: ಚೆನ್ನೈ: 'ಮೈ ಹೂಂ ರಜನೀಕಾಂತ್' ಚಿತ್ರದ ವಿರುದ್ಧ ನ್ಯಾಯಾಲಯದ ಕಟ್ಟೆ ಏರಿದ ತಮಿಳು ‘ಸೂಪರ್ ಸ್ಟಾರ್ ರಜನೀಕಾಂತ್’ ಚಿತ್ರದ ಬಿಡುಗಡೆ ವಿರುದ್ಧ ಮಧ್ಯಂತರ ತಡೆಯಾಜ್ಞೆ ಪಡೆದುಕೊಂಡರು. 'ಮೈ ಹೂಂ ರಜನೀಕಾಂತ್' ಚಿತ್ರ ನಿರ್ಮಾಪಕರ ವಿರುದ್ಧ ಮದ್ರಾಸ್ ಹೈಕೋರ್ಟ್​ನಲ್ಲಿ ರಜನೀಕಾಂತ್ ದಾವೆ ಹೂಡಿದರು. 'ನನ್ನ ಹೆಸರನ್ನು ದುರುಪಯೋಗಿಸಲಾಗಿದೆ. ಮತ್ತು ಚಿತ್ರ ನಿರ್ಮಾಪಕರು ನನ್ನ ಹೆಸರು ಬಳಸುವ ಮುನ್ನ ನನ್ನ ಅನುಮತಿ ಪಡೆದುಕೊಂಡಿಲ್ಲ' ಎಂದು ರಜನೀಕಾಂತ್ ದೂರಿದರು. ಅಹವಾಲು ಆಲಿಸಿದ ಮದ್ರಾಸ್ ಹೈಕೋರ್ಟ್ ಚಿತ್ರ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ಪ್ರಕರಣವನ್ನು ವಿಚಾರಣೆಗಾಗಿ ಸೆಪ್ಟೆಂಬರ್ 22ಕ್ಕೆ ಮುಂದೂಡಲಾಯಿತು.

2014: ಅಹಮದಾಬಾದ್: ಭಾರತಕ್ಕೆ ಆಗಮಿಸಿದ ಒಂದು ಗಂಟೆ ಅವಧಿಯಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಪ್ರಮುಖ ಮೂರು ಅಂಶಗಳ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಮಾಡಿದರು. ನೆರೆಯ ರಾಷ್ಟ್ರ ಚೀನಾ ಜತೆಗಿನ ಬಾಂಧವ್ಯ ವೃದ್ಧಿಸಿಕೊಳ್ಳುವ ವಿಚಾರ ಸೇರಿದಂತೆ ವ್ಯಾಪಾರ ವಿನಿಮಯ, ಬಂಡವಾಳ ಹೂಡಿಕೆ ಮತ್ತು ಗಡಿ ವಿಚಾರವಾಗಿ ಆಗಾಗ ತಲೆದೋರುವ ಸಮಸ್ಯೆಗಳ ಕುರಿತು ಒಪ್ಪಂದ ಪ್ರಕ್ರಿಯೆ ನಡೆಯಿತು. ಗುಜರಾತ್ ಸರ್ಕಾರದ ಸಹಭಾಗಿತ್ವದಲ್ಲಿ ಕೆಲ ಯೋಜನೆಗಳಿಗೆ ನೇರ ಬಂಡವಾಳ ಹೂಡಿಕೆಯ ಒಪ್ಪಂದವೂ ನಡೆದಿದೆ ಎನ್ನಲಾಯಿತು. ಮೂರು ದಿನಗಳ ಪ್ರವಾಸಕ್ಕಾಗಿ ಈದಿನ ಭಾರತಕ್ಕೆ ಆಗಮಿಸಿದ ಕ್ಸಿ ಜಿನ್​ಪಿಂಗ್ ಅವರಿಗೆ ಅಹಮದಾಬಾದ್​ನಲ್ಲಿ ಅದ್ದೂರಿ ಸ್ವಾಗತವನ್ನೇ ನೀಡಲಾಯಿತು. ವಿಮಾನ ನಿಲ್ದಾಣಕ್ಕೆ ಬಂದಿಳಿದ ನರೇಂದ್ರ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್, ರಾಜ್ಯಪಾಲ ಒ.ಪಿ. ಕೊಹ್ಲಿ ಮತ್ತು ರಾಜ್ಯ ಸಂಪುಟ ಸಚಿವರು ಬರಮಾಡಿಕೊಂಡರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಹಿಯಾತ್ ಹೋಟೆಲ್​ನಲ್ಲಿ ಜಿನ್​ಪಿಂಗ್ ಅವರನ್ನು ಭೇಟಿ ಮಾಡಿದರು. ಬೌದ್ಧ ಸಂಸ್ಕೃತಿ ಪ್ರತಿಬಿಂಬಿಸುವ ನಾನಾ ಕಲಾಕೃತಿಗಳ ಪ್ರದರ್ಶನ ಮತ್ತು ಸ್ಲೈಡ್ ಶೋ ನಡೆಯಿತು. ನಂತರ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಸಹಿ ಮಾಡಿಸಿಕೊಳ್ಳಲಾಯಿತು. ಭಾರತದಲ್ಲಿ ಚೀನಾದ ಹೂಡಿಕೆ ಮತ್ತು ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ಕೆಲ ಅಂಶಗಳು ಜಿನ್​ಪಿಂಗ್ ಮತ್ತು ಪ್ರಧಾನಿ ಮೋದಿ ಅವರ ಮಾತುಕತೆಯ ಮಹತ್ವದ ಅಂಶಗಳಾಗಿದ್ದವು. ಅಹಮದಾಬಾದ್​ನಲ್ಲಿ ಇಂಡಿಸ್ಟ್ರಿಯಲ್ ಪಾರ್ಕ್ ನಿರ್ವಿುಸಿ ಚೀನಾದ ಗುವಾಂಗ್ಜೋ ಮಾದರಿಯಲ್ಲೇ ಅಭಿವೃದ್ಧಿ ಪಡಿಸುವುದೂ ಒಪ್ಪಂದದೊಳಗಿನ ಒಂದು ಅಂಶವಾದರೆ, ಉಳಿದಂತೆ ಭಾರತೀಯ ರೈಲ್ವೆ ಯೋಜನೆಗಳಲ್ಲಿ ಚೀನಾ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದ್ದು, ತಯಾರಿಕೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಗಳಲ್ಲೂ ಹೂಡಿಕೆ ಮಾಡುವ ವಿಚಾರವೂ ಒಪ್ಪಂದದ ಪ್ರಮುಖ ಅಂಶಗಳಾಗಿದ್ದವು ಎಂದು ಹೇಳಲಾಯಿತು. ಇವೆಲ್ಲದರ ಜೊತೆಗೆ ಗುಜರಾತ್​ನ ಶಿಕ್ಷಣ ಕ್ಷೇತ್ರದಲ್ಲೂ ಚೀನಾ ಸರ್ಕಾರದ ಹೂಡಿಕೆ ಮಾಡಲಿದೆ ಎನ್ನಲಾಯಿತು.

2014: ನವದೆಹಲಿ: ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರನ್ನು ಭಾರತದ ಮುಂದಿನ ಮುಖ್ಯನ್ಯಾಯಮೂರ್ತಿಯಾಗಿ (ಸಿಜೆಐ) ನೇಮಕ ಮಾಡಿರುವುದರ ವಿರುದ್ಧ ವಕೀಲೆ ಹಾಗೂ ಮಾಜಿ ರಾ ಮಹಿಳಾ ಅಧಿಕಾರಿ ಸಲ್ಲಿಸಿದ ಅರ್ಜಿಯನ್ನು ಆಲಿಸಲು ದೆಹಲಿ ಹೈಕೋರ್ಟ್ ಒಪ್ಪಿತು. ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಿಶಾ ಪ್ರಿಯಾ ಭಾಟಿಯಾ (51) ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ದತ್ತು ಅವರ ಹೆಸರನ್ನು ಸರ್ಕಾರವು ರಾಷ್ಟ್ರಪತಿಗಳಿಗೆ ಮಾಡಿರುವ ಶಿಫಾರಸನ್ನು ರದ್ದು ಪಡಿಸಬೇಕು ಎಂದು ಕೋರಿದರು. ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಆರ್.ಎಸ್. ಎಂಡ್ಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು ವಿಷಯವನ್ನು ಆಲಿಸುವುದಾಗಿ ಹೇಳಿತು. ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ಸಂಜಯ ಜೈನ್ ಅವರು ಮನವಿಯನ್ನು ವಿರೋಧಿಸಿದರು. ಅರ್ಜಿಯು ಕ್ಷುಲ್ಲಕವಾದುದಾಗಿದ್ದು ಅದನ್ನು ಪುರಸ್ಕರಿಸಬಾರದು ಎಂದು ಜೈನ್ ವಾದಿಸಿದರು. ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಕೈಗೊಂಡಿದೆ ಎನ್ನಲಾಗಿದ್ದು ಈ ಶಿಫಾರಸನ್ನು ರದ್ದು ಪಡಿಸಬೇಕು ಎಂದು ಭಾಟಿಯಾ ತಮ್ಮ ಮನವಿಯಲ್ಲಿ ಕೋರಿದರು. '2011ರಲ್ಲಿ ನ್ಯಾಯಮೂರ್ತಿ ದತ್ತು ಅವರು ಸುಪ್ರೀಂಕೋರ್ಟಿನಲ್ಲಿ ನನ್ನ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದಾಗ ನಾನು ಕಾನೂನು ವಿದ್ಯಾರ್ಥಿನಿಯಾಗಿದ್ದೆ. ಆವಾಗಿನಿಂದ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ' ಎಂದು ಭಾಟಿಯಾ ದೂರಿದರು. 'ದತ್ತು ಅವರು ನನ್ನ ಎಲ್ಲಾ ಪ್ರಕರಣಗಳನ್ನೂ ವಜಾ ಮಾಡಿದ್ದರು. ಅವರ ವಿರುದ್ಧ ನಾನು ಪೊಲೀಸರು, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ದೆಹಲಿ ಮಹಿಳಾ ಆಯೋಗಕ್ಕೂ ದೂರು ನೀಡಿದ್ದೆ' ಎಂದು ಭಾಟಿಯಾ ವಿವರಿಸಿದರು. 1987ರಲ್ಲಿ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್​ನಲ್ಲಿ (ರಾ) ಪ್ರಥಮ ದರ್ಜೆ ಎಕ್ಸಿಕ್ಯೂಟಿವ್ ಅಧಿಕಾರಿಯಾಗಿದ್ದ ಭಾಟಿಯಾ ಅವರನ್ನು 2009ರಲ್ಲಿ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿ ಮಾಡಲಾಗಿತ್ತು.

2014: ಅಹಮದಾಬಾದ್: ತಮ್ಮ ಜನ್ಮದಿನವಾದ ಈದಿನ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರದಲ್ಲಿ ತಮ್ಮ ಮಾತೆಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಜಪಾನ್ ಪ್ರಧಾನಿ ಶಿಂಝೊ ಅಬೆ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಜನ್ಮದಿನದ ಶುಭಾಶಯ ಕೋರಿದರು. 64ಕ್ಕೆ ಕಾಲಿರಿಸಿದ ಮೋದಿ ಅವರು ಅಹಮದಾಬಾದಿನಿಂದ 23 ಕಿ.ಮೀ. ದೂರದ ಗಾಂಧಿ ನಗರಕ್ಕೆ ತಮ್ಮ ಸಾಮಾನ್ಯ ವಾಹನದಲ್ಲಿ ಯಾವ ಭದ್ರತೆಯೂ ಇಲ್ಲದೆ ಏಕಾಂಗಿಯಾಗಿ ತೆರಳಿ ತಮ್ಮ ಮಾತೆ ಹೀರಾಬೆನ್ ಅವರ ಆಶೀರ್ವಾದ ಪಡೆದರು. ಪ್ರಧಾನಿಯಾಗಿ ತಮ್ಮ ಜನ್ಮದಿನವನ್ನು ಆಚರಿಸದೇ ಇರಲು ಮೋದಿ ಜನತೆಗೆ ಮನವಿ ಮಾಡಿದ್ದರು. ಬದಲಾಗಿ ಪ್ರವಾಹ ಸಂತ್ರಸ್ಥರಿಗೆ ನೆರವಾಗುವ ನಿಟ್ಟಿನಲ್ಲಿ ಶ್ರಮಿಸುವಂತೆ ಕೋರಿದ್ದರು. ಹೀರಾಬೆನ್ ಅವರು ಪುತ್ರನಿಗೆ 50,000ರೂಪಾಯಿಗಳ ಗಿಫ್ಟ್ ಚೆಕ್ ನೀಡಿ ಜಮ್ಮು  - ಕಾಶ್ಮೀರ ನೆರೆಸಂತ್ರಸ್ಥರ ಪರಿಹಾರಕ್ಕೆ ಬಳಸುವಂತೆ ಸೂಚಿಸಿದರು.

2014: ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಲೋಕಸಭೆಯ ಪ್ರತಿಷ್ಠಿತ ನೈತಿಕತೆ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡರು. 75 ವಯಸ್ಸು ಮೀರಿದವರನ್ನು ಸಂಪುಟದಿಂದ ಹೊರಗಿಡಬೇಕು ಎಂಬ ನಿರ್ಧಾರದ ಪರಿಣಾಮವಾಗಿ ನರೇಂದ್ರ ಮೋದಿ ಸರ್ಕಾರದಲ್ಲಿ ಹಿರಿಯ ಸಚಿವರಾಗುವ ಅವಕಾಶ ವಂಚಿತರಾಗಿದ್ದ 86ರ ಹರೆಯದ ಹಿರಿಯ ನಾಯಕ ಅಡ್ವಾಣಿ ಅವರನ್ನು ನೈತಿಕತೆ ಸಮಿತಿಯ ಅಧ್ಯಕ್ಷರನ್ನಾಗಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ನೇಮಕ ಮಾಡಿದರು. ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್ಸಿನ ಮಾಣಿಕ್​ರಾವ್ ಗವಿಟ್ ಅವರು ನೈತಿಕತೆ ಸಮಿತಿಯ ಅಧ್ಯಕ್ಷರಾಗಿದ್ದರು.

2014: ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್, ಅವರ ಸಂಪುಟ ಸಚಿವರು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಇಸ್ಲಾಮಾಬಾದಿನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನಕಾರರ ಹತ್ಯೆಯಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿ ಕೊಲೆ ಪ್ರಕರಣ ದಾಖಲಿಸಲಾಯಿತು. ಪಾಕಿಸ್ತಾನಿ ಪ್ರಧಾನಿ ನವಾಜ್ ಶರೀಫ್ ವಿರುದ್ಧ ಹಿಂದಿನ ರಾತ್ರಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನಕಾರರನ್ನು ಕೊಂದುದಕ್ಕಾಗಿ ಶರೀಫ್ ಮತ್ತು ಇತರರ ವಿರುದ್ಧ ಕೊಲೆ ಆಪಾದನೆ ಹೊರಿಸುವಂತೆ ಜಿಲ್ಲಾ ನ್ಯಾಯಾಧೀಶರು ಆಜ್ಞಾಪಿಸಿದ ಬಳಿಕ ಕಳೆದ ರಾತ್ರಿ ಪ್ರಕರಣ ದಾಖಲಿಸಲಾಯಿತು ಎಂದು ವರದಿ ತಿಳಿಸಿತು. ಪ್ರಧಾನಿ ವಿರುದ್ಧ ದಾಖಲಾದ ಎರಡನೇ ಕ್ರಿಮಿನಲ್ ಪ್ರಕರಣ ಇದು. ಮುಸ್ಲಿಂ ಧಾರ್ವಿುಕ ನಾಯಕ ತಾಹೀರುಲ್ ಖಾದ್ರಿ ನೇತೃತ್ವದ ಪಾಕಿಸ್ತಾನ ಅವಾಮಿ ತೆಹರಿಕ್ (ಪಿಎಟಿ) ಸಂಘಟನೆಯು ಪ್ರಕರಣ ದಾಖಲಿಸುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಆಗಸ್ಟ್ 30ರಂದು ಪೊಲೀಸರೊಂದಿಗೆ ಸಂಭವಿಸಿದ ಘರ್ಷಣೆಗಳಲ್ಲಿ ಕನಿಷ್ಠ ಮೂವರು ಮೃತರಾಗಿ 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಲಾಹೋರಿನಲ್ಲಿ ಖಾದ್ರಿ ಬೆಂಬಲಿಗರು ಮತ್ತು ಪೊಲೀಸರ ಮಧ್ಯೆ ಕಳೆದ ಜೂನ್​ನಲ್ಲಿ ಸಂಭವಿಸಿದ್ದ ಘರ್ಷಣೆಗಾಗಿ ಪ್ರಧಾನಿ ವಿರುದ್ಧ ಕಳೆದ ತಿಂಗಳು ಪ್ರಕರಣ ದಾಖಲಾದ ಬಳಿಕ ದಾಖಲಾದ ಎರಡನೇ ಕ್ರಿಮಿನಲ್ ಪ್ರಕರಣ ಇದು.

2014: ನವದೆಹಲಿ: ಶಾರದಾ ಹಗರಣದಲ್ಲಿ ಸಿಬಿಐ ಪರಿಶೀಲನೆಗೆ ಒಳಗಾಗಿದ್ದ ಅಸ್ಸಾಮಿನ ಮಾಜಿ ಡಿಜಿಪಿ ಶಂಕರ ಬರೂವ ಅವರು ಗುವಾಹಟಿಯ ತಮ್ಮ ನಿವಾಸದಲ್ಲಿ ಮೃತರಾಗಿರುವುದು ಪತ್ತೆಯಾಯಿತು. ಶಂಕರ ಬರೂವ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದರು. ಮಾಜಿ ಡಿಜಿಪಿ ರಿವಾಲ್ವರಿನಿಂದ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಯಿತು. ಶಂಕರ ಬರೂವ ಅವರ ಮನೆ ಮೇಲೆ ಶಾರದಾ ಹಗರಣದ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ಸಿಬಿಐ ದಾಳಿ ನಡೆಸಿತ್ತು. ಬರೂವ ಮನೆ ಸೇರಿದಂತೆ ಗುವಾಹಟಿಯಲ್ಲಿ 12 ಕಡೆ ಸಿಬಿಐ ಸಿಬ್ಬಂದಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.

2014: ಸುವಾ (ಫಿಜಿ): ಫಿಜಿಯಲ್ಲಿ 2006ರಲ್ಲಿ ಸಂಭವಿಸಿದ ಸೇನಾ ದಂಗೆಯ ಬಳಿಕ ಫಿಜಿ ಸಂಸತ್ತಿಗಾಗಿ ಇದೇ ಮೊತ್ತ ಮೊದಲ ಸಾರ್ವಜನಿಕ ಚುನಾವಣೆ ಈದಿನ ನಡೆಯಿತು. ಚುನಾವಣೆ ಸಲುವಾಗಿ ಒಟ್ಟು 1460 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಮತದಾರರು ಬಂದು ಮತಚಲಾಯಿಸಿದರು ಎಂದು ಸನೀಮ್​ಹರ್ಷ ವ್ಯಕ್ತ ಪಡಿಸಿದರು. 50 ಸದಸ್ಯ ಬಲದ ಸಂಸತ್ತಿಗೆ ನಡೆಯುತ್ತಿರುವ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು.

2008: ವಿಶ್ವದ ವಿವಿಧ ದೇಶಗಳ ಸಾವಿರಾರು ಅಂಗವಿಕಲ ಸ್ಪರ್ಧಿಗಳು ಪಾಲ್ಗೊಂಡ 12 ದಿನಗಳ ಬೀಜಿಂಗ್ ಪ್ಯಾರಾಲಿಂಪಿಕ್ ಕೂಟಕ್ಕೆ ವರ್ಣರಂಜಿತ ತೆರೆ ಬಿದ್ದಿತು. ಈ ಮಹಾ ಕ್ರೀಡಾಮೇಳವನ್ನು ಯಶಸ್ವಿಯಾಗಿ ಸಂಘಟಿಸಿದ ಚೀನಾ ಮತ್ತೊಮ್ಮೆ ಜಗತ್ತಿನ ಗಮನ ಸೆಳೆಯಿತು. `ಬರ್ಡ್ಸ್ ನೆಸ್ಟ್' ಎಂದೇ ಪ್ರಸಿದ್ಧಿ ಪಡೆದ ಬೀಜಿಂಗಿನ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ನೆರೆದ ಪ್ರೇಕ್ಷಕರನ್ನು ರಂಜಿಸಿದರು. ಸೆಪ್ಟೆಂಬರ್ 6 ರಂದು ಇದೇ ರೀತಿ ವರ್ಣರಂಜಿತ ಉದ್ಘಾಟನಾ ಸಮಾರಂಭ ಏರ್ಪಡಿಸಿ ಸಂಘಟಕರು ಎಲ್ಲರ ಗಮನ ಸೆಳೆದಿದ್ದರು.

2007: ಕನ್ನಡ ಪುಸ್ತಕ ಪ್ರಾಧಿಕಾರದ 2006ನೇ ಸಾಲಿನ ಶ್ರೇಷ್ಠ ಪ್ರಕಾಶನ ಪ್ರಶಸ್ತಿಗೆ ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಆಯ್ಕೆಯಾಯಿತು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಗೆ ಒಟ್ಟು 24 ಸಂಸ್ಥೆಗಳು ಸ್ಪರ್ಧೆಯಲ್ಲಿದ್ದವು. ಹಿರಿಯ ವಿಮರ್ಶಕ ಪ್ರೊ. ಜಿ. ಎಚ್. ನಾಯಕ ಅಧ್ಯಕ್ಷತೆಯ ಆಯ್ಕೆ ಸಮಿತಿ ಅಂತಿಮವಾಗಿ ಈ ಆಯ್ಕೆ ನಡೆಸಿತು.

2007: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಸಂಬಂಧವನ್ನು ಪ್ರತಿಬಿಂಬಿಸುವ ಉದ್ದೇಶದಿಂದ  ಡರ್ಬಾನಿನ ಖ್ಯಾತ ಕ್ವಾಜುಲು- ನಾಟಲ್ ವಿಶ್ವವಿದ್ಯಾಲಯವು, ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಭಾರತದ ಮಹಾತ್ಮ ಗಾಂಧಿ ಹಾಗೂ ದಕ್ಷಿಣ ಆಫ್ರಿಕದ ಆಲ್ಬರ್ಟ್ ಲುಥುಲಿ ಅವರ ಸ್ಮರಣಾರ್ಥ ಶಾಂತಿ ಅಧ್ಯಯನ ಪೀಠ ಆರಂಭಿಸುತ್ತಿರುವುದಾಗಿ ಪ್ರಕಟಿಸಿತು. 1997ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಡರ್ಬಾನ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗ ಅವರಿಗೆ ಈ ಅಧ್ಯಯನ ಪೀಠದ ಕಲ್ಪನೆ ಮೊಳೆಯಿತು. ಈ ಯೋಜನೆಯನ್ನು ಮೊದಲು ಪ್ರಸ್ತಾಪಿಸಿದವರೇ ಗಾಂಧಿ ಅವರ ಮೊಮ್ಮಗಳು ಇಳಾ ಗಾಂಧಿ. ನಂತರ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್  ಪೀಠದ ಪ್ರಾಯೋಜಕತ್ವ ವಹಿಸಿಕೊಂಡಿತು. ಆಫ್ರಿಕದಲ್ಲೇ ಮಹಾತ್ಮ ಗಾಂಧಿ ಸತ್ಯಾಗ್ರಹ ಚಳವಳಿ ಆರಂಭಿಸಿದ್ದರು.

2007: ಬ್ರಿಟನ್ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ವಿಶ್ವದ ಮೊಟ್ಟಮೊದಲ ಸೀಡ್ಲೆಸ್ (ಬೀಜರಹಿತ) ನಿಂಬೆಹಣ್ಣು ಕಾಣಿಸಿಕೊಳ್ಳಲಿದೆ ! ಬ್ರಿಟನ್ನಿನ ರೈತರೊಬ್ಬರು ಬೀಜಗಳೇ ಇಲ್ಲದ ನಿಂಬೆ ಹಣ್ಣನ್ನು ಅಭಿವೃದ್ಧಿಪಡಿಸಿದ್ದಾರೆ. ಒಗರು ಮಿಶ್ರಿತ ಸಿಹಿ ರುಚಿ ಹೊಂದಿರುವ ಈ ವಿಶಿಷ್ಟ ನಿಂಬೆ  ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಬೀಜರಹಿತ ನಿಂಬೆ ವಿಶೇಷ ಹಣ್ಣು. ಯುರೋಪಿನ 900 ವರ್ಷಗಳ ಇತಿಹಾಸದಲ್ಲಿ ಇಂಥ ಹಣ್ಣನ್ನು ಕಂಡಿಲ್ಲ ಎಂದು ಇಂಗ್ಲೆಂಡಿನ ಮಾಧ್ಯಮಗಳು ವರದಿ ಮಾಡಿದವು.

2007: ಅಂತರ್ಜಾಲದಲ್ಲಿ ಗೂಗಲ್ ಸರ್ಚ್ ಎಂಜಿನ್ ಹಾಗೂ ಜಿ-ಮೇಲ್ ಸೇರಿದಂತೆ ಅನೇಕ ವಿದೇಶಿ ವೆಬ್ಸೈಟ್, ಇ-ಮೈಲ್ ತಾಣಗಳ ಬಳಕೆಯನ್ನು ಇರಾನ್ ನಿಷೇಧಿಸಿತು.

2007: ಎಳ್ಳು ಹಾಗೂ ಶೇಂಗಾ ಆಮದಿನ ಮೇಲೆ ಹೇರಿದ್ದ ನಿಷೇಧವನ್ನು ರಷ್ಯ ತೆರವುಗೊಳಿಸಿತು. ಭಾರತದ ಶೇಂಗಾ ಹಾಗೂ ಎಳ್ಳಿನ ಮೇಲೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಉಳಿಕೆ ಹೆಚ್ಚಾಗಿರುತ್ತಿದ್ದುದರಿಂದ ರಷ್ಯಾದ ಕೃಷಿ ಕಾವಲುಪಡೆ ಈ ನಿರ್ಬಂಧ ಹೇರಿತ್ತು.

2006: ಭಯೋತ್ಪಾದನೆ ನಿಗ್ರಹ ಕುರಿತು ಭಾರತದ ನಿಲುವನ್ನು ಬೆಂಬಲಿಸಿದ ಅಲಿಪ್ತ ಚಳವಳಿಯ ರಾಷ್ಟ್ರಗಳ ಒಕ್ಕೂಟವು (ನ್ಯಾಮ್) ಭಯೋತ್ಪಾದನೆ ನಿಗ್ರಹಿಸಲು ಎಲ್ಲ ಸದಸ್ಯ ರಾಷ್ಟ್ರಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವ 91 ಪುಟಗಳ ನಿರ್ಣಯವನ್ನು ಸ್ವೀಕರಿಸಿತು. ಭಯೋತ್ಪಾದನೆಯಲ್ಲಿ ತೊಡಗಿರುವವರ ಗಡೀಪಾರು ಅಥವಾ ಹಸ್ತಾಂತರ ಮತ್ತು ನ್ಯಾಯಾಂಗದ ಪರಿಧಿಗೆ ಅವರನ್ನು ತರಲು ಸದಸ್ಯ ರಾಷ್ಟ್ರಗಳು ಪ್ರಯತ್ನಿಸಬೇಕು ಎಂದು ನಿರ್ಣಯ ಹೇಳಿತು.

1980: ನಿಕರಾಗುವಾದ ಮಾಜಿ ಅಧ್ಯಕ್ಷ ಅನಾಸ್ಟಾಸಿಯೊ ಸೊಮಾಝಾ ಅವರನ್ನು ಪರಗ್ವೆಯಲ್ಲಿ ಹತ್ಯೆಗೈಯಲಾಯಿತು.

1970: ಸಾಹಿತಿ ರಾಘವೇಂದ್ರ ದಂಡಿನ ಜನನ.

1960: ಸಿಂಧು ಮತ್ತು ಅದರ ಉಪನದಿಗಳ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಸಹಿ.

1956: ಒಎನ್ ಜಿಸಿ ಆರಂಭ.

1950: ಭಾರತ ಸರ್ಕಾರವು ಇಸ್ರೇಲಿಗೆ ಮಾನ್ಯತೆ ನೀಡಿತು.

1949: ಸಿ.ಎನ್. ಅಣ್ಣಾದುರೈ ಅವರು `ಪೆರಿಯಾರ್' ಸಂಬಂಧ ಕಡಿದುಕೊಂಡು `ದ್ರಾವಿಡ ಮುನ್ನೇತ್ರ ಕಳಗಂ' (ಡಿಎಂಕೆ) ಪಕ್ಷವನ್ನು ಸ್ಥಾಪಿಸಿದರು.

1948: ಹೈದರಾಬಾದ್ ಭಾರತದೊಂದಿಗೆ ವಿಲೀನಗೊಂಡ ಬಗ್ಗೆ ಹೈದರಾಬಾದ್ ನಿಜಾಮನಿಂದ ಘೋಷಣೆ.

1939: ಸಾಹಿತಿ ಗುರುಸ್ವಾಮಿ ಕಲಗೇರಿ ಜನನ.

1915: ಸಮಕಾಲೀನ ಭಾರತೀಯ ಕಲಾವಿದ ಹಾಗೂ ಚಿತ್ರ ನಿರ್ಮಾಪಕ ಮಕ್ಬೂಲ್ ಫಿದಾ ಹುಸೇನ್ ಜನ್ಮದಿನ.

1906: ಜ್ಯೂನಿಯಸ್ ರಿಚರ್ಡ್ ಜಯವರ್ಧನೆ ಜನ್ಮದಿನ. ವಕೀಲ ಹಾಗೂ ಸರ್ಕಾರಿ ಅಧಿಕಾರಿಯಾಗಿದ್ದ ಇವರು 1978ರಿಂದ

1989ರ ಅವಧಿಯಲ್ಲಿ ಶ್ರೀಲಂಕಾದ ಅಧ್ಯಕ್ಷರಾಗಿದ್ದರು.

1879: ಸಮಾಜ ಸುಧಾರಕ ಹಾಗೂ `ದ್ರಾವಿಡ ಕಳಗಂ' ಪಕ್ಷದ ಸ್ಥಾಪಕ ಇ.ವಿ. ರಾಮಸ್ವಾಮಿ `ಪೆರಿಯಾರ್' ಜನ್ಮದಿನ.

1876: ಭಾರತೀಯ ಕಾದಂಬರಿಕಾರ ಶರತ್ ಚಂದ್ರ ಚಟರ್ಜಿ (1876-1938) ಜನ್ಮದಿನ.

1867: ಭಾರತೀಯ ಕಲಾವಿದ ಹಾಗೂ ಒಳಾಂಗಣ ಕಲಾವಿದ ಗಗನೇಂದ್ರನಾಥ ಟ್ಯಾಗೋರ್ (1867-1938) ಜನ್ಮದಿನ. ಇವರು ರಬೀಂದ್ರನಾಥ ಟ್ಯಾಗೋರ್ ಅವರ ಸೋದರಳಿಯ.

1850: ಸಾಹಿತಿ, ಶಿಕ್ಷಣ ತಜ್ಞ, ಮುಂಬೈ ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದ ರೊದ್ದ ಶ್ರೀನಿವಾಸರಾಯರು (17-9-1850ರಿಂದ 4-8-1929) ಕೋನೆರರಾಯರು- ಸುಬ್ಬಮ್ಮ ದಂಪತಿಯ ಮಗನಾಗಿ ಧಾರವಾಡದ ಮದಿಹಾಳದಲ್ಲಿ ಜನಿಸಿದರು.

1827:  ಬ್ರೈಟನ್ನಿನಲ್ಲಿ ಸಸೆಕ್ಸ್ ವಿರುದ್ಧ ಕೆಂಟ್ ಪಂದ್ಯದಲ್ಲಿ ಕ್ರಿಕೆಟ್ ಆಟಕ್ಕೆ `ವೈಡ್ ಬಾಲ್' ಪ್ರವೇಶ ಪಡೆಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, September 19, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 16

ಇಂದಿನ ಇತಿಹಾಸ

ಸೆಪ್ಟೆಂಬರ್ 16

60 ಮತ್ತು 70ರ ದಶಕದಲ್ಲಿ ತಮ್ಮ ಗೀತೆಗಳ ಮೂಲಕ ಸಂಗೀತ ಪ್ರಿಯರ ಹೃದಯ  ತಟ್ಟಿದ್ದ ಹಾಗೂ 2 ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದ ನಾರ್ಮನ್ ವೈಟ್ ಫೀಲ್ಡ್ (67) ಲಾಸ್ ಏಂಜಲಿಸಿನಲ್ಲಿ ದೀರ್ಘ ಕಾಲದ ಅಸೌಖ್ಯದ ಬಳಿಕ ನಿಧನರಾದರು.


2008: ಸವಾಯಿ ಗಂಧರ್ವರ ಹೆಸರಿನಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕಳೆದ 55 ವರ್ಷಗಳಿಂದ  ಸಂಗೀತ ಮಹೋತ್ಸವ ಆಚರಿಸುತ್ತ ಬಂದ ಸವಾಯಿ ಗಂಧರ್ವ ವಿಶ್ವಸ್ಥ ಸಂಸ್ಥೆಯವರು ಪ್ರಸಕ್ತ ಸಾಲಿನಿಂದ ಸವಾಯಿ ಗಂಧರ್ವ ಅವರ ಹೆಸರಿನಲ್ಲಿ ನೀಡಲು ಉದ್ದೇಶಿಸಿದ ರಾಷ್ಟ್ರಮಟ್ಟದ ಮೊದಲ ಪ್ರಶಸ್ತಿಯನ್ನು ಗಂಧರ್ವರ ಪಟ್ಟ ಶಿಷ್ಯರಾದ ಡಾ. ಗಂಗೂಬಾಯಿ ಹಾನಗಲ್ ಹಾಗೂ ಪಂ. ಭೀಮಸೇನ ಜೋಶಿ ಅವರಿಗೆ ನೀಡಲು ನಿರ್ಧರಿಸಿತು. ಸಂಸ್ಥೆಯ ಚೇರ್ಮನ್, ಮಾಜಿ ಸಚಿವ ಎಂ.ಎಸ್. ಕಟಗಿ ಹುಬ್ಬಳ್ಳಿಯಲ್ಲಿ ಈ ಮಾಹಿತಿ ನೀಡಿದರು.

2008: ಬೆಂಗಳೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್)ನಿಂದ `ಎ' ದರ್ಜೆಯ ಸ್ಥಾನ ಪಡೆಯಿತು. ನ್ಯಾಕ್ ಸಮಿತಿಯು ಮೇ ತಿಂಗಳಲ್ಲಿ ವಿ.ವಿಗೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಪ್ರತಿಯೊಂದು ವಿಭಾಗಗಳಿಗೂ ಭೇಟಿ ನೀಡಿ ಸೌಲಭ್ಯ ಹಾಗೂ ಕಾರ್ಯ ನಿರ್ವಹಣೆಯ ಪರಿಶೀಲನೆ ನಡೆಸಿತ್ತು.

2008: 60 ಮತ್ತು 70ರ ದಶಕದಲ್ಲಿ ತಮ್ಮ ಗೀತೆಗಳ ಮೂಲಕ ಸಂಗೀತ ಪ್ರಿಯರ ಹೃದಯ  ತಟ್ಟಿದ್ದ ಹಾಗೂ 2 ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದ ನಾರ್ಮನ್ ವೈಟ್ ಫೀಲ್ಡ್ (67) ಲಾಸ್ ಏಂಜಲಿಸಿನಲ್ಲಿ ದೀರ್ಘ ಕಾಲದ ಅಸೌಖ್ಯದ ಬಳಿಕ ನಿಧನರಾದರು. `ವಾರ್',`ಐ ಹಿಯರ್ಡ್ ಇಟ್ ಥ್ರೂ ದಿ ಗ್ರೇಪ್ ವೈನ್' ಹಾಡುಗಳಿಂದ ಖ್ಯಾತರಾಗಿದ್ದ ವೈಟ್ ಫೀಲ್ಡ್ ಮೊಟೌನ್ ಲೇಬಲ್ ಸಂಗೀತಕ್ಕೆ ದೀರ್ಘ ಕಾಲದ ನಿರ್ಮಾಪಕರಾಗಿದ್ದರು. ಅವರು ಬರೆಟ್ ಸ್ಟ್ರಾಂಗ್ ಜತೆಗೂಡಿ ಹಲವು ಗೀತೆ ರಚಿಸಿದ್ದರು. ಅವರು `ಟೆಂಪ್ಟೇಷನ್', ಇತರ ಹಲವು ಸಂಗೀತಗಳಿಗೂ ನಿರ್ಮಾಪಕರಾಗಿದ್ದರು.

2008: ಬೆಂಗಳೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ (ನ್ಯಾಕ್) `ಎ' ದರ್ಜೆಯ ಸ್ಥಾನ ಪಡೆಯಿತು. ನ್ಯಾಕ್ ಸಮಿತಿಯು ಮೇ ತಿಂಗಳಲ್ಲಿ ವಿ.ವಿಗೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಪ್ರತಿಯೊಂದು ವಿಭಾಗಗಳಿಗೂ ಭೇಟಿ ನೀಡಿ ಸೌಲಭ್ಯ ಹಾಗೂ ಕಾರ್ಯ ನಿರ್ವಹಣೆಯ ಪರಿಶೀಲನೆ ನಡೆಸಿತ್ತು.

2007: ಥಾಯ್ಲೆಂಡಿನ ಫುಕೆಟ್ ದ್ವೀಪದಲ್ಲಿ ಒನ್-ಟು-ಗೋ ಕಂಪೆನಿಗೆ ಸೇರಿದ ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಾಗ ನಿಲ್ದಾಣದಲ್ಲಿಯೇ ಅಪಘಾತಕ್ಕೆ ಈಡಾಗಿ 87ಕ್ಕೂ ಹೆಚ್ಚು ಜನರು ಮೃತರಾಗಿ ಇತರ 40 ಜನ ಕಣ್ಮರೆಯಾದರು. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿತು. ವಿಮಾನದಲ್ಲಿ ಒಟ್ಟು 123 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದರು.

2007: ಪಾಕ್ ಚುನಾವಣಾ ಆಯೋಗವು ಅಧ್ಯಕ್ಷೀಯ ಚುನಾವಣಾ ನಿಯಮಾವಳಿಗಳಿಗೆ ತಿದ್ದುಪಡಿ ತರುವ ಮೂಲಕ ಪರ್ವೇಜ್ ಮುಷರಫ್ ಅವರ ಮರು ಆಯ್ಕೆಗೆ ಇರುವ ಅಡೆತಡೆಗಳನ್ನು ನಿವಾರಿಸಿದೆ ಎಂದು ಸರ್ಕಾರಿ ಸಚಿವಾಲಯ ಪ್ರಕಟಿಸಿತು. ಅಧ್ಯಕ್ಷೀಯ ಚುನಾವಣಾ ನಿಯಮಗಳ ಪ್ರಕಾರ ಸಂಸತ್ ಸದಸ್ಯತ್ವದಿಂದ ವ್ಯಕ್ತಿಯನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ 63ನೇ ಕಾಯ್ದೆಯನ್ನು ಬಳಸಲಾಗುತ್ತಿತ್ತು. ತಿದ್ದುಪಡಿ ಪ್ರಕಾರ 63ನೇ ಕಾಯ್ದೆಯು ಅಧ್ಯಕ್ಷರಿಗೆ ಅನ್ವಯವಾಗುವುದಿಲ್ಲ.

2007: ಮೈಸೂರು ಮೂಲದ ಚಿತ್ರ ನಿರ್ದೇಶಕ ಸೇನಾನಿ ಹೆಗಡೆ ಅವರು ಸೀಳು ನಾಯಿಗಳ ಕುರಿತು ನಿರ್ಮಿಸಿದ `ವೈಲ್ಡ್ ಡಾಗ್ ಡೈರೀಸ್' ಚಿತ್ರಕ್ಕೆ `ಅತ್ಯುತ್ತಮ ಸಿಎಂಎಸ್ ವಾತಾವರಣ 2007 ಚಿತ್ರೋತ್ಸವ' ಪ್ರಶಸ್ತಿ ಮತ್ತು 1.50 ಲಕ್ಷ ರೂಪಾಯಿ ನಗದು ಬಹುಮಾನ ದೊರಕಿತು. ಸೇನಾನಿ ಅವರು ಎಸ್. ಕೃಪಾಕರ್ ಜತೆಗೂಡಿ ಬಂಡಿಪುರ ರಾಷ್ಟ್ರೀಯ ಉದ್ಯಾನದಲ್ಲಿನ ಸೀಳು ನಾಯಿಗಳ ನಡವಳಿಕೆ ಕುರಿತು ದಶಕಗಳ ಕಾಲ ನಿರಂತರ ಅಧ್ಯಯನ ನಡೆಸಿ ಈ ಚಿತ್ರ ನಿರ್ಮಿಸಿದ್ದಾರೆ. ಸುಮಾರು 50 ನಿಮಿಷಗಳ ಈ ಚಿತ್ರಕ್ಕೆ `ಅತ್ಯುತ್ತಮ ಕಥೆ ನಿರೂಪಣೆ' ಪ್ರಶಸ್ತಿಯೂ ದೊರಕಿತು.

2007:  ಭಾರತದ ವಿಶ್ವನಾಥನ್ ಆನಂದ್ ಅವರು ಮೆಕ್ಸಿಕೋದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಜಂಟಿ ಆಗ್ರಸ್ಥಾನದಲ್ಲಿ ಮುಂದುವರಿದರು. ಮೂರನೇ ಸುತ್ತಿನ ಪಂದ್ಯದಲ್ಲಿ ಕೆಲವೊಂದು ಆತಂಕದ ಕ್ಷಣಗಳನ್ನು ಎದುರಿಸಿದರೂ ಆನಂದ್ ಸಾಂಪ್ರದಾಯಿಕ ಎದುರಾಳಿ ರಷ್ಯಾದ ವ್ಲಾದಿಮೀರ್  ಕ್ರಾಮ್ನಿಕ್ ಜೊತೆ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು.

2006: ಇಸ್ಲಾಂ ಧರ್ಮದ ಬಗ್ಗೆ ತಾವು ಆಡಿದ ಮಾತುಗಳಿಗೆ ವಿಶ್ವದಾದ್ಯಂತ ಮುಸ್ಲಿಮರಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೋಪ್ 16ನೇ ಬೆನೆಡಿಕ್ಟ್ ಅವರು ಮುಸ್ಲಿಂ ಸಮುದಾಯದ ಕ್ಷಮೆ ಯಾಚಿಸಿದರು. `ಇಸ್ಲಾಂ ಧರ್ಮದ ಬಗ್ಗೆ ಆಡಿದ ಮಾತುಗಳಿಂದ ನೋವಾಗಿದ್ದರೆ ಕ್ಷಮಿಸಿ. ಮುಸ್ಲಿಮರು ತಮ್ಮ ಧರ್ಮದ ಮೇಲೆ ಹೊಂದಿರುವ ನಂಬಿಕೆಯನ್ನು ಗೌರವಿಸುತ್ತೇನೆ. ನನ್ನ ಮಾತುಗಳ `ನೈಜ ಅರ್ಥವನ್ನು' ತಿಳಿದುಕೊಳ್ಳಬೇಕು' ಎಂದು ಪೋಪ್ ಬೆನೆಡಿಕ್ಟ್ ಕೋರಿರುವುದಾಗಿ ವ್ಯಾಟಿಕನ್ ತಿಳಿಸಿತು. ಜರ್ಮನಿಯ ರೆಗೆನ್ಸ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಪೋಪ್ ಅವರು `ಜಿಹಾದ್' ಅಥವಾ `ಪವಿತ್ರಯುದ್ಧ'ಕ್ಕೆ ಸಂಬಂಧಿಸಿದಂತೆ ಮಾಡಿದ ಪ್ರಸ್ತಾಪವು ಇಸ್ಲಾಂ ಬಗೆಗಿನ ಟೀಕೆಯಾಗಿದೆ ಎಂದು ಹೇಳಿ ವಿಶ್ವದಾದ್ಯಂತ ಖಂಡನೆ ವ್ಯಕ್ತಪಡಿಸಿದ ಮುಸ್ಲಿಂ ನಾಯಕರು ಪೋಪ್ ಕ್ಷಮೆಯಾಚನೆಗೆ ಆಗ್ರಹಿಸಿದ್ದರು.

1987: ಭೂಮಿಯ ಓಝೋನ್ ಪದರ ರಕ್ಷಣೆ ಉದ್ದೇಶದ ಒಪ್ಪಂದ `ಮಾಂಟ್ರಿಯಲ್ ಪ್ರೊಟೊಕಾಲ್' ಗೆ ಎರಡು ಡಜನ್ ರಾಷ್ಟ್ರಗಳು ಸಹಿ ಹಾಕಿದವು. 2000ದ ವೇಳೆಗೆ ಹಾನಿಕಾರಕ ರಾಸಾಯನಿಕ ವಸ್ತುಗಳ ಮೂಲಕ ಉಂಟಾಗುವ `ಹೊಗೆ'ಗಳನ್ನು ಕಡಿಮೆಗೊಳಿಸಲು ಈ ಒಪ್ಪಂದ ರಾಷ್ಟ್ರಗಳಿಗೆ ಕರೆ ನೀಡಿತು.

1978: ಇರಾನಿನಲ್ಲಿ ಭೂಕಂಪ. 25,000 ಮಂದಿ ಸಾವು.

1977: ಭಾರತದ ಖ್ಯಾತ ಶಾಸ್ತ್ರೀಯ ಸಂಗೀತಗಾರರಾದ ಕೇಸರಭಾಯಿ ಕೇರ್ಕರ್ ನಿಧನರಾದರು.

1932: ಮಲೇರಿಯಾ ಹರಡಲು ಸೊಳ್ಳೆಗಳು ಕಾರಣ ಎಂದು ಸಾಬೀತು ಪಡಿಸಿದ ವೈದ್ಯ ರೊನಾಲ್ಡ್ ರಾಸ್ (13-5-1857ರಿಂದ 16-9-1932) ಈದಿನ ಲಂಡನ್ನಿನಲ್ಲಿ ನಿಧನರಾದರು. ಬ್ರಿಟಿಷ್ ಸೈನ್ಯದಲ್ಲಿ ಜನರಲ್ ಆಗಿದ್ದ ಸರ್. ಸಿ.ಸಿ.ಜಿ. ರಾಸ್ ಅವರ ಮಗನಾದ ರೊನಾಲ್ಡ್ ರಾಸ್ ಲಂಡನ್ನಿನ ಬಾರ್ಥೊಲೋಮೊ ಆಸ್ಪತೆಯಲ್ಲಿ ಭಾರತೀಯ ವೈದ್ಯಕೀಯ ಸೇವೆಗೆ ಸೇರಿ 1892ರಲ್ಲಿ ಮಲೇರಿಯಾ ಬಗ್ಗೆ ಅಧ್ಯಯನ ಶುರು ಮಾಡಿದರು. 1894ರಲ್ಲಿ ಅವರು ಮಲೇರಿಯಾ ಹರಡುವಲ್ಲಿ ಸೊಳ್ಳೆಗಳ ಪಾತ್ರವಿದೆ ಎಂದು ಪತ್ತೆಹಚ್ಚಿದರು. ನಂತರ ಭಾರತ ಮತ್ತು ಆಫ್ರಿಕದಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿ ಅನಾಫಿಲಿಸ್ ಸೊಳ್ಳೆಯಿಂದ ಮಲೇರಿಯಾ ಹರಡುತ್ತದೆ ಎಂದು ಖಚಿತ ಪಡಿಸಿದರು. ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಈ ಮಹತ್ತರ ಕೊಡುಗೆಗಾಗಿ ಅವರಿಗೆ 1902ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು.

1923: ಸಿಂಗಪುರದ ಮಾಜಿ ಪ್ರಧಾನಿ ಲೀ ಕ್ವಾನ್ ಯೂ ಜನ್ಮದಿನ. 1959ರಿಂದ 1990ರವರೆಗೆ ಪ್ರಧಾನಿಯಾಗಿದ್ದ ಅವರು ಸಿಂಗಪುರವನ್ನು ವಸಾಹತುಶಾಹಿಯ ಕಪಿಮುಷ್ಠಿಯಿಂದ ಬಿಡಿಸಿ ಇಂದಿನ ಉನ್ನತ ತಂತ್ರಜ್ಞಾನದ ರಾಷ್ಟ್ರವನ್ನಾಗಿ ಅಭಿವೃದ್ಧಿ ಪಡಿಸಿದರು.

1916: ಖ್ಯಾತ ಸಂಗೀತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ(1916-2004) ಜನ್ಮದಿನ. ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರವು ಅವರಿಗೆ `ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ. 2004ರ ಡಿಸೆಂಬರ್ 11ರಂದು ಅವರು ನಿಧನರಾದರು.

1913: ಬ್ರಿಟಿಷರಿಂದ ಗಾಂಧೀಜಿ ಪತ್ನಿ ಕಸ್ತೂರಬಾ ಬಂಧನ.

1835: ಎಚ್ ಎಂ ಎಸ್ ಬೀಗಲ್ ನೌಕೆಯ ಮೂಲಕ ಬ್ರಿಟಿಷ್ ನಿಸರ್ಗ ಸಂಶೋಧಕ ಚಾರ್ಸ್ ಡಾರ್ವಿನ್ ದಕ್ಷಿಣ ಆಫ್ರಿಕದ ಪಶ್ಚಿಮಕ್ಕೆ ಸಮಭಾಜಕ ವೃತ್ತದಿಂದ 600 ಮೈಲು ದೂರದಲ್ಲಿರುವ ಗ್ಯಾಲಾಪಗೋಸ್ ಆರ್ಕಿಪೆಲಾಗೊ ದ್ವೀಪಗಳ ಗುಂಪಿಗೆ ಆಗಮಿಸಿದ. ಗ್ಯಾಲಾಪಗೋಸ್ ನ ಜೀವಸಂಕುಲ ಕುರಿತು ಐದು ವಾರಗಳ ಅಧ್ಯಯನ ನಡೆಸಿದ. ಬೃಹತ್ ಆಮೆಗಳು ಒಂದೊಂದು ದ್ವೀಪದಲ್ಲಿ ಒಂದೊಂದು ಬಗೆ ಇದ್ದುದನ್ನು ಆತ ಗಮನಿಸಿದ. ಇವು `ಸಹಜ ಆಯ್ಕೆ'ಯ ಡಾರ್ವಿನ್ ಸಿದ್ಧಾಂತಕ್ಕೆ ಕಾಣಿಕೆ ಸ್ಲಲಿಸಿದವು.

1810: ಸ್ಪ್ಯಾನಿಷ್ ಆಳ್ವಿಕೆಯಿಂದ ಮುಕ್ತಿ ಪಡೆಯುವ ಸಲುವಾಗಿ ಮೆಕ್ಸಿಕನ್ ಕ್ರಾಂತಿ ಆರಂಭವಾಯಿತು. ಈದಿನವನ್ನು ಮೆಕ್ಸಿಕೊದ ರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತಿದೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಸೆಪ್ಟೆಂಬರ್ 15

ಇಂದಿನ ಇತಿಹಾಸ

ಸೆಪ್ಟೆಂಬರ್ 15


ಹಿರಿಯ ವಕೀಲ ಹಾಗೂ ಮಾಜಿ ಸಚಿವ ಪ್ರೊ. ಎಲ್.ಜಿ. ಹಾವನೂರು ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವರು ವಸ್ತುನಿಷ್ಠ ವರದಿಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.


2008: ಮುರುಘಾಮಠದ ವತಿಯಿಂದ ನೀಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಗೆ ದೇಶದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಡಾ.ಕಿರಣ್ ಬೇಡಿ ಅವರನ್ನು ಆಯ್ಕೆ ಮಾಡಲಾಯಿತು.  ಕಿರಣ್ ಬೇಡಿ ಅವರ ಕರ್ತವ್ಯನಿಷ್ಠೆ, ಸಾಮಾಜಿಕ ಬದ್ಧತೆ, ನಿಸ್ಪೃಹ ಸೇವೆ ಮತ್ತು ಸಮಾಜ ಸುಧಾರಣಾ ಚಟುವಟಿಕೆಗಳನ್ನು ಪರಿಗಣಿಸಿ ಅವರನ್ನು 2008 ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗದಲ್ಲಿ ಪ್ರಕಟಿಸಿದರು.

2008: ದಕ್ಷಿಣದ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ನಿರತವಾಗಿದ್ದ ಕರ್ನಾಟಕ ಮೂಲದ ದೀನ್ ದಾರ್ ಅಂಜುಮನ್ ಸಂಘಟನೆಯ ಮೇಲೆ ಕೇಂದ್ರ ಸರ್ಕಾರ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ಸಮರ್ಥಿಸಿತು. ಎರಡು ವರ್ಷಗಳಿಗೆ ನಿಷೇಧ ಮುಂದುವರಿಸುವ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ್ದಿದ ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಗುಲ್ಬರ್ಗ ಮೂಲದ ಈ ಸಂಘಟನೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ತಳ್ಳಿಹಾಕಿದರು. ಇಗರ್ಜಿಗಳ (ಚರ್ಚ್) ಮೇಲೆ ದಾಳಿ ನಡೆಸುವ ಮೂಲಕ ಹಿಂದೂಗಳು- ಕ್ರಿಶ್ಚಿಯನ್ನರ ನಡುವೆ ದ್ವೇಷದ ಕಿಡಿ ಹೊತ್ತಿಸಲು ಕಾರಣವಾಗಿದ್ದ ಸಂಘಟನೆಯ ವಿರುದ್ಧ ಸರ್ಕಾರ ವಿಧಿಸಿದ್ದ ನಿಷೇಧವನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ನ್ಯಾಯಮಂಡಳಿ ಈ ವರ್ಷದ ಫೆ. 27ರಂದು ಎತ್ತಿಹಿಡಿದಿತ್ತು. ಕರ್ನಾಟಕ, ಗೋವಾ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದ ಬಗ್ಗೆ ಹಾಗೂ 2000ನೇ ಇಸವಿಯಲ್ಲಿ ದಕ್ಷಿಣ ಭಾರತದ ಇಗರ್ಜಿಗಳ ಮೇಲೆ 12 ಬಾಂಬ್ ದಾಳಿಗಳನ್ನು ನಡೆಸಿದ್ದ ಬಗ್ಗೆ ಸರ್ಕಾರ ಸಾಕ್ಷ್ಯ ಒದಗಿಸಿತ್ತು. 2001ರಿಂದ ಈವರೆಗೆ ನಾಲ್ಕನೇ ಬಾರಿಗೆ ಸಂಘಟನೆಯ ಮೇಲೆ ನಿಷೇಧ ಹೇರಲಾಗಿತ್ತು.

2007: ಗಣೇಶ ಚತುರ್ಥಿಯ ದಿನ ಮಧ್ಯಾಹ್ನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ನಿಯಂತ್ರಣ ತಪ್ಪಿ ತೆರೆದ ಬಾವಿಗೆ ಬಿದ್ದ ಪರಿಣಾಮವಾಗಿ ಎಂಟು ಮಂದಿ ವಿದ್ಯಾರ್ಥಿಗಳು ಸೇರಿದಂತೆ  10 ಮಂದಿ ಸಾವಿಗೀಡಾದ ದಾರುಣ ಘಟನೆ ಅಥಣಿಗೆ ಎಂಟು ಕಿ.ಮೀ. ದೂರದ ಅಥಣಿ-ಅನಂತಪುರ ರಸ್ತೆಯ ಪ್ರಾರ್ಥನಹಳ್ಳಿ ಬಳಿ ಸಂಭವಿಸಿತು. ವಿದ್ಯಾರ್ಥಿಗಳು ಹಬ್ಬದ ಪ್ರಯುಕ್ತ ಶಾಲೆಯಲ್ಲಿ ಗಣಪತಿ ಪೂಜೆ ನೆರವೇರಿಸಿ ಸ್ವಗ್ರಾಮಗಳಿಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿತು.

2007: ಗೋವಾದ ಮಾರ್ಗೋವ ಜೈಲಿನಲ್ಲಿ ಗಣೇಶ ಚತುರ್ಥಿ ಆಚರಣೆ ಸಂದರ್ಭದಲ್ಲಿ 14 ಮಂದಿ ವಿಚಾರಣಾಧೀನ ಕೈದಿಗಳು ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಪರಾರಿಯಾದರು.

2007: ಮಾಜಿ ಕೇಂದ್ರ ಸಚಿವೆ, ಭಾರತೀಯ ಜನಶಕ್ತಿ ಪಕ್ಷದ ನಾಯಕಿ ಉಮಾ ಭಾರತಿ ಅವರು ಇಂದೋರಿನಲ್ಲಿ ರಿಲಯನ್ಸ್ ಫ್ರೆಶ್ ಬಿಡಿ ಮಾರಾಟ ಮಳಿಗೆಯೊಂದಕ್ಕೆ ಬೀಗ ಜಡಿದರು. ಇಲ್ಲಿನ ಜಂಜೀರ್ ವಾಲಾ ಪ್ರದೇಶದಲ್ಲಿ ರಿಲಯನ್ಸ್ ಫ್ರೆಶ್ ಬಿಡಿ ಮಾರಾಟ ಮಳಿಗೆಗೆ ತರಕಾರಿ ತುಂಬಿದ್ದ ಬುಟ್ಟಿಯೊಂದನ್ನು ಹೊತ್ತುಕೊಂಡು ಬಂದ ಉಮಾ ಭಾರತಿ, ಮಳಿಗೆಗೆ ತಮ್ಮ ಬಳಿ ಇದ್ದ ಬೀಗ ಜಡಿದು ಕೋಲಾಹಲ ಎಬ್ಬಿಸಿದರು. ಸಮಾಜವಾದಿ ಪಕ್ಷದ ಕಾರ್ಯಕರ್ತರು ಕೆಲವು ರಿಲಯನ್ಸ್ ಫ್ರೆಶ್ ಬಿಡಿ ಮಾರಾಟ ಮಳಿಗೆಗಳ  ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಾಯಾವತಿ ಸರ್ಕಾರವು ಕಳೆದ ತಿಂಗಳು ಎಲ್ಲ ರಿಲಯನ್ಸ್ ಫ್ರೆಶ್ ಬಿಡಿ ಮಾರಾಟ ಮಳಿಗೆಗಳನ್ನು ಮುಚ್ಚುವಂತೆ ಆಜ್ಞಾಪಿಸಿತ್ತು. ಈ ವರ್ಷಾರಂಭದಲ್ಲಿ ಜಾರ್ಖಂಡಿನ ರಾಂಚಿಯಲ್ಲಿ ಪ್ರತಿಭಟನಕಾರರು ರಿಲಯನ್ಸ್  ಫ್ರೆಶ್ ಬಿಡಿ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಬಲಾತ್ಕಾರವಾಗಿ ಮುಚ್ಚಿಸಿದ್ದರು.

2006: ಹಿರಿಯ ವಕೀಲ ಹಾಗೂ ಮಾಜಿ ಸಚಿವ ಪ್ರೊ. ಎಲ್.ಜಿ. ಹಾವನೂರು ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವರು ವಸ್ತುನಿಷ್ಠ ವರದಿಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.

2006: ಇಸ್ಲಾಂ ಬಗ್ಗೆ ಪೋಪ್ ಬೆನೆಡಿಕ್ಟ್ ಅವರು ಮಾಡಿರುವ ಟೀಕೆಗಳು ಧಾರ್ಮಿಕ  ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತವೆ ಎಂದು ಇಂಡೋನೇಷ್ಯ ಮತ್ತು ಪಾಕಿಸ್ತಾನಿ ಸರ್ಕಾರಗಳು ಮತ್ತು ಇಸ್ಲಾಮಿಕ್ ವಿದ್ವಾಂಸರು ದೂರಿದರು.

1967: ಹೈದರಾಬಾದ್ ಮುಖ್ಯಮಂತ್ರಿ ರಾಮಕೃಷ್ಣ ರಾವ್ ಬುರ್ಗುಲಾ ನಿಧನ.

1965: ಭಾರತ- ಪಾಕಿಸ್ತಾನ ನಡುವಿನ ಹಗೆತನ ನಿವಾರಣೆಗೆ ಅಮೆರಿಕ ಮಧ್ಯಪ್ರವೇಶಿಸಬೇಕು ಎಂದು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಮನವಿ ಮಾಡಿದರು.

 1953: ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ 8ನೇ ಅಧಿವೇಶನದ ಅಧ್ಯಕ್ಷರಾಗಿ ವಿಜಯಲಕ್ಷ್ಮಿ ಪಂಡಿತ್ ಅವರು ಚುನಾಯಿತರಾದರು. ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಹಾಗೂ ಪ್ರಥಮ ಮಹಿಳೆ ಎಂಬ ಕೀರ್ತಿ ಅವರಿಗೆ ಲಭಿಸಿತು.

1953: ಸಾಹಿತಿ ಪ್ರೇಮಾ ಸಿರ್ಸೆ ಜನನ.

1949: ಸಾಹಿತಿ ಸುಶೀಲಾ ಹೊನ್ನೇಗೌಡ ಜನನ.

1940: ಬ್ರಿಟನ್ ಕದನ ಬ್ರಿಟಿಷರ ಜಯದೊಂದಿಗೆ ಅಂತ್ಯಗೊಂಡಿತು. ಬ್ರಿಟನ್ ಮೇಲೆ ದಾಳಿ ನಡೆಸುವ ಉದ್ದೇಶದೊಂದಿಗೆ ಜರ್ಮನಿ ನಡೆಸಿದ ಸರಣಿ ವಾಯುದಾಳಿಗಳು ಬ್ರಿಟಿಷರ ಉನ್ನತ ತಂತ್ರಗಾರಿಕೆ, ಅತ್ಯಾಧುನಿಕ ವಾಯು ರಕ್ಷಣೆ, ರೇಡಾರ್ ನೆರವು ಹಾಗೂ ಜರ್ಮನ್ ಸಂಕೇತ  ಪತ್ತೆ ಕೌಶಲ್ಯಗಳ ಪರಿಣಾಮವಾಗಿ ವಿಫಲಗೊಂಡವು.

1939: ಸಾಹಿತಿ ಭಾಸ್ಕರ ಪಡುಬಿದ್ರಿ ಜನನ.

1935: ನ್ಯೂರೆಂಬರ್ಗ್ ಕಾನೂನುಗಳಿಂದ ಜರ್ಮನ್ ಯಹೂದಿಗಳು ಪೌರತ್ವ ವಂಚಿತರಾದರು. ಸ್ವಸ್ತಿಕವು ನಾಜಿ ಜರ್ಮನಿಯ ಅಧಿಕೃತ ಲಾಂಛನವಾಯಿತು.

1915: ಸಾಹಿತಿ ರೋಹಿಡೇಕರ್ ಜನನ.

1909: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಸ್ಥಾಪಕ ಕಾಂಜೀವರಂ ನಟರಾಜನ್ ಅಣ್ಣಾದೊರೈ ಜನನ.

1893: ಕವಿ, ಸಾಹಿತಿ, ಶಿಕ್ಷಕ ಉಗ್ರಾಣ ಮಂಗೇಶರಾವ್ (15-9-1893ರಿಂದ 11-12-1973) ಅವರು ಉಗ್ರಾಣ ಶಿವರಾಯರ ಮಗನಾಗಿ ಈದಿನ ಕುಂದಾಪುರದಲ್ಲಿ ಜನಿಸಿದರು. ಸಣ್ಣಕಥೆ, ಸಂಶೋಧನಾ ಗ್ರಂಥ, ಪ್ರಬಂಧ ಸೇರಿದಂತೆ ಕನ್ನಡ ಸಾಹಿತ್ಯಕ್ಕೆ ಅವರು ಹಲವಾರು ಕೃತಿಗಳನ್ನು ನೀಡಿದ್ದಾರೆ.

1883: ಬಾಂಬೆಯ (ಈಗಿನ ಮುಂಬೈ) ಎಂಟು ಮಂದಿ ನಿವಾಸಿಗಳು ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಮ್ಮಿನಲ್ಲಿ ಸಭೆ ಸೇರಿ `ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ'ಯನ್ನು ಸ್ಥಾಪಿಸಿದರು.

1860: ಭಾರತ ರತ್ನ, ಆಧುನಿಕ ಕರ್ನಾಟಕದ ಶಿಲ್ಪಿ, ಶತಾಯುಷಿ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಸರ್ ಎಂವಿ) (15-9-1860ರಿಂದ 12-4-1962) ಜನ್ಮದಿನ. ಈ ದಿನವನ್ನು ಎಂಜಿನಿಯರುಗಳ ದಿನವಾಗಿ ಆಚರಿಸಲಾಗುತ್ತಿದೆ. ಎಂಜಿನಿಯರ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ವಿಶ್ವೇಶ್ವರಯ್ಯ ಅವರು ಭಾರತದ ನದಿಗಳ ಸದ್ಭಳಕೆ ಬಗ್ಗೆ ಚಿಂತಿಸಿದ ಮೊದಲಿಗರು. ಮೈಸೂರು ರಾಜ್ಯದ ಆಡಳಿತ, ಅಭಿವೃದ್ಧಿಗೆ ಯೋಜನಾಬದ್ಧವಾಗಿ ಶ್ರಮಿಸಿದ ಅವರು ಅಖಿಲ ಭಾರತ ತಯಾರಕರ ಸಂಸ್ಥೆಯನ್ನು (1941) ಸ್ಥಾಪಿಸಿದರು. ಮೈಸೂರಿನ ದಿವಾನ ಹುದ್ದೆ ಸೇರಿ ಹಲವಾರು ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದರು.

1830: ರೈಲ್ವೆ ಅಪಘಾತದಲ್ಲಿ ಮೊದಲ ಸಾವು ಸಂಭವಿಸಿದ ದಿನ ಇದು. ಲಿವರ್ ಪೂಲ್- ಮ್ಯಾಂಚೆಸ್ಟರ್ ನಡುವೆ ಹೊಸದಾಗಿ ಅಳವಡಿಸಲಾದ ರೈಲಿನ ಉದ್ಘಾಟನಾ ಸಮಾರಂಭದಲ್ಲಿ ರೈಲಿನ ಅಡಿಗೆ ಸಿಲುಕಿ ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯ ವಿಲಿಯಂ ಹಸ್ ಕಿಸ್ಸನ್ ಮೃತರಾದರು. ರೈಲ್ವೇ ಹಳಿಯನ್ನು ಉದ್ಘಾಟಿಸಿದ ಪ್ರಧಾನಿ, ಡ್ಯೂಕ್ ಆಫ್ ವೆಲ್ಲಿಂಗ್ಟನ್ ಅವರನ್ನು ಭೇಟಿ ಮಾಡುವ ಸಲುವಾಗಿ ಅವರು ರೈಲ್ವೇ ಹಳಿ ದಾಟುತ್ತಿದ್ದಾಗ ಈ ದುರಂತ ಸಂಭವಿಸಿತು.

1821: ಕೋಸ್ಟರಿಕಾ, ಗ್ವಾಟೆಮಾಲಾ, ಹೊಂಡುರಾಸ್, ನಿಕರಾಗುವಾ ಮತ್ತು ಎಲ್ ಸಾಲ್ವಡಾರ್ ರಾಷ್ಟ್ರಗಳಿಗೆ ಸ್ವಾತಂತ್ರ್ಯ ಘೋಷಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, September 18, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 14

ಇಂದಿನ ಇತಿಹಾಸ

ಸೆಪ್ಟೆಂಬರ್ 14


ಜರ್ಮನಿಯ ಸೆಬಾಸ್ಟಿಯನ್ ವೆಟೆಲ್ ಅವರು ಫಾರ್ಮುಲಾ ಒನ್ ರೇಸ್ ಗೆದ್ದ ವಿಶ್ವದ ಅತಿ ಕಿರಿಯ ಚಾಲಕ ಎಂಬ ಹೆಸರು ತಮ್ಮದಾಗಿಸಿದರು. ಮೊಂಜಾದಲ್ಲಿ ನಡೆದ ಇಟಾಲಿಯನ್ ಗ್ರ್ಯಾಂಡ್ ಪ್ರಿ ರೇಸ್ ಗೆಲ್ಲುವ ಮೂಲಕ ಟೊರೊ ರೊಸೊ ತಂಡದ ವೆಟೆಲ್ ಈ ಗೌರವ ಸಂಪಾದಿಸಿದರು,


2015: ನವದೆಹಲಿ: ಭಾರತದಲ್ಲಿ ವಿಶ್ವ ಬ್ಯಾಂಕ್ ಸಮೀಕ್ಷೆ ನಡೆಸಿ ಸಿದ್ಧಪಡಿಸಿರುವ ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ 1ನೇ ಸ್ಥಾನ ಪಡೆದಿದ್ದರೆ, ಕರ್ನಾಟಕ 9ನೇ ಸ್ಥಾನ ಪಡೆಯಿತು. ಉದ್ಯಮ ಸ್ಥಾಪಿಸಲು ಪೂರಕ ವಾತಾವರಣ, ಜಾಗದ ಲಭ್ಯತೆ, ಕಾರ್ಮಿಕರು ಮತ್ತು ಪರಿಸರ ಇಲಾಖೆ ಪರವಾನಗಿ, ರಾಜ್ಯ ಸರ್ಕಾರಗಳ ಸಹಕಾರ, ತೆರಿಗೆ ಪಾವತಿ ನಿಯಮಾವಳಿಗಳು, ಮೂಲಸೌಕರ್ಯ, ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಂತೆ ವಿಶ್ವಬ್ಯಾಂಕ್ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಆಂಧ್ರಪ್ರದೇಶ
ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದು, ಜಾರ್ಖಂಡ್ 3ನೇ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಛತ್ತೀಸ್​ಗಢ (4ನೇ), ಮಧ್ಯಪ್ರದೇಶ (5ನೇ), ರಾಜಸ್ಥಾನ (6ನೇ), ಒಡಿಸ್ಸಾ (7ನೇ), ಮಹಾರಾಷ್ಟ್ರ (8ನೇ), ಕರ್ನಾಟಕ (9ನೇ) ಮತ್ತು ಉತ್ತರ ಪ್ರದೇಶ(10ನೇ) ಸ್ಥಾನ ಪಡೆದವು. ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಮಿಜೋರಾಮ್ ಕೊನೆಯ ಸ್ಥಾನ ಪಡೆದಿದ್ದು, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ, ನಾಗಲ್ಯಾಂಡ್ ಮತ್ತು ಅರುಣಾಚಲ ಪ್ರದೇಶಗಳು ನಂತರದ ಸ್ಥಾನ ಪಡೆದಿವೆ. ಪಶ್ಚಿಮ ಬಂಗಾಳ (11ನೇ), ತಮಿಳುನಾಡು (12ನೇ), ಹರ್ಯಾಣ (14ನೇ), ದೆಹಲಿ (15ನೇ), ಪಂಜಾಬ್ (16ನೇ), ಹಿಮಾಚಲ ಪ್ರದೇಶ (17ನೇ), ಕೇರಳ (18ನೇ), ಗೋವಾ (19ನೇ), ಬಿಹಾರ (21ನೇ) ಮತ್ತು ಅಸ್ಸಾಂ (22ನೇ) ಸ್ಥಾನ ಪಡೆದವು. ವಿಶ್ವಮಟ್ಟದಲ್ಲಿ ವಿಶ್ವಬ್ಯಾಂಕ್ 182 ದೇಶಗಳಲ್ಲಿ ಸಮೀಕ್ಷೆ ನಡೆಸಿತ್ತು. ಉದ್ಯಮ ಸ್ನೇಹಿ ವಾತಾವರಣ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 142ನೇ ಸ್ಥಾನ ಪಡೆದಿದೆ. ಕೇಂದ್ರ ಸರ್ಕಾರವು ದೇಶವನ್ನು ಉದ್ಯಮಸ್ನೇಹಿ ದೇಶವಾಗಿಲು ಕೆಲವೊಂದು ಅಗತ್ಯ ಕ್ರಮ ತೆಗೆದುಕೊಂಡಿದೆ.


2015:  ನವದೆಹಲಿ: ಭರವಸೆಯ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಈದಿನ ಬಿಡುಗಡೆಯಾದ ಸಿಂಗಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ 125ನೇ ಸ್ಥಾನ ಪಡೆಯುವ ಮೂಲಕ ಜೀವಮಾನ ಶ್ರೇಷ್ಟ ಸಾಧನೆ ಮಾಡಿದರು. ಇತ್ತೀಚೆಗೆ ಯೂಕಿ ಎಟಿಪಿ ಶಾಂಘಯ್ ಚಾಲೆಂಜರ್ ಪ್ರಶಸ್ತಿ ಜಯಿಸಿದ್ದರು. ಜಯದೊಂದಿಗೆ 80 ಪಾಯಿಂಟ್ ಪಡೆದಿದ್ದ ಯೂಕಿ 20 ಸ್ಥಾನ ಮೇಲೇರಿ 125 ನೇ ಸ್ಥಾನ ಪಡೆದಿದ್ದಾರೆ. ಶಾಂಘಯ್ ಚಾಲೆಂಜರ್​ನ ಮೊದಲ ಸುತ್ತಿನಲೇ ಹೊರಬಿದ್ದಿದ್ದ ಮತ್ತೊಬ್ಬ ಭರವಸೆಯ ಆಟಗಾರ ಸೋಮದೇವ್ 12 ಸ್ಥಾನ ಕುಸಿತ ಕಂಡು 164ನೇ ಸ್ಥಾನ ಪಡೆದರು.  ಉಳಿದಂತೆ ಸಿಂಗಲ್ಸ್ ವಿಭಾಗದಲ್ಲಿ ಸಾಕೇತ್ ಮ್ಯಾನೆನಿ 195ನೇ ಸ್ಥಾನ, ರಾಮಕುಮಾರ್ ರಾಮನಾಥನ್ 218ನೇ ಸ್ಥಾನ ಪಡೆದರು. ಡಬಲ್ಸ್​ನಲ್ಲಿ ರೋಹನ್ ಭೋಪಣ್ಣ 13ನೇ ಸ್ಥಾನ ಪಡೆದಿದ್ದು, ಲಿಯಾಂಡರ್ ಪೇಸ್ 33ನೇ ಸ್ಥಾನ ಪಡೆದರು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಮಿರ್ಜಾ ತಮ್ಮ ಪ್ರಾಬಲ್ಯ ಮುಂದುವರೆಸಿ ಮೊದಲ ಸ್ಥಾನದಲ್ಲಿ ಮುಂದುವರೆದರು. ಸ್ವಿಜರ್​ಲೆಂಡ್​ನ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಹಿಂದಿನ ದಿನ ನಡೆದ ಯುಎಸ್​ಓಪನ್ ಡಬಲ್ಸ್ ಫೈನಲ್ಸ್​ನಲ್ಲಿ ಜಯಗಳಿಸುವ ಮೂಲಕ ಪ್ರಶಸ್ತಿ ಪಡೆದಿದ್ದರು.

2015: ಕಠ್ಮಂಡು
: ನೇಪಾಳವನ್ನು ಹಿಂದು ರಾಷ್ಟ್ರವೆಂದು ಘೋಷಿಸಬೇಕೆಂಬ ವಿಧೇಯಕಕ್ಕೆ ನೇಪಾಳ ಸಂಸತ್ತಿನಲ್ಲಿ ಸೋಲುಂಟಾಯಿತು.
ಹೀಗಾಗಿ ನೇಪಾಳ ಜಾತ್ಯತೀತ ರಾಷ್ಟ್ರವಾಗಿ ಮುಂದುವರೆಯಲಿದೆ ಎಂದು ಸಂಸತ್ತು ತಿಳಿಸಿತು. ಹಿಂದೂಗಳ ಸಂಖ್ಯೆ ಹೆಚ್ಚಾಗಿರುವ ನೇಪಾಳವನ್ನು ಹಿಂದು ರಾಷ್ಟ್ರವೆಂದು ಘೋಷಿಸಬೇಕೆಂದು ಪ್ರದರ್ಶನಗಳು ನಡೆದಿದ್ದವು. ಇದೇ ಸಂದರ್ಭದಲ್ಲಿ ನೇಪಾಳದ ಹಿಂದು ಪರ ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ (ಆರ್​ಪಿಪಿ-ಎನ್) ಅಧ್ಯಕ್ಷ ಕಮಲ್ ಥಾಪ ಸಂಸತ್ತಿನಲ್ಲಿ ಹಿಂದು ರಾಷ್ಟ್ರ ವಿಧೇಯಕ ಮಂಡಿಸಿದ್ದರು. ಕಾನೂನಿನಲ್ಲಿ ತಿದ್ದುಪಡಿ ತರುವ ಮೂಲಕ ನೇಪಾಳವನ್ನು ಹಿಂದು ರಾಷ್ಟ್ರವೆಂದು ಘೋಷಿಸಲು ಒತ್ತಾಯಿಸಿತ್ತು. 601 ಸದಸ್ಯ ಬಲದ ನೇಪಾಳ ಸಂಸತ್ತಿನಲ್ಲಿ ಸೋಮವಾರ 2/3 ಬಹುಮತದಿಂದ ವಿಧೇಯಕಕ್ಕೆ ಸೋಲುಂಟಾಯಿತು.. 2008ರಲ್ಲಿ ನೇಪಾಳ ಸಂಸತ್ತು ನೇಪಾಳವನ್ನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿತ್ತು. ಅದೇ ಸ್ಥಾನಮಾನವನ್ನು ಮುಂದುವರೆಸುವುದಾಗಿ ಸಂಸತ್ತು ತಿಳಿಸಿತು. ಜುಲೈನಲ್ಲಿ ನಡೆದಿದ್ದ ಜನಮತ ಸಂಗ್ರಹದಲ್ಲಿ ಬಹುಪಾಲು ಜನರು ಹಿಂದು ಅಥವಾ ಧಾರ್ಮಿಕ ಸ್ವಾತಂತ್ರ್ಯ ಹೊಂದಿರುವ ರಾಷ್ಟ್ರ ಬೇಕೆಂದು ತಿಳಿಸಿದ್ದರು.
2015: ನವದೆಹಲಿ: ಸರ್ಕಾರಿ ಜಾಹಿರಾತುಗಳಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಪಕ್ಷದ ಮುಖಂಡರ ಭಾವಚಿತ್ರ ಬಳಕೆಗೆ ನಿರ್ಬಂಧ
ವಿಧಿಸಿ ನೀಡಿರುವ ಆದೇಶವನ್ನು ಮರುಪರಿಶೀಲನೆ ಮಾಡುವಂತೆ ಕೋರಿ ಕರ್ನಾಟಕ, ತಮಿಳು ನಾಡು, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್  ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿತು. ಜೊತೆಗೇ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ತ ಮಂಡಳಿ ಮತ್ತು ಎನ್​ಜಿಒ ಕಾಮನ್ ಕಾಸ್​ಗೂ ನೋಟಿಸ್ ನೀಡಿತು. ಸಾರ್ವಜನಿಕರ ತೆರಿಗೆ ಹಣದಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಮಂತ್ರಿಗಳ ಭಾವಚಿತ್ರಗಳನ್ನೊಳಗೊಂಡ ಸರ್ಕಾರಿ ಜಾಹಿರಾತುಗಳನ್ನು ಬಳಸಲಾಗುತ್ತಿದೆ. ಇದರಿಂದ ವೈಯುಕ್ತಿಕ ಪ್ರಚಾರಕ್ಕಾಗಿ ತೆರಿಗೆ ಹಣ ಬಳಕೆಯಾಗುತ್ತಿದೆ ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರಿಂ ಕೋರ್ಟ್ ಆದೇಶ ನೀಡಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ಮಾತ್ರ ವಿನಾಯಿತಿ ನೀಡಲಾಗಿತ್ತು. ಅದರಂತೆ ಕೇಂದ್ರ ಸರ್ಕಾರಿ ಜಾಹೀರಾತುಗಳಲ್ಲಿ ಪ್ರಧಾನಿ, ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿಗಳ ಭಾವಚಿತ್ರ ಬಳಕೆಗೆ ಅವಕಾಶ ನೀಡಲಾಗಿತ್ತು. ವಿನಾಯಿತಿ ಪ್ರಶ್ನಿಸಿರುವ ನಾಲ್ಕು ರಾಜ್ಯಗಳು ಇದೀಗ ತೀರ್ಪು ಮರು ಪರಿಶೀಲನೆಗೆ ಒತ್ತಾಯಿಸಿದ್ದವು. ಅಕ್ಟೋಬರ್ 13ರಂದು ಹಾಜರಾಗಿ ತನ್ನ ಅಭಿಪ್ರಾಯ ಹೇಳುವಂತೆ ನ್ಯಾಯಮೂರ್ತಿ ರಂಜನ್ ಗೊಗಾಯ್ ಹಾಗೂ ಪಿನಕಿ ಚಂದ್ರ ಘೋಷ್ ಕೇಂದ್ರ ಹಾಗೂ ಸರ್ಕಾರೇತರ ಸಂಸ್ಥೆಗೆ ನೋಟೀಸ್ ಜಾರಿ ಮಾಡಿದರು.
2015: ನವದೆಹಲಿ: ಅಖಂಡ ಹಿಂದು ರಾಷ್ಟ್ರದ ಕಲ್ಪನೆ ನೀಡಿದ ಸ್ವಾತಂತ್ರ್ಯ ಸೇನಾನಿ, ಕಟ್ಟಾ ಹಿಂದುತ್ವವಾದಿ ವೀರ ಸಾವರ್ಕರ್ಗೆ ದೇಶದ ಪರಮೋಚ್ಛ ಗೌರವವಾದಭಾರತ ರತ್ನನೀಡುವಂತೆ ಶಿವಸೇನೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು. ಈ ಹಿಂದಿನ ಸರ್ಕಾರ ವೀರ ಸಾವರ್ಕರ್ ಅವರ ಕೊಡುಗೆಯನ್ನು ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸಿದೆ. ಆಗಿರುವ ಲೋಪಗಳನ್ನು ಸರಿಪಡಿಸಿ ವಿನಾಯಕ ದಾಮೋದರ ಸಾವರ್ಕರ್​ಗೆ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿ ಶಿವಸೇನೆ ಮುಖಂಡ ಸಂಜಯ್ ರಾವತ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರು. ಹಿಂದು ರಾಷ್ಟ್ರ ನಿರ್ಮಾಣದ ಹೋರಾಟಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಸಾವರ್ಕರ್ ಅವರ ಸಾಧನೆ, ಕೊಡುಗೆಗಳನ್ನು ಹಿಂದಿನ ಸರ್ಕಾರ ಮರೆಮಾಚಿದೆ. ಸಾವರ್ಕರ್​ಗೆ ಮರಣೋತ್ತರವಾಗಿ ದೇಶದ ಪರಮೋಚ್ಛ ಗೌರವ ದೊರಕಬೇಕು ಎನುವುದು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯ ಅಭಿಪ್ರಾಯವಾಗಿದೆ. ಹಿನ್ನೆಲೆಯಲ್ಲಿ ತಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ರಾಜ್ಯ ಸಭೆ ಸದಸ್ಯರೂ ಆಗಿರುವ ರಾವತ್ ಪತ್ರದಲ್ಲಿ ಕೋರಿದರು.
2015:  ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿ ಸಂಘಟನೆಗಳ ನಡುವೆ ಸಂಘರ್ಷ ಏರ್ಪಟ್ಟಿದ್ದು, ಹಿಜ್ಬುಲ್ ಮುಜಾಹಿದೀನ್ನಿಂದ ಬೇರೆಯಾಗಿ ತಮ್ಮದೇ ಸಂಘಟನೆ ಕಟ್ಟಿದ್ದ ಇಬ್ಬರನ್ನು ಮತ್ತು ಮತ್ತೊಬ್ಬ ಅಜ್ಞಾತ ವ್ಯಕ್ತಿಯನ್ನು ಹಿಜ್ಬುಲ್ ಉಗ್ರರು ಹತ್ಯೆ ಮಾಡಿದರು. ಈದಿನ  ಬೆಳಗ್ಗೆ ಬಾರಾಮುಲ್ಲಾ ಜಿಲ್ಲೆಯ ಪಟ್ಟನ್ ಪ್ರದೇಶದಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದ್ದವು. ಅದರಲ್ಲಿ ಇಬ್ಬರನ್ನು ಗುರುತಿಸಲಾಗಿದ್ದು, ಒಬ್ಬ ವ್ಯಕ್ತಿ ಸೋಪುರೆಯ ಅಮೀರ್ ಖ್ವದಿರ್ ರಿಷಿ ಮತ್ತು ಪಟ್ಟನ್​ನ ಲೋಲಿಪೊರದ ಆಶಿಕ್ ವಾನಿ ಎಂದು ಪೊಲೀಸರು ತಿಳಿಸಿದರು.. ರಿಷಿ ಮತ್ತು ವಾನಿ ಲಷ್ಕರ್ ಇಸ್ಲಾಮ್ ಎಂಬ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಂಘಟನೆಯು ಹಿಜ್ಬುಲ್ ಮುಜಾಹಿದೀನ್ ಸಂಘಟನೆಯಿಂದ ಬೇರ್ಪಟ್ಟು ತನ್ನದೇ ಅಸ್ಥಿತ್ವ ಕಂಡು ಕೊಳ್ಳುತ್ತಿತ್ತು. ವಾನಿ ಕಳೆದ ವರ್ಷದಿಂದ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದ, ರಿಷಿ ಜುಲೈನಲ್ಲಿ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗಿದ್ದ.  ಹಿಜ್ಬುಲ್ ಮುಜಾಹಿದೀನ್​ನಲ್ಲಿ ಒಡಕುಂಟಾಗಿದ್ದು, ನಜ್ಜರ್ ಎಂಬ ಸಂಘಟನೆ ಬೇರ್ಪಟ್ಟಿದೆ. ಸಂಘಟನೆ ಜಮ್ಮು ಮತ್ತು ಕಾಶ್ಮೀರದ ಟೆಲಿಫೋನ್ ಟವರ್ ಮತ್ತು ಟೆಲಿಫೋನ್ ಅಂಗಡಿಗಳು ಮತ್ತು ಆಫೀಸಿನ ಮೇಲೆ ದಾಳಿ ನಡೆಸಿತ್ತು. ಹಿಜ್ಬುಲ್ ಮುಜಾಹಿದೀನ್ ಮತ್ತು ಅದರಿಂದ ಬೇರ್ಪಟ್ಟ ಇತರ ಸಂಘಟನೆಗಳ ನಡುವೆ ಘರ್ಷಣೆ ನಡೆಯುತ್ತಿತ್ತು. ಹಿನ್ನೆಲೆಯಲ್ಲಿ ಮೂವರ ಹತ್ಯೆ ನಡೆದಿರಬಹುದು ಎಂದು ಪೊಲೀಸರು ತಿಳಿಸಿದರು. ಮೂವರ ಮೃತದೇಹ ಪತ್ತೆಯಾದ ನಂತರ ಜನತೆ ಪ್ರತಿಭಟನೆ ನಡೆಸಿದರು. ಪಟ್ಟನ್, ಪಲಹಾಲ್ ನಗರಗಳು ಮತ್ತು ಶ್ರೀನಗರ-ಬಾರಮುಲ್ಲಾ ಹೆದ್ದಾರಿಯನ್ನು ತಡೆದಿದ್ದರು.

2015: ನ್ಯೂಯಾರ್ಕ್: ಸೆರ್ಬಿಯಾದ ನೊವಾಕ್ ಜೋಕೋವಿಕ್  ಹಿಂದಿನ ದಿನ  ತಡರಾತ್ರಿ ನಡೆದ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್​ನಲ್ಲಿ ಸ್ವಿಜರ್​ಲೆಂಡ್​ನ ರೋಜರ್ ಫೆಡರರ್ ಅವರನ್ನು 6-4, 5-7, 6-4, 6-4ರಿಂದ ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು. ಜೋಕೋವಿಕ್​ಗೆ 2015ನೇ ಟೆನಿಸ್ ಋತುವಿನ 3ನೇ ಹಾಗೂ ಒಟ್ಟಾರೆ ವೃತ್ತಿಜೀವನದ 10ನೇ ಗ್ರಾಂಡ್​ಸ್ಲಾಂ ಪ್ರಶಸ್ತಿ ಇದು. ತನ್ಮೂಲಕ ಅವರು 10 ಗ್ರಾಂಡ್​ಸ್ಲಾಂ ಪ್ರಶಸ್ತಿ ಸಾಧನೆ ಮಾಡಿದ್ದ ಅಮೆರಿಕದ ಬಿಲ್ ಟಿಲ್ಡೆನ್ ಅವರ ಸಾಲಿಗೆ ಸೇರ್ಪಡೆಗೊಂಡರು. ಮೂರು ಗಂಟೆಗಳ ಕಾಲ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆವುಂಟಾಗಿತ್ತು. ಸ್ಟೇಡಿಯಂನಲ್ಲಿ ಕಿಕ್ಕಿರಿದು ತುಂಬಿದ್ದ ಫೆಡರರ್ ಅವರ ಅಭಿಮಾನಿ ಬಳಗದ ನಡುವೆ ಏಕಾಂಗಿ ಹೋರಾಟ ನಡೆಸಿದ ವಿಶ್ವ ನಂ.1 ಆಟಗಾರ, ವಿಶ್ವ ನಂ.2 ಆಟಗಾರನನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಈ ಬಾರಿಯ ಫ್ರೆಂಚ್ ಓಪನ್ ಫೈನಲ್​ನಲ್ಲಿ ಸ್ವಿಜರ್​ಲೆಂಡ್​ನ ಸ್ಟಾನ್ಸಿಲಾಸ್ ವಾವ್ರಿಂಕಾ ವಿರುದ್ಧ ಸೋಲದೇ ಹೋಗಿದ್ದಲ್ಲಿ ಸೆರ್ಬಿಯಾ ಆಟಗಾರ ಅತಿ ಅಪರೂಪದ ಕ್ಯಾಲೆಂಡರ್ ಗ್ರಾಂಡ್​ಸ್ಲಾಂ ಸಾಧನೆ ಮಾಡಿದ ಶ್ರೇಯಕ್ಕೆ ಪಾತ್ರರಾಗಿರುತ್ತಿದ್ದರು. ಮಳೆಯಿಂದಾಗಿ ತೇವಗೊಂಡಿದ್ದ ಕೋರ್ಟ್​ನಲ್ಲಿ ಚುರುಕಾಗಿ ಚಲಿಸಲು ಪರದಾಡುತ್ತಿದ್ದ ಜೋಕೋವಿಕ್ ಬಿದ್ದು ಬಲ ಮಂಡಿ ಹಾಗೂ ಮೊಣಕೈಗೆ ಗಾಯ ಮಾಡಿಕೊಂಡರು. ಆದರೆ ಗಾಯಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡ ಅವರು ಪುಟಿದೆದ್ದು ಆಟಕ್ಕೆ ಮರಳಿದ ಅವರು ಪ್ರಶಸ್ತಿಗೆ ಮುತ್ತಿಕ್ಕಿದರು.

2015: ಗುವಾಹತಿ: ಕಳೆದ ವರ್ಷ ನಡೆದ ಆದಿವಾಸಿ ಹತ್ಯಾಕಾಂಡದಲ್ಲಿ ಷಾಮೀಲಾಗಿದ್ದನೆಂದು ಆಪಾದಿಸಲಾಗಿರುವ ಎನ್​ಡಿಎಫ್​ಬಿ (ಎಸ್) ಉಗ್ರಗಾಮಿಯೊಬ್ಬನನ್ನು ಅಸ್ಸಾಮಿನ ಚಿರಾಂಗ್ ಜಿಲ್ಲೆಯಲ್ಲಿ ಶಸ್ತ್ರಗಳು ಮತ್ತು ಮದ್ದು ಗುಂಡು ಸಹಿತವಾಗಿ ಬಂಧಿಸಲಾಯಿತು. ಉಗ್ರಗಾಮಿಯನ್ನು ಅಜೆ ನದಿ ಸಮೀಪದ ಧಾಲಿಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿಂದಿನ ದಿನ ತಡರಾತ್ರಿಯಲ್ಲಿ ಬಂಧಿಸಲಾಯಿತು ಎಂದು ಐಜಿಪಿ ಎಲ್.ಆರ್. ಬಿಷ್ನೋಯಿ ಹೇಳಿದರು. ಬಂಧಿತ ಉಗ್ರಗಾಮಿಯನ್ನು ಥೋಪ್ಸಾ ನಝುರಿ (28) ಎಂಬುದಾಗಿ ಗುರುತಿಸಲಾಗಿದ್ದು, ಈತ ಕಳೆದ ವರ್ಷ ಡಿಸೆಂಬರ್ 23ರಂದು ಸುಮಾರು 80 ಆದಿವಾಸಿಗಳನ್ನು ಬಲಿಪಡೆದುಕೊಂಡ ಹತ್ಯಾಕಾಂಡದಲ್ಲಿ ಷಾಮೀಲಾಗಿದ್ದ. ಹಲವಾರು ಅಪಹರಣ ಕೃತ್ಯಗಳಲ್ಲೂ ಈತ ಷಾಮೀಲಾಗಿದ್ದ ಎಂದು ಬಿಷ್ನೋಯಿ ನುಡಿದರು. ಒಂದು 7.65 ಪಿಸ್ತೂಲ್, ಎರಡು ಸುತ್ತು ಮದ್ದುಗುಂಡು ಮತ್ತು ಒಂದು ಗ್ರೆನೇಡ್​ನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.

2015: ಭೋಪಾಲ್: ಜಬುವಾದ ಹೋಟೆಲ್ ಒಂದರಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಕೆಲ ದಿನಗಳ ಹಿಂದಷ್ಟೇ ಸಿಲಿಂಡರ್ ಸ್ಪೋಟಗೊಂಡು ಹೋಟೆಲ್​ನ ಕಟ್ಟಡದ ಮೇಲ್ಛಾವಣಿಯೇ ಕುಸಿದು ಬಿದ್ದ ಪರಿಣಾಮ 88 ಮಂದಿ ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಘಟನೆಯ ಬಳಿಕ ಇಡೀ ಪ್ರಕರಣ ಕೆಲವೊಂದು ಅನುಮಾನಗಳಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪೋಟಕ್ಕೆ ಕಾರಣವೇನು ಎನ್ನುವುದರ ತನಿಖೆಗೆ ಸರ್ಕಾರ ವಿಶೇಷ ತಂಡ ರಚಿಸಿದೆ. ಈ ಕುರಿತು ಭೋಪಾಲ್​ನಲ್ಲಿ ಸೋಮವಾರ ಪ್ರತಿಕ್ರಿಯಿಸಿರುವ ಸಿಎಂ ಚೌಹಾಣ್, ಸಿಟ್ ತನಿಖೆ ನಡೆಸುವುದಾಗಿ ಹೇಳಿದರು.
2015: ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗಳಿಗಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್​ಡಿಎ) ಸ್ಥಾನ ಹೊಂದಾಣಿಕೆಯನ್ನು ಬಿಜೆಪಿ ಅಂತಿಮಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ದೆಹಲಿಯಲ್ಲಿ ಪ್ರಕಟಿಸಿದರು. ಸ್ಥಾನ ಹೊಂದಾಣಿಕೆ ಪ್ರಕಾರ 243 ಸ್ಥಾನಗಳ ಪೈಕಿ ಬಿಜೆಪಿ 160, ಎಲ್​ಜೆಪಿ 40, ಎಲ್​ಎಸ್​ಪಿ 23 ಮತ್ತು ಜಿತನ್ ರಾಂ ಮಾಂಝಿ ಅವರ ಎಚ್​ಎಎಂ 20 ಸ್ಥಾನಗಳಿಗೆ ಸ್ಪರ್ಧಿಸಲಿವೆ ಎಂದು ಷಾ ಹೇಳಿದರು. ಬಿಹಾರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರಥ್ಯ ವಹಿಸುವರು. ಎನ್​ಡಿಎ ಅಂಗ ಪಕ್ಷಗಳ ಪರವಾಗಿಯೂ ಅವರು ಪ್ರಚಾರ ಮಾಡಲಿದ್ದಾರೆ ಎಂದು ಷಾ ಹೇಳಿದರು.

2015: ಮುಂಬೈ: ಸೆಪ್ಟೆಂಬರ್ 17ರಂದು ಮಾಂಸ ಮಾರಾಟದ ಮೇಲೆ ವಿಧಿಸಲಾದ ನಿಷೇಧಕ್ಕೆ ಬಾಂಬೆ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿತು. ಆದರೆ ಆದಿನ ಪ್ರಾಣಿಗಳ ವಧೆ ಮೇಲೆ ವಿಧಿಸಲಾದ ನಿಷೇಧ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ಎರಡು ದಿನಗಳ ಕಾಲ ಮಾಂಸ ಮಾರಾಟವನ್ನು ನಿಷೇಧಿಸುವ ಸುತ್ತೋಲೆಯನ್ನು ಸರ್ಕಾರ 2004ರಲ್ಲೇ ಹೊರಡಿಸಿದ್ದರೂ, ಅದನ್ನು ಸಂಪೂರ್ಣವಾಗಿ ಎಂದೂ ಜಾರಿಗೊಳಿಸಿಲ್ಲ ಎಂದು ಹೈಕೋರ್ಟ್ ಹೇಳಿತು.

2015: ಹೈದರಾಬಾದ್: ಪಶ್ಚಿಮ ಗೋದಾವರಿ ಜಿಲ್ಲೆಯ ಗುಂಡೆಪಲ್ಲಿ ಬಳಿ ಕಾರ್ವಿುಕರನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿ ಹೊಡೆದ ಪರಿಣಾಮ 18 ಕಾರ್ವಿುಕರು ಸ್ಥಳದಲ್ಲೇ ಮೃತರಾದರು. ಸುಮಾರು 17ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ನಿದ್ದೆ ಮಂಪರಿನಲ್ಲಿದ್ದ ಲಾರಿ ಚಾಲಕ ತೂಕಡಿಸಿದಾಗ ಆತನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆಯಿತು.. ಅದೃಷ್ಟವಶಾತ್ ಬಚಾವಾದ ಲಾರಿ ಚಾಲಕ ಮತ್ತು ಕ್ಲೀನರ್ ಪೊಲೀಸರಿಗೆ ಶರಣಾದರು. ವಿಜಯವಾಡದಿಂದ ವಿಶಾಖಪಟ್ಟಣಕ್ಕೆ ಲಾರಿಯಲ್ಲಿ ಹಾರು ಬೂದಿಯನ್ನು ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಲಾರಿ ಪಲ್ಟಿ ಹೊಡೆದ ಪರಿಣಾಮ, ಅದರಲ್ಲಿದ್ದ ಕಾರ್ವಿುಕರು ಹಾರುಬೂದಿಯೊಳಗೆ ಸಿಲುಕಿಕೊಂಡು ಮೃತರಾದರು. ಹತ್ತಿರದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ವಿುಕರು ಪಾಳಿ ಮುಗಿಸಿಕೊಂಡು ತಮ್ಮ ಊರಿಗೆ ತೆರಳಲು ಏಲೂರು ಬಳಿ ಲಾರಿಯನ್ನು ಹತ್ತಿದ್ದರು.

2015: ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ವಿಷ್ಣು ಅವತಾರ ವಿವಾದಕ್ಕೆ ಸಂಬಂಧಿಸಿದಂತೆ ಧೋನಿ ವಿರುದ್ಧ ಕ್ರಿಮಿನಲ್ ಖಟ್ಲೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು.

2015: ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸ್ಥಾನ ಪಡೆಯುವ ತನ್ನ ಸುದೀರ್ಘ ಹೋರಾಟದಲ್ಲಿ ಭಾರತದ ಪಾಲಿಗೆ ಈದಿನ (ಸೋಮವಾರ) ನಿರ್ಣಾಯಕ ದಿನವಾಯಿತು ವಿಶ್ವಸಂಸ್ಥೆಯ 200 ಸದಸ್ಯರ ರಾಷ್ಟ್ರಗಳು ಭದ್ರತಾ ಮಂಡಳಿಯನ್ನು ಸುಧಾರಿಸಲು ಕರೆ ನೀಡುವ ದಾಖಲೆಗೆ ಸರ್ವಾನುಮತದ ಸಮ್ಮದಿ ನೀಡಿದವು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸೇರ್ಪಡೆಯಾಗುವ ಭಾರತದ ಯತ್ನದಲ್ಲಿ ಇನ್ನೊಂದು ಹೆಜ್ಜೆಯ ಮುನ್ನಡೆಯಾಯಿತು. ವಿಶ್ವಸಂಸ್ಥೆಯ ಉನ್ನತ ನೀತಿ ನಿರೂಪಕ ಸಂಸ್ಥೆಯಾದ ಭದ್ರತಾ ಮಂಡಳಿ ಪ್ರಸ್ತುತ 15 ಸದಸ್ಯರನ್ನು ಹೊಂದಿವೆ. ಈ ಪೈಕಿ ಚೀನಾ, ರಷ್ಯಾ ಮತ್ತು ಅಮೆರಿಕ ಸೇರಿದಂತೆ ಐದು ರಾಷ್ಟ್ರಗಳು ಕಾಯಂ ಸದಸ್ಯ ರಾಷ್ಟ್ರಗಳು. ಇದೇ ಮೊತ್ತ ಮೊದಲ ಬಾರಿಗೆ ವಿವಿಧ ರಾಷ್ಟ್ರಗಳು ಭದ್ರತಾ ಮಂಡಳಿಯ ಸುಧಾರಣೆಗೆ ಸಂಬಂಧಿಸಿದಂತೆ ’ನಿರ್ಣಯವು ಏನು ಹೇಳಬೇಕು’ ಎಂಬ ಬಗ್ಗೆ ಲಿಖಿತ ಸಲಹೆಗಳನ್ನು ಸಲ್ಲಿಸಿವೆ. ಭಾರತದ ಯತ್ನವನ್ನು ವಿಫಲಗೊಳಿಸುವ ಯತ್ನವಾಗಿ ಎಂಬಂತೆ ಅಮೆರಿಕ, ಚೀನಾ ಮತ್ತು ರಷ್ಯಾ ಈ ಕೆಲಸದಲ್ಲಿ ಭಾಗಿಯಾಗಿರಲಿಲ್ಲ. ದಾಖಲೆ ಕುರಿತ ಮಾತುಕತೆಗಳನ್ನು ಔಪಚಾರಿಕವಾಗಿ ಇನ್ನೊಂದು ವರ್ಷಕ್ಕೆ ವಿಸ್ತರಿಸಬೇಕೇ ಎಂಬ ಬಗ್ಗೆ ವಿಶ್ವಸಂಸ್ಥೆಯು ಪರಿಶೀಲಿಸಿತು.. ಆದರೆ ಭದ್ರತಾ ಮಂಡಳಿ ವಿಸ್ತರಣೆಗೆ ಚೀನಾ ಪ್ರಬಲ ವಿರೋಧ ವ್ಯಕ್ತ ಪಡಿಸಿತ್ತು.

2015: ಬೆಂಗಳೂರು: ರಾಜ್ಯದಲ್ಲಿ ಮಳೆ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಾಗುವುದಿಲ್ಲವೆಂದು ರಾಜ್ಯ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ತಮಿಳುನಾಡು ಸಿಎಂಗೆ ಪತ್ರ ಬರೆದರು.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ತಮಿಳುನಾಡು ಸಿಎಂ ಜಯಲಲಿತಾ, ತಾವು ಮಧ್ಯಪ್ರವೇಶಿಸಿ ನ್ಯಾಯಾಧಿಕರಣದ ತೀರ್ಪಿನನ್ವಯ ಕಾವೇರಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿರುವ ಮುಖರ್ಜಿ, ಸಂಕಟ ಸೂತ್ರದನ್ವಯ ತಮಿಳುನಾಡಿಗೆ ಸಾಕಷ್ಟು ಕಾವೇರಿ ನೀರನ್ನು ಬಿಡಲಾಗಿದೆ. ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನೀರು ಹರಿಸಲು ಸಾಧ್ಯವಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು.

2015: ಹಾಸನ: ಶ್ರವಣಬೆಳಗೊಳ ಹೋಬಳಿ ರಾಚೇನಹಳ್ಳಿಯಲ್ಲಿ ಹೇಮಾವತಿ ಎಡದಂಡೆ ನಾಲೆ ಒಡೆದು, ಅಪಾರ ಪ್ರಮಾಣದ ನೀರು ಪೋಲಾಯಿತು. ಜೊತೆಗೆ ಸಮೀಪದಲ್ಲಿರುವ ಹೊಲಗದ್ದೆಗಳಿಗೆ ನೀರು ನುಗ್ಗಿದ್ದು ಭಾರಿ ಪ್ರಮಾಣದ ಬೆಳೆ ನಷ್ಟವಾಯಿತು. ಮಂಡ್ಯ ಜಿಲ್ಲೆಗೆ ನೀರು ಪೂರೈಸುವ ನಾಲೆ ಇದು. ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು.
2015:  ಬೆಂಗಳೂರು: ಖ್ಯಾತ ಚಿತ್ರಕಲಾವಿದ ಕೆ.ಎನ್. ರಾಮಚಂದ್ರನ್  ಈದಿನ  ಬೆಳಗ್ಗೆ ನಿಧನರಾದರು. ಬಸವೇಶ್ವರ ನಗರದಲ್ಲಿರುವ ಪವಿತ್ರಾ ಪ್ಯಾರಡೈಸ್ ಹೋಟೆಲ್ ಬಳಿಯ ಶಾರದಾ ಕಾಲೋನಿಯಲ್ಲಿನ ಇವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಯಿತು. ಸಂಜೆ ಹರಿಶ್ಚಂದ್ರ ಘಾಟ್​ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

2015:  ನವದೆಹಲಿ: ಸಗಟು ಸೂಚ್ಯಂಕ ಆಧಾರಿತ ಹಣದುಬ್ಬರ ಕುಸಿತ ಪ್ರವೃತ್ತಿ ಸತತ 10ನೇ ತಿಂಗಳಲ್ಲೂ ಮುಂದುವರೆದು, ಆಗಸ್ಟ್ ತಿಂಗಳಲ್ಲಿ ಚಾರಿತ್ರಿಕ ಶೇಕಡಾ (-)4.95ರಷ್ಟು ಇಳಿಯಿತು. ಜುಲೈ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಶೇಕಡಾ (-)4.05 ಇತ್ತು. 2014ರ ನವೆಂಬರ್​ನಿಂದ ಇದು ಕುಸಿತದ ಹಾದಿಯಲ್ಲೇ ಮುಂದುವರೆದಿತ್ತು. 2014ರ ಆಗಸ್ಟ್​ನಲ್ಲಿ ಹಣದುಬ್ಬರ ದರ ಶೇಕಡಾ 3.85 ಇತ್ತು. ಏನಿದ್ದರೂ ಈರುಳ್ಳಿ ಮತ್ತು ದ್ವಿದಳ ಧಾನ್ಯಗಳು ಆಗಸ್ಟ್ ತಿಂಗಳಲ್ಲಿ ಕ್ರಮವಾಗಿ ಶೇಕಡಾ 65.29 ಮತ್ತು 36.40 ರಷ್ಟು ಹಣದುಬ್ಬರದೊಂದಿಗೆ ತುಟ್ಟಿಯಾಯಿತು. ಒಟ್ಟಾರೆ ಆಹಾರ ಉತ್ಪನ್ನಗಳ ಹಣದುಬ್ಬರ ಸತತ ಎರಡನೇ ತಿಂಗಳಲ್ಲೂ ಕುಸಿತದ (ಶೇಕಡಾ (-)1.13 ಹಾದಿಯಲ್ಲೇ ಮುಂದುವರೆಯಿತು. ತರಕಾರಿಗಳ ಹಣದುಬ್ಬರ ಶೇಕಡಾ (-)21.21ಗೆ ಕುಸಿದಿವೆ. ಆಲೂಗಡ್ಡೆ ಹಣದುಬ್ಬರ ಶೇಕಡಾ (-)51.71ರಷ್ಟಕ್ಕೆ ಇಳಿಯಿತು.

2015: ಲಂಡನ್: ತನ್ನ ಜೊತೆಗೆ ಸಹಾಯಕ ನಾಯಿಯನ್ನು (ಗೈಡ್ ಡಾಗ್) ಇರಿಸಿಕೊಂಡದ್ದಕ್ಕಾಗಿ 19ರ ಹರೆಯದ ಅಂಧ ತರುಣಿಯೊಬ್ಬಳು ಕಣ್ಣೀರು ಹಾಕುತ್ತಾ ಥಾಯ್ ರೆಸ್ಟೋರೆಂಟ್ ಒಂದರಿಂದ ನಿರ್ಗಮಿಸಬೇಕಾಗಿ ಬಂದ ವಿವಾದಾಸ್ಪದ ಘಟನೆ
ಇಂಗ್ಲೆಂಡ್​ನಲ್ಲಿ ಘಟಿಸಿತು. ರೆಸ್ಟೋರೆಂಟ್ ಫೇಸ್ ಬುಕ್​ನಲ್ಲಿ ಈ ಘಟನೆ ಬಗ್ಗೆ ಟೀಕೆಗಳ ವಿನಿಮಯವಾಯಿತು. ಸಹಾಯಕ ನಾಯಿಯೊಂದಿಗೆ ಇರಲು ಅವಕಾಶ ಇಲ್ಲ ಎಂದು ಹೇಳಿ ರೆಸ್ಟೋರೆಂಟ್ ಸಿಬ್ಬಂದಿ ಆಕೆಯನ್ನು ರೆಸ್ಟೋರೆಂಟ್​ನಿಂದ ಹೊರಕ್ಕೆ ಕಳುಹಿಸಿದರು ಎಂದು ವರದಿಗಳು ತಿಳಿಸಿದವು. ‘ನನ್ನ ದಾರಿ ತಪ್ಪಿಸಬೇಡಿ, ನಾನು ಕೆಲಸ ಮಾಡುವ ನಾಯಿ’ ಎಂಬುದಾಗಿ ಸೂಚಿಸುವ ಬರಹ ಹೊತ್ತಿದ್ದ ಎರಡು ವರ್ಷದ ಲ್ಯಾಬ್ರಡೋರ್ ರಿಟ್ರೀವರ್ ನಾಯಿ ಅಂಧ ತರುಣಿಯ ನೆರವಿಗಾಗಿ ಇದ್ದಂತಹ ಪ್ರಾಣಿ ಎಂಬುದಾಗಿ ಸ್ಪಷ್ಟವಾಗಿದ್ದರೂ ರೆಸ್ಟೋರೆಂಟ್ ಮ್ಯಾನೇಜರ್ ತರುಣಿಯನ್ನು ಉಪಾಹಾರ ಗೃಹದಿಂದ ಬಲಾತ್ಕಾರವಾಗಿ ಹೊರಗಟ್ಟಿದ ಎಂದು ವರದಿ ತಿಳಿಸಿದತು. ‘ಲೀವರ್​ಪೂಲ್​ನ ಯೀ ರಾಹ್ ಥಾಯ್ ರೆಸ್ಟೋರೆಂಟ್​ನ ಮ್ಯಾನೇಜರ್ ಬಲಾತ್ಕಾರವಾಗಿ ಹೊರಕ್ಕೆ ಕಳುಹಿಸಿದ ಬಳಿಕ ನನ್ನ ಪುತ್ರಿ ಭ್ರಮನಿರಸನಗೊಂಡಿದ್ದಾಳೆ’ ಎಂದು ಆಕೆಯ ತಾಯಿಯ ಹೇಳಿದರು.  ‘ಎಲ್ಲಾ ರೆಸ್ಟೋರೆಂಟ್​ಗಳೂ ನಗರದ ಎಲ್ಲಾ ಜನರಿಗೂ ಲಭ್ಯವಾಗಬೇಕು. ಜನ ಈ ರೀತಿ ವರ್ತಿಸುವುದು ಭ್ರಮನಿರಸನದಾಯಕ’ ಎಂದು ಅವರು ಪ್ರತಿಕ್ರಿಯಿಸಿದರು. ‘ನನ್ನ ಪುತ್ರಿಯ ಜೊತೆಗಿದ್ದ ನಾಯಿ ಆಕೆಯ ಸಹಾಯಕ ಪ್ರಾಣಿಯಾಗಿ ಕೆಲಸ ಮಾಡುತ್ತಿತ್ತು ಎಂಬುದು ಸ್ಪಷ್ಟವಾಗಿತ್ತು. ಆದರೆ ಮ್ಯಾನೇಜರ್ ‘ನಾನಿದೆಲ್ಲವನ್ನೂ ಲೆಕ್ಕಿಸುವುದಿಲ್ಲ. ನೀನು ಹೊರಕ್ಕೆ ಹೋಗಲೇ ಬೇಕು ಎಂದು ಬಲಾತ್ಕರಿಸಿದ. ಬೇಕಿದ್ದರೆ ನಾಯಿಯ ಜೊತೆಗೆ ಹೊರಗೆ ಕುಳಿತುಕೊಳ್ಳಬಹುದು ಎಂದೂ ಆತ ಹೇಳಿದ. ದುಃಖಿತಳಾದ ಪುತ್ರಿ ಭ್ರಮನಿರಸನಗೊಂಡು ಮನೆಗೆ ಹಿಂತಿರುಗಿದಳು’ ಎಂದು ತಾಯಿ ಹೇಳಿದರು.  ‘ಸಹಾಯಕ ನಾಯಿಗಳನ್ನು ನಮ್ಮ ರೆಸ್ಟೋರೆಂಟ್​ಗಳ ಒಳಗೆ ಬಿಡಬಹುದು ಎಂಬುದು ನಮ್ಮ ಕಂಪೆನಿಯ ನೀತಿ. ನಮ್ಮ ಮತ್ತು ಅತಿಥಿ ಮಧ್ಯೆ ನಡೆದ ಸಂಭಾಷಣೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಈ ರಾಹ್ ರೆಸ್ಟೋರೆಂಟ್​ಗಳ ಬ್ರಾಂಡ್ ಮ್ಯಾನೇಜರ್ ರಚಾಯೆಲ್ ಕ್ಲಾರ್ಕ್ ಸ್ಪಷ್ಟನೆ ನೀಡಿದರು.
2015: ಕಾಬೂಲ್: ಮಾನವ ಬಾಂಬರ್​ಗಳು ಮತ್ತು ಶಸ್ತ್ರಧಾರಿಗಳ ಜೊತೆಗೆ ಆಫ್ಘಾನಿಸ್ತಾನದ ಘಜನಿ ಸೆರೆಮನೆಯ ಮೇಲೆ ನಸುಕಿನ 2 ಗಂಟೆ ವೇಳೆಗೆ ದಾಳಿ ನಡೆಸಿದ ತಾಲಿಬಾನ್ ಉಗ್ರಗಾಮಿಗಳು ಕನಿಷ್ಠ 4 ಮಂದಿ ಪೊಲೀಸರನ್ನು ಕೊಂದು, 150 ಮಂದಿ ತಾಲಿಬಾನಿಗಳು ಸೇರಿದಂತೆ 352 ಕೈದಿಗಳನ್ನು ಬಿಡುಗಡೆ ಮಾಡಿದರು. ಅತ್ಯಂತ ಪ್ರಮುಖ ಸೇನಾ ಮುಜಾಹಿದೀನ್​ನನ್ನು ಬಿಡುಗಡೆ ಮಾಡಲಾಗಿದೆ ಎಂದು ಉಗ್ರಗಾಮಿ ಗುಂಪು ಪ್ರತಿಪಾದಿಸಿತು. ಶಂಕಿತ ಮಾನವ ಬಾಂಬರ್​ಗಳ ಕನಿಷ್ಠ ಎರಡು ಶವಗಳು ಮತ್ತು ಸ್ಪೋಟಗೊಂಡ ಕಾರು ದಾಳಿಯ ಬಳಿಕ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದವು.ದಾಳಿ ಕಾಲದಲ್ಲಿ ಶಿಕ್ಷೆಗೆ ಗುರಿಯಾಗಿದ್ದ 150 ಮಂದಿ ತಾಲಿಬಾನ್ ಸದಸ್ಯರು ಸೇರಿದಂತೆ 352 ಮಂದಿ ಕೈದಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಘಜನಿಯ ಡೆಪ್ಯುಟಿ ಗವರ್ನರ್ ಮೊಹಮ್ಮದ್ ಅಲಿ ಅಹ್ಮದಿ ಹೇಳಿದರು. ನಾಲ್ವರು ಆಫ್ಘನ್ ಭದ್ರತಾ ಗಾರ್ಡ್​ಗಳು ಮತ್ತು 7 ಮಂದಿ ತಾಲಿಬಾನಿ ದಾಳಿಕೋರರು ಘರ್ಷಣೆಯಲ್ಲಿ ಹತರಾಗಿದ್ದಾರೆ ಎಂದು ಅಹ್ಮದಿ ಹೇಳಿದರು.

 
2015: ತಿರುವನಂತಪುರ: ವಿಶ್ವದೆಲ್ಲೆಡೆ ಆಯಾ ಭಾಷೆಗೆ ಸಂಬಂಧಿಸಿದಂತೆ ಚಲನಚಿತ್ರ ಸಂಘಗಳಿರುವುದು ಹಳೆ ಸುದ್ದಿ. ಆದರೇ ಕೇರಳ ಚಿತ್ರೋದ್ಯಮದಲ್ಲೀಗ ಮಹಿಳಾ ಚಿತ್ರ ನಟಿಯರ ಸಂಘ ಅಸ್ತಿತ್ವಕ್ಕ್ಕೆ ಬರುತ್ತಿರುವುದು ಹೊಸ ಸುದ್ದಿ. ಇಲ್ಲಿನ ‘ಸ್ತ್ರೀ ಪಾದಮ್ ಕೇಂದ್ರಮ್ ಎಂಬ ಸಂಸ್ಥೆ ಮಹಿಳಾ ಚಿತ್ರ ಸಂಘವನ್ನು ಸೆಪ್ಟೆಂಬರ್ 15 ರಂದು ಅಧಿಕೃತವಾಗಿ ಆರಂಭಿಸುವುದಾಗಿ ಪ್ರಕಟಿಸಿತು. ಈಗಾಗಲೆ ಕಳೆದ ಕೆಲವು ವರ್ಷಗಳಿಂದ ವಾರ್ಷಿಕ ಚಲನ ಚಿತ್ರೋತ್ಸವ ಆಯೋಜಿಸುತ್ತಿರುವ ಸ್ತ್ರೀ ಪಾದಮ್ ಕೇಂದ್ರಮ್ ಮುಂದಿನ ವರ್ಷದಿಂದ ಮಹಿಳಾ ಚಿತ್ರ ಸಂಘದ ಮೂಲಕ ಮಹಿಳಾ ಪ್ರಧಾನ ಚಿತ್ರಗಳನ್ನು ಹಾಗೂ ಮಹಿಳೆಯರು ನಿರ್ದೇಶಿಸಿದ ಚಿತ್ರಗಳನ್ನು ಮುಖ್ಯವಾಗಿರಿಸಿಕೊಂಡು ಚಲನ ಚಿತ್ರೋತ್ಸವ ಸಂಘಟಿಸಲು ಮುಂದಾಯಿತು.

2015: ನ್ಯೂಯಾರ್ಕ್: ಕಳೆದ ಎರಡು ವಾರಗಳ ಕಾಲ ಸಾಕಷ್ಟು ಅಚ್ಚರಿ, ಆಘಾತಕಾರಿ ಫಲಿತಾಂಶಕ್ಕೆ ಕಾರಣವಾಗಿದ್ದ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಕಣದಲ್ಲಿ ಇಟಲಿಯ ಫ್ಲಾವಿಯಾ ಪೆನೆಟ್ಟಾ ಚಾಂಪಿಯನ್ ಆದರು. ಹಿಂದಿನ ದಿನ ನಡೆದ ಪ್ರಶಸ್ತಿ ಹೋರಾಟದಲ್ಲಿ 33 ವರ್ಷದ ಆಟಗಾರ್ತಿ ತನ್ನ ಆಪ್ತ ಗೆಳತಿ, ದೇಶಬಾಂಧವೆ ರಾಬರ್ಟಾ ವಿನ್ಸಿಯನ್ನು ಮಣಿಸುವ ಮೂಲಕ ಮುಕ್ತ ಯುಗದಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ್ತಿ ಎನ್ನುವ ಶ್ರೇಯ ಸಂಪಾದಿಸಿದರು. ಆರ್ಥರ್ ಆಶ್ ಕೋರ್ಟ್​ನಲ್ಲಿ ನಡೆದ ‘ಆಲ್ ಇಟಾಲಿಯನ್’ ಫೈನಲ್ ಪಂದ್ಯದಲ್ಲಿ 16 ವರ್ಷಗಳ ಕಾಲ ಗ್ರಾಂಡ್ ಸ್ಲಾಂ ಕಣದಲ್ಲಿ ಆಡಿದ್ದ ಫ್ಲಾವಿಯಾ ಪೆನೆಟ್ಟಾ 7-6 (7), 6-2 ರಿಂದ ರಾಬರ್ಟಾ ವಿನ್ಸಿಯನ್ನು ಸೋಲಿಸಿದರು. ಟ್ರೋಫಿ ಪ್ರದಾನ ಸಮಾರಂಭದಲ್ಲಿ ಟೆನಿಸ್ ಅಭಿಮಾನಿಗಳಿಗೆ ಮತ್ತೊಂದು ಆಘಾತ ನೀಡಿದ ಪೆನೆಟ್ಟಾ, ಇದೇ ನನ್ನ ಕೊನೇ ಗ್ರಾಂಡ್ ಸ್ಲಾಂ ಟೂರ್ನಿ ಎಂದು ಘೊಷಿಸಿದ್ದಲ್ಲದೆ, ಈ ವರ್ಷಾಂತ್ಯದಲ್ಲಿ ಟೆನಿಸ್​ನಿಂದ ನಿವೃತ್ತಿಯಾಗುತ್ತಿರುವುದಾಗಿ ಪ್ರಕಟಿಸಿದರು.
 2008: ಜರ್ಮನಿಯ ಸೆಬಾಸ್ಟಿಯನ್ ವೆಟೆಲ್ ಅವರು ಫಾರ್ಮುಲಾ ಒನ್ ರೇಸ್ ಗೆದ್ದ ವಿಶ್ವದ ಅತಿ ಕಿರಿಯ ಚಾಲಕ ಎಂಬ ಹೆಸರು ತಮ್ಮದಾಗಿಸಿದರು. ಮೊಂಜಾದಲ್ಲಿ ನಡೆದ ಇಟಾಲಿಯನ್ ಗ್ರ್ಯಾಂಡ್ ಪ್ರಿ ರೇಸ್ ಗೆಲ್ಲುವ ಮೂಲಕ ಟೊರೊ ರೊಸೊ ತಂಡದ ವೆಟೆಲ್ ಈ ಗೌರವ ಸಂಪಾದಿಸಿದರು, ವೆಟೆಲ್ ಅವರಿಗೆ ಈಗ 21 ವರ್ಷ ಹಾಗೂ 74 ದಿನಗಳು. ಅವರು ಫೆರ್ನಾಂಡೋ ಅಲೊನ್ಸೊ (22 ವರ್ಷ 26 ದಿನಗಳು) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಪೋಲ್ ಪೊಸಿಷನ್ನಿನಿಂದ ಸ್ಪರ್ಧೆ ಆರಂಭಿಸಿದ್ದ ವೆಟೆಲ್ ಮೆಕ್ ಲಾರೆನ್ ಮರ್ಸಿಡಿಸ್ ತಂಡದ ಹೈಕಿ ಕೊವಲೈನೆನ್ ಅವರಿಂದ ಪ್ರಬಲ ಪೈಪೋಟಿ ಎದುರಿಸಿದರೂ ಅಂತಿಮವಾಗಿ ಗೆಲುವಿನ ನಗು ಬೀರಿದರು.

2008: ರಷ್ಯಾದ ಪಶ್ಚಿಮ ಭಾಗದಲ್ಲಿರುವ ಪರ್ಮ್ ನಗರಕ್ಕೆ ಹೊರಟಿದ್ದ ಏರೋಕ್ರಾಫ್ಟ್ ಏರ್ ಲೈನ್ಸಿಗೆ ಸೇರಿದ ಬೋಯಿಂಗ್ 737- 500 ವಿಮಾನ ಈದಿನ ಮುಂಜಾನೆ ಅಪಘಾತಕ್ಕೀಡಾಗಿ ಅದರಲ್ಲಿದ್ದ 7 ಮಕ್ಕಳು, 21 ವಿದೇಶಿಯರು ಸೇರಿದಂತೆ ಎಲ್ಲಾ 88 ಮಂದಿ ಮೃತರಾದರು. ವಿಮಾನ ಮಾರ್ಗ ಮಧ್ಯೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮುಂಜಾನೆ 3.15ರ ಸುಮಾರಿಗೆ ಜನನಿಬಿಡ ಪ್ರದೇಶಕ್ಕೆ ಅಪ್ಪಳಿಸಿತು.

2007:  ಸೇತುಸಮುದ್ರಂ ಕಡಲ್ಗಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ  ಪ್ರಮಾಣ ಪತ್ರದಲ್ಲಿ ರಾಮ ಹಾಗೂ ರಾಮಸೇತು ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ಕೇಂದ್ರ ಸರ್ಕಾರವು ಹಿಂದಕ್ಕೆ ಪಡೆಯಿತು. ದೇಶಾದ್ಯಂತ ಕಂಡು ಬಂದ ಭಾರೀ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಈ ಕ್ರಮ ಕೈಗೊಂಡಿತು. ಜೊತೆಗೆ ರಾಮಸೇತು ರಕ್ಷಣೆಯ ದೃಷ್ಟಿಯಿಂದ ಸೇತುಸಮುದ್ರಂ ಕಾಲುವೆ ಯೋಜನೆಯ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿಯೂ ಸರ್ಕಾರ ಹೇಳಿತು. ರಾಮ ಹಾಗೂ ರಾಮ ಸೇತು ಇತ್ತೆಂದು ಹೇಳಲು ಯಾವುದೇ ಐತಿಹಾಸಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್ಐ) ಇಲಾಖೆ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿತ್ತು. ಪ್ರಮಾಣ ಪತ್ರದ ಆಕ್ಷೇಪಾರ್ಹ ಹೇಳಿಕೆಗಳನ್ನು ವಾಪಸ್ ಪಡೆಯಲು ಸಮ್ಮತಿಸಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪೀಠವು, ರಾಮ ಸೇತು ಪ್ರದೇಶದಲ್ಲಿ ಯಾವುದೇ ರೀತಿಯ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ ಆಗಸ್ಟ್ 31ರಂದು ನೀಡಿದ್ದ ಮಧ್ಯಂತರ ತಡೆಯಾಜ್ಞೆ ಮುಂದುವರಿಯುತ್ತದೆ ಎಂದು ಹೇಳಿ, ವಿಚಾರಣೆಯನ್ನು 2008ರ ಜನವರಿ ಮೊದಲ ವಾರಕ್ಕೆ ಮುಂದೂಡಿತು.

 2007: ನವದೆಹಲಿಯ ವಿಜ್ಞಾನಭವನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ 53ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ವಿತರಿಸಿದರು. ದಾದಾಸಾಹೇಬ್ ಪ್ರಶಸ್ತಿ ಪಡೆದ ಕರ್ನಾಟಕ ಮೂಲದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್,  ತೀರ್ಪುಗಾರರ ಮಂಡಳಿ ಅಧ್ಯಕ್ಷರಾದ ಹಿರಿಯ ತಾರೆ ಬಿ. ಸರೋಜಾದೇವಿ, ಡಬಲ್ ಪ್ರಶಸ್ತಿ ಪಡೆದ ಕನ್ನಡ ಖ್ಯಾತ ಲೇಖಕ ಮತ್ತು ಚಿತ್ರನಿರ್ದೇಶಕ ಬರಗೂರು ರಾಮಚಂದ್ರಪ್ಪ, ನಿರಂತರವಾಗಿ ನಾಲ್ಕನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಿರ್ದೇಶಕ ಪಿ.ಶೇಷಾದ್ರಿ, ನಿರ್ಮಾಪಕಿಯಾಗಿ ಎರಡನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಟಿ ಜಯಮಾಲಾ ಮತ್ತು ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ಮಿಸುತ್ತಿರುವ ನಟಿಯರ ಗುಂಪಿಗೆ ಇನ್ನೊಂದು ಸೇರ್ಪಡೆಯಾಗಿರುವ ನಟಿ ಪ್ರಮೀಳಾ ಜೋಷಾಯ್ ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು. ಶ್ಯಾಮ್ ಬೆನಗಲ್ ಅವರು ಫಾಲ್ಕೆ ಪ್ರಶಸ್ತಿ ಪಡೆದರೆ, ಕನ್ನಡದ ಅತ್ಯುತ್ತಮ ಪ್ರಾದೇಶಿಕ ಚಿತ್ರ `ತಾಯಿ'ಯ  ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ, ಆ ಚಿತ್ರದ ಹಾಡಿನ ಸಾಹಿತ್ಯಕ್ಕಾಗಿಯೂ ನೀಡುವ ಪ್ರಶಸ್ತಿ ಸೇರಿ ಡಬ್ಬಲ್ ಪ್ರಶಸ್ತಿ ಪಡೆದರು. ಹಿಂದೆ  `ಸಂಗೀತ' ಚಿತ್ರಕ್ಕಾಗಿ ಪೋಷಕ ನಟಿಯ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ನಟಿ ಪ್ರಮೀಳಾ ಜೋಷಾಯ್ `ತಾಯಿ' ಚಿತ್ರದ ನಿರ್ಮಾಪಕಿಯಾಗಿ ಪ್ರಶಸ್ತಿ ಪಡೆದರು. ಯುವ ನಿರ್ದೇಶಕ ಪಿ.ಶೇಷಾದ್ರಿ ಸತತ ನಾಲ್ಕನೇ ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ದಾಖಲೆಯೊಂದನ್ನು ನಿರ್ಮಿಸಿದರು. ಮೊದಲು `ಮುನ್ನುಡಿ' ನಂತರ `ಅತಿಥಿ' ಕಳೆದ ಬಾರಿ `ಬೇರು' ಈಗ `ತುತ್ತೂರಿ' ಅವರಿಗೆ ಪ್ರಶಸ್ತಿ ತಂದುಕೊಟ್ಟ ಚಿತ್ರಗಳು. ಪರಿಸರ ರಕ್ಷಣೆಯ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಚಿತ್ರ ನಿರ್ಮಾಪಕಿ ಜನಪ್ರಿಯ ನಟಿ ಡಾ.ಜಯಮಾಲಾ `ತಾಯಿ ಸಾಹೇಬ' ಚಿತ್ರದ ನಿರ್ಮಾಪಕಿಯಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಈ ಸಲ ಇವರು ಎರಡನೇ ಬಾರಿ 'ತುತ್ತೂರಿ' ನಿರ್ಮಾಣಕ್ಕಾಗಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದರು.

2007: ರಾಮ ಸೇತು ಕುರಿತು ಎದ್ದಿರುವ ಗದ್ದಲವನ್ನೇ ನೆಪವಾಗಿರಿಸಿಕೊಂಡು ಉತ್ತರಖಂಡ ಸರ್ಕಾರ, ರಾಮ ಸೇತು ಕುರಿತಾದ ಕತೆಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಮುಂದಾಯಿತು. ಸರ್ಕಾರದ ಈ ಕ್ರಮ `ಶಿಕ್ಷಣದ ಕೇಸರಿಕರಣ' ಎಂದು ಕಾಂಗ್ರೆಸ್ ಟೀಕಿಸಿತು.

 2007: ಇಂಡೋನೇಷ್ಯಾದ ಸುಮಾತ್ರಾದಲ್ಲಿ ಮತ್ತೊಮ್ಮೆ ಪ್ರಬಲ ಭೂಕಂಪ ಸಂಭವಿಸಿ ಕನಿಷ್ಠ 13 ಜನ ಮೃತರಾಗಿ ಹಲವಾರು ಕಟ್ಟಡಗಳು ಜಖಂಗೊಂಡವು. ಅಧಿಕಾರಿಗಳು ಸುನಾಮಿ ಮುನ್ನೆಚ್ಚರಿಕೆ ನೀಡಿ ನಂತರ ಅದನ್ನು ವಾಪಸ್ ಪಡೆದರು.

2007: ರಷ್ಯಾ ಸಂಸತ್ತಿನಲ್ಲಿ 450 ಮತಗಳ ಪೈಕಿ 381 ಮತಗಳಿಸಿದ 66 ವರ್ಷದ ವಿಕ್ಟರ್ ಜುಬ್ಕೊವ್ ಅವರು ರಷ್ಯಾದ ನೂತನ ಪ್ರಧಾನಿಯಾಗಿ ಆಯ್ಕೆಯಾದರು. ಮಿಖಾಯಿಲ್ ಪಕೊವ್ ಅವರ ನೇತೃತ್ವದ ಸರ್ಕಾರ ವಿಸರ್ಜನೆಯಾದ ಎರಡು ದಿನಗಳ ನಂತರ ಪ್ರಧಾನಿ ಸ್ಥಾನಕ್ಕೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮಾಡಿದ ವಿಕ್ಟೋರ್ ಜುಬ್ಕೊವ್ ನೇಮಕವನ್ನು ರಷ್ಯಾ ಸಂಸತ್ ಈ ಮೂಲಕ  ಅಂಗೀಕರಿಸಿತು. ಜಬ್ಕೊವ್ ಹಿರಿಯ ಹಣಕಾಸು ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

2007: ಪ್ರತಿ ಸೆಕೆಂಡಿಗೆ ಕನಿಷ್ಠ ಒಂದು ಸಾವಿರ ಶತಕೋಟಿ ಗಣಿತ ಸಮಸ್ಯೆಗಳನ್ನು ಬಿಡಿಸುವ (ಒಂದು ಟೆರಾಫ್ಲಾಪ್ ವೇಗದ) ಸೂಪರ್ ಕಂಪ್ಯೂಟರನ್ನು ವಿಪ್ರೊ ಇನ್ಫೊಟೆಕ್ ಈದಿನ ಬೆಂಗಳೂರಿನಲ್ಲಿ  ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಕ್ಯಾಲಿಫೋರ್ನಿಯಾ ಮೂಲದ ಜಿ- ರಿಸರ್ಚ್ ಇಂಕ್ ನ ಸಹಯೋಗದಲ್ಲಿ ಅತ್ಯಧಿಕ ವೇಗದಲ್ಲಿ ಕಾರ್ಯ ನಿರ್ವಹಿಸುವ ಮತ್ತು ಗರಿಷ್ಠ ಸ್ಮರಣ ಶಕ್ತಿಯ ಸಾಮರ್ಥ್ಯದ ಸೂಪರ್ ಕಂಪ್ಯೂಟರ್ ಹಾಗೂ ಅಸಂಖ್ಯ ಪೆಟಾಬೈಟ್ಸ್ಗಳಷ್ಟು ಮಾಹಿತಿ, ದತ್ತಾಂಶ ಸಂಗ್ರಹಿಸುವ ಸಾಮರ್ಥ್ಯದ ಸೂಪರ್ ಸ್ಟೋರೇಜ್  (`ವಿಪ್ರೊ ಸೂಪರ್ನೋವಾ') ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವಿಪ್ರೊ ವೈಯಕ್ತಿಕ ಕಂಪ್ಯೂಟರ್ ವಿಭಾಗದ ಉಪಾಧ್ಯಕ್ಷ ಅಶುತೋಷ್ ವೈದ್ಯ ಅವರು ಪ್ರಕಟಿಸಿದರು. ಈ ಮೊದಲಿನ ಸೂಪರ್ ಕಂಪ್ಯೂಟರುಗಳ ದಶಲಕ್ಷ ಡಾಲರುಗಳ ದುಬಾರಿ ಬೆಲೆಗೆ ಹೋಲಿಸಿದರೆ ಈ ಕಂಪ್ಯೂಟರ್, ಕೈಗೆಟುಕುವ ಬೆಲೆಗೆ (ವಿಲಾಸಿ ಕಾರಿನ ಬೆಲೆಯಲ್ಲಿ)  ರೂ 25 ಲಕ್ಷಕ್ಕೆ ಲಭ್ಯವಾಗಲಿದೆ. ಇದು ಆರಂಭಿಕ ಬೆಲೆ. ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ರೂಪಿಸುವ ಸೂಪರ್ ಕಂಪ್ಯೂಟರುಗಳ ಗರಿಷ್ಠ ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆ ಬದಲಾಗುತ್ತದೆ. ಎಂಜಿನಿಯರಿಂಗ್ ಕಾಲೇಜು, ಉನ್ನತ ಶೈಕ್ಷಣಿಕ ಸಂಸ್ಥೆಗಳು, ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಗಂಭೀರವಾಗಿ ಪರಿಗಣಿಸಿದ ಉದ್ದಿಮೆ ಸಂಸ್ಥೆಗಳು ಈ ಸೂಪರ್ ಕಂಪ್ಯೂಟರ್ ಬಳಸಬಹುದು. ಇದೊಂದು ಗರಿಷ್ಠ ಕಾರ್ಯಕ್ಷಮತೆಯ, ಬಹುಪಯೋಗಿ ಮತ್ತು ಸುಲಭವಾಗಿ ನಿರ್ವಹಿಸಬಹುದಾದ ಸೂಪರ್ ಕಂಪ್ಯೂಟರ್ ಆಗಿದ್ದು, ಭಾರತಕ್ಕೆ ಸೂಪರ್ ಕಂಪ್ಯೂಟರ್ ತರುವ ಕನಸು ಇದರಿಂದ ನನಸಾಗಿದೆ ಎಂದು ವೈದ್ಯ ಹೇಳಿದರು.

2007: ಬಾಹ್ಯಾಕಾಶ ಅಧ್ಯಯನ ಹಾಗೂ ತಂತ್ರಜ್ಞಾನಕ್ಕೆ ಒತ್ತು ನೀಡುವುದರ ಜೊತೆಗೆ ಇಸ್ರೋದ  ಮಾನವ ಸಂಪನ್ಮೂಲ ಬೇಡಿಕೆ ಪೂರೈಸುವ ಭಾರತೀಯ ಬಾಹ್ಯಾಕಾಶ ಮತ್ತು ತಂತ್ರಜ್ಞಾನ (ಐಐಎಸ್ಟಿ) ಸಂಸ್ಥೆಯನ್ನು ಇಸ್ರೋ ಅಧ್ಯಕ್ಷ ಡಾ.ಜಿ.ಮಾಧವನ್ ನಾಯರ್ ತಿರುವನಂತಪುರದಲ್ಲಿ ಉದ್ಘಾಟಿಸಿದರು. ಉದ್ಘಾಟನೆಯಾದ ಸಂಸ್ಥೆಯು ಏವಿಯಾನಿಕ್ ಹಾಗೂ ಬಾಹ್ಯಾಕಾಶ ಎಂಜಿನಿಯರಿಂಗಿನಲ್ಲಿ ಪರಿಣಿತಿ ಸೇರಿದಂತೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪದವಿ ನೀಡಲಿದೆ. ಬಾಹ್ಯಾಕಾಶ ವಿಷಯಕ್ಕೆ ಸಂಬಂಧಿಸಿದಂತೆ ಅನ್ವಯಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಈ ಸಂಸ್ಥೆ ನೀಡಲಿದೆ.

2007: ಡರ್ಬಾನಿನ ಕಿಂಗ್ಸ್ ಮೇಡ್ ಕ್ರೀಡಾಂಗಣದಲ್ಲಿ ನಡೆದ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಪಾಕ್ ತಂಡವನ್ನು ಬೌಲ್ ಔಟಿನಲ್ಲಿ 3-0ರಲ್ಲಿ ಸೋಲಿಸಿದ ಭಾರತ ಸೂಪರ್ ಏಯ್ಟ್ ಹಂತ ಪ್ರವೇಶಿಸಿತು.

2007: ಅಚ್ಚರಿಯ ದಿಢೀರ್ ಬೆಳವಣಿಗೆಯೊಂದರಲ್ಲಿ ರಾಹುಲ್ ದ್ರಾವಿಡ್ ಅವರು ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನವದೆಹಲಿಯಲ್ಲಿ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ದ್ರಾವಿಡ್ ಬಿಸಿಸಿಐಗೆ ರಾಜೀನಾಮೆ ಪತ್ರ ಸಲ್ಲಿಸಿ, ನಾಯಕತ್ವದಿಂದ ಮುಕ್ತಗೊಳಿಸಲು ಕೋರಿದರು. 2005ರಲ್ಲಿ ನಾಯಕನಾಗಿ ನೇಮಕಗೊಂಡ ರಾಹುಲ್ ದ್ರಾವಿಡ್ ಸತತ 16 ಬಾರಿ ಏಕದಿನ ಪಂದ್ಯ ಚೇಸ್ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದರೂ, 2007ರ ವಿಶ್ವಕಪ್ ನಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ್ದರು. ಪಾಕ್, ವಿಂಡೀಸ್, ಬಾಂಗ್ಲಾ ಹಾಗೂ ಇಂಗ್ಲೆಂಡಿನಲ್ಲಿ ಟೆಸ್ಟ್ ಸರಣಿ ಗೆಲುವು ಅವರ ಮಹತ್ವದ ಪಂದ್ಯಗಳು. ಸೌರವ್ ಗಂಗೂಲಿ ಅವರನ್ನು ಕೆಳಗಿಳಿಸಿದ ನಂತರ ಅಂದರೆ 2005ರಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಆಯ್ಕೆ ಆದ ದ್ರಾವಿಡ್ 20 ಟೆಸ್ಟ್ ಹಾಗೂ 62 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. 33 ವರ್ಷ ವಯಸ್ಸಿನ ದ್ರಾವಿಡ್ ನಾಯಕತ್ವದಲ್ಲಿ `ಟೀಮ್ ಇಂಡಿಯಾ' ಟೆಸ್ಟಿನಲ್ಲಿ ಯಶಸ್ಸು ಗಳಿಸಿತ್ತು. ಆದರೆ ಏಕದಿನ ಕ್ರಿಕೆಟಿನಲ್ಲಿ ಆರಂಭದ ಯಶಸ್ಸನ್ನು ಕಾಯ್ದುಕೊಳ್ಳಲು ಆಗಲಿಲ್ಲ. ಸತತ 16 ಏಕದಿನ ಪಂದ್ಯಗಳಲ್ಲಿ ಎದುರಾಳಿ ನೀಡಿದ ಗುರಿಯನ್ನು ಬೆನ್ನುಹತ್ತಿ ಗೆಲುವು ಸಾಧಿಸಿದ್ದು ವಿಶೇಷ. ಆದರೆ ತಂಡ ಕೆರಿಬಿಯನ್ ದ್ವೀಪದಲ್ಲಿ ಮಾರ್ಚ್ -ಏಪ್ರಿಲ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿ ಆಕ್ರೋಶಕ್ಕೆ ಒಳಗಾಗಿತ್ತು. ಅವರ ನಾಯಕತ್ವದ ಅವಧಿಯಲ್ಲಿ ಭಾರತ ಟೆಸ್ಟಿನಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಸರಣಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿತು. ಆದರೆ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟಿನಲ್ಲಿ ಅವರು ಫಾಲೋಆನ್ ನೀಡಿರಲಿಲ್ಲ. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

2007:  ಪಂಕಜ್ ಅಡ್ವಾಣಿ ಅವರು ಸಿಂಗಪುರದ ಆರ್ಕಿಡ್ ಕಂಟ್ರಿ ಕ್ಲಬ್ಬಿನಲ್ಲಿ ಮುಕ್ತಾಯವಾದ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ನೂತನ ಚಾಂಪಿಯನ್ ಆಗಿ ಹೊರ ಹೊಮ್ಮಿದರು.  ನಿಕಟ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಹುಡುಗ ಪಂಕಜ್ 1963-1489 ಪಾಯಿಂಟುಗಳ ಅಂತರದಿಂದ ಭಾರತದ ಮತ್ತೊಬ್ಬ ಆಟಗಾರ ಧ್ರುವ ಸೀತಾವಾಲಾ ಅವರನ್ನು ಸೋಲಿಸಿದರು. ಇದು ಪಂಕಜ್ ಪಾಲಿಗೆ ವೃತ್ತಿ ಜೀವನದ ನಾಲ್ಕನೇ ವಿಶ್ವ ಚಾಂಪಿಯನ್ ಶಿಪ್ ಗೆಲುವು.

2006: ಲಾಭದಾಯಕ ಹುದ್ದೆ ತಿದ್ದುಪಡಿ ಕಾಯ್ದೆಯ (2006) ಸಂವೈಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ಈ ತಿದ್ದುಪಡಿ ಕಾಯ್ದೆಯನ್ನು ಪೂರ್ವಾನ್ಯವಾಗಿ ಜಾರಿ ಮಾಡುವುದನ್ನು ತಡೆಹಿಡಿಯಬೇಕು ಮತ್ತು ಲಾಭದ ಹುದ್ದೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಮುಂದಿರುವ ದೂರುಗಳನ್ನು ಈ ತಿದ್ದುಪಡಿ ಅನ್ವಯ ತೀರ್ಮಾನಿಸದಂತೆ  ನಿರ್ದೇಶನ ನೀಡಬೇಕು ಎಂದು ಗ್ರಾಹಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಅರ್ಜಿ ಸಲ್ಲಿಸಿತು.

2006: ಮುಂಬೈ ಸರಣಿ ಬಾಂಬ್ ಸ್ಫೋಟದ ಎರಡನೇ ಕಂತಿನ ತೀರ್ಪಿನಲ್ಲಿ ಝವೇರಿ ಬಜಾರಿನಲ್ಲಿ ಬಾಂಬ್ ಇಟ್ಟಿದ್ದ ಮೊಹಮ್ಮದ್ ಶೋಯೆಬ್ ಘನ್ಸಾರ್ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ನಿಯೋಜಿತ ಟಾಡಾ ನ್ಯಾಯಾಲಯ ತೀರ್ಪು ನೀಡಿತು. ಶೋಯೆಬ್ ಟೈಗರ್ ಮೆಮನ್ನ ಆಪ್ತ ಬಂಟನಾಗಿದ್ದು, ಈತನೇ ಝವೇರಿ ಬಜಾರ್ ಸ್ಫೋಟದ ರೂವಾರಿ ಎಂದು ನ್ಯಾಯಾಲಯ ಹೇಳಿತು.

2006: ಇಂಡೋನೇಷ್ಯಾದ ಡೆನ್ಪಸರ್ ನ್ಯಾಯಾಲಯವು ಬಾಲಿ ಬಾಂಬ್ ಸ್ಫೋಟದಲ್ಲಿ ಭಾಗಿಯಾದ ಆರೋಪ ಹೊತ್ತ ಇಸ್ಲಾಮಿಕ್ ಉಗ್ರಗಾಮಿ ಅನೀಫ್ ಸೊಲ್ಚನುದ್ದೀನ್ ಗೆ 15 ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿತು.

2006: ಜಾರ್ಖಂಡಿನಲ್ಲಿ ಒಂಬತ್ತು ದಿನಗಳ ರಾಜಕೀಯ ಅಸ್ಥಿರತೆಗೆ ತೆರೆ ಬಿತ್ತು. ಬಿಜೆಪಿ- ಜೆಡಿಯು ಮೈತ್ರಿಕೂಟದ ಮುಖ್ಯಮಂತ್ರಿ ಅರ್ಜುನ್ ಮುಂಡಾ ರಾಜೀನಾಮೆ ನೀಡಿದರು. ಯುಪಿಎ ಧುರೀಣ ಮಧು ಕೋಡಾ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಸಂಪುಟದ ನಾಲ್ವರು ಸಚಿವರ ರಾಜೀನಾಮೆ ಬಳಿಕ ಮುಂಡಾ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು.

1975: ಮದರ್ ಎಲಿಜಬೆತ್ ಆನ್ ಬೇಲೀ ಸೆಟನ್ ಅವರು ಮೊತ್ತ ಮೊದಲ ಅಮೆರಿಕ ಸಂಜಾತ ಸಂತಳೆಂದು ಪೋಪ್ 6ನೇ ಪಾಲ್ ಅವರು ಘೋಷಿಸಿದರು.

1974: ಗುರುಗ್ರಹದ 13ನೇ ಉಪಗ್ರಹ ಪತ್ತೆಯಾಯಿತು.

1965: ಪಾಕಿಸ್ತಾನಿ ವಾಯುಪಡೆಗಳಿಂದ ಕಲ್ಕತ್ತ (ಈಗಿನ ಕೋಲ್ಕತಾ) ಹಾಗೂ ಅಗರ್ತಲ ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಯಿತು.

1953: ಆಂಧ್ರಪ್ರದೇಶ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಕರ್ನೂಲು ಬದಲಿಗೆ ಹೈದರಾಬಾದನ್ನು ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು.

1952: ಸಾಹಿತಿ ಗುರುರಾಜ ಮಾರ್ಪಳ್ಳಿ ಜನನ.

1949: ಹಿಂದಿ ಭಾಷೆಯನ್ನು ಭಾರತದ ರಾಷ್ಟ್ರಭಾಷೆಯಾಗಿ ಈದಿನ ಘೋಷಿಸಲಾಯಿತು. ಸಂವಿಧಾನ ಸಮಿತಿ ಈ ಬಗ್ಗೆ ಮೂರು ದಿನಗಳ ಕಾಲ ಚರ್ಚಿಸಿತ್ತು. ಭಾರತದಲ್ಲಿ 18 ಕೋಟಿ ಜನ ಹಿಂದಿಯನ್ನು ಭಾಷೆಯಾಗಿ ಬಳಸುತ್ತಿದ್ದಾರೆ. ಇತರ 30 ಕೋಟಿ ಜನ ಇದನ್ನು ದ್ವಿತೀಯ ಭಾಷೆಯಾಗಿ ಬಳಸುತ್ತಿದ್ದಾರೆ.ಭಾರತವಲ್ಲದೆ ಇತರ ರಾಷ್ಟ್ರಗಳಲ್ಲೂ ಹಿಂದಿ ಮಾತನಾಡುವವರು ಇದ್ದಾರೆ. ಉರ್ದು ಪ್ರಾಬಲ್ಯ ಇರುವ ಪಾಕಿಸ್ಥಾನದಲ್ಲೂ 4.1 ಕೋಟಿ ಜನ ಹಿಂದಿ ಮಾತನಾಡುತ್ತಾರೆ. ನೇರವಾಗಿ ಸಂಸ್ಕೃತದಿಂದ ಹುಟ್ಟಿರುವ ಹಿಂದಿ, ದ್ರಾವಿಡ ಭಾಷೆಗಳು, ಟರ್ಕಿ, ಅರಬ್ಬಿ, ಪೋರ್ಚುಗೀಸ್ ಮತ್ತು ಇಂಗ್ಲಿಷ್ ಭಾಷೆಗಳ ಪ್ರಭಾವಕ್ಕೆ ಒಳಗಾಗಿ ಬೆಳೆದಿದೆ. ಮಧ್ಯ ಯುಗದಿಂದಲೇ ಬಳಕಯಲ್ಲಿರುವ ಈ ಭಾಷೆಯಲ್ಲಿ ವಿಧವಿಧ ಸಾಹಿತ್ಯವೂ ರಚನೆಗೊಂಡಿದೆ.

1930: ಜರ್ಮನಿ ಚುನಾವಣೆಯಲ್ಲಿ ನಾಝಿಗಳಿಗೆ 107 ಸ್ಥಾನಗಳಲ್ಲಿ ವಿಜಯ ಲಭಿಸಿತು.

1927: ಆಧುನಿಕ ನೃತ್ಯಕಲಾವಿದೆ ಇಸಾಡೋರಾ ಡಂಕನ್ ಅವರು ಫ್ರಾನ್ಸಿನ ನೈಸ್ ನಗರದಲ್ಲಿ ಸ್ಪೋರ್ಟ್ಸ್ ಕಾರು ಅಪಘಾತದಲ್ಲಿ ಮೃತರಾದರು. ಅವರು ತಲೆಗೆ ಸುತ್ತಿಕೊಂಡಿದ್ದ ಸ್ಕಾರ್ಫ್ ಕಾರಿನ ಚಕ್ರಕ್ಕೆ ಸಿಕ್ಕಿಹಾಕಿಕೊಂಡ ಪರಿಣಾಮವಾಗಿ ಈ ಅಪಘಾತ ಸಂಭವಿಸಿತು.

1926: ವೈಜ್ಞಾನಿಕ ಕೃತಿಗಳ ಕರ್ತೃ, ಗಣಿತ ಉಪನ್ಯಾಸಕ, ಸಾಹಿತಿ ಜಿ.ಟಿ. ನಾರಾಯಣ ರಾವ್ ಅವರು ಗುಡ್ಡೆಹಿತ್ಲು ತಿಮ್ಮಪ್ಪಯ್ಯ- ವೆಂಕಟಲಕ್ಷ್ಮಿ ದಂಪತಿಯ ಮಗನಾಗಿ ಮಡಿಕೇರಿಯಲ್ಲಿ ಜನಿಸಿದರು. ಬಾಲ್ಯದಿಂದಲೇ ಸಂಗೀತ, ಸಾಹಿತ್ಯದತ್ತ ಒಲವು ಬೆಳೆಸಿಕೊಂಡ ಇವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ವಿಭಾಗದ ಸಂಪಾದಕತ್ವ ವಹಿಸಿಕೊಂಡಿದ್ದರು. ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ನಾರಾಯಣರಾವ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸ.ಸ. ಮಾಳವಾಡ ಪ್ರಶಸ್ತಿಗಳು ಲಭಿಸಿವೆ.

1923: ಹಿರಿಯ ಕಾನೂನು ತಜ್ಞ ರಾಂ ಜೇಠ್ಮಲಾನಿ ಜನನ.

1917: ಸಾಹಿತಿ ಗುಡಿಬಂಡೆ ರಾಮಾಚಾರ್ ಜನನ.

1814: ಅಮೆರಿಕದ ರಾಷ್ಟ್ರಗೀತೆ `ದಿ ಸ್ಟಾರ್ ಸ್ಪಾಂಗಲ್ಡ್ ಬ್ಯಾನರ್' ಮುಂಬೈಯ ಜೆಮ್ ಶೆಡ್ ಜಿ ಬೊಮಾನ್ ಜಿ ವಾಡಿಯಾ ಸಂಸ್ಥೆಯು ನಿಮರ್ಿಸಿದ ಎಚ್ ಎಂ ಎಸ್ ಮಿನ್ ಡನ್ ಹಡಗಿನಲ್ಲಿ  ಜನಿಸಿತು. ಅಮೆರಿಕನ್ ವಕೀಲ ಫ್ರಾನ್ಸಿಸ್ ಸ್ಕಾಟ್ ಕೀ ಅವರು ಈ ಕವನವನ್ನು ಅವಸರ ಅವಸರವಾಗಿ ಲಕೋಟೆಯೊಂದರ ಮೇಲೆ ಬರೆದರು. ಗೆಳೆಯನನ್ನು ಬಿಡಿಸುವ ಸಲುವಾಗಿ ಮಾತುಕತೆಗೆಂದು ಹೋಗಿದ್ದ ಫ್ರಾನ್ಸಿಸ್ ಅವರು ಫೋರ್ಟ್ ಮೆಕ್ ಹೆನ್ರಿ ಮೇಲೆ ರಾತ್ರಿ ಇಡೀ ಶೆಲ್ ದಾಳಿ ನಡೆಯುತ್ತಿದ್ದುದರಿಂದ ಹಡಗಿನಲ್ಲೇ ಕಾಲ ಕಳೆಯಬೇಕಾಯಿತು. ತೀವ್ರ ಶೆಲ್ ದಾಳಿಯ ಬಳಿಕವೂ ಮರುದಿನ ಬೆಳಿಗ್ಗೆ ಫೋರ್ಟ್ ಮೆಕ್ ಹೆನ್ರಿಯ ಮೇಲೆ ಅಮೆರಿಕದ ರಾಷ್ಟ್ರಧ್ವಜ ಹಾರಾಡುತ್ತಿದ್ದುದನ್ನು ಕಂಡು ಹರ್ಷಗೊಂಡ ಫ್ರಾನ್ಸಿಸ್ ಅವಸರ ಅವಸರವಾಗಿ ಈ ಕವನ ರಚಿಸಿದರು.

1812: ರಷ್ಯದ ಮೇಲೆ ದಾಳಿ ಮುಂದುವರೆಸುತ್ತಾ ನೆಪೋಲಿಯನ್ ಮಾಸ್ಕೋ ಪ್ರವೇಶಿಸಿದ. ಆತನ ಸೇನೆ ಮುಂದೊತ್ತಿ ಬರದಂತೆ ತಡೆಯಲು ತ್ಸಾರ್ ಮೊದಲನೆಯ ಅಲೆಗ್ಸಾಂಡರ್, ನೆಪೋಲಿಯನ್ ಸೇನೆ ಮುನ್ನುಗ್ಗುತ್ತಿದ್ದ ಕಡೆಯಿಂದ ಮಾಸ್ಕೊ ನಗರಕ್ಕೆ ಬೆಂಕಿ ಹಚ್ಚಿಸಿದ.

1752: ಹನ್ನೊಂದು ದಿನಗಳನ್ನು ತೆಗೆದುಹಾಕಲಾದ ಗ್ರೆಗೋರಿಯನ್ ಕ್ಯಾಲೆಂಡರನ್ನು ಬ್ರಿಟನ್ ಅಂಗೀಕರಿಸಿತು. 2 ಮತ್ತು 14ನೇ ದಿನಾಂಕಗಳ ನಡುವಣ 11 ದಿನಗಳು ಇತಿಹಾಸದಲ್ಲಿ ನಷ್ಟವಾದವು ಎಂದು ಪರಿಗಣಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement