Showing posts with label ಇಂದಿನ ಇತಿಹಾಸ History Today (ಸೆಪ್ಟೆಂಬರ್). Show all posts
Showing posts with label ಇಂದಿನ ಇತಿಹಾಸ History Today (ಸೆಪ್ಟೆಂಬರ್). Show all posts

Wednesday, September 24, 2025

ಇಂದಿನ ಇತಿಹಾಸ History Today ಸೆಪ್ಟೆಂಬರ್ 24

 ಇಂದಿನ ಇತಿಹಾಸ   History Today  ಸೆಪ್ಟೆಂಬರ್ 24

2025: ಬೆಂಗಳೂರು: ಪದ್ಮಭೂಷಣ, ಪದ್ಮಶ್ರೀ ಮತ್ತು ಸರಸ್ವತಿ ಸಮ್ಮಾನ್‌, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡದ ಮೇರು ಸಾಹಿತಿ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (ಎಸ್.‌ ಎಲ್.‌ ಭೈರಪ್ಪ) ಅವರು 2025  ಸೆಪ್ಟೆಂಬರ್‌ 24ರ ಬುಧವಾರ ತಮ್ಮ 94ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.ಎಸ್.‌ ಎಲ್.‌ ಭೈರಪ್ಪ ಒಬ್ಬ ಭಾರತೀಯ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಚಿತ್ರಕಥೆಗಾರರಾಗಿದ್ದರು, ʼಪರ್ವʼ ಸೇರಿದಂತೆ ಕನ್ನಡದಲ್ಲಿ ಹಲವಾರು ಜನಪ್ರಿಯ ಕೃತಿಗಳನ್ನು ರಚಿಸಿದ ಅವರು ಆಧುನಿಕ ಭಾರತದ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿತರಾಗಿದ್ದಾರೆ. ಅವರ ಕಾದಂಬರಿಗಳು ವಿಷಯ, ರಚನೆ ಮತ್ತು ಪಾತ್ರಗಳ ವಿಷಯದಲ್ಲಿ ವಿಶಿಷ್ಟವಾಗಿವೆ. ಭೈರಪ್ಪ ಅವರು ಹಾಸನದಲ್ಲಿ 1931ರ ಆಗಸ್ಟ್‌ 20ರಂದು ಜನಿಸಿದ್ದರು. ಅವರು  ಮಹಾರಾಜ ಸಯಾಜಿರಾವ್ ಬರೋಡಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದರು.

2019: ನವದೆಹಲಿ: ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನದ ಸಾಧನೆಗಾಗಿ ಕೇಂದ್ರ ಸರ್ಕಾರವು ಕೊಡುವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ  ಬಾರಿ ಬಾಲಿವುಡ್ ಚಿತ್ರರಂಗದ ಬಿಗ್ ಬಿ ಅಮಿತಾಭ್ ಬಚ್ಚನ್ ಆಯ್ಕೆಯಾದರುಬಚ್ಚನ್  ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಬಗ್ಗೆ  2019 ಸೆಪ್ಟೆಂಬರ್  24ರ ಮಂಗಳವಾರ ಟ್ವೀಟ್ ಮಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, "ಎರಡು ತಲೆಮಾರುಗಳನ್ನು ರಂಜಿಸಿದ ಮತ್ತು ಸ್ಫೂರ್ತಿಯ ಸೆಲೆಬೆಳ್ಳಿಪರದೆಯ ದಂತಕಥೆ ಅಮಿತಾಭ್ ಬಚ್ಚನ್ ಅವರು ಅವಿರೋಧವಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಇಡೀ ದೇಶ ಮತ್ತು ಅಂತರಾಷ್ಟ್ರೀಯ ಸಮುದಾಯಕ್ಕೆ ಇದು ಖುಷಿ ಕೊಡುವ ಸಂಗತಿಅಮಿತಾಭ್ ಜಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳುಎಂದು ತಿಳಿಸಿದರು. ಸಿನಿಮಾ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ಭಾರತೀಯ ಸಿನಿಮಾ ರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಹೆಸರಲ್ಲಿ ಭಾರತ ಸರ್ಕಾರವು 1969ರಿಂದ ಪ್ರಶಸ್ತಿ ನೀಡುತ್ತಿದೆಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯದಿಂದ ಆಯೋಜಿಸಲಾಗುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.ಪ್ರಶಸ್ತಿಯು ಸ್ವರ್ಣ ಕಮಲ ಪದಕಶಾಲು ಹಾಗೂ 10 ಲಕ್ಷ ರೂ.ನಗದು ಬಹುಮಾನವನ್ನು ಒಳಗೊಂಡಿರುತ್ತದೆನಟಿ ದೇವಿಕಾ ರಾಣಿ ಅವರಿಗೆ 1969ರಲ್ಲಿ 17ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೊತ್ತ ಮೊದಲ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

 
2019: ನ್ಯೂಯಾರ್ಕ್: ಕಾಶ್ಮೀರ ವಿವಾದ ಇತ್ಯರ್ಥಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಧಾನಕಾರನಾಗಲು ತಾನು ಸಿದ್ಧ ಎಂಬುದಾಗಿ 2019 ಸೆಪ್ಟೆಂಬರ್ 24ರಂದು ೨೪ ಗಂಟೆಗಳ ಒಳಗಾಗಿ ಎರಡು ಬಾರಿ ಹೇಳಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ’ಆದರೆ ಉಭಯ ರಾಷ್ಟ್ರಗಳು ಒಪ್ಪಿ ಬಯಸಿದರೆ ಮಾತ್ರ’ ಎಂಬ ಶರತ್ತು ವಿಧಿಸಿ ಬುದ್ದಿವಂತಿಕೆ ಮೆರೆದರುಇದೇ ವೇಳೆಗೆ ಪಾಕಿಸ್ತಾನಕ್ಕೆ ಬೇಕಾದ ಮಾತುಗಳನ್ನು ತನ್ನ ಬಾಯಿಯಿಂದ ಉದುರಿಸಲು ಯತ್ನಿಸಿದ ಪಾಕ್ ಪತ್ರಕರ್ತನಿಗೆ ಅವರು ತಿರುಗೇಟು ಕೊಟ್ಟರು.ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯ ವೇಳೆಯಲ್ಲಿ ಜಮ್ಮು -ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಯ ಪ್ರಸ್ತಾಪ ಮಾಡಿದ್ದ ಡೊನಾಲ್ಡ್ ಟ್ರಂಪ್ ಅವರು ವಿಶ್ವಸಂಸ್ಥೆ ಮಹಾಸಭೆಯಲ್ಲಿನ ತಮ್ಮ ಭಾಷಣಕ್ಕೆ ಮುನ್ನ ಪುನಃ ಉಭಯ ದೇಶಗಳು ಬಯಸಿದರೆ ತಾನು  ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಹೇಳಿದರುವಿಶ್ವಸಂಸ್ಥೆ ಮಹಾ ಅಧಿವೇಶನದ ಬಳಿಕ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಮಾತುಕತೆ ನಡೆಸಿದ ಟ್ರಂಪ್ ಭಯೋತ್ಪಾದನೆಗೆ ತಿರುಗೇಟು ಕೊಡಲು ಮೋದಿ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಶ್ಲಾಘಿಸಿದರು.೨೪ ಗಂಟೆಗಳಲ್ಲಿ ಎರಡನೇ ಬಾರಿ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಯ ಪ್ರಸ್ತಾಪ ಮಾಡುವುದರೊಂದಿಗೆ ಟ್ರಂಪ್ ಅವರು ಪ್ರಸ್ತುತ ವರ್ಷದಲ್ಲಿ ಒಟ್ಟು ನಾಲ್ಕು ಬಾರಿ  ಪ್ರಸ್ತಾಪ ಮಾಡಿದಂತಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)


2019: ನವದೆಹಲಿ: ತಂತ್ರಜ್ಞಾನವು ಅಪಾಯಕಾರಿ ತಿರುವನ್ನು ಪಡೆದುಕೊಂಡಿದೆ ಎಂಬುದಾಗಿ 2019 ಸೆಪ್ಟೆಂಬರ್ 24ರ ಮಂಗಳವಾರ ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್ರಾಷ್ಟ್ರದಲ್ಲಿ ಸಾಮಾಜಿಕ ಮಾಧ್ಯಮದ ದುರುಪಯೋಗವನ್ನು ನಿಗ್ರಹಿಸಲು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲು ಬೇಕಾದ ಕಾಲಾವಕಾಶದ ಬಗ್ಗೆ ಮೂರು ವಾರಗಳ ಒಳಗಾಗಿ ತನಗೆ ತಿಳಿಸುವಂತೆ ನಿರ್ದೇಶಿಸಿತು.ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಮತ್ತು ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಪೀಠವು ಕೆಲವು ಸಾಮಾಜಿಕ ಮಾಧ್ಯಮ ವೇದಿಕೆಗಳು ಸಂದೇಶ ಅಥವಾ ಅಂತರ್ಜಾಲ ಮಾಹಿತಿಯ ಸೃಷ್ಟಿಕರ್ತರನ್ನು ಪತ್ತೆಹಚ್ಚಲು ವಿಫಲವಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿಈಗ ಸರ್ಕಾರ ಮಧ್ಯಪ್ರವೇಶ ಮಾಡಲೇಬೇಕು ಎಂದು ಹೇಳಿತು. ವೈಜ್ಞಾನಿಕ ವಿಷಯದ ಬಗ್ಗೆ ನಿರ್ಧರಿಸಿಲು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ಸಮರ್ಥವಲ್ಲಇಂತಹ ವಿಷಯಗಳ ಬಗ್ಗೆ ವ್ಯವಹರಿಸಲು ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವುದು ಸರ್ಕಾರದ ಕೆಲಸ ಎಂದು ಹೇಳಿತು.ತಾಂತ್ರಿಕ ಪ್ರಗತಿಯಲ್ಲಿನ ಕುಂದುಕೊರತೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತ ಪಡಿಸಿದ ಕೋರ್ಟ್, ‘ತಂತ್ರಜ್ಞಾನ ಬೆಳೆಯುತ್ತಿರುವ ರೀತಿ ಅಪಾಯಕಾರಿಸಾಮಾಜಿಕ ಮಾಧ್ಯಮಗಳಿಗಾಗಿ ಮಾರ್ಗದರ್ಶಿ ಸೂತ್ರ ರಚಿಸುವ ಸಂಬಂಧ ಸರ್ಕಾರ ವಸ್ತುಸ್ಥಿತಿ ವರದಿಯನ್ನು ನೀಡಬೇಕು ಎಂದು ಹೇಳಿತು.(ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (ಎಂಎಸ್ಸಿಬಿಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ವಹಿವಾಟು ನಡೆಸಿರುವ ಆರೋಪದ ಮೇಲೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಅವರ ಸೋದರಳಿಯ ಹಾಗೂ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಜಾರಿ ನಿರ್ದೇಶನಾಲಯವು 2019 ಸೆಪ್ಟೆಂಬರ್  24ರ ಮಂಗಳವಾರ ಪ್ರಕರಣ ದಾಖಲಿಸಿತು.ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಇನ್ನು ಒಂದು ತಿಂಗಳು ಬಾಕಿ ಇರುವಂತೆ  ವಿದ್ಯಮಾನ ಘಟಿಸಿತು. ಬಾಂಬೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಎಂಎಸ್ಸಿಬಿ ಹಗರಣ ಪ್ರಕರಣ ಸಂಬಂಧ ಕಳೆದ ತಿಂಗಳು ಮುಂಬೈ ಪೊಲೀಸರು ಅಜಿತ್ ಪವಾರ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.ರೈತರು ಮತ್ತು ಕಾರ್ಯಕರ್ತರು ಪಕ್ಷದ ನಾಯಕ ಜಯಂತ್ ಪಾಟೀಲ್ ಮತ್ತು ರಾಜ್ಯದ ೩೪ ಜಿಲ್ಲೆಗಳ ಸೂಪರ್ ಸೀಡ್ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಹಲವರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.೨೦೦೭ ರಿಂದ ೨೦೧೧ರ ನಡುವೆ ನಡೆದ ಎಂಎಸ್ಸಿಬಿ ಹಗರಣದಿಂದ ಸುಮಾರು ಒಂದು ಸಾವಿರ ಕೋಟಿ ನಷ್ಟವಾಗಿದೆ ಎಂದು ಆರೋಪಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಪಾಕಿಸ್ತಾನ ಭಾರತ ಗಡಿ ಪ್ರದೇಶದಲ್ಲಿ 2019 ಸೆಪ್ಟೆಂಬರ್ 24ರ ಮಂಗಳವಾರ ಸಂಜೆ .೩೧ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ . ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮವಾಗಿ ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಪಾಕಿಸ್ತಾನದಲ್ಲಿ ೧೯ ಮಂದಿ ಸಾವನ್ನಪ್ಪಿ೩೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಕ್ ಆಕ್ರಮಿಕ ಕಾಶ್ಮೀರದಿಂದ ಬಂದ ವರದಿ ತಿಳಿಸಿದೆ.ಸುಮಾರು -೧೦ ಸೆಕೆಂಡ್ ಕಾಲದ ಭೂಕಂಪದ ಪರಿಣಾಮವಾಗಿ ಭಾರತದ ರಾಜಧಾನಿ ದೆಹಲಿರಾಷ್ಟ್ರೀಯ ರಾಜಧಾನಿ ಪ್ರದೇಶ (ನ್ಯಾಷನಲ್ ಕ್ಯಾಪಿಟಲ್ ರೀಜನ್ಎನ್ಸಿಆರ್ಪಂಜಾಬ್ಹರಿಯಾಣದಲ್ಲಿ  ಭೂಮಿ ಕಂಪಿಸಿತು ಎಂದು ಭೂಕಂಪಶಾಸ್ತ್ರ ಇಲಾಖೆ ಅಧಿಕಾರಿಗಳು ಹೇಳಿದರು.ಇಸ್ಲಾಮಾಬಾದ್ಪೇಶಾವರರಾವಲ್ಪಿಂಡಿ ಮತ್ತು ಲಾಹೋರ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಭೂಕಂಪ ಸಂಭವಿಸಿತು ಎಂದು ಪಾಕಿಸ್ತಾನದ ’ಡಾನ್ ನ್ಯೂಸ್’ ವರದಿ ಮಾಡಿತು.ಭೂಕಂಪದ ಪರಿಣಾಮವಾಗಿ ಭಾರತದಲ್ಲಿ ಸಾವು ನೋವು ಸಂಭವಿಸಿರುವ ಬಗ್ಗೆ ತತ್ ಕ್ಷಣಕ್ಕೆ ಯಾವುದೇ ವರದಿಗಳು ಬಂದಿಲ್ಲಭೂಕಂಪನದಿಂದಾಗಿ ಭೂಮಿ ೪೦ ಕಿಮಿ ಆಳದವರೆಗೆ ಭೂಮಿ ಕಂಪಿಸಿತುಪ್ರಾಥಮಿಕ ವರದಿಗಳ ಪ್ರಕಾರ ಇಸ್ಲಾಮಾಬಾದಿನಲ್ಲಿ ಭೂಕಂಪನಕ್ಕೆ ಕಟ್ಟಡವೊಂದು ಕುಸಿದು ಬಿದ್ದು ಕನಿಷ್ಠ ೧೯ ಮಂದಿ ಮೃತರಾಗಿ ೩೦೦ಕ್ಕೂ ಹೆಚ್ಚು ಮಂದಿ  ಗಾಯಗೊಂಡರು ಎಂದು ವರದಿ ತಿಳಿಸಿದೆ.(ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

Thursday, September 11, 2025

ಇಂದಿನ ಇತಿಹಾಸ History Today ಸೆಪ್ಟೆಂಬರ್‌ 11

 ಇಂದಿನ ಇತಿಹಾಸ History Today ಸೆಪ್ಟೆಂಬರ್‌ 11

2025: ವಾಷಿಂಗ್ಟನ್:‌ ಸಂಪ್ರದಾಯವಾದಿ ಕಾರ್ಯಕರ್ತ ಮತ್ತು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರ ಚಾರ್ಲಿ ಕಿರ್ಕ್ ಅವರು ಯೂಟಾಹ್ ಕಾಲೇಜು ಕಾರ್ಯಕ್ರಮವೊಂದರಲ್ಲಿ 2025 ಸೆಪ್ಟೆಂಬರ್‌ ೧೧ರ ಗುರುವಾರ ಗುಂಡೇಟಿಗೆ ಬಲಿಯಾದರು. ಅಧ್ಯಕ್ಷ ಟ್ರಂಪ್ ಅವರು "ಶ್ರೇಷ್ಠ ಮತ್ತು ದಂತಕಥೆಯಾದ" ಕಿರ್ಕ್ ಅವರ ಸಾವಿನ ಸುದ್ದಿಯನ್ನು ಖಚಿತಪಡಿಸಿದರು. ತಮ್ಮ ಭಾಷಣದಲ್ಲಿರಾಜಕೀಯ ಹಿಂಸಾಚಾರವನ್ನು ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಭರವಸೆ ನೀಡಿದರು. "ನನ್ನ ಆಡಳಿತವು ಈ ದುಷ್ಕೃತ್ಯ ಮತ್ತು ಇತರ ರಾಜಕೀಯ ಹಿಂಸಾಚಾರಕ್ಕೆ ಕೊಡುಗೆ ನೀಡಿದ ಪ್ರತಿಯೊಬ್ಬರನ್ನುಅದಕ್ಕೆ ಹಣಕಾಸು ಒದಗಿಸುವ ಮತ್ತು ಬೆಂಬಲಿಸುವ ಸಂಸ್ಥೆಗಳು ಸೇರಿದಂತೆಮತ್ತು ನಮ್ಮ ನ್ಯಾಯಾಧೀಶರುಕಾನೂನು ಜಾರಿ ಅಧಿಕಾರಿಗಳು ಮತ್ತು ನಮ್ಮ ದೇಶಕ್ಕೆ ಸುವ್ಯವಸ್ಥೆಯನ್ನು ತರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಿದೆ" ಎಂದು ಅಧ್ಯಕ್ಷ ಟ್ರಂಪ್ ಹೇಳಿದರು.


2025
:ನವದೆಹಲಿ: ನೇಪಾಳದಲ್ಲಿ ನಾಟಕೀಯ ದೃಶ್ಯಗಳು ಅನಾವರಣಗೊಂಡವು. ಪ್ರತಿಭಟನಾಕಾರರ ಸಿಟ್ಟಿಗೆ ಗುರಿಯಾದ 'ಭ್ರಷ್ಟಮಂತ್ರಿಗಳು ಮತ್ತು ಅವರ ಕುಟುಂಬಗಳನ್ನು ಸೇನಾ  ಹೆಲಿಕಾಪ್ಟರ್‌ಗಳ ರಕ್ಷಣಾ ಸ್ಲಿಂಗ್‌ಗಳ ಮೂಲಕ ಸ್ಥಳಾಂತರಿಸಲಾಯಿತು. ಸರ್ಕಾರದ ಅಧಿಕಾರಿಗಳು ಮತ್ತು ಅವರ ಸಂಬಂಧಿಕರನ್ನು ಸೇನಾ ಹೆಲಿಕಾಪ್ಟರ್ ರಕ್ಷಣಾ ಸ್ಲಿಂಗ್‌ಗಳನ್ನು ಬಳಸಿ ಸುರಕ್ಷಿತವಾಗಿ ಸ್ಥಳಾಂತರಿಸುತ್ತಿರುವ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದ ದೃಶ್ಯಾವಳಿಗಳು ತೋರಿಸಿದವು. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು.

2022: ನವದೆಹಲಿ: ಸೆಮಿ ಹೈಸ್ಪೀಡ್‌ ರೈಲು ‘ವಂದೆ ಭಾರತ’ ಎಕ್ಸ್‌ಪ್ರೆಸ್ 52 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿ.ಮೀ.ನಷ್ಟು ವೇಗ ಸಾಧಿಸುವ ಮೂಲಕ ಬುಲೆಟ್‌ ಟ್ರೇನ್‌ನ ದಾಖಲೆಯನ್ನು ಮುರಿದಿದೆ. ಅಹಮದಾಬಾದ್‌–ಮುಂಬೈ ನಡುವೆ 2022 ಸೆಪ್ಟೆಂಬರ್‌ 09ರ ಶುಕ್ರವಾರ ಈ ರೈಲಿನ ಪರೀಕ್ಷಾರ್ಥ ಸಂಚಾರ ನಡೆಯಿತು. ಗಂಟೆಗೆ 130 ಕಿ.ಮೀ ವೇಗದೊಂದಿಗೆ ತಡೆರಹಿತವಾಗಿ ಚಲಿಸಿದ ರೈಲುಈ ನಗರಗಳ ನಡುವಿನ 491 ಕಿ.ಮೀ. ದೂರವನ್ನು 5 ಗಂಟೆ 14 ನಿಮಿಷಗಳಲ್ಲಿ ಕ್ರಮಿಸಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ಈದಿನ ತಿಳಿಸಿದರು. ನಿಗದಿತ ವೇಳಾಪಟ್ಟಿ ಹಾಗೂ ನಿಲುಗಡೆಗಳೊಂದಿಗೆ ಸಂಚರಿಸಿದ ಸಂದರ್ಭದಲ್ಲಿ ಇಷ್ಟೇ ದೂರವನ್ನು ಈ ರೈಲು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಕ್ರಮಿಸಲಿದೆ ಎಂದೂ ಅವರು ತಿಳಿಸಿದರು.

2022: ನವದೆಹಲಿ: ಗುಜರಾತಿನ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು 2022 ಸೆಪ್ಟೆಂಬರ್‌ 11ರ ಭಾನುವಾರ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯಲ್ಲಿ ತಮ್ಮ 99 ನೇ ವಯಸ್ಸಿನಲ್ಲಿ ದೈವಾಧೀನರಾದರು. ಹಿಂದೂ ಧಾರ್ಮಿಕ ಮುಖಂಡ ಶ್ರೀಧಾಮ ಜೋತೇಶ್ವರ ಆಶ್ರಮದಲ್ಲಿ ಮಧ್ಯಾಹ್ನ 3:30 ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ದ್ವಾರಕಾ ಪೀಠದ ಎರಡನೇ ಸ್ಥಾನದಲ್ಲಿ ಇರುವ (ದಂಡಿ ಸ್ವಾಮಿ ಎಂದು ಕರೆಯಲಾಗುತ್ತವ) ಸ್ವಾಮಿ ಸದಾನಂದ ಮಹಾರಾಜ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. (ವಿವರಗಳಿಗೆಇಲ್ಲಿ ಕ್ಲಿಕ್‌ ಮಾಡಿ)

2022: ನ್ಯೂಯಾರ್ಕ್: ಪೋಲಂಡಿನ ಇಗಾ ಸ್ವಟೆಕ್‌ ಅವರು ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡರು. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಎರಡನೇ ಮತ್ತು ಒಟ್ಟಾರೆಯಾಗಿ ಮೂರನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದರು. ಇಗಾ ಸ್ವಟೆಕ್ 2020 ಹಾಗೂ 2022ನೇ ಸಾಲಿನಲ್ಲಿ ಫ್ರೆಂಚ್ ಓಪನ್ ಗೆದ್ದ ಸಾಧನೆ ಮಾಡಿದ್ದಾರೆ.

2019: ಜಿನೇವಾ: ಕಾಶ್ಚೀರ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಪಾಕಿಸ್ತಾನ ಮಾಡಿರುವ ಮನವಿಯನ್ನು ವಿಶ್ವಸಂಸ್ಥೆ ಸಾರಾಸಗಟು ತಿರಸ್ಕರಿಸಿ, ಭಾರತ ಮತ್ತು ಪಾಕಿಸ್ತಾನ ಮಾತುಕತೆಯ ಮೂಲಕವೇ ವಿವಾದ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು 2019 ಸೆಪ್ಟೆಂಬರ್ 11ರ ಬುಧವಾರ ಸೂಚಿಸಿತುಜಮ್ಮು-ಕಾಶ್ಮೀರದ ವಿಚಾರದಲ್ಲಿ ಉಭಯ ದೇಶಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್ಎಚ್ ಆರ್ಸಿಪರಸ್ಪರ ಘರ್ಷಿಸಿದ ಒಂದು  ದಿನದ ಬಳಿಕವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗ್ಯುಟೆರಸ್ ಅವರು ’ಕಾಶ್ಮೀರ ವಿಚಾರದಲ್ಲಿ ಯಾವುದೇ ರಾಜಕೀಯ ಬಿಕ್ಕಟ್ಟಿಗೆ ಅವಕಾಶ ನೀಡಬಾರದು’ ಎಂದು ಕಳಕಳಿ ವ್ಯಕ್ತಪಡಿಸಿಕಾಶ್ಮೀರದ ವಿಚಾರವನ್ನು ಭಾರತ ಮತ್ತು ಪಾಕಿಸ್ತಾನ ಮಾತುಕತೆಯ ಮೂಲಕವೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರುಸ್ವಿಜರ್ಲೆಂಡಿನ ರಾಜಧಾನಿ ಜಿನೇವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ೪೨ನೇ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗ್ಯುಟೆರಸ್  ಅವರು  ಹೇಳಿಕೆ ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿತು(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಮಥುರಾ (ಉತ್ತರಪ್ರದೇಶ): ’ಗೋವು’ ಮತ್ತು ’ಓಂ’ ಪದ ಕೇಳಿದರೆಕೆಲವು ಜನರಿಗೆ ’ಆಘಾತವಾಗುತ್ತದೆ’ ಇದು ದುರದೃಷ್ಟಕರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಸೆಪ್ಟೆಂಬರ್ 11ರ  ಬುಧವಾರ ಇಲ್ಲಿ ಹೇಳಿದರುಉತ್ತರ ಪ್ರದೇಶದ ಮಥುರಾದಲ್ಲಿ ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಧಾನಿ ಮಾತನಾಡಿದರು‘ಕೆಲವು ವ್ಯಕ್ತಿಗಳ ಕೂದಲುಗಳು ’ಗೋವು’ ಮತ್ತು ’ಓಂ’ ಪದ ಕೇಳುತ್ತಿದ್ದಂತೆಯೇ ವಿದ್ಯುತ್ ಆಘಾತಕ್ಕೆ ಒಳಗಾದಂತೆ ನಿಮಿರುತ್ತವೆರಾಷ್ಟ್ರವು ೧೬ ನೇ ಶತಮಾನದಷ್ಟು ಹಿಂದಕ್ಕೆ ಹೋಗಿದೆ ಎಂದು ಅವರು ಭಾವಿಸುತ್ತಾರೆಇದು ದುರದೃಷ್ಟಕರಪ್ರಾಣಿಗಳು ಇಲ್ಲದ ಗ್ರಾಮೀಣ ಆರ್ಥಿಕ ವ್ಯವಸ್ಥೆ ಬಗ್ಗೆ ಯಾರಾದರೂ ಮಾತನಾಡಲು ಸಾಧ್ಯವಿದೆಯೇಎಂದು ಪ್ರದಾನಿ ಮೋದಿ ಪ್ರಶ್ನಿಸಿದರುರೈತರಿಗಾಗಿ ಇತರ ಹಲವು ಯೋಜನೆಗಳ ಜೊತೆಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮವನ್ನು  (ಎನ್ಎಡಿಸಿಪಿಅವರು ಉದ್ಘಾಟಿಸಿದರು. ‘ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಪರಿಸರ ಮತ್ತು ಪ್ರಾಣಿಗಳು ಯಾವಾಗಲೂ ಮಹತ್ವ ಪಡೆದಿವೆಪ್ರಕೃತಿ ಮತ್ತು ಆರ್ಥಿಕ ಪ್ರಗತಿಯ ಮಧ್ಯೆ ಸಮತೋಲನ ಕಾಪಾಡುತ್ತಾ ನಾವು ಹೊಸ ಸಶಕ್ತ ಭಾರತದತ್ತ ಸಾಗಲು ಸಾಧ್ಯವಿದೆ’ ಎಂದು ಪ್ರಧಾನಿ ಹೇಳಿದರು(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಮುಖ್ಯ ಕಾರ್ಯದರ್ಶಿ (ಪ್ರಿನ್ಸಿಪಲ್ ಸೆಕ್ರೆಟರಿ) ಆಗಿ ಪ್ರಮೋದ್ ಕುಮಾರ್ ಮಿಶ್ರ  ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಸಚಿವಾಲಯದ ಪ್ರಕಟಣೆ 2019 ಸೆಪ್ಟೆಂಬರ್ 11 ಬುಧವಾರ  ತಿಳಿಸಿತು. ಕೇಂದ್ರ ಸರ್ಕಾರದಲ್ಲಿ ಕಳೆದ ಐದು ವರ್ಷಗಳ ಕಾಲ ಪ್ರಧಾನಿ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದ ನೃಪೇಂದ್ರ ಮಿಶ್ರ ಅವರು ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಮಿಶ್ರ ಅವರು ಗುಜರಾತ್ ಕೇಡರ್  1972 ತಂಡದ ಐಎಎಸ್ ಅಧಿಕಾರಿಇವರು ಮೊದಲು ಪ್ರಧಾನ ಮಂತ್ರಿಯ ಅಡಿಷನಲ್ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದರುಅಲ್ಲದೇ ಆ್ಯಗ್ರಿಕಲ್ಚರ್ ಅಂಡ್ ಕಾರ್ಪೋರೇಶನ್ ಸೆಕ್ರೆಟರಿರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರುಮಿಶ್ರ ಅವರು ಮೇ ತಿಂಗಳಿನಲ್ಲಿ ಎಕಾನಾಮಿಕ್ಸ್ ಅಂಡ್ ಡೆವಲಪ್ ಮೆಂಟ್ ಸ್ಟಡೀಸ್ ನಲ್ಲಿ ಇಂಗ್ಲೆಂಡ್  ಸುಸ್ಸೆಕ್ಸ್ ಯೂನಿರ್ವಸಿಟಿಯಿಂದ ಪಿಎಚ್ ಡಿ ಪದವಿ ಪಡೆದಿದ್ದರುಅಲ್ಲದೇ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತಿಷ್ಠಿತ ವಿಶ್ವಸಂಸ್ಥೆಯ ಪ್ರಶಸ್ತಿಗೆ ಭಾಜನರಾಗಿದ್ದರುಏತನ್ಮಧ್ಯೆ ಪ್ರಧಾನ ಮಂತ್ರಿ ಕಚೇರಿಯ ವಿಶೇಷ ಕರ್ತವ್ಯ ನಿರ್ವಹಣೆ ಅಧಿಕಾರಿಯಾದ ಪಿಕೆ ಸಿನ್ನಾ ಅವರನ್ನು ಪ್ರಧಾನಮಂತ್ರಿಯ ಪ್ರಧಾನ ಸಲಹೆಗಾರ (ಪ್ರಿನ್ಸಿಪಲ್ ಅಡ್ವೈಸರ್) ಆಗಿ ನೇಮಕ ಮಾಡಲಾಗಿದೆ ಎಂದು ವರದಿ ತಿಳಿಸಿತು.

2019: ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ಇಳಿಸಲು ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2019 ಸೆಪ್ಟೆಂಬರ್ 11ರ ಬುಧವಾರ ಹೇಳಿದರು. ಸಂಚಾರ ನಿಯಮ ಉಲ್ಲಂಘನೆ ದಂಡ ದುಪ್ಪಟ್ಟುಗೊಳಿಸಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದಂಡ ಕಡಿತಗೊಳಿಸಲು ನಿರ್ಧಾರ ಮಾಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು. ದಂಡ ಕಡಿತಗೊಳಿಸಲು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಮಾಹಿತಿ ನೀಡಿದರು. ಈಗಾಗಲೇ ಗುಜರಾತ್ ರಾಜ್ಯದಲ್ಲೂ ಇಳಿಕೆ ಮಾಡಲಾಗಿದೆ. ಗುಜರಾತ್ ಮಾದರಿಯ ದಂಡ ಇಳಿಕೆಯ ಮಾಹಿತಿ ಪಡೆದು ರಾಜ್ಯದಲ್ಲೂ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.ಈ ಮಧ್ಯೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ದಂಡ ದುಪ್ಪಟ್ಟುಗೊಳಿಸಿರುವುದು ಹಣ ಮಾಡುವ ಉದ್ದೇಶಕ್ಕಾಗಿ ಅಲ್ಲ, ಅಪಘಾತಗಳಲ್ಲಿ ಜನರ ಪ್ರಾಣ ರಕ್ಷಣೆಗಾಗಿ ಎಂದು ಸ್ಪಷ್ಟ ಪಡಿಸಿದರು.‌

1950: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ (ಸರಸಂಘ ಚಾಲಕ) ಮೋಹನ್‌ ಭಾಗವತ್‌ ಈದಿನ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಜನಿಸಿದರು. 2009ರಲ್ಲಿ ಅವರು ಆರೆಸ್ಸೆಸ್‌ ಸರಸಂಘ ಚಾಲಕರಾಗಿ ಅಧಿಕಾರ ವಹಿಸಿಕೊಂಡರು. ಅವರ ತಂದೆ ಕೂಡಾ ಆರೆಸ್ಸೆಸ್ಸಿನಲ್ಲಿ ಉನ್ನತ ಹುದ್ದೆ ನಿಭಾಯಿಸಿದ್ದರು. ಪ್ರಚಾರಕರಾಗಿ ಆರೆಸ್ಸೆಸ್‌ ನಂಟು ಬೆಳೆಸಿಕೊಂಡ ಭಾಗವತ್‌, ಕೇಶವ ಬಲಿರಾಮ್‌ ಹೆಡ್ಗೇವಾರ್‌ ಮತ್ತು ಎಂ.ಎಸ್.‌ ಗೋಲ್ವಲ್ಕರ್‌ ನಂತರ ಸರಸಂಘ ಚಾಲಕ ಹುದ್ದೆಗೆ ಏರಿದ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಭಾಜನರಾದರು.

1895: ಭೂದಾನ ಚಳವಳಿಯ ಮೂಲಕ  ದೇಶದಲ್ಲಿ ಕ್ರಾಂತಿಯ ಅಲೆ ಸೃಷ್ಟಿಸಿದ ಸ್ವಾತಂತ್ರ್ಯ ಹೋರಾಟಗಾರ, ಮಾನವ ಹಕ್ಕುಗಳ ಪ್ರತಿಪಾದಕ, ತತ್ವಜ್ಞಾನಿ, ಗಾಂಧಿವಾದಿ ವಿನೋಬಾ ಭಾವೆ ಅವರು ಈದಿನ ಮಹಾರಾಷ್ಟ್ರದ ಪೆನ್‌ ಎಂಬಲ್ಲಿ ಜನಿಸಿದರು. ವಿನಾಯಕ ನರಹರಿ ಭಾವೆ ಎಂಬುದು ಅವರ ಪೂರ್ಣ ಹೆಸರು. ದೇಶದ ಜನ ಆಚಾರ್ಯ ಎಂಬುದಾಗಿ ಕರೆಯುವ ಮೂಲಕ ಅವರನ್ನು ಗೌರವಿಸಿದರು.

1893: ಶಿಕಾಗೋದ ಧಾರ್ಮಿಕ ಸಂಸತ್ತಿನಲ್ಲಿ ಸ್ವಾಮೀ ವಿವೇಕಾನಂದರು ತಮ್ಮ ಪ್ರಥಮ ಭಾಷಣವನ್ನು ಮಾಡಿದರು. 'ಸಹೋದರ ಸಹೋದರಿಯರೇ' ಎಂಬ ಶಬ್ಧಗಳೊಂದಿಗೆ ಅವರು ಆರಂಭಿಸಿದ ಈ ಭಾಷಣ ಇಡೀ ಪ್ರಪಂಚದ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿತು. ಅವರ ಈ ಭಾಷಣದಿಂದ ಹಿಂದೂ ಧರ್ಮದ ಮಹತ್ವ ಮತ್ತೊಮ್ಮೆ ವಿಶ್ವ ವ್ಯಾಪಕತೆ ಪಡೆದುಕೊಂಡಿತು. ಸರ್ವಧರ್ಮ ಸಮ್ಮೇಳನದ ಈ ಭಾಷಣವು ಅವರಿಗೆ ಜಗದ್ವಿಖ್ಯಾತಿ ತಂದುಕೊಟ್ಟಿತು. ಇದರ ಸ್ಮರಣಾರ್ಥ ಈ ದಿನವನ್ನು ದಿಗ್ವಿಜಯ ದಿನವಾಗಿ ಆಚರಿಸಲಾಗುತ್ತದೆ. ವಿವೇಕಾನಂದರು ತಮ್ಮ ಭಾಷಣದಲ್ಲಿ ಹಿಂದೂ ಧರ್ಮದ ಉದಾತ್ತತೆ ಮತ್ತು ಸವಿಸ್ತಾರದ ಪರಿಚಯ, ಸಾಮರಸ್ಯದ ಸಂದೇಶವನ್ನು ಸಾರಿದರು. ಅದರ ವಿಡಿಯೋ ಇಲ್ಲಿದೆ.

1730: ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ. ಅರಣ್ಯ ರಕ್ಷಣೆಗಾಗಿ ರಾಜಸ್ಥಾನದ ಕೆಜಾರ್ಲಿ ಎಂಬಲ್ಲಿ ರಾಜನ ವಿರುದ್ಧ ಈ ದಿನ ಪ್ರತಿಭಟನೆ ನಡೆಸಿದ ಬಿಷ್ಣೋಯಿ ಸಮುದಾಯಕ್ಕೆ ಸೇರಿದ 363 ಮಂದಿಯನ್ನು ಹತ್ಯೆಗೈಯಲಾಯಿತು. ಅವರ ತ್ಯಾಗದ ಸ್ಮರಣಾರ್ಥ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. ದೇಶದ ಅರಣ್ಯ ಮತ್ತು ವನ್ಯಜೀವಿ ಸಂಪತ್ತಿನ ರಕ್ಷಣೆಗಾಗಿ ಜೀವ ತೆತ್ತ ಮಹನೀಯರಿಗೆ ಗೌರವ ಸಲ್ಲಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ.

Advertisement