Showing posts with label RTI Act. Show all posts
Showing posts with label RTI Act. Show all posts

Thursday, October 29, 2020

ಆರೋಗ್ಯ ಸೇತು ಆಪ್: ಆರ್ ಟಿಐ ಅಡಿ ಎಲ್ಲ ಮಾಹಿತಿ ಒದಗಿಸಲು ಕೇಂದ್ರ ಬದ್ಧ

 ಆರೋಗ್ಯ ಸೇತು ಆಪ್: ಆರ್ ಟಿಐ ಅಡಿ ಎಲ್ಲ ಮಾಹಿತಿ ಒದಗಿಸಲು ಕೇಂದ್ರ ಬದ್ಧ

ನವದೆಹಲಿ: ಕೊರೋನಾವೈರಸ್ ಸಂಪರ್ಕ ಪತ್ತೆ ಅಪ್ಲಿಕೇಷನ್ ಆರೋಗ್ಯ ಸೇತುವಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯ (ಆರ್ಟಿಐ) ಅಡಿ ಸಲ್ಲಿಸಿದ ಅರ್ಜಿಗೆ ಎಲ್ಲ ಮಾಹಿತಿಯನ್ನು ಒದಗಿಸಲು ಮತ್ತು ಕೇಂದ್ರ ಮಾಹಿತಿ ಆಯೋಗದ ನಿರ್ದೇಶನವನ್ನು ಅನುಸರಿಸಲು ಬದ್ಧವಾಗಿರುವುದಾಗಿ ಕೇಂದ್ರ ಸರ್ಕಾರವು 2020 ಅಕ್ಟೋಬರ್ 29ರ ಗುರುವಾರ ತಿಳಿಸಿತು.

ಆರೋಗ್ಯ ಸೇತು ಆಪ್ ಸೃಷ್ಟಿಗೆ ಸಂಬಂಧಿಸಿದಂತೆ ಕೋರಲಾದ ಮಾಹಿತಿಗೆ ಹಾರಿಕೆಯ ಉತ್ತರ ನೀಡಿದ್ದಕ್ಕಾಗಿ ರಾಷ್ಟ್ರೀಯ ಮಾಹಿತಿ ಆಯೋಗವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

ಲಕ್ಷಾಂತರ ಬಳಕೆದಾರರ ಡೇಟಾವನ್ನು ಹೊಂದಿರುವ ಆರೋಗ್ಯ ಸೇತು ಆಪ್ ಬಗ್ಗೆ ಮಾಹಿತಿ ನೀಡುವಲ್ಲಿ ಆಗಿರುವ ಲೋಪಗಳ ಬಗ್ಗೆ ಕೇಂದ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಮೀಟಿವೈ) ಗಮನ ಹರಿಸಿದ್ದು, ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ಆರ್ಟಿಐ ಪ್ರಶ್ನೆಯೊಂದಿಗೆ ತಮ್ಮ ಸಂಸ್ಥೆಗಳಲ್ಲಿ ವ್ಯವಹರಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ಮತ್ತು ರಾಷ್ಟ್ರೀಯ -ಆಡಳಿತ ವಿಭಾUಕ್ಕೆ (ಎನ್ಜಿಇಡಿ) ಅದು  ನಿರ್ದೇಶನ ನೀಡಿದೆ.

ಆರ್ಟಿಐ ಕಾಯ್ದೆಯಡಿ ಕೋರಿದ ಎಲ್ಲ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲು ಮತ್ತು ಸಿಐಸಿಯ ನಿರ್ದೇಶನಗಳನ್ನು ಅನುಸರಿಸಲು ಸಚಿವಾಲಯ ಬದ್ಧವಾಗಿದೆ ಎಂದು ಅವರು ಹೇಳಿದರು. ಆಯೋಗವು ಸರ್ಕಾರದ ಪ್ರತಿಕ್ರಿಯೆಯನ್ನು "ಅತ್ಯಂತ ಅಸಂಬದ್ಧ ಎಂದು ಬಣ್ಣಿಸಿದೆ.

ಸೌರವ್ ದಾಸ್ ಸಲ್ಲಿಸಿದ ಆರ್ಟಿಐ ಅರ್ಜಿ, ಅದರ ಸುತ್ತಲಿನ ಗೌಪ್ಯತೆ ಕಾಳಜಿಯ ಹಿನ್ನೆಲೆಯಲ್ಲಿ ಅಪ್ಲಿಕೇಶನ್ ರಚಿಸುವ ಬಗ್ಗೆ ಮಾಹಿತಿ ಕೋರಿತ್ತು. ಎನ್ಐಸಿ ಮತ್ತು ಎನ್ಇಜಿಡಿ ಮತ್ತು ಮೀಟಿವೈ ಸರ್ಕಾರಿ ಅಧಿಕಾರಿಗಳು ದಾಸ್ ಎತ್ತಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.

ಹೀಗಾಗಿ ದಾಸ್ ಕೇಂದ್ರೀಯ ಮಾಹಿತಿ ಆಯೋಗಕ್ಕೆ (ಸಿಐಸಿ) ಮೇಲ್ಮನವಿ ಸಲ್ಲಿಸಿದ್ದರು.

ಅಪ್ಲಿಕೇಶನ್ ಮಾಹಿತಿಯನ್ನು ಸಂಗ್ರಹಿಸಿ ದಾಸ್ತಾನು ಇರಿಸುತ್ತದೆ ಎಂಬುದಾಗಿ ಮಾಹಿತಿ ಗೌಪ್ಯತೆ ಕಾರ್ಯಕರ್ತರು ಆರೋಪಿಸಿರುವುದರಿಂದ ಅಪ್ಲಿಕೇಶನ್ ವಿಶೇಷವಾಗಿ ವಿವಾದಗ್ರಸ್ತವಾಗಿದೆ.

ಆಪ್ ಸೃಷ್ಟಿಗೆ ಸಂಬಂಧಿಸಿದ ಸಂಪೂರ್ಣ ಕಡತಗಳು ಎನ್ಐಸಿ ಬಳಿ ಇಲ್ಲ ಎಂಬ ಸಿಪಿಐಒ (ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ), ಎನ್ಐಸಿಯ ಸಲ್ಲಿಕೆಗಳು ಅರ್ಥವಾಗುವಂತಹದ್ದಾಗಿದೆ, ಆದರೆ ಅದೇ ಸಲ್ಲಿಕೆಗಳನ್ನು ಮೀಟಿ, ಎನ್ಇಜಿಡಿ ಮತ್ತು ಎನ್ಐಸಿ ಸಂಪೂರ್ಣವಾಗಿ ಒಪ್ಪಿಕೊಂಡರೆ, ಅದು ಹೆಚ್ಚು ಪ್ರಸ್ತುತವಾಗುತ್ತದೆ. ಅಪ್ಲಿಕೇಶನ್ನ್ನು ಹೇಗೆ ಸೃಷ್ಟಿಸಲಾಗಿದೆ ಮತ್ತು ಯಾವುದೇ ಸಾರ್ವಜನಿಕ ಅಧಿಕಾರಿಗಳ ಬಳಿ ಬಗ್ಗೆ ಯಾವುದೇ ಮಾಹಿತಿ ಏಕಿಲ್ಲ ಎಂಬುದನ್ನು ಈಗ ಕಂಡುಹಿಡಿಯಿರಿ ಎಂದು ಸಿಐಸಿ ಅಕ್ಟೋಬರ್ ೨೬ ತನ್ನ ಆದೇಶದಲ್ಲಿ ತಿಳಿಸಿತ್ತು.

Thursday, November 14, 2019

ಭಾರತದ ಮುಖ್ಯ ನ್ಯಾಯಮೂರ್ತಿ ಕಚೇರಿ ಆರ್‌ಟಿಐ ವ್ಯಾಪ್ತಿಗೆ

ಭಾರತದ ಮುಖ್ಯ ನ್ಯಾಯಮೂರ್ತಿ ಕಚೇರಿ ಆರ್‌ಟಿಐ ವ್ಯಾಪ್ತಿಗೆ
ಸುಪ್ರೀಂಕೋರ್ಟ್ ಪಂಚ ಸದಸ್ಯ ಸಂವಿಧಾನ ಪೀಠದ ತೀರ್ಪು
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಯವರ (ಸಿಜೆಐ) ಕಚೇರಿಯು ಪಾರದರ್ಶಕತೆಯ ಕಾನೂನಾಗಿರುವ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು 2019 ನವೆಂಬರ್ 13ರ ಬುಧವಾರ ಮಹತ್ವದ ತೀರ್ಪು ನೀಡಿತು.

ಮಾಹಿತಿಯನ್ನು ಮುಚ್ಚಿಡುವ ಮೂಲಕ ನ್ಯಾಯಾಂಗ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ ಎಂದು ಪೀಠ ಹೇಳಿತು.

‘ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಉತ್ತರದಾಯಿತ್ವವು ಪರಸ್ಪರ ಕೈ ಹಿಡಿದುಕೊಂಡೇ ಸಾಗುತ್ತವೆ.. ಪಾರದರ್ಶಕತೆಯು ಸ್ವಾತಂತ್ರ್ಯವನ್ನು ಬಲಪಡಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹೇಳಿದರು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಕ್ ಗುಪ್ತ, ಎನ್‌ವಿ ರಮಣ ಮತ್ತು ಡಿವೈ ಚಂದ್ರಚೂಡ್ ಅವರು ಪೀಠದ ಇತರ ಸದಸ್ಯರಾಗಿದ್ದರು.

‘ನ್ಯಾಯಾಂಗ ಸ್ವಾತಂತ್ರ್ಯ ಎಂದರೆ ನ್ಯಾಯಾಧೀಶರು ಕಾನೂನಿಗಿಂತ ಮೇಲೆ ಎಂದು ಅರ್ಥವಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

ಸಿಜೆಐ ಕಚೇರಿಯು ಸಾರ್ವಜನಿಕ ಪ್ರಾಧಿಕಾರವಾಗಿದೆ ಎಂಬುದಾಗಿ ಹೇಳಿ ಆರ್‌ಟಿಐ ಕಾರ್‍ಯಕರ್ತ ಎಸ್‌ಸಿ ಅಗರ್‌ವಾಲ್ ಅವರು ಕೋರಿದ್ದಂತೆ ನ್ಯಾಯಾಧೀಶರ ಆಸ್ತಿ ವಿವರ ನೀಡುವಂತೆ ಸುಪ್ರೀಂಕೋರ್ಟ್ ಸೆಕ್ರೆಟರಿ ಜನರಲ್ ಅವರಿಗೆ ನಿರ್ದೇಶನ ನೀಡಿ ೨೦೧೦ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಕೋರ್ಟಿನ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ ಸಲ್ಲಿಸಿದ್ದ ಅರ್ಜಿಯ ಮೇಲೆ, ನವೆಂಬರ್ ೧೭ರಂದು ನಿವೃತ್ತರಾಗಲಿರುವ ಸಿಜೆಐ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ಈ ತೀರ್ಪನ್ನು ನೀಡಿದೆ.

ಸುಪ್ರೀಂಕೋರ್ಟ್ ೧೯೯೭ರ ಮೇ ೧೭ರಂದು ಕೈಗೊಂಡಿದ್ದ ನಿರ್ಣಯದ ಪ್ರತಿಯೊಂದನ್ನು ನೀಡುವಂತೆ ಅಗರ್‌ವಾಲ್  ಅವರು ೨೦೦೭ರಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೋರಿದ್ದರು. ಈ ನಿರ್ಣಯದ ಪ್ರಕಾರ ಎಲ್ಲ ನ್ಯಾಯಮೂರ್ತಿಗಳು ತಾವು ಹೊಂದಿರುವ ಆಸ್ತಿಯನ್ನು ಘೋಷಿಸುವುದು ಕಡ್ಡಾಯವಾಗಿತ್ತು.

೨೦೧೦ರಲ್ಲಿ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಎಪಿ ಶಾ, ವಿಕ್ರಮ್ ಜಿತ್ ಸೇನ್ ಮತ್ತು ಎಸ್.ಮುರಳೀಧರ್ ಅವರನ್ನು ಒಳಗೊಂಡ ದೆಹಲಿ ಹೈಕೋರ್ಟಿನ ತ್ರಿಸದಸ್ಯ ಪೀಠವು ಸಿಜೆಐ ಕಚೇರಿಯು ಸಾರ್ವಜನಿಕ ಪ್ರಾಧಿಕಾರವಾಗಿದೆ. ಆದ್ದರಿದ ಅದು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು.
ಮೇಲ್ಮನವಿಯನ್ನು ಅಂಗೀಕರಿಸಿದ್ದ ಸುಪ್ರೀಂಕೋರ್ಟ್ ಪೀಠವು, ಹೈಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿತ್ತು.

‘ಮಾಹಿತಿ ಹಕ್ಕು ಕಾಯ್ದೆಯು ನಾಗರಿಕರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕಿಗೆ ಮನ್ನಣೆಯನ್ನು ಮಾತ್ರ ನೀಡುತ್ತದೆ. ನ್ಯಾಯಾಂಗದ ಸ್ವಾತಂತ್ರ್ಯವು ಸಂವಿಧಾನದ ಮೂಲ ರಚನೆಯ ಭಾಗವಾಗಿದೆ. ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಮುಕ್ತ ಭಾಷಣ ಹಾಗೂ ಅಭಿವ್ಯಕ್ತಿಯ ಮೂಲಭೂತ ಹಕ್ಕು ಅತ್ಯಂತ ಮೌಲ್ಯಯುತವಾದುದಾಗಿದ್ದು ಅವುಗಳನ್ನು ಸಮತೋಲನಗೊಳಿಸಬೇಕಾದ ಅಗತ್ಯವಿದೆ. ಹಾಲಿ ಚರ್ಚೆಯು ಆರೋಗ್ಯಶಾಲಿ ರಾಷ್ಟ್ರದ ಸಂಕೇತವಾಗಿದೆ ಎಂದು ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡುತ್ತಾ ಸುಪ್ರೀಂಕೋರ್ಟ್ ಹೇಳಿತ್ತು.

ಈ ವರ್ಷದ ಆದಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಾದ ಮಂಡಿಸಿದ್ದ ವಕೀಲ ಪ್ರಶಾಂತ ಭೂಷಣ್ ಅವರು ’ಮಾಹಿತಿಯನ್ನು ಬಹಿರಂಗ ಪಡಿಸುವುದು ಸರಿಯಾದ ಜನರ ನೇಮಕಾತಿಯ ಖಾತರಿಗೆ ಅತ್ಯುತ್ತಮ ರಕ್ಷಣೆಯಾಗಿದೆ. ಮಾಹಿತಿ ಬಹಿರಂಗವು ಸಾರ್ವಜನಿಕವಾಗಿರಬೇಕು ಮತ್ತು ಸಾರ್ವಜನಿಕರಿಗಾಗಿ ಇರಬೇಕು ಎಂದು ಹೇಳಿದ್ದರು.

ಸುಪ್ರೀಂಕೋರ್ಟಿನ ಪರ ಹಾಜರಾಗಿದ್ದ ಭಾರತದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ’ಪೂರ್ಣ ಪಾರದರ್ಶಕತೆಯು ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ಪ್ರಭಾವ ಬೀರುತ್ತದೆ ಮತ್ತು ನ್ಯಾಯಾಧೀಶರಿಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗ ಪಡಿಸಬಾರದು
ಎಂದು ವಾದಿಸಿದ್ದರು.

ಸಿಜೆಐ ಅವರ ಕಚೇರಿಯು ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯನ್ನು ೨೦೧೭ರಲ್ಲಿ ಸಂವಿಧಾನ ಪೀಠಕ್ಕೆ ವಹಿಸಲಾಗಿತ್ತು. ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿರುವ ರಂಜನ್ ಗೊಗೋಯಿ ನೇತೃತ್ವದ ತ್ರಿಸದಸ್ಯ ಪೀಠವು ವಿಷಯವನ್ನು ಪಂಚ ಸದಸ್ಯ ಸಂವಿಧಾನ ಪೀಠಕ್ಕೆ ಒಪ್ಪಿಸಿತ್ತು.

ನವೆಂಬರ್ ೧೭ರಂದು ನಿವೃತ್ತರಾಗುತ್ತಿರುವ ಸಿಜೆಐ ರಂಜನ್ ಗೊಗೋಇ ಅವರ ಮುಂದೆ ನಿರ್ಧಾರಗೊಳ್ಳಬೇಕಾಗಿರುವ ಹಲವು ಪ್ರಮುಖ ಪ್ರಕರಣಗಳಲ್ಲಿ ಇದೂ ಸೇರಿತ್ತು. ಕೇರಳದ ಶಬರಿಮಲೈ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ಸುಪ್ರೀಂಕೋರ್ಟಿನ ಆದೇಶದ ಮೇಲೆ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಸಲ್ಲಿಸಲಾಗಿದ್ದ ಮಾನನಷ್ಟ ಪ್ರಕರಣ, ಮತ್ತು ರಫೇಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದ ಆದೇಶ ವಿರುದ್ಧದ ಪುನರ್ ಪರಿಶೀಲನಾ ಅರ್ಜಿಗಳನ್ನು ಪೀಠ ಗುರುವಾರ ಕೈಗೆತ್ತಿಕೊಳ್ಳಲಿದೆ.

ಸಿಜೆಐ ನೇತೃತ್ವದ ಸಂವಿಧಾನ ಪೀಠವು ಈಗಾಗಲೇ ಅಯೋಧ್ಯಾ ಭೂವಿವಾದ ಪ್ರಕರಣದಲ್ಲಿ ತನ್ನ ಚಾರಿತ್ರಿಕ ತೀರ್ಪನ್ನು ನೀಡಿ ವಿವಾದಾತ್ಮಕ ಭೂಮಿಯನ್ನು ಹಿಂದುಗಳಿಗೆ ನೀಡುವಂತೆಯೂ, ಮುಸ್ಲಿಮರಿಗೆ ಪರ್‍ಯಾಯ ಭೂಮಿ ನೀಡುವಂತೆಯೂ ಆದೇಶ ನೀಡಿದೆ. ಸುಪ್ರೀಂಕೋರ್ಟಿನ ಮುಂದೆ ಇದ್ದ ಇನ್ನೊಂದು ಮಹತ್ವದ ಪ್ರಕರಣದಲ್ಲಿ ಕರ್ನಾಟಕದ ಶಾಸಕರನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಆದೇಶವನ್ನು ಭಾಗಶಃ ಎತ್ತಿ ಹಿಡಿದ ಸುಪ್ರೀಕೋರ್ಟ್ ಡಿಸೆಂಬರ್ ೫ರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹ ಶಾಸಕರಿಗೆ ಅವಕಾಶ ನೀಡಿದೆ. ಶಾಸಕರನ್ನು ಅನರ್ಹಗೊಳಿಸುವ ವಿಧಾನಸಭಾಧ್ಯಕ್ಷರ ಅಧಿಕಾರವನ್ನು ಮಾನ್ಯ ಮಾಡಿದ ಪೀಠವು, ಶಾಸಕರನ್ನು ಶಾಸನಸಭೆಯ ಪೂರ್ತಿ ಅವಧಿಗೆ ಅನರ್ಹಗೊಳಿಸುವ ಮತ್ತು ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ಆದೇಶ ಮಾಡುವ ಅಧಿಕಾರ ಸಭಾಧ್ಯಕ್ಷರಿಗೆ ಇಲ್ಲ ಎಂದು ಹೇಳಿದೆ.

Thursday, January 5, 2012

ಊಟ ಆಯಿತಾ?: ಮುಂಡಾಸು 30 ಮೊಳ..! (Mundasu 30 mola..!)

ಊಟ ಆಯಿತಾ?: ಮುಂಡಾಸು 30 ಮೊಳ..!
 (Mundasu 30 mola..!)


ಊಟ ಆಯಿತಾ ಅಂತ ಕೇಳಿದರೆ ಮುಂಡಾಸು ಮೂವತ್ತು ಮೊಳ ಎಂದೊಬ್ಬ ಉತ್ತರಿಸಿದನಂತೆ. ಬೃಹತ್ ಬೆಂಗಳೂರು  ಮಹಾನಗರ ಪಾಲಿಕೆಯ ಸಿಬ್ಬಂದಿ ಇದೇ ವರ್ಗಕ್ಕೆ ಸೇರಿದವರು. ಏನಾದರೂ ಮಾಹಿತಿ  ಬೇಕು ಎಂದು ನೀವೇನಾದರೂ ಬಿಬಿಎಂಪಿಗೆ ಹೋದಿರೋ ಮುಗಿಯಿತು ಕಥೆ. ಕನಿಷ್ಠ ಹತ್ತಿಪ್ಪತ್ತು ಮೇಜುಗಳಿಗೆ ಸುತ್ತು ಹೊಡೆಯಬೇಕು. ಅಷ್ಟಾದರೂ ನಿಮಗೆ ಬೇಕಾದ ಮಾಹಿತಿ ಸಿಕ್ಕೀತು ಎನ್ನಲಾಗದು.

ಈ ಕಷ್ಟ ಯಾಕೆ ಅಂತ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿದಿರೋ- ಅಲ್ಲೂ ನಿಮಗೆ ಬೇಕಾದ ಉತ್ತರವೇನೂ ಸಿಕ್ಕುವುದಿಲ್ಲ. ಕಟ್ಟ ಕಡೆಗೆ ನಿಮ್ಮ ತಲೆಯಲ್ಲಿ ಉಳಿಯುವುದು ಮೇಲೆ ತಿಳಿಸಿದಂತೆ 'ಮುಂಡಾಸು ಮೂವತ್ತು ಮೊಳ' ಮಾತ್ರ..!

ಬಿಬಿಎಂಪಿ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಬರುವ ಸಚ್ಚಿದಾನಂದ ನಗರದ ನಿವೇಶನದಾರರ ಗೋಳಿಗೆ ಈಗ ಎರಡು ದಶಕ.  ಕಾರಣವೇ ಇಲ್ಲದೆ ಈ ನಿವೇಶನದಾರರನ್ನು  ಗೋಳಾಡಿಸುತ್ತಿರುವ ಬಿಬಿಎಂಪಿ ಸಿಬ್ಬಂದಿ, ಅವರಿಗೆ ಕುಮ್ಮಕ್ಕು  ನೀಡುತ್ತಿರುವ ಜನ ಪ್ರತಿನಿಧಿಗಳು.  ಇವರೆಲ್ಲರ ತಕರಾರುಗಳಿಗೆ ಸಿವಿಲ್ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್ ವರೆಗೂ ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪುಗಳು  ಸ್ಪಷ್ಟ ಉತ್ತರ. ಈ ನಿವೇಶನದಾರರರಿಂದ ತೆರಿಗೆ ಪಡೆಯಿರಿ, ಖಾತೆ ಕೊಡಿ, ಕಟ್ಟಡ ನಕ್ಷೆ ಮಂಜೂರು  ಮಾಡಿ. ವಸತಿದಾರರಿಗೆ ಸಹ್ಯ ಜೀವನ ನಡೆಸುವುದಕ್ಕೆ ಬೇಕಾದ ಸವಲತ್ತು ಕೊಡಿ ಎಂಬುದಾಗಿ ಸಿವಿಲ್ ನ್ಯಾಯಾಲಯ ನೀಡಿದ ತೀರ್ಪನ್ನು ಹೈಕೋರ್ಟ್, ಸುಪ್ರೀಂಕೋರ್ಟುಗಳು ಎತ್ತಿ ಹಿಡಿದಿವೆ. ಈ ಬಡಾವಣೆ ಶಾಸನಬದ್ಧ ಹಾಗೂ ಅದರ ಭೂ ಮಾಲೀಕತ್ವದ ವಿವಾದ ಅಂತಿಮಗೊಂಡಿದೆ ಎಂಬುದಾಗಿ ಇಡೀ ಪ್ರಕರಣದ ಪರಿಶೀಲನೆ ನಡೆಸಿರುವ ಕರ್ನಾಟಕ ಲೋಕಾಯುಕ್ತರೂ ಸ್ಪಷ್ಟ ಪಡಿಸಿದ್ದಾರೆ. ಸಿವಿಲ್ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿ ಎಂಬುದಾಗಿ ರಾಜ್ಯ ಸರ್ಕಾರವೂ ಆದೇಶ ನೀಡಿದೆ. ಆದರೆ ಬಿಬಿಎಂಪಿ ಮತ್ತು  ರೆವೆನ್ಯೂ  ಇಲಾಖೆಯ ಅಧಿಕಾರಿಗಳಿಗೆ ಇದನ್ನು ಪಾಲಿಸುವ ಮನಸ್ಸಿಲ್ಲ.


ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮ ಏನು ಎಂಬುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರಶ್ನಿಸಿದರೆ ಆ ಅರ್ಜಿ ನಗರಾಭಿವೃದ್ಧಿ ಮುಖ್ಯಕಾರ್ಯದರ್ಶಿಗಳಿಗೆ ಹೋಗಿ ಅಲ್ಲಿಂದ ಬಿಬಿಎಂಪಿ ಕಮೀಷನರ್ ಕಚೇರಿ ಸೇರಿ ಮುಂದೆ ಬಿಬಿಎಂಪಿ ರಾಜರಾಜೇಶ್ವರಿ ವಲಯ ಕಚೇರಿಯ ಅಡಿಷನಲ್ ಕಮೀಷನರ್ ಕಚೇರಿಗೆ ಬಿಜಯಂಗೈದು, ಅಸಿಸ್ಟೆಂಟ್ ರೆವೆನ್ಯೂ ಆಫೀಸರ್  (ಎಆರ್ಓ)  ಮೇಜಿಗೆ ತಲುಪಿತು.  ಈ ಎಆ್ಓ ,,ಮಹಾಶಯರು ತೀರ್ಪಿನ ಅನುಷ್ಠಾನ ಕುರಿತ ಮಾಹಿತಿ ಕೊಡುವ ಬದಲು 2002ರಷ್ಟು ಹಳೆಯದಾದ ಜಿಲ್ಲಾಧಿಕಾರಿಗಳ ಪತ್ರ, ಅಸಿಸ್ಟೆಂಟ್ ಕಮೀಷನರ್ ಆದೇಶವನ್ನು ಕಳುಹಿಸಿ ಅದರ ಜೊತೆಗೆ ಮೇಲೆ ತಿಳಿಸಿದ ತೀರ್ಪುಗಳನ್ನೂ ಕಳುಹಿಸುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ..

ಈ ಪತ್ರದ ಜೊತೆಗೆ ಮೇಲೆ ತಿಳಿಸಿದ ತೀರ್ಪುಗಳು ಇರಲಿಲ್ಲ ಎಂಬುದನ್ನು ಬಿಟ್ಟು  ಬಿಡೋಣ,  ಆದರೆ ಈ ತೀರ್ಪಿನ ಪ್ರತಿಗಳನ್ನು ಅವರ ಬಳಿ ಕೇಳಿದವರು  ಯಾರು?  ಜಿಲ್ಲಾಧಿಕಾರಿ, ಅಸಿಸ್ಟೆಂಟ್ ಕಮೀಷನರ್  ಪತ್ರಗಳನ್ನು ಕೇಳಿದವರು ಯಾರು? ಸುಪ್ರೀಂಕೋರ್ಟ್ ತೀರ್ಪು ಪಾಲನೆಗೆ ಈ  ಜಿಲ್ಲಾಧಿಕಾರಿಯ ಪತ್ರ, ಅಸಿಸ್ಟೆಂಟ್ ಕಮೀಷನರ್ ಅವರ ಪತ್ರಗಳು  'ತಡೆಯಾಜ್ಞೆ' ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪು ಪಾಲಿಸಿಲ್ಲ ಎಂಬುದು ಅವರ ಈ  ವರ್ತನೆಯ ಅರ್ಥವೇ?


ಈ ಬಗ್ಗೆ ಬಿಬಿಎಂಪಿ ಕಮೀಷನರ್,  ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳ ಗಮನ ಸೆಳೆಯೋಣ ಎಂದು ಸರ್ಕಾರದ 'ಇ-ಆಡಳಿತ' ದ ವ್ಯವಸ್ಥೆಯ ಮೊರೆ ಹೊಕ್ಕರೆ ...!  ಒಂದೂ ಪತ್ರಗಳು ಅವರಿಗೆ ತಲುಪಲೇ ಇಲ್ಲ. -ಇ-ಮೇಲ್ ಮೂಲಕ ಕಳುಹಿಸಿದ ಪತ್ರಗಳೆಲ್ಲ, 'ಡೆಲಿವರಿ ಫೈಲ್ಡ್' ಎಂಬ ಷರಾದೊಂದಿಗೆ ನನ್ನ ಮೆಯಿಲ್ ಬಾಕ್ಸಿಗೆ ಮರಳಿ ಬಂದಿವೆ.

ಇದಕ್ಕೆ ಏನು ಹೇಳೋಣ?  

ಅಧಿಕಾರಿಗಳಿಗೆ ಜೈ ಎನ್ನೋಣವೇ?  ಪ್ರಶ್ನೆ ಅರ್ಥ ಮಾಡಿಕೊಳ್ಳಲಾಗದ ಇಲ್ಲವೇ ಅರ್ಥವಾಗದಂತೆ ನಟಿಸುತ್ತಿರುವ ಬಿಬಿಎಂಪಿ ಎ ಆರ್ ಓ ಅವರ  ಜಾಣ ನಿಲುವಿಗೆ ಜೈ ಎನ್ನೋಣವೇ?  ಇ-ಆಡಳಿತ ಮೂಲಕ ಜನರ ಸಮಸ್ಯೆಗಳನ್ನು ಕ್ಷಿಪ್ರವಾಗಿ ನಿವಾರಿಸಬಹುದೆಂಬ ಹವಣಿಕೆಯಲ್ಲಿ ಇರುವ ಬಿಬಿಎಂಪಿ, ಸರ್ಕಾರ, ಮುಖ್ಯಮಂತ್ರಿಗಳ ಹುಮ್ಮಸ್ಸಿಗೆ ಅಡಚಣೆ ಒಡ್ಡುತ್ತಿರುವ '-ಇ-ಆಡಳಿತ ವ್ಯವಸ್ಥೆ'ಗೆ ಜೈ ಎನ್ನೋಣವೇ?

  ಇಷ್ಟೆಲ್ಲ ಕಷ್ಟ ಯಾಕೆ ಸ್ವಾಮೀ?  ಒಂದಷ್ಟು ಕಾಸು  ಬಿಸಾಕಿ ಕೆಲಸ ಮಾಡಿಸಿಕೊಳ್ಳಿ ಎಂದು ಹೇಳೋಣವೇ?

ವಿವರಗಳಿಗಾಗಿ ಚಿತ್ರಗಳನ್ನು ಕ್ಲಿಕ್ಕಿಸಿ 

-ನೆತ್ರಕೆರೆ ಉದಯಶಂಕರ .

Thursday, October 6, 2011

Bus Pass: JAK delegation meets CM DVS


Bus Pass: JAK delegation meets CM DVS


Bangalore: Janata Darshan on Tuesday 4th October 2011 was unusual to Chief Minister Sadananda Gowda. He surprised to see the Journalists of Bangalore City, in the Q of Janata Darshan, silently waiting for their turn.

It was the delegation of Journalists' Association of Karnataka (JAK) and Journalist Wing of Deccan Herald - Prajavani Union (BNEU). They waited in the Q and met Chief Minister D.V. Sadananda Gowda with the memorandum regarding Bus Pass Problem on their hand at 10 am at Chief Minister's Residential Office 'Krishna'.

The delegation urged D.V. Sadananda Gowda to implement the orders of the Successive Chief Ministers for immediate renewal of bus passes which was denied by the BMTC at the behest of Mr. Ashok, the Transport Minister, the latter continuing to ignore the CMs' orders.

DVS assured the delegation to implement the said orders at once.

The delegation was led by Prof. B.Harishchandra Bhat, Nethrakere Udaya Shankara Narayana Bhat, Keshava Zingade, F.M.Nandagaon, Ru Basappa, Shrinivas and Shantharam Rao.


The Background Story: Infact Karnataka Government. Led by then Chief Minister D. Devaraja Urs issued these concessional Bus Passes to Journalists during 1974, considering the fact that the Press is 4th Estate in Democracy and is doing yeoman service to the Society by bringing awareness among the public. These Bus passes were issued to the Journalists who produced the letters from the Editors of concerned Paper/ Magazine/ News Agencies or who produced letters from Editorial Forum/ Association of Journalists, the body of Journalists which work for the welfare of Journalists.

But Renewal of these Bus passes abruptly stopped by the BMTC in the month of February 2011 for no reasons.

For query under RTI Act 2005, BMTC authorities informed that Bus Pass renewal process of Journalists, who don't have accreditation, was stopped since 22-02-2011 basing on the circular No.596 issued by KSRTC in 1992 !!

It was shocking to the journalists because, the Circular which they quoted was not regarding the stopping of Bus Passes of Journalists. It was related to the issuing of Bus Passes!

The Circular clearly mentioned about the formation of committees to issue Bus Passes. Moreover it clearly stated that the passes of those who already holding them shall not be cancelled even if they don't have the accreditation and even though they change the paper / periodical.


Delegation of Journalists Association of Karnataka and Bangalore News Paper Employees Union (BNEU) met then Chief Minister Sri B.S. Yediyurappa on
14th July 2011 and explained these facts. Chief Minister responded immediately and issued a written directive asking the officials to withdraw the so called order to cancel the journalist’s bus passes and issue bus passes to them as usual.

However, this order of chief minister was not implemented, instead transport minister issued separate order to issue concessional bus passes to the journalists who were working in such papers having the membership of INS.

JAK delegation again met new Chief Minister D.V. Sadananda Gowda and submitted the fresh memorandum along with the copy order of former chief minister Yediyurappa regarding Journalists Bus Pass on 12th  August 2011.

DVS immediately directed the concerned to implement the order.

Then it was understood that both orders of Chief Minister and Transport Minister were placed before the BMTC Board for approval on 28th of September 2011, but reportedly sent back to Transport Minister's office for further changes in the note and for ratification!

Journalists enraged by such delay in implementation of successive Chief Ministers orders, decided to meet Chief Minister again in his Janata Darshan.


Pls click the images for larger views, memorandums to successive chief ministers,       RTI Replies from officials, Circular of 1992, Orders of Chief Minister and Transport Minister.

Advertisement