Showing posts with label ಚೀನಾ. Show all posts
Showing posts with label ಚೀನಾ. Show all posts

Monday, August 4, 2025

"ನೀವು ನಿಜವಾದ ಭಾರತೀಯರಾಗಿದ್ದರೆ, ಇದನ್ನು ಹೇಳುತ್ತಿರಲಿಲ್ಲ!"

 "ನೀವು ನಿಜವಾದ ಭಾರತೀಯರಾಗಿದ್ದರೆ, ಇದನ್ನು ಹೇಳುತ್ತಿರಲಿಲ್ಲ!"

ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಚಾಟಿ

ಭಾರತೀಯ ಸೇನೆಯ ಬಗ್ಗೆ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳಿಗಾಗಿ ಅವರ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ಸೋಮವಾರ (ಆಗಸ್ಟ್ 4, 2025) ತಡೆಯಾಜ್ಞೆ ನೀಡಿತು. ಆದರೆ ಸೇನೆ ಬಗ್ಗೆ ಆಡಿದ ಮಾತುಗಳಿಗಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿತು.

2020ರ ಗಾಲ್ವಾನ್ ಕಣಿವೆ ಸಂಘರ್ಷದ ಸಂದರ್ಭದಲ್ಲಿ ಚೀನಿಯರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ ಕುರಿತು ಸುಪ್ರೀಂ ಕೋರ್ಟ್ ಈ ಪ್ರತಿಕ್ರಿಯೆ ನೀಡಿದೆ.

ರಾಹುಲ್ ಗಾಂಧಿಯವರಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದರೂ, ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು ಗಾಂಧಿಯವರ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಸಂಸತ್ತಿನಲ್ಲಿ ಯಾಕೆ ಹೇಳಲಿಲ್ಲ?

ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ, "ವಿರೋಧ ಪಕ್ಷದ ನಾಯಕರು ವಿಷಯಗಳನ್ನು ಪ್ರಸ್ತಾಪಿಸಲು ಸಾಧ್ಯವಾಗದಿದ್ದರೆ ಅದು ದುರದೃಷ್ಟಕರ" ಎಂದು ಹೇಳಿದರು. "ಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಗಳನ್ನು ಅವರು ಹೇಳಲು ಸಾಧ್ಯವಾಗದಿದ್ದರೆ, ಅವರು ವಿರೋಧ ಪಕ್ಷದ ನಾಯಕರಾಗಿರಲು ಸಾಧ್ಯವಿಲ್ಲ" ಎಂದೂ ಸಿಂಘ್ವಿ ವಾದಿಸಿದರು.

ಇದಕ್ಕೆ ನ್ಯಾಯಮೂರ್ತಿ ದತ್ತಾ, "ನಿಮಗೆ ಏನು ಹೇಳಬೇಕೋ ಅದನ್ನು ಸಂಸತ್ತಿನಲ್ಲಿ ಏಕೆ ಹೇಳಬಾರದು? ಸಾಮಾಜಿಕ ಮಾಧ್ಯಮದಲ್ಲಿ ಯಾಕೆ ಹೇಳಬೇಕು?" ಎಂದು ಪ್ರಶ್ನಿಸಿದರು.

"ನೀವು ನಿಜವಾದ ಭಾರತೀಯರಾಗಿದ್ದರೆ ಹೀಗೆ ಹೇಳುತ್ತಿರಲಿಲ್ಲ"

ಗಾಂಧಿಯವರ ಹೇಳಿಕೆಗಳ ಬಗ್ಗೆ ಮತ್ತಷ್ಟು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ದತ್ತಾ, "ಡಾ. ಸಿಂಘ್ವಿಯವರಿಗೆ ಹೇಳಿ, 2000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಚೀನಿಯರು ಆಕ್ರಮಿಸಿಕೊಂಡಿದ್ದಾರೆ ಎಂದು ನಿಮಗೆ ಹೇಗೆ ಗೊತ್ತಾಯಿತು? ನೀವು ಅಲ್ಲಿ ಇದ್ದಿರಾ? ನಿಮ್ಮ ಬಳಿ ಯಾವುದೇ ವಿಶ್ವಾಸಾರ್ಹ ಮಾಹಿತಿ ಇದೆಯೇ? ಯಾವುದೇ ಆಧಾರವಿಲ್ಲದೆ ಯಾಕೆ ಇಂತಹ ಹೇಳಿಕೆಗಳನ್ನು ನೀಡುತ್ತೀರಿ? ನೀವು ನಿಜವಾದ ಭಾರತೀಯರಾಗಿದ್ದರೆ, ಇವೆಲ್ಲವನ್ನೂ ಹೇಳುತ್ತಿರಲಿಲ್ಲ" ಎಂದು ತೀವ್ರವಾಗಿ ಚಾಟಿ ಬೀಸಿದರು.

ಇದಕ್ಕೆ ಉತ್ತರ ನೀಡಿದ ಸಿಂಘ್ವಿ, "ನಮ್ಮ 20 ಭಾರತೀಯ ಸೈನಿಕರನ್ನು ಥಳಿಸಿ ಕೊಲ್ಲಲಾಗಿದೆ ಮತ್ತು ಇದು ಆತಂಕಕಾರಿ ವಿಷಯ ಎಂದು ನಿಜವಾದ ಭಾರತೀಯ ಹೇಳಬಹುದು" ಎಂದರು.

"ಗಡಿಯಲ್ಲಿ ಸಂಘರ್ಷ ಇರುವಾಗ ಎರಡೂ ಕಡೆ ಸಾವು-ನೋವುಗಳು ಆಗುವುದು ಅಸಾಮಾನ್ಯವೇನಲ್ಲ ಅಲ್ಲವೇ?" ಎಂದು ನ್ಯಾಯಮೂರ್ತಿ ದತ್ತಾ ಮರುಪ್ರಶ್ನಿಸಿದರು.

ಗಾಂಧಿ ಕೇವಲ ಸರಿಯಾದ ಮಾಹಿತಿ ಬಹಿರಂಗಪಡಿಸುವಿಕೆ ಮತ್ತು ಮಾಹಿತಿ ಮುಚ್ಚಿಡುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದರು ಎಂದು ಸಿಂಘ್ವಿ ಹೇಳಿದರು. ಆದರೆ ಪ್ರಶ್ನೆಗಳನ್ನು ಎತ್ತಲು ಸರಿಯಾದ ವೇದಿಕೆ ಇದೆ ಎಂದು ನ್ಯಾಯಮೂರ್ತಿ ದತ್ತಾ ಹೇಳಿದರು.

ಮಾನನಷ್ಟ ಮೊಕದ್ದಮೆಗೆ ತಾತ್ಕಾಲಿಕ ತಡೆ

ತಮ್ಮ ಕಕ್ಷಿದಾರರು ಹೇಳಿಕೆಗಳನ್ನು ಉತ್ತಮವಾಗಿ ರೂಪಿಸಬಹುದಿತ್ತು ಎಂದು ಸಿಂಘ್ವಿ ಒಪ್ಪಿಕೊಂಡರು. ಆದರೆ ವಿರೋಧ ಪಕ್ಷದ ನಾಯಕರಾಗಿ ಪ್ರಶ್ನೆಗಳನ್ನು ಎತ್ತುವುದು ಅವರ ಕರ್ತವ್ಯವಾಗಿದ್ದು, ಮಗೆ ಕಿರುಕುಳ ನೀಡುವ ಪ್ರಯತ್ನ ಇದು ಎಂದು ಅವರು ವಾದಿಸಿದರು. ಕ್ರಿಮಿನಲ್ ದೂರು ದಾಖಲಿಸುವ ಮೊದಲು ಆರೋಪಿಯ ಪೂರ್ವಭಾವಿ ವಿಚಾರಣೆ ಕಡ್ಡಾಯವಾಗಿತ್ತು, ಆದರೆ ಈ ಪ್ರಕರಣದಲ್ಲಿ ಅದನ್ನು ಪಾಲಿಸಿಲ್ಲ ಎಂದು ಸೆಕ್ಷನ್ 223 ಬಿಎನ್‌ಎಸ್‌ಎಸ್ ಉಲ್ಲೇಖಿಸಿದರು. ಆದರೆ ಈ ಅಂಶವನ್ನು ಹೈಕೋರ್ಟ್ ಮುಂದೆ ಪ್ರಸ್ತಾಪಿಸಲಾಗಿಲ್ಲ ಎಂದು ನ್ಯಾಯಮೂರ್ತಿ ದತ್ತಾ ಗಮನಸೆಳೆದರು.

ಈ ವಿಷಯವನ್ನು ಮುಂದಿಡಲು ವಿಳಂಬವಾಯಿತು ಎಂದು ಸಿಂಘ್ವಿ ಒಪ್ಪಿಕೊಂಡರು. ದೂರುದಾರರು "ಬಾಧಿತ ವ್ಯಕ್ತಿ" ಅಲ್ಲದಿದ್ದರೂ, "ಮಾನಹಾನಿಯಾದ ವ್ಯಕ್ತಿ" ಎಂದು ಸಿಂಘ್ವಿ ಪ್ರತಿಪಾದಿಸಿದರು.

ಅಂತಿಮವಾಗಿ, ಸುಪ್ರೀಂ ಕೋರ್ಟ್ ಈ ಅಂಶವನ್ನು ಪರಿಗಣಿಸಲು ಒಪ್ಪಿಕೊಂಡಿತು ಮತ್ತು ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಗಾಂಧಿಯವರ ವಿಶೇಷ ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡಿತು. ಮೂರು ವಾರಗಳ ಕಾಲ ಮಧ್ಯಂತರ ತಡೆಯಾಜ್ಞೆಯನ್ನು ನೀಡಲಾಯಿತು.

ಲಕ್ನೋದ ಸಂಸದ- ಶಾಸಕರ ನ್ಯಾಯಾಲಯದಲ್ಲಿ ದಾಖಲಾದ ಮಾನನಷ್ಟ ಪ್ರಕರಣ ಮತ್ತು ಫೆಬ್ರವರಿ 2025 ರಲ್ಲಿ ನೀಡಿದ್ದ ಸಮನ್ಸ್ ಆದೇಶವನ್ನು ಪ್ರಶ್ನಿಸಿ ರಾಹುಲ್‌ ಗಾಂಧಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಮೇ 29 ರಂದು ಅಲಹಾಬಾದ್ ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಭಾರತೀಯ ಸೇನೆಗೆ ಮಾನಹಾನಿ ಮಾಡುವ ಹೇಳಿಕೆಗಳನ್ನು ನೀಡುವುದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಸೇರಿಲ್ಲ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅಭಿಪ್ರಾಯಪಟ್ಟಿದ್ದರು.

ಭಾರತ್ ಜೋಡೋ ಯಾತ್ರೆಯ ವೇಳೆ ನೀಡಿದ ಹೇಳಿಕೆಗಳು

ಮಾಜಿ ಗಡಿ ರಸ್ತೆ ಸಂಸ್ಥೆ (ಬಿ.ಆರ್.ಒ) ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಅವರು ಈ ಮಾನನಷ್ಟ ದೂರು ದಾಖಲಿಸಿದ್ದಾರೆ. 2022ರ ಡಿಸೆಂಬರ್ 16 ರಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ವೇಳೆ ನೀಡಿದ ಹೇಳಿಕೆಗಳೇ ಇದಕ್ಕೆ ಕಾರಣ. 2022ರ ಡಿಸೆಂಬರ್ 9 ರಂದು ಭಾರತೀಯ ಮತ್ತು ಚೀನೀ ಸೇನೆಗಳ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಗಾಂಧಿಯವರ ಹೇಳಿಕೆಗಳು ಭಾರತೀಯ ಸೇನೆಗೆ ಮಾನಹಾನಿ ಮಾಡಿವೆ ಎಂದು ದೂರಿನಲ್ಲಿ ಹೇಳಲಾಗಿದೆ.

ಅರುಣಾಚಲ ಪ್ರದೇಶದಲ್ಲಿ ಚೀನೀ ಸೇನೆಯು ನಮ್ಮ ಸೈನಿಕರಿಗೆ 'ಥಳಿಸುತ್ತಿದೆ' ಮತ್ತು ಈ ಬಗ್ಗೆ ಭಾರತೀಯ ಮಾಧ್ಯಮಗಳು ಯಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಗಾಂಧಿ ಪದೇ ಪದೇ ಅವಹೇಳನಕಾರಿಯಾಗಿ ಹೇಳಿದ್ದಾರೆ ಎಂದು ನಿರ್ದಿಷ್ಟವಾಗಿ ಆರೋಪಿಸಲಾಗಿದೆ.

ಗಾಂಧಿಯವರ ಹೇಳಿಕೆಗಳು ಭಾರತೀಯ ಸೇನೆ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಅವರ ಕುಟುಂಬದ ಸದಸ್ಯರ ಸ್ಥೈರ್ಯವನ್ನು ಕುಗ್ಗಿಸಿವೆ ಎಂದು ಲಕ್ನೋ ನ್ಯಾಯಾಲಯದ ಆದೇಶದಲ್ಲಿ ಪ್ರಾಥಮಿಕವಾಗಿ ಹೇಳಲಾಗಿದ್ದು, ಇದನ್ನು ಪ್ರಶ್ನಿಸಿ ಗಾಂಧಿ ಹೈಕೋರ್ಟ್ ಮೆಟ್ಟಿಲೇರಿದ್ದರು. 

ಇನ್ನಷ್ಟು ಸುದ್ದಿಗಳಿಗೆ ಈ ಚಿತ್ರ ಕ್ಲಿಕ್‌ ಮಾಡಿರಿ: 

Thursday, September 8, 2022

ರೊಬೋಟ್‌ ಮಹಿಳೆ ʼಮಿಸ್‌ ಟ್ಯಾಂಗ್‌ ಯುʼ: ವಿಶ್ವದ ಮೊತ್ತ ಮೊದಲ ಕಂಪೆನಿ ಸಿಇಒ

 ರೊಬೋಟ್‌ ಮಹಿಳೆ ʼಮಿಸ್‌ ಟ್ಯಾಂಗ್‌ ಯುʼ: ವಿಶ್ವದ ಮೊತ್ತ ಮೊದಲ ಕಂಪೆನಿ ಸಿಇಒ

ಬೆಂಗಳೂರು: ವಿಶ್ವದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ʼರೊಬೋಟ್‌ ಮಹಿಳೆʼ ಚೀನಾದ ಕಂಪೆನಿಯೊಂದರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಕಗೊಂಡಿದೆ. ಯಂತ್ರಗಳು ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ/AI) ಶೀಘ್ರದಲ್ಲೇ ಗೇಮ್ ಚೇಂಜರ್ ಆಗಲಿವೆ ಎಂಬ ನಂಬಿಕೆ ಇದರೊಂದಿಗೆ ಇದೀಗ ನನಸಾಗಿದೆ.

ವೈಜ್ಞಾನಿಕ ಕಾಲ್ಪನಿಕ ಚಿತ್ರಗಳಲ್ಲಿ ಯಂತ್ರ ಮಾನವರು ಮಾನವರನ್ನೂ ಮೀರಿಸುವಂತೆ ವರ್ತಿಸುವುದನ್ನು ನಾವು ಕಂಡಿದ್ದೇವೆ. ಆದರೆ ಕೃತಕ ಬುದ್ಧಿಮತ್ತೆ ಇಂತಹ ಪರಿವರ್ತನೆಯನ್ನು ತರುವುದೇ ಎಂಬುದರ ಸ್ಪಷ್ಟ ಕಲ್ಪನೆ ಇನ್ನೂ ಮನುಷ್ಯರಿಗೆ ಬಂದಿಲ್ಲ. ಆದರೆ ಇದು ಸಾಧ್ಯ ಎಂಬುದನ್ನು ಚೀನಾದ ಮೆಟಾವರ್ಸ್‌ ಕಾರ್ಪೋರೇಷನ್‌ ಸಾಬೀತು ಪಡಿಸಿದೆ.

ಚೀನಾದ ಈ ಕಂಪೆನಿಯು ತನ್ನ ಸಿಇಒ ಆಗಿ ʼರೊಬೋಟ್‌ ಮಹಿಳೆʼಯನ್ನು ನೇಮಕ ಮಾಡಿದೆ.

ಚೀನಾದ ಮೆಟಾವರ್ಸ್ ಕಂಪೆನಿ ನೆಟ್‌ಡ್ರಾಗನ್ ವೆಬ್‌ಸಾಫ್ಟ್ ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಮಿಸ್ ಟ್ಯಾಂಗ್ ಯು ಎಂದು ಹೆಸರಿಸಲಾದ ʼರೊಬೋಟ್‌ ಮಹಿಳೆʼಯನ್ನು (ಹುಮನಾಯ್ಡ್ ರೋಬೋಟ್) ನೇಮಿಸಿದೆ ಎಂದು ʼದಿ ಮೆಟ್ರೋʼ ವರದಿ ಮಾಡಿದೆ. ಕಂಪೆನಿಯೊಂದರಲ್ಲಿ ರೋಬೋಟ್‌ಗೆ ಆಡಳಿತಾತ್ಮಕ ಸ್ಥಾನವನ್ನು ನೀಡಿರುವುದು ಜಗತ್ತಿನಲ್ಲಿ ಇದೇ ಮೊದಲು.

ರೋಬೋಟ್ ಅನ್ನು ಮಹಿಳೆಯ ಮಾದರಿಯಲ್ಲಿ ರಚಿಸಲಾಗಿದೆ. ಇಂತಹ ಬೆಳವಣಿಗೆಯೊಂದನ್ನು ಅಲಿಬಾಬಾ ಸಂಸ್ಥಾಪಕ ಮತ್ತು ಅಧ್ಯಕ್ಷ ಜಾಕ್ ಮಾ 2017ರಲ್ಲಿ ʼಟೈಮ್‌ʼ ನಿಯತಕಾಲಿಕದಲ್ಲಿ ಅವರು ಭವಿಷ್ಯ ನುಡಿದಿದ್ದರು. ಮುಂದಿನ 10 ವರ್ಷಗಳಲ್ಲಿ ಸಿಇಒ ಆಗಿ ರೋಬೋಟ್ ಬರಲಿದೆ ಎಂದು ಜಾಕ್‌ ಮಾ ನಂಬಿದ್ದರು.  ಜಗತ್ತು ಅದನ್ನು ಕೇವಲ 5 ವರ್ಷದಲ್ಲಿ ಸಾಧ್ಯವಾಗಿಸಿದೆ.

ಟ್ಯಾಂಗ್ ಯು ಕಂಪೆನಿಯ ಸಿಇಒ (CEO) ಆಗಿ ವ್ಯವಹಾರದ ಸಂಘಟನೆ ಮತ್ತು ದಕ್ಷತೆಯ ವಿಭಾಗವನ್ನು ಮುನ್ನಡೆಸುತ್ತದೆ ಎಂದು ಕಂಪೆನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 10 ಶತಕೋಟಿ ಡಾಲರ್ (ರೂ. 7,97,05,05,00,000) ಮಾರುಕಟ್ಟೆ ಬಂಡವಾಳ ಹೊಂದಿರುವ ನೆಟ್‌ ಡ್ರ್ಯಾಗನ್‌ ವೆಬ್‌ ಸಾಫ್ಟ್‌ ಕಂಪೆನಿಯ ಕಾರ್ಯಾಚರಣೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ʼಟ್ಯಾಂಗ್‌ ಯುʼ ಹೊರುತ್ತದೆ.

"ಕೃತಕ ಬುದ್ಧಿಮತ್ತೆಯು (AI) ಕಾರ್ಪೊರೇಟ್ ನಿರ್ವಹಣೆಯ ಭವಿಷ್ಯ ಎಂದು ನಾವು ನಂಬುತ್ತೇವೆ ಮತ್ತು ಮಿಸ್‌. ಟ್ಯಾಂಗ್ ಯು ಕೆಲಸವು, ನಮ್ಮ ಕಾರ್ಯಾಚರಣೆಯ ವಿಧಾನ ಬದಲಾಯಿಸಲು ಕೃತಕ ಬುದ್ಧಿಮತ್ತೆ (AI )ಬಳಕೆಯನ್ನು ನಿಜವಾಗಿಯೂ ಅಳವಡಿಸಿಕೊಳ್ಳುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆಎಂದು ನೆಟ್‌ ಡ್ರ್ಯಾಗನ್‌ ಅಧ್ಯಕ್ಷ ಡಾ. ಡೆಜಿಯನ್ ಲಿಯು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ವ್ಯಾಪಾರ ಮತ್ತು ಅಂತಿಮವಾಗಿ ನಮ್ಮ ಭವಿಷ್ಯದ ಕಾರ್ಯತಂತ್ರದ ಬೆಳವಣಿಗೆಗೆ ಚಾಲನೆ ನೀಡಲಿರುವ ಟ್ಯಾಂಗ್ ಯು ಕೆಲಸವು ಕಾರ್ಯಚಟುವಟಿಕೆಗಳ ಗುಣಮಟ್ಟ, ದಕ್ಷತೆ ಮತ್ತು ಪ್ರಕ್ರಿಯೆಯ ಹರಿವನ್ನು ಸುಧಾರಿಸುತ್ತದೆ. ಟ್ಯಾಂಗ್ ಯು ನೈಜ-ಸಮಯದ ಡೇಟಾ ಹಬ್ ಮತ್ತು ಹೆಚ್ಚು ಪರಿಣಾಮಕಾರಿ ಅಪಾಯ ನಿರ್ವಹಣಾ ವ್ಯವಸ್ಥೆಯ ಅಭಿವೃದ್ಧಿ ನಿಟ್ಟಿನಲ್ಲಿ ಸಹಾಯ ಮಾಡಲು ವಿಶ್ಲೇಷಣಾತ್ಮಕ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ ದಿನನಿತ್ಯದ ಕಾರ್ಯಾಚರಣೆಗಳಲ್ಲಿ ತರ್ಕಬದ್ಧ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ.ಎಂದು ಲಿಯು ಹೇಳಿದ್ದಾರೆ.

ನೆಟ್‌ಡ್ರಾಗನ್ ವೆಬ್‌ಸಾಫ್ಟ್ ಮಲ್ಟಿಪ್ಲೇಯರ್  ಕಂಪೆನಿಯು ಮೊಬೈಲ್ ಅಪ್ಲಿಕೇಶನ್‌ಗಳನ್ನು ರಚಿಸುವುದರ ಜೊತೆಗೆ, ಆನ್‌ಲೈನ್ ಆಟಗಳನ್ನು ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ.

Friday, October 9, 2020

ಚೀನಾದ ’ಟಿಕ್-ಟಾಕ್’ಗೆ ಪಾಕಿಸ್ತಾನ ನಿರ್ಬಂಧ

 ಚೀನಾದ ಟಿಕ್-ಟಾಕ್ಗೆ ಪಾಕಿಸ್ತಾನ ನಿರ್ಬಂಧ

ಭದ್ರತೆಗಾಗಿ ಅಲ್ಲ, ಅಶ್ಲೀಲ ವಿಷಯಕ್ಕಾಗಿ..!

ನವದೆಹಲಿ: ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ಚೀನಾದ ವಿಡಿಯೋ ಹಂಚಿಕೆ ಅಪ್ಲಿಕೇಶನ್ ಟಿಕ್-ಟಾಕ್ನ್ನು 2020 ಅಕ್ಟೋಬರ್ 09ರ ಶುಕ್ರವಾರ ನಿರ್ಬಂಧಿಸಿತು. ಆದರೆ ಭಾರತ, ಅಮೆರಿಕ ದೇಶಗಳಂತೆ ಭದ್ರತೆಯ ಕಾರಣಕ್ಕಾಗಿ ಅಲ್ಲ, ಬದಲಿಗೆ ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುತ್ತಿರುವ ಕಾರಣಕ್ಕಾಗಿ..!

ಪಾಕಿಸ್ತಾನದ ಸುದ್ದಿ ಚಾನೆಲ್ ಜಿಯೋ ನ್ಯೂಸ್ ವರದಿಯ ಪ್ರಕಾರ, ಕಾನೂನುಬಾಹಿರ ಆನ್ಲೈನ್ ವಿಷಯವನ್ನು ಪೂರ್ವಭಾವಿಯಾಗಿ ನಿಯಂತ್ರಿಸಲು ಪರಿಣಾಮಕಾರಿ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವಂತೆ ಸರ್ಕಾರ ನೀಡಿದ ಸೂಚನೆಗಳನ್ನು ಅನುಸರಿಸಲು ಚೀನಾದ ಅಪ್ಲಿಕೇಶನ್ ವಿಫಲವಾಗಿದೆ ಎನ್ನಲಾಯಿತು.

ಅಮೆರಿಕ, ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ವರ್ಷ ಸಮಸ್ಯೆಗಳನ್ನು ಎದುರಿಸುತ್ತಿರುವ ಟಿಕ್-ಟಾಕ್ ಆಪ್ಗೆ  ತನ್ನ ವೇದಿಕೆಯಲ್ಲಿ ಹಂಚಿಕೊಳ್ಳುವ ವಿಷಯಗಳನ್ನು ಅತಿರೇಕಗೊಳಿಸದಂತೆ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು ಜುಲೈ ತಿಂಗಳಲ್ಲಿ ಅಂತಿಮ ಎಚ್ಚರಿಕೆ ನೀಡಿತ್ತು.

"ವೀಡಿಯೊ-ಹಂಚಿಕೆ ಅಪ್ಲಿಕೇಶನ್ನಲ್ಲಿ ಅನೈತಿಕ ಮತ್ತು ಅಸಭ್ಯ ವಿಷಯ ಬಗ್ಗೆ ಸಮಾಜದ ಹಲವಾರು ವರ್ಗದ ಜನರು ತಮ್ಮ ದೂರುಗಳನ್ನು ನೀಡಿರುವುದರಿಂದ ನಿರ್ಬಂಧ ವಿಧಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಜುಲೈ ತಿಂಗಳಲ್ಲಿ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ನೀಡಿದ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಟಿಕ್-ಟಾಕ್, ೨೦೧೯ ಉತ್ತರಾರ್ಧದಲ್ಲಿ ಪಾಕಿಸ್ತಾನದ . ಮಿಲಿಯನ್ (೩೭ ಲಕ್ಷ) ವಿಡಿಯೋಗಳನ್ನು ನಿಯಮಾವಳಿ ಉಲ್ಲಂಘನೆಗಾಗಿ ಕಿತ್ತು ಹಾಕಲಾಗಿದೆ ಎಂದು ಹೇಳಿದೆ.

ಸಮಯದಲ್ಲಿ ಶೇಕಡಾ ೯೮ರಷ್ಟು ವಿಡಿಯೋಗಳನ್ನು ವರದಿ ಮಾಡುವ ಮೊದಲು ತೆಗೆದುಹಾಕಲಾಗಿತ್ತು ಮತ್ತು ಮತ್ತು ಶೇಕಡಾ ೮೯ ವಿಡಿಯೋಗಳನ್ನು "ಒಂದೇ ಒಂದು ವೀಕ್ಷಣೆಗೂ ಮುನ್ನ ತೆಗೆದುಹಾಕಲಾಗಿತ್ತು ಎಂದು ಟಿಕ್-ಟಾಕ್ ವಕ್ತಾರರು ಹೇಳಿದ್ದಾರೆ.

ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು ಟಿಕ್-ಟಾಕ್ಗೆ ಅಂತಿಮ ನೋಟಿಸ್ ನೀಡಿ, ದೂರುಗಳಿಗೆ ಸ್ಪಂದಿಸಲು ಅವಕಾಶ ನೀಡಲಾಗಿತ್ತು. ಆದರೂ ಆಪ್ನಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ನಿರಂತರವಾಗಿ ಪ್ರಕಟಿಸಲಾಗುತ್ತಿರುವುದು ಕಂಡು ಬಂದದ್ದರಿಂದ ಅದನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ.

ಟಿಕ್-ಟಾಕ್ನಲ್ಲಿ ಸತತವಾಗಿ ಪ್ರಕಟಗೊಳ್ಳುತ್ತಿದ್ದ ವಿಷಯಗಳ ಬಗೆಗಿನ ದೂರುಗಳು ಮತ್ತು ವಿಷಯಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಅಂತಿಮ ಸೂಚನೆ ನೀಡಿತು ಮತ್ತು ಪರಿಣಾಮಕಾರಿಯಾಗಿ ಕಾನೂನುಬಾಹಿರ ಆನ್ಲೈನ್ ವಿಷಯದ ಪೂರ್ವಭಾವಿ ಮಿತಗೊಳಿಸುವಿಕೆಯ ಯಾಂತ್ರಿಕ ವ್ಯವಸ್ಥೆ ಅಭಿವೃದ್ಧಿ ಪಡಿಸುವಂತೆ ಪ್ರಾಧಿಕಾರ ನೀಡಿದ ಸೂಚನೆಗಳನ್ನು ಅನುಸರಿಸಲು ಸಾಕಷ್ಟು ಸಮಯವನ್ನು ನೀಡಿತು ಎಂದು  ಪ್ರಾಧಿಕಾರ ತಿಳಿಸಿದೆ.

ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರವು ತನ್ನ ಸೂಚನೆಯನ್ನು ಟಿಕ್-ಟಾಕ್ಗೆ ತಿಳಿಸಿದ್ದು, ಕಾನೂನುಬಾಹಿರ ವಿಷಯವನ್ನು ಮಿತಗೊಳಿಸಿ ತೃಪ್ತಿದಾಯಕ ಕಾರ್ಯವಿಧಾನವನ್ನು ಟಿಕ್-ಟಾಕ್ ಅಭಿವೃದ್ಧಿಪಡಿಸಿದರೆ ತಾನು ನಿರ್ಧಾರವನ್ನು ಮರು ಪರಿಶೀಲಿಸಬಹುದು ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.

Tuesday, August 25, 2020

ಲಡಾಖ್‌ಗೆ ಹೊಸ ಸರ್ವ ಋತು ಮಾರ್ಗ: ಭಾರತ ಕ್ರಮ

ಲಡಾಖ್‌ಗೆ ಹೊಸ ಸರ್ವ ಋತು ಮಾರ್ಗ: ಭಾರತ ಕ್ರಮ

ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಘರ್ಷಣೆಯ ಹಿನ್ನೆಲೆಯಲ್ಲಿ ಲಡಾಖ್ ತಲುಪಲು ಸರ್ವ ಋತು ಮಾರ್ಗ ರಚನೆಯನ್ನು ಪೂರ್ಣಗೊಳಿಸಲು ಭಾರತದ ರಾಷ್ಟ್ರೀಯ ಭದ್ರತಾ ಯೋಜಕರು ಶ್ರಮಿಸುತ್ತಿದ್ದಾರೆ. ಇದು ಹಿಮಾಚಲ ಪ್ರದೇಶದ ದಾರ್ಚಾವನ್ನು ಕಾರ್ಗಿಲ್‌ನ ಝನ್ಸ್ಕರ್ ಕಣಿವೆಯ ಪಡುಮ್ ಮೂಲಕ ನಿಮುವಿಗೆ ಸಂಪರ್ಕಿಸುತ್ತದೆ ಎಂದು ವರದಿಗಳು 2020 ಆಗಸ್ಟ್ 25ರ ಮಂಗಳವಾರ ತಿಳಿಸಿದವು.

ನಿಮು ಲೇಹ್ ಪಟ್ಟಣದಿಂದ ೩೫ ಕಿಲೋಮೀಟರ್ ದೂರದಲ್ಲಿದೆ ಮತ್ತು ಪೂರ್ವ ಲಡಾಕ್ ಮತ್ತು ಸಿಯಾಚಿನ್ ಹಿಮನದಿಯ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿರುವ ೧೪ ಕೋರ್‌ನ ಪ್ರಧಾನ ಕಚೇರಿಯನ್ನು ಹೊಂದಿದೆ.

ಮಾರ್ಗವು ಈಗಾಗಲೇ ಇತರ ಎರಡು ಮಾರ್ಗಗಳಿಂದ ಸಂಪರ್ಕ ಹೊಂದಿದ ಲಡಾಖ್‌ಗೆ ಮೊತ್ತ ಮೊದಲ ಸರ್ವ ಋತು ಮಾರ್ಗವಾಗಿದೆ. ಮೊದಲನೆಯದು ಜಮ್ಮು ಮತ್ತು ಕಾಶ್ಮೀರದ ಜೊಜಿ ಲಾ ಮೂಲಕ ಇರುವ ಮಾರ್ಗವಾದರೆ, ಎರಡನೆಯದು ಹಿಮಾಚಲದ ಮನಾಲಿ-ಉಪಶಿ-ಲೇಹ್ ಅಕ್ಷದ ಮೂಲ ಸಾಗುವ ಮಾರ್ಗವಾಗಿದೆ. ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು ೪೬ ಕಿ.ಮೀ ಕಡಿಮೆ ಮಾಡುವ ರೋಹ್ಟಾಂಗ್ ಲಾದಲ್ಲಿರುವ .೦೨ ಕಿಲೋಮೀಟರ್ ಅಟಲ್ ಸುರಂಗವು ಮುಂದಿನ ತಿಂಗಳು ಕಾರ್‍ಯಾಚರಣೆಗೆ ಲಭ್ಯವಾಗಲಿದೆ.

ಪಾಕಿಸ್ತಾನ ಮತ್ತು ಅದರ ಸರ್ವಋತು ಸ್ನೇಹಿತ ಚೀನಾವು ಸಿಯಾಚಿನ್ ಹಿಮನದಿ ಮತ್ತು ದೌಲತ್ ಬೇಗ್ ಓಲ್ಡಿ ಮೇಲೆ ಹೇಗೆ ಕಣ್ಣಿಟ್ಟಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಲಡಾಖ್‌ನ್ನು ಸಂಪರ್ಕಿಸಲು ಮೂರನೆಯ  ಮಾರ್ಗವನ್ನು ತುರ್ತಾಗಿ ರಚಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಮಿಲಿಟರಿ ಕಮಾಂಡರುಗಳು  ತಿಳಿಸಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾ ಜೊತೆಗೆ ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಸೇನೆ ಜಮಾವಣೆ ಆರಂಭಿಸಿದ ಬಳಿಕ ರಕ್ಷಣಾ ಸಚಿವಾಲಯದ ರಸ್ತೆ ಯೋಜನೆಗೆ ರಸ್ತೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಮತ್ತು ಅವರ ಸಹೋದ್ಯೋಗಿ ಜನರಲ್ ವಿಕೆ ಸಿಂಗ್ ಒತ್ತು ನೀಡುತ್ತಿದ್ದಾರೆ. ಸೇನೆ ವಾಪಸಾತಿ ಸಂಬಂಧ ಮಾತುಕತೆ ನಡೆಸುತ್ತಿದ್ದರೂ, ಸೈನಿಕರನ್ನು ಹಿಂಪಡೆಯಲು ಚೀನಾವು ಹಿಂಜರಿಯುತ್ತಿರುವುದನ್ನೂ ಭಾರತ ಗಮನದಲ್ಲಿ ಇಟ್ಟುಕೊಂಡಿದೆ.

ಮೂರನೇ ಮಾರ್ಗದಲ್ಲಿ ಡಾರ್ಚಾ-ಪಡುಮ್-ನಿಮು ಚಾರಣ ಮಾರ್ಗವನ್ನು ಮೆಟಲ್ಡ್ ರಸ್ತೆಯಾಗಿ ನವೀಕರಿಸುವ ಮತ್ತು ಮತ್ತು ಡಾರ್ಚಾ-ಪಾಡುಮ್ ಮಾರ್ಗದಲ್ಲಿ ಶಿಂಗೊ ಲಾ ಅಡಿಯಲ್ಲಿ . ಕಿಲೋಮೀಟರ್ ಸುರಂಗವನ್ನು ನಿರ್ಮಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ದಶಕದಿಂದ ನೆನೆಗುದಿಯಲ್ಲಿದ್ದ ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.

ಯೋಜನೆಯು ತನ್ನ ಎರಡು ವರ್ಷಗಳ ಗಡುವನ್ನು ಪೂರೈಸುವುದನ್ನು ಖಾತರಿ ಪಡಿಸಿಕೊಳ್ಳುವ ಸಲುವಾಗಿ ರೋಹ್ಟಾಂಗ್ ಲಾದಲ್ಲಿ .೦೨ ಕಿ.ಮೀ ಸುರಂಗವನ್ನು ನಿರ್ಮಿಸಿದ ಕಂಪನಿಗೆ ಕಾಲಮಿತಿಯಲ್ಲಿ ಪೂರೈಸುವ ಷರತ್ತಿನ ಮೇಲೆ ಸುರಂಗವನ್ನು ನಿರ್ಮಿಸುವ ಕೆಲಸವನ್ನು ನೀಡಬೇಕೆಂದು ಗಡ್ಕರಿ ಅವರ ಸಚಿವಾಲಯವು ಪ್ರಸ್ತಾಪಿಸಿದೆ.

ಮಿಲಿಟರಿ ಕಮಾಂಡರ್‌ಗಳ ಪ್ರಕಾರ, ವರ್ಷಪೂರ್ತಿ ರಸ್ತೆಯನ್ನು ಮುಕ್ತವಾಗಿ ಇಡಬೇಕಾದರೆ ಈಗಿರುವ ಮನಾಲಿ-ಲೇ ಮಾರ್ಗದಲ್ಲಿ ಇನ್ನೂ ನಾಲ್ಕು ಎತ್ತರದ ಪರ್ವತ ಮಾರ್ಗಗಳ ಅಡಿಯಲ್ಲಿ ಸುರಂಗ ಮಾರ್ಗದ ಅಗತ್ಯವಿದೆ. ಮಾರ್ಗದಲ್ಲಿ ರೋಹ್ಟಾಂಗ್ ಲಾದಲ್ಲಿರುವ ಅಟಲ್ ಸುರಂಗವನ್ನು ೧೦,೧೭೧ ಅಡಿ ಎತ್ತರದಲ್ಲಿ ನಿರ್ಮಿಸಲಾಗಿz. ಇದು ಇಷ್ಟೊಂದು ಎತ್ತರದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತ್ಯಂತ ಉದ್ದವಾದ ಸುರಂಗವಾಗಿದೆ.

ಅಸ್ತಿತ್ವದಲ್ಲಿರುವ ಮನಾಲಿ-ಲೇ ಮಾರ್ಗದಲ್ಲಿ ಸುರಂಗಗಳ ಅಗತ್ಯವಿರುವ ನಾಲ್ಕು ಪಾಸ್‌ಗಳು ಅತ್ಯಂತ  ಎತ್ತರದಲ್ಲಿವೆ: ಬಾರಾಲಾಚಾ ಲಾ (೧೬,೫೦೦ ಅಡಿ), ನಕೀ ಲಾ (೧೫,೫೪೭ ಅಡಿ), ಲಾಚುಂಗ್ ಲಾ (೧೬,೬೧೬ ಅಡಿ), ಮತ್ತು ಟ್ಯಾಂಗ್ಲಾಂಗ್ ಲಾ (೧೭,೪೮೦ ಅಡಿ). ಕಣಿವೆಗಳು ಮೇ ಮಧ್ಯದಿಂದ ನವೆಂಬರ್ ಮಧ್ಯದ ನಡುವಿನ ಸಂಚಾರಕ್ಕೆ ಮಾತ್ರ ತೆರೆದಿರುತ್ತವೆ ಮತ್ತು ವರ್ಷದ ಇತರ ಸಮಯದಲ್ಲಿ ಇದು ಸಂಪೂರ್ಣವಾಗಿ ಹಿಮಾವೃತವಾಗಿರುತ್ತವೆ.

ಏನಿದ್ದರೂ, ಡಾರ್ಚಾ-ಪಡುಮ್-ನಿಮು ಮಾರ್ಗವು ಡಾರ್ಚಾ ಮತ್ತು ಪಡುಮ್ ನಡುವಿನ ೧೬,೫೭೦ ಅಡಿ ಶಿಂಗೊ ಲಾ ಮೂಲಕ ಸಾಗಲು ಕೇವಲ . ಕಿ.ಮೀ ಸುರಂಗದ ಅಗತ್ಯವಿರುತ್ತದೆ, ಚಳಿಗಾಲದಲ್ಲಿ ಕೇವಲ ಎರಡು ತಿಂಗಳು ಮಾತ್ರ ರಸ್ತೆಯನ್ನು ಮುಚ್ಚಬೇಕಾಗುತ್ತದೆ. ಡಾರ್ಚಾವು ಮನಾಲಿಯಿಂದ ೧೪೭ ಕಿಲೋಮೀಟರ್ ದೂರದಲ್ಲಿದೆ ಮತ್ತು ಲೆಹ್ ಹೆದ್ದಾರಿಯಲ್ಲಿ ಜಿಸ್ಪಾ ಮತ್ತು ಕೀಲಾಂಗ್ ನಂತರ ಇದೆ.

೨೩೦ ಕಿ.ಮೀ ಉದ್ದದ ಸಿಂಗಲ್ ಲೇನ್ ರಸ್ತೆಯ ಮೂಲಕ ಕಾರ್ಗಿಲ್‌ಗೆ ಸಂಪರ್ಕ ಹೊಂದಿದ ಝನ್ಸ್ಕರ್  ಉಪವಿಭಾಗ ಪಟ್ಟಣದೊಂದಿಗೆ ಡಾರ್ಚಾ ಮತ್ತು ಪಡುಮ್ ನಡುವಿನ ಅಂತರವು ಸುಮಾರು ೧೪೮ ಕಿಲೋಮೀಟರಿನಷ್ಟು ಇದೆ. ಲಡಾಖ್‌ನ ೧೪ ಕೋರ್ ಕೇಂದ್ರ ಕಚೇರಿಯಾದ ಪಡುಮ್ ಮತ್ತು ನಿಮು ನಡುವೆ ಇನ್ನೊಂದು ೨೬೦ ಕಿ.ಮೀ ರಸ್ತೆಯ ಕಾಮಗಾರಿಗಳೊಂದಿಗೆ ದಾರ್ಚಾ-ಪಡುಮ್ ರಸ್ತೆಯನ್ನು ನಿರ್ಮಿಸುವ ಕೆಲಸ ಈಗಾಗಲೇ ನಡೆಯುತ್ತಿದೆ.

ನಾವು ಲಮಾಯೂರು ಮಠದ ಸುತ್ತಲಿನ ಲೇಹ್-ಕಾರ್ಗಿಲ್ ಹೆದ್ದಾರಿಯನ್ನು ವಿಭಜಿಸುವ ಮತ್ತು ದರ್ಚಾವನ್ನು ಪಡುಮ್ ಮೂಲಕ ಸಂಪರ್ಕಿಸುವ ರಸ್ತೆಯನ್ನು ನಿರ್ಮಿಸಲು ನೋಡುತ್ತಿದ್ದೇವೆ. ರಸ್ತೆಯು ಭಾರತೀಯ ಮಿಲಿಟರಿ ಮತ್ತು ಸ್ಥಳೀಯ ಜನರಿಗೆ ವರ್ಷಪೂರ್ತಿ ಸರಬರಾಜುಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಮಾಜಿ ಸೇನಾ ಮುಖ್ಯಸ್ಥರು ಹೇಳಿದರು.

ಸಿಯಾಚಿನ್, ಕಾರ್ಗಿಲ್ ಮತ್ತು ಡಿಬಿಒ ಕ್ಷೇತ್ರಗಳಿಗೆ ಮಿಲಿಟರಿ ಕಾವಲುಗಾರರಿಗೆ ಸರಬರಾಜು ಮಾರ್ಗಗಳನ್ನು ಮುಕ್ತವಾಗಿರಿಸುವುದರ ಹೊರತಾಗಿ, ಡಾರ್ಚಾ-ನಿಮು ಮಾರ್ಗವು ತನ್ನ ಜನರ ಆಕಾಂಕ್ಷೆಗಳಿಗೆ ಸರಿಹೊಂದುವಂತೆ ನೂತನ ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗೆ ನೆರವಾಗಲಿದೆ.

Advertisement